অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ರೇಖಾ ಗಣಿತ ,ಸಂಖ್ಯಾ ಶಾಸ್ತ್ರ

ರೇಖಾ ಗಣಿತ ,ಸಂಖ್ಯಾ ಶಾಸ್ತ್ರ

  1. ಪೀಠಿಕೆ
  2. ವ್ಯಾಖ್ಯೆಗಳು ಮತ್ತು ಕೆಲವು ಮೂಲಭೂತ ರಚನೆಗಳು
  3. ದತ್ತ ಸರಳರೇಖೆಗೆ ದತ್ತ ಬಾಹ್ಯ ಬಿಂದುವಿನಿಂದ ಲಂಬವನ್ನೆಳೆಯುವುದು
  4. ಕೋನಾರ್ಧಕ ರೇಖೆಯನ್ನು ಎಳೆಯುವುದು
  5. ಸ್ವಯಂಸಿದ್ಧಗಳು ಸ್ವೀಕೃತ ಸಿದ್ಧಾಂತಗಳು ಮತ್ತು ಹೇಳಿಕೆಗಳು
  6. ಹೇಳಿಕೆಗಳು
  7. ಸಂಖ್ಯಾಶಾಸ್ತ್ರದ ಪರಿಚಯ
  8. ಸಂಖ್ಯಾ ಶಾಸ್ತ್ರದ ಕೆಲವು ಪದಗಳು
  9. ಅಂಕಿ ಅಂಶಗಳನ್ನು ನಕ್ಷೆಗಳ ಮೂಲಕ ಪ್ರತಿನಿಧಿಸುವ ವಿಧಾನ
  10. ಸ್ತಂಭಾಲೇಖಾ
  11. ಸ್ತಂಭಾಲೇಖ ಮತ್ತು ಪೈ ನಕ್ಷೆಯ ರಚನೆ
  12. ರ್ಗೀಕರಿಸದ ದತ್ತಾಂಶಗಳಲ್ಲಿಮಧ್ಯಕ ಮಧ್ಯಾಂಕ, ಬಹುಲಕ(ರೂಢಿಬೆಲೆ)
  13. ಮೌಲ್ಯಗಳ ಹರವು ಅಥವಾ ವಿಚಲನೆ
  14. ಹರವಿನ ಅಳತೆಗಳು : ವ್ಯಾಪ್ತಿ, ವಿಚಲನೆ
  15. ಆವೃತ್ತಿ ವಿತರಣೆಯನ್ನು ನಕ್ಷೆಯಲ್ಲಿ ನಿರೂಪಿಸುವುದು
  16. ಆವರ್ತಾಂಕ ಬಹುಭುಜ
  17. ಸಂಚಿತ ಆವೃತ್ತಿ ವಕ್ರ ರೇಖೆ
  18. ಮಾನಕ ವಿಚಲನೆ
  19. ಪರ್ಯಾಯ ವಿಧಾನ: ಸರಾಸರಿಯು ಪೂರ್ಣಾಂಕವಾಗದೇ ಇರುವಾಗ ಕಂಡುಹಿಡಿಯುವುದು
  20. ವರ್ಗೀಕರಿಸಿದ ದತ್ತಾಂಕಗಳಲ್ಲಿ ಮಾನಕ ವಿಚಲನೆ
  21. ವರ್ಗೀಕೃತ ದತ್ತಾಂಶಗಳಲ್ಲಿ ಮಾನಕ ವಿಚಲನೆಯನ್ನು ಕಂಡು ಹಿಡಿಯುವ ಕ್ರಮ
  22. ಕಲಿತ ಸಾರಾಂಶ
  23. ಕಲಿತ  ಸಾರಾಂಶ
  24. ಘಾತಾಂಕಗಳು
  25. ಮೇಲಿನ ಉದಾಹರಣೆಯಿಂದ ಘಾತಾಂಕದ ಮೊದಲ ನಿಯಮ (Product Law) ವನ್ನು ಹೀಗೆ ಬರೆಯಬಹುದು
  26. ಮೇಲಿನ ಉದಾಹರಣೆಗಳಿಂದ ಘಾತಾಂಕದ 2 ನೇ ನಿಯಮವನ್ನು (Quotient Law) ಹೀಗೆ ಬರೆಯಬಹುದು
  27. ಮೇಲಿನ ಉದಾಹರಣೆಯಿಂದ ಘಾತಾಂಕಗಳ 3 ನೇ ನಿಯಮವನ್ನು (Power law) ಹೀಗೆ ಬರೆಯಬಹುದು
  28. ಈ ಮೇಲಿನ ಉದಾಹರಣೆಯಿಂದ ಘಾತಾಂಕಗಳ 4 ನೇ ನಿಯಮವನ್ನು ಹೀಗೆ ಬರೆಯಬಹುದು
  29. ಈ ಮೇಲಿನ ಉದಾಹರಣೆಯಿಂದ ಘಾತಾಂಕಗಳ 5 ನೇ ನಿಯಮವನ್ನು ಹೀಗೆ ಬರೆಯಬಹುದು
  30. ಕಲಿತ ಸಾರಾಂಶ
  31. ಹೆಚ್ಚಿನ ಕಲಿಕೆಗಾಗಿ
  32. ಬೀಜೋಕ್ತಿಗಳ ಗುಣಾಕಾರ
  33. ಕಲಿತ  ಸಾರಾಂಶ
  34. ಬೀಜೋಕ್ತಿಗಳ ಮ.ಸಾ.ಅ ಮತ್ತು ಲ.ಸಾ.ಅ(HCF(GCD) and LCM of Algebraic terms):
  35. ಲ.ಸಾ.ಅ ಕಂಡು ಹಿಡಿಯುವುದು
  36. ಮ.ಸ.ಅ ದ ಉಪಯೋಗ
  37. ತ್ರಿಪದೋಕ್ತಿಗಳನ್ನು ಅಪವರ್ತಿಸುವುದು
  38. ರೇಖಾತ್ಮಕ ಸಮೀಕರಣಗಳು
  39. ಬೀಜೋಕ್ತಿಗಳ ಅಪವರ್ತಿಸುವಿಕೆ
  40. ಮೂರು ದ್ವಿಪದೋಕ್ತಿಗಳ ಗುಣಲಬ್ಧ
  41. ಕಲಿತ ಸಾರಾಂಶ
  42. ಬೀಜೋಕ್ತಿಗಳ ಮ.ಸಾ.ಅ & ಲ.ಸಾ.ಅ
  43. ಬಹುಪದಗಳ ಭಾಗಾಕಾರ
  44. ಏಕಪದವನ್ನು ಏಕಪದದಿಂದ ಭಾಗಿಸುವುದು
  45. ಏಕಪದವನ್ನು ಏಕಪದದಿಂದ ಭಾಗಿಸುವಾಗ ಅನುಸರಿಸುವ ಹಂತಗಳು
  46. ಬಹುಪದವನ್ನು ಏಕಪದದಿಂದ ಭಾಗಿಸುವಾಗ ಅನುಸರಿಸುವ ಹಂತಗಳು
  47. ಬಹುಪದವನ್ನು ದ್ವಿಪದದಿಂದ ಭಾಗಿಸುವುದು
  48. ಮಾರ್ಪು
  49. ನೇರ ಮಾರ್ಪು
  50. ವಿಲೋಮ  ಮಾರ್ಪು
  51. ಜಂಟಿ ಮಾರ್ಪು
  52. ಕೆಲಸ,ಕೆಲಸಗಾರರು,ದಿನಗಳು ಮತ್ತು ಗಂಟೆಗಳು
  53. ಏಕಕಾಲಿಕ ರೇಖಾತ್ಮಕ ಸಮೀಕರಣಗಳನ್ನು ಬಿಡಿಸುವುದು
  54. ಸಹ ಅಪವರ್ತನಗಳನ್ನು ಸಮಗೊಳಿಸಿ,ಹೋಗಲಾಡಿಸುವ ಕ್ರಮ
  55. ಕಲಿತ  ಸಾರಾಂಶ
  56. ಹೆಚ್ಚಿನ ಮಾಹಿತಿ
  57. ಬೈಜಿಕ ಸಂರಚನೆ
  58. ಆವೃತ ಗುಣಕ್ಕೂ ದ್ವಿಮಾನ ಕ್ರಿಯೆಗೂ ಇರುವ ಸಂಬಂಧ
  59. ಬಹುಪದಗಳ ಭಾಗಾಕಾರ
  60. ಏಕಪದವನ್ನು ಏಕಪದದಿಂದ ಭಾಗಿಸುವುದು
  61. ಏಕಪದವನ್ನು ಏಕಪದದಿಂದ ಭಾಗಿಸುವಾಗ ಅನುಸರಿಸುವ ಹಂತಗಳು
  62. ಬಹುಪದವನ್ನು ಏಕಪದದಿಂದ ಭಾಗಿಸುವುದು
  63. ಬಹುಪದವನ್ನು ಏಕಪದದಿಂದ ಭಾಗಿಸುವಾಗ ಅನುಸರಿಸುವ ಹಂತಗಳು
  64. ಬಹುಪದವನ್ನು ದ್ವಿಪದದಿಂದ ಭಾಗಿಸುವುದು
  65. ಸಮೀಕರಣದ ಮೂಲಗಳು/ಬಹುಪದೋಕ್ತಿಯ ಶೂನ್ಯತೆಗಳು
  66. ಭಾಗಾಕಾರದ ಕುರಿತು
  67. ಅಪವರ್ತನ ಪ್ರಮೇಯ
  68. ಸಂಶ್ಲೇಷಿತ ಭಾಗಾಕಾರ

ಪೀಠಿಕೆ

ರೇಖಾಗಣಿತವು ಆಕಾಶದಲ್ಲಿರುವ ವಸ್ತುಗಳ ಅಥವಾ ನಮ್ಮ ಸುತ್ತ ಮುತ್ತ ಕಂಡು ಬರುವ ಆಕೃತಿಗಳ ಗಾತ್ರ ಆಕಾರ, ರಚನೆ ಮತ್ತು ಲಕ್ಷಣಗಳನ್ನು ಅಧ್ಯಯನ ಮಾಡುವ ಗಣಿತ ಶಾಸ್ತ್ರದ ಒಂದು ಭಾಗವಾಗಿದೆ. ಭಾರತದಲ್ಲಿ ವೇದಗಳ ಕಾಲದಲ್ಲಿ ಯಜ್ಞ ವೇದಿಕೆ ಮತ್ತು ಯಜ್ಞಕುಂಡಗಳ ರಚನೆಯಲ್ಲಿ ರೇಖಾಗಣಿತದ ಜ್ಞಾನವನ್ನು ಬಳಸುತ್ತಿದ್ದರು. ಆ ಕಾಲದಲ್ಲಿಯೂ ಅವರು ಖಗೋಳ ಶಾಸ್ತ್ರದಲ್ಲಿ ಎಷ್ಟು ಪರಿಣಿತರಾಗಿದ್ದರೆಂದರೆ, ಅವರು ಅನುಸರಿಸಿದ ಲೆಕ್ಕಾಚಾರದ ಕ್ರಮವನ್ನು ಇಂದಿಗೂ ಅನುಸರಿಸಿ, ಹಲವು ವರ್ಷಗಳ ಮೊದಲೇ, ಗ್ರಹಣ ಸಂಭಿಸುವ ದಿನಾಂಕ ಮತ್ತು ಸಮಯಗಳನ್ನು (ಆರಂಭ, ಮಧ್ಯ, ಅಂತಿಮ ಕಾಲ) ಲೆಕ್ಕಾಚಾರ ಮಾಡಿ ನಿಖರವಾಗಿ ಹೇಳುತ್ತಾರೆ.

  • ಸ್ಕೇಲ್ ಬಳಸದೇ ಕೆಳಗೆ ಕೊಟ್ಟಿರುವ ಗೆರೆಯನ್ನು ಸಮನಾಗಿ 2 ಭಾಗ ಮಾಡುವುದು ಹೇಗೆ?
  • ಟ್ಯಾಂಕರ್ ಮೂಲಕ ಸರಬರಾಜು ಮಾಡುವ ಪೆಟ್ರೋಲ್/ಹಾಲು/ನೀರು ಇವುಗಳನ್ನು ಗಳನ್ನು ಶೇಖರಿಸಿಡಲು ಎಷ್ಟು ಗಾತ್ರದ(ಲೀಟರ್) ಟ್ಯಾಂಕ್ ಕಟ್ಟಿಸಬೇಕು?
  • ನಿಮ್ಮ ಮನೆಯಲ್ಲಿ ಅಮ್ಮ ಮತ್ತು ಅಜ್ಜಿಯಂದಿರು ಅಥವಾ ಅಂಗಡಿಯವರು ಬರ್ಫಿಯನ್ನು ಆಯತಾಕೃತಿಯಲ್ಲಿ ಕತ್ತರಿಸುವ ಬದಲು ಸಮಾಂತರ ಚತುರ್ಭುಜಾಕೃತಿಯಲ್ಲಿ ಏಕೆ ಕತ್ತರಿಸುತ್ತಾರೆ?

ಇಂತಹ ಹಲವು ಪ್ರಶ್ನೆಗಳಿಗೆ ರೇಖಾಗಣಿತದಲ್ಲಿ ಉತ್ತರ ಸಿಗುತ್ತದೆ.

ವ್ಯಾಖ್ಯೆಗಳು ಮತ್ತು ಕೆಲವು ಮೂಲಭೂತ ರಚನೆಗಳು

ವ್ಯಾಖ್ಯೆಗಳು:

1. ‘ಕೋನ’ (Angle): ಉಭಯ ಸಾಮಾನ್ಯ ಆದಿ ಬಿಂದುವುಳ್ಳ ಎರಡು ಕಿರಣಗಳನ್ನೊಳಗೊಂಡ ಭಾಗವು ಒಂದು ಕೋನ. ಕೋನವನ್ನು ‘ಡಿಗ್ರಿ’ಯಲ್ಲಿ ಅಳೆಯುತ್ತಾರೆ (00ಯಿಂದ 3600)

ಸಾಮಾನ್ಯ ಬಿಂದುವನ್ನು ಶೃಂಗಬಿಂದು (vertex) ಎನ್ನುತ್ತೇವೆ. ಚಿತ್ರದಲ್ಲಿ B ಯು ಶೃಂಗ ಬಿಂದು. ABC ಕೋನ.

ಇದನ್ನು  ABC ಎಂದು ಬರೆಯುತ್ತೇವೆ. ಕೋನ ಮಾಪಕದ ಸಹಾಯದಿಂದ ಇದನ್ನು ಅಳೆದಾಗ,  ABC = 500 .

ABC =  CBA = 500 ಎನ್ನುವುದನ್ನು ಗಮನಿಸಿ.

 

ಸಂ.

ಕೋನದ ವಿಧ

ಕೋನದ ಅಳತೆ

ಬದಿಯ ಚಿತ್ರದಲ್ಲಿ ಉದಾಹರಣೆ

1

ಲಘುಕೋನ

00 ಯಿಂದ 900

AOC

2

ಲಂಬಕೋನ

= 900

 

3

ವಿಶಾಲಕೋನ

900 ಯಿಂದ 1800

ಚಿಕ್ಕ  COB( ಪ್ರದಕ್ಷಿಣ )

4

ಸರಳಕೋನ

= 1800( ಸರಳ ರೇಖೆಯ ಮೇಲಿನ ಕೋನ)

AOB

5

ಸರಳಾಧಿಕ ಕೋನ

1800 ಯಿಂದ 3600

ದೊಡ್ಡ  BOC(ಪ್ರದಕ್ಷಿಣ )

ದತ್ತ ಸರಳರೇಖೆಗೆ ದತ್ತ ಬಾಹ್ಯ ಬಿಂದುವಿನಿಂದ ಲಂಬವನ್ನೆಳೆಯುವುದು

ಹಂತ 1: ಕೊಟ್ಟ ಅಳತೆಯ AB ಸರಳ ರೇಖೆಯನ್ನು ಎಳೆಯಿರಿ. C ಯು ದತ್ತ ಬಾಹ್ಯಬಿಂದು.

ಹಂತ 2: C ಯನ್ನು ಕೇಂದ್ರವಾಗಿಟ್ಟುಕೊಂಡು ಅನುಕೂಲವಾದ ತ್ರಿಜ್ಯದಿಂದ AB ರೇಖೆಯನ್ನು ಎರಡು ಪ್ರತ್ಯೇಕ ಬಿಂದುಗಳು X, Y ಗಳಲ್ಲಿ ಕಡಿಯುವಂತೆ ಒಂದು ಕಂಸವನ್ನೆಳೆಯಿರಿ.

ಹಂತ 3: X ಮತ್ತು Y ಗಳನ್ನು ಕೇಂದ್ರವಾಗಿಟ್ಟುಕೊಂಡು XY ಯ ಅರ್ಧಕ್ಕಿಂತ ಹೆಚ್ಚಿನ ತ್ರಿಜ್ಯದಿಂದ ಎರಡು ಕಂಸಗಳನ್ನು ಪರಸ್ಪರ Z ನಲ್ಲಿ ಕಡಿಯುವಂತೆ ಎರಡು ಕಂಸಗಳನ್ನೆಳೆಯಿರಿ.

ಹಂತ 4: C ಮತ್ತು Z ಗಳನ್ನು ಜೋಡಿಸಿ. CZ ರೇಖೆಯು AB ಯನ್ನು L ಬಿಂದುವಿನಲ್ಲಿ ಛೇದಿಸಲಿ.CLಎಂಬುದು ABಗೆ ಲಂಬವಾಗಿರುತ್ತದೆ.

