অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಆರೋಗ್ಯ ಶಿಕ್ಷಣ

ಆರೋಗ್ಯ ಶಿಕ್ಷಣ

ಶರೀರ ಶಿಕ್ಷಣದ ಮೃದುವಾದ ಅಂಗವೇ ಆರೋಗ್ಯ ಶಿಕ್ಷಣ ಇವೆರಡು ಒಂದಕ್ಕೊಂದು ಒಡಕು ಬಿಟ್ಟು ವರ್ತುಲಗಳು ಇದ್ದಂತೆ ಆದರೂ ಇವೆರಡುಕ್ಕೂ ಸರ್ವಸಾಮಾನ್ಯ ಅದ್ದೇಶಗಳಿವೆ.

ಆಯುರಾರೋಗ್ಯಭಾಗ್ಯವೇ ಮಾನವ ಮೊದಲ ಗುರಿ. ಇಂತಹ ಗುರಿಯ ಸಾಧನೆಗೆ ಆರೋಗ್ಯ ಶಿಕ್ಷಣ ಬಹಳ ಮುಖ್ಯವಾಗಿದೆ.

ವ್ಯಾಖ್ಯೆ ಎಂಬ ಆಂಗ್ಲಭಾಷೆಯ ಪದ ಸುರಕ್ಷಿತ ಮತ್ತು ಸುಭದ್ರವಾದ ಶರೀರ ಎಂದಾಗುತ್ತದೆ. ಶರೀರದೊಳಗಿನ ಮನಸ್ಸು ಮತ್ತು ಭಾವನೆಗಳೂ ಸಹ ಇದರಲ್ಲಿ ಸೇರಿವೆ.ಡಾ11 ಥಾಮಸ್ ಲುಡ್ ಇವರ ಪ್ರಕಾರ ಮನೆ ಶಾಲೆ ಹಗೂ ಇನ್ನಿತರ ಸಾಮಾಜಿಕ ಸ್ಥಳಗಳಲ್ಲಿ ವೈಯಕ್ತಿಕ ಅಥವಾ ಸಾಮಾಜಿಕ ಆರೋಗ್ಯದ ಬಗ್ಗೆ ಯೋಗ್ಯವಾದ ಮನೋವೃತ್ತಿ ಜ್ಞಾನ ಹಾಗೂ ಒಳ್ಳೇಯ ಅಭ್ಯಾಸಗಳು ನೆಲೆಗೊಳ್ಳುವಂತೆ ಪ್ರಭಾವ ಬೀರುವ ಅನುಭವಗಳ ಒಟ್ಟು ಪರಿಣಾಮವೇ ಆರೋಗ್ಯ ಶಿಕ್ಷಣ.

ಈ ವ್ಯಾಖ್ಯೆಗಳನ್ನು ಪರಿಶೀಲಿಸಿದಾಗ ಆರೋಗ್ಯ ಶಿಕ್ಷಣವು ಒಟ್ಟು ಮಗುವಿನ ಚಟುವಟಿಕೆಯಲ್ಲಿ ಅಡಕವಾಗಿದೆ. ಇದರ ಮಾರ್ಗದರ್ಶನ ಶಿಕ್ಷಕನಿಂದ ಆಗಬೇಕಾಗಿದೆ.

ಆರೋಗ್ಯ ಶಿಕ್ಷಣದಲ್ಲಿ ಶಿಕ್ಷಕ, ತಂದೆ ತಾಯಿ, ಸಮಾಜದ ಪಾತ್ರ ಬಹಳವಿದೆ. ಎಂದು ಹೇಳಿದರೂ ಸಹ ಕೊಠಾರಿಯ ವರದಿ ತಾಷ್ಟ್ರದ ಭವಿಷ್ಯವು ನಾಲ್ಕು ಗೋಡೆಯೊಳಗೆ ನಿರ್ಮಾನವಾಗುತ್ತಿದೆ. ಎಂದು ಹೇಳಿರುವುದರಿಂದ ಆರೋಗ್ಯ ಶಿಕ್ಷಣ ನೀಡುವಲ್ಲಿ ಶಿಕ್ಷಕನ ಪಾತ್ರ ಮಹತ್ವದ್ದಾಗಿಗಿರುತ್ತದೆ ಎಂದೆನಿಸುತ್ತದೆ.

ಈ ನಿಟ್ಟಿನಲ್ಲಿ ಶಿಕ್ಷಕನು ದಿನನಿತ್ಯ ಇಲ್ಲಿ ತಿಳಿಸಿರುವ ಆರೋಗ್ಯದ ಅವ್ಯಾಸಗಳನ್ನು ಬೋಧನೆ ತಿಳುವಳಿಕೆಗೆ ಸೀಮಿತಗೊಳಿಸುವುದಕ್ಕಿಂತ ಮುಖ್ಯವಾಗಿ ದಿನನಿತ್ಯ ಅವಿಗಳನ್ನು ರೂಢಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕಾಗುತ್ತದೆ. ಹಾಗಾಗಿ ಎಲ್ಲಾ ಆಟದ ಪಾಠಗಳಲ್ಲಿ ಆರೋಗ್ಯದ ರೂಢಿಗಳನ್ನು ಅಳವಡಿಸಿದೆ.

