ಹತ್ತು ಸಾಧಿತ ಸಂಖ್ಯೆಗಳ ಒಟ್ಟು ಮೊತ್ತವನ್ನು ಹೇಳುವ ಮ್ಯಾಜಿಕ್
ಸೂಚನೆಗಳು
ಯಾವುದೋ ಒಂದು ಸಂಖ್ಯೆ ಬರೆಯಿರಿ ಅದು ಒಂದಂಕಿಯದ್ದಾಗಿರಬಹುದು ಅಥವಾ ಎರಡಂಕಿಯದ್ದಾಗಿರಬಹುದು. ಈಗ ಇನ್ನೊಂದು ಅಂಕಿಯನ್ನು ಕೆಳಗೆ ಬರೆಯಿರಿ . ಮೂರನೇ ಸಂಖ್ಯೆ ಮೊದಲ ಎರಡು ಸಂಖ್ಯೆಗಳ ಮೊತ್ತ ಆಗಿರಬೇಕು. ನಾಲ್ಕನೇ ಸಂಖ್ಯೆಯಾಗಿ ಎರಡು ಮತ್ತು 3 ನೇ ಸಂಖ್ಯೆಗಳ ಮೊತ್ತ ಬರೆಯಿರಿ. 5ನೇ ಸಂಖ್ಯೆ ಆಗಿ 3 ಮತ್ತು 4 ನೇ ಸಂಖ್ಯೆಗಳ ಮೊತ್ತ ಬರೆಯಿರಿ. ಹೀಗೆ ಒಟ್ಟು ಹತ್ತನೇ ಹಂತ ಬರುವ ವರೆಗೂ ಬರೆಯಿರಿ.
ಈಗ ವಾಸ್ತ್ತವವಾಗಿ ಕೂಡದೇ ಈ ಹತ್ತು ಸಂಖ್ಯೆಗಳ ಮೊತ್ತವನ್ನು ಹೇಳಬೇಕು. ಸಾಧ್ಯವೇ? ಉದಾ: 5 ಮತ್ತು 3 ಎಂಬ ಎರಡು ಅಂಕಿಗಳನ್ನು ಮೊದಲ ಎರಡು ಅಂಕಿಗಳಾಗಿ ಇಟ್ಟುಕೊಳ್ಳೋಣ. ಈಗ ಉಳಿದ 8 ಅಂಕಿಗಳನ್ನು ಸಮಸ್ಯೆಯಲ್ಲಿ ಹೇಳಿದಂತೆ ಈ ಕೆಳಗಿನಂತೆ ಸಾಧಿಸಿ ಪಡೆಯಿರಿ.
ಈಗ ಉತ್ತರವನ್ನು 7 ನೇ ಹಂತದಲ್ಲೇ ಪಡೆಯಬಹುದು. ಸಮಸ್ಯೆ ಬಿಡಿಸುವವನು 7 ನೇ ಹಂತಕ್ಕೆ ಬಂದಾಗಲೇ ನೀವು ಉತ್ತರ ಕಂಡುಕೊಳ್ಳಬಹುದು. 7ನೇ ಹಂತಕ್ಕೆ ಬಂದಾಗ 7 ನೇ ಹಂತದ ಸಂಖ್ಯೆಯನ್ನು 11 ರಿಂದ ಗುಣಿಸಿರಿ. ಬರುವ ಉತ್ತರವೇ ಒಟ್ಟು ಸಂಖ್ಯೆಗಳ ಮೊತ್ತವಾಗಿರುತ್ತದೆ. ನೀವು ಉತ್ತರ ಹೇಳಿದಾಗ ನಿಮ್ಮ ಜೊತೆ ಆಟಗಾರನಿಗೆ ಆಗುವ ಆಶ್ಚರ್ಯ ಅಷ್ಟಿಷ್ಟಲ್ಲ. ಉತ್ತರ: ಒಟ್ಟು ಮೊತ್ತವನ್ನು ಹೀಗೆ ಪಡೆಯಬಹುದು: 49 (7ನೇ ಹಂತದಲ್ಲಿರುವ ಸಂಖ್ಯೆ) x 11 = 539.
ಊಹಿಸಿದ ಸಂಖ್ಯೆ ಮತ್ತು ಅದರ ತಿರುಗುಮುರುಗು ಸಂಖ್ಯೆಗಳ ಉತ್ತರವನ್ನು ಸರಿಯಾಗಿ ಹೇಳಿ ನಿಮ್ಮ ಸ್ನೇಹಿತ ಬೆರಗಾಗುವಂತೆ ಮಾಡಿರಿ.
ಸೂಚನೆ: ಯಾವುದೇ ಮೂರಂಕಿಯ ಸಂಖ್ಯೆಯನ್ನು ಮನಸ್ಸಿನಲ್ಲಿ ಊಹಿಸಲು ಹೇಳಿ. ಆ ಸಂಖ್ಯೆಯನ್ನು ತಿರುಗುಮುರುಗು ಮಾಡಿ ಮೊದಲ ಸಂಖ್ಯೆಯನ್ನು ಅದರಿಂದ ಕಳೆಯಲು ಹೇಳಿರಿ. ಕೊನೆಯ ಎರಡು ಅಂಕಿ ಅಥವಾ ಮೊದಲ ಎರಡು ಅಂಕಿಗಳನ್ನು ಬಿಟ್ಟು ಉಳಿದ ಒಂದು ಅಂಕಿಯನ್ನು ಹೇಳಲು ಹೇಳಿರಿ. ಈಗ ಆ ರೀತಿ ಹೇಳಿದ ಒಂದು ಅಂಕಿಯಿಂದ ನಿಮ್ಮ ಸ್ನೇಹಿತನ ಮನಸ್ಸಿನಲ್ಲಿ ಇದ್ದ ಸಂಖ್ಯೆ ಮತ್ತು ಅದರ ತಿರುಗುಮುರುಗು ಸಂಖ್ಯೆ ಇವೆರಡರ ನಡುವಿನ ವ್ಯತ್ಯಾಸವನ್ನು ಲೆಕ್ಕ ಹಾಕಿರಿ. ಸಾಧ್ಯವೇ?
ಉತ್ತರ: ಹೀಗೆ ಬರುವ ವ್ಯತ್ಯಾಸದ ಮಧ್ಯದ ಅಂಕಿಯಾವಾಗಲೂ 9 ಆಗಿರುತ್ತದೆ. ಇನ್ನು ಆತ ಹೇಳಿದ ಸಂಖ್ಯೆ ಮೊದಲ ಅಂಕಿ ಆಗಿದ್ದು 4 ಆಗಿದ್ದರೆ ಕೊನೆಯ ಅಂಕಿಯು ತಪ್ಪದೇ 5 ಆಗಿರುತ್ತದೆ. ಅಂದರೆ 9-4=5. ಈಗ ಒಟ್ಟು ಉತ್ತರ 495. ಉದಾ: ____ ನಿಮ್ಮ ಸ್ನೇಹಿತ ಊಹಿಸಿದ ಸಂಖ್ಯೆ -257 ಅದರ ತಿರುಗು ಮುರುಗು ಸಂಖ್ಯೆ 752. 752-257 =495. ಈಗ ಮೊದಲ ಎರಡು ಅಂಕಿಗಳನ್ನು ಅಂದರೆ 4 ಮತ್ತು 9 ನ್ನು ಒಡೆದು ಹಾಕಿದ್ದರೆ ಉಳಿದ ಸಂಕ್ಯೆ 5 ಅದನ್ನು ನಿಮ್ಮ ಸ್ನೇಹಿತ ಹೇಳುತ್ತಾನೆ. ಈಗ 9 ರಿಂದ 5 ನ್ನು ಕಳೆದರೆ 4 ಬರುತ್ತದೆ. ಇದೇ ಮೊದಲನೇ ಅಂಕಿ ಮಧ್ಯದ ಅಂಕಿ ಯಾವಾಗಲೂ 9. ಇನ್ನು ಕೊನೆಯ ಅಂಕಿ ನಿಮ್ಮ ಸ್ನೇಹಿತನೇ ಹೇಳಿದ್ದಾನೆ. ಉತ್ತರ: 495. ಅಥವಾ ಮೊದಲನೇ ಅಂಕಿಯನ್ನು ಮಾತ್ರ ಹೇಳಿದ್ದರೆ ಕೊನೆಯ ಅಂಕಿ 9-4=5 ಹೀಗೆ ಅವುಗಳ ವ್ಯತ್ಯಾಸವನ್ನು 495 ಎಂದು ಹೇಳಬಹುದು.
ಸೂಚನೆ 5+5+5=550 ಎಂದು ತೋರಿಸಿ ಕೊಡಿ. (ನೀವು ಒಂದು ಗೆರೆ ಮಾತ್ರ ಎಳೆಯ ಬಹುದು). ಉತ್ತರ: 545+5=550 + ಚಿಹ್ನೆಗೆ ಒಂದು ಗೆರೆ ಎಳೆದರೆ ಅದು 4 ಆಗುತ್ತದೆ. ಆಗ ಗಣಿತದ ಸಮೀಕರಣ ಸರಿಯಾಗುತ್ತದೆ.
ಸೂಚನೆ: ಒಂದು ತ್ರ್ರಿಬುಜದ ಮೂರು ಬದಿಗಳಲ್ಲಿ ಮತ್ತು ಮೂರೂ ತುದಿಗಳಲ್ಲಿ 1 ರಿಂದ 6 ಅಂಕಿಗಳನ್ನು ಬಳಸಿದ ಅಂಕಿಗಳನ್ನೇ ಮತ್ತೆ ಬಳಸದೇ ಮತ್ತು ಪ್ರತಿಯೊಂದು ಮಗ್ಗುಲಲ್ಲೂ ಇರದ ಸಂಖ್ಯೆಗಳು 10, 11, 12 ಆಗುವ ರೀತಿಯಲ್ಲಿ ಬರೆಯಿರಿ.
ಮೂಲ : ಟೀಚರ್ಸ್ ಆಫ್ ಇಂಡಿಯಾ
ಕೊನೆಯ ಮಾರ್ಪಾಟು : 2/15/2020