ದೇಹ ಮತ್ತು ಮನಸ್ಸನ್ನು ಒಂದುಗೂಡಿಸಿ ಏಕಾಗ್ರತೆಗೊಳಿಸುವುದೇ ಯೋಗದ ಗುರಿ. ಈ ಗುರಿಯನ್ನು ತಲುಪಲು ಹಲವಾರು ಮಾರ್ಗಗಳಿವೆ. ಇವುಗಳನ್ನು ಯೋಗದ ಪಥಗಳೆಂದು ಕರೆಯುವರು.
ರಾಜಯೋಗ : ಈ ರಾಜಯೋಗವು ಎಂಟು ಮೆಟ್ಟಿಲುಗಳನ್ನು ಹೊಂದಿದೆ. ಅದಕ್ಕಾಗಿ ಇದನ್ನು ಅಷ್ಠಾಂಗ ಯೋಗ ಎನ್ನುವರು. ಇಲ್ಲಿ ಎಂಟು ಮೆಟ್ಟಿನಲ್ಲಿರುವ ವಿಷಯದ ಜ್ಞಾನವನ್ನು ಹೊಂದಿ ಕಾರ್ಯರೂಪಕ್ಕೆ ತರುವುದರಿಂದ ವ್ಯಕ್ತಿಯ ವ್ಯಕ್ತಿತ್ವ ವೀಖಾಆಶಾಣವಾಗುತ್ತದೆ.
ಯಮ:ಅಹಿಂಸೆ, ಸತ್ಯ, ಅಸ್ತೆಯ, ಬ್ರಹ್ಮಚರ್ಯ, ಅಸಂಗ್ರಹ ಎಂಬ ಯಮ ಪಂಚಕಗಳನ್ನು ಪಾಲಿಸುವುದರಿಂದ ಸಾಮಾಜಿಕ ವ್ಯಕ್ತಿತ್ವದ ಮೌಲ್ಯವನ್ನು ಬೆಳೆಸಿದಂತಾಗುತ್ತದೆ.
ನಿಯಮ : ಇದು ಐದು ವೈಯಕ್ತಿಕ ಮೌಲ್ಯಗಳನ್ನು ಹೊಂದಿದೆ. ಶೌವ, ಸಂತೋಷ,ತಪಸ್ಸು, ಸ್ವಾಧ್ಯಾಯ, ಈಶ್ವರ ಪ್ರಣಿಧಾನ.
ಆಸನ : ಯೋಗದ ವ್ಯಾಯಾಮಗಳು.ಉದಾ : ಪದ್ಮಾಸನ, ವಜ್ರಾಸನ.
ಪ್ರಾಣಾಯಾಮ: ದೇಹ ಮತ್ತು ಮನಸ್ಸನ್ನು ಒಂದುಗೂಡಿಸಲು ಕೊಂಡಿಯಂತೆ ಕಾರ್ಯನಿರ್ವಹಿಸುತ್ತದೆ. ಇದು ಒಂದು ಉಸಿರಾಟದ ಕ್ರಮವಾಗಿದೆ. ಇದು ಅನೇಕ ವಿವಿಧ ಉಸಿರಾಟಗಳನ್ನು ಹೊಂದಿದೆ.
ಪ್ರತ್ಯಾಹಾರ: ಪಂಚೇಂದ್ರಿಯಗಳನ್ನು ಒಳಮುಖವಾಗಿ ಕೇಂದೀಕರಿಸಿ ಮನಸ್ಸನ್ನು ಗಮನಿಸುವ ಕ್ರಮವಾಗಿದೆ.
ಧಾರಣ: ಮನಸ್ಸನ್ನು ಪ್ರಯತ್ನ ಪೂರ್ವಕವಾಗಿ ಒಂದೆಡೆ ಅಥವಾ ವಸ್ತುವಿನ ಮೇಲೆ ಕೇಂದ್ರೀಕರಿಸುವುದು.
