ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಶಿಕ್ಷಣ / ಮಕ್ಕಳ ಮೂಲೆ / ಎಚ್ ಐವಿ ಸೋಂಕಿತ ಮತ್ತು ಬಾಧಿತ ಮಕ್ಕಳು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಎಚ್ ಐವಿ ಸೋಂಕಿತ ಮತ್ತು ಬಾಧಿತ ಮಕ್ಕಳು

ಎಚ್ ಐವಿ ಸೋಂಕಿತ ಮತ್ತು ಬಾಧಿತ ಮಕ್ಕಳ ಕುರಿತು

ನಮ್ಮನ್ನು ಕಳಂಕಿತರಾಗಿಸಬೇಡಿ, ಎಚ್ ಐವಿ ಸೋಂಕಿತ ಮತ್ತು ಬಾಧಿತ ಮಕ್ಕಳು ಹೇಳುವರು ಸೂಕ್ತವಾದ ವಸತಿ ಮತ್ತು ಸುರಕ್ಷತೆಯ ಕೊರತೆ ಆಸ್ತಿ ಹಕ್ಕಿನ ನಿರಾಕರಣೆ ಮತ್ತು ಕಳಂಕವು ಎಚ್ ಐವಿ ಸೋಂಕಿತ ಮಕ್ಕಳ ಮುಖ್ಯ ಕಾಳಜಿ ಎಂದು ರಾಷ್ತ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸಾರ್ವಜನಿಕ ವಿಚಾರಣೆ ಸಂದರ್ಭದಲ್ಲಿ ಗೊತ್ತಾಯಿತು. ನೂರಕ್ಕೂ ಹೆಚ್ಚಾದ ಎಚ್ ಐ ವಿ ಮತ್ತು ಏಡ್ಸ್ ಬಾಧಿತ ಮಕ್ಕಳು, ಅವರಲ್ಲಿ ಅನೇಕರು ಅನಾಥರು, ರಾಷ್ಟ್ರ ಮತ್ತು ರಾಜ್ಯ ಸಾರ್ವಜನಿಕ ವಿಚಾರಣೆಯ ಸಮಯದಲ್ಲಿ ತಮಗೆ ನಿರಾಕರಿಸಲಾಗುತ್ತಿರುವ ಹಕ್ಕುಗಳ ಬಗ್ಗೆ ಹೇಳಿಕೆ ನೀಡಿದರು.

ದೆಹಲಿಯಲ್ಲಿ ಫೆನ್ರವರಿ ತಿಂಗಳಲ್ಲಿ ನಡೆದ ವಿಚಾರಣೆಯಲ್ಲಿ ಗುಜರಾತ್, ಒರಿಸ್ಸಾ, ಪಶ್ಚಿಮ ಬಂಗಾಲ, ಯು .ಪಿ ಮತ್ತು ದೆಹಲಿಯ ಮಕ್ಕಳು ಭಾಗವಹಿಸಿದ್ದರು. ಅವರು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ( (NCPCR) ಅಧ್ಯಕ್ಷರಾದ ಶಾಂತ ಸಿನ್ಹ ,ಸದಸ್ಯದರಾದ ದೀಪಾ ದಿಕ್ಷಿತ, ಸದಸ್ಯ ಕಾರ್ಯದರ್ಶಿ ಲವ್ ವರ್ಮ , ಇರುವ ಜ್ಯೂರಿ ಸಮಿತಿಯಲ್ಲಿ ಚಿತ್ರನಿರ್ಮಾಪಕರಾದ ನಂದಿತಾ ದಾಸ್ , ಕಾರ್ಯಕರ್ತ ಅಂಜಲಿ ಗೋಪಾಲನ್ ನಾಙ್ ಫೌಂಡೇಷನ್ , ಪೌಷ್ಟಿಕತೆಯ ತಜ್ಞ ರಾದ ವೀನಾ ಶತೃಜ್ಞ ಮತ್ತು ಮಕ್ಕಳ ರೋಗ ತಜ್ಞರಾದ ಡಾ. ಶಿವಾನಂದ ಇದ್ದರು.

