অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಶಿಕ್ಷಣ

ಶಿಕ್ಷಣ

  • edusliderimg2.png

    ಮೂಲಭೂತ ಮತ್ತು ಮಾನವ ಹಕ್ಕಾಗಿ ಶಿಕ್ಷಣ

    ಹದಿನಾಲ್ಕು ವರ್ಷ ಮಯೋಮಾನದ ಎಲ್ಲರಿಗೂ ಕಡ್ಡಾಯ ಮತ್ತು ಉಚಿತ ಪ್ರಾಥಮಿಕ ಶಿಕ್ಷಣವು ಭಾರತದ ಸಂವಿಧಾನದ ಬದ್ದತೆಯಾಗಿದೆ. ಭಾರತೀಯ ಸಂಸತ್ತು ಇತ್ತೀಚೆಗೆ ಶಿಕ್ಷಣದ ಹಕ್ಕಿನ ಮಸೂದೆಯನ್ನು ಅಂಗೀಕರಿಸಿದ್ದು, ಈಗ ಶಿಕ್ಷಣವು 6 ರಿಂದ 14 ವಯೋಮಾನದ ಎಲ್ಲ ಮಕ್ಕಳ ಮೂಲಭೂತ ಹಕ್ಕಾಗಿದೆ. ಆದಾಗ್ಯೂ ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣವು ಇನ್ನೂ ಮರೀಚಿಕೆಯಾಗಿದೆ. ಅಂದರೆ, ಎಲ್ಲ ಜನವಸತಿಗಳಲ್ಲಿ ಶಾಲೆಯ ಪ್ರವೇಶದರ, ಹಾಗೂ ಉಳಿಕೆಯದರ, ಪ್ರತಿಶತ ನೂರನ್ನು ಮುಟ್ಟಿಲ್ಲ. ಈ ಕೊರತೆಯನ್ನು ನಿವಾರಿಸುವ ಸಲುವಾಗಿಯೇ ಭಾರತ ಸರ್ಕಾರವು 2001 ರಲ್ಲಿ ಸರ್ವ ಶಿಕ್ಷಾ ಅಭಿಯಾನವನ್ನು ಆರಂಭಿಸಿದ್ದು ಇದು ಇಂತಹ ಕಾರ್ಯಕ್ರಮಗಳಲ್ಲಿ ಅತ್ಯಂತ ಬೃಹತ್ತಾದುದಾಗಿದ.

  • edusliderimg1.png

    ಶಿಕ್ಷಣ ಕ್ಷೇತ್ರದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ

    ಇಂದಿನ ತಾಂತ್ರಿಕ ಯುಗದಲ್ಲಿ ಮಾಹಿತಿ ವ್ಯವಹಾರ ತಂತ್ರಜ್ಞಾನವು ಶಿಕ್ಷಣ ಕ್ಷೇತ್ರದಲ್ಲಿ ಉಳ್ಳವರ ಮತ್ತು ಇಲ್ಲದಿರುವವರ ನಡುವಿನ ಅಂತರವನ್ನು ಅದರಲ್ಲಿಯೂ ಗ್ರಾಮೀಣ ಭಾರತದಲ್ಲಿ – ಕಡಿಮೆ ಮಾಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ. ಇಂಡಿಯಾ ಡೆವಲಪ್ ಮೆಂಟ್ ಗೇಟ್ ವೇ, ಇದರ ಪ್ರಾಥಮಿಕ ಶಿಕ್ಷಣ ವಿಭಾಗವು, ಭಾರತದಲ್ಲಿ ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣದ ಲಕ್ಷ್ಯವನ್ನು ಸಾಧಿಸಲು ಹೇರಳವಾದ ಸಾಮಗ್ರಿ ಮತ್ತು ಸಂಪನ್ಮೂಲಗಳನ್ನು, ಮಕ್ಕಳು ಮತ್ತು ಶಿಕ್ಷಕರನ್ನು ಸಬಲಗೊಳಿಸುವ ಸಲುವಾಗಿ ಕೈಗೊಂಡಿರುವ ಒಂದು ಪ್ರಯತ್ನವಾಗಿದೆ.

