ಭದ್ರತೆಗಳು ಮತ್ತು ಅವುಗಳನ್ನು ಬೆಲೆಕಟ್ಟುವ ರೀತಿಗಳು
- ಎಲ್.ಐ.ಸಿ. ಪಾಲಸಿಯ ಪ್ರತಿಕೂಲವಾಗಿ ಮುಂದೂಡುವಾಗ ಮಾಡುವ ಬೆಲೆಯ ರೀತಿಯು ನಿದೇ೯ಶ ಅಥವಾ ಹಂಚಿಕೆ ಇರುತ್ತದೆ.
- ಒಂದು ವೇಳೆ ಅಪ್ರಾಪ್ತ ವಯಸ್ಸಿನವನಿಗೆ ಅವಶ್ಯಕತೆಯಿದ್ದಾಗ ಅಪ್ರಾಪ್ತ ವಯಸ್ಸಿನವನ ಅವಧಿ ಠೇವಣಿಯನ್ನು ಅಡವಿಟ್ಟು ಅಪ್ರಾಪ್ತ ವಯಸ್ಕನ ಪೋಷಕರಿಗೆ ಸಾಲವನ್ನು ಮಂಜೂರು ಮಾಡಬಹುದು.
- ವಿಮಾ ಕಂಪನಿಗೆ ಹಂಚಿಕೆಯಿಂದ ಸೂಚನೆಯನ್ನು ಕೊಡದ ಹೊರತು ಮುಂಗಡದ ಭದ್ರತೆಗೆ ಎಲ್.ಐ.ಸಿ.ಯ ಹಂಚಿಕೆಯನ್ನಿಟ್ಟಾಗ, ಹಂಚಿಕೆಯು ಪೂಣ೯ವಾಗುವುದಿಲ್ಲ. ಈ ಮೇಲಿನ ಹಂಚಿಕೆಗೆ ಸೂಚನೆಯನ್ನು ನಿಯೋಜಿತ ಪ್ರತಿನಿಧಿ(ಅಸೈನಿ) ಅಥವಾ ಸಮಪಿ೯ಸುವವ (ಅಸೈನರ್)ರಲ್ಲಿ ಒಬ್ಬರು ಕೊಡಬಹುದಾಗಿದೆ. ಅಡುವಿಡುವಾಗ ಒಂದು ಅತ್ಯವಶ್ಯಕ ಅಗತ್ಯವೇನೆಂದರೆ ಅಡುವಿಯು ಕೊಳ್ಳುವವನಿಗೆ ಅಡುವಿಡುವವನು ಅಡುವಿಟ್ಟ ಸರಕನ್ನು ಪ್ರತ್ಯಕ್ಷ ಅಥವಾ ರಚನಾತ್ಮಕವಾಗಿ ಕೊಡುವುದು.
ಸೂಕ್ಷ್ಮ ಆಥಿ೯ಕತೆ ಮತ್ತು ಸ್ವ-ಸಹಾಯ ಗುಂಪುಗಳು
- ಭವಿಷ್ಯದಲ್ಲಿ ಬದಲಾಗಬಹುದಾದಂತಹ ದೃಷ್ಟಿಕೋನದ(ದಾಖಲೆ) ಪುಸ್ತಕವನ್ನು ಇಡುವುದು ಕಡ್ಡಾಯವಾಗಿರುವುದಿಲ್ಲ. ಆದರೆ ಸಭೆಯ ನಿಣ೯ಯಗಳ ಸಾರಾಂಶದ ಪುಸ್ತಕ, ಉಳಿತಾಯ ಮತ್ತು ಸಾಲದ ಖಾತೆ ಪುಸ್ತಕ ಮತ್ತು ಸದಸ್ಯರ ಪಾಸ ಬುಕ್ ಗಳನ್ನು ಇಡುವುದು ಕಡ್ಡಾಯವಾಗಿದೆ.
- ಪಿ.ಎಮ್.ಆರ್.ವಾಯ್.ಯ ಅಡಿಯಲ್ಲಿ ಎಸ್.ಹೆಚ್.ಜಿ.ಗಳು ೫ ರಿಂದ ೨೦ ಶಿಕ್ಷಿತ ನಿರುದ್ಯೋಗಿ ಯುವಕರನ್ನು ಹೊಂದಿರಬಹುದಾಗಿದೆ.
- ಪ್ರತಿಯೊಬ್ಬ ಹಣ ಪಡೆಯುವನಿಗೆ ರೂ.೫೦,೦೦೦/- ಮೀರದಂತೆ ನೇರವಾಗಿ ಅಥವಾ ಎಸ್.ಹೆಚ್.ಜಿ/ ಜೆ.ಎಲ್.ಜಿ.ಗಳ ಮುಖಾಂತರ ಸಾಲ ಪಡೆಯುವ ಅವಕಾಶವು ಸೂಕ್ಷ್ಮ ಸಾಲವಾಗುತ್ತದೆ.