ಗಮನಿಸಿ: ದತ್ತ ಸರಳರೇಖೆಯ ಮೇಲೆಯೇ ಇರುವ ಬಿಂದುವಿನಲ್ಲಿ ಲಂಬವನ್ನು ಎಳೆಯುವ ಕ್ರಮವೂ ಹೀಗೆಯೇ ಆಗಿದೆ.(Cಯು AB ಯ ಮೇಲೆ L ನಂತೆಯೇ ಒಂದು ಬಿಂದು ಆಗಿರಬಹುದು)

 

ಗಮನಿಸಿ: ಬಾ.ಬಾ.ಬಾ ಮತ್ತು ಬಾ.ಕೋ.ಬಾ ಸ್ವಯಂಸಿದ್ಧ (ಅಧ್ಯಾಯ 6.4.3) ದಂತೆ  CLY = CLX = 900 ಎಂದು ಸಾಧಿಸಬಹುದು.

ದತ್ತ ಸರಳರೇಖೆಯ ಲಂಬ ದ್ವಿಭಾಜಕವನ್ನೆಳೆಯುವುದು (Construction of Perpendicular bisector to a line):

ಹಂತ 1 : ದತ್ತ ಅಳತೆಯ AB ಸರಳರೇಖೆಯನ್ನೆಳೆಯಿರಿ

ಹಂತ 2: Aಯನ್ನು ಕೇಂದ್ರವಾಗಿಟ್ಟುಕೊಂಡು, AB ಯ ಅರ್ಧಕ್ಕಿಂತ ಹೆಚ್ಚಿನ ತ್ರಿಜ್ಯದಿಂದ ABಯ ಎರಡೂ ಬದಿಗಳಲ್ಲಿಒಂದೊಂದು ಕಂಸಗಳನ್ನೆಳೆಯಿರಿ. B ಬಿಂದುವನ್ನು ಕೇಂದ್ರವಾಗಿಟ್ಟುಕೊಂಡು, ಅದೇ ತ್ರಿಜ್ಯದಿಂದ ಮುಂಚಿನ ಕಂಸಗಳನ್ನುX ಮತ್ತು Y ಗಳಲ್ಲಿ ಕಡಿಯುವಂತೆ ಇನ್ನೆರಡು ಕಂಸಗಳನ್ನೆಳೆಯಿರಿ.

ಹಂತ 3: XY ಯನ್ನು ಸೇರಿಸಿ. ಅದು ABಯನ್ನುL ನಲ್ಲಿ ಛೇದಿಸಿದೆ. ಈಗ XY ಯು AB ಯನ್ನು ಅರ್ಧಿಸುತ್ತದೆ,ABಯು XY ಗೆ ಲಂಬವಾಗಿದೆ. L ಎಂಬುದು ABಯ ಮಧ್ಯಬಿಂದು

 

ಗಮನಿಸಿ: ಬಾ.ಬಾ.ಬಾ. ಮತ್ತು ಬಾ.ಕೋ.ಬಾ. ಸ್ವಯಂಸಿದ್ಧ (ಅಧ್ಯಾಯ 6.4.3)ಆಧಾರದಲ್ಲಿ AL=BL and  ALY = YLB = 900 ಎಂದು ಸಾಧಿಸಬಹುದು.

ಕೋನಾರ್ಧಕ ರೇಖೆಯನ್ನು ಎಳೆಯುವುದು

ಹಂತ 1: ಕೋನಮಾಪಕದ ಸಹಾಯದಿಂದ ದತ್ತ ಅಳತೆಯ   CAB ರಚಿಸಿ.

ಹಂತ 2: A ಯನ್ನು ಕೇಂದ್ರವಾಗಿಟ್ಟುಕೊಂಡು, ಅನುಕೂಲವಾದ ತ್ರಿಜ್ಯದ ಸಹಾಯದಿಂದ,, AB ಮತ್ತುACಗಳನ್ನುP ಮತ್ತು Q ಬಿಂದುಗಳಲ್ಲಿ ಛೇದಿಸುವಂತೆ ಕಂಸವನ್ನೆಳೆಯಿರಿ.

ಹಂತ 3: ಈಗ P ಮತ್ತು Q ಕೇಂದ್ರವಾಗಿಟ್ಟುಕೊಂಡು PQ ಅರ್ಧಕ್ಕಿಂತ ಹೆಚ್ಚಿನ ತ್ರಿಜ್ಯದಿಂದ ಎರಡು ಕಂಸಗಳನ್ನು R ನಲ್ಲಿ ಕಡಿಯುವಂತೆ ಎಳೆಯಿರಿ.

ಹಂತ 4: ARಜೋಡಿಸಿ.AR ರೇಖೆಯು  CABಯ ಕೋನಾರ್ಧಕ ರೇಖೆ. ( CAR = RAB)

 

ಗಮನಿಸಿ: ಬಾ.ಬಾ.ಬಾ. ಮತ್ತು ಬಾ.ಕೋ.ಬಾ. ಸ್ವಯಂಸಿದ್ಧ ಸಹಾಯದಿಂದ (ಅಧ್ಯಾಯ 6.4.3)   CAR = RAB ಎಂದು ಸಾಧಿಸಬಹುದು.

ಸ್ವಯಂಸಿದ್ಧಗಳು ಸ್ವೀಕೃತ ಸಿದ್ಧಾಂತಗಳು ಮತ್ತು ಹೇಳಿಕೆಗಳು

ಸ್ವಯಂಸಿದ್ಧಗಳು

ರೇಖಾಗಣಿತದಲ್ಲಿ ಕೆಲವು ವಿಷಯಗಳನ್ನು ಯಾವುದೇ ಚರ್ಚೆ ಮತ್ತು ಸಾಧನೆಗಳಿಲ್ಲದೆ ಒಪ್ಪಿಕೊಳ್ಳಬೇಕಾಗುತ್ತದೆ. ಇವುಗಳನ್ನು ‘ಸ್ವಯಂಸಿದ್ಧಗಳು’ ಮತ್ತು

‘ಸ್ವೀಕೃತ ಸಿದ್ಧಾಂತಗಳು’ ಎನ್ನುತ್ತೇವೆ. ಸ್ವಯಂಸಿದ್ಧ ಎಂದರೆ ಹೇಳಿಕೆ. ಈಸ್ವಯಂಸಿದ್ಧಗಳು ಗಣಿತ

ಶಾಸ್ತ್ರದ ಇತರ ವಿಭಾಗಗಳಿಗಿಂತ ರೇಖಾಗಣಿತದಲ್ಲೇ ಹೆಚ್ಚಾಗಿ ಬೇಕಾಗುತ್ತದೆ. ಇವೆಲ್ಲಾ ಸ್ವಯಂನಿರ್ಧರಿತ ಸತ್ಯಸಂಗತಿಗಳಾಗಿದೆ.

ಗಮನಿಸಿ:

  • ಸ್ವಯಂಸಿದ್ಧಗಳು ಪರಸ್ಪರ ವಿರುದ್ಧ ಹೇಳಿಕೆಗಳಾಗಬಾರದು.
  • ಸ್ವಯಂಸಿದ್ಧಗಳು ಸ್ವತಂತ್ರವಾಗಿರಬೇಕು.(ಒಂದು ಸ್ವಯಂಸಿದ್ಧದ ಆಧಾರದಿಂದ ಇನ್ನೊಂದು ಸ್ವಯಂಸಿದ್ಧ ಉದ್ಭವಿಸಿರಬಾರದು)
  • ಸ್ವಯಂಸಿದ್ಧಗಳು ಅತಿ ಕಡಿಮೆ ಸಂಖ್ಯೆಯಲ್ಲಿರಬೇಕು.

1.      ಬೀಜಗಣಿತದಲ್ಲಿ a = b ಮತ್ತು b = c ಆದರೆ  a = c ಆಗಿರುತ್ತದೆ.

 

ಚಿತ್ರ 1 ರಲ್ಲಿ AB ಯ ಉದ್ದ: 3 ಸೆಂ.ಮಿ

ಚಿತ್ರ 2 ರಲ್ಲಿ CD ಯ ಉದ್ದ: 3 ಸೆಂ.ಮಿ

ಆಗ ನಾವು AB=CD ಎಂದು ಹೇಳಬಹುದು.

ಚಿತ್ರ 3 ರಲ್ಲಿ  ABC = 500

ಚಿತ್ರ 4 ರಲ್ಲಿ  PQR = 500.

ಆಗ  ABC =  PQR.

ರೇಖಾಗಣಿತದಲ್ಲಿ ಈ ಗುಣವನ್ನು ಒಂದು ಸ್ವಯಂಸಿದ್ಧದಲ್ಲಿ ಹೀಗೆ ನಿರೂಪಿಸಬಹುದು:

6.2.1 ಸ್ವಯಂಸಿದ್ಧ 1: ಒಂದೇ ಅಂಶಕ್ಕೆ ಸಮವಾಗಿರುವ ಅಂಶಗಳು ಪರಸ್ಪರ ಸಮವಾಗಿರುತ್ತವೆ.

2.      ಬೀಜಗಣಿತದಲ್ಲಿ a = b ಆದರೆ  a+c = b+c ಆಗಿರುತ್ತದೆ.

 

ಚಿತ್ರ 5 ರಲ್ಲಿ AB=3 ಸೆಂ.ಮಿ BE=2 ಸೆಂ.ಮಿ

ಚಿತ್ರ 6 ರಲ್ಲಿ CD=3 ಸೆಂ.ಮಿ DF =2 ಸೆಂ.ಮಿ

BE ಮತ್ತು DF ಗಳನ್ನು ಅನುಕ್ರಮವಾಗಿ AB ಮತ್ತು CD ಗಳಿಗೆ ಸೇರಿದಾಗ,AE=AB+BE = 5 ಸೆಂ.ಮಿ  CF=CD+DF = 5 ಸೆಂ.ಮಿ

ಆಗ, AE=CF.

ಚಿತ್ರ 7 ರಲ್ಲಿ  ABC = 200 CBD = 400.

ಚಿತ್ರ 8 ರಲ್ಲಿ  PQR = 200 RQS = 400.

ಈಗ  CBD ಮತ್ತು  RQS ಗಳನ್ನು ಕ್ರಮವಾಗಿ

ABC ಮತ್ತು  PQR ಗಳಿಗೆ ಕೂಡಿದಾಗ,

ABD= 600 PQS = 600 ಆಗ,  ABD = PQS.

ರೇಖಾಗಣಿತದಲ್ಲಿ ಈ ಲಕ್ಷಣವನ್ನು ಒಂದು ಸ್ವಯಂಸಿದ್ಧದಲ್ಲಿ ಹೀಗೆ ಹೇಳುತ್ತೇವೆ:

ಸ್ವಯಂಸಿದ್ಧ 2: ಪರಸ್ಪರ ಸಮವಾದ ಎರಡು ಅಂಶಗಳಿಗೆ, ಸಮವಾದ ಅಂಶಗಳನ್ನು ಕೂಡಿಸಿದಾಗ, ಮೊತ್ತಗಳು ಸಮವಾಗುತ್ತವೆ.


3. ಬೀಜಗಣಿತದಲ್ಲಿ a = b ಆದರೆ  a-c = b-c ಆಗಿರುತ್ತದೆ.

 

ಚಿತ್ರ 9 ರಲ್ಲಿ AE=5 ಸೆಂ.ಮಿ BE=2 ಸೆಂ.ಮಿ

ಚಿತ್ರ 10 ರಲ್ಲಿ CF=5 ಸೆಂ.ಮಿ DF =2 ಸೆಂ.ಮಿ

ಈಗ BE ಮತ್ತು DF ಗಳನ್ನು ಕ್ರಮವಾಗಿ AE ಮತ್ತು CF ಗಳಿಂದ ಕಳೆದಾಗ,AB=AE-BE=3 ಸೆಂ.ಮಿ ಮತ್ತು CD=CF-DF=3 ಸೆಂ.ಮಿ

ಆಗ AB=CD ಎಂದು ಹೇಳಬಹುದು

ಚಿತ್ರ 11 ರಲ್ಲಿ  ABD = 600 CBD = 400.

ಚಿತ್ರ 12 ರಲ್ಲಿ  PQS = 600 RQS = 400.

ಈಗ  CBD ಮತ್ತು  RQS ಗಳನ್ನು ಕ್ರಮವಾಗಿ

ABD ಮತ್ತು  PQS ಗಳಿಂದ ಕಳೆದಾಗ,

ABC = 200 PQR = 200 DUÀ  ABC = PQR.

ರೇಖಾಗಣಿತದಲ್ಲಿ ಈ ಲಕ್ಷಣವನ್ನು ಒಂದು ಸ್ವಯಂಸಿದ್ಧದಲ್ಲಿ ಹೀಗೆ ಹೇಳುತ್ತೇವೆ.

6.2.1 ಸ್ವಯಂಸಿದ್ಧ 3: ಪರಸ್ಪರ ಸಮವಾದ ಎರಡು ಅಂಶಗಳಿಂದ ಸಮವಾದ ಎರಡು ಅಂಶಗಳನ್ನು ಕಳೆದಾಗ, ಉಳಿಯುವ ಅಂಶಗಳು ಸಮ.

4. ಬೀಜಗಣಿತದಲ್ಲಿ n > 1 ಆದಾಗ  a > (a/n)  ಆಗಿರುತ್ತದೆ.

 

ಚಿತ್ರ 13 ರಲ್ಲಿ AB ಯನ್ನು AE ಮತ್ತು EBಗಳೊಂದಿಗೆ ಹೋಲಿಸಿ.

ಇಲ್ಲಿ AB>AE , AB>BE.

ಚಿತ್ರ 14 ರಲ್ಲಿ  ABC ಯನ್ನು

ABD ಮತ್ತು  DBC ಯೊಂದಿಗೆ ಹೋಲಿಸಿ.

ABC > ABD ,  ABC > DBC.

ರೇಖಾಗಣಿತದಲ್ಲಿ ಈ ಲಕ್ಷಣವನ್ನು ಒಂದು ಸ್ವಯಂಸಿದ್ಧದಲ್ಲಿ ಹೀಗೆ ಹೇಳುತ್ತೇವೆ

6.2.1 ಸ್ವಯಂಸಿದ್ಧ 4: ಪೂರ್ಣವು ಅದರ ಭಾಗಕ್ಕಿಂತಲೂ ದೊಡ್ಡದು.

 

ಗಮನಿಸಿ: ಈ ಮೇಲಿನ ಎಲ್ಲಾ ಸ್ವಯಂಸಿದ್ಧಗಳನ್ನು ರೇಖಾಗಣಿತದಲ್ಲಿ ಮಾತ್ರವಲ್ಲದೆ ಗಣಿತದ ಎಲ್ಲಾ ವಿಭಾಗಗಳಲ್ಲೂ ಉಪಯೋಗಿಸುತ್ತೇವೆ.

6.2.2 ಆಧಾರ ಪ್ರತಿಜ್ಞೆಗಳು (ಸ್ವೀಕೃತ ಸಿದ್ಧಾಂತಗಳು)(Postulates):

ವ್ಯಾಖ್ಯೆ: ಸಾಮಾನ್ಯ ಒಪ್ಪಂದದಿಂದ ತೆಗೆದುಕೊಂಡ ‘ರೇಖಾಗಣಿತದ’ ಊಹಾ ಸತ್ಯಗಳನ್ನು ‘ಆಧಾರ ಪ್ರತಿಜ್ಞೆ’ ಎನ್ನುವರು. ಇವುಗಳು ಸ್ವಯಂಸಿದ್ಧದಂತೆಯೇ ಆಗಿವೆ. ಆದರೆ ಇವುಗಳ ಸತ್ಯಾಸತ್ಯತೆಯನ್ನು ಸೂಕ್ತವಾದ ರಚನೆ ಮತ್ತು ಅಳತೆಗಳಿಂದ ಪರಿಶೀಲಿಸಬಹುದು.

100 ಮೀಟರ್ ಉದ್ದದ ಓಟದ ಹಾದಿಗಳನ್ನು ಹೇಗೆ ಗುರುತಿಸುತ್ತೀರೆಂದು ನೀವು ಗಮನಿಸಿದ್ದೀರಾ?

ಕೆಲಸಗಾರರು 100 ಮೀಟರ್ ಅಂತರದಲ್ಲಿ ಎರಡು ಬಿಂದುಗಳನ್ನು ಗುರುತಿಸಿ, ಆ ಎರಡು ಬಿಂದುಗಳನ್ನು ಸುಣ್ಣದ ಪುಡಿ ಉಪಯೋಗಿಸಿ ಸರಳರೇಖೆಗಳನ್ನೆಳೆದು ಜೋಡಿಸುತ್ತಾರೆ. ಇಲ್ಲಿ ರೇಖಾಗಣಿತದ ಯಾವ ನಿಯಮಗಳನ್ನು  ಉಪಯೋಗಿಸಬೇಕಾಗಿದೆ?

 

 

ಪಕ್ಕದ ಸರಳ ರೇಖಾ ಚಿತ್ರದಲ್ಲಿ  A, B ಗಳು ಎರಡು ಬಿಂದುಗಳಾಗಿದ್ದು.

AB ಯು ಈ ಎರಡು ಬಿಂದುಗಳ ಮೂಲಕ ಹಾದು ಹೋಗುವ ಸರಳರೇಖೆಯಾಗಿದೆ.

 

ಮೇಲಿನ ಲಕ್ಷಣವನ್ನು ಒಂದು ಆಧಾರ ಪ್ರತಿಜ್ಞೆಯಿಂದ ಹೀಗೆ ಹೇಳಬಹುದು.

6.2.2 ಆಧಾರ ಪ್ರತಿಜ್ಞೆ 1: ಎರಡು ಬಿಂದುಗಳ ಮೂಲಕ ಒಂದೇ ಒಂದು ಸರಳರೇಖೆಯನ್ನೆಳೆಯಬಹುದು.

ಈ ಆಧಾರ ಪ್ರತಿಜ್ಞೆ ಗೊತ್ತಿಲ್ಲದೆಯೂ ಕೆಲಸಗಾರರು ಹೇಗೆ ಗೆರೆ ಎಳೆಯುತ್ತಾರೆ ನೋಡಿ!

