ಪಚಾರಿಕ ಶಿಕ್ಷಣದ ವ್ಯವಸ್ಥೆಯಲ್ಲಿ ಶಾಲೆಯು ಮೂಲಭೂತ ಘಟಕವಾಗಿರುತ್ತದೆ. 2012-13ನೇ ಸಾಲಿನ ಜಿಲ್ಲಾ ಶೈಕ್ಷಣಿಕ ಮಾಹಿತಿ ವ್ಯವಸ್ಥೆ (ಡೈಸ್) ಅಂಕಿ ಅಂಶಗಳ ವರದಿಗಳ ಪ್ರಕಾರ ರಾಜ್ಯದಲ್ಲಿ ಒಟ್ಟು 78,950 ಶಾಲೆಗಳು (ಪದವಿ ಪೂರ್ವ ಕಾಲೇಜುಗಳು ಸೇರಿ) ಇದ್ದು, ಅವುಗಳಲ್ಲಿ 25,950 ಕಿರಿಯ ಪ್ರಾಥಮಿಕ ಶಾಲೆಗಳು, 34,086 ಹಿರಿಯ ಪ್ರಾಥಮಿಕ ಶಾಲೆಗಳು, 14,194 ಪ್ರೌಢ ಶಾಲೆಗಳು ಮತ್ತು 4,720 ಪದವಿ ಪೂರ್ವ ಕಾಲೇಜುಗಳಿವೆ. ಕಿರಿಯ ಪ್ರಾಥಮಿಕ ಶಾಲೆಗಳು ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಅನುಪಾತವು 0.761 : 1 ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳ ಪ್ರೌಢ ಶಾಲೆಗಳ ಅನುಪಾತವು 1 : 0.416 ಆಗಿರುತ್ತದೆ. .
1 ರಿಂದ 8ನೇ ತರಗತಿ ಹೊಂದಿರುವ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ, ಪ್ರೌಢ ಶಾಲೆಗಳಲ್ಲಿ ಮತ್ತು 1 ರಿಂದ 12ನೇ ತರಗತಿಯವರೆಗೆ ಉನ್ನತ ಪ್ರೌಢ ಶಾಲೆಗಳಲ್ಲಿ 8ನೇ ತರಗತಿ ಸೌಲಭ್ಯದ ಲಭ್ಯತೆ ಇರುತ್ತದೆ. ಆದಾಗ್ಯೂ 1 ರಿಂದ 7ನೇ ತರಗತಿ ಹೊಂದಿರುವ ಹಿರಿಯ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ತಮ್ಮ ಶಾಲೆ ವಾಸಸ್ಥಳಕ್ಕೆ ಹತ್ತಿರವಿರುವ 8ನೇ ತರಗತಿ ಹೊಂದಿರುವ ಹಿರಿಯ ಪ್ರಾಥಮಿಕ ಅಥವಾ ಪ್ರೌಢ ಶಾಲೆಗಳಲ್ಲಿ ದಾಖಲಾತಿ ಹೊಂದುತ್ತಾರೆ.
2010-11ನೇ ಸಾಲಿನ ಆರ್.ಟಿ.ಇ ಪೂರಕ ಯೋಜನೆಯಡಿಯಲ್ಲಿ ರಾಜ್ಯದ 5 ಜಿಲ್ಲೆಗಳಲ್ಲಿ ಬೆಂಗಳೂರು (ನಗರ), ದಕ್ಷಿಣ ಕನ್ನಡ, ಧಾರವಾಡ, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕೆಲವು ನಿರ್ದಿಷ್ಟ ವರ್ಗಗಳ ಮಕ್ಕಳಿಗಾಗಿ ವಸತಿ ಶಾಲೆಗಳನ್ನು ಮಂಜೂರು ಮಾಡಲಾಗಿದೆ. ಸದರಿ ಶಾಲೆಗಳು ಶಿಕ್ಷಣ ವಂಚಿತ ನಗರ ಪ್ರದೇಶಗಳ ಮಕ್ಕಳು, ಬೆಟ್ಟ, ಗುಡ್ಡಗಾಡು, ನದಿ, ಅರಣ್ಯ ಪ್ರದೇಶ, ನಕ್ಸಲ್ ಪೀಡಿತ ಪ್ರದೇಶ, ಇತರೆ ಭೌಗೋಳಿಕ ಅಡೆತಡೆಗಳು ಇರುವ ಪ್ರದೇಶಗಳಲ್ಲಿ ಇರುವ ಮಕ್ಕಳಿಗಾಗಿ, ಶಾಲಾ ಅನುಭವ ಮಾತ್ರವಲ್ಲದೆ, ಊಟ ಮತ್ತು ವಸತಿಗಳ ಅಗತ್ಯತೆ ಇರುವ ವಯಸ್ಕರ ರಕ್ಷಣೆ ಇಲ್ಲದೆ ಸಂಕಷ್ಟದಲ್ಲಿರುವ ಅನಾಥ ಹಾಗೂ ಬೀದಿ ಮಕ್ಕಳ ರಕ್ಷಣೆ, ಪಾಲನೆ/ಪೋಷಣೆ ಹಾಗೂ ಶಾಲಾ ಅವಕಾಶಕ್ಕಾಗಿ ವಿಶೇಷವಾಗಿ ಕಸ್ತೂರ ಬಾ ಗಾಂಧಿ ಬಾಲಿಕ ವಿದ್ಯಾಲಯಗಳ ಮಾದರಿಯಲ್ಲಿ 10 ವರ್ಷ ಮೇಲ್ಪಟ್ಟ ಮಕ್ಕಳಿಗಾಗಿ (6 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗಾಗಿ) ಪ್ರಾರಂಭಿಸಿರುವ ಸನಿವಾಸ ಶಾಲೆಗಳಾಗಿವೆ. ಪ್ರತಿ ಶಾಲೆಯಲ್ಲಿ ಗರಿಷ್ಟ 100 ಮಕ್ಕಳನ್ನು ದಾಖಲಿಸಲು ಅವಕಾಶ ಇದೆ. ಈ ಶಾಲೆಗಳಳ್ಲಿ 2013ರ ಜೂನ್ ತಿಂಗಳವರೆಗೆ ಒಟ್ಟು 328 ಮಕ್ಕಳು ದಾಖಲಾಗಿದ್ದು, ಜಿಲ್ಲಾವಾರು ದಾಖಲಾತಿ ವಿವರಗಳು ಕೆಳಗಿನಂತಿವೆ:
ಕ್ರ.ಸಂ
|
ಜಿಲ್ಲೆಯ ಹೆಸರು
|
ಬ್ಲಾಕ್ ಹೆಸರು
|
ಶಾಲೆ ಇರುವ ಸ್ಥಳ
|
ದಾಖಲಾಗಿರುವ ಮಕ್ಕಳ ಸಂಖ್ಯೆ
|
01
|
ಬೆಂಗಳೂರು ನಗರ | ಬೆಂಗಳೂರು (ದಕ್ಷಿಣ) | Tತಲಘಟ್ಟಪುರ | 55 |
02
|
ದಕ್ಷಿಣ ಕನ್ನಡ | ಬೆಳ್ತಂಗಡಿ | ಬೆಳ್ತಂಗಡಿ | 91 |
03
|
ಧಾರವಾಡ | ಹುಬ್ಬಳ್ಳಿ ಸಿಟಿ | ಘಂಟಿಕೇರಿ ಹುಬ್ಬಳ್ಳಿ | 56 |
04
|
ಮೈಸೂರು | ಮೈಸೂರು ಉತ್ತರ | ನಜರಾಬಾದ್ | 63 |
05
|
ಶಿವಮೊಗ್ಗ | ತೀರ್ಥಹಳ್ಳಿ | ಆಗುಂಬೆ | 63 |
ಒಟ್ಟು | 328 |
2007ನೇ ಸಾಲಿನಿಂದ ಶಿಕ್ಷಕರ ವರ್ಗಾವಣೆ ನಿಯಂತ್ರಣ ಕಾಯಿದೆಯನ್ನು (Regulation of Teachers Transfer Act) ರಾಜ್ಯ ಸರ್ಕಾರವು ಅಳವಡಿಸಿದ್ದು, ಹೆಚ್ಚುವರಿ ಶಿಕ್ಷಕರನ್ನು ಗುರುತಿಸಿ ಅಗತ್ಯವಿರುವ ಶಾಲೆಗಳಿಗೆ ಮರುಹಂಚಿಕೆ ಕಾರ್ಯವನ್ನು ಕೌನ್ಸಿಲಿಂಗ್ ಮೂಲಕ ಮಾಡಲಾಗುತ್ತಿದೆ. ಈ ಪ್ರಕ್ರಿಯೆಯನ್ನು ಸಾಮಾನ್ಯವಾಗಿ ಶಿಕ್ಷಕರ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಗಿಂತ ಮುಂಚಿತವಾಗಿ ನಡೆಸಲಾಗುತ್ತದೆ. ಕೌನ್ಸಿಲಿಂಗ್ ಮೂಲಕ ಮರುಹಂಚಿಕೆ ಕಾರ್ಯವನ್ನು ನ್ಯಾಯ ಹಾಗೂ ಪಾರದರ್ಶಕತೆಯಿಂದ ನಡೆಸಲು ಅವಕಾಶ ಸಿಗುವುದಲ್ಲದೇ ಯಾವುದೇ ರೀತಿಯ ಹಸ್ತಕ್ಷೇಪ ಮತ್ತು ತಾರತಮ್ಯವನ್ನು ತಡೆಗಟ್ಟುವ ಮೂಲಕ ಪರಿಣಾಮಕಾರಿ ಆಡಳಿತಕ್ಕೆ ಸಹಕಾರಿಯಾಗುತ್ತದೆ.
ಮೂಲ : ಎಸ್ ಎಸ್ ಏ ಕರ್ನಾಟಕ
ಕೊನೆಯ ಮಾರ್ಪಾಟು : 6/23/2020