  • ಶಿಕ್ಷಣ ಕ್ಷೇತ್ರದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ

    ಇಂದಿನ ತಾಂತ್ರಿಕ ಯುಗದಲ್ಲಿ ಮಾಹಿತಿ ವ್ಯವಹಾರ ತಂತ್ರಜ್ಞಾನವು ಶಿಕ್ಷಣ ಕ್ಷೇತ್ರದಲ್ಲಿ ಉಳ್ಳವರ ಮತ್ತು ಇಲ್ಲದಿರುವವರ ನಡುವಿನ ಅಂತರವನ್ನು ಅದರಲ್ಲಿಯೂ ಗ್ರಾಮೀಣ ಭಾರತದಲ್ಲಿ – ಕಡಿಮೆ ಮಾಡುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ. ಇಂಡಿಯಾ ಡೆವಲಪ್ ಮೆಂಟ್ ಗೇಟ್ ವೇ, ಇದರ ಪ್ರಾಥಮಿಕ ಶಿಕ್ಷಣ ವಿಭಾಗವು, ಭಾರತದಲ್ಲಿ ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣದ ಲಕ್ಷ್ಯವನ್ನು ಸಾಧಿಸಲು ಹೇರಳವಾದ ಸಾಮಗ್ರಿ ಮತ್ತು ಸಂಪನ್ಮೂಲಗಳನ್ನು, ಮಕ್ಕಳು ಮತ್ತು ಶಿಕ್ಷಕರನ್ನು ಸಬಲಗೊಳಿಸುವ ಸಲುವಾಗಿ ಕೈಗೊಂಡಿರುವ ಒಂದು ಪ್ರಯತ್ನವಾಗಿದೆ.

ಪ್ರತಿಯೊಬ್ಬ ನಾಗರೀಕನ ಮತ್ತು ಒಟ್ಟಾರೆಯಾಗಿ ರಾಷ್ಟ್ರದ ಅಭಿವೃದ್ಧಿಗೆ ಪ್ರಾಥಮಿಕ ಶಿಕ್ಷಣವು ತಳಹದಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತವು ಪ್ರಾಥಮಿಕ ಶಿಕ್ಷಣರಂಗದಲ್ಲಿ ಅಗಾಧ ಪ್ರಗತಿ ಸಾಧಿಸಿದೆ. ಶಾಲೆಗಳಿಗೆ ಮಕ್ಕಳ ನೊಂದಣಿಯ ದರ, ಪ್ರವೇಶ ಪಡೆದ ಮಕ್ಕಳು ಶಾಲೆಯಲ್ಲಿಯೇ ಉಳಿಯುವ ದರ, ಆ ಮಕ್ಕಳ ನಿರಂತರ ಹಾಜರಾತಿ ಇವುಗಳು ಗಮನಾರ್ಹವಾಗಿ ಹೆಚ್ಚಾಗಿದೆ. ಅಲ್ಲದೆ ಸಾಕ್ಷರತೆಯ ಕಾರ್ಯಕ್ರಮವನ್ನು ಜನಸಂಖ್ಯೆಯ ಸರಿಸುಮಾರು ಮೂರನೇ ಎರಡರಷ್ಟಕ್ಕೆ ವಿಸ್ತರಿಸಲಾಗಿದೆ. ಆದ್ದರಿಂದಲೇ ಭಾರತದ ಇಂದಿನ ಆರ್ಥಿಕ ಅಭಿವೃದ್ಧಿಗೆ, ಪ್ರಾಥಮಿಕ ಶಿಕ್ಷಣರಂಗದಲ್ಲಿ ಆಗಿರುವ ಪ್ರಗತಿ ಒಂದು ಮುಖ್ಯ ಕಾರಣ ಎಂದು ಆಗ್ಗಾಗೆ ಉಲ್ಲೇಖಿಸಲಾಗುತ್ತದೆ. ಇಷ್ಟಾದರೂ ಭಾರತದಲ್ಲಿ ಪ್ರಾಥಮಿಕ ಶಿಕ್ಷಣದ ಗುಣಮಟ್ಟ ಆತಂಕಕಾರಿಯಾಗಿದೆ.