ನೀವು ಸೈಕಲಿನ ಚಕ್ರದ ಮಧ್ಯದಲ್ಲಿ ಕಡ್ಡಿಗಳು ಜೋಡಿಸಿರುವುದನ್ನು ಗಮನಿಸಿದ್ದೀರಾ?

ಪಕ್ಕದ ಚಿತ್ರದಲ್ಲಿ O ಚಕ್ರದ ಮಧ್ಯಬಿಂದು.

ಹಲವು ಕಡ್ಡಿಗಳನ್ನು ಕೇಂದ್ರಕ್ಕೆ ಜೋಡಿಸಲಾಗಿದೆ.

 

 

ಮೇಲಿನ ಲಕ್ಷಣವನ್ನು ಒಂದು ಆಧಾರ ಪ್ರತಿಜ್ಞೆಯಿಂದ ಹೀಗೆ ಹೇಳಬಹುದು

6.2.2 ಆಧಾರ ಪ್ರತಿಜ್ಞೆ 2: ಒಂದು ಬಿಂದುವಿನ ಮೂಲಕ ಅನೇಕ ಸರಳರೇಖೆಗಳನ್ನು ಎಳೆಯಬಹುದು.

ಪಕ್ಕದ ಚಿತ್ರದಲ್ಲಿ PQ ಒಂದು ಸರಳರೇಖೆಯಾಗಿದ್ದು ಅದನ್ನು ಎರಡೂ ಕಡೆಗಳಿಗೆ ವೃದ್ಧಿಸಲಾಗಿದೆ.

 

 

ಮೇಲಿನ ಲಕ್ಷಣವನ್ನು ಒಂದು ಆಧಾರ ಪ್ರತಿಜ್ಞೆಯಿಂದ ಹೀಗೆ ಹೇಳಬಹುದು.

6.2.2 ಆಧಾರ ಪ್ರತಿಜ್ಞೆ 3: ಒಂದು ಸರಳರೇಖೆಯನ್ನು ಎರಡೂ ಕಡೆಗಳಲ್ಲಿ ಎಷ್ಟು ದೂರಕ್ಕೆ ಬೇಕಾದರೂ ವೃದ್ಧಿಸಬಹುದು

ಪಕ್ಕದ ಚಿತ್ರದಲ್ಲಿ O ಬಿಂದುವಿನಿಂದ OA ಮತ್ತು OB ರೇಖಾಕಿರಣಗಳನ್ನು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಎಳೆಯಲಾಗಿದೆ. O ಬಿಂದುವಿನಲ್ಲಿ ಆದ ಕೋನವನ್ನು ಅಳೆಯಿರಿ   AOB = 1800

 

ಮೇಲಿನ ಲಕ್ಷಣವನ್ನು ಒಂದು ಆಧಾರ ಪ್ರತಿಜ್ಞೆಯಿಂದ ಹೀಗೆ ಹೇಳಬಹುದು.

6.2.2 ಆಧಾರ ಪ್ರತಿಜ್ಞೆ 4: ಒಂದಕ್ಕೊಂದು ವಿರುದ್ಧ ದಿಕ್ಕಿನಲ್ಲಿರುವ ಎರಡು ಕಿರಣಗಳ ಆರಂಭದ ಬಿಂದುವಿನಲ್ಲಿ ಏರ್ಪಡುವ ಕೋನವು 1800 ಇರುತ್ತದೆ.

ನೀವು ಕುರ್ಚಿಯಲ್ಲಿ ಹೇಗೆ ಕುಳಿತುಕೊಳ್ಳುವಿರಿ?  ಕಾಲುಗಳನ್ನು ಪರಸ್ಪರ ಛೇದಿಸುವಂತೆ ಹಾಕಿ ಅಥವಾ ಕಾಲುಗಳನ್ನು ಒಂದಕ್ಕೊಂದು ಸಮಾನಾಂತರವಾಗಿಟ್ಟುಕೊಂಡು ...

ಪಕ್ಕದ ಚಿತ್ರದಲ್ಲಿ  AB ಮತ್ತು CD ರೇಖೆಗಳು O ಬಿಂದುವಿನಲ್ಲಿ ಛೇದಿಸುತ್ತದೆ ಅಥವಾ ಅವುಗಳು ಪರಸ್ಪರ ಸಮಾನಾಂತರವಾಗಿವೆ.

 

ಮೇಲಿನ ಲಕ್ಷಣವನ್ನು ಒಂದು ಆಧಾರ ಪ್ರತಿಜ್ಞೆಯಿಂದ ಹೀಗೆ ಹೇಳಬಹುದು.

6.2.2 ಆಧಾರ ಪ್ರತಿಜ್ಞೆ 5: ಎರಡು ಸರಳರೇಖೆಗಳು ಒಂದೇ ಒಂದು ಉಭಯ ಸಾಮಾನ್ಯ ಬಿಂದುವನ್ನು ಹೊಂದಿರುತ್ತದೆ ಅಥವಾ ಯಾವುದೇ ಸಾಮಾನ್ಯ ಬಿಂದು ಹೊಂದಿರುವುದಿಲ್ಲ.

ರೈಲ್ವೇ ಹಳಿಗಳು ಪರಸ್ಪರ ಸಂಧಿಸಿದರೇನಾಗುತ್ತದೆ?

ರೈಲ್ವೇ ಪ್ರಯಾಣ ಅಸಾಧ್ಯ…

ಪಕ್ಕದ ಚಿತ್ರದಲ್ಲಿ AB ಮತ್ತು CD ಸರಳರೇಖೆಗಳು ಸಮಾನಾಂತರವಾಗಿದ್ದು, ಅವುಗಳನ್ನು ಎರಡೂ ಬದಿಗಳಲ್ಲಿ ಎಷ್ಟು ದೂರಕ್ಕೆ ವೃದ್ಧಿಸಿದರೂ ಸಂಧಿಸುವುದಿಲ್ಲ. (ರೈಲ್ವೇ ಹಳಿಯಂತೆ)

 

ಮೇಲಿನ ಲಕ್ಷಣವನ್ನು ಒಂದು ಆಧಾರ ಪ್ರತಿಜ್ಞೆಯಿಂದ ಹೀಗೆ ಹೇಳಬಹುದು.

6.2.2 ಆಧಾರ ಪ್ರತಿಜ್ಞೆ 6: ಎರಡು ಸಮಾನಾಂತರ ಸರಳರೇಖೆಗಳನ್ನು ಅನಂತ ದೂರದವರೆಗೆ ವೃದ್ಧಿಸಿದರೂ ಅವು ಪರಸ್ಪರ ಸಂಧಿಸುವುದಿಲ್ಲ.


ತೀರ್ಮಾನ: ಆಧಾರ ಪ್ರತಿಜ್ಞೆ 5 ಮತ್ತು 6ರಿಂದ, ನಾವೇನು ತೀರ್ಮಾನಕ್ಕೆ ಬರಬಹುದು? ಎರಡು ಸರಳರೇಖೆಗಳು ಒಂದು ಸಾಮಾನ್ಯ ಬಿಂದುವನ್ನು ಹೊಂದಿರದಿದ್ದರೆ, ಅವುಗಳು ಸಮಾನಾಂತರ ಸರಳರೇಖೆಗಳಾಗಿರುತ್ತವೆ.

ಹೇಳಿಕೆಗಳು

ರೇಖಾಗಣಿತದಲ್ಲಿ ಕೆಲವು ಸತ್ಯ ಸಂಗತಿಗಳು ಹೇಳಿಕೆಯ ರೂಪದಲ್ಲಿರುತ್ತವೆ. ಈ ಹೇಳಿಕೆಗಳ ಸತ್ಯಾಂಶವನ್ನು ರಚನೆ ಮತ್ತು ಅಳತೆಗಳಿಂದ ತಿಳಿಯಬಹುದು.

ಪಕ್ಕದ ಚಿತ್ರದಲ್ಲಿ   AOC +  COB = 1800

 

ಮೇಲಿನ ಸತ್ಯಾಂಶವನ್ನು ಕೆಳಗಿನ ಹೇಳಿಕೆ ರೂಪದಲ್ಲಿ ಬರೆಯಬಹುದು.

6.2.3 ಹೇಳಿಕೆ 1: ಒಂದು ಸರಳರೇಖೆಯ ಮೇಲೆ ಒಂದು ರೇಖಾಕಿರಣ ನಿಂತಾಗ ಆ ಸಾಮಾನ್ಯ ಬಿಂದುವಿನಲ್ಲಿ ಉಂಟಾಗುವ ಕೋನಗಳ ಮೊತ್ತ 1800  ಇರುತ್ತದೆ. ಆ ಕೋನಗಳನ್ನು ಸರಳಯುಗ್ಮ ಕೋನಗಳು ಎನ್ನುತ್ತೇವೆ.

ಇದನ್ನು ಕೆಲವು ಬಾರಿ ‘ಸರಳಯುಗ್ಮ ಸ್ವಯಂಸಿದ್ಧ’ (Linear pair axiom) ಎನ್ನುವರು.

 

ಪಕ್ಕದ ಚಿತ್ರದಲ್ಲಿ AB ಮತ್ತು CD ರೇಖೆಗಳು O ಬಿಂದುವಿನಲ್ಲಿ ಛೇದಿಸುತ್ತವೆ. ಆಗ,

AOC =  DOB ಮತ್ತು AOD =  COB

 

 

ಮೇಲಿನ ಸತ್ಯಾಂಶವನ್ನು ಕೆಳಗಿನ ಹೇಳಿಕೆ ರೂಪದಲ್ಲಿ ಬರೆಯಬಹುದು.

 

6.2.3 ಹೇಳಿಕೆ 2: ಎರಡು ಸರಳರೇಖೆಗಳು ಪರಸ್ಪರ ಛೇದಿಸಿದಾಗ ಉಂಟಾಗುವ ಶೃಂಗಾಭಿಮುಖ ಕೋನಗಳು ಸಮ.

 

ಇದಕ್ಕೆ ಉದಾಹರಣೆ ಕತ್ತರಿ.

 


ಮೇಲಿನ ಹೇಳಿಕೆಯನ್ನು ಈ ಕೆಳಗಿನಂತೆ ಸಾಧಿಸಬಹುದು:

ಸಂ.

ನಿರೂಪಣೆ

ಕಾರಣಗಳು

1

AOC +  COB = 1800

ಆಧಾರ ಪ್ರತಿಜ್ಞೆ 1: AB ಯು ಒಂದು ಸರಳರೇಖೆ OC  ಯು  AB  ಮೇಲೆ ನಿಂತಿದೆ.

2

DOA +  AOC = 1800

ಆಧಾರ ಪ್ರತಿಜ್ಞೆ   1: DC ಯು ಒಂದು ಸರಳರೇಖೆ OAಯು  DC  ಮೇಲೆ ನಿಂತಿದೆ.

3

AOC +  COB = DOA +  AOC

ಸ್ವಯಂಸಿದ್ಧ  1

4

COB =  DOA

ಸ್ವಯಂಸಿದ್ಧ  3( AOC  ಯನ್ನು ಎರಡೂ ಬದಿಗಳಿಂದ ಕಳೆದಿದೆ)

 

 

 

 

ಇದೇ ರೀತಿಯಾಗಿ, AOC =  DOB ಎಂದು ಸಾಧಿಸಬಹುದು.

ವ್ಯಾಖ್ಯೆಗಳು:

1.ಯಾವುದೇ ಎರಡು ಕೋನಗಳು ಉಭಯ ಸಾಮಾನ್ಯ ಬಾಹು ಒಂದು ಉಭಯ ಸಾಮಾನ್ಯ ಶೃಂಗ ಬಿಂದುವನ್ನು ಹೊಂದಿದ್ದರೆ, ಅಂತಹ ಕೋನಗಳನ್ನು ‘ಪಾರ್ಶ್ವ ಕೋನಗಳು’ (adjacent) ಎನ್ನುತ್ತೇವೆ.

ಪಕ್ಕದ  ಚಿತ್ರ 1 ರಲ್ಲಿ  ABC ಮತ್ತು  CBD ಗಳು ಪಾರ್ಶ್ವ ಕೋನಗಳು ಇಲ್ಲಿ

B ಯು ಸಾಮಾನ್ಯ ಬಿಂದು. BCಯು ಸಾಮಾನ್ಯ ಬಾಹು.

 

2. ಎರಡು ಕೋನಗಳ ಮೊತ್ತ 900 ಇದ್ದರೆ, ಆ ಎರಡು ಕೋನಗಳನ್ನು “ಪೂರಕ ಕೋನಗಳು””(complimentary) ಎನ್ನುತ್ತೇವೆ.

ಪಕ್ಕದ  ಚಿತ್ರ 2 ರಲ್ಲಿ  PQS + SQR =  PQR ಮತ್ತು  PQR=900

ಆದ್ದರಿಂದ  PQS ಮತ್ತು  SQR ಗಳು ಪೂರಕಕೋನಗಳು.

 

3. ಎರಡು ಕೋನಗಳ ಮೊತ್ತ 1800 ಇದ್ದರೆ, ಆ ಎರಡು ಕೋನಗಳನ್ನು “ಪರಿಪೂರಕ ಕೋನಗಳು” (ಅಥವಾಸಂಪೂರಕ ಕೋನಗಳು)(supplementary) ಎನ್ನುತ್ತೇವೆ.

 

ಪಕ್ಕದ ಚಿತ್ರ 3 ರಲ್ಲಿ  XOZ ಮತ್ತು  ZOY ಗಳು ಪರಿಪೂರಕ ಕೋನಗಳು. ಏಕೆಂದರೆ  XOZ+ XOY = 1800)

 

ಸಂ

ಕೋನಗಳ ವಿಂಗಡಣೆ

ಉದಾಹರಣೆ

1

ಪಾರ್ಶ್ವ ಕೋನಗಳು

ABC ಮತ್ತು  CBD

 

2

ಪೂರಕ ಕೋನಗಳು

PQS ಮತ್ತು  SQR

 

PQS + SQR=900

 

3

ಪರಿಪೂರಕ ಕೋನಗಳು

XOZ ಮತ್ತು  XOY

 

XOZ + XOY=1800

 

4

ಒಂದೇ ಸಮತಲದಲ್ಲಿರುವ ಎರಡು ಸರಳ ರೇಖೆಗಳನ್ನು ಬೇರೆ ಬೇರೆ ಬಿಂದುಗಳಲ್ಲಿ ಛೇದಿಸುವ ರೇಖೆಯನ್ನು‘ಛೇದಕ ರೇಖೆ’ (transversal) ಎನ್ನುವರು.

 

ಪಕ್ಕದ ಚಿತ್ರ 4 ರಲ್ಲಿ AB ಮತ್ತು CD ಗಳು ಒಂದೇ ಸಮತಲದಲ್ಲಿನ ಎರಡು ಸರಳ ರೇಖೆಗಳು.

EF ರೇಖೆಯು ABಯನ್ನುGಯಲ್ಲಿಯೂCDಯನ್ನುH ಯಲ್ಲಿಯೂ ಛೇದಿಸುತ್ತವೆ ಆದ್ದರಿಂದ EF ಒಂದು ಛೇದಕರೇಖೆ.

 

ಎರಡು ಸರಳ ರೇಖೆಗಳನ್ನು ಒಂದು ಛೇದಕ ರೇಖೆಯು ಛೇದಿಸಿದಾಗ ಉಂಟಾಗುವ ವಿವಿಧ ಕೋನಗಳು:

ಪಾರ್ಶ್ವ ಕೋನಗಳು

ಶೃಂಗಾಭಿಮುಖ ಕೋನಗಳು

(4 ಜೊತೆ)

ಪರ್ಯಾಯ ಕೋನಗಳು

(2 ಜೊತೆ)

ಅನುರೂಪ ಕೋನಗಳು

(4 ಜೊತೆ)

ಅಂತರ್ ಕೋನಗಳು

(2 ಜೊತೆ)

AGE &  EGB

AGE &  HGB

AGH &  GHD

EGB &  GHD

AGH and  GHC

CHF & FHD

CHF &  GHD

BGH &  CHG

AGE &  CHG

BGH and  GHD

…….

AGH & EGB

 

AGH &  CHF

 

 

CHG & FHD

 

BGH &  DHF

 

ಪಕ್ಕದ ಚಿತ್ರದಲ್ಲಿ  AB ಮತ್ತು CD ಗಳು ಸಮಾಂತರ ಸರಳರೇಖೆಗಳು EF ಛೇದಕ ರೇಖೆ. ಆಗ,

EGB =  GHD

AGH =  CHF

AGE = CHG ಮತ್ತು

BGH =  DHF.

 

 

ಮೇಲಿನ ಸತ್ಯಾಂಶವನ್ನು ಕೆಳಗಿನ ಹೇಳಿಕೆ ರೂಪದಲ್ಲಿ ಬರೆಯಬಹುದು.

 

6.2.3 ಹೇಳಿಕೆ 3: ಒಂದು ಛೇದಕ ರೇಖೆಯು ಎರಡು ಸಮಾಂತರ ಸರಳರೇಖೆಗಳನ್ನು ಛೇದಿಸಿದಾಗ ಉಂಟಾಗುವ ಅನುರೂಪಕೋನಗಳು ಸಮವಾಗಿರುತ್ತದೆ..

