ಸಾವ೯ಜನಿಕ ವಲಯದ ಬ್ಯಾಂಕುಗಳು:- ಭಾರತೀಯ ಸ್ಟೇಟ ಬ್ಯಾಂಕ್ + ಭಾರತೀಯ ಸ್ಟೇಟ ಬ್ಯಾಂಕಿನ ಸಹಭಾಗಿ ಬ್ಯಾಂಕಗಳು + ರಾಷ್ಟ್ರೀಕೄತ ಬ್ಯಾಂಕಗಳು. ಖಾಸಗೀ ವಲಯದ ಬ್ಯಾಂಕುಗಳು :- ಭಾರತದ ಖಾಸಗಿ ವಲಯದ ಬ್ಯಾಂಕುಗಳು (ಹಳೆಯ / ಹೊಸ ಸಂತತಿಯ ಬ್ಯಾಂಕುಗಳು ) + ಭಾರತದಲ್ಲಿನ ವಿದೇಶಿ ಬ್ಯಾಂಕುಗಳು. ಇತರ ಬ್ಯಾಂಕುಗಳು:- ಪ್ರಾದೇಶಿಕ ಗ್ರಾಮೀಣ ಬ್ಯಾಂಕಗಳು.(ಆರ್.ಆರ್.ಬಿ)
ನಿಮ್ಮ ಗ್ರಾಹಕರನ್ನು ತಿಳಿದಿಕೊಳ್ಳಿ (ಕೆ.ವಾಯ್.ಸಿ) ಮಾದರಿಗಳು ಎಲ್ಲ ತರದ ಗ್ರಾಹಕರ ಜಮಾ ಖಚಿ೯ನ ಪಟ್ಟಿ (ಅಕೌಂಟ)ಗಳಿಗೆ ಅನ್ವಯವಾಗುತ್ತದೆ. ಇದು ಗ್ರಾಹಕನನ್ನು ಗುರುತಿಸುವ ಮಾತ್ರಕ್ಕೆ ಮಾತ್ರ ಸೀಮಿತವಾಗದೆ . ಗ್ರಾಹಕನ ಚಟುವಟಿಕೆಗಳನ್ನು ತಿಳಿದುಕೊಳ್ಳಲು ಮತ್ತು ಗ್ರಾಹಕನ/ರ ಕಾರ್ಯಗಳನ್ನು ನಿಷ್ಕಪಟ ಉದ್ದೇಶಕ್ಕಾಗಿ ಎಂದು ಖಚಿತ ಪಡಿಸಲು ಸಹಾಯವಾಗುತ್ತದೆ. ಕೆವಾಯಸಿಯ ಮಾದರಿಗಳ ಅನ್ವಯಿಸುವಿಕೆಯು ಬಹಳ ಕಾರಣಗಳಿಂದ ಪ್ರಾಮುಖ್ಯವಾಗಿದೆ. ಮದ್ದು ಔಷಧಿಯ ಕಳ್ಳ ವ್ಯಾಪಾರ, ಕಾನೂನು ಬಾಹಿರ ಕೄತ್ಯದಿಂದ ಹಣ ಸಂಪಾದನೆ, ಭಯೋತ್ಪಾದನೆ ಚಟುವಟಿಕೆಗಳು, ಮದ್ದು ಬಂದೂಕುಗಳ ವ್ಯಾಪಾರಗಳಂತಹ ಎಷ್ಟೋ ವಿವಾದಾಂಶಗಳ ಸಂಬಂಧವಾಗಿ ಬ್ಯಾಂಕುಗಳು ತಮ್ಮ ಪಕ್ಷ ಗಾರರ ಜೊತೆ ವ್ಯವಹಾರ ಮಾಡುವಾಗ ಜಾಗರೂಕವಾಗಿರಬೇಕಾಗುತ್ತದೆ.
ಸಾಲದ ದಾಖಲೆಗಳನ್ನು ಪ್ರಾಥಮಿಕ ಮತ್ತು ಎರಡನೇಯಗಳನ್ನು ಸಾಲದ ಸೌಕರ್ಯದ ನಮೂನೆಯನ್ನು ಸಾಲ ಮಾಡುವವರ ಸ್ವಭಾವ / ಸಾಲ ಮಾಡುವವರು ಕೊಡುವ ಭದ್ರತೆ ಅಥವಾ ಜಾಮೀನಿನ ಸ್ವರೂಪಗಳನ್ನಾಧರಿಸಿ ಪಡೆಯಲಾಗುತ್ತದೆ. ದಾಖಲೆಗಳಿಗೆ ಕಾನೂನಿನ ಪ್ರಕಾರ ಕೋಟ೯ನಲ್ಲಿ ಜಾರಿ ಪಡಿಸಲಾಗುವಂತೆ ಸ್ಪಷ್ಟ ಶಿರೋನಾಮೆಯನ್ನು ಹೊಂದಿರಲೇಬೇಕು. ದಾಖಲೆಗಳನ್ನು ಬೇಕಾಗ ಬಹುದಾದ ಉಚಿತ ಸ್ಥಳಗಳಲ್ಲಿ ಮೊಹರು ಹಾಕಬೇಕಾಗುತ್ತದೆ. ದಾಖಲೆಗಳನ್ನು ಸರಿಯಾಗಿ ತುಂಬಿರಲೇಬೇಕು ಮತ್ತು ಅಧಿಕಾರವಿರುವ ವ್ಯಕ್ತಿಗಳಿಂದ ಉಚಿತ ರೀತಿಯಲ್ಲಿ ನಿವ೯ಹಿಸಬೇಕು. ಸಾಕ್ಷ ಕಾಯಿದೆಯ ಪರಿಚ್ಛೇದ ೬೧ ರ ಅನ್ವಯ ದಾಖಲೆಯ ಸಾಕ್ಷಗಳು:- ಪ್ರಾಥಮಿಕ ದಾಖಲೆಗಳ ಅಸಲು ಪ್ರತಿಯನ್ನು ಕೋಟಿ೯ನ ವೀಕ್ಷಣೆಗಾಗಿ ಕೊಡಬೇಕಾಗುತ್ತದೆ. ಎರಡನೆಯ:- ಪ್ರಮಾಣೀಕರಿಸಿದ ಪ್ರತಿಗಳು, ನಕಲು ಪ್ರತಿಗಳು ಅಥವಾ ಅಸಲು ಪ್ರತಿಯ ಜೊತೆ ಹೋಲಿಸಿದ ಪ್ರತಿ.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 2/15/2020