ಜಾಗತೀಕರಣದಲ್ಲಿ ತಂತ್ರಜ್ಞಾನ ಮುಂದುವರಿದಂತೆ ದೈಹಿಕ ಚಲನೆ ಕಡಿಮೆಯಾಗಿ ಮಧುಮೇಹ, ಹೃದಯಘಾತ, ರಕ್ತದೊತ್ತಡ ಮತ್ತು ಮಾನೋ ದೈಹಿಕ ಖಾಯಿಲೆಗಳಿಗೆ ತೊತ್ತಾಗುತ್ತಿರುವ ವಿಷಯವನ್ನು ಪ್ರಚಾರ ಮಾಧ್ಯಮಗಳಲ್ಲಿ ದಿನನಿತ್ಯ ತಿಳಿಯುತ್ತಿದದ್ದೇವೆ.
ಈ ನಿಟ್ಟಿನಲ್ಲಿ ಅಪೋಲೋ ಆಸ್ಪತ್ರೆಯ ಪ್ರಸಿದ್ಧ ವೈದ್ಯರಾದ ಡಾIIಭಕ್ತಿಯಾರ್ ಚೌಧರಿ ಯವರು ಮಕ್ಕಳ ಆರೋಗ್ಯ ಕುರಿತು ಸಂಶೋಧನೆ ನಡೆಸಿ ಮುಂದೆ ಮಕ್ಕಳು ಗಾಜಿನ ಗೊಂಬೆಗಳಾಗುತ್ತಿದ್ದಾರೆ ಎಂಬ ಆತಂಕಕಾರಿ ವಿಚಾರಗಳನ್ನು ಹೊರ ತಂದಿದ್ದಾರೆ. ಇದಕ್ಕೆ ಕಾರಣಗಳನ್ನು ಈ ರೀತಿ ಹೇಳುತ್ತಾರೆ. ಮನೆಯಲ್ಲಿ ಮಕ್ಕಳನ್ನು ಕಣ್ಣಿನ ರೆಪ್ಪೆಯಂತೆ ಪೋಷಿಸುತ್ತಿರುವುದು.ಶಾಲೆಗಳಲ್ಲಿ ದೈಹಿಕ ಚಟುವಟಿಕೆಗಳು ನಡೇಯದಿರುವುದು ಹಾಗೂ ಮಕ್ಕಳಿಗೆ ಸ್ವತಂತ್ರವಾಗಿ ಆಟವಾಡಲು ಮೈದಾನವಿಲ್ಲದಿರುವುದು ಇಂದಿನ ಟ್ಯೂಷನ್, ಟಿ.ವಿ. ಕಂಪ್ಯೂಟರ್ ಗಳ ಹಾವಳಿ ಹೆಚ್ಚಾಗಿರುವುದೇ ಇದಕ್ಕೆ ಕಾರಣವೆಂದಿದ್ದಾರೆ. ಹಾಗೆಯೇ ಭಾರತದ ಪ್ರಸಿದ್ಧ ಅಥ್ಲೇಟಿಕ್ ತರಬೇತುದಾರರಾದ ಡಾIIಲಕ್ಷ್ಮೀಶ್ರವರು ಕರ್ನಾಟಕದ ಫ್ರೌಢಶಾಲಾ ಮಕ್ಕಳ ಚಟುವಟಿಕೆಯ ಮೇಲೆ ಸಂಶೋಧನೆ ನಡೆಸಿ ಅಮೇರಿಕಾದಲ್ಲಿ ವೃದ್ದಾಪ್ಯದಲ್ಲಿ ಬರುವ ಮುಪ್ಪು ನಮ್ಮ ಫ್ರೌಢಶಾಲಾ ಮಕ್ಕಳ ವಯಸ್ಸಿಗೆ ಬಂದಿರುತ್ತದೆ ಎಂದಿದ್ದಾರೆ. ಇವರ ಸಂಶೋಧನೆಯನ್ನು ನೋಡಿದರೆ ಇಂದಿನ ಒಲಂಪಿಕ್ ನಲ್ಲಿ ನಮ್ಮ ದೇಶದ ಪದಕಗಳು ಎಲ್ಲಿದೆಯೆಂದು ಹುಡುಕಾಡುವ ಸ್ಥಿತಿಯಲ್ಲಿ ನಾವಿರುವಾಗ ಇದೇನು ಅತಿಯೋಕ್ತಿಯೇನಲ್ಲ ಎಂದೆನಿಸುತ್ತ್ದೆ. ಹಾಗೆಯೇ ನೌಕರರ ಒಕ್ಕೂಟ ನಡೆಸಿದ ಸಂಶೋಧನೆಯಲ್ಲಿ ನೌಕರರು ತಮ್ಮ ವೇತನದಲ್ಲಿ ಹಿಂದಿಗಿಮ್ತಲೂ ಸಹ ಇಂದು ಆರೋಗ್ಯ ರಕ್ಷಣೆಗಾಗಿ ಮಾಡುವ ಖರ್ಚು ಅಧಿಕವಗಿದೆ. ಎಂಬ ಅಂಶವನ್ನು ಹೊರತಂದಿರುವುದನ್ನು ನೋಡಿದರೆ ದೈಹಿಕ ಶಿಕ್ಷಣದ ಅವಶ್ಯಕತೆ ಬಹಳವಿದೆ ಎಂದನಿಸುತ್ತದೆ.