ಡಿಜಿಟಲ್ ಇಂಡಿಯಾ ಪ್ರತಿಯೊಬ್ಬ ನಾಗರಿಕನ ಜೀವನದ ಗುಣಮಟ್ಟದಲ್ಲಿ ನಿಜವಾದ ಸುಧಾರಣೆಯನ್ನು ತರುತ್ತದೆ. ಅಧ್ಯಕ್ಷ ಬರಾಕ್ ಒಬಾಮಾರ ಐತಿಹಾಸಿಕ ಭಾರತ ಭೇಟಿ ಮುಕ್ತಾಯಗೊಂಡಾಗ ಭಾರತ ಮತ್ತು ಅಮೆರಿಕ ನಡುವಿನ ಆಶಾದಾಯಕ ಮತ್ತು ಭರವಸೆಯ ಸಂಬಂಧಕ್ಕೆ ಅಡಿಪಾಯ ಹಾಕಿತು. ಇನ್ನಿತರೆ ಪ್ರದೇಶಗಳಲ್ಲಿ, ಈ ಸಂಬಂಧ ICT ಮತ್ತು ಡಿಜಿಟಲ್ ಸಂಪರ್ಕ ಕ್ಷೇತ್ರದಲ್ಲಿ ಅಪಾರ ಸಾಮರ್ಥ್ಯವನ್ನು ಹೊಂದಿದೆ ಎಂದು ನಾನು ನಂಬುತ್ತೇನೆ. ಈಗಾಗಲೇ ಭಾರತದ 60% IT ರಫ್ತು, ಅಮೇರಿಕಾದ $ 50 ಶತಕೋಟಿಯಷ್ಟು ಮೌಲ್ಯದ ಮಾರುಕಟ್ಟೆಯನ್ನು ಪೂರೈಸುತ್ತದೆ. ಅಮೇರಿಕಾದ ಕಂಪನಿಗಳು, ಈಗಾಗಲೇ ಭಾರತದಲ್ಲಿ ಬ್ಯಾಕೆಂಡ್ (backend) ಕಾರ್ಯಾಚರಣೆಗಳನ್ನು ಹೊಂದಿವೆ ಅವುಗಳಲ್ಲಿ ಹಲವು ನಿರಂತರವಾಗಿ ವಿಸ್ತರಿಸುವ ಆಸಕ್ತಿಯನ್ನು ವ್ಯಕ್ತಪಡಿಸಿವೆ. ಡಿಜಿಟಲ್ ಇಂಡಿಯಾ, ಮೋದಿ ಸರಕಾರ ಅಧಿಕಾರವನ್ನು ವಹಿಸಿಕೊಂಡ 100 ದಿನಗಳಲ್ಲಿ ರೂಪಿಸಲ್ಪಟ್ಟ ಪ್ರಮುಖ ಕಾರ್ಯಕ್ರಮ, ಡಿಜಿಟಲ್ ಸಂಪರ್ಕವನ್ನು ಹೊಸ ಎತ್ತರಕ್ಕೆ ಒಯ್ಯುವ ಮತ್ತು ಭಾರತ-ಅಮೆರಿಕ ಸಂಬಂಧಗಳನ್ನು ಬಲಪಡಿಸುವ ಸಾಮರ್ಥ್ಯವನ್ನು ಹೊಂದಿದೆ.