ಮಕ್ಕಳ ಹಕ್ಕುಗಳು

ಮಕ್ಕಳ ಅಗತ್ಯಗಳ ಸಂವೈಧಾನಿಕ ನೀಡಿಕೆಗಳು, ನೀತಿಗಳು, ಕಾರ್ಯಕ್ರಮಗಳು ಮತ್ತು ಕಾಯಿದೆ ರಚನೆಗಳ ಮೂಲಕ ಸರ್ಕಾರದ ಬದ್ಧತೆಯ ಸ್ಪಷ್ಟ ಅಭಿವ್ಯಕ್ತಿಗಳನ್ನು ಈ ವಿಭಾಗದಲ್ಲಿ ಕಾಣಬಹುದಾಗಿದೆ.

ನೀತಿಗಳು ಮತ್ತು ಕಾರ್ಯಕ್ರಮಗಳು

ಪ್ರತಿಯೊoದು ೬ ರಿಂದ ೧೪ ವರ್ಷದ ಮುಗುವು ಬಲ ಮತ್ತು ಕಡ್ಡಾಯ ಶಿಕ್ಷಣದ ಹಕ್ಕನ್ನು ಹೊಂದಿದೆ. ಲೇಖನ ೨೧ಎ ಕಾಯ್ದೆಯ ಪ್ರಕಾರ ಇದನ್ನು ೮೬ ನೇ ತಿದ್ದುಪಡಿಯಾಗಿ ತಿಳಿಸಲಾಗಿದೆ.

ಮಕ್ಕಳ ಮೂಲೆ

ಮಕ್ಕಳ ವಿಜ್ಞಾನ ವಿಭಾಗದಲ್ಲಿ ಸೃಜನಾತ್ಮಕ ಯೋಚನೆ ಮತ್ತು ಕಲಿಕೆಯ ಪ್ರಕ್ರಿಯೆಯಲ್ಲಿ ಸಕ್ರಿಯ ಭಾಗವಹಿಸುವಿಕೆಗೆ, ವೈಜ್ಞಾನಿಕ ವಿದ್ಯಮಾನಗಳ ಬಗ್ಗೆ ಒಂದು ಸಂವಾದಾತ್ಮಕ, ಸುಲಭ, ದೃಶ್ಯ ರೀತಿಯಲ್ಲಿ ಪ್ರೋತ್ಸಾಹಿಸುವ ನೆರವಾಗಿಸುವಿಕೆ ಬಗ್ಗೆ ಕಲಿಸುತ್ತದೆ.

ಶಿಕ್ಷಕರ ಮೂಲೆ

ಶಿಕ್ಷಕರ ಮೂಲೆ ಈ ವಿಭಾಗವು ಪ್ರಮುಖ ಬೋಧನೆ ಮತ್ತು ಕಲಿಕೆಯ ಪ್ರಕ್ರಿಯೆಯ ವ್ಯತ್ಯಯಗಳನ್ನು ಹಾಗೆಯೇ ಕಲಿಯುವವರು ತಮ್ಮ ಗುರಿಗಳ ಕಡೆಗೆ ಕೆಲಸವನ್ನು ಮತ್ತು ಕಲಿಕೆ ಅನುಭವಗಳ ವ್ಯಾಪ್ತಿಯನ್ನು ಸೇರಿಸಲು ಹೊಸ ಜ್ಞಾನ, ವರ್ತನೆಗಳು ಮತ್ತು ಕೌಶಲ್ಯವನ್ನು ಸಂಯೋಜಿಸುವ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ.

