ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಮಹತ್ವ

ಪ್ರಗತಿಯ ಹಾದಿಯಲ್ಲಿ ಬುದ್ಧಿಶಕ್ತಿಗೆ ಬಹಳ ಪ್ರಾಮುಖ್ಯತೆ ಇವೆ. ಹಾಗಾಗಿ ಇದರ ಅಭಿವೃದ್ಧಿಗಾಗಿ ಒಂದು ಸುವ್ಯವಸ್ಥಿತವಾಗಿ ಶಿಕ್ಷಣವೆಂಬ ವ್ಯವಸ್ಥೆ ನಮ್ಮಲ್ಲಿದೆ.

ಪ್ರಗತಿಯ ಹಾದಿಯಲ್ಲಿ ಬುದ್ಧಿಶಕ್ತಿಗೆ ಬಹಳ ಪ್ರಾಮುಖ್ಯತೆ ಇವೆ. ಹಾಗಾಗಿ ಇದರ ಅಭಿವೃದ್ಧಿಗಾಗಿ ಒಂದು ಸುವ್ಯವಸ್ಥಿತವಾಗಿ ಶಿಕ್ಷಣವೆಂಬ ವ್ಯವಸ್ಥೆ ನಮ್ಮಲ್ಲಿದೆ. ಇದು ಕೇವಲ ಬೌದ್ಧಿಕ ಶಕ್ತಿಗಷ್ಟೇ ಸೀಮಿತವಾಗಿರದೆ ವಿವಿಧ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಸರ್ವಾಂಗೀಣ ವ್ಯಕ್ತಿತ್ವದ ವಿಕಸನಕ್ಕೆ ದೈಹಿಕ ಶಿಕ್ಷಣ ಸಂಗೀತ, ನೃತ್ಯ, ಚಿತ್ರಕಲೆ ನಾಟಕಗಳಂತಹವುಗಳು ಸಹ ಬಹಳ ಮುಖ್ಯವಾಗಿವೆ. ಇವು ಸಹ ಶಿಕ್ಷಣವೆಂಬ ವ್ಯವಸ್ಥೆಯಲ್ಲಿ ಕಲಿಕೆಯ ವಸ್ತುವಾಗಿದ್ದು, ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ.

ಜೀವನ ವಿಜ್ಞಾನದ ಪರಿಕಲ್ಪನೆಯ ಪಂಚವಲಯಗಳನ್ನು ಅಭಿವೃದ್ಧಿ ಪಡಿಸುವಲ್ಲಿ ದೈಹಿಕ ಶಿಕ್ಷಣ ಪ್ರಮುಖ ಪಾತ್ರವಹಿಸುತ್ತಿದೆ ಎನ್ನಬಹುದಾಗಿದೆ.

ಶಿಕ್ಷಣವೆಂಬ ಮಹಾ ಸಾಗರದಲ್ಲಿ ದೈಹಿಕ ಶಿಕ್ಷಣ ಶಾಲಾ ಮುಖ ಲಕ್ಷಣವಾಗಿ ಶಾಲಾ ಮೈದಾನ ಇದಕ್ಕೆ ಅಭರಣವಾಗಿ ಶೋಭಿಸುವ ನಿಟ್ಟಿನಲ್ಲಿ ಶಿಕ್ಷಣ ಮತ್ತು ದೈಹಿಕ ಶಿಕ್ಷಣ ಒಂದೇ ನಾಣ್ಯದ ಎರಡು ಮೂಖಗಳಂತೆ ತಾರ್ಯ ನಿರ್ವಹಿಸುತ್ತಿವೆ.

ಶಿಕ್ಷಣ ದೈಹಿಕ ಶಿಕ್ಷಣಕ್ಕೆ ಸ್ಪೂರ್ತಿಯಾದರೆ, ದೈಹಿಕ ಶಿಕ್ಷಣ ಶಿಕ್ಷಣ ಬೌದ್ಧಿಕ ವಿಷಯಗಳಿಗೆ ಪೂರಕ ಅಂಶಗಳನ್ನು ನೀಡಿ ಕಲಿಕಾ ಪ್ರಗತಿಗೆ ಪೂರಕ ವ್ಯವಸ್ಥೆಯನ್ನು ಮಾಡಿಕೊಡುತ್ತದೆ. ಆದರೆ ಇವೆರೆಡರ ಗುರಿ ಬಹುಶಃ ಉತ್ತಮ ನಾಗರೀಕರನ್ನು ತಯಾರು ಮಾಡುವುದೇ ಆಗಿದ್ದರೂ ಸಹ ಇವು ತಮ್ಮದೇ ಆದ ವಿವಿಧ ಗುರಿ ಉದ್ದೇಶಗಳನ್ನು ಈಡೇರಿಸುತ ತಮ್ಮಗಳ ಗುರಿಯತ್ತ ಸಾಗುತ್ತದೆ. ಆದರೆ ಇವುಗಳ ಈ ಬೋಧನ ತಂತ್ರ ಮತ್ತು ಚಟುವಟಿಕೆಯಲ್ಲಿ ಒಂದಕ್ಕೊಂದು ಸಾಮ್ಯತೆ ಇದ್ದರೂ ಸಹ ವ್ಯತ್ಯಾಸಗಳು ಕಂಡುಬರುತ್ತದೆ.