ನಾವು ಭಾರತಕ್ಕೆ ಋಣಿಯಾಗಿರುವುದು ಮತ್ತು ಮುಂದಿನ ಪೀಳಿಗೆಗೆ ಉಡುಗೊರೆಯಾಗಿ ನೀಡುವುದು. ಇದು ಯುವ ಭಾರತದ ಮೇಲಕ್ಕೇರುವ ಆಕಾಂಕ್ಷೆಗಳು ಸೇರಿದಂತೆ ಭಾರತದ ತಂತ್ರಜ್ಞಾನದ ಬಗೆಗಿನ ಅತಿ ಪ್ರೀತಿಯನ್ನು ಸ್ಪರ್ಶಿಸುವ ಗುರಿಯನ್ನು ಹೊಂದಿದೆ. ಡಿಜಿಟಲ್ ಇಂಡಿಯಾ ಕಾರ್ಯಕ್ರಮವನ್ನು ತಂತ್ರಜ್ಞಾನ ಸಂಪನ್ನರ ಮತ್ತು ತಂತ್ರಜ್ಞಾನ ಹೀನರ, ಬಡ ಮತ್ತು ಶ್ರೀಮಂತರ, ಗ್ರಾಮೀಣವಾಸಿ ಮತ್ತು ನಗರವಾಸಿಗಳ, ಅಕ್ಷರಸ್ಥರ ಮತ್ತು ಅನಕ್ಷರಸ್ಥರ, ಉದ್ಯೋಗವಂತ ಮತ್ತು ನಿರುದ್ಯೋಗಿಗಳ ಮತ್ತು ಸಶಕ್ತ ಮತ್ತು ಅಶಕ್ತರ ನಡುವಿನ ಅಂತರವನ್ನು ಮರೆಸುವ ಸೇತುವೆಯಾಗಲು ವಿನ್ಯಾಸಗೊಳಿಸಲಾಗಿದೆ. Opening The Floodgatesಡಿಜಿಟಲ್ ಇಂಡಿಯಾ ಬಹು ಸಂಖ್ಯೆಯ ಸಮಗ್ರ ದೃಷ್ಟಿ ಕಲ್ಪನೆಗಳು ಮತ್ತು ಆಲೋಚನೆಗಳನ್ನು ಒಟ್ಟಿಗೆ ಹೆಣೆಯುತ್ತದೆ. ಈ ದೃಷ್ಟಿಕೋನವು ಮೂರು ಪ್ರಮುಖ ಪ್ರದೇಶಗಳಲ್ಲಿ ಕೇಂದ್ರಿಕೃತವಾಗಿದೆ: ಡಿಜಿಟಲ್ ಮೂಲಸೌಕರ್ಯದ ರಚನೆ, ಬೇಡಿಕೆಯ ಮೇರೆಗೆ ಆಡಳಿತ ಮತ್ತು ಸೇವೆಗಳ ವಿತರಣೆ ಮತ್ತು ನಾಗರಿಕರ ಡಿಜಿಟಲ್ ಸಬಲೀಕರಣ. ಇದು ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಆಪ್ಟಿಕ್ ಫೈಬರ್ ನೆಟ್ವರ್ಕ್ (NOFN) ನ್ನು ಒಳಗೊಂಡಿದೆ, ಮುಂದಿನ ಮೂರು ವರ್ಷಗಳಲ್ಲಿ ಹೆಚ್ಚಿನ ವೇಗದ ಆಪ್ಟಿಕ್ ಫೈಬರ್ 70,000 ಕಿಮೀ ಮೂಲಕ ಭಾರತದ 2.5 ಲಕ್ಷ ಗ್ರಾಮ ಪಂಚಾಯತಿಗಳಿಗೆ ಸಂಪರ್ಕ ಹೊಂದುವ ಗುರಿ ಹೊಂದಿದೆ, ಆ ಮೂಲಕ 600 ದಶಲಕ್ಷ ಭಾರತೀಯರು ಆಧುನಿಕ ಸಂಪರ್ಕ ಪ್ರಯೋಜನಗಳನ್ನು ಬಳಸಿಕೊಳ್ಳಲು ಅನುವು ಮಾಡಿದೆ. NOFN ರಾಜ್ಯ ಸರ್ಕಾರಗಳ ಸಕ್ರಿಯ ಪಾಲುದಾರಿಕೆಯೊಂದಿಗೆ ಕಾರ್ಯಗತಗೊಳಿಸುತ್ತದೆ. ನಾನು ಇತ್ತೀಚೆಗೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಮ್ಮ ದೇಶದ ಮೊದಲ ಹೆಚ್ಚಿನ ವೇಗದ ಗ್ರಾಮೀಣ ಬ್ರಾಡ್ ಬ್ಯಾಂಡ್ ನೆಟ್ವರ್ಕ್ ನ ಉದ್ಘಾಟನೆಯನ್ನು ಮಾಡಿದೆ. 