ಧ್ಯಾನ: ಒಂದು ವಸ್ತುವಿನ ಮೇಲೆ ಮನಸ್ಸನ್ನು ಕೇಂದ್ರೀಕರಿಸಿದರೆ, ನಂತರ ಮನಸ್ಸು ನಿರಾಯಾಸವಾಗಿ ಆ ವಸ್ತುವಿನಲ್ಲೇ ನಿಲ್ಲುತ್ತದೆ. ಆ ವಸ್ತುವಿನಲ್ಲೇ ಅಂತರ್ಗತವಾಗುತ್ತದೆ. ಆಗ ಆನಂದ ಉಂಟಾಗುತ್ತದೆ. ಈ ಸ್ಥಿತಿಯನ್ನು ಜ್ಞಾನ ಸ್ಥಿತಿ ಎನ್ನುವರು.
ಸಮಾಧಿ: ಇದು ಎಂಟನೆ ಮೆಟ್ಟಿಲು ಧಾನದ ಮುಂದುವರೆದ ಭಾಗದ ಸ್ಥಿತಿ ಈ ಭಾಗದಲ್ಲಿ ವ್ಯಕ್ತಿ ವಸ್ತುವಿನಲ್ಲೇ ತಲ್ಲೀನನಾಗುತ್ತಾನೆ ಹಾಗೂ ಅಮಿತವಾದ ಆನಂದವನ್ನು ಹೊಂದುತ್ತಾನೆ.
ವಪೂಕೃಶತ್ವಂ ವದನೆ ಪ್ರಸನ್ನತಾ ನಾದಸ್ಪಟುತ್ವಂ ನಯನೇ ಸುನಿರ್ಮಲೇ
ಆರೋಗತಾ ಬಿಂದು ಜಯ ಅಗ್ನಿದೀಪನಂ ನಾಡೀವಿಶುದ್ದಿ ಹಠಯೀಗ ಲಕ್ಷಣಮ್
ಅರ್ಥ : ಶರೀರದಲ್ಲಿ ಹಗುರತೆ, ಮುಖದಲ್ಲಿ ಪ್ರಸನ್ನತೆ, ಧ್ವನಿಯಲ್ಲಿ ಸ್ಫುಟತೆ, ಕಣ್ಣುಗಳಲ್ಲಿ ಹೊಳಪು, ರೋಗಗಳ ನಾಶ ವಿರ್ಯಜಯ ಪೂರ್ಣ ಜೀರ್ಣಕ ಶಕ್ತಿ, ನಾಡಿ ಶುದ್ಧಿ ಇವೇ ಹಠಯೋಗ ಲಕ್ಷಣವಾಗಿದೆ.
ಇಂತಹ ಅನೇಕ ಶ್ಲೋಕಗಳು ಯೋಗದ ಅವಶ್ಯಕತೆ ಮತ್ತು ಮಹತ್ವವನ್ನು ತಿಳಿಸುವಂತಹವುಗಳಾಗಿವೆ. ಯೋಗವನ್ನು ಮಾಡಲು ಮೊದಲು ಪಾಲಿಸಬೇಕಾದ ಕ್ರಮಬದ್ಧವಾದ ನಿಯಮಗಳು
ಹುಷರಿಲ್ಲದಿದ್ದಾಗ ಮತ್ತು ಶಸ್ತ್ರ ಚಿಕಿತ್ಸೆಗೆ ಒಳಗಾದವರು ಯೋಗ ತಜ್ಞರೊಂದಿಗೆ ವಿಚಾರಿಸಿ ಆಸನಗಳನ್ನು ಮಾಡತಕ್ಕದ್ದು ಇತ್ಯಾದಿ ನಿಯಮಗಳನ್ನು ಯೋಗ ಗ್ರಂಥಗಳನ್ನು ಓದಿ ತಿಳಿದುಕೊಂಡು ಆಸನಗಳನ್ನು ಮಾಡತಕ್ಕದ್ದು.
ಕೊನೆಯ ಮಾರ್ಪಾಟು : 6/19/2020