ಈಗಾಗಲೇ ಜಪಾನಿನ ಆರೋಗ್ಯ ತಜ್ಞರಾದ ಹಿದೆಯುಕಿ ತೋಭೆ ಯವರು ಪ್ರಾಥಮಿಕ ಮತ್ತು ಫ್ರೌಢಶಾಲಾ ಮಕ್ಕಳ ಆರೋಗ್ಯ ಮತ್ತು ದೈಹಿಕ ಶೈಕ್ಷಣಿಕ ಪ್ರಗತಿ ಕುರಿತಾದ ಒಂದು ಸಂಶೋಧನೆ ನಡೆಸಿ ಅವರು ದೈಹಿಕ ಶಿಕ್ಷಣ ಚಟುವಟಿಕೆಯಲ್ಲಿ ಪಾಲ್ಗೊಂಡ ಮಕ್ಕಳು ಚುರುಕಾಗಿಯೂ ಕ್ರಿಯೆಗೆ ಉತ್ತಮ ಪ್ರಕ್ರಿಯೆ ನೀಡುವುದಾಗಿದ್ದೂ, ಅವರ ಕಲಿಕೆಯಲ್ಲಿ ಉತ್ತಮ ಪ್ರಗತಿಯಾಗುತ್ತಿದೆ, ಆದರೆ ಉಳಿದ ಮಕ್ಕಳು ಅವರಿಗಿಂತ ಪ್ರಗತಿಯಲ್ಲಿ ಮತ್ತು ಆರೋಗ್ಯದಲ್ಲಿ ಹಿಂದುಳಿದಿರುವ ವಿಚಾರಗಳನ್ನು ಹೊರತಂದಿರುತ್ತಾರೆ. ಈ ನಿಟ್ಟಿನಲ್ಲಿ ಗಮನಿಸುವುದಾದರೆ ಸಹ ಶಿಕ್ಷಣದಲ್ಲಿ ದೈಹಿಕ ಚಟುವಟಿಕೆಗಳ ಅವಶ್ಯಕತೆ ಕಂಡು ಬರುತ್ತದೆ. ಇಂತೆಲ್ಲಾಚಟುವಟಿಕೆಗಳ ಜೊತೆಯಲ್ಲಿ ಆರೋಗ್ಯಕ್ಕಾಗಿ ಯೋಗ ಶಿಕ್ಷಣ, ನೈತಿಕ ಶಿಕ್ಷಣ ಮತ್ತು ಆರೋಗ್ಯ ಶಿಕ್ಷಣವನ್ನೊಳ್ಗೊಂಡಂತೆ. ದೈಹಿಕ ಶಿಕ್ಷಣವನ್ನು ಶಾಸ್ತ್ರಿಯವಾಗಿ ಬೋಧಿಸುವ ಅವಶ್ಯಕತೆ ಮತ್ತು ಅನಿವಾರ್ಯತೆಯ ಬಗ್ಗೆ ಚಿಂತಿಸಬೇಕಾಗಿರುವುದು ಕ್ರ್ವಲ ದೈಹಿಕ ಶಿಕ್ಷಣ ವಿಭಾಗ ಮಾತ್ರವಲ್ಲ. ಶಿಕ್ಷಣ ತಜ್ಞ ಥಾಮಸ್ ರವರು ಹೇಳುವಂತೆ ದೈಹಿಕ ಶಿಕ್ಷಣ ದೇಹಕ್ಕೆ ಸಂಬಂಧಿಸಿರುವುದಕ್ಕಿಂತ ಹೆಚ್ಚಾಗಿ ಶಿಕ್ಷಣಕ್ಕೆ ಸಂಬಂಧಿಸಿದೆ ಎಂದಿದ್ದಾರೆ. ಅವರ ಮಾತು ನಿಜವೆಂಬಂತೆ ಇಂದು ಶಿಕ್ಷಣದಲ್ಲಿ ದೈಹಿಕ ಶಿಕ್ಷಣವನ್ನು ಸಮರ್ಪಕವಾಗಿ ಹಾರಿಗೆ ತರದ ಹೊರತು, ಶಿಕ್ಷಣದ ಅನೇಕ ಸಮಸ್ಯೆಗಳು ಸಮಸ್ಯೆಯಾಗಿ ಕಾಡುತ್ತಿರುವುದರ ಬಗ್ಗೆ ಗಂಭೀರವಾಗಿ ಚಿಂತಿಸುವ ಅವಶ್ಯಕತೆ ಕಂಡುಬರುತ್ತದೆ.
ಕೊನೆಯ ಮಾರ್ಪಾಟು : 7/20/2020