 

6.2.3 ಹೇಳಿಕೆ 4: ಒಂದು ಜೊತೆ ಅನುರೂಪಕೋನಗಳು ಸಮವಾಗಿರುವಂತೆ ಒಂದು ಛೇದಕ ರೇಖೆಯು ಎರಡು ಸರಳರೇಖೆಗಳನ್ನು ಕತ್ತರಿಸಿದರೆ, ಆ ಎರಡು ರೇಖೆಗಳು ಸಮಾಂತರ ರೇಖೆಗಳಾಗಿರುತ್ತವೆ. (ಇದು ಹೇಳಿಕೆ 6.2.3.3 ರ ವಿಲೋಮ)

6.2 ಸಮಸ್ಯೆ 1 : ಚಿತ್ರದಲ್ಲಿ O ಎಂಬುದು AB ಎಂಬುದು OP ರೇಖಾಕಿರಣವು AB ಯ ಮೇಲೆ O ಬಿಂದುವಿನಲ್ಲಿ ನಿಂತಿದೆ.

OQ ರೇಖೆಯು  POB ಯನ್ನು, OR ರೇಖೆಯು  AOP ಯನ್ನು  ಅರ್ಧಿಸುತ್ತವೆ. ಆಗ   ROQ = 900 ಎಂದು ಸಾಧಿಸಿ.

ಪರಿಹಾರ:

ಸಂ.

ನಿರೂಪಣೆ

ಕಾರಣಗಳು

1

POQ =  QOB

OQ  ವು  POBಯ ಕೋನಾರ್ಧ ರೇಖೆ

2

POB  = 2*  POQ

ಹಂತ 1ರಿಂದ

3

AOP = 2* ROP

OR  ವು    AOP  ಯ ಕೋನಾರ್ಧ ರೇಖೆ.

4

AOP +  POB = 1800

ಹೇಳಿಕೆ  1: AB  ರೇಖೆಯ ಮೇಲೆ ಕಿರಣ OP  ನಿಂತಿದೆ.

5

2*  ROP +2* POQ =1800

ಹಂತ  4,2,3  ರಿಂದ

6

2( ROP + POQ) =1800

ಸುಲಭೀಕರಿಸಿ

7

ROP + POQ =900

 

8

ROQ=900

ROP + POQ= ROQ

6.2 ಸಮಸ್ಯೆ 2 ಚಿತ್ರದಲ್ಲಿ O ಎಂಬುದು AB ಯ ಮೇಲಿನ ಒಂದು ಬಿಂದು. OP ಮತ್ತು OQ ಕಿರಣಗಳು AB ಯ ಮೇಲೆ O ಬಿಂದುವಿನಲ್ಲಿ ನಿಂತಿವೆ. ಅಲ್ಲಿ ಉಂಟಾದ ಕೋನಗಳನ್ನು

ಕಂಡುಹಿಡಿದು   QOP ಯು ಒಂದು ಲಂಬಕೋನ ಎಂದು ತೋರಿಸಿ.

ಪರಿಹಾರ:

ಸಂ.

ನಿರೂಪಣೆ

ಕಾರಣಗಳು

1

AOP+POB=1800

ಹೇಳಿಕೆ 1:  AB ಯ ಮೇಲೆ OP  ನಿಂತಿದೆ.

2

x+2x = 1800 i.e.3x =1800 i.e.  x =600

 

3

AOQ+QOB=1800

ಹೇಳಿಕೆ  1:  AB ಯ ಮೇಲೆ OQ  ನಿಂತಿದೆ.

4

y+5y = 1800 i.e.  6y = 1800 i.e.  y =300

 

5

AOP = x = 600 POB = 2x = 1200

 

6

AOQ = y =  300 , QOB = 5y =1500

 

7

QOP =  QOA + AOP= y+x =300 + 600 = 900

 

6.2 ಸಮಸ್ಯೆ 3: ಚಿತ್ರದಲ್ಲಿ AB ರೇಖೆಯ ಮೇಲಿನ ಬಿಂದು ‘O’. a-b=800 ಆದರೆ a ಮತ್ತು b ಗಳನ್ನು ಕಂಡುಹಿಡಿ.

ಪರಿಹಾರ:

ಸಂ.

ನಿರೂಪಣೆ

ಕಾರಣಗಳು

 

 

1

AOP+ POB=1800

ಹೇಳಿಕೆ   1:  AB ಯ ಮೇಲೆ OP  ನಿಂತಿದೆ.

2

a+b= 1800

ಆದೇಶಿಸಿದೆ.

3

b = 1800-a

 

4

a-b = 800

 

5

a-b= a – (1800 -a) = 2a -1800

 

6

2a -1800=800

a-b  =80  ದತ್ತ

7

2a =800+1800= 2600: 2a =2600

 

8

a= 1300:b =500

 

6.2 ಸಮಸ್ಯೆ 4: ಚಿತ್ರದಲ್ಲಿ OBಯು  POQ ವನ್ನು ಅರ್ಧಿಸುತ್ತದೆ. OA ಮತ್ತು OB ಗಳು ವಿರುದ್ಧ ದಿಕ್ಕಿನಲ್ಲಿರುವ ಕಿರಣಗಳು

AOP =  AOQ ಎಂದು ಸಾಧಿಸಿ.

ಪರಿಹಾರ:

ಸಂ.

ನಿರೂಪಣೆ

ಕಾರಣಗಳು

1

AOP+ POB=1800

ಸರಳಯುಗ್ಮ ಕೋನಗಳು

2

AOP = 1800- POB

 

3

POB =  BOQ

OBಯು  POQ ವನ್ನು ಅರ್ಧಿಸುತ್ತದೆ.

4

AOP = 1800- BOQ

3 ನ್ನ 2 ರಲ್ಲಿ  ರಲ್ಲಿ ಆದೇಶಿಸಿದೆ.

5

AOQ+ QOB=1800

ಹೇಳಿಕೆ  1:  ಸರಳಯುಗ್ಮ ಕೋನಗಳು

6

AOQ = 1800- BOQ

 

7

AOP = 1800- BOQ=   AOQ

4 ಮತ್ತು  6 ರಿಂದ

ಸಮಸ್ಯೆ 5: ಚಿತ್ರದಲ್ಲಿ PQ ಮತ್ತು RS ರೇಖೆಗಳು O ನಲ್ಲಿ ಛೇದಿಸುತ್ತಿವೆ. OAಯು  PORನ್ನ ಅರ್ಧಿಸುತ್ತದೆ.OBಯು  SOQ ನ್ನ ಅರ್ಧಿಸುತ್ತದೆ.

AB ಸರಳ ರೇಖೆ ಎಂದು ತೋರಿಸಿ.

ಪರಿಹಾರ:

ಸಂ.

ನಿರೂಪಣೆ

ಕಾರಣಗಳು

1

POR = 2 AOP

OAಯು  POR ನ್ನ ಅರ್ಧಿಸುತ್ತದೆ.

 

2

SOQ = 2 BOQ

OBಯು SOQ ನ್ನ ಅರ್ಧಿಸುತ್ತದೆ.

3

POR =  SOQ

ಶೃಂಗಾಭಿಮುಖ ಕೋನಗಳು ಪರಸ್ಪರ ಸಮ.

4

2 AOP = 2 BOQ:  AOP = BOQ

 

5

AOB =  AOP+ POS+ SOB

 

6

BOQ+ POS+ SOB

AOPಗೆ BOQ ವನ್ನು ಆದೇಶಿಸಿದೆ.

7

= POS+ SOB+ BOQ

 

8

= 1800

PQ  ಒಂದು ಸರಳರೇಖೆ. OS  ಎಂಬುದು ಅದರ ಮೇಲಿನ ಕಿರಣ   SOQ = SOB+ BOQ. AB  ಯು ಒಂದು ಸರಳರೇಖೆ.

ಸಮಸ್ಯೆ 6: ಚಿತ್ರದಲ್ಲಿ ABC = ACB ಆದರೆ ACQ = ABP ಮತ್ತು CBR = BCS ಎಂದು ತೋರಿಸಿ.

 

ಪರಿಹಾರ:

ಸಂ.

ನಿರೂಪಣೆ

ಕಾರಣಗಳು

1

ACB+ ACQ = 1800

BC ಯು ಒಂದು ಸರಳರೇಖೆ.

2

ACB = 1800 –  ACQ

 

3

PBA+ ABC = 1800

BC ಯು ಒಂದು ಸರಳರೇಖೆ.

4

PBA = 1800 –  ABC

 

5

= 1800 –  ACB

 

6

= 1800 – (1800 ACQ)

2 ರಲ್ಲಿ  ACB =1800- ACQ

7

= ACQ

 

8

PBR= ABC

ಶೃಂಗಾಭಿಮುಖ ಕೋನಗಳು

9

QCS= ACB

ಶೃಂಗಾಭಿಮುಖ ಕೋನಗಳು

10

PBR =  QCS

8,9  ಮತ್ತು   ದತ್ತ   ABC= ACB

11

CBR = 1800 –  PBR

CBR + PBR = 1800

12

= 1800 –  QCS

10

13

=1800 – (1800 –  BCS)

QCS+ BCS = 1800

14

= BCS

 

6.2 ಸಮಸ್ಯೆ 7: ಚಿತ್ರದಲ್ಲಿ  AGE=1200 CHF = 600. AB ಮತ್ತು CD ಗಳು ಸಮಾನಾಂತರವಾಗಿವೆಯೇ ಎಂದು ಪರೀಕ್ಷಿಸಿ

ಪರಿಹಾರ:

ಸಂ.

ನಿರೂಪಣೆ

ಕಾರಣಗಳು

 

1

CHF =  GHD = 600

CHF ಮತ್ತು  GHD ಗಳು ಶೃಂಗಾಭಿಮುಖ ಕೋನಗಳು   CHF = 600(ದತ್ತ)

2

EGB = 600.

AGE = 1200 AGE +  EGB =1800 ಸರಳಯುಗ್ಮಗಳು.

3

EGB = GHD

1 ಮತ್ತು 2 ರಿಂದ.

EGB ಮತ್ತು  GHD ಗಳು ಅನುರೂಪ ಕೋನಗಳು. ಹೇಳಿಕೆ 4 ರಂತೆ, ಅನುರೂಪ ಕೋನಗಳು ಸಮವಾದ್ದರಿಂದ, AB ಮತ್ತು CD ಗಳು ಸಮಾನಾಂತರ.

6.2 ಸಮಸ್ಯೆ 8: ಚಿತ್ರದಲ್ಲಿ AB||CD, EF ಛೇದಕವು ಅವುಗಳನ್ನು ಕ್ರಮವಾಗಿ G ಮತ್ತು H ಗಳಲ್ಲಿ ಛೇದಿಸಿದೆ.   AGE ಮತ್ತು  EGB ಗಳು 3:2 ಅನುಪಾತದಲ್ಲಿದ್ದರೆ, ಚಿತ್ರದಲ್ಲಿ ಎಲ್ಲಾ ಕೋನಗಳನ್ನು ಕಂಡುಹಿಡಿಯಿರಿ.

ಪರಿಹಾರ:

AB ಯು ಒಂದು ಸರಳರೇಖೆ. ಆದ್ದರಿಂದ   AGE +  EGB =1800.

ಈ ಕೋನಗಳ ಅನುಪಾತ 3:2. ಆದ್ದರಿಂದ  1800 ಯನ್ನ ಈ ಅನುಪಾತಕ್ಕನುಗುಣವಾಗಿ ವಿಭಾಗಿಸಬೇಕು.

ಅನುಪಾತದ ಪರಿಮಾಣಗಳ ಮೊತ್ತ = 3+2 =5:

5 ಪರಿಮಾಣದ ಬೆಲೆ = 1800

1 ಪರಿಮಾಣದ ಬೆಲೆ = 1800÷5 = 360

AGE = 3 ಪರಿಮಾಣ = 3*360 = 1080

EGB = 2 ಪರಿಮಾಣ = 2*360 = 720

 

 

 

 

 

 

 

 

ನಿರೂಪಣೆ

ಕಾರಣಗಳು

AGE = HGB =1080

ಶೃಂಗಾಭಿಮುಖ ಕೋನಗಳು

EGB =  AGH = 720

ಶೃಂಗಾಭಿಮುಖ ಕೋನಗಳು

EGB =  GHD = 720

ಅನುರೂಪ ಕೋನಗಳು

AGE =  CHG =1080

ಅನುರೂಪ ಕೋನಗಳು

DHF =  CHG =1080

ಶೃಂಗಾಭಿಮುಖ ಕೋನಗಳು

CHF =  GHD = 720

ಶೃಂಗಾಭಿಮುಖ ಕೋನಗಳು

6.2 ಸಮಸ್ಯೆ 9: ಚಿತ್ರದಲ್ಲಿ PQ||RS. ಆದರೆ  QPO +  ORS =  POR ಎಂದು ಸಾಧಿಸಿ.

ರಚನೆ: PQ ಗೆ ಸಮಾಂತರವಾಗಿ O ಬಿಂದುವಿನ ಮೂಲಕ TU ಸರಳರೇಖೆ ಎಳೆಯಿರಿ.

SRನ್ನ Y ವರೆಗೆQPಯನ್ನುX ವರೆಗೆ, ROವನ್ನುV ವರೆಗೆ,OP ವನ್ನುZ ವರೆಗೆ ವೃದ್ಧಿಸಿ.

ಪರಿಹಾರ:

ಸಮಾಂತರ ಸರಳರೇಖೆಗಳ ಮೇಲಿನ ಪ್ರಮೇಯ (Theorem on Parallel lines):

ತರ್ಕಬದ್ಧವಾಗಿ ಸಾಧಿಸಬೇಕಾದ ಹೇಳಿಕೆಗಳನ್ನು ‘ಪ್ರಮೇಯ’ (Theorem) ಎನ್ನುವರು.

ಒಂದು ಪ್ರಮೇಯದಲ್ಲಿ ಈ ಕೆಳಗಿನ ಭಾಗಗಳಿರುತ್ತವೆ:-

1.      ದತ್ತ: ಪ್ರಮೇಯದಲ್ಲಿ ಕೊಟ್ಟ ಅಂಶಗಳು.

2.      ಪ್ರಮೇಯದ ದತ್ತಾಂಶಕ್ಕನುಗುಣವಾದ ಒಂದು ನಕ್ಷೆ(ಚಿತ್ರ).

3.      ಸಾಧನೀಯ: ಸಾಧಿಸಬೇಕಾದ ಅಂಶಗಳು.

4.      ರಚನೆ: ಪ್ರಮೇಯದ ಸಾಧನೆಗೆ ಹೆಚ್ಚಿನ ರಚನೆ ಬೇಕಾದರೆ, ಅವುಗಳ ರಚನೆ.

5.      ಸಾಧನೆ: ತರ್ಕಬದ್ಧವಾದ ಸಾಧನೆ.

‘ಪ್ರಮೇಯ’ಕ್ಕೆ ಒಂದು ಉದಾಹರಣೆ:

ಪೈಥಾಗೊರಸನ ಪ್ರಮೇಯ:

“ಒಂದು ಲಂಬಕೋನ ತ್ರಿಕೋನದಲ್ಲಿ ವಿಕರ್ಣದ ವರ್ಗವು ಉಳಿದೆರಡು ಬಾಹುಗಳ ವರ್ಗಗಳ ಮೊತ್ತಕ್ಕೆ ಸಮ”.

 

(ವಿಕರ್ಣ)2 = (ಬಾಹು)2+(ಬಾಹು)2

 

ಇದನ್ನು ಮುಂದೆ ಸಾಧಿಸಲಿಕ್ಕೆ ಇದ್ದೇವೆ.

 

 

6.3 ಪ್ರಮೇಯ 1: ಎರಡು ಸಮಾಂತರ ಸರಳರೇಖೆಗಳನ್ನು ಒಂದು ಛೇದಕರೇಖೆಯು ಛೇದಿಸಿದಾಗ ಉಂಟಾಗುವ

1.      ಪ್ರತಿಯೊಂದು ಜೊತೆ ಪರ್ಯಾಯ ಕೋನಗಳು ಸಮವಾಗಿರುತ್ತವೆ.

2.      ಛೇದಕ ರೇಖೆಯ ಒಂದೇ ಪಾರ್ಶ್ವದಲ್ಲಿರುವ ಅಂತರ್ಕೋನಗಳು ಪರಿಪೂರಕಗಳಾಗಿರುತ್ತವೆ.

 

ದತ್ತ: AB || CD, EF ಇಈ ಛೇದಕ ರೇಖೆಯು AB ಮತ್ತು CD ಗಳನ್ನು ಕ್ರಮವಾಗಿ  G ಮತ್ತು H ಗಳಲ್ಲಿ ಛೇದಿಸಿದೆ.

ಸಾಧನೀಯ:

1)  AGH =  GHD,  BGH= CHG    ( 1 =  3,  2= 4)

2)  AGH+ CHG = 1800 BGH+ DHG =1800( 1+ 4 = 1800 2+ 3 =1800)

ಸಂ.

ನಿರೂಪಣೆ

ಕಾರಣಗಳು

1

EGB =  GHD

 

2

EGB =  AGH

ಶೃಂಗಾಭಿಮುಖ ಕೋನಗಳು ಸಮ

3

AGH =  GHD

ಸ್ವಯಂಸಿದ್ಧ 1: ಒಂದೇ ಅಂಶಕ್ಕೆ ಸಮನಾದ ಅಂಶಗಳು ಪರಸ್ಪರ ಸಮ.

4

AGE = CHG

ಅನುರೂಪಕೋನಗಳು ಸಮ

5

AGE =  BGH

ಶೃಂಗಾಭಿಮುಖ ಕೋನಗಳು ಸಮ

6

CHG= BGH

ಸ್ವಯಂಸಿದ್ಧ 1: ಒಂದೇ ಅಂಶಕ್ಕೆ ಸಮನಾದ ಅಂಶಗಳು ಪರಸ್ಪರ ಸಮ.

7

AGH+ HGB= 1800

ಸರಳಯುಗ್ಮ ಕೋನಗಳು

8

BGH =  CHG

ಹಂತ 5, 6 ರಿಂದ

9

AGH+ CHG= 1800

HGB ಯ ಬದಲು   CHG ಯನ್ನು ಆದೇಶಿಸಿದೆ.

