ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಮೂಲ ತತ್ವಗಳು

ದೈಹಿಕ ಶಿಕ್ಷಣದ ಮೂಲ ತತ್ವಗಳು ಬಗ್ಗೆ ತಿಳಿಸಲಾಗಿದೆ.

 1. ಸತತ ಪ್ರಗತಿ ಪರತೆಯ ತತ್ವ ಸುಲಭದಿಂದ ಕಠಿಣತೆಯ ಕಡೆಗೆ(principles of progressive loadinga): ದೈಹಿಕ ಶಿಕ್ಷಣದ ಚಟುವತಿಕೆ ಮತ್ತು ಕೌಶಲ್ಯಗಳನ್ನು ಹೇಳಿ ಕೊಡುವಾಗ ಹಂತ ಹಂತವಾಗಿ ಸುಲಭದಿಂದ ಕಠಿಣದ ವಿಷಯವನ್ನು ಬೋದಿಸಿ ಕಲಿಸಬೇಕು. practice makes man perfect ಎಂಬ ತತ್ವವು ಇದಕ್ಕೆ ಬಿಡಿಸಲಾರದ ಸಂಬಂಧ ಎಂಬುದನ್ನು ಅರಿಯಬೇಕು.
 2. ತರಬ್ರ್ತಿಯ ಮಧ್ಯದಲ್ಲಿ ವಿರಾಮದ ತತ್ವ (principles of interval) : ಸತತವಾಗಿ ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಂಡಾಗ ಸ್ನಾಯುಗಳು ಆಯಾಸಗೊಂಡಾಗ ಅಗತ್ಯವಿರುವಷ್ಟು ವಿಶ್ರಾಂತಿ ನೀಡಬೇಕು. ಹೆಚ್ಚು ವಿಶ್ರಾಮ್ತಿ ಕೊಟ್ಟಾಗ warm Down ಆಗುತ್ತದೆ.
 3. ತರಬೇತಿಯ ವಿಶಿಷ್ಟತೆಯ ತತ್ವ (Principles of specificity) : ಕ್ರೀಡಾ ಕ್ಷೇತ್ರದಲ್ಲಿ ಹತ್ತು ಹಲವಾರು ವರ್ಷಗಳ ಪರಿಶ್ರಮವೇ ಅವನ ಉನ್ನತ ಮಟ್ಟದ ಸಾಧನೆಗೆ ಕಾರಣವಾಗುತ್ತದೆ.ವಿವಿಧ ಹಂತದ ತರಬೇತಿಯೊಂದೇ ಕ್ರೀಡಾ ಪಟುವಿನ ಅಭಿವೃದ್ಧಿಗೆ ಸೂಕ್ತ ಮಾರ್ಗ.
 4. ಸರ್ವತೋಮುಖ ಅಭಿವೃದ್ಧಿಯ ಹಂತ : ಈ ಹಂತವೂ ಶಾಲೆಗಳಲ್ಲಿ ಒಂದನೇ ತರಗತಿಯಿಂದ 4,5ನೇ ತರಗತಿ ಮಕ್ಕಳಿಗೆ ಸಂಬಂಧಿಸಿದೆ. ಈ ಹಂತದಲ್ಲಿ ವೈವಿಧ್ಯಮಯವಾದ ದೈಹಿಕ ಚಟುವಟಿಕೆಗಳಲ್ಲಿ ಮಗು ಪಾಲ್ಗೊಳ್ಳುವಂತೆ ಮಾಡಬೇಕು. ಸುಲವ ಮೈನರ್ ಗೇಮ್ಸ್ ಆಟಗಳು ಉತ್ತಮವಾಗಿದೆ. ಇ ಹಂತದಲ್ಲಿ ಕ್ರೀಡಾಪಟುವಿಕೆ ಇಂತಹದೇ ಎಂಬ ಆಟದ ನಿರ್ದಿಷ್ಟತೆಯಿಲ್ಲ.
 5. ಪ್ರಾಥಮಿಕ ಪರಿಣಿತಿ ಹಂತ : ಇಲ್ಲಿ ಸುಲಭವಾದ ಆಟದ ಕೌಶಲ್ಯಗಳನ್ನು ತಿಳಿಸಬೇಕು.Shotput ಅನ್ನು ಗ್ಲೈಡಿಂಗ್ ಮಾಡದೇ ನಿಂತು ಎಸೆಯುವುದು. ವಾಲಿಬಾಲ್ ಸರ್ವಿಸ್ ಗಳಲ್ಲಿ Simple ಸರ್ವೀಸ್ ಹೇಗೆ ಹೇಳಿಕೊಡಬೇಕು.ಈ ಹಂತದಲ್ಲಿ ಮಕ್ಕಳು 6 ರಿಂದ 8 ನೇ ತರಗತಿಯ ವಯಸ್ಸಿನವರಾಗಿರುತ್ತಾರೆ. ಈ ಹಂತದಲ್ಲೂ ವೈವಿಧ್ಯಮಯವಾದ ಕ್ರೀಡೆಯಲ್ಲಿ ಭಾಗವಹಿಸಬೇಕು. ಇಚ್ಛಿಸಿದ ಕ್ರೀಡೆಯ ಆಯ್ಕೆಯಲ್ಲಿ ಆತುರ ಪಡಬಾರದು.
 6. ಉನ್ನತಿ ಪರಿಣಿತಿ ಹಂತ : ಈ ಹಂತವು 9 ರಿಂದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ವಯಸ್ಸಿನವರಿಗೆ ಅನ್ವಯಿಸುತ್ತದೆ. ಈ ಸಂದರ್ಭದಲ್ಲಿ ಕ್ರೀಡಾಪಟುವಿನ ದೈಹಿಕ ಬೆಳವಣಿಗೆಯು ಅಂತಿ9ಮ ಚರಣದಲ್ಲಿದ್ದು, ಇಲ್ಲಿ ಯಾವುದಾದ್ರೊಂದು ಪಂದ್ಯವನ್ನು ಆಯ್ದು ಅದರಲ್ಲಿ ಪರಿಪಕ್ವವಾಗಲು ಉನ್ನತ ಮಟ್ಟದ ತರಬೇತಿಯನ್ನು ನೀಡಬೇಕು. ಈ ಹಂತದಲ್ಲಿ ಕಠಿಣವಾದ ಕೌಶಲ್ಯಗಳನ್ನು ಹೇಳಿಕೊಡಬಹುದು.

ತರಗತಿ ತೆಗೆದುಕೊಳ್ಳುವ ಮುನ್ನ ಪೂರ್ವ ತಯಾರಿ

 1. ಆಟದ ಸ್ಥಳದ ಸ್ವಚ್ಛತೆ ಮತ್ತು ಆಟಕ್ಕೆ ಸಂಬಂಧಿಸಿದೆ ಗೆರೆ, ವೃತ್ತ ಹೀಗೆ ಗುರುತುಗಳನ್ನು ಮಾರ್ಕಿಂಗ್ ಪೌಡರ್ ಇಲ್ಲವೇ ಸುಣ್ಣದಿಂದ ಹಾಕಿರಬೇಕು (ಕಡ್ಡಿ ಗೆರೆಯಾದರೂ ಸರಿಯೇ)
 2. ಆಟೋಪಕರಣವನ್ನು ಶಿಕ್ಷಕರ ಮೇಜು ಕುರ್ಚಿಗಳ ಪಕ್ಕದಲ್ಲಿಟ್ಟಿರಬೇಕು.(ಆಟದ ಮೈದಾನದಲ್ಲಿ ಆಟೋಪಕರಣವನ್ನು ಜೋಡಿಸಿಟ್ಟಿರಬೇಕು),
 3. ಶಿಕ್ಷಕರ ಮೈದಾನದಲ್ಲಿರುವ ಮೇಜಿನ ಮೇಲೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಮತ್ತು ಸಾಮರ್ಥ್ಯ ಗುರುತಿಸುವ ಪುಸ್ತಕವಿರಬೇಕು ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಕೊಂಡಿರಬೇಕು.
 4. ಆಟದ ಉದ್ದೇಶ ಹಾಗೂ ಇಂದಿನ ಪಾಠದ ಯೋಜನೆ ತಯಾರು ಮಾಡಿರಬೇಕು, ಹಿಂದಿನ ದಿನದ ಪಾಠದ ಬಗ್ಗೆ ಪ್ರಶ್ನೆಗಳನ್ನು ಪಾಠ ಟಿಪ್ಪಣಿಯಲ್ಲಿ ಸೇರಿಸಿರಬೇಕು.
 5. ಶಿಕ್ಷಕರು ಸೂಕ್ತ ಸಮವಸ್ತ್ರ ಮತ್ತು ಸೀಟಿಯೊಂದಿಗೆ ತಯಾರಾಗಬೇಕು.