- ಎಲ್ಲಿ ಯಂತ್ರೋಪಕರಣ ಮತ್ತು ಯಂತ್ರಗಳ ಮೇಲಿನ ಹೂಡಿಕೆಯು ೧೦ ಲಕ್ಷದ ಮಿತಿ ಮೀರುವುದಿಲ್ಲವೋ ಅದು ಒಂದು ಕೈಗಾರಿಕೆ ವಿಭಾಗದ ಸೂಕ್ಷ್ಮ ಸಾಹಸೋದ್ಯಮವಾಗುತ್ತದೆ.
ಸಾಲ ಮತ್ತು ಉಳಿತಾಯದ ಉಪಲಬ್ಧಗಳು
- ಬೆಳೆಯ ಸಾಲ, ಯಂತ್ರಗಳ ಸಾಲ ಮತ್ತು ಕಿಸಾನ ಕ್ರೆಡಿಟ್ ಕಾಡ೯ಗಳು ಗ್ರಾಮೀಣ ಬಡಜನರ ಒಳಿತಿಗಾಗಿ ಬ್ಯಾಂಕುಗಳು ಪರಿಚಯಿಸಿದ ಸಾಲದ ಉಪಲಬ್ಧಗಳಾಗಿರುತ್ತವೆ. ಯಾವುದೇ ಆಗ್ರಹಗಳಿಲ್ಲದ ಉಳಿತಾಯ ಖಾತೆಯನ್ನು ಗ್ರಾಮೀಣ ಬಡಜನರಿಗೆ ಇದ್ದ ಉಳಿತಾಯ ಉಪಲಬ್ಧವಾಗಿದೆ.
- ಸಾಲ, ಉಳಿತಾಯಗಳು, ವಿಮೆ ಮತ್ತು ಹಣ ರವಾನೆ ಮಾಡುವುದು ಈ ಸೇವೆಗಳು ಗ್ರಾಮೀಣ ಪ್ರದೇಶದಲ್ಲಿಯ ಬ್ಯಾಂಕುಗಳು ಮತ್ತು ಆಥಿ೯ಕ ಸಂಸ್ಥೆಗಳು ವಿಸ್ತರಿಸಿದ ಆಥಿ೯ಕ ಸೇವೆಗಳಾಗಿವೆ.
- ಬ್ಯಾಂಕ ಮಾಡಿದ ಉಪಲಬ್ಧದ ವಿನ್ಯಾಸದ ಮೂಲಭೂತ ಅಂಶಗಳು ಹಾಲಿಯಲ್ಲಿರುವ ಸಜೀವ ಸ್ಪಧೆ೯ ಮತ್ತು ಸ್ಪಧಿ೯ಗಳ ಉಪಲಬ್ಧದ ಲಕ್ಷಣಗಳನ್ನು ಒಳಗೊಂಡಿರುತ್ತದೆ.
- ಅವಶ್ಯಕತೆಯನ್ನು ಗುರುತಿಸುವುದು, ಉಪಲಬ್ಧದ ವಿನ್ಯಾಸ, ಮಾಗ೯ದಶ೯ಕ ಪರೀಕ್ಷೆ, ಮತ್ತು ಉಪಲಬ್ಧದ ಬಿಡುಗಡೆ ಇವು ಉಪಲಬ್ಧದ ಬೆಳವಣಿಗೆಯ ನಾಲ್ಕು ಘಟ್ಟಗಳಾಗಿರುತ್ತವೆ.
- ಸಾಲದ ಉಪಲಬ್ಧದ ವಿನ್ಯಾಸವನ್ನು ಮಾಡುವಾಗ, ಸಾಲದ ಉದ್ದೇಶ, ಸಾಲದ ಗಾತ್ರ, ಸಾಲದ ಅವಧಿ ಮತ್ತು ಮರುಪಾವತಿಯ ಪುನರಾವತ೯ನೆಗಳನ್ನು ಸಾಲ ಪಡೆಯುವವನ ನಗದು ಹರಿವಿನ ಪ್ರವಾಹದ ಆಧಾರದ ಮೇಲೆ ನಿಣ೯ಯಿಸಲಾಗುತ್ತದೆ.
- ವಗಾ೯ವಣೆ ಬೆಲೆ (ವೈಕಲ್ಪಿಕ ಬೆಲೆ) ಮತ್ತು ಉಳಿತಾಯದ ಬಡ್ಡಿಯ ವೆಚ್ಚಗಳ ನಡುವಿನ ವೈಶಮ್ಯವನ್ನು ‘ ವಂತಿಗೆ ಮಾಜಿ೯ನ ಎಂದು ಕರೆಯಲಾಗುತ್ತದೆ.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 10/8/2019
0 ರೇಟಿಂಗ್ಗಳು ಮತ್ತು 0 ಕಾಮೆಂಟ್ಗಳು
ಸ್ಟಾರ್ಗಳನ್ನು ಜಾರಿಸಿ ನಂತರ ಕ್ಲಿಕ್ ಮಾಡಿ
© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.