10

CHG + GHD = 1800

ಸರಳಯುಗ್ಮ ಕೋನಗಳು

11

BGH =  CHG

ಹಂತ 6 ರಿಂದ

12

GHD+ BGH= 1800

10 ರಲ್ಲಿ  CHG ಬದಲು  BGH ಆದೇಶಿಸಿದೆ.

6.3 ಸಮಸ್ಯೆ 1: ಕೆಳಗಿನ ಚಿತ್ರದಲ್ಲಿ AB || PQ ಮತ್ತು BC || QR, ಆದರೆ  PQR = ABC ಎಂದು ಸಾಧಿಸಿ

ದತ್ತ :  AB || PQ, BC || QR

ಸಾಧನೀಯ:  PQR = ABC

ರಚನೆ: PQ ವನ್ನ ವೃದ್ಧಿಸಿದೆ. ಅದು BC ಯನ್ನು T ನಲ್ಲಿ ಛೇದಿಸಿದೆ.  RQ ವನ್ನ ವೃದ್ಧಿಸಿದೆ. ಅದು AB ಯನ್ನು S ನಲ್ಲಿ ಛೇದಿಸಿದೆ.

ಸಾಧನೆ:

PQR =  ASR (AB || PQ : ಅನುರೂಪ ಕೋನಗಳು)

ASR =  ABC (BC || QR : ಅನುರೂಪ ಕೋನಗಳು)

PQR = ABC

 

 

6.3 ಸಮಸ್ಯೆ 2 : ಚಿತ್ರದಲ್ಲಿ AB||CD. EH ಮತ್ತು FG ಗಳು ಕ್ರಮವಾಗಿ   FEB ಮತ್ತು  EFD ಗಳ ಕೋನಾರ್ಧಕ ರೇಖೆಗಳು.

ಆಗ, EH ಮತ್ತು FG ಗಳು ಪರಸ್ಪರ ಲಂಬವಾಗಿವೆ ಎಂದು ಸಾಧಿಸಿ

ರಚನೆ: CD ಗೆ ಸಮಾಂತರವಾಗಿ G ಬಿಂದುವಿನ ಮೂಲಕ GI ರೇಖೆಯನ್ನೆಳೆದಿದೆ.

ಪರಿಹಾರ:

ಸಂ.

ನಿರೂಪಣೆ

ಕಾರಣಗಳು

1

CFE =  BEF

AB ||CD  ಪರ್ಯಾಯ ಕೋನಗಳು.

2

BEF = 2 FEG

FEB ಯ ಕೋನಾರ್ಧಕ EH.

3

CFE = 2 FEG

1  ಮತ್ತು  2 ರಿಂದ .

4

EFD =  AEF

AB ||CD  ಪರ್ಯಾಯ ಕೋನಗಳು.

5

EFD = 2 EFG

EFD ಯ ಕೋನಾರ್ಧಕ GF.

6

CFE + EFD = 1800

CD  ರೇಖೆಯ ಮೇಲಿನ ಕೋನಗಳು (ಸರಳಯುಗ್ಮ)

7

2 FEG +2 EFG = 1800

3 ಮತ್ತು 5 ರಿಂದ 6ರಲ್ಲಿ ಆದೇಶಿಸಿದೆ .

8

FEG + EFG = 900

7 ನ್ನ ಸುಲಭೀಕರಿಸಿದೆ .

9

FEG =  GEB

BEI ಯ ಕೋನಾರ್ಧಕ EG

10

GEB =  EGI

AB||IG  ಪರ್ಯಾಯ ಕೋನಗಳು .

11

FEG =  EGI

ಮತ್ತು 10  ರಿಂದ

12

EFG= GFD

IFD ಯ ಕೋನಾರ್ಧಕ FG

13

GFD = IGF

CD||IG  ಪರ್ಯಾಯ ಕೋನಗಳು.

 

14

EFG = IGF

12  ಮತ್ತು   13ರಿಂದ .

15

EGI + IGF(= EGF) = 900

11   ಮತ್ತು 14  ರಿಂದ 8ರಲ್ಲಿ ಆದೇಶಿಸಿದೆ .

16

ಆದ್ದರಿಂದ , EH  ಮತ್ತು  FG  ಗಳು ಪರಸ್ಪರ ಲಂಬವಾಗಿವೆ .

6.3 ಪ್ರಮೇಯ 2(1ನೇ ಪ್ರಮೇಯದ ವಿಲೋಮ): ಎರಡು ಸಮಾಂತರ ಸರಳರೇಖೆಗಳನ್ನು ಒಂದು ಛೇದಿಸಿದಾಗ,

1): ಪ್ರತಿಯೊಂದು ಜೊತೆ ಪರ್ಯಾಯ ಕೋನಗಳು ಸಮವಾಗಿದ್ದರೆ

ಅಥವಾ

2): ಛೇದಕ ರೇಖೆಯ ಒಂದೇ ಪಾರ್ಶ್ವದಲ್ಲಿನ ಅಂತರ್ ಕೋನಗಳು ಪರಿಪೂರಕಗಳಾಗಿದ್ದರೆ,  ಪಾರ್ಶ್ವದಲ್ಲಿನ

ಆ ಎರಡು ಸರಳ ರೇಖೆಗಳು ಸಮಾಂತರ ರೇಖೆಗಳಾಗಿರುತ್ತವೆ.

ದತ್ತ:

‘1) AB ಮತ್ತು CD ಸರಳರೇಖೆಗಳನ್ನು EF ಛೇದಿಸುತ್ತದೆ ಮತ್ತು

2)  AGH =  GHD ( BGH= CHG)

ಅಥವಾ

3)  AGH+ CHG = 1800( BGH+ DHG =1800)

ಸಾಧನೀಯ:   AB||CD.

ಸೂಚನೆ: ಮೊದಲು ಅನುರೂಪ ಕೋನಗಳು ಸಮವೆಂದು ಸಾಧಿಸಿ.

ನಂತರ 6.2.3  ಹೇಳಿಕೆ  4 ರ ಆಧಾರದಂತೆ ರೇಖೆಗಳು ಸಮಾಂತರವಾಗಿರುತ್ತವೆ

 

ಸಂಖ್ಯಾಶಾಸ್ತ್ರದ ಪರಿಚಯ

  • ಭಾರತದ ಜನ ಸಂಖ್ಯೆ 2050,2100 ರಲ್ಲಿ ಎಷ್ಟಾಗಲಿದೆ?
  • ವಿವಿಧ ರಾಜ್ಯಗಳ ಮತ್ತು ದೇಶದಲ್ಲಿನ ಸಾಕ್ಷರತಾ ಪ್ರಮಾಣ ಎಷ್ಟಿದೆ?
  • ರಾಜ್ಯದಲ್ಲಿ ಎಷ್ಟು ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಮುಂದೆ 10/15 ವರ್ಷಗಳಲ್ಲಿ ಏನಾಗಬಹುದು?
  • ಯಾವುದೇ ಸಂಸ್ಥೆಯಲ್ಲಿ ಇರಬಹುದಾದ ವೇತನದ ತಾರತಮ್ಯತೆಯ ಪರಿಶೀಲನೆ.

ಇಂತಹ ಸಮಸ್ಯೆಗಳಿಗೆ ಉತ್ತರ ದೊರಕಿಸುವ ಗಣಿತದ ಭಾಗವೇ ಸಂಖ್ಯಾ ಶಾಸ್ತ್ರ.

ನಮ್ಮ ದಿನನಿತ್ಯದ ಜೀವನದಲ್ಲಿ ನಾವು ಅನೇಕ ವಿಷಯಗಳ ಬಗ್ಗೆ ಚರ್ಚಿಸುತ್ತೇವೆ. ಸರಾಸರಿ ಮಳೆ, ಒಂದು ಪ್ರದೇಶದ ಕನಿಷ್ಟ ಮತ್ತು ಗರಿಷ್ಠ ಉಷ್ಣಾಂಶ, ಒಂದು ಎಕರೆಯಲ್ಲಿ ಬೆಳೆಯುವ ಸರಾಸರಿ ಫಸಲು, ಒಬ್ಬ ಕ್ರಿಕೆಟ್ ಆಟಗಾರನು ಮಾಡಿದ ರನ್‍ಗಳ ಸರಾಸರಿ, ಸರಾಸರಿ ಹಾಜರಿ ಇತ್ಯಾದಿ. ಇವುಗಳೆಲ್ಲಾ ನಾವು ವೀಕ್ಷಿಸಿದ ಅಂಶಗಳ ಮೇಲೆ ಮಾಡಿದ ಲೆಕ್ಕಾಚಾರ. ಈ ರೀತಿಯ ಲೆಕ್ಕಾಚಾರಗಳು, ಸರಕಾರಕ್ಕೆ ಮುಂದಿನ ಯೋಜನೆಗಳನ್ನು ರೂಪಿಸಲು, ಒಂದು ತರಗತಿಯ ವಿದ್ಯಾರ್ಥಿಗಳ ಕಲಿಕೆಯ ಮಟ್ಟವನ್ನು ಹೋಲಿಸಲು - ಹೀಗೆ ಹಲವು ವಿಷಯಗಳ ಬಗ್ಗೆ ತುಂಬಾ ಉಪಯುಕ್ತ.

ಯಾವುದೇ ವಿಷಯದ ಬಗ್ಗೆ ನಾವು ಗಮನಿಸಿದ ಅಂಶಗಳನ್ನು ಸೂಚಿಸುವ ಒಂದು ಸುಲಭ ಮಾರ್ಗ ನಕ್ಷೆ. ಈಗ ಇವುಗಳನ್ನು ನಕ್ಷೆಯಲ್ಲಿ ಗುರುತಿಸುವ ಕ್ರಮವನ್ನು ತಿಳಿಯುವಾ.

ಜನರು ಕೆಲವು ತಿಂಗಳಲ್ಲಿ  ‘ಈಗ ತುಂಬಾ ಸೆಖೆ’ ಎಂದು ಹೇಳುವುದನ್ನು ಕೇಳಿರಬಹುದು. ಇದು ಅವರು ಗಮನಿಸಿದ ಅಂಶ. ಅವರ ಅನಿಸಿಕೆಯನ್ನು ಸ್ಪಷ್ಟ ಮಾಹಿತಿಗಳಿಂದ ಪರೀಕ್ಷಿಸಬಹುದು. ಹವಾಮಾನ ಇಲಾಖೆಯು ಪ್ರತಿ ದಿನ ಹೆಚ್ಚಿನ ನಗರಗಳ ಕನಿಷ್ಟ ಮತ್ತು ಗರಿಷ್ಠ ಉಷ್ಣಾಂಶಗಳ ದಾಖಲೆ ಇಟ್ಟಿರುತ್ತದೆ.

ಉತ್ತರ ಭಾರತದಲ್ಲಿನ ಒಂದು ನಗರದ ಒಂದು ವರ್ಷದ 12 ತಿಂಗಳುಗಳಲ್ಲಿನ ಗರಿಷ್ಠ ಹಾಗೂ ಕನಿಷ್ಟ ಉಷ್ಣಾಂಶಗಳು ಕೆಳಗಿನಂತಿವೆ.

ತಃಖ್ತೆ:

ತಿಂಗಳು ->

ಜನವರಿ

ಫೆಬ್ರವರಿ

ಮಾರ್ಚಿ

ಎಪ್ರಿಲ್

ಮೇ

ಜೂನ್

ಜುಲೈ

ಅಗೋಸ್ತು

ಸಪ್ಟೆಂ.

ಅಕ್ಟೋ.

ನವಂ.

ದಶಂಬರ

ಗರಿಷ್ಠ (0C)

ನಡು ಮಧ್ಯಾಹ್ನ

15

14

20

18

35

36

40

41

35

30

25

22

ಕನಿಷ್ಟ (0C)

ಬೆಳಗಿನ ಝಾವ

6

7

10

10

20

22

24

25

22

20

15

-5

ಈ ತಃಖ್ತೆಯಿಂದ ಯಾವುದೇ ತಿಂಗಳ ಮಧ್ಯದ ಅಂದಾಜು ಉಷ್ಣತೆಯನ್ನು ಕಂಡುಹಿಡಿಯುವುದು ಕಷ್ಟ.

ಆದರೆ ಅದನ್ನೇ ನಕ್ಷೆಯ ಮೂಲಕ ತೋರಿಸಿದರೆ ಹೇಗೆ ಇರುತ್ತದೆ ಎಂದು ನೋಡುವ.

ಇಲ್ಲಿ ನೀಲಿ ಬಣ್ಣದ ರೇಖೆಯು ಗರಿಷ್ಠ ಉಷ್ಣಾಂಶವನ್ನು ಗುಲಾಬಿ ಬಣ್ಣದ ರೇಖೆಯು ಕನಿಷ್ಟ ಉಷ್ಣಾಂಶವನ್ನು ಸೂಚಿಸುತ್ತದೆ.

ಮೊದಲು ವಿವರಿಸಿದಂತೆ ತಃಖ್ತೆಯಲ್ಲಿ ದತ್ತಾಂಶಗಳನ್ನು ನಿರೂಪಿಸುವುದಕ್ಕಿಂತ ಚಿತ್ರದಲ್ಲಿ (ಗ್ರಾಫ್/ನಕ್ಷೆ) ಸೂಚಿಸಿದರೆ ಸಮಸ್ಯೆಯನ್ನು, ವಿಷಯವನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದಲ್ಲವೇ?

“ಸಾವಿರ ಶಬ್ದಗಳಲ್ಲಿ ಹೇಳುವುದನ್ನು ಒಂದು ಚಿತ್ರವು ಹೇಳುತ್ತದೆ.” ಎನ್ನುವ ಹೇಳಿಕೆ ಸೂಕ್ತವಾಗಿಲ್ಲವೇ?

ನಾವೀಗ ಮೇಲಿನ ನಕ್ಷೆಯನ್ನು ಹೇಗೆ ರಚಿಸಿದ್ದೇವೆಂದು ನೋಡುವಾ.

ನಕ್ಷೆಯ ಅಡ್ಡ ಸಾಲಿನಲ್ಲಿ ತಿಂಗಳ ಹೆಸರಿದೆ.  ಪ್ರತಿ ತಿಂಗಳಿಗೂ ಮಧ್ಯದಲ್ಲಿ 1ಸೆ.ಮಿ. ನಷ್ಟು ಅಂತರ ಬಿಟ್ಟಿದೆ. ಆದ್ದರಿಂದ ಅಡ್ಡಸಾಲಿನ ಸ್ಕೇಲ್ ಪ್ರಮಾಣ 1ಸೆ.ಮಿ. = 1 ತಿಂಗಳು. ಲಂಬರೇಖೆಯಲ್ಲಿ -10 ರಿಂದ ಆರಂಭಿಸಿ 10 ರ ಗುಣಕಗಳಲ್ಲಿ(-10,0,10,20,30,40,50). ಗುರುತುಗಳಿವೆ. ಯಾವುದೇ ಎರಡು ಗುರುತುಗಳ ನಡುವಿನ ಅಂತರ 1ಸೆ.ಮಿ. =100C.

ಯಾವುದೇ ತಿಂಗಳಲ್ಲಿè  500C, ಗಿಂತ ಹೆಚ್ಚಿನ ಉಷ್ಣತೆ ದಾಖಲಾಗಿಲ್ಲದಿರುವುದರಿಂದ 500C ಯ ನಂತರ ಗುರುತು ಮಾಡಿಲ್ಲ. ಅದೇರೀತಿ -100C, ಗಿಂತ ಕಡಿಮೆ ಉಷ್ಣತೆ ದಾಖಲಾಗಿಲ್ಲದಿರುವುದರಿಂದ,-200C ಮತ್ತು ಅದಕ್ಕಿಂತ ಕೆಳಗೆಗುರುತು ಮಾಡಿಲ್ಲ. ಈ ನಕ್ಷೆಯಲ್ಲಿ ಅಡ್ಡಸಾಲು ಮತ್ತು ಕಂಬಸಾಲಿನಲ್ಲಿ ಪ್ರಮಾಣ (ಸ್ಕೇಲ್) ಒಂದೇ ಇಟ್ಟಿದ್ದರೂ ಕೂಡಾ, ಅವುಗಳು ಒಂದೇ ಆಗಿರಬೇಕಾಗಿಲ್ಲ. ಇಲ್ಲಿ, ಎಲ್ಲಾ ದತ್ತಾಂಶಗಳೂ ಒಂದೇ ಪುಟದಲ್ಲಿ ಬರಲಿಕ್ಕಾಗಿ, ಪ್ರಮಾಣವನ್ನು 1ಸೆ.ಮಿ. ಎಂದು ಇಟ್ಟಿದೆ. ಭೌಗೋಳಿಕ ಭೂಪಟದಲ್ಲಿ ಪ್ರಮಾಣ 1ಸೆ.ಮಿ =1000 ಕಿ.ಮಿ.ಆಗಿರುವುದನ್ನು ನೀವು ಗಮನಿಸಿರಬಹುದು.

ಗಮನಿಸಿ: ಮೇಲಿನ ನಕ್ಷೆಯಿಂದ ಯಾವುದೇ ತಿಂಗಳ ಮಧ್ಯದಲ್ಲಿನ ಕನಿಷ್ಟ ಮತ್ತು ಗರಿಷ್ಠ ಉಷ್ಣತೆಯನ್ನು ಸುಲಭವಾಗಿ ತಿಳಿಯಬಹುದು. ಆದರೆ ತಃಖ್ತೆಯಿಂದ ಇದನ್ನು ತಿಳಿಯುವುದು ಸುಲಭವಲ್ಲ.