ಅತ್ಯುತ್ತಮ ಶೈಕ್ಷಣಿಕ ರೂಢಿಗಳು

ಬಹು ಜಾಣ್ಮೆಯು ಹೊವಾರ್ಡ್‌ ಗಾರ್ಡಿನರನ, ಜನರ ಮತ್ತು ಅವರ ವಿಭಿನ್ನ ರೀತಿಯ ಜಾಣ್ಮೆ ( ತರ್ಕಬದ್ದತೆ, ದೃಷ್ಟಿ, ಸಂಗೀತ, ಇತ್ಯಾದಿ) ಗಳ ಬಗೆಗಿನ ಮನಶಾಸ್ತ್ರದ ತತ್ವ. ಪ್ರತಿ ಮಾನವನಲ್ಲೂ ಏಳು ರೀತಿ ಯ ಜಾಣ್ಮೆಗಳಿರುತ್ತವೆ. ಪ್ರತಿ ವ್ಯಕ್ತಿಯಲ್ಲಿ ಎರಡೋ , ಮೂರೋ ಪ್ರಧಾನ ಜಾಣ್ಮೆಗಳಿರಬಹುದು ಕೆಲವರಿಗೆ ಏಳೂ ಸಮತೋಲಿತ ಜಾಣ್ಮೆಗಳಿರಬಹುದು.ಹೊವಾರ್ಡ್‌ ಗಾರ್ಡ್ನರ್ ನು ಪ್ರಪ್ರಥಮವಾಗಿ ಏಳೂ ಜಾಣ್ಮೆಗಳ ಪಟ್ಟಿ ತಯಾರಿಸಿದನು. ಅವನ ಪಟ್ಟಿಯು ತಾತ್ಕಾಲಿಕವಾಗಿತ್ತು. ಮೊದಲ ಎರಡಕ್ಕೆ ಸಾಮನ್ಯವಾಗಿ ಶಾಲೆಗಳಲ್ಲಿ ಬಹಳ ಬೆಲೆ. ಮುಂದಿನ ಮೂರು ಸಾಧಾರಣವಾಗಿ ಕಲಾಪ್ರಪಂಚಕ್ಕೆ ಸಂಬಂಧಿಸಿದವು: ಕೊನೆಯ ಮೂರನ್ನು ಹೊವಾರ್ಡ್‌ ಗಾರ್ಡ್ನರ್ ನು ವೈಯುಕ್ತಿಕ ಜಾಣ್ಮೆ ಎಂದು ಹೆಸರಿಸಿದ .

ಮಾಹಿತಿ ತಂತ್ರ ಜ್ಞಾನ ಸಾಕ್ಷರತೆ

ಈ ಅಂತರ್ ಜಾಲ ತಾಣದಲ್ಲಿರುವ ಮಾಹಿತಿ ತಂತ್ರ ಜ್ಞಾನ (ಐ ಟಿ) ಸಾಕ್ಷರತೆ ವಿಭಾಗವು, ವೆಬ್ ನಲ್ಲಿರುವ ಅನೇಕ ತಂತ್ರಜ್ಞಾನ ಕ್ಷೇತ್ರಗಳ ಬಗ್ಗೆ ಅರಿವು ಮೂಡಿಸುವುದು. ಗಣಕಯಂತ್ರ (ಕಾಂಪ್ಯೂಟರ್) ಮತ್ತು ಮೂಲಭೂತ ಹಾರ್ಡ ವೇರ್ ಗಳನ್ನು ಕುರಿತ ಚುಟುಕಾದ ಮಾಹಿತಿ ನೀಡುವುದು. ಅಲ್ಲದೆ ಪ್ರಾದೇಶಿಕ ಭಾಷೆಗಳಲ್ಲಿ ಪದೇ ಪದೇ ಕೇಳಲಾಗುವ ಪ್ರಶ್ನೆಗಳೂ ಇವೆ.