 6. ಮಕ್ಕಳು ಆಯಾ ಆಟಕ್ಕೆ ಸಂಬಂಧಿಸಿದ ಸಮವಸ್ತ್ರ ಧರಿಸುವ ಕಡೆ ಗಮನ ಹರಿಸಬೇಕು.

ಕ್ರೀಡಾ ತರಬೇತಿಯಲ್ಲಿ ಸದಾ ನೆನಪಿನಲ್ಲಿಟ್ಟುಕೊಳ್ಳುಬೇಕಾದ ವಿಚಾರಗಳು

 1. ಕಿರಿಯ ವಯಸ್ಸಿನ ಕ್ರೀಡಾಪಟುಗಳು ಪುಟ್ಟ ಯುವಕರಲ್ಲ.
 2. ಮಕ್ಕಳ ಬೆಳವಣಿಗೆ ವಯಸ್ಸಿನಲ್ಲಿ ಸಾಮಾನ್ಯವಾಗಿ ಕಂಡುಬರುವ ದೈಹಿಕ ಬೆಳವಣಿಗೆ ಮತ್ತು ವಿಕಾಸಗಳ ಕಡೆಗೆ ಜ್ಞಾನವಿರಬೇಕು. ಮಕ್ಕಳ ಸಾಧನೆಯ ಬಗ್ಗೆ ಅತಿಯಾದ ನಿರೀಕ್ಷೆ ಮಾಡಬಾರದು.
 3. ಬೆಳವಣಿಗೆ ಹಂತದಲ್ಲಿರುವ ಕಿರಿಯ ಕ್ರೀಡಾಪಟುಗಳಿಗೆ ತರಬೇತಿಯನ್ನು ನೀಡುವಾಗ ಹೆಚ್ಚಿನ ಗಮನಹರಿಸಬೇಕು.
 4. ಕ್ರೀಡಪಟುಗಳಿಗೆ ಮೊದಲು ಆಸಕ್ತಿ ಬೆಳೆಸಿ ನಿರಾಶೆಯಾಗದಂತೆ ನೋಡಿಕೊಳ್ಳಬೇಕು.
 5. ಸರ್ವತೋಮುಖ್ ಬೆಳ್ವಣಿಗೆಯ ಹಂತದಲ್ಲಿರುವ 1ರಿಂದ8ನೇ ತರಗತಿ ವಯಸ್ಸಿನ ಮಕ್ಕಳಿಗೆ ಯಾವುದೇ ಒಂದು ನಿರ್ದಿಷ್ಟ ಆಟಕ್ಕೆ ಸೀಮಿತಗೊಳಿಸಬಾರದು.
 6. ಸ್ವರ್ಧೆಗಳಲ್ಲಿ ಸೆಣಸಲು ಆತುರದ ಪರಿಣಿತಿಯನ್ನು ಪಡೆಯಲು ಪ್ರಯತ್ನಿಸಬಾರದು.
 7. ಗಾಬರಿ, ಭಯ, ಆತಂಕವಿರುವಾಗ ಯಾವುದೇ ಕೌಶಲ್ಯಗಳನ್ನು ಹ್ರ್ಳಿಕೊಟ್ಟು ಕಲಿಸಬಾರದು.
 8. ಕಲಿಕೆಯ ಹಂತದಲ್ಲಿ ತಪ್ಪು ಕಲ್ಪನೆಗಳು ನುಸುಳದಂತೆ ನೋಡಿಕೊಳ್ಳಬೇಕು.
 9. ಮಕ್ಕಳ ಮನೋವಿಜ್ಞಾನದ ಬಗ್ಗೆ ತಿಳಿದುಕೊಂಡಿರಬೆಕು.
 10. ಮಾತು ಕಡಿಮೆ ಮಾಡಿ, ಕೆಲಸ ಹೆಚ್ಚು ಮಾಡಬೇಕು.

ತರಗತಿ ತೆಗೆದುಕೊಂಡ ನಂತರ ಗಮನಿಸಬೇಕಾದ ಅಂಶಗಳು

 1. ತರಗತಿಯನ್ನು ತೆಗೆದುಕೊಂಡ ನಂತರ ಹಾಜರಾತಿಯ ಬಗ್ಗೆ ತಿಳಿದು ಕೊಳ್ಳುವುದು. ಹಾಗೂ ಮಕ್ಕಳ ಸ್ವಚ್ಛತೆ ಆರೋಗ್ಯ, ಸಮವಸ್ತ್ರದ ಕಡೆಗೆ ಗಮನ ಹರಿಸಿ ಅನಾರೋಗ್ಯದ ವಿದ್ಯಾರ್ಥಿಗಳು ಒಂದೆಡೆ ಕುಳಿತು ಚಟುವಟಿಯನ್ನು ವಿಕ್ಷಿಸುವಂತೆ ತಿಳಿಸಬೇಕು.