ರೂಢಿಯಲ್ಲಿ ನಾವು ಅಡ್ಡ ರೇಖೆಯನ್ನು x ಅಕ್ಷ ವೆಂತಲೂ ಲಂಬ ರೇಖೆಯನ್ನು y ಅಕ್ಷ ವೆಂತಲೂ ಕರೆಯುತ್ತೇವೆ. ನಕ್ಷೆಯಲ್ಲಿ ಯಾವುದೇ ಬಿಂದುವನ್ನು ಅದರ ನಿರ್ದೇಶಾಂಕ (x, y) ಗಳಿಂದ ಗುರುತಿಸುತ್ತೇವೆ.

ಉದಾ 1: ಮೇಲಿನ ತಃಖ್ತೆಯಂತೆ, ಗರಿಷ್ಠ ತಾಪಮಾನದ ನಕ್ಷೆಯನ್ನು ರಚಿಸಿ.

ಅಡ್ಡಸಾಲು (x ಅಕ್ಷ ) ತಿಂಗಳುಗಳನ್ನು ಸೂಚಿಸಲಿ. ಲಂಬಸಾಲು (y ಅಕ್ಷ) ಗರಿಷ್ಠ ತಾಪಮಾನವನ್ನು ಸೂಚಿಸಲಿ. ಜನವರಿಯಿಂದ ಡಿಸೆಂಬರ್ ವರೆಗಿನ ತಿಂಗಳುಗಳನ್ನು 1 ರಿಂದ 12 ಸಂಖ್ಯೆಗಳಿಂದ ಸೂಚಿಸಿದೆ. ಆಗ ನಿರ್ದೇಶಾಂಕಗಳು:

ತಿಂಗಳು:   x à

1

2

3

4

5

6

7

8

9

10

11

12

ತಾಪಮಾನ: yà

15

14

20

18

35

36

40

41

35

30

25

22

(x, y)à

(1,15)

(2,14)

(3,20)

(4,18)

(5,35)

(6,36)

(7,40)

(8,41)

(9,35)

(10,30)

(11,25)

(12,22)

ಉಷ್ಣತೆ 45 ಕ್ಕಿಂತ ಹೆಚ್ಚಿಲ್ಲದಿರುವುದರಿಂದ, ನಕ್ಷೆ ಸ್ಪಷ್ಟವಾಗಿ ಬರಲು, ಪ್ರಮಾಣವನ್ನು 1 ಸೆ.ಮಿ. = 50C ಎಂದಿಟ್ಟುಕೊಳ್ಳುವಾ. Y ಅಕ್ಷ ದಲ್ಲಿ ಗುರುತುಗಳನ್ನು ಮಾಡುವಾಗ 0 ಯಿಂದ ಆರಂಭಿಸಿ, 5 ರ ಗುಣಕಗಳಲ್ಲಿ ಗುರುತಿಸಿ (0,5,10,15..). (x,y) ಬಿಂದುಗಳನ್ನು ಗುರುತಿಸಿ, ಜೋಡಿಸಿ. ಆಗ ಈ ಕೆಳಗಿನಂತೆ ನಕ್ಷೆ ದೊರೆಯುತ್ತದೆ.

ಉದಾ 2: ನೀವು ನಿಮ್ಮ ಶಾಲಾ ಕ್ರೀಡಾಕೂಟದಲ್ಲಿ 2000,2001,2002,2003 ಮತ್ತು 2004 ನೇ ಇಸವಿಗಳಲ್ಲಿ 100 ಮಿ. ಓಟದಲ್ಲಿ ತೆಗೆದುಕೊಂಡ ಸಮಯದ (ಮೊದಲ 3 ಸ್ಥಾನಗಳು ಮಾತ್ರ)ಮಾಹಿತಿ ಸಂಗ್ರಹಿಸಿದ್ದೀರೆಂದಿಟ್ಟುಕೊಳ್ಳಿ.100 ಮಿ. ಓಡಲು ಹೆಚ್ಚಿನ ಸಂದರ್ಭಗಳಲ್ಲಿ ಎಷ್ಟು ಸಮಯ ತೆಗೆದು ಕೊಂಡಿದ್ದಾರೆ ಎಂದು ತಃಖ್ತೆಯನ್ನು ನೋಡಿ ಹೇಳುವುದು ಸುಲಭವೇ?

ಸಂಖ್ಯೆ

ಹೆಸರು

ತರಗತಿ

ವರ್ಷ

ಸ್ಥಾನ

100 ಮಿ. ಓಡಲು ತೆಗೆದುಕೊಂಡ ಸಮಯ

1

ರಾಮ

8

2000

 

 

1

15ಸೆ.

2

ಜಾನ್

9

2

16ಸೆ.

3

ಕೃಷ್ಣ

10

3

17ಸೆ.

4

ಲೂಯಿಸ್

9

2001

1

12ಸೆ.

5

ಶಾಮ್

8

2

17ಸೆ.

6

ಗೋಪಾಲ

9

3

19ಸೆ.

7

ಅಹ್ಮದ್‍

9

2002

1

13ಸೆ.

8

ಖಾನ್ ಎ.ಕೆ.

8

2

16ಸೆ.

9

ಅರುಣ

10

3

17ಸೆ.

10

ಮೋಹನ

10

2003

1

16ಸೆ.

11

ಫಿಲಿಫ್ಸ

8

2

17ಸೆ.

12

ಅಜಯ್

9

3

18ಸೆ.

13

ಪ್ರಮೋದ

9

2004

1

14ಸೆ.

14

ರೇಮಂಡ್

8

2

15ಸೆ.

15

ಗೋಪಿ

9

3

15ಸೆ.

ಈಗ ನಾವು ಓಟಗಾರರು ತೆಗೆದು ಕೊಂಡ ಸಮಯಗಳನ್ನು ಮಾತ್ರ ಪರಿಗಣಿಸುವಾ: ಅವುಗಳು: 15,16,17,12,17,19,13,16,17,16,17,18,14,15,15 ಸೆಕೆಂಡುಗಳು. ಈ ಮೇಲಿನ ಅಂಶಗಳು ಯಾವುದೇ ಒಂದು ಕ್ರಮದಲ್ಲಿಲ್ಲ. ಆದ್ದರಿಂದ ಅವುಗಳನ್ನು ಆರೋಹಣ (ಏರಿಕೆಯ) ಕ್ರಮದಲ್ಲಿ ಬರೆದಾಗ,

12, 13, 14, 15, 15, 15, 16, 16, 16, 17, 17, 17, 17, 18, 19.

ಕ್ರ.ಸಂ

ಸಮಯ(ಸೆ..)

ಎಷ್ಟು ಸಾರಿ ಬಂದಿದೆ (ಆವರ್ತಗಳು)

1

12

1

2

13

1

3

14

1

4

15

3

5

16

3

6

17

4

7

18

1

8

19

1

ಒಟ್ಟು

=15  ಒಟ್ಟು ಮೌಲ್ಯಗಳು

ಮೇಲಿನ ತಃಖ್ತೆಯು ವರ್ಗೀಕರಿಸದ ಆವೃತ್ತಿ ವಿತರಣ ಪಟ್ಟಿ( ungrouped frequency distribution table).

ಈ ಮೇಲಿನ ತಃಖ್ತೆಯಿಂದ ನಾವು ಈ ಕೆಳಗಿನ ಅಂಶಗಳನ್ನು ಗಮನಿಸಬಹುದು:-

  • ಮೇಲಿನ ತಃಖ್ತೆಯು ವರ್ಗೀಕರಿಸದ ಆವೃತ್ತಿ ವಿತರಣ ಪಟ್ಟಿ( ungrouped frequency distribution table).ಅತೀ ಕಡಿಮೆ ಸಮಯ: 12 ಸೆ.. ಇದು  2001 ರಲ್ಲಿ ದಾಖಲಾಗಿದೆ..
  • ಗರಿಷ್ಠ ಸಮಯ: 19 ಸೆ.. (ಮೊದಲ 3 ಸ್ಥಾನ ಬಂದವರಲ್ಲಿ) ಇದು 2001 ರಲ್ಲಿ ದಾಖಲಾಗಿದೆ.
  • 17 ಸೆ.. ಹೆಚ್ಚು ಸಾರಿ (4) ಬಂದಿದೆ. ಹೆಚ್ಚಿನ ಸಂದರ್ಭಗಳಲ್ಲಿ ಓಡಲು 17 ಸೆ.. ಸಮಯ ತೆಗೆದುಕೊಂಡಿದ್ದಾರೆ.

ಮೇಲಿನ ಅಂಕಿ ಅಂಶಗಳನ್ನು ಗುಂಪಾಗಿ ಮಾಡಿದಾಗ:

ಕ್ರ.ಸಂ.

ಗುಂಪುಗಳ ವರ್ಗ ವ್ಯಾಪ್ತಿ

ಆವರ್ತಗಳು(ಆವೃತ್ತಿ)

1

12ಸೆ. -14ಸೆ.

3

2

15ಸೆ.-17ಸೆ..

10

3

18ಸೆ.-20ಸೆ.

2

ಒಟ್ಟು

=15 ಒಟ್ಟು ಮೌಲ್ಯಗಳು

ಈ ಮೇಲಿನ ತಃಖ್ತೆಯನ್ನು ವರ್ಗೀಕರಿಸಿದ ಆವರ್ತವಿತರಣ ಪಟ್ಟಿ (Grouped frequency distribution table) ಎನ್ನುವರು..

ಅಂಕಿ ಅಂಶಗಳು ಅತಿ ಹೆಚ್ಚು ಇದ್ದಾಗ, ವರ್ಗೀಕರಿಸಿದ ಆವರ್ತ ವಿತರಣ ಪಟ್ಟಿಯು ಅಧ್ಯಯನಕ್ಕೆ ಸುಲಭ.

ನಾವು ಗುಂಪುಗಳನ್ನು ಮಾಡುವಾಗ 3- ಸೆಕೆಂಡ್ ಸಮಯದ ಅಂತರವಿಟ್ಟಾಗ {(12-14),(15-17),(18-20)} ವರ್ಗಾಂತರ (15ಸೆ..-17ಸೆ..) ಅತಿ ಹೆಚ್ಚು ಆವರ್ತ (10), ಗಳನ್ನು ಹೊಂದಿದೆ. ಇದರರ್ಥ ಹೆಚ್ಚಿನ ಬಹುಮಾನಿತರು 100ಮಿ. ಓಡಲು 15 ರಿಂದ 17 ಸೆ. ಕಾಲ ತೆಗೆದುಕೊಂಡಿದ್ದಾರೆ. ಗುಂಪುಗಳನ್ನು ಬೇರೆ ಅಂತರದಲ್ಲಿ ಮಾಡಿದರೆ ತೀರ್ಮಾನ ಬೇರೆಯೇ ಆಗಿರುತ್ತದೆ.

ಸಂಖ್ಯಾ ಶಾಸ್ತ್ರದ ಕೆಲವು ಪದಗಳು

ನಾವು ಸಂಗ್ರಹಿಸಿದ ಅಂಕಿ ಅಂಶಗಳನ್ನು “ಮೌಲ್ಯ” ಅಥವಾ “ಗಮನಿಸಿದ ಅಂಶ” ಅಥವಾ “ವೀಕ್ಷಿಸಿದ ಅಂಶ” (Scores,observations) ಎಂದು ಕರೆಯುತ್ತೇವೆ.ಒಂದು ಮೌಲ್ಯವು ಎಷ್ಟು ಸಾರಿ ಪುನರಾವರ್ತನೆ ಆಗುವುದೋ ಆ ಸಂಖ್ಯೆಯನ್ನು ‘ಆವರ್ತ ಸಂಖ್ಯೆ’ ಅಥವಾ ‘ಆವೃತ್ತಿ’ (Frequency)ಎಂದು ಕರೆಯುತ್ತೇವೆ. ಕೆಲವು ಸಾರಿ ನಾವು ವರ್ಗೀಕರಣ ಮಾಡುವಾಗ ಪ್ರತೀ ಗುಂಪಿಗೂ ಒಂದು ಅಂತರ ಇಡುತ್ತೇವೆ. ಈ ಉಪ ಗುಂಪುಗಳನ್ನು ‘ವರ್ಗಾಂತರಗಳು’ಅಥವಾ ‘ವರ್ಗವ್ಯಾಪ್ತಿ’ (Class-intervals) ಎನ್ನುತ್ತೇವೆ. ಈ ವರ್ಗಾಂತರಕ್ಕನುಗುಣವಾಗಿ ತೀರ್ಮಾನಗಳೂ ಬದಲಾಗಬಹುದು. ಒಂದುಸಾರಿ ಒಂದು ಅಂತರದ ವರ್ಗಾಂತರವನ್ನು ಆಯ್ಕೆಮಾಡಿಕೊಂಡ ಮೇಲೆ, ಅದನ್ನು ಬದಲಾಯಿಸದೇ ಅದೇ ರೀತಿಯಲ್ಲಿ ಎಲ್ಲಾ ಮೌಲ್ಯಗಳನ್ನು ಪಟ್ಟಿ ಮಾಡಬೇಕು. (ಮೇಲಿನ ಉದಾಹರಣೆಯಲ್ಲಿ 2 -ಸೆಕೆಂಡ್ ಅಂತರ ಮತ್ತು 3-ಸೆಕೆಂಡ್ ಅಂತರಗಳನ್ನು ಒಂದೇ ತಃಖ್ತೆಯಲ್ಲಿ ತೆಗೆದುಕೊಳ್ಳುವ ಹಾಗಿಲ್ಲ) ಮೌಲ್ಯಗಳ ಗರಿಷ್ಠ ಮತ್ತು ಕನಿಷ್ಟ ಬೆಲೆಗಳ ವ್ಯತ್ಯಾಸವನ್ನು “ಮೌಲ್ಯಗಳ ವ್ಯಾಪ್ತಿ” (range of data) ಎನ್ನುವರು.

ಒಂದು ವಿಷಯಕ್ಕೆ ಸಂಬಂಧಿಸಿದ, ವ್ಯವಸ್ಥಿತವಾಗಿ ಕಲೆಹಾಕಿದ ಅಂಕೆ ಸಂಖ್ಯೆಗಳ ವಿಶ್ಲೇಷಣೆ ಮತ್ತು ವಿವರಣೆ ಕೊಡುವ ಶಾಸ್ತ್ರವನ್ನು “ಸಂಖ್ಯಾ ಶಾಸ್ತ್ರ” (Statistics)  ಎನ್ನುವರು..

ಒಂದು ದೇಶದ ಆರ್ಥಿಕತೆಯ ಬದಲಾವಣೆ, ಹವಾಮಾನದ ವ್ಯತ್ಯಾಸ ಇತ್ಯಾದಿಗಳನ್ನು ತಿಳಿಯಲು ಗಣಿತದ ಈ ಭಾಗ ಉಪಯುಕ್ತವಾಗಿದೆ. ಈ ವೈಜ್ಞಾನಿಕ ಮುನ್ಸೂಚನೆಗಳಿಂದ ಸರಕಾರಕ್ಕೆ ಮತ್ತಿತರ ಸಂಸ್ಥೆಗಳಿಗೆ ಭವಿಷ್ಯವನ್ನು ರೂಪಿಸಿಕೊಳ್ಳಲು ಸಹಾಯವಾಗುತ್ತದೆ.

ಅಂಕಿ ಅಂಶಗಳನ್ನು ನಕ್ಷೆಗಳ ಮೂಲಕ ಪ್ರತಿನಿಧಿಸುವ ವಿಧಾನ

ಸ್ತಂಭಾಲೇಖಾ

ಉದಾ 1: ನೀವು ಅಥವಾ ನಿಮ್ಮ ಸ್ನೇಹಿತ, ಕ್ರಿಕೆಟ್ ಆಡುವಾಗ ಒಂದು ಶಾಲಾ ಪಂದ್ಯದಲ್ಲಿ ರನ್‍ಗಳನ್ನು ಗಳಿಸುತ್ತೀರಿ. ಅಂತಹ ಪಂದ್ಯದಲ್ಲಿ ನೀವು ಶತಕ ಬಾರಿಸುತ್ತೀರಿ. ಇದಕ್ಕಾಗಿ ಚೆಂಡನ್ನು ವಿಕೆಟ್ ಸುತ್ತ ಎಲ್ಲಾ ಕಡೆಗೆ ಬಾರಿಸುತ್ತೀರಿ. ಆಗ ಚೆಂಡು ವಿಕೆಟ್ನ ಸುತ್ತ 6 ಪ್ರಮುಖ ಕೇಂದ್ರಗಳ ಮೂಲಕ ಹಾದು ಹೋಗಿರುತ್ತದೆ (ಮಿಡ್ ವಿಕೆಟ್, ಕವರ್, ಲಾಂಗ್ ಆನ್, ಲಾಂಗ್ ಆಫ್, ಫೈನ್ ಲೆಗ್ ಮತ್ತು ಥರ್ಡ್‍ಮೆನ್) ನೀವು ನೂರು ರನ್‍ಗಳನ್ನು ಗಳಿಸಿದ ರೀತಿ ಕೆಳಗಿನ ತಃಖ್ತೆಯಲ್ಲಿದೆ.

ಈಗ ಚೆಂಡು ಹೊಡೆದ ಪ್ರದೇಶ ಮತ್ತು ಗಳಿಸಿದ ರನ್‍ಗಳಿಗೆ ನಕ್ಷೆಯನ್ನು ಬಿಡಿಸುವಾ.

 

ಸ್ತಂಭಾಲೇಖ: (Bar Chart)

ಮೇಲೆ ಸೂಚಿಸಿದ ಅಂಕಿ ಅಂಶಗಳನ್ನು ಬಲಗಡೆಯ ಚಿತ್ರದಲ್ಲಿರುವಂತೆ ಸೂಚಿಸಬಹುದು (ಸ್ತಂಭಾಲೇಖ ಅಥವಾ ಕಂಬಸಾಲು ನಕ್ಷೆ)

ಲಂಬಸಾಲಿನಲ್ಲಿ 5 ರನ್ನುಗಳಿಗೆ 1 ಗುರುತು ಇದೆ. (0 ಯಿಂದ 30).