ತೊಂದರೆಗೆ ಒಳಗಾದವರಲ್ಲಿ, ವಿನೀತ್ನ ದನಿ ಎಲ್ಲರ ಕಿವಿ ಮುಟ್ಟಿತು.ಅವನು ಮತ್ತು ಅವನ ತಾಯಿ ಎಚ್ ಐವಿ ಪಾಜಿಟಿವ್. ಅವನಿಗೆ ತಂದೆ ಇಲ್ಲ. ವಿನೀತನನು ಶಾಲೆಯಲ್ಲಿ ಕಳಂಕಿತನೆಂದು ಹೀನಾಯವಾಗಿ ನೋಡುವರು. ಅವನ ಶಿಕ್ಷಕರು ಕೂಡಾ ಅವನಿಗೆ ವಿಶೇಷ ಬೋಧನೆ ನೀಡಲು ನಿರಾಕರಿಸಿದರು ಅದರಿಂದ ಅವನು ಗಾಬರಿಗೊಂಡು ಖಿನ್ನತೆಗೆ ಒಳಗಾಗಿರುವನು, ಎಂದು ಜ್ಯೂರಿಗಳಿಗೆ ತಿಳಿಸಿದನು.

ಅವನ ಸಮಸ್ಯೆಯನ್ನು ಯಾರೂ ಗಮನಿಸಲಿಲ್ಲ ಎಂಬುದುದನ್ನ ಗುರುತಿಸಲಾಯಿತು. ಅವನು ಜಾಣ ನಾದರೂ ಶಾಲೆಯನ್ನು ಬಿಡುವ ಅಪಾಯದ ಸಂಭವ ಇದೆ. ಜ್ಯೂರಿಗಳು ಸಂಬಂಧಿಸಿದ ರಾಜ್ಯದ ಏಡ್ಸ್ ನಿಯಂತ್ರಣ ಸೊಸೈಟಿಗೆ ಅವರು ಸಂಬಂಧಿಸಿದ ಶಾಲಾ ಅಧಿಕಾರಿಗಳನ್ನು ಕಂಡು ಅವರಿಗೆ ಎಚ್ ಐವಿ ಮತ್ತು ಏಡ್ಸ್ ನೊಂದಿಗೆ ಬದುಕುವ ವ್ಯಕ್ತಿಗಳಿಗೆ ತಾರತಮ್ಯ ಮಾಡದಂತೆ, ಕಳಂಕಿತರಂತೆ ಕಾಣದಿರಲು ಸರಕಾರದ ಆದೇಶವಿರುವುದನ್ನು ತಿಳಿಸಬೇಕು ಎಂದು ಸೂಚಿಸಿದರು . ಏಡ್ಸ್ ನಿಯಂತ್ರಣ ಸೊಸೈಟಿಯು ವಿನೀತನು ಇನ್ನು ಮುಂದೆ ಶಾಲೆಯಲ್ಲಿ ಯಾವದೆ ಕಳಂಕಕ್ಕೆ ಒಳಗಾಗದಂತೆ ಖಾತ್ರಿ ಪಡಿಸಲು ಕ್ರಮ ತೆಗೆದು ಕೊಳ್ಳಲು ನತಿಳಿಸಿತು. ಶಾಲೆಯು ಆದೇಶವನ್ನು ಪಾಲಿಸಲು ನಿರಾಕರಿಸಿದರೆ ಅದನ್ನು ಮುಚ್ಚಿಸ ಬೇಕೆಂದು ಜಯೂರಿಗಳು ತಿಳಿಸಿದರು.

ಚಂದ್ರಾಣಿ (6) ಅನಾಥಳು. ಎಚ್ ಐವಿ ಪಾಜಿಟಿವ್. ಅವಳು ತನ್ನ ತಾತ ಅಜ್ಜಿಯರ ಜತೆ ವಾಸಿಸಿವಳು.ಅವಳು ಎ ಆರ್ ಟಿಗೆ ನೊಂದಾಯಿಸಿರುವಳು. ಅವಳಿಗೆ ಅವನ್ನು ಪಡೆಯಲಾಗಿಲ್ಲ, ಏಕೆಂದರೆ ಆಸ್ಪತ್ರೆಯಲ್ಲಿನ ಉಪಕರಣವು ದುರಸ್ತಿಯಲ್ಲಿರುವುದರಿಂದ ಅವಳಿಗೆ ಇನ್ನೂ ಸಿಡಿ ಕೌಂಟು ಪರೀಕ್ಷೆ ಮಾಡಿಸಿಲ್ಲ. ಚಂದ್ರಮಣಿಯು ಅಗಾಗ ಅವಕಾಶವಾದಿ ಸೋಂಕುಗಳಿಂದ(ಒಐ) ಬಾಧಿತಳಾಗುವುಳು. ಅವಳನ್ನು ಕುಟುಂಬದಲ್ಲಿ, ಶಾಲೆಯಲ್ಲಿ,ಸಮುದಾಯದಲ್ಲಿ ಕಳಂಕಿತಳಂತೆ ನೋಡಲಾಗುತ್ತಿದೆ. ಇದು ಅವಳನ್ನು ಖಿನ್ನಳಾಗಿಸಿದೆ ಮತ್ತ ದುಃಖಿಯನ್ನಾಗಿಸಿದೆ. ಅವಳ ತಾತ ಅಜ್ಜಿ ಅವಳನ್ನು ಯಾವುದಾದರೂ ಸಂಸ್ಥೆಗೆ ಸೇರಿಸ ಬಯಸುವರು ಕಾರಣ ಅವರಿಗೆ ಅವಳನ್ನು ನೋಡಿಕೊಳ್ಳುವದು ಸಾಧ್ಯವಾಗುತ್ತಿಲ್ಲ.

ಸಾರ್ವಜನಿಕ ವಿಚಾರಣೆಯಲ್ಲಿ ಜ್ಯೂರಿಗಳು NACO ಗೆ ಸರಕಾರಿ ಅಸ್ಪತ್ರೆಯ ಸಿಡಿ 4 ಯಂತ್ರವು ಕೆಲಸ ಮಾಡದಿರುವ ಕಾರಣವಮನ್ನು ತಿಳಿಯಲು ಮತ್ತು ಚಂದ್ರಾಣಿ ಆದಷ್ಟು ಬೇಗ ಸಿಡಿ 4 ಪರೀಕ್ಷೆಗೆ ಒಳಗಾಗವಂತೆ ಮಾಡಲುನಿರ್ದೇಶನ ನೀಡಿತು. ಅವಳ ಹದಗೆಡುತ್ತಿರುವ ಆರೋಗ್ಯ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಜ್ಯೂರಿಗಳು ಏಡ್ಸ್ ನಿಯಂತ್ರಣ ಸೊಸೈಟಿಯು ಅವಳಿಗೆ ಎ ಆರ್ ಟಿ ಪ್ರಾರಂಭಿಸ ಬೇಕೆಂದು ಸೂಚಿಸಿತು. ಆದಷ್ಟು ಬೇಗ ಯಾವುದಾದರೂ ಒಂದು ಸಂಸ್ಥೆಗೆ ಆರು ವರ್ಷದ ಆ ಮಗುವನ್ನು ಸೇರಿಸಬೇಕೆಂದು ಸಲಹೆ ಮಾಡಿತು.

ಮೂಲ: ಪೋರ್ಟಲ್ ತಂಡ

2.99152542373
sowmya Jul 07, 2016 04:25 PM

ಅಬ್ಬಾ ತುಂಬಾ ಕಷ್ಟ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top