 2. ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ಚಟುವಟಿಕೆಯ ಅವಶ್ಯಕತೆ ಕಂಡುಬಮ್ದರೆ ಅದಕ್ಕೆ ತಕ್ಕಂತೆ ವ್ಯವಸ್ಥೆಯನ್ನು ತಕ್ಷಣ ಮಾಡಿಕೊಳ್ಳಬೇಕಾಗುತ್ತದೆ.
 3. ಶಿಕ್ಷಕನು ಹೇಳಿಕೊಡುವ ಚಟುವಟಿಕೆಯು ಎಲ್ಲಾ ಮಕ್ಕಳಿಗೆ ಕೇಳಿಸುವಂತೆ ಎಲ್ಲಾ ಮಕ್ಕಳು ನೋಡುವಂತೆ ಪ್ರದರ್ಶನ ಮಾಡಿ ಹಾಗೂ ವಿವರಣೆಗಳನ್ನು ನೀಡುತ್ತಾ ಹೇಳಿಕೊಡಬೇಕು.
 4. ಶಿಕ್ಷಕರು ಮೊದಲು ಅಖಂಡ ಖಂಡ ಪದ್ಧತಿಯಲ್ಲಿ ಮಾಡಿ ತೋರಿಸಿ ನಂತರ ಮಕ್ಕಳಿಗೆ ಖಂಡ ಅಖಂಡ ಪದ್ಧತಿಯಲ್ಲಿ ಮಾಡಿಸಬೇಕು.
 5. ಶಿಕ್ಷಕರು ತಪ್ಪುಗಳನ್ನು ತಕ್ಷಣತಿದ್ದುತ್ತ ಚುರುಕಾಗಿ ಓಡಾಡುತ್ತಿರಬೇಕು ಹಾಗೂ ಆಜ್ಞೆಗಳನ್ನು ಸಾವ್ ಧಾನ್ ಸ್ಥಿತಿಯಲ್ಲಿ ಮಕ್ಕಳ ಮುಂದೆ ನಿಂತು ಕೊಡಬೇಕು.
 6. ಆಯಾ ವಿಭಾಗದ ಚಟುವಟಿಕೆಯನ್ನು ಆಯಾ ಸಮಯದಲ್ಲಿ ಮುಗಿಸಲು ಪ್ರಯತ್ನಿಸಬೇಕು.
 7. ಶಿಕ್ಷಕರು ಕೆಲವೊಮ್ಮೆ ಚಟುವಟಿಕೆಗಳನ್ನು ಮಾಡುತ್ತಾ ಮಕ್ಕಳು ಅದನ್ನು ಅನುಸರಿಸುವಂತಯೇ ತಿಳಿಸಿ ಅದರಂತೆಯೂ ಸಹ ಚಟುವಟಿಕೆ ಮಾಡಿಸಬಹುದು.
 8. ತರಗತಿಯಲ್ಲಿ ಸಂತೋಷ, ಮನರಂಜನೆ, ವಿನೋದಗಳಿರಬೇಕು. ಆದರೆ, ಬಿಗಿ ರಹಿತ ತರಗತಿ ಗೊಂದಲ ಮತ್ತು ಅಶಿಸ್ತಿನಿಂದ ಇರುವುದೆಂಬ ಅಂಶವನ್ನು ಸಹ ತಿಳಿದಿರಬೇಕು.
 9. ಆಯಾ ಪರಿಸರಕ್ಕೆ ತಕ್ಕಂತೆ ಬೋಧನೆಯನ್ನು ಮತ್ತು ವಿಷಯಗಳನ್ನು ಸಂದರ್ಭಾನುಸಾರ ಮಾಡಬೇಕು.
 10. ಶಿಕ್ಷಕರು ಚಟುವಟಿಕೆಯನ್ನು ಹೇಲಿಕೊಡುವಾಗ ವಿಶ್ ರಾಮ್ ಕೊಟ್ಟು ಚಟುವಟಿಕೆ ಮಾಡಿಸುವಾಗ ಸಾವ್ ಧಾನ್ ಕೊಟ್ಟು ಮಾಡಿಸಬೇಕು.
 11. ಮಕ್ಕಳೀಗೆ ಸ್ವತಂತ್ರವಾಗಿ ಅಭ್ಯಾಸ ಮಾಡಲು ಕಾಲಾವಕಾಶವನ್ನು ಮಾಡಿಕೊಟ್ಟು ಆ ಸಮಯದಲ್ಲಿ ತಪ್ಪುಗಳನ್ನು ಶಿಕ್ಷಕರು ತಿದ್ದಬಹುದು.
 12. ತರಗತಿಯಲ್ಲಿ ಸೂಕ್ತವಾಗಿ ಚಟುವಟಿಕೆಯನ್ನು ಮಾಡುವ ಹಾಗೂ ಕಾರ್ಯಕ್ರಮವನ್ನು ನಿಭಾಯಿಸುವ ನಾಯಕನನ್ನು ಗುರುತಿಸಿ ಅವನಿಂದ ಚಟುವಟಿಕೆಯನ್ನು ಮಾಡಿಸಬೇಕು.
 13. ಎಲ್ಲಾ ಮಕ್ಕಳು ಚಟುವಟಿಕೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸುವುದು.
 14. ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಪರೋಕ್ಷವಾಗಿ ಸಹಾಯ ಮತ್ತು ಪ್ರೋತ್ಸಾಹಗಳು ಅವಶ್ಯಕವಾಗಿರುತ್ತದೆ. ದೈಹಿಕ ಶಿಕ್ಷಣದ ಮೂಲ ಉದ್ದೇಶಗಳಾದ ದೈಹಿಕ ಚಲನೆ ಮನರಂಜನೆ ಶಿಸ್ತು ಈ ಮೂರು ಅಂಶಗಳನ್ನು ಒಳಗೊಂಡ ತರಗತಿಯನ್ನು ಶಿಕ್ಷಕನು ತೆಗೆದುಕೊಳ್ಳುವುದು ಬಹಳ ಮುಖ್ಯ ವಿಶ್ರಾಂತಿ ಮತ್ತು ಆರೋಗ್ಯ ಶಿಕ್ಷಣದ ಬೋದನೆಯಲ್ಲಿ ಅನಾರೋಗ್ಯದಿಂದ ತರಗತಿಯಿಂದ ಹೊರಗುಳಿದ ವಿದ್ಯಾರ್ಥಿಗಳೂ ಸಹ ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು.
 15. ಕಲಿಕೆ ನಿಧಾನವಾಗಿದ್ದರೂ ಸಹ ಆತುರಗೊಳ್ಳದೆ ತಾಳ್ಮೆಯಿಂದ ಕಲಿಸಿ ಉತ್ತಮ ವಾದುದನ್ನು ರೂಢಿಸುವುದು ಬಹಳ ಮುಖ್ಯವಾಗಿದೆ.
 16. ಮಕ್ಕಳ ಚಟುವಟಿಕೆಯನ್ನು ಪ್ರೀತಿಯಿಂದ ಗಮನಿಸಿ ಅದರಲ್ಲಿರುವ ವಿಶೇಷತೆಗಳನ್ನು ಮನದಾಳದಲ್ಲಿ ಸವಿಯುವ ಮಾಹಾನ್ ಸಹೃದಯಿ ಬಂಧುವೇ ಈ ಪಾಠದ ಯಶಸ್ವಿ ಶಿಕ್ಷಕನಾಗುವನು.
 17. ತರಗತಿಯ ವಿಸರ್ಜನೆಯಲ್ಲಿ ಒಂದು ವಿಶೇಷವಾದ ಆರೋಗ್ಯ, ದೈಹಿಕ ಶಿಕ್ಷಣ ಇಮ್ತಹ ಚಟುವಟಿಕೆಗಳ ನುಡಿ ಮುತ್ತುಗಳನ್ನು, ಗಾದೆಗಳನ್ನು ಘೋಷಣೆಯ ಮೂಲಕ ಸುಂದರವಾಗಿ ಒಂದೇ ಸಮನೆ ಕೂಗಿಸಿ ಸಂತೋಷದಿಂದ ಮತ್ತೆ ಮಕ್ಕಳು ಆಟದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿ ವಿಸರ್ಜಿಸುವುದು.
2.98765432099
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top