ಚೆಂಡನ್ನು ಹೊಡೆದ ಸ್ಧಳಗಳ ಹೆಸರು ಅಡ್ಡ ಸಾಲಿನಲ್ಲಿದೆ.

ಪ್ರತೀ ಸ್ಥಳವನ್ನು ಒಂದು ಸ್ತಂಭದಿಂದ ಸೂಚಿಸಿದೆ. ಸ್ತಂಭದ ಎತ್ತರವು ಆ ಪ್ರದೇಶದಲ್ಲಿ ಚೆಂಡನ್ನು ಹೊಡೆದಾಗ ಗಳಿಸಿದ ರನ್ನುಗಳ ಅನುಪಾತದಲ್ಲಿದೆ. ರನ್ ಹೆಚ್ಚಾದ ಹಾಗೆ ಸ್ಥಂಭದ ಎತ್ತರ ಹೆಚ್ಚಾಗುತ್ತದೆ. ಪ್ರತೀ ಸ್ತಂಭದ ಅಗಲ ಒಂದೇ ಸಮನಾಗಿದೆ. ಸ್ತಂಭಗಳ ಮಧ್ಯದ ಖಾಲಿ ಸ್ಥಳವೂ ಸಮನಾಗಿದೆ.

 

 

ಪೈ ನಕ್ಷೆ (Pie Chart)

ಈಗ ನಾವು ಮೇಲಿನ ತಿಳಿಸಿದ ಅಂಕಿ ಅಂಶಗಳನ್ನು ಇನ್ನೊಂದು ಹೊಸ ಮಾದರಿಯ ನಕ್ಷೆಯಲ್ಲಿ ನಿರೂಪಿಸುವಾ. ಇದನ್ನು ಪೈ ನಕ್ಷೆ ಎನ್ನುವರು. (ಚಿತ್ರನೋಡಿ).

ಇಲ್ಲಿ ರನ್ನು ಗಳಿಸಿದ ಪ್ರತೀ ಪ್ರದೇಶವನ್ನು ವಿವಿಧ ಬಣ್ಣಗಳಿಂದ ಸೂಚಿಸಿದೆ. ಇಲ್ಲಿ ರನ್ನು ಸಂಖ್ಯೆಯನ್ನು3600 ಕೋನದ ಶೇಕಡಾ ಪರಿಣಾಮವಾಗಿ ಪರಿವರ್ತಿಸಿ, ವೃತ್ತ ಖಂಡಗಳನ್ನೆಳೆದಿದೆ.

ಪ್ರತೀ ವೃತ್ತ ಖಂಡವೂ ಒಂದೊಂದು ಪ್ರದೇಶದಲ್ಲಿ ಗಳಿಸಿದ ರನ್ನುಗಳ ಅನುಪಾತದಲ್ಲಿದೆ. ಶೇಕಡಾ ಪ್ರಮಾಣ ಹೆಚ್ಚಾದಷ್ಟು, ವೃತ್ತ ಖಂಡದ ಗಾತ್ರ ಹೆಚ್ಚಾಗುತ್ತದೆ.

 

ಈ ಮೇಲಿನ ಎರಡು ನಕ್ಷೆಗಳನ್ನು ಹೋಲಿಸಿದಾಗ, ಈ ಉದಾಹರಣೆಯಲ್ಲಿ ಪೈ ನಕ್ಷೆಯು ಸ್ತಂಭಾಲೇಖಕ್ಕಿಂತ ಹೆಚ್ಚು ಸೂಕ್ತ ಎನಿಸುವುದಿಲ್ಲವೆ?

ಏಕೆ?

ನೀಡಿದ ಅಂಕಿ ಅಂಶಗಳನ್ನು ಶೇಕಡಾವಾರು ಪರಿವರ್ತಿಸಲು ಆಗದಿದ್ದರೆ ಸ್ತಂಭಾಲೇಖ ಸೂಕ್ತ(ಉದಾ: ದತ್ತ ಅಂಶಗಳು ಬೇರೆ ದೇಶಗಳಿಗೆ ಅಥವಾ ಬೇರೆ ಬೇರೆ ವರ್ಷಗಳಿಗೆ ಸಂಬಂಧಿಸಿದಾಗ) ನೀಡಿದ ಅಂಕಿ ಅಂಶಗಳನ್ನು ಶೇಕಡಾವಾರು ಪರಿವರ್ತಿಸಲು  ಆಗುವುದಾದರೆ ಪೈ ನಕ್ಷೆಯೇ ಸೂಕ್ತ.

ಉದಾ 2: ಕೆಳಗೆ ತ:ಖ್ತೆಯಲ್ಲಿ  ಕೊಟ್ಟಿರುವ ಅಂಶಗಳು ಒಂದು ಮಂಡಳಿಯ ಪರೀಕ್ಷೆಯಲ್ಲಿ ಕೆಲವು ವರ್ಷಗಳಲ್ಲಿನ ಶೇಕಡಾ ಉತ್ತೀರ್ಣತೆಯನ್ನು ತೋರಿಸುತ್ತದೆ.

ಪರಿಹಾರ:

 

 

 

 

ಪಕ್ಕದ ಚಿತ್ರದಲ್ಲಿ ಶೇಕಡಾ ಉತ್ತೀರ್ಣತೆಯನ್ನು

0 ಯ ಬದಲಾಗಿ 42 ರಿಂದ ಆರಂಭಿಸಿದ್ದೇವೆ.

ಏಕೆ?

(ಸೊನ್ನೆಯಿಂದ ಆರಂಭಿಸಿದರೆ ನಕ್ಷೆ ತುಂಬಾ ಉದ್ದವಾಗುತ್ತದೆ.)

ಸ್ತಂಭಾಲೇಖ ಮತ್ತು ಪೈ ನಕ್ಷೆಯ ರಚನೆ

5.2ಉದಾ 3: ಮಾನವನ ಹೃದಯ ಬಡಿತದ ವಿವರಗಳನ್ನು ಕೊಟ್ಟಿದೆ. ಸೂಕ್ತವಾದ ಪ್ರಮಾಣ ಉಪಯೋಗಿಸಿ ನಕ್ಷೆ ರಚಿಸಿ:-

ಪ್ರಾಯ (ವರ್ಷಗಳಲ್ಲಿ)   à

5

10

12

15

18 ರ ಮೇಲೆ

ಹೃದಯ ಬಡಿತ(ನಿಮಿಷಕ್ಕೆ) à

100

92

85

80

72

ಪರಿಹಾರ:

ಇಲ್ಲಿ ಹೃದಯ ಬಡಿತದ ಸಂಖ್ಯೆಗಳನ್ನು ಶೇಕಡಾ ಪ್ರಮಾಣದಲ್ಲಿ ನಿರೂಪಿಸಲು ಸಾಧ್ಯವಿಲ್ಲ. ಆದ್ದರಿಂದ ಅಂಕಿ ಅಂಶಗಳಿಗೆ ಸೂಕ್ತವಾದ ನಕ್ಷೆ ‘ಸ್ತಂಭಾಲೇಖ’.

ಹಂತ 1. ಒಂದು ಖಾಲಿ ಹಾಳೆ ಅಥವಾ ನಕ್ಷಾಕಾಗದ(ಗ್ರಾಫ್ ಹಾಳೆ)ದಲ್ಲಿ ಒಂದು ಅಡ್ಡಗೆರೆ ‘OX’ ಹಾಕಿ.

ಹಂತ 2. O ಬಿಂದುವಿನಲ್ಲಿ OX ಗೆ ಲಂಬವಾಗಿ OY ರೇಖೆ ಎಳೆಯಿರಿ.

OX ರೇಖೆಯು ಮಾನವನ ವಯಸ್ಸನ್ನು ಸೂಚಿಸುತ್ತದೆ. OY ರೇಖೆಯು ಹೃದಯ ಬಡಿತದ ಸಂಖ್ಯೆಗಳನ್ನು ಸೂಚಿಸುತ್ತದೆ.

ಹಂತ 3. ಹೃದಯ ಬಡಿತ 72 ರಿಂದ 100ರವರೆಗೆ ಇದೆ. ಆದ್ದರಿಂದ ಪ್ರಮಾಣ    1 ಸೆ.ಮಿ. = 10 ಬಡಿತ ಎಂದಿಟ್ಟುಕೊಳ್ಳಿ.

ಆಗ,

100 ಬಡಿತ  =  100*1/10 = 10 ಸೆ.ಮಿ

92   ಬಡಿತ =   92*1/10 = 9.2 ಸೆ.ಮಿ

85   ಬಡಿತ = 85*1/10   = 8.5 ಸೆ.ಮಿ

80   ಬಡಿತ = 80*1/10  =  8 ಸೆ.ಮಿ

72   ಬಡಿತ = 72*1cm/10  = 7.2 ಸೆ.ಮಿ

ಇವುಗಳು ಸ್ತಂಭಗಳ ಎತ್ತರಗಳಾಗಿವೆ.

ಹಂತ 4. ‘OX’ ರೇಖೆಯ ಮೇಲೆ O ದಿಂದ ಸುಮಾರು 1.5 ಸೆ.ಮಿ. ದೂರದಲ್ಲಿ è ‘5’ ನ್ನು ಗುರುತಿಸಿ (ಇದು ವಯಸ್ಸು 5 ನ್ನು ಸೂಚಿಸುತ್ತದೆ)

ಹಂತ 5. ‘5’ರ ಮೇಲೆ 10ಸೆ.ಮಿ. ಎತ್ತರ (=100 ಬಡಿತ) ಮತ್ತು 1 ಸೆ.ಮಿ. ಅಗಲದ ಒಂದು ಸ್ತಂಭದಿಂದ ರಚಿಸಿ. ಈ ಸ್ತಂಭವು 5ವರ್ಷ ಪ್ರಾಯದವನ ಹೃದಯ ಬಡಿತವನ್ನು ಸೂಚಿಸುತ್ತದೆ.

ಹಂತ 6. ಈ ಸ್ತಂಭದಿಂದ ಸುಮಾರು 1.5 ಸೆ.ಮಿ. ದೂರದಲ್ಲಿ ‘10’ ನ್ನು ಗುರುತಿಸಿ. (ಇದು ವಯಸ್ಸು 10ನ್ನು ಸೂಚಿಸುತ್ತದೆ).

ಹಂತ 7. ‘10’ರ ಮೇಲೆ 9.2ಸೆ.ಮಿ (=92 ಬಡಿತ) ಎತ್ತರದ, 1ಸೆ.ಮಿ. ಅಗಲದ ಒಂದು ಸ್ತಂಭವನ್ನು ರಚಿಸಿ. ಈ ಸ್ತಂಭವು 10 ವರ್ಷ ಪ್ರಾಯದವನ ಹೃದಯ ಬಡಿತವನ್ನು ಸೂಚಿಸುತ್ತದೆ.

ಹಂತ 8. 6 ಮತ್ತು 7 ನೇ ಹಂತಗಳಲ್ಲಿ ಮಾಡಿದ ಕ್ರಿಯೆಯನ್ನು ಉಳಿದ ಪ್ರಾಯಗಳಾದ 12, 15 ಮತ್ತು ‘>18’ ಕ್ಕೂ ಮಾಡಿ.(8.5ಸೆ.ಮಿ., 8ಸೆ.ಮಿ. ಮತು 7.2ಸೆ.ಮಿ.ಸ್ತಂಭ ರಚಿಸಿ) ಪ್ರತೀ ಸ್ತಂಭದ ಅಗಲ ಒಂದೇ ಆಗಿರಲಿ (1ಸೆ.ಮಿ.).

 

 

 

 

 

ಉದಾ 4: 250 ವಿದ್ಯಾರ್ಥಿಗಳಲ್ಲಿ ದೂರದರ್ಶನದ ಬೇರೆ ಬೇರೆ ಚಾನೆಲ್‍ಗಳನ್ನು ವೀಕ್ಷಿಸಲು ಇಷ್ಟ ಪಡುವವರ ವಿವರಣೆ ಪಟ್ಟಿ ಕೆಳಗಿದೆ. ಇದಕ್ಕೆ ಸೂಕ್ತವಾದ ನಕ್ಷೆ ರಚಿಸಿ.

 

ಚಾನೆಲ್‍ಗಳು

ವಿದ್ಯಾರ್ಥಿಗಳು

1

ನ್ಯಾಶನಲ್ ಜಿಯೊಗ್ರಾಫಿಕ್

100

2

ಡಿಸ್ಕವರಿ ಚಾನೆಲ್

50

3

ಸ್ಪೋಟ್ರ್ಸ್ ಚಾನೆಲ್

75

4

ಇತರ

25

ಪರಿಹಾರ:

ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 250 ಇದ್ದು, ಪ್ರತೀ ಚಾನೆಲ್‍ನ್ನು ವೀಕ್ಷಿಸುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಶೇಕಡಾ ಪ್ರಮಾಣದಲ್ಲಿ ಹೇಳಬಹುದು. ಆದ್ದರಿಂದ ಇಲ್ಲಿ ಪೈ ನಕ್ಷೆ ಸೂಕ್ತವಾಗಿದೆ.

ಹಂತ 1 : ನಾಲ್ಕು ವಿಧದ, ವಿದ್ಯಾರ್ಥಿಗಳ ಸಂಖ್ಯೆಗಳಿಗೆ ಅನುಗುಣವಾದ ವೃತ್ತ ಖಂಡದ ಗಾತ್ರ ಕಂಡುಹಿಡಿಯಿರಿ.

ವಿ.ಸೂ: ವೃತ್ತ ಕೇಂದ್ರದಲ್ಲುಂಟಾಗುವ ಕೋನ 3600.

ನಾವು ವಿದ್ಯಾರ್ಥಿಗಳ ಸಂಖ್ಯೆಯನ್ನು 360 ರಿಂದ ಗುಣಿಸಿ, ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯಿಂದ ಭಾಗಿಸಿ ವೃತ್ತ ಖಂಡದ ಗಾತ್ರ ನೋಡಿದೆವು.

ಹಂತ 2. ಅನುಕೂಲವಾದ ತ್ರಿಜ್ಯದಿಂದ ಒಂದು ವೃತ್ತ ರಚಿಸಿ.

ಹಂತ 3. ವೃತ್ತ ಕೇಂದ್ರದಲ್ಲಿ ಮೇಲಿನ ಕೋನಗಳಾಗುವಂತೆ ಗುರುತಿಸಿ, ಅನುಕ್ರಮವಾದ ವೃತ್ತ ಖಂಡಗಳನ್ನು ರಚಿಸಿ.

ಹಂತ 4. ಪ್ರತೀ ವೃತ್ತ ಖಂಡಕ್ಕು ಬೇರೆ ಬೇರೆ ಬಣ್ಣಗಳನ್ನು ಕೊಟ್ಟು, ಆವೃತ್ತ ಖಂಡಗಳೊಳಗೆ ಅವುಗಳಿಗನುಸಾರವಾದ ಟಿ.ವಿ. ಚಾನೆಲುಗಳ ಹೆಸರು ಬರೆಯಿರಿ.

 

ಉದಾ 5: ಒಂದು ಶಾಲೆಯ  10ನೇ ತರಗತಿಯಲ್ಲಿ 4 ವಿಭಾಗಗಳಿದ್ದು, ಅವುಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಕೆಳಗೆ ನೀಡಿದೆ.

ಅಲ್ಲಿನ ಅಂಕಿ ಅಂಶಗಳನ್ನು ಸೂಕ್ತವಾದ ಪ್ರಮಾಣ ನಕ್ಷೆಯಿಂದ ತೋರಿಸಿ.

 

ಈ ಸಮಸ್ಯೆಗೆ ನಾವು 2 ಬೇರೆ ಬೇರೆ ಕಂಬಸಾಲು ನಕ್ಷೆಗಳನ್ನು ರಚಿಸಬಹುದು.(ಒಂದು ಹುಡುಗರಿಗೆ, ಇನ್ನೊಂದು ಹುಡುಗಿಯರಿಗೆ)

ಎರಡರ ಬದಲು ಎಡಗಡೆ ಚಿತ್ರದಲ್ಲಿ  ತೋರಿಸಿದಂತೆ ಅಂಕಿ ಅಂಶಗಳನ್ನು ಒಂದರ ಪಕ್ಕದಲ್ಲಿ ಇನ್ನೊಂದು ನಮೂದಿಸಿದಾಗ ಅಧ್ಯಯನ ಸುಲಭ. ಈ ರೀತಿಯ ನಕ್ಷೆಯನ್ನು Joint Bar chartಎಂದು ಕರೆಯುತ್ತಾರೆ. ಬಲಗಡೆ ಚಿತ್ರದಲ್ಲಿ ಇರುವುದನ್ನು ‘Sub-divided bar chart’  ಎಂದು ಕರೆಯುತ್ತಾರೆ.

 

ರ್ಗೀಕರಿಸದ ದತ್ತಾಂಶಗಳಲ್ಲಿಮಧ್ಯಕ ಮಧ್ಯಾಂಕ, ಬಹುಲಕ(ರೂಢಿಬೆಲೆ)

ನೀವು ಕೆಲವೊಮ್ಮೆ ನಿಮ್ಮ ಅಧ್ಯಾಪಕರು ಹೀಗೆ ಹೇಳುವುದನ್ನು ಕೇಳಿರಬಹುದು:-

“ನಿಮ್ಮ ಶಾಲೆಯಲ್ಲಿ 8 ನೇ ತರಗತಿಯ 3 ವಿಭಾಗಗಳಲ್ಲಿ ಕಲಿಯುತ್ತಿರುವ ಸರಾಸರಿ ವಿಧ್ಯಾರ್ಥಿಗಳು 45”. ಹಾಗೆಂದರೇನು?

