ಮೂಲ ಮಾಹಿತಿಗಳು
- ಉಳಿತಾಯ ಖಾತೆ ಎಂದರೆ ಪ್ರತೀ ತ್ರೈಮಾಸಿಕಕ್ಕೆ ಹಣ ತೆಗೆಯುವ ಸಂಖ್ಯೆ ಮತ್ತು ಎ.ಟಿ.ಎಂ.ನಿಂದ ಪ್ರತಿಯೊಂದು ವಹಿವಾಟಿನಲ್ಲಿ ಹಣ ತೆಗೆಯುವಾಗಿನ ಮೊತ್ತವಾಗಿರುತ್ತದೆ.
- ಶಿಲ್ಕಿಗಿಂತ ಹೆಚ್ಚಿನ ಹಣ ತೆಗೆಯುವ ವಹಿವಾಟವನ್ನು ಬ್ಯಾಂಕುಗಳಲ್ಲಿ ಸಾಧಾರಣವಾಗಿ ಚಾಲ್ತಿ ಖಾತೆಗಳಿಗೆ ಮಾತ್ರ ಮಂಜೂರು ಮಾಡಲಾಗುತ್ತದೆ.
- ಬ್ಯಾಂಕಿನ ಸ್ಥಿರ ಠೇವಣಿಗಳ ಗುಣ ಲಕ್ಷಣಗಳು , ಠೇವಣಿಯ ಸಮಯದಲ್ಲಿ ಗ್ರಾಹಕರ ಜೊತೆ ಒಪ್ಪಿದ ಬಡ್ಡೀ ದರ, ಠೇವಣಿಯ ಸ್ಥಿರ ಅವಧಿ ಮತ್ತು ನಿಯಮಿತವಾಗಿ ಬಡ್ಡಿ ಸಂದಾಯ ಮಾಡುವ ವೈಶಿಷ್ಟ್ಯಗಳನ್ನು ಹೊಂದಿರುತ್ತವೆ.
- ಸ್ಥಿರ ಠೇವಣಿಗಳನ್ನು ಮೂರನೆಯವರಿಗೆ ವಗಾ೯ಯಿಸಲು ಬರುವುದಿಲ್ಲ.
- ಒಂದು ಪುನರಾವತಿ೯ತ ಠೇವಣಿಯ ಖಾತೆಗೆ ಗ್ರಾಹಕನು ಒಂದು ನಿಖರವಾದ ಮೊತ್ತವನ್ನು ಒಂದು ನಿಧಿ೯ಷ್ಟ ಅಂತರಗಳಲ್ಲಿ ಒಂದು ನಿಧಿ೯ಷ್ಟ ಅವಧಿಗೆ ನೀಡಬೇಕಾಗುತ್ತದೆ.
- ಬ್ಯಾಂಕಿನ ಪ್ರಧಾನ ಕೆಲಸಗಳಾವುವೆಂದರೆ:- ಠೇವಣಿಗಳನ್ನು ಸ್ವೀಕರಿಸುವುದು, ಸಾಲಕೊಡುವುದು ಮತ್ತು ಹಣ ಹೂಡುವುದು ಮತ್ತು ನಿಧಿರಹಿತ ವಹಿವಾಟು ಮತ್ತು ಹಣ ರವಾನಿಸುವ ಸೇವೆಗಳು.
- ಬೇಡಿಕೆಯ ಠೇವಣಿಗಳು ಬೇಡಿಕೆ ಇದ್ದಾಗ ತೆಗೆಯುವಂತಹ ಠೇವಣಿಗಳಾಗಿವೆ.
- ಚಾಲ್ತಿ ಖಾತೆಗಳ ಠೇವಣಿಗಳಿಗೆ ಬಡ್ಡಿ ಅನ್ವಯವಾಗುವುದಿಲ್ಲ.
ಉಳಿತಾಯ ಖಾತೆಯ ಠೇವಣಿಗಳಿಗೆ ಬಡ್ಡಿಯನ್ನು ಖಾತೆಯಲ್ಲಿನ ಅತೀ ಕಡಿಮೆ ಶಿಲ್ಕಿನ( ತಿಂಗಳ ೧೦ ನೇ ತಾರೀಖಿನಿಂದ ಕೊನೆಯ ದಿನದವರೆಗಿನ) ಮೇಲೆ ಸಂದಾಯ ಮಾಡಲಾಗುತ್ತದೆ.
ಬ್ಯಾಂಕ್ ಖಾತೆಯನ್ನು ತೆರೆಯುವುದು ಹೇಗೆ
ಉಪಯೋಗಗಳು
- ನಿಮ್ಮ ಗಳಿಕೆಯನ್ನು ಸುರಕ್ಷಿತವಾಗಿಡಲು,
- ಉಳಿಸಿದ ಮೊತ್ತದ ಮೇಲೆ ಬಡ್ಡಿ ಪಡೆಯಲು,
- ಮೂರನೇ ವ್ಯಕ್ತಿಯಿಂದ ಸಾಲದ ಹಣ ಪಡೆಯಲು (ಚೆಕ್, ಬ್ಯಾಂಕ್ ಡ್ರಾಫ್ಟ್, ಹಣ ಅಥವಾ ಆನ್ಲೈನ್ ಮೂಲಕ)
- ಉಪಯೊಗಿ ಬಿಲ್ ಪಾವತಿ ಮಾಡಲು (ಅವುಗಳು LIC ಪ್ರಿಮಿಯಂ, ರೈಲು ಟೀಕೆಟ್ ಮುಂಗಡ ಬುಕಿಂಗ್)
ಬ್ಯಾಂಕ್ ಖಾತೆ ತೆರೆಯಲು ಅಗತ್ಯ
- ಭರ್ತಿ ಮಾಡಿದ ಅರ್ಜಿ ( ಅದನ್ನು ಬ್ಯಾಂಕ್ನ ಶಾಖೆಯಲ್ಲಿ ಸಂಗ್ರಹಿಸಲು ಸಾಧ್ಯ)
- ಎರಡು ಪಾಸ್ಪೋರ್ಟ್ ಅಳತೆಯ ಕಲರ್ ಭಾವಚಿತ್ರ
- ಗುರುತು ಪುರಾವೆಯ ಜೆರಾಕ್ಸ್ ಪ್ರತಿ
- ನಿವಾಸದ ಪುರಾವೆಯ ಜೆರಾಕ್ಸ್ ಪ್ರತಿ
- 1000 ರೂಪಾಯಿ ಮೊತ್ತದ ಹಣ (ಆದರೆ ಬ್ಯಾಂಕ್ನಿಂದ ಬ್ಯಾಂಕ್ಗೆ ವ್ಯತ್ಯಾಸವಾಗಿರುತ್ತದೆ)
- ಅರ್ಜಿಗೆ ಸಹಿ ಮಾಡಲು ಒಬ್ಬ ಜಾಮೀನುದಾರ (ಆ ವ್ಯಕ್ತಿಯು ಆ ಬ್ಯಾಂಕ್ನಲ್ಲಿ ಖಾತೆ ಹೊಂದಿರಬೇಕು)
ಗಮನಿಸಿ: ಗುರುತು ಮತ್ತು ನಿವಾಸದ ಪುರಾವೆಗೆ ಎರಡು ಪ್ರತ್ಯೇಕ ದಾಖಲೆಗಳನ್ನು ಸಲ್ಲಿಸಬೇಕು.
ಗುರುತು ಪುರಾವೆಗೆ ಕೆಳಗಿನವುಗಳನ್ನು ಬಳಸಬಹುದು:
- ಪಾಸ್ಪೊರ್ಟ್
- ಮತದಾರರ ಗುರುತಿನ ಚೀಟಿ
- ಪಾನ್ ಕಾರ್ಡ್
- ಸರ್ಕಾರ/ರಕ್ಷಣಾ ಐಡಿ ಕಾರ್ಡ್
- ಪ್ರಖ್ಯಾತ ಐಡಿ ಕಾರ್ಡ್
- ಡ್ರೈವಿಂಗ್ ಲೈಸೆನ್ಸ್
- ಅಂಚೆ ಕಚೇರಿ ಇಂದ ನೀಡಿದ ಐಡಿ ಕಾರ್ಡ್
ನಿವಾಸದ ಪುರಾವೆಗೆ ಕೆಳಗಿನವುಗಳನ್ನು ಬಳಸಲು ಸಾಧ್ಯ:
- ಕ್ರೆಡಿಟ್ ಕಾರ್ಡ್ ಹೇಳಿಕೆ
- ಸಂಬಳದ ಸ್ಲಿಪ್ (ವಿಳಾಸದ ಜೊತೆ)
- ಆದಾಯ ತೆರಿಗೆ/ಅಸ್ತಿ ತೆರಿಗೆ ಕಂದಾಯ ಆದೇಶ
- ವಿದ್ಯುಚ್ಛಕ್ತಿ ಬಿಲ್
- ದೂರವಾಣಿ ಬಿಲ್
- ಬ್ಯಾಂಕ್ ಖಾತೆ ಹೇಳಿಕೆ
- ಪ್ರಸಿದ್ಧ ಉದ್ಯಮಿಯಿಂದ ಪತ್ರ
- ಮಾನ್ಯತೆ ಹೊಂದಿದ ಸಾರ್ವಜನಿಕ ಪ್ರಾಧಿಕಾರದಿಂದ ಪತ್ರ
- ಪಡಿತರ ಚೀಟಿ
- ಎಲ್ಪಿಜಿ ಗ್ಯಾಸ್ ಬಿಲ್
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 10/8/2019
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.