900 ಮಿಲಿಯನ್ ಮೊಬೈಲ್ ಫೋನುಗಳು ಮತ್ತು 300 ಮಿಲಿಯನ್ ಇಂಟರ್ನೆಟ್ ಸಂಪರ್ಕ ಸಕ್ರಿಯ ಸರ್ಕಾರದ ಪ್ರಾಯೋಜಕತ್ವ ಇಲ್ಲದೆ ಭಾರತದಲ್ಲಿ ಅಭಿವೃದ್ಧಿ ಹೊಂದಿದರೆ, ಮಿಷನ್ ಮೋಡ್ ನಲ್ಲಿ ನಿರ್ವಹಿಸಿದಾಗ ಯಾವ ಒಂದು ದೂರ ತಲುಪುವ ಪರಿಣಾಮ ಸರ್ಕಾರಿ ಬೆಂಬಲಿತ ಕಾರ್ಯಕ್ರಮ ಹೊಂದಬಹುದು ಎಂದು ಕಲ್ಪನೆ ಮಾಡಿ. ಭಾರತದಲ್ಲಿ ಬೆಳೆಯುತ್ತಿರುವ ಭಾರತದ ಮಾರುಕಟ್ಟೆಗೆ ಎಲೆಕ್ಟ್ರಾನಿಕ್ ಉತ್ಪಾದನೆಗಳ ಅಗತ್ಯವಿದೆ. ಸರ್ಕಾರ ಮೇಕ್ ಇನ್ ಇಂಡಿಯಾ ಕಾರ್ಯಕ್ರಮವನ್ನು ಘೋಷಿಸಿದೆ, ಅದು ಡಿಜಿಟಲ್ ಭಾರತಕ್ಕೆ ಪೂರಕವಾಗಿದೆ ಸ್ಥಳೀಯ ಮತ್ತು ವಿದೇಶಿ ತಯಾರಕರಿಗೆ ಭಾರತ ¬ ರಲ್ಲಿ ತಯಾರಿಸಲು, ಸ್ಥಳೀಯ ಮಾರುಕಟ್ಟೆಗಾಗಿ ಮತ್ತು ರಫ್ತು ಮಾಡಲು ಪ್ರೋತ್ಸಾಹಿಸುತ್ತದೆ. ವಿದೇಶಿ ಕಂಪನಿಗಳು ತಮ್ಮನ್ನು ಬ್ಯಾಕ್ ಆಫೀಸ್ ಕಾರ್ಯಾಚರಣೆಗಳಿಗೆ ನಿರ್ಬಂಧಿಸುವ ಬದಲು ಭಾರತದಲ್ಲಿ ತಮ್ಮ ಉನ್ನತ ಉತ್ಪನ್ನಗಳನ್ನು ತಯಾರಿಸುವತ್ತ ನೋಡಬೇಕು. ಮೇಕ್ ಇನ್ ಇಂಡಿಯಾ ಈ ಯೋಜನೆ ಘೋಷಣೆಗಿಂತ ಹೆಚ್ಚಾಗಿ ಒಂದು ಬದ್ಧತೆಯಾಗಿದೆ ¬ ಎಂದು ಕಂಪನಿಗಳಿಗೆ ತಿಳಿಸಿದೆ. ಸರ್ಕಾರ ನೀಡುವ ಪ್ರೋತ್ಸಾಹಧನಗಳೊಂದಿಗೆ ಮೇಕ್ ಇನ್ ಇಂಡಿಯಾ ಪ್ರಸ್ತಾವನೆಗೆ ಬೆಂಬಲ ನೀಡಿದೆ. ಸಂಪುಟ ಈಗಾಗಲೇ ನಾವೀನ್ಯತೆ, ಸಂಶೋಧನೆ ಮತ್ತು ಆರಂಭಿಕ ಉದ್ಯಮಗಳನ್ನು ಪ್ರೋತ್ಸಾಹಿಸಲು ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಧಿ ಸ್ಥಾಪನೆಗೆ ಅಂಗೀಕರಿಸಿದ್ದಾರೆ IT ವೃತ್ತಿಪರರ ಪ್ರತಿಭೆ ವಿಸ್ತರಿಸುವ ಅವಶ್ಯಕತೆ ಇದೆ. ಸರ್ಕಾರದ ಕಾರ್ಯಕ್ರಮ ದಿಶಾ ಈ ನಾವೀನ್ಯತೆಗೆ ಬೆಂಬಲ ನೀಡಿದೆ, ಈ ಡಿಜಿಟಲ್ ಸಾಕ್ಷರತೆ ನಿರ್ಣಾಯಕ ಅಂಶದ ಮೇಲೆ ಗಮನಹರಿಸುವುದರಿಂದ ಬಡ ಭಾರತೀಯ ಸಹ ಭಾಗವಹಿಸಿ ಮತ್ತು ಡಿಜಿಟಲ್ ವಿಸ್ತರಣೆಗೆ ಕೊಡುಗೆ ನೀಡಬಹುದು. ಸಾಧ್ಯತೆಗಳ ಬಾಗಿಲುಗಳು ಸ್ವಯಂ ಉದ್ಯೋಗಿ ಹಾಗೂ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ತೆರೆಯುತ್ತದೆ. ತೋಟಗಾರರು, ಪ್ಲಂಬರ್ಗಳು, ಚಾಲಕರು, ಅಂಗಡಿಯವರು, ಶಿಕ್ಷಕರು, ಟೈಲರ್ ತಮ್ಮ ಮೊಬೈಲ್ ಫೋನ್ ಮೂಲಕ ಹೊಸ ಮಾರುಕಟ್ಟೆಗಳಲ್ಲಿ ಕಾಣುವ ಪರಿಸ್ಥಿತಿಯನ್ನು ನಾನು ಕಲ್ಪನೆ ಮಾಡಬಹುದು. ನಾವು ಸಣ್ಣ ಪಟ್ಟಣಗಳಲ್ಲಿ BPO ಕಂಪನಿಗಳ ಸ್ಥಾಪಿಸಿ ಪಾಲಿಸಿ ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದ್ದೇವೆ ಮತ್ತು ಅವು ಡಿಜಿಟಲ್ ಸಂಪರ್ಕ ಮತ್ತು ಡಿಜಿಟಲ್ ಸಾಕ್ಷರತೆಯನ್ನು ನಿಯಂತ್ರಿಸುವಲ್ಲಿ ಉದ್ಯೋಗ ಬೆಳೆಸಲು ಮತ್ತು ಉದ್ಯಮಶೀಲತೆ ಪ್ರೋತ್ಸಾಹಿಸಲು ತೊಡಗಿಸಿಕೊಂಡಿವೆ. ಸಶಕ್ತರಾಗಿರುವ ನಾಗರಿಕರು, ಸಮಯ ಉಳಿಸಲು, ತಮ್ಮ ವೆಚ್ಚವನ್ನು ಕಡಿಮೆ ಮಾಡಲು, ದಿನಗಳಿಗೆ ಅನುಕೂಲ ಸೇರಿಸಿ ಮತ್ತು ತಮ್ಮ ಆರೋಗ್ಯ ಸುಧಾರಿಸಲು, ಆಯ್ಕೆ ಮಾಡಲು ಅಧಿಕಾರವನ್ನು ಹೊಂದಿರುತ್ತಾರೆ. ಈ ಕ್ರಾಂತಿಯ ಮೂಲಕ ಸಾಮರ್ಥ್ಯ ಪ್ರತಿಫಲಗಳನ್ನು ಖಂಡಿತವಾಗಿಯೂ ಸಂಖ್ಯೆಗಳು ¬ ಸಂಪರ್ಕಗಳು, ಸಾಧನಗಳು, ಚಂದಾದಾರರು, ಡೌನ್ ಲೋಡ್ಗಳು ಹೀಗೆ ಅಳೆಯಬಹುದು. ಆದರೆ ಪ್ರತಿಯೊಬ್ಬ ಭಾರತೀಯನ ಜೀವನದ ಗುಣಮಟ್ಟದಲ್ಲಿ ಸುಧಾರಣೆ ನಮ್ಮ ಸರ್ಕಾರ ತರಲು ಬಯಸಿದ ನಿಜವಾದ ಬದಲಾವಣೆ. ಈ ಕೆಲಸ ಅಗಾಧವಾಗಿದೆ, ಸವಾಲುಗಳು ಶ್ರಮಸಾಧ್ಯ, ಆದರೂ ಜಯಿಸಬಹುದು, ಮೇ 2014 ರ ನಂತರ ಭಾರತ ಬೇರೆ ದೇಶವಾಗಿದೆ. ಬರಹಗಾರ ಕಮ್ಯುನಿಕೇಷನ್ಸ್ ಅಂಡ್ ಇನ್ಫರ್ಮೇಷನ್ ಟೆಕ್ನಾಲಜಿ ಸಚಿವರಾಗಿದ್ದಾರೆ.
ಮೂಲ : ಡಿಜಿಟಲ್ ಇಂಡಿಯಾ
ಕೊನೆಯ ಮಾರ್ಪಾಟು : 6/19/2020