ಉದಾ:ಬೌದ್ಧಿಕ ತರಗತಿ ಕೊಠಡಿ ಒಳಗೆ ನಡೆದರೆ, ಕಪ್ಪು ಹಲಗೆ ಹಾಗೂ ಪಠ್ಯ ಪುಸ್ತಕ ಇದರ ಕಲಿಕಾ ಸಾಮಾಗ್ರಿಗಳಾಗುತ್ತವೆ. ಆದರೆ ದೈಹಿಕ ಶಿಕ್ಷಣದ ಚಟುವಟಿಕೆಗಳು ಆಟದ ಮೈದಾನ, ವ್ಯಾಯಾಮ ಮಂದಿರಗಳಲ್ಲಿ ನಡೆದರೆ ಇದಕ್ಕೆ ಕಲಿಕಾ ಸಾಮಾಗ್ರಿಗಳು ಆಟೋಪಕರಣಗಳು ಮತ್ತು ಆತನ ಶರೀರವೆ ಆಗೆದೆ.

ಶಿಕ್ಷಣದಲ್ಲಿ ದೈಹಿಕ ಶಿಕ್ಷಣದ ಮಹತ್ವವನ್ನು ಅರಿತ ಶ್ರೇಷ್ಠ ಶಿಕ್ಷಣ ತಜ್ಞರಾದ ಪ್ರೊಬೆಲ್ಲನು ಪ್ಲೋಟೋವಿನ ಆದರ್ಶವಾದ ರೋಸೋವಿನ ನಿಸರ್ಗವಾದ ಪೆಸ್ಟಾಲೋಜಿಯಾ ಶಿಶು ಕೇಂದ್ರಿತ ಶಿಕ್ಷಣದ ತತ್ವಗಳನ್ನು ಕ್ರೂಡೀಕರಿಸಿ ಮೂಲ ಶಿಕ್ಷಣದ ಅಂಶಗಳನ್ನು ಪರಿವರ್ತಿಸಿ ಚಟುವಟಿಕೆಯ ಆಂದೋಲನಕ್ಕೆ ಒಂದು ಮೂರ್ತಿ ರೂಪವನ್ನು ಕೊಟ್ಟರು. ಇವರು ಕಿಂಡರ್ ಗಾರ್ಡ್ ನ್ ಶಿಕ್ಷಣ ಪದ್ದತಿಯನ್ನು ಜಾರಿಗೆ ತಂದು ಸ್ವಯಂ ಚಟುವಟಿಕೆ ಮತ್ತು ಆಟದ ಮೂಲಕ ಪಾಠ ಕಲಿಸುವುದೇ ಲೇಸು ಎಂದು ತಿಳಿದ ಇವರು ಮನೋವೈಜ್ಞಾನಿಕ ಅಂಶಗಳನ್ನು ಒಳಗೊಂಡು ಆಟಾಗಳನ್ನು ವಿಂಗಡಿಸಿ ಮಕ್ಕಳಿಗೆ ಬೋಧಿಸಿದರು.

  1. ರಚನಾತ್ಮಕ ಚಟುವಟಿಕೆಯನ್ನು ಒಳಗೊಂಡ ಆಟಗಳು.
  2. ಬೌದ್ಧಿಕ ಸಾಮರ್ಥ್ಯ ಮತ್ತು ಕಲ್ಪನಾ ಶಕ್ತಿಯನ್ನು ವರ್ಧಿಸುವ ಆಟಗಳು.
  3. ಸಹಕಾರ ಮತ್ತು ಸಾಂಘಿಕ ಮನೋಭಾವ ಬೇಳೆಸುವ ಆಟಗಲು.
  4. ಚಾರಿತ್ರಿಕ ನಿರ್ಮಾಣದಲ್ಲಿ ಸಹಾಯ ಮಾಡುವ ಆಟಗಳು.
  5. ಕಲಿಕೆಯಲ್ಲಿ ಸುಲಭ ಮಾಡುವ ಆಟಗಳೇ ಆಗಿವೆ

ಹದಿನೆಂಟನೆಯ ಶತಮಾನದ ಪ್ರಸಿದ್ಧ  ಮತ್ತು ಯಶಸ್ವಿ ಶಿಕ್ಷಣ ತಜ್ಞ ಮೇರಿಯ ಮಾಂಟೇಸರಿ ಶಾಲೆಯಲ್ಲಿ ಚಟುವಟಿಕೆಗಳು ಪೂರ್ವ ನಿಯೋಜಿತವಾಗಿದ್ದರೂ  ಮಕ್ಕಳ ಸ್ವಾತಂತ್ರ್ಯಕ್ಕೆ ಭಂಗ ಬರದಂತೆ ಓದು, ಬರಹ, ಗಣಿತ ಮುಂತಾದುವುಗಳನ್ನು ಆಟ, ಕ್ರೀಡೆಯಂತಹ ಚಟುವಟಿಕೆಗಳ ಮುಖಾಂತರವೇ ಮಕ್ಕಳಿಗೆ ಕಲಿಸುತ್ತಿದ್ದರು ಎಂಬುದನ್ನು ಗಮನಿಸಬಹುದಾಗಿದೆ.

2.88059701493
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top