ಸಂಪನ್ಮೂಲ ಲಿಂಕುಗಳು

ಭವಿಷ್ಯದ ವೃತ್ತಿ ಮಾರ್ಗದರ್ಶನ ಉತ್ತಮ ರೀತಿಯಲ್ಲಿ ಆಕಾರಗೊಳ್ಳಲು ಈ ವಿಭಾಗ ಸಹಾಯ ಮಾಡುತ್ತದೆ. ಈ ಭಾಗದಲ್ಲಿ ೧೦ ನೇ ತರಗತಿಯಿoದ, ಪದವಿ ಮತ್ತು ಇತರ ವಿವಿಧ ಅಧ್ಯಯನ ಮತ್ತು ಉದ್ಯೋಗಾವಕಾಶಗಳು ಬಗ್ಗೆ ಲಭ್ಯವಿರುವ ಮಾಹಿತಿಯನ್ನು ಓದುಗರಿಗೆ ಸೂಚಿಸುತ್ತದೆ.

ದೈಹಿಕ ಶಿಕ್ಷಣ

ಮಾನವನಿಗೆ ಅತಿ ಹೆಚ್ಚು ಪ್ರಿಯವಾದುದೆಂದರೆ ಆತನ ಶರೀರ. ಈ ಶರೀರವನ್ನು ಬಿಟ್ಟು ಒಂದು ಕ್ಷಣವು ಅವನಿರುವುದಾದರೆ ಅದು ನಿರ್ಜೀವಿಯಾಗಿ ಮಾತ್ರ. ಶರೀರವೇ ಶ್ರೇಷ್ಠ, ಶರೀರವಿಲ್ಲದ ಮನುಷ್ಯನನ್ನು ಕಲ್ಪಿಸಲು ಅಸಾಧ್ಯ ಈ ಶರೀರದೊಳಗೆ ಅತ್ಮ, ಮನಸ್ಸು, ಬುದ್ಧಿ, ಭಾವನೆಗಳು ಸೇರಿಕೊಂಡಿವೆ.ಶರೀರ ಶಿಕ್ಷಣ ಎಂಬ ಶಬ್ದವು ಶರೀರ ಮತ್ತು ಶಿಕ್ಷಣ ಎಂಬ ಎರಡು ಪದಗಳ ಸಮ್ಮಿಲನವಾಗಿದೆ.

ಶಿಕ್ಷಣ-ಚರ್ಚೆಯ ವೇದಿಕೆ

ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ, ಐಸಿಟಿ ಶ್ಲಾಘನೀಯ ಪಾತ್ರವನ್ನು ವಹಿಸಿದೆ. ಪ್ರಾಥಮಿಕ ಶಿಕ್ಷಣವನ್ನು ಸಾರ್ವತ್ರಿಕರಣ ಗುರಿಯನಾಗಿ ಸಾಧಿಸಲು ಸಾಕಷ್ಟು ಸಂಪನ್ಮೂಲ ಸಾಮಗ್ರಿಯನ್ನು ಶಿಕ್ಷಣ ವಿಭಾಗದಲ್ಲಿ ಕಾಣಬಹುದಾಗಿದೆ. ಹಾಗೇಯೇ ಗುರುತಿಸಿದ ವಿಷಯಗಳ ಮೇಲೆ ತಮ್ಮ ಅಭಿಪ್ರಾಯ/ಮಾಹಿತಿಯನ್ನು ಹಂಚಿಕೊಳ್ಳುವ ಅವಕಾಶವನ್ನು ಕಲ್ಪಿಸಿರುವುದು ಈ ಪೋರ್ಟಲ್ ಚರ್ಚಾ ವೇದಿಕೆಯ ವೈಶಿಷ್ಟ್ಯ. ಚರ್ಚಿಸಲು ಹಾಗೂ ಬಳಕೆದಾರರು ಸೃಜಿಸಿ ಸಲ್ಲಿಸಿರುವ ವಿಷಯವನ್ನು ಪ್ರಕಟಿಸಲು ಈ ವೆಬ್ ತಂತ್ರಾಂಶವನ್ನು ಬಳಸಲಾಗುತ್ತದೆ. ಈ ತಾಣದಲ್ಲಿ ಸಂಬಂಧಿತ ವಿಷಯಗಳ ಬಗೆಗಿನ ಚರ್ಚೆಗೆ ಅವಕಾಶವಿದೆ.

ಕೊನೆಯ ಮಾರ್ಪಾಟು : 12/4/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate