2002-03ರವರೆಗೆ ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಒಂದು ತಿಂಗಳಿಗೆ ತಲಾ 3 ಕೆ.ಜಿ. ಅಕ್ಕಿಯನ್ನು ಪ್ರತೀ ತಿಂಗಳು ನೀಡಲಾಗಿತ್ತಿದೆ. ಕರ್ನಾಟಕ ರಾಜ್ಯದ ಮಧ್ಯಾಹ್ನದ ಉಪಹಾರ ಯೋಜನೆ ಕಾರ್ಯಕ್ರಮ 2002-03ನೇ ಸಾಲಿನಲ್ಲಿ ಮೊದಲ ಹಂತದಲ್ಲಿ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅತ್ಯಂತ ಹಿಂದುಳಿದ ಈಶಾನ್ಯ ವಲಯದ ಏಳು ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳ 1 ರಿಂದ 5 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಬಿಸಿಯೂಟ ಪ್ರಾರಂಭಿಸಲಾಯಿತು.
ಶಾಲಾ ಹಂತದಲ್ಲಿ ಎಸ್.ಡಿ.ಎಂ.ಸಿ.,ಯವರು ಹಾಗೂ ಮುಖ್ಯ ಅಡುಗೆಯವರು ಕಾರ್ಯಕ್ರಮದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಕೇಂದ್ರ ಸರ್ಕಾರ ನಿರ್ದೇಶನ ಹಾಗೂ ಮಾರ್ಗದರ್ಶಿ ಸೂಚನೆಯಂತೆ ತಾಯಿಯಂದಿರ ಸಮಿತಿಯನ್ನು ಶಾಲೆಗಳಲ್ಲಿ ರಚಿಸಲಾಗಿದ್ದು, ಪ್ರತಿ ದಿನವೂ ಒಬ್ಬ ವಿದ್ಯಾರ್ಥಿಯ ತಾಯಿ ಅಡುಗೆಯ ಮೇಲ್ವಿಚಾರಣೆ ಹಾಗೂ ಊಟದ ರುಚಿ ನೋಡಿ ಬಡಿಸುವುದರಲ್ಲಿ ಪಾಲ್ಗೊಳ್ಳುವುದರ ಮೂಲಕ ಮಕ್ಕಳು ತಮ್ಮ ಮನೆಯ ವಾತಾವರಣದಂತೆ ಭಾವಿಸಿಕೊಂಡು ವರಾಂಡದಲ್ಲಿ/ಕೋಣೆಯಲ್ಲಿ ಕುಳ್ಳಿರಿಸಿ ಮುಖ್ಯ ಶಿಕ್ಷಕರು/ಶಿಕ್ಷಕರ ಉಸ್ತುವಾರಿ ಊಟ ನೀಡಲಾಗುತ್ತದೆ. ಊಟಕ್ಕೆ ಮುಂಚೆ ಶಿಕ್ಷಕರು ಕಡ್ಡಾಯವಾಗಿ ರುಚಿ ನೋಡಿ, ರುಚಿ ಪುಸ್ತಕದಲ್ಲಿ ದಾಖಲಿಸಲಾಗುತ್ತಿದೆ. ಊಟಕ್ಕೆ ಮುಂಚೆ ಮತ್ತು ನಂತರ ಸೋಪು ಬಳಸಿ ಕೈ ತೊಳೆಯುವ ಉತ್ತಮ ಅಭ್ಯಾಸವನ್ನು ರೂಢಿಸಲಾಗಿದೆ. ಮುಖ್ಯ ಶಿಕ್ಷಕರು ಹಾಗೂ ತರಗತಿ ಶಿಕ್ಷಕರು/ದೈಹಿಕ ಶಿಕ್ಷಕರು /ಊಟದ ವೇಳೆಯಲ್ಲಿ ಕಡ್ಡಾಯವಾಗಿ ಊಟದ ವಿತರಣೆಯ ಉಸ್ತುವಾರಿ ವಹಿಸಿ, ಯಾವುದೇ ಸಮಸ್ಯೆಯಿಲ್ಲದಂತೆ ಮಕ್ಕಳು ಊಟ ಪಡೆಯುವಂತೆ ಕ್ರಮ ವಹಿಸುವುದು. ಅನುಪಯುಕ್ತ ಹಳೆಯ ವಸ್ತುಗಳನ್ನು ತೆಗೆದು ಹಾಕುವುದು. ಕಾರ್ಯಕ್ರಮದ ಬಗ್ಗೆ ನಿರಂತರ ಗಮನ ಹರಿಸುವುದು. ಅಡುಗೆಯವರು ಅಡುಗೆ ತಯಾರಿಸುವ ಹಾಗೂ ಬಡಿಸುವಾಗ ಏಪ್ರಾನ್ ಬಳಸುವುದು. ನೀರು ಹಾಗೂ ಆಹಾರ ಧಾನ್ಯ , ತರಕಾರಿಗಳ ಸ್ವಚ್ಛತೆ ಬಗ್ಗೆ ನಿಗಾ ವಹಿಸುವುದು. ಶಾಲಾ ಎಸ್.ಡಿ. ಎಂ.ಸಿ.,ಸಭೆಗಳಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮದ ಖರ್ಚು ವೆಚ್ಚದ ಬಗ್ಗೆ ಪರಿಶೀಲಿಸಿ, ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ವಿವರಗಳನ್ನು ದಾಖಲಿಸುತ್ತದೆ ಹಾಗೂ ಶಾಲೆಗೆ ಭೇಟಿ ನೀಡಿರುವ ಅಧಿಕಾರಿಗಳು ಕಡ್ಡಾಯವಾಗಿ ಮಧ್ಯಾಹ್ನ ಉಪಹಾರ ಯೋಜನೆಯ ಅನುಷ್ಠಾನದ ಬಗ್ಗೆ ಪರಿಶೀಲಿಸಿ ವರದಿಯಲ್ಲಿ ದಾಖಲಿಸಬೇಕಾಗಿರುತ್ತದೆ..
ಮಧ್ಯಾಹ್ನ ಉಪಹಾರ ಯೋಜನೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು. ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆ ಮಕ್ಕಳ ಭೌತಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಿದ್ದು, ಕಾಯ್ರಕ್ರಮದ ಅನುಷ್ಡಾನದಲ್ಲಿ ಹೆಚ್ಚಿನ ಕಾಳಜಿ, ಜವಾಬ್ದಾರಿ ವಹಿಸುವುದು ಎಲ್ಲಾ ಸ್ಥರದ ಅಧಿಕಾರಿ/ಸಿಬ್ಬಂದಿಯವರ ಜವಾಬ್ದಾರಿಯಾಗಿದ್ದು, ಸುತ್ತೋಲೆ/ಆದೇಶ/ಮಾರ್ಗಸೂಚಿಗಳಂತೆ ಹಾಗೂ ಈ ಕೆಳಗೆ ಸೂಚಿಸಿರುವ ಕರ್ತವ್ಯಗಳಲ್ಲಿನ ಮಕ್ಕಳ ಸುರಕ್ಷತೆಗಾಗಿ ಜವಾಬ್ದಾರಿಗಳನ್ನು ನಿರ್ವಹಿಸುವರು.
ಅಡುಗೆಯನ್ನು ಮಕ್ಕಳಿಗೆ ಊಟ ಬಡಿಸುವ ಅರ್ಧ ಘಂಟೆ ಮುಂಚಿತವಾಗಿ ತಯಾರಿಸಿ ದೊಡ್ಡ ಪಾತ್ರೆಗಳಿಂದ ಚಿಕ್ಕ ಪಾತ್ರೆಗಳಿಗೆ ಬದಲಾಯಿಸಿಕೊಂಡು ಒಂದನೇ ತರಗತಿಯ ಮಕ್ಕಳೂ ಸಹ ಸರಾಗವಾಗಿ ಊಟ ಮಾಡಲು ಸಾಧ್ಯವಾಗುವಷ್ಟು ಬಿಸಿ ಇರುವಂತೆ ನೋಡಿಕೊಂಡು ಬಡಿಸತಕ್ಕದ್ದು. ಅಡುಗೆ ಕೋಣೆಯೊಳಗೆ ಯಾವ ಮಕ್ಕಳೂ ಯಾವುದೇ ಕಾರಣಕ್ಕೂ ಹೋಗದಂತೆ ನಿಷೇಧಿಸುವುದು.ಅಡುಗೆಯವರು ಯಾವುದೇ ಕಾರಣಕ್ಕೂ ದೊಡ್ಡದೊಡ್ಡ ಪಾತ್ರೆಗಳಲ್ಲಿ ತುಂಬಿಕೊಂಡು ಊಟ ಬಡಿಸುವುದು. ಕಡ್ಡಾಯವಾಗಿ ಶಾಲಾ ಕಾರಿಡಾರಿನಲ್ಲಿಯೇ ಅಥವಾ ತರಗತಿ ಕೋಣೆಯೋಳಗೆ ಮಕ್ಕಳು ಕುಳಿತು ಊಟ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದು. ಯಾವುದೇ ಕಾರಣಕ್ಕೂ ಮಕ್ಕಳು ಪಾತ್ರೆ ಮುಂದೆ ನಿಂತು ಊಟವನ್ನು ತಟ್ಟೆಗೆ ಹಾಕಿಸಿಕೊಳ್ಳುವುದನ್ನು ನಿಷೇಧಿಸಿದೆ. ಕಾರಿಡಾರ್ ಅಥವಾ ಕೋಣೆ ಯೊಳಗೆ ಊಟ ಬಡಿಸಬೇಕು. ಮಕ್ಕಳು ಕುಳಿತು ಊಟ ಮಾಡಬೇಕು. ಹೆಚ್ಚು ಮಕ್ಕಳಿದ್ದಲ್ಲಿ ಸರದಿ ಪ್ರಕಾರ ಊಟ ನೀಡುವುದು. ಊಟದ ಬೆಲ್ ಆದ ತಕ್ಷಣ ಆಯಾ ತರಗತಿಯ ಶಿಕ್ಷಕರು ಅವರವರ ತರಗತಿ ಕೋಣೆಯೊಳಗೆ ಧಾವಿಸಿ ಮುಂದೆ ನಿಂತು ಮಕ್ಕಳು ತರಗತಿ ಕೋಣೆಯಿಂದ ಹೊರಟು ಹೊರಗಡೆ ಊಟದ ಕಾರಿಡಾರ್ ವರೆಗೆ ಬಂದು ಕ್ರಮವಾಗಿ ಕುಳಿತುಕೊಂಡು ಊಟವನ್ನು ಪಡೆದು ಊಟಮಾಡಿ ಮತ್ತೆ ಕೈ ತಟ್ಟೆ ತೊಳೆದುಕೊಂಡು ತರಗತಿ ಕೋಣೆಗೆ ಹೋಗಿ ಅವರ ತಟ್ಟೆಗಳನ್ನು ಇಡಲು ಹೋಗುವವರೆಗೆ ಉಸ್ತುವಾರಿ ವಹಿಸಲು ತರಗತಿ ಶಿಕ್ಷಕರಿಗೆ ಮುಖ್ಯ ಶಿಕ್ಷಕರು ಸೂಕ್ತ ಆದೇಶವನ್ನು ಮೆಮೊ ಮೂಲಕ ನೀಡಲು ಸೂಚಿಸಿದೆ. ತರಗತಿ ಶಿಕ್ಷಕರು ರಜೆ ಇದ್ದಾಗ ಈ ಉಸ್ತುವಾರಿ ಕೆಲಸವನ್ನು ಬೇರೆ ಶಿಕ್ಷಕರಿಗೆ ತಪ್ಪದೇ ಬೆಳಗಿನ ಅವಧಿಯಲ್ಲಿಯೇ ಮುಖ್ಯ ಶಿಕ್ಷಕರು ಮೆಮೊ ಮೂಲಕ ಆದೇಶ ನೀಡಬೇಕು.ಯಾವುದೇ ಕೆಲಸವಿದ್ದರೂ ಅದನ್ನು ಬಿಟ್ಟು ಮುಖ್ಯಶಿಕ್ಷಕರು ಹಾಗೂ ತರಗತಿ ಶಿಕ್ಷಕರು/ದೈಹಿಕ ಶಿಕ್ಷಕರು /ಊಟದ ವೇಳೆಯಲ್ಲಿ ಕಡ್ಡಾಯವಾಗಿ ಊಟದ ವಿತರಣೆಯ ಉಸ್ತುವಾರಿ ವಹಿಸಿ, ಯಾವುದೇ ಸಮಸ್ಯೆಯಿಲ್ಲದಂತೆ ಮಕ್ಕಳು ಊಟ ಪಡೆಯುವಂತೆ ಕ್ರಮ ವಹಿಸುವುದು. ಊಟದ ವೇಳೆಯಲ್ಲಿ ಎಲ್ಲಾ ಶಿಕ್ಷಕರು ಹಾಗೂ ಅಡುಗೆಯವರೂ ಕಡ್ಡಾಯವಾಗಿ ಹಾಜರಿದ್ದು, ಮುಂದೆ ನಿಂತು ಊಟದ ಉಸ್ತುವಾರಿ ನಿರ್ವಹಿಸುವುದನ್ನು ಕಡ್ಡಾಯ ಗೊಳಿಸಲಾಗಿದೆ
ತಾಲ್ಲೂಕು ಮಟ್ಟದಲ್ಲಿ ಅಸಿಸ್ಟೆಂಟ್ ಕಮಿಷನರ್ ರವರ ನೇತೃತ್ವದಲ್ಲಿ ತಾಲ್ಲೂಕು ಪಂಚಾಯತ್ ನಲ್ಲಿ ಉಸ್ತುವಾರಿ ಹಾಗೂ ಪರಾಮರ್ಶ ಸಮಿತಿ ಇದ್ದು, ಪ್ರತೀ ತ್ರೈ ಮಾಸಿಕಕ್ಕೊಮ್ಮೆ ಸಭೆ ನಡೆಸಲಾಗುತ್ತದೆ. ಜೊತೆಗೆ ಕಾರ್ಯಕ್ರಮದ ಅನುಷ್ಠಾನ ಹಾಗೂ ಮೇಲುಸ್ತುವಾರಿಯನ್ನು ತಾಲ್ಲೂಕು ಪಂಚಾಯತ್ನ ಕಾರ್ಯನಿರ್ವಾಹಕ ಅಧಿಕಾರಗಳು ನಿರ್ವಹಿಸುತ್ತಿದ್ದಾರೆ. ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರಿಗಳ ಅಧೀನದಲ್ಲಿ ಸಹಾಯಕ ನಿರ್ದೇಶಕರು (ಅಕ್ಷರ ದಾಸೋಹ) ಕಾರ್ಯಕ್ರಮದ ಅನುಷ್ಠಾನದಲ್ಲಿ ನೆರವಾಗಲು ಕಾರ್ಯನಿರ್ವಹಿತ್ತಿದ್ದಾರೆ.
ಕ್ಷೇತ್ರಶಿಕ್ಷಣಾಧಿಕಾರಿಗಳು ಎಲ್ಲಾ ಶಾಲೆಗಳಿಂದಲೂ ಫಲಾನುಭವಿ ಮಕ್ಕಳ ಸಂಖ್ಯೆಗನುಗುಣವಾಗಿ ಬೇಡಿಕೆ ಮತ್ತು ಉಪಯೋಗಿತಾ ಪ್ರಮಾಣ ಪತ್ರವನ್ನು ಸಂಗ್ರಹಿಸಿ ಕ್ರೋಢೀಕರಿಸಿ, ಜಿಲ್ಲಾ ಉಪನಿರ್ದೇಶಕರು(ಆಡಳಿತ) ಇವರಿಗೆ ತಲುಪಿಸುವುದು. ಅವರು ತಾಲ್ಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರ ಸಹಾಯ ಪಡೆದುಕೊಂಡು ಶಾಲಾ ಮಕ್ಕಳ ದಾಖಲಾತಿ, ಹಾಜರಾತಿ ಮತ್ತು ಫಲಾನುಭವಿಗಳ ವಿವರವಾದ ಮಾಹಿತಿಯನ್ನು ಜಿಲ್ಲಾ ಉಪನಿರ್ದೇಶಕರು (ಆಡಳಿತ) ಇವರಿಗೆ ತಲುಪಿಸುವುದು. ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ ಅಂಡ್ ವೇರ್ ಹೌಸಿಂಗ್ ಸೊಸೈಟಿಯಿಂದ ಪಡೆದುಕೊಂಡ ಮಾತ್ರೆಗಳನ್ನು ಸಿ.ಆರ್.ಪಿ. ಗಳ ಮೂಲಕ ಶಾಲಾ ಮಕ್ಕಳಿಗೆ ವಿತರಿಸಬೇಕು.
ಕ್ಷೇತ್ರಶಿಕ್ಷಣಾಧಿಕಾರಿಗಳು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳು, ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತ್, ಎಸ್. ಡಿ. ಎಂ. ಸಿ. ಹಾಗೂ ಶಾಲಾ ಮುಖ್ಯಶಿಕ್ಷಕರರುಗಳೊಂದಿಗೆ ಉತ್ತಮ ಹೊಂದಾಣಿಕೆಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಬಿ.ಆರ್.ಸಿ.,ಇ.ಸಿ.ಒ./ ಸಿ.ಆರ್.ಪಿ. ಇವರ ಸೇವೆಯನ್ನು ಕಾರ್ಯಕ್ರಮಕ್ಕೆ ಉಪಯೋಗಿಸಿ ಕೊಳ್ಳಬೇಕಾಗುತ್ತದೆ
ಜಿಲ್ಲಾಧಿಕಾರಿಗಳ/ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಚಾಲನಾ ಮತ್ತು ಪರಾಮರ್ಶನ ಸಮಿತಿ ಇದ್ದು, ಪ್ರತೀ ತ್ರೈ ಮಾಸಿಕಕ್ಕೊಮ್ಮೆ ಸಭೆ ನಡೆಸಲಾಗುತ್ತದೆ ಹಾಗೂ ಇದರಿಂದ ಕಾರ್ಯಕ್ರಮದ ಅನುಷ್ಠಾನ ಮತ್ತು ಮೇಲ್ವಿಚಾರಣೆಯನ್ನು ನಿರ್ವಹಿಸಲಾಗುತ್ತಿದೆ.
ಜಿಲ್ಲಾ ಮಟ್ಟದಲ್ಲಿ ಮಧ್ಯಾಹ್ನ ಉಪಹಾರ ಯೋಜನೆ ಕಾರ್ಯಕ್ರಮಕ್ಕೆ ಉಪನಿರ್ದೇಶಕರು ಸಹಕಾರ ನೀಡಬೇಕು. ಇವರು ಜಿಲ್ಲೆ ಮತ್ತು ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸಬೇಕು. ಆಹಾರ ಸಾಮಗ್ರಿಗಳು ಹಾಗೂ ಅನುದಾನದ ಉಪಯೋಗಿತ ಪ್ರಮಾಣ ಪತ್ರಗಳನ್ನು ಕ್ಷೇತ್ರಶಿಕ್ಷಣಾಧಿಕಾರಿಗಳಿಂದ ಸಂಗ್ರಹಿಸಿ, ಕ್ರೋಢೀಕರಿಸಿ, ರಾಜ್ಯ ಅನುದಾನದ ಯೋಜನೆ ಕೇಂದ್ರ ಕಛೇರಿಯ ಜಂಟಿ ನಿರ್ದೇಶಕರಿಗೆ ತಲುಪಿಸಬೇಕು. ಅಡುಗೆ ಕೋಣೆ ನಿರ್ಮಾಣ ಹಾಗೂ ಪ್ರಗತಿಯನ್ನು ಪರಿಶೀಲಿಸಬೇಕು. ಅಗ್ನಿನಂದಕ ಅಳವಡಿಕೆ ಬಗ್ಗೆ ಗಮನಹರಿಸಿ ಕಡ್ಡಾಯವಾಗಿ ಎಲ್ಲಾ ಸರ್ಕಾರಿ,ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲೂ ಅಳವಡಿಸಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು.
ರಾಜ್ಯ ಮಟ್ಟದಲ್ಲಿ ಚಾಲನಾ ಮತ್ತು ಪರಾಮರ್ಶ ಸಮಿತಿ, ಮಾನ್ಯ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ರಚಿತವಾಗಿದ್ದು, ಸದರಿ ಸಭೆಯನ್ನು ವರ್ಷಕ್ಕೆ ಎರಡು ಬಾರಿ ನಡೆಸಲಾಗುತ್ತದೆ.
ವಿದ್ಯಾರ್ಥಿಗಳಿಗೆ ವಾರದಲ್ಲಿ ಈ ಕೆಳಕಂಡಂತೆ ಆಹಾರವನ್ನು ತಯಾರಿಸಿ ನೀಡಲು ಸೂಚಿಸಲಾಗಿದೆ.
ವಾರ/ದಿನ |
ನಿಗದಿ ಪಡಿಸಿರುವ ಆಹಾರದ ವಿವರ |
ಸಾಂಬಾರಿಗೆ ಬಳಸಬೇಕಾದ |
ಷರಾ |
ಸೋಮವಾರ |
ಅನ್ನ-ಸಾಂಬಾರ್ |
ಪಾಲಕ್, ನುಗ್ಗೆ ಸೊಪ್ಪು ಅಥವಾ ಇತರೆ ಸೊಪ್ಪು,ಆಲೂಗೆಡ್ಡೆ, ಬದನೆಕಾಯಿ, ಈರುಳ್ಳಿ, ಟೊಮೆಟೋ ಇತರೆ ತರಕಾರಿಗಳು |
ಬೇಳೆ/ಕಾಳನ್ನು ಕಡ್ಡಾಯಗೊಳಿಸಿದೆ. |
ಮಂಗಳವಾರ |
ಅನ್ನ-ಸಾಂಬಾರ್ |
ಬೂದುಕುಂಬಳ,ಕ್ಯಾರೆಟ್,ಬೀನ್ಸ್,ಎಲೆಕೋಸು, ಬೀಟ್ರೂಟ್,ಆಲೂಗೆಡ್ಡೆ, ಈರುಳ್ಳಿ, ಟೊಮೆಟೋ ಇತರೆ ತರಕಾರಿಗಳು |
|
ಬುಧವಾರ |
ಅನ್ನ-ಸಾಂಬಾರ್ |
ನುಗ್ಗೆಕಾಯಿ,ಬೀನ್ಸ್ಆಲೂಗೆಡ್ಡೆ, ಈರುಳ್ಳಿ, ಟೊಮೆಟೋ ಇತರೆ ತರಕಾರಿಗಳು |
|
ಗುರುವಾರ |
ಅನ್ನ-ಸಾಂಬಾರ್ |
ಕುಂಬಳಕಾಯಿ,ಸೋರೆಕಾಯಿ, ಸಾಂಬಾರುಸೌತೆ,ಬೆಂಡೆಕಾಯಿ,ಹೀರೆಕಾಯಿ,ಮೂಲಂಗಿ,ಇತರೆ ತರಕಾರಿಗಳು |
|
ಶುಕ್ರವಾರ/ |
ಬಿಸಿಬೇಳೆ ಬಾತ್ |
ಬೀನ್ಸ್,ಗೆಡ್ಡೆಕೋಸು,ಕ್ಯಾರೆಟ್, ಕ್ಯಾಪ್ಸಿಕಮ್,ಈರುಳ್ಳಿ ಟೊಮೆಟೋ ಇತರೆ ತರಕಾರಿಗಳು ಮತ್ತು ದ್ವಿದಳ ಧಾನ್ಯಗಳು |
|
ಶನಿವಾರ |
ಗೋಧಿ ಉತ್ಪನ್ನಗಳಿಂದ ತಯಾರಿಸಿದ ಆಹಾರ |
ಈರುಳ್ಳಿ, ಬೀನ್ಸ್, ಕ್ಯಾರೆಟ್, ಎಲೆಕೋಸು ಸಬ್ಬಸ್ಸಿಗೆ ಸೊಪ್ಪು ಮತ್ತು ಇತರೆ ದ್ವಿದಳ ಧಾನ್ಯಗಳು |
ಮಧ್ಯಾಹ್ನ ಬಿಸಿಯೂಟ ನೀಡುವುದರಿಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ 491 (ಅಂದಾಜು) ಕ್ಯಾಲೋರಿ ಹಾಗೂ 13.80 ಗ್ರಾಂ ಪ್ರೋಟೀನನ್ನು, ಉನ್ನತ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 728 (ಅಂದಾಜು) ಕ್ಯಾಲೋರಿ ಮತ್ತು 21 ಗ್ರಾಂ. ಪೋಟೀನನ್ನು ಒಳಗೊಂಡಂತೆ ಪೌಷ್ಠಿಕಾಂಶ ದೊರೆಯುತ್ತಿದೆ.
ಕೇಂದ್ರ ಸರ್ಕಾರವು 2007-08 ನೇ ಸಾಲಿನಲ್ಲಿ 18241 ಅಡುಗೆ ಕೋಣೆಗಳನ್ನು ನಿರ್ಮಾಣ ಮಾಡಲು ಪ್ರತೀ ಅಡುಗೆ ಕೋಣೆಗೆ ರೂ. 60,000/- ದಂತೆ ಒಟ್ಟು 10,944.60 ಲಕ್ಷಗಳನ್ನು ಬಿಡುಗಡೆ ಮಾಡಿರುತ್ತದೆ. ಈ ಅನುದಾನವನ್ನು ರಾಜ್ಯ ಸರ್ಕಾರವು ಜುಲೈ-09 ರ ಮಾಹೆಯಲ್ಲಿ ಜಿಲ್ಲೆಗಳಿಗೆ ಬಿಡುಗಡೆ ಮಾಡಿದೆ.
ಸೂಚಿತ ನಕ್ಷೆಯಂತೆ, 2007-08ರಲ್ಲಿನ ಎಸ್.ಆರ್. ದರದಂತೆ ಕೇಂದ್ರ ಸರ್ಕಾರವು ನೀಡಿದ ಮೊತ್ತದಲ್ಲಿ ನಿರ್ಮಿಸಲು ರೂ. 1.85 ಲಕ್ಷಗಳು ಬೇಕಾಗುತ್ತದೆ. ಕಟ್ಟಡದ ನಿರ್ಮಾಣದ ಸಾಮಗ್ರಿಗಳ ಬೆಲೆ ಹೆಚ್ಚಾಗಿರುವುದರಿಂದ ರಾಜ್ಯ ಸರ್ಕಾರದಿಂದ ಮ್ಯಾಚಿಂಗ್ ಗ್ರ್ಯಾಂಟ್ ಬಳಸಿಕೊಂಡು ಅಡುಗೆ ಕೋಣೆ ಪೂರ್ಣಗೊಳಿಸಲು ಜ್ಞಾಪನ ಹೊರಡಿಸಲಾಗಿದೆ.
2011-12 ನೇ ಸಾಲಿನ ಆರ್ಥಿಕ ವರ್ಷದ ಕೊನೆಯಲ್ಲಿ ಕೇಂದ್ರ ಸರ್ಕಾರವು 8724 ಅಡುಗೆ ಕೋಣೆಗಳನ್ನು ಕೇಂದ್ರ ಮತ್ತು ರಾಜ್ಯದ ಶೇ.75:25 % ರ ಅನುಪಾತದಂತೆ ವಿವಿಧ ಪ್ಲಿಂತ್ ಏರಿಯಾವಾರು ಪ್ರತೀ ಏರಿಯಾಕ್ಕೆ ರೂ. 3.01 ಲಕ್ಷಗಳಂತೆ ಒಟ್ಟಾರೆ ರೂ. 33660.83 ಲಕ್ಷಗಳಿಗೆ ಅನುಮೋದನೆ ನೀಡಿ ಕೇದ್ರ ಸರ್ಕಾರದ ಬಾಬ್ತಾದ ರೂ.25245.62 ಲಕ್ಷಗಳನ್ನು ಬಿಡುಗಡೆಗೊಳಿಸಿದ್ದು, ಜಿಲ್ಲೆಗಳಿಗೆ ರಾಜ್ಯದ ಪಾಲಾದ ರೂ. 8415.21 ಲಕ್ಷಗಳನ್ನು ಬಿಡುಗಡೆಗೊಳಿಸಿದ್ದು, ಅಡುಗೆ ಕೋಣೆಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ.
2013-14ನೇ ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ 3906 ಅಡುಗೆ ಕೋಣೆಗಳು ಬಿಡುಗಡೆಗೊಳಿಸಿದ್ದು, ಇದಕ್ಕಾಗಿ ಕೇಂದ್ರದ ಪಾಲು ರೂ.11975.59 ಲಕ್ಷಗಳು ಹಾಗೂ ರಾಜ್ಯದ ಪಾಲು ರೂ.3991.86 ಲಕ್ಷಗಳು ಒಟ್ಟಾರೆ ರೂ.15967.45 ಲಕ್ಷಗಳಾಗಿರುತ್ತದೆ.
ಕಾರ್ಯಕ್ರಮದ ಪ್ರಾರಂಭದಲ್ಲಿ ಪಾತ್ರೆ ಪರಿಕರ ಹಾಗೂ ಸ್ಟೌ ಖರೀದಿಸಲು ರಾಜ್ಯ ಸರ್ಕಾರವು ಪ್ರತೀ ಅಡುಗೆ ಕೇಂದ್ರಕ್ಕೆ ರೂ.5000/- ರಂತೆ ಅನುದಾನ ನೀಡಿದೆ. 2006-07 ನೇ ಸಾಲಿನಿಂದ ಕೇಂದ್ರ ಸರ್ಕಾರವು ಪಾತ್ರೆ ಹಾಗೂ ಸ್ಟೌ ದುರಸ್ತಿಗಾಗಿ ಹಣ ಬಿಡುಗಡೆ ಮಾಡಿದ್ದು, ಅದರ ವಿವರ ಕೆಳಕಂಡಂತಿದೆ ಹಾಗೂ ಪ್ರಸಕ್ತ ಸಾಲಿನಲ್ಲಿ ಪ್ರಾರಂಭಿಸಲಾಗಿರುವ ಹೊಸ ಅಡುಗೆ ಕೇಂದ್ರಗಳಿಗೆ MME ಅಡಿಯಲ್ಲಿ 1283 ಪ್ರಾಥಮಿಕ ಕೇಂದ್ರಗಳಿಗೆ ರೂ. 5000/- ನಂತೆ 64.15 ಲಕ್ಷಗಳನ್ನು 1023 ಪ್ರೌಢ ಶಾಲೆಗಳಿಗೆ (ರೂ.7500/-ರಂತೆ) ಒಟ್ಟು 77.40 ಲಕ್ಷಗಳನ್ನು ಬಿಡುಗಡೆಗೊಳಿಸಿ, ವೆಚ್ಚ ಭರಿಸಲಾಗಿದೆ.
ಒಟ್ಟು ಕೇಂದ್ರ ಸರ್ಕಾರದಿಂದ 1,17,842 ಅಡುಗೆ ಸಿಬ್ಬಂದಿ ನೇಮಕಕ್ಕೆ ಅನುಮತಿ ದೊರೆತಿದ್ದು, ಪ್ರಸ್ತುತ 1,18,842 ಅಡುಗೆಯವರು ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದ ಅಡುಗೆಯವರನ್ನು ಎನ್.ಜಿ.ಓ ನೀಡುತ್ತಿರುವ ಶಾಲೆಗಳಿಗೆ ಸಹಾಯಕರನ್ನಾಗಿ ನೇಮಕ ಮಾಡಿಕೊಳ್ಳಲು ಆದೇಶ ನೀಡಲಾಗಿದೆ.
ಅಕ್ಷರ ದಾಸೋಹ ಕಾರ್ಯಕ್ರಮದಡಿ ಕಾರ್ಯ ನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಯವರಿಗೆ ಗೌರವಧನನ್ನು ಮುಖ್ಯ ಅಡುಗೆಯವರಿಗೆ ರೂ.1100/- ಮತ್ತು ಸಹಾಯಕರಿಗೆ ರೂ.1000/- ಗಳನ್ನು ನಿಗದಿಪಡಿಸಲಾಗಿತ್ತು.
ಭಾರತದ ಮಾನ್ಯ ಸರ್ವೋಚ್ಛ ನ್ಯಾಯಾಲಯದ ದಿನಾಂಕ:13-04-2009 ರಲ್ಲಿನ ತೀರ್ಪಿನಂತೆ ರಾಜ್ಯದ ಎಲ್ಲಾ ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಅಗ್ನಿ ಆಕಸ್ಮಿಕಗಳು ನಡೆಯದಂತೆ ಅನಾಹುತಗಳನ್ನು ತಡೆಯುವ ಸಲುವಾಗಿ ಅಗ್ನಿ ನಂದಿಸುವ ಸಾಧನಗಳನ್ನು ಅಳವಡಿಸಲು ಆದೇಶವಾಗಿರುತ್ತದೆ.
ಅದರಂತೆ, ಸುತ್ತೋಲೆಯನ್ನು ಹೊರಡಿಸಿ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಅಗ್ನಿ ನಂದಕಗಳನ್ನು ಅಳವಡಿಸಲು ಆದೇಶಿಸಲಾಗಿತ್ತು. ಈಗಾಗಲೇ ಬಂದಿರುವ ಮಾಹಿತಿಯಂತೆ ಶೇ.99.8 ರಷ್ಟು ಶಾಲೆಗಳಲ್ಲಿ ಅಗ್ನಿ ನಂದಕಗಳನ್ನು ಅಳವಡಿಸಲಾಗಿದೆ. ಕಡ್ಡಾಯವಾಗಿ ಅಗ್ನಿ ನಂದಕಗಳನ್ನು ಅಳವಡಿಸಬೇಕೆಂದು ಮತ್ತೊಮ್ಮೆ ಕ್ಷೇತ್ರಶಿಕ್ಷಣಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳ ಸಹಕಾರವನ್ನು ಪಡೆದು ಅಗ್ನಿ ನಂದಕಗಳನ್ನು ಬಳಸುವ ಬಗ್ಗೆ ತರಬೇತಿಯನ್ನು ಏರ್ಪಡಿಸಲು ಸಹ ಸೂಚಿಸಿದೆ. ಪೌಡರ್ ಬದಲಾಯಿಸಲು ಶಾಲಾ ಸಂಚಿತ ನಿಧಿಯಲ್ಲಿ ಹಣ ಬಳಸಲು ಅನುಮತಿ ನೀಡಲಾಗಿದೆ. ಅದರಂತೆ ಅಗ್ನಿ ನಂದಕಗಳನ್ನು ಸದಾಕಾಲ ಸುಸ್ಥಿತಿಯಲ್ಲಿಡಲು ಕಡ್ಡಾಯವಾಗಿದೆ.
ರಾಜ್ಯದಲ್ಲಿ ಒಟ್ಟು .........ಅಡುಗೆ ಕೇಂದ್ರಗಳಿದ್ದು, ಈ ಕೆಳಕಂಡಂತೆ ಅಡುಗೆ ಕೇಂದ್ರಗಳನ್ನು ವರ್ಗೀಕರಿಸಲಾಗಿದೆ.
ಕ್ರ. ಸಂ. | ಪ್ರಾಥಮಿಕ ಶಾಲಾ ಮತ್ತು ಪ್ರೌಢಶಾಲಾ ವಿಭಾಗ | ||||
ಮಕ್ಕಳಸಂಖ್ಕೆ | ಕೇಂದ್ರದ ಮಾದರಿ | ಅಡುಗೆಯವರ ಸಂಖ್ಯೆ | |||
1 |
1 ರಿಂದ 25 ರವರೆಗೆ |
ಎ |
1 |
||
2 |
26 ರಿಂದ 100 ರವರೆಗೆ |
ಬಿ |
2 |
||
3 |
101 ರಿಂದ 200 ರವರೆಗೆ |
ಸಿ |
3 |
||
4 |
201 ರಿಂದ 300 ರವರೆಗೆ |
ಡಿ |
4 |
||
5 |
301 ರಿಂದ 500 ರವರೆಗೆ |
ಇ |
5 |
||
6 |
501 ರಿಂದ 800 ರವರೆಗೆ |
ಎಫ್ |
6 |
||
7 |
801 ರಿಂದ 1100 ರವರೆಗೆ |
ಜಿ |
7 |
||
8 |
1101 ರಿಂದ 1400 ರವರೆಗೆ |
ಹೆಚ್ |
8 |
||
9 |
1401 ರಿಂದ 1700 ರವರೆಗೆ |
ಐ |
9 |
||
10 |
1701 ರಿಂದ 25 ಮೇಲ್ಪಟ್ಟು |
ಜೆ |
10 |
ಆಯ್ಕೆ ಸಮಿತಿಯು ಈ ಕೆಳಕಂಡ ಅಂಶಗಳನ್ನು ಒಳಗೊಂಡಿದೆ.
ಸರ್ಕಾರಿ ಆದೇಶದಂತೆ ಅಡುಗೆ ಸಿಬ್ಬಂದಿಯನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಈ ಕೆಳಕಂಡ ಅಂಶಗಳು ಒಳಗೊಂಡಿರಬೇಕು.
ವರ್ಗ | ಮಕ್ಕಳ ಸಂಖ್ಯೆ | ಅಡುಗೆಯವರ ಸಂಖ್ಯೆ | ಸಂಭಾವನೆ |
---|---|---|---|
ಎ-1 |
1-25
|
1
|
ಮು.ಅ.-ರೂ.1700/-ಅ.ಸಹಾಯಕರಿಗೆ-ರೂ.1600/- |
ಎ |
26- 70
|
2
|
|
ಬಿ |
71 - 300
|
3
|
|
ಸಿ |
301 ಕ್ಕಿಂತ ಮೇಲ್ಪಟ್ಟು
|
4
|
ವರ್ಗ | ಮಕ್ಕಳ ಸಂಖ್ಯೆ | ಅಡುಗೆಯವರ ಸಂಖ್ಯೆ | ಸಂಭಾವನೆ |
---|---|---|---|
ಹಿ.ಪ್ರಾ.ಕ್ಕೆ ಸೇರಿಸಿದಂತೆ |
1 - 300
|
1
|
ಮು.ಅ.-ರೂ.1700/- ಅ.ಸಹಾಯಕರಿಗೆ-ರೂ.1600/- |
ಎ |
301 - 500
|
4
|
|
ಬಿ |
501 - 1000
|
5
|
|
ಸಿ |
1001 ಕ್ಕೂ ಮೇಲ್ಪಟ್ಟು
|
6
|
ಅಡುಗೆಯವರಿಗೆ ಈ ಕೆಳಕಂಡ ಕ್ಷೇತ್ರಗಳಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ.
ಮಧ್ಯಾಹ್ನ ಉಪಹಾರ ಯೋಜನೆಯ ಅನುಷ್ಠಾನದ ಜವಾಬ್ದಾರಿಯು ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯದ್ದಾಗಿರುತ್ತದೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರೇಡ್-1 ಹುದ್ದೆಯ ಅಧಿಕಾರಿಯ ಸಹಕಾರದೊಂದಿಗೆ, ಈ ಕಾರ್ಯಕ್ರಮವು ನಡೆಯುತ್ತದೆ.
ತಾಲ್ಲೂಕು ಮಟ್ಟದಲ್ಲಿ ಗ್ರೂಪ್-ಬಿ ಹುದ್ದೆಯ ಅಧಿಕಾರಿಯ ಸಹಕಾರದೊಂದಿಗೆ, ತಾಲ್ಲೂಕು ಪಂಚಾಯತ್ ನ ಕಾರ್ಯನಿರ್ವಾಹಕ ಅಧಿಕಾರಿಯು ಮಧ್ಯಾಹ್ನ ಉಪಹಾರ ಯೋಜನೆಯ ಅನುಷ್ಠಾನದ ಜವಾಬ್ದಾರಿಯನ್ನು ಹೊಂದಿರುತ್ತದೆಮಧ್ಯಾಹ್ನ ಬಿಸಿಯೂಟದ ಜೊತೆಗೆ ಹೆಚ್ಚುವರಿ ಪೌಷ್ಟಿಕಾಂಶವುಳ್ಳ ಮಾತ್ರೆಗಳನ್ನು ಸಹ ನೀಡಲಾಗುತ್ತಿದೆ. ಇದನ್ನು Karnataka Drugs Logistics and Warehousing Society’ ಯ ಸಹಯೋಗದೊಂದಿಗೆ ಸರಬರಾಜು ಮಾಡಲಾಗುತ್ತಿದೆ. ಮಾತ್ರೆಗಳನ್ನು ಶಿಕ್ಷಣ ಇಲಾಖೆಯಿಂದ ಬಂದ ಬೇಡಿಕೆಗೆ ಅನುಸಾರವಾಗಿ ತಾಲ್ಲೂಕು ಮಟ್ಟದಲ್ಲಿ ಪೂರೈಕೆ ಮಾಡಿದ ನಂತರ ಶಾಲೆಗಳಿಗೆ ಮರುಹಂಚಿಕೆಯಾಗುತ್ತದೆ.
ಈ ಇಲಾಖೆಯು 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬಿಸಿಯೂಟ ನೀಡಲು ಎ.ಪಿ.ಎಲ್. ಆಹಾರ ಧಾನ್ಯಗಳನ್ನು ಪೂರೈಸುವ ಕೆಲಸ ಮಾಡುತ್ತದೆ.
ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮವು ಬಿಸಿಯೂಟ ಕಾರ್ಯಕ್ರಮಕ್ಕೆ ಬೇಳೆ, ಎಣ್ಣೆ, ಉಪ್ಪು ಇನ್ನಿತರ ಆಹಾರಧಾನ್ಯಗಳನ್ನು ಪೂರೈಸುವ ಜವಾಬ್ದಾರಿ ಹೊಂದಿದ್ದು, ಆಹಾರಧಾನ್ಯಗಳ ಬೇಡಿಕೆಗನುಸಾರ ಯಾವುದೇ ಅಡೆತಡೆಗಳಿಲ್ಲದೆ ಯೋಜನೆಗಳನ್ನು ಕಾರ್ಯಗತಗೊಳಿಸುವುದು ಇದರ ಜವಾಬ್ದಾರಿಯಾಗಿದೆ. ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಆಹಾರಧಾನ್ಯಗಳ ಬೇಡಿಕೆಗೆ ಅನುಸಾರವಾಗಿ 02 ತಿಂಗಳ ಮುಂಗಡ ಹಣ ಬಿಡುಗಡೆ ಮಾಡಿ ಮುಂದಿನ ತಿಂಗಳುಗಳಲ್ಲಿ ಸರಬರಾಜು ಮಾಡುವ ಆಹಾರಧಾನ್ಯಗಳ ಬಿಲ್ಲಿಗೆ ಈ ಹಣವನ್ನು ಸರಿದೂಗಿಸುತ್ತದೆ.
ಭಾರತೀಯ ಆಹಾರ ನಿಗಮವು 1 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದಿಂದ ನೀಡುವ ಅಕ್ಕಿ, ಗೋಧಿಯನ್ನು ಎಫ್.ಸಿ.ಐ. ಗೋದಾಮಿನಲ್ಲಿ ಶೇಖರಿಸಿಟ್ಟುಕೊಂಡು, ಹಂಚಿಕೆ ಮಾಡುವ ಕಾರ್ಯ ನಿಗಮದ್ದಾಗಿರುತ್ತದೆ.
ಆಹಾರ ಸರಬರಾಜಿನಲ್ಲಿ ಯಾವುದೇ ನಿಲುಗಡೆಗೆ ಆಸ್ಪದವಿಲ್ಲದಂತೆ ತ್ರೈಮಾಸಿಕಕ್ಕೆ ಅಗತ್ಯವಿರುವ ಆಹಾರಧಾನ್ಯಗಳನ್ನು ಸರಬರಾಜು ಮಾಡುವ ಕಾರ್ಯವನ್ನು ನಿರ್ವಹಿಸುತ್ತದೆ. ಎಫ್.ಎ.ಕ್ಯೂ. ಆಧಾರದ ಮೇಲೆ ಮಧ್ಯಾಹ್ನ ಉಪಹಾರ ಯೋಜನೆಗೆ ಎಫ್.ಸಿ.ಐ. ಯು ಅತ್ಯುತ್ತಮ ಆಹಾರಧಾನ್ಯಗಳನ್ನು ಸರಬರಾಜು ಮಾಡುತ್ತದೆ.
ಶಿಕ್ಷಣ ಇಲಾಖೆ, ಭಾರತೀಯ ಆಹಾರ ನಿಗಮದ ಅಧಿಕಾರಿಗಳನ್ನೊಳಗೊಂಡಂತೆ ಜಿಲ್ಲಾಧಿಕಾರಿಗಳ ನೇತೃತ್ವದ ಆಹಾರ ಗುಣಮಟ್ಟ ಪರಿಶೀಲನಾ ತಂಡ ಆಹಾರಧಾನ್ಯ ಸರಬರಾಜಿನ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಆಹಾರವಿದೆಯೇ ಎಂದು ಪರಿಶೀಲಿಸಿ ವರದಿ ನೀಡುತ್ತದೆ ಹಾಗೂ ಆಹಾರಧಾನ್ಯಗಳ ಮಾದರಿಯನ್ನಿಟ್ಟುಕೊಂಡು ಪರಿಶೀಲಿಸುತ್ತದೆ.
Share | 2014-15 |
---|---|
ರಾಜ್ಯ |
90518.72 ಲಕ್ಷ
|
ಕೇಂದ್ರ |
83640.93 ಲಕ್ಷ
|
ಒಟ್ಟು |
174159.65 ಲಕ್ಷ
|
04-03-2010ರಿಂದ ಅನ್ವಯಿಸುವಂತೆ ಕೇಂದ್ರ-ರಾಜ್ಯದ ಸರ್ಕಾರದ ಘಟಕ ವೆಚ್ಚದ ವಿವರ :
ವರ್ಗ |
ಅಕ್ಕಿ(ಗ್ರಾಂ.ಗಳಲ್ಲಿ) | ತಯಾರಿಕಾ ವೆಚ್ಚ(ರೂ.ಗಳಲ್ಲಿ) | ಸಾಗಾಣಿಕಾ ವೆಚ್ಚ(ಕ್ವಿಂ/ ರೂ.ಗಳಲ್ಲಿ) | ||||
---|---|---|---|---|---|---|---|
ಕೇಂದ್ರ
|
ರಾಜ್ಯ
|
ಕೇಂದ್ರ
|
ರಾಜ್ಯ
|
Total
|
ಕೇಂದ್ರ
|
ರಾಜ್ಯ
|
|
1 - 5 |
100
|
-
|
2.50
|
0.84
|
3.59
|
75
|
-
|
6 - 8 |
150
|
-
|
3.75
|
1.25
|
5.38
|
75
|
-
|
9 - 10 |
-
|
150
|
-
|
6.62
|
6.62
|
-
|
75
|
ಶಾಲೆ, ತಾಲ್ಲೂಕು ಮತ್ತು ಜಿಲ್ಲೆಗಳ ಮಾಹಿತಿಯನ್ನಾಧರಿಸಿ, ಮಧ್ಯಾಹ್ನ ಉಪಹಾರ ಯೋಜನೆಯು ರಾಜ್ಯಮಟ್ಟದ ವಾರ್ಷಿಕ ಕ್ರಿಯಾ ಯೋಜನೆ ಮತ್ತು ಆಯವ್ಯಯವನ್ನು ಸಿದ್ಧಪಡಿಸುತ್ತದೆ. ಯೋಜನೆಯು ಮೇಲಿನ ಹಂತಕ್ಕಿಂತಲೂ ಕೆಳಹಂತದಲ್ಲಿ ಪ್ರಯೋಜನ ಸಿಗುವ ನಿಟ್ಟಿನಲ್ಲಿ ಹೆಚ್ಚಿನ ಒತ್ತನ್ನು ನೀಡುತ್ತಿದೆ. ಶಾಲಾ ಹಂತದ ಮಾಹಿತಿಗಳನ್ನು ಆಧಾರವಾಗಿಟ್ಟುಕೊಂಡು ವಾರ್ಷಿಕ ಕ್ರಿಯಾ ಯೋಜನೆಯನ್ನು ತಯಾರಿಸಿ ದಾಖಲೀಕರಿಸಲಾಗುವುದು.
ಮಧ್ಯಾಹ್ನ ಉಪಹಾರ ಯೋಜನೆಯ ವಾರ್ಷಿಕ ಕ್ರಿಯಾ ಯೋಜನೆ ಮತ್ತು ಆಯವ್ಯಯಗಳ ಸಮಗ್ರವಾದ ಪ್ರಸ್ತುತ ಚಿತ್ರಣವನ್ನು ನೀಡುತ್ತದೆ. ಆಡಳಿತಾತ್ಮಕ ರಚನೆ, ಅನುಷ್ಠಾನದ ವಿಧಾನ, ನಿರ್ವಹಣಾ ವಿಧಾನ, ಸಾಮಾಜಿಕವಾಗಿ ಗುರಿಮುಟ್ಟಲು ದೊರೆಯುವ ಮೂಲಭೂತ ಸೌಕರ್ಯಗಳ ಸ್ಥಿತಿ, ಮೌಲ್ಯಮಾಪನದ ಅಧ್ಯಯನದಲ್ಲಿ ದೊರೆಯುವ ಅಂಶಗಳು, ಸಮಸ್ಯೆಯನ್ನು ಎದುರಿಸುವ ಉತ್ತಮ ಅಂಶಗಳು, ಸಮುದಾಯದ ಪಾಲ್ಗೊಳ್ಳುವಿಕೆಯ ಪರಿಶೀಲನೆಯೊಂದಿಗೆ ವಾರ್ಷಿಕ ಕ್ರಿಯಾ ಯೋಜನೆ ಮತ್ತು ಆಯವ್ಯಯಗಳನ್ನು ತಯಾರಿಸಲಾಗುತ್ತದೆ.
ರಾಜ್ಯದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಮಧ್ಯಾಹ್ನ ಉಪಹಾರ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಇದರಲ್ಲಿ ರಾಜ್ಯದ 15ಜಿಲ್ಲೆಗಳಲ್ಲಿ ಸ್ವಯಂ ಸೇವಾ ಸಂಸ್ಥೆಗಳು ತಮ್ಮದೇ ಆದ 82 ಅಡುಗೆ ಕೇಂದ್ರಗಳನ್ನು ಹೊಂದಿದ್ದು, ರಾಜ್ಯದಲ್ಲಿ ಪ್ರಸ್ತುತ 80 ಸ್ವಯಂ ಸೇವಾ ಸಂಸ್ಥೆಗಳಿದ್ದು, 1 ರಿಂದ 10ನೇ ತರಗತಿಯವರೆಗಿನ 11,57,833 ವಿದ್ಯಾರ್ಥಿಗಳಿಗೆ ಬಿಸಿಯೂಟವನ್ನು ನೀಡುತ್ತಿದೆ.
ರಾಜ್ಯಾದ್ಯಂತ ಒಟ್ಟು 92 ಸ್ವಯಂ ಸೇವಾ ಸಂಸ್ಥೆಗಳು ಒಟ್ಟು 5768 ಶಾಲೆಗಳ 10.66 ಲಕ್ಷ ಮಕ್ಕಳಿಗೆ ಬಿಸಿಯೂಟ ನೀಡುತ್ತಿವೆ. ಅವುಗಳಲ್ಲಿ ಮುಖ್ಯವಾದವು ಈ ಕೆಳಕಂಡಂತಿವೆ.
ಕ್ರ. ಸಂ. |
ಸ್ವಯಂ ಸೇವಾ ಸಂಸ್ಥೆಯ ಹೆಸರು |
ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಗಳು |
ಶಾಲೆಗಳ ಸಂಖ್ಯೆ |
ಫಲಾನುಭವಿ ಮಕ್ಕ ಳ ಸಂಖ್ಯೆ |
1 |
ಅಕ್ಷಯ ಪಾತ್ರ ಫೌಂಡೇಶನ್, ಬೆಂಗಳೂರು. |
07 |
2478 |
439384 |
2 |
ಅದಮ್ಯ ಚೇತನ, ಬೆಂಗಳೂರು. |
04 |
694 |
506280 |
3 |
ಅಖಿಲ ಕರ್ನಾಟಕ ಕನ್ನಡ ಕಸ್ತೂರಿ ಕಲಾ ಸಂಘ, ಬೆಂಗಳೂರು. |
01 |
196 |
28462 |
ಅಧಿಕಾರಿಗಳ ಹೆಸರು & ಪದನಾಮ | ದೂರವಾಣಿ, ಮೊಬೈಲ್ | ಫ್ಯಾಕ್ಸ್ | ಮಿಂಚಂಚೆ ವಿಳಾಸ |
---|---|---|---|
ಶ್ರೀ ಬೆಳ್ಳಶೆಟ್ಟಿ, ಕ.ಆ.ಸೇ ಜಂಟಿ ನಿರ್ದೇಶಕರು(ಮ.ಉ.ಯೋ) |
080-22242943 9449817874, 9480835500 |
080-22271998 | Jd_mms@yahoo.co.in |
- ಸಹಾಯಕ ಪೌಷ್ಠಿಕಾಂಶ ಧಿಕಾರಿ(ಮ.ಉ.ಯೋ) |
080-22271998 | ||
ಗಂಗಾಧರ ಎನ್, ಕ.ಆ.ಸೇ., ಹಿರಿಯ ಸಹಾಯಕ ನಿರ್ದೇಶಕರು(ಮ.ಉ.ಯೋ) |
9480835502 | 080-22271998 | |
ಹಿರಿಯ ಸಹಾಯಕ ನಿರ್ದೇಶಕರು(ಮ.ಉ.ಯೋ) |
9480835503 | 080-22271998 | |
ಟಿ.ಎನ್.ಲಿಂಗೇಗೌಡ, ಸಹಾಯಕ ನಿರ್ದೇಶಕರು(ಮ.ಉ.ಯೋ) |
9480835504 | 080-22271998 | |
ಮುಷೀರ್ ಅಹ್ಮದ್ ಎಂ. ಪತ್ರಾಂಕಿತ ಸಹಾಯಕರು |
9449081789 | 080-22271998 | |
ಲೆಕ್ಕ ಅಧೀಕ್ಷಕರು |
9480835501 | 080-22271998 |
ಮೂಲ : ಸಾರ್ವಜನಿಕ ಶಿಕ್ಷಣ ಇಲಾಖೆ
ಕೊನೆಯ ಮಾರ್ಪಾಟು : 6/19/2020
ಹಲವು ಯೋಜನೆಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಐ.ಸಿ.ಡಿ.ಎಸ್ ಸೇವೆಗಳು
ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆ ಕುರಿತಾ...
2007-08 ನೇ ಸಾಲಿನಲ್ಲಿ ಈ ಹೊಸ ಯೋಜನೆಯನ್ನು ಕರ್ನಾಟಕ ಸರ್...