ಆರೋಗ್ಯ ಶಿಕ್ಷಣದ ವಿಷಯಗಳು

  1. ಆಹಾರ
  2. ಆರೋಗ್ಯದ ರೂಢಿಗಳು
  3. ರೋಗಗಳನ್ನು ತಡೆಗಟ್ಟುವುದು
  4. ರೋಗಗಳನ್ನು ಹರಡುವ ಅಂಶಗಳು ಹಾಗೂ ಅವುಗಳಿಂದ ವಿಮುಕ್ತವಾಗುವ ಕ್ರಮ
  5. ತನ್ನಲ್ಲಿ ಆಗುವ ಬದಲಾವಣೆಗಳನ್ನು ತಿಳಿಸಿದೆವೈಯಕ್ತಿಕ ಮತ್ತು ಪರಿಸರದ ಸ್ವಚ್ಛತೆ

ಪ್ರಥಮ ಚಿಕಿತ್ಸೆ ಮತ್ತು ಸುರಕ್ಷತಾ ಶಿಕ್ಷಣ

ಆರೋಗ್ಯ ಶಿಕ್ಷಣ ಪ್ರಮುಖ ವಿಷಯ ವಸ್ತುವು ಇದಾಗಿದೆ. ಪ್ರಥಮ ಚಿಕಿತ್ಸೆ ಎಂದರೆ ಅಪಘಾತಕ್ಕೀಡಾದಗ ವ್ಯಕ್ತಿಗೆ ಕೂಡಲೆ ತಾತ್ಕಾಲಿಕ ಚಿಕಿತ್ಸೆ ನೀಡುವುದು ಹಾಗೂ ವ್ಯೆದ್ಯರ ಸೇವೆ ದೊರೆಯುವವರೆಗೆ ಪರಿಸ್ಥಿತಿ ಹದಗೆಡದಂತೆ ನೋಡಿಕೊಳ್ಳುವುದು ಏರ್ಪಡಿಸುಚುದೇ ಪ್ರಥಮ ಚಿಕಿತ್ಸೆ.

ಶಾಲಾ ಮೈದಾನ, ಮನೆ, ಮತ್ತು ಪರಿಸರದಲ್ಲಿ ಅಫಃಆತಗಳು ಸಂಭವಿಸುತ್ತ್ದೆ. ಅಲ್ಲಿಯೇ ಆರೋಗ್ಯ ಕೇಂದ್ರಗಳು ಇರುವುದಿಲ್ಲ ಆಗ ಕನಿಷ್ಟ ತಿಳುವಳಿಕೆಯೊಂದಿಗೆ ವ್ಯಕ್ತಿಯು ಸಾವಿನಿಂದ ತಪ್ಪಿಸಿಕೊಳ್ಳಲು ತಕ್ಷಣ ಚಿಕಿತ್ಸೆ ನೀಡಿ ನಂಟರ ಆರೋಗ್ಯ ಕೇಂದ್ರಕ್ಕೆ ತಲುಪಿಸಬಹುದು ಹಾಗೂ ಅಂತಹ ಅವ್ಘಡಗಳು ಆಗದಿರುವ ರೀತಿಯಲ್ಲಿ ಮುನ್ನೆಚ್ಚಿರಿಕೆ ಕ್ರಮವನ್ನು ವಹಿಸುವುದೇ ಸುರಕ್ಷತಾ ಶಿಕ್ಷಣ.

ಮಕ್ಕಳು ದಿನನಿತ್ಯ ಉಪಯೋಗಿಸುವ ಜಾಮಿಟ್ರಿಬಾಕ್ಸ್ ಅದರಲ್ಲಿ ಚೂಪಾದ ವಸ್ತುಗಳು ಮೈದಾನದಲ್ಲಿರುವ ಕಲ್ಲು ಮುಳ್ಳು ಹಾಗೂ ಶಾಲೆಯಲ್ಲಿ ಉಪಯೋಗಿಸುವ ಬಣ್ಣದ ಡಬ್ಬಗಳು ವಿಜ್ಞಾನ ಪ್ರಯೋಗಾಲಯದಲ್ಲಿ ಉಪಯೋಗಿಸುವ ವಿಷ ಅನಿಲ ಗಾಜು ಇತ್ಯಾದಿಗಳ ವಿಲೇವಾರಿ ಹಾಗೂ ಇವುಗಳಿಂದ ಸುರಕ್ಷತಾ ಕ್ರಮವನ್ನು ಮತ್ತು ವಿಷಜಂತುಗಳಿಂದ ಕಡಿತ, ಆಘಾತಕಾರಿಯಾದ ಬೆಂಕಿ, ನೀರು ಹೀಗೆ ಮುಂತಾದವುಗಳಿಂದ ಸಂಭವಿಸುವ ಅನಾಹುತವನ್ನು ತಡೆಗಟ್ತುವ ಉಪಾಯಗಳನ್ನು ಸರಳವಾಗಿ ಸುಲಭವಾಗಿ ಆರೋಗ್ಯ ಶಿಕ್ಷಣ ಭಾಗದಲ್ಲಿ ತಿಳಿಸಲು ಪ್ರಯತ್ನಿಸಿದೆ ಹಾಗೂ ಅವಗಡದಲ್ಲಿರುವ ವ್ಯಕ್ತಿಗೆ ಚಿಕಿತ್ಸೆ ನೀಡುವ ಕ್ರಮವನ್ನು ಕನಿಷ್ಟ ತಿಳುವಳಿಕೆಗಾಗಿ ಆರೋಗ್ಯ ಶೀಕ್ಷಣ ವಿಭಾಗದಲ್ಲಿ ಕೊಡಲಾಗಿದೆ.© 2006–2019 C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate