ಗ್ರಾಹಕ ಎಂಬ ಪದವನ್ನು ಯಾವುದೇ ಕಾಯ್ದೆಯಡಿ ವ್ಯಾಖ್ಯಾನಿಸಲಾಗಿದೆ. ಯಾವಾಗ ಬ್ಯಾಂಕರನು ಗ್ರಾಹಕನಿಗೆ ಓವರಡ್ರಾಫ್ಟ ಸೇವೆಯನ್ನು ಮಂಜೂರು ಮಾಡುತ್ತಾನೋ ಆಗ ಅವನ ಮತ್ತು ಗ್ರಾಹಕನ ಸಂಬಂಧವು ಸಾಲ ಕೊಟ್ಟವ ಮತ್ತು ಸಾಲಗಾರ ಆಗುತ್ತದೆ. ಯಾವಾಗ ಗ್ರಾಹಕನು ಬ್ಯಾಂಕನಲ್ಲಿ ಭದ್ರಕಪಾಟು( ಲಾಕರ್)ನ್ನು ತೆಗೆದುಕೊಳ್ಳುತ್ತಾನೋ ಆಗ ಅವನ ಮತ್ತು ಬ್ಯಾಂಕರನ ಸಂಬಂಧವು ಭೋಗ್ಯದಾರ(ಲೆಸ್ಸೀ) ಮತ್ತು ಹಿಡುವಳಿದಾರ(ಲೆಸ್ಸರ್) ಆಗುವವು. ಯಾವಾಗ ಗ್ರಾಹಕನು ಬ್ಯಾಂಕನಲ್ಲಿ ಖಾತೆಯನ್ನು ಬಂದ ಮಾಡುತ್ತಾನೋ ಆಗ ಅವರ ಸಂಬಂಧವು ನಿಂತು ಹೋಗುತ್ತದೆ. ಠೇವಣಿ ಖಾತೆಗಳಲ್ಲಿ ಬ್ಯಾಂಕ ಮತ್ತು ಗ್ರಾಹಕನ ಮಧ್ಯೆ ಮುಖ್ಯ ಸಂಬಂಧವು ಬ್ಯಾಂಕ-ಸಾಲಗಾರ, ಗ್ರಾಹಕ-ಸಾಲಕೊಟ್ಟವ. ಬ್ಯಾಂಕನಲ್ಲಿ ವಸ್ತುಗಳನ್ನು ಸುರಕ್ಷತೆಯ ರಕ್ಷಣೆಗೆ ಇದ್ದಾಗ ಅವರು ಜಾಮೀನಾದವನು ಮತ್ತು ಸ್ವತ್ತನ್ನು ವಶಕ್ಕೆ ತೆಗೆದುಕೊಂಡು (ಬೇಲರ-ಬೇಲೀ) ಸಂಬಂಧವನ್ನು ಹೊಂದಿರುತ್ತಾರೆ. ಬ್ಯಾಂಕು ಗ್ರಾಹಕನಿಂದ ಧನಾದೇಶ(ಚೆಕ್)ನ್ನು ಹಣ ಬಿಡುಗಡೆ ಮಾಡಲು ಪಡೆದಾಗ ಅವರ ಮಧ್ಯ ಯಾವ ಸಂಬಂಧವು ನಿಮಾ೯ಣವಾಗುವುದಿಲ್ಲ. ಯಾವಾಗ ಬ್ಯಾಂಕಿನ ಗ್ರಾಹಕನ ಯಾವುದೇ (ಎಫ್.ಡಿ.ಆರ್.) ಸ್ಥಿರ ಠೇವಣಿ ರಸೀದಿ ಕಳೆದುಕೊಂಡಿರುತ್ತಾನೋ ಆಗ ನಷ್ಟ ಭತಿ೯ ಕರಾರು ಪತ್ರ (ಇಂಡೆಮ್ನಿಟಿ ಬಾಂಡ್) ನ್ನು ಚಲಾಯಿಸಲಾಗುತ್ತದೆ. ಮುಂಚೂನಿಯಲ್ಲಿರುವ ಹಾಗೂ ಮೊದಲಪ್ರಾಶಸ್ತ್ಯದ ಬ್ಯಾಂಕಿನ ಆಥಿ೯ಕ ವಿಭಾಗದ ಮೂಲತತ್ವಗಳು ಹಣ ಈಡು ಮಾಡುವುದರ ಮೂಲ ಭೂತ ಮೂಲತತ್ವಗಳಾವುವೆಂದರೆ- ಸುರಕ್ಷತೆ ಮತ್ತು ಋಣ ಸಂದಾಯ ಸ್ಥಿತಿ, ಲಾಭದಾಯಕತೆ ಮತ್ತು ಅಪಾಯದ ವೈವಿಧ್ಯತೆ ಮತ್ತು ಉತ್ಪಾದನಾ ಉದ್ದೇಶ ಮತ್ತು ಭದ್ರತೆ. ಬ್ಯಾಂಕಿನ ಋಣ ಸಂದಾಯ ಸ್ಥಿತಿ ಎಂದರೆ ಕೈಯಲ್ಲಿರುವ ನಗದು , ನಗದು ಮತ್ತು ಬ್ಯಾಂಕ ಶಿಲ್ಕುಗಳು ಮತ್ತು ನಗದಿಗೆ ಪರಿವತಿ೯ಸಬಹುದಾದ ಕಡಿಮೆ ಅವಧಿಯ ಚಾಲ್ತಿ ಸ್ವತ್ತುಗಳು. ಗ್ರಾಹಕನ ಲಾಭತ್ವದ ವಿಮಶೆ೯ ಎಂದರೆ ಗ್ರಾಹಕನ ವಹಿವಾಟಿನ ಲಾಭತ್ವದ ಅಂದಾಜು. ಸಾಲಮಾಡುವವನ ಭಾಗದ ಸಂದಾಯವನ್ನು ಅವನಲ್ಲಿರುವ ಇಚ್ಛೆಯನ್ನು ಮತ್ತು ಅವನ ಋಣಸಂದಾಯದ ಕೊರತೆಯ ಉದಾಸೀನತೆಯನ್ನು ಗಮನದಲ್ಲಿಟ್ಟುಕೊಂಡು ಬ್ಯಾಂಕ ತನ್ನನ್ನು ಅಪಾಯದಲ್ಲಿ ಸಿಲುಕಿಸುವುದನ್ನು ತಡೆಯಬಲ್ಲದು. ಬ್ಯಾಂಕಿನವರ ಮಾತಿನ ವಿಧಾನದಲ್ಲಿ ಸಾಲ ಕೊಡುವಲ್ಲಿಯ ಅಪಾಯ ಎಂದರೆ ಸಾಲಗಾರನ ಮರುಪಾವತಿಯಲ್ಲಿ ಇರುವ ಉದಾಸೀನತೆ ಎಂದಥ೯. ಚಲಾವಣೆಯಲ್ಲಿರುವ ಪ್ರಧಾನ ನಿಧಿ ಎಂದರೆ ದಿನವಹಿಯ ವಹಿವಾಟಿಗೆ ಅಗತ್ಯವಾದದ್ದು ಅವಧಿಯ ಸಾಲಗಳು ಎಂದರೆ ಒಂದು ವಷ೯ದಿಂದ ೧೦ ವಷ೯ಗಳ ನಂತರ ಸಂದಾಯ ಮಾಡಬೇಕಾದ ಸಾಲಗಳು. ಮರುಸಂದಾಯಗಳನ್ನು ಕಂತಿನಲ್ಲಿ ಮಾಡಬೇಕಾಗುತ್ತದೆ. ಮತ್ತು ಅವಧಿಯ ಸಾಲಗಳನ್ನು ಸ್ಥಿರ ಆಸ್ಥಿಗಳನ್ನು ಪ್ರಾಪ್ತಿ ಮಾಡಲು ಬಳಸಲಾಗುತ್ತವೆ. ಬಳಕೆಯಲ್ಲಿರುವ ಪ್ರಧಾನ ನಿಧಿಯ ಬೇಡಿಕೆಯನ್ನು ಕಾರ್ಯ ನಡೆಸುವ ಚಕ್ರದ ವಿಧಾನ ಅಥವಾ ಯೋಚಿಸಿದ ಬಂಡವಾಳ ಹೂಡಿಕೆ ಮಾರಾಟದದ ಪ್ರಮಾಣದ ವಿಧಾನ ಅಥವಾ ನಗದು ಆಯ-ವ್ಯಯ ಪಟ್ಟಿಯ ವಿಧಾನವನ್ನು ಅನುಸರಿಸಿ ಅಂದಾಜಿಸಬಹುದಾಗಿದೆ. ಮನೆಗಳನ್ನು ಕಟ್ಟಲು ವೈಯಕ್ತಿಕವಾಗಿ ರೂ.೨೦.ಲಕ್ಷದವರೆಗೆ ಮಂಜೂರು ಮಾಡಿದ ಮನೆಸಾಲ(ಬ್ಯಾಂಕುಗಳು ತಮ್ಮ ನೌಕರರಿಗೆ ಮಂಜೂರು ಮಾಡಿದ ಸಾಲಗಳನ್ನು ಹೊರತುಪಡಿಸಿ)ಗಳನ್ನು ಪ್ರಥಮ ಪಾಶಸ್ತ್ಯ ವಿಭಾಗದ ಮುಂಗಡ ಎಂದು ಭಾವಿಸಲಾಗುತ್ತದೆ. ಶೈಕ್ಷಣಿಕ ಸಾಲಗಳು ಭಾರತದಲ್ಲಿಯ ವ್ಯಾಸಂಗಕ್ಕೆ ೧೦ ಲಕ್ಷದವರೆಗಿನ ಶೈಕ್ಷಣಿಕ ಸಂಬಂಧಕ್ಕೆ ಮಂಜೂರು ಮಾಡಿದ ಸಾಲ ಅಥವಾ ಮುಂಗಡಗಳನ್ನು ಮಾತ್ರ ಒಳಗೊಂಡಿರಬೇಕು. ಇದನ್ನು ಮೊದಲ ಪ್ರಾಶಸ್ತ್ಯ ವಿಭಾಗ ಎಂದು ವಿಂಗಡಿಸಲಾಗುತ್ತದೆ. ನಿಗದಿತ ವಾಣಿಜ್ಯ ಬ್ಯಾಂಕುಗಳು ಮೊದಲ ಪ್ರಾಶಸ್ತ್ಯದ ವಿಭಾಗಕ್ಕೆ ಸಾಲವನ್ನು ವೄಧ್ಧಿಸಬೇಕು.ಮತ್ತು ಮೊದಲ ಪ್ರಾಶಸ್ತ್ಯದ ಮುಂಗಡಗಳು ಬ್ಯಾಂಕಿನ ನಿವ್ವಳ ಸಾಲದ ೪೦%ದಿಂದಾಗಿರಬೇಕೆಂದು ನಿರೀಕ್ಷಿಸಲಾಗುತ್ತದೆ. ಕಿಸಾನ-ಕಾಡ೯ಗಳನ್ನು ರೈತರಿಗೆ ಅವರು ಅವರ ಕೄಷಿಯ ಬೇಡಿಕೆಗಳನ್ನು ಈಡೇರಿಸಲು ಮತ್ತು ತೊಡಗಿಸಲು ಬೇಕಾದ ವಸ್ತುಗಳ ಖರೀದಿ ಮತ್ತು ಕಡಿಮೆ ಅವಧಿಯ ಅಗತ್ಯಗಳು ಮತ್ತು ಅವರ ಚಟುವಟಿಕೆಗೆ ಸಂಬಂಧಿಸಿದ ಬಳಕೆಯಲ್ಲಿರುವ ಪ್ರಧಾನ ನಿಧಿಗಳಂತಹ ಇತರ ಅಗತ್ಯಗಳನ್ನು ಈಡೇರಿಸಲು ಕೊಡಲಾಗುತ್ತದೆ. ಕೄಷಿ ಕ್ಷೇತ್ರ ಯಾಂತ್ರಿಕರನ ಸ್ಕೀಂ(ವ್ಯವಸ್ಥೆ)ಯ ಅಡಿ ಸಾಲಗಳನ್ನು ಕೄಷಿ ಕ್ಷೇತ್ರ ಸಲಕರಣೆಗಳನ್ನು ಕೊಳ್ಳಲು ಕೊಡಲಾಗುತ್ತದೆ. ವಿದೇಶಿ ಬ್ಯಾಂಕುಗಳಿಂದ ಮಾಡಿದ ರಪ್ತಿನ ಆಥಿ೯ಕತೆಯ ಮೊದಲ ಪ್ರಾಶಸ್ತ್ಯದ ವಿಭಾಗದ ಮುಂಗಡ ಎಂದು ಎಣಿಕೆ ಮಾಡಲಾಗುತ್ತದೆ. ಭಾರತದಲ್ಲಿಯ ವಿದೇಶಿ ಬ್ಯಾಂಕುಗಳ ಸಾಲ ರಫ್ತಿನ ಗುರಿಯು ಎ.ಎನ್.ಬಿ.ಸಿ.ಯ ೧೨% ಇರುತ್ತದೆ. ಮೂಲ: ಪೋರ್ಟಲ್ ತಂಡ