ಸಾಮಾನ್ಯವಾಗಿ ಪ್ರತಿ ಶಾಲೆಯಲ್ಲಿಯೂ ಪ್ರತಿ ಕ್ಲಾಸಿನಲ್ಲಿಯೂ ಹಲವು ವಿಭಾಗಗಳಿರುತ್ತವೆ.(ಉದಾ. 8ನೇ ತರಗತಿಯಲ್ಲಿ 3 ವಿಭಾಗಗಳು: A, B ಮತ್ತು C ). ಸಾಮಾನ್ಯವಾಗಿ ಈ ಮೂರೂ ವಿಭಾಗಗಳಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ ಸಮಾನವಾಗಿರುವುದಿಲ್ಲ.

 

Class A                                                Class B                                       Class C

ಉದಾ 1: ಮೇಲಿನ ಚಿತ್ರದಲ್ಲಿ ‘A’ ವಿಭಾಗದಲ್ಲಿ 47, ‘B’ ವಿಭಾಗದಲ್ಲಿ 42 ಮತ್ತು  ‘C’ ವಿಭಾಗದಲ್ಲಿ 46 ವಿದ್ಯಾರ್ಥಿಗಳಿದ್ದಾರೆ. ಈ ಮೂರೂ ವಿಭಾಗಗಳ ವಿದ್ಯಾರ್ಥಿಗಳ ಸಂಖ್ಯೆಯನ್ನು ಕೂಡಿಸಿ 47+42+46 =135. F ಈ ಸಂಖ್ಯೆಯನ್ನು 3 ರಿಂದ (ವಿಭಾಗಗಳ ಸಂಖ್ಯೆ) ಭಾಗಿಸಿದಾಗ,  135/3 = 45 (average) ವಿದ್ಯಾರ್ಥಿಗಳ ಸಂಖ್ಯೆ. ಇದೇ ರೀತಿ ನಿಮ್ಮ ಶಾಲೆಯ ಪ್ರತೀ ಕ್ಲಾಸಿನಲ್ಲಿರುವ ಸರಾಸರಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಕಂಡು ಹಿಡಿಯಬಹುದು. ಯಾವುದೇ ಒಂದು ವಿಭಾಗದಲ್ಲಿ 40 ವಿದ್ಯಾರ್ಥಿಗಳಿದ್ದರೆ,ಆ ವಿಭಾಗದ ಸರಾಸರಿ ವಿದ್ಯಾರ್ಥಿಗಳು 40

ನಾವು ಸಂಖ್ಯಾ ಶಾಸ್ತ್ರದಲ್ಲಿ ಸಂಖ್ಯೆಗಳು 47,42,46 ಗಳನ್ನು ಮೌಲ್ಯಗಳು (scores) ಎನ್ನುತ್ತೇವೆ. ಸಂಖ್ಯೆ 3 (ವಿಭಾಗಗಳ ಸಂಖ್ಯೆ) ನ್ನು ಮೌಲ್ಯಗಳ ಸಂಖ್ಯೆ (Number of scores) ಎನ್ನುತ್ತೇವೆ.

ಉದಾ 2: ನಿಮ್ಮ ಪೋಷಕರು, ನೀವು ಒಂದು ಪರೀಕ್ಷೆಯಲ್ಲಿ ಗಳಿಸಿದ ಸರಾಸರಿ ಅಂಕ 68 ಎಂದು ಹೇಳಿದ್ದನ್ನು ಕೇಳಿರಬಹುದು. ನಿಮಗೆ ಪರೀಕ್ಷೆಯಲ್ಲಿ ತುಂಬಾ ವಿಷಯಗಳಿದ್ದು, ಪ್ರತಿ ವಿಷಯದಲ್ಲಿ ಗಳಿಸಿದ ಅಂಕಗಳನ್ನು ನೆನಪಿಟ್ಟುಕೊಳ್ಳುವುದು ಕಷ್ಟ. ಆದರೆ ಒಂದೇ ಒಂದು ಸಂಖ್ಯೆಯಾದರೆ, ಅದನ್ನು ನೆನಪಿಡುವುದು ಸುಲಭ. ಆದ್ದರಿಂದ ಅಂಕಗಳನ್ನು ಸರಾಸರಿಯಲ್ಲಿ ಹೇಳುತ್ತೇವೆ. ಒಂದು ಪರೀಕ್ಷೆಯಲ್ಲಿ ನೀವು ಗಳಿಸಿದ ಅಂಕಗಳು ಹೀಗಿವೆ: ಇಂಗ್ಲಿಷ್: 60, ಕನ್ನಡ:65,ಸಮಾಜ ವಿಜ್ಞಾನ: 65, ಸಾಮಾನ್ಯ ವಿಜ್ಞಾನ: 70, ಗಣಿತ: 80.ಈ ಎಲ್ಲಾ ಅಂಕಗಳನ್ನು ಒಟ್ಟಿಗೆ ಕೂಡಿಸಿದರೆ 340 ಬರುತ್ತದೆ. ಆದ್ದರಿಂದ ಒಟ್ಟು ಅಂಕಗಳನ್ನು 5 (ವಿಷಯ) ರಿಂದ ಭಾಗಿಸಿ. ಆಗ ಭಾಗಲಬ್ಧ: 68.ಇದು ನೀವು ಗಳಿಸಿದ ಸರಾಸರಿ ಅಂಕ. ಇಲ್ಲಿ ಗಮನಿಸಿ: ಸರಾಸರಿಯು ನಿಮ್ಮ ಗರಿಷ್ಠ ಅಂಕವನ್ನಾಗಲೀ (ಗಣಿತದಲ್ಲಿ ಗಳಿಸಿದ್ದು), ಕನಿಷ್ಟ ಅಂಕವನ್ನಾಗಲೀ(ಇಂಗ್ಲಿಷ್) ಸೂಚಿಸುವುದಿಲ್ಲ.

ಗಮನಿಸಿ: ಮೇಲಿನ ಉದಾಹರಣೆಯಂತೆ, ಕೆಲವು ಸಂದರ್ಭಗಳಲ್ಲಿ ಸರಾಸರಿಯು ಸರಿಯಾದ ಅಧ್ಯಯನಕ್ಕೆ ತೊಡಕಾಗಲೂ ಬಹುದು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಮೌಲ್ಯಗಳ ಸಂಖ್ಯೆ ಹೆಚ್ಚಿದ್ದರೆ, ಈ ಸರಾಸರಿಯು ಉಪಯುಕ್ತ. (ಉದಾ: ಒಂದು ಸ್ಥಳದ ಸರಾಸರಿ ಮಳೆ, ಒಂದು ತರಗತಿಯ ಮಕ್ಕಳ ಸರಾಸರಿ ಎತ್ತರ ಇತ್ಯಾದಿ.)

ಉದಾ 3: ನಿಮ್ಮ ನೆಚ್ಚಿನ ಕ್ರಿಕೆಟ್ ಆಟಗಾರ ಕೆಲವು ಒಂದು ದಿನದ ಪಂದ್ಯಗಳಲ್ಲಿ ರನ್ನುಗಳು ಹೀಗಿವೆ:-

27,45,40,18,80,55, 47,105,46, 40,47. ಹಾಗಾದರೆ ಅವನು ಗಳಿಸಿದ ಸರಾಸರಿ ರನ್ನುಗಳೆಷ್ಟು?

ರೀತಿ:

ರನ್ನುಗಳ ಮೊತ್ತ = 27+45+40+18+80+55+ 47+105+46+40+47 =550

ಪಂದ್ಯಗಳ ಸಂಖ್ಯೆ = 11

ಪಂದ್ಯವೊಂದರ ಸರಾಸರಿ ರನ್ನುಗಳು = 550/11=50

ವ್ಯಾಖ್ಯೆ:

ಸರಾಸರಿ (ಮಧ್ಯಕ) (Mean) = ಮೌಲ್ಯಗಳ ಮೊತ್ತ/ಮೌಲ್ಯಗಳ ಸಂಖ್ಯೆ

x1,x2,x3,x4 ….xn ಇವು ಮೌಲ್ಯಗಳಾಗಿರಲಿ ( ‘n’ ಮೌಲ್ಯಗಳ ಸಂಖ್ಯೆ)

ಸರಾಸರಿ = (x1+x2+x3+x4 ….+xn)/n

ಸರಾಸರಿ = ( )/ಮೌಲ್ಯಗಳ ಸಂಖ್ಯೆ.

ಸಂಕೇತ  ಇದನ್ನು ಓದುವುದು “ಸಿಗ್ಮಾ”. ಇದನ್ನು ಸಂಖ್ಯೆಗಳ ಮೊತ್ತ ಸೂಚಿಸಲು ಬಳಸುತ್ತಾರೆ.

ಈಗ ನಾವು ಸಂಖ್ಯಾ ಶಾಸ್ತ್ರದ ಇನ್ನೂ ಕೆಲವು ವಿಷಯಗಳನ್ನು ತಿಳಿಯುವಾ.

ಉದಾ: 5.3.3 ರಲ್ಲಿ ಕೊಟ್ಟ ರನ್ನುಗಳನ್ನು ಏರಿಕೆಯ ಕ್ರಮದಲ್ಲಿ ಬರೆಯಿರಿ.

ಹಾಗೆ ಬರೆದಾಗ ರನ್ನುಗಳು: 18,27,40,40,45,46,47,47,55,80,105.

ಈ ರೀತಿ ಬರೆದಾಗ ಮಧ್ಯದಲ್ಲಿ ಬರುವ ಸಂಖ್ಯೆ (11 ರಲ್ಲಿ 6ನೇ ಯದು) 46. ಇದನ್ನು ಮಧ್ಯಾಂಕ ಅಥವಾ ಮಧ್ಯಮ ಬೆಲೆ ಎನ್ನುವರು.

ಮೌಲ್ಯಗಳನ್ನು ಅವುಗಳ ಏರಿಕೆಯ (ಅಥವಾ ಇಳಿಕೆಯ) ಕ್ರಮದಲ್ಲಿ ಬರೆದಾಗ, ಮಧ್ಯದಲ್ಲಿ ಇರುವ ಸಂಖ್ಯೆಯು ದತ್ತಾಂಶಗಳ ಮಧ್ಯಾಂಕ (‘median’) ವಾಗಿರುತ್ತದೆ.

ಗಮನಿಸಿ: ಮೇಲಿನ ಆಟಗಾರನ ಉದಾಹರಣೆಯಲ್ಲಿ ಅವನ ಸರಾಸರಿ ರನ್ನುಗಳು (50) ಮತ್ತು ಮಧ್ಯಾಂಕ (46)  ಇವೆರಡೂ ಹತ್ತಿರವಾಗಿವೆ.

ಮೇಲಿನ ಕ್ರಿಕೆಟ್ ಆಟಗಾರನ ರನ್ನುಗಳಲ್ಲಿ ಹೆಚ್ಚು ಸಾರಿ ಪುನರಾವರ್ತನೆಯಾದ ಸಂಖ್ಯೆ ಯಾವುದು? ಅವನು 2 ಸಾರಿ 40 ರನ್ನು ಮತ್ತು 47 ರನ್ನುಗಳನ್ನು ಮಾಡಿದ್ದಾನೆ. ಇವುಗಳನ್ನು ಬಹುಲಕ (ರೂಢಿಬೆಲೆ) ಎನ್ನುವರು.

ಯಾವುದೇ ದತ್ತ ಮೌಲ್ಯಗಳಲ್ಲಿ ಅತಿ ಹೆಚ್ಚು ಸಾರಿ ಪುನರಾವರ್ತನೆಯಾದ ಮೌಲ್ಯವನ್ನು ಬಹುಲಕ ಅಥವಾ ರೂಢಿಬೆಲೆ (Mode) ಎನ್ನುವರು.

ಈಗ ಮೇಲಿನ ಉದಾಹರಣೆಯಲ್ಲಿ ಪಂದ್ಯಗಳ (ಮೌಲ್ಯಗಳ) ಸಂಖ್ಯೆ 11. 11 ಒಂದು ಬೆಸ ಸಂಖ್ಯೆಯಾದ್ದರಿಂದ ಮಧ್ಯಾಂಕ ಕಂಡು ಹಿಡಿಯುವುದು ಸುಲಭ. ಆದರೆ ಮೌಲ್ಯಗಳು ಸಮಸಂಖ್ಯೆಯಲ್ಲಿದ್ದರೆ ಮಧ್ಯದಲ್ಲಿನ ಎರಡು ಮೌಲ್ಯಗಳ ಸರಾಸರಿತೆಗೆದುಕೊಳ್ಳಬೇಕು.

ಉದಾ 4: ನಿಮ್ಮ ಊರಿನಲ್ಲಿ 10 ದಿನಗಳಲ್ಲಿ ದಾಖಲಾದ ತಾಪಮಾನಗಳು ಹಿಗಿವೆ:-

250 C, 300 C, 310 C,340 C,320 C,310 C,300 C,280 C,300 C,310 C.

ರೀತಿ:

ದತ್ತಾಂಶಗಳನ್ನು ಏರಿಕೆಯ ಕ್ರಮದಲ್ಲಿ ಬರೆಯುವಾ.

250C,280C,300 C,300 C,300 C,310 C,310 C,310 C,320 C,340 C.

ಈ ವಿವರಗಳನ್ನು ಒಂದು ತಃಖ್ತೆಯಲ್ಲಿ ಬರೆಯುವಾ.

ಮೌಲ್ಯಗಳು (x)

ಆವೃತ್ತಿ (f)

fx=x*f

250C

1

25

280C

1

28

300C

3

90

310C

3

93

320C

1

32

340C

1

34

ಮೊತ್ತ ( )

10

302

 

ವರ್ಗೀಕರಿಸಿದ ದತ್ತಾಂಶಗಳಿಗೆ (ಮೌಲ್ಯಗಳು ಮತ್ತು ಆವೃತ್ತಿಗಳನ್ನು ಕೊಟ್ಟಾಗ) ಸರಾಸರಿಯನ್ನು ಈ ಕೆಳಗಿನ ಸೂತ್ರದಿಂದ ಕಂಡುಹಿಡಿಯಬಹುದು:

ಸರಾಸರಿ (ಮಧ್ಯಕ)= ( )/ ( )= 302/10 = 30.20C

ಮಧ್ಯಮ ಬೆಲೆ = (30+31)/2 =30.50C (ಮೌಲ್ಯಗಳು ಸಮಸಂಖ್ಯೆಯಲ್ಲಿರುವುದರಿಂದ 5ಮತ್ತು 6 ನೇ ಮೌಲ್ಯಗಳ ಸರಾಸರಿ)

300C ಮತ್ತು 310C ಇವೆರಡೂ 3 ಸಾರಿ ಬಂದುದರಿಂದ ಬಹುಲಕ (ರೂಢಿಬೆಲೆ) 300C ಮತ್ತು 310C

ಗಮನಿಸಿ:

ಈ ಉದಾಹರಣೆಯಲ್ಲಿ ಸರಾಸರಿ (30.20C),ಮಧ್ಯಾಂಕ (30.50C) ಮತ್ತು ಬಹುಲಕ (300C,310C). ಇವುಗಳಲ್ಲಿ ಹೆಚ್ಚಿಗೆ ವ್ಯತ್ಯಾಸವಿಲ್ಲ.

ಆದ್ದರಿಂದ ಹೆಚ್ಚು ಮೌಲ್ಯಗಳಿರುವಾಗ, ಸರಾಸರಿ,

ಮಧ್ಯಾಂಕ ಮತ್ತು ಬಹುಲಕ ಒಂದಕ್ಕೊಂದುಹತ್ತಿರವಿರುತ್ತವೆ.

ಸಮಸ್ಯೆ 1: 9 ಮೌಲ್ಯಗಳ ಸರಾಸರಿ ಕಂಡಾಗ 35 ಬಂತು. ಆದರೆ ನಂತರ ನೋಡಿದಾಗ ಮೌಲ್ಯಗಳನ್ನು ಓದುವಾಗ 81 ನ್ನು 18 ಎಂದು ಓದಿದ್ದು ಗಮನಕ್ಕೆ ಬಂತು.

ಹಾಗಾದರೆ ಸರಿಯಾದ ಸರಾಸರಿ ಬೆಲೆ ಕಂಡುಹಿಡಿ.

ಪರಿಹಾರ:

9 ಅಂಶಗಳ ಸರಾಸರಿ = 35

9 ಅಂಶಗಳ ಮೊತ್ತ = 35*9 = 315

81 ನ್ನು 18 ಎಂದು ಓದಿದೆ

9 ಅಂಶಗಳ ಸರಾಸರಿ ಮೊತ್ತ = 315-18+81 = 378

ಸರಿಯಾದ ಸರಾಸರಿ = 378/9 = ೪೨

ಮೌಲ್ಯಗಳ ಹರವು ಅಥವಾ ವಿಚಲನೆ

ವರ್ಗೀಕರಿಸಿದ ದತ್ತಾಂಶಗಳಲ್ಲಿ ಸರಾಸರಿಮಧ್ಯಾಂಕ ಮತ್ತು ಬಹುಲಕ (ರೂಢಿಬೆಲೆ) (Mean, Median, Mode for grouped data)

ದತ್ತಾಂಶಗಳು ತುಂಬಾ ಹೆಚ್ಚಿದ್ದರೆ, ಅವುಗಳ ಸರಾಸರಿ, ಮಧ್ಯಾಂಕ, ಬಹುಲಕ ಕಂಡು ಹಿಡಿಯುವುದು ತುಂಬಾ ಕಷ್ಟ. ಮೌಲ್ಯಗಳು ತುಂಬಾ ಇದ್ದಾಗ, ನಾವು ಅವುಗಳನ್ನು ವರ್ಗೀಕರಿಸುತ್ತೇವೆ. (ವರ್ಗಾಂತರಗಳಂತೆ ಗುಂಪುಮಾಡಿ) (5.1.1.ಉದಾ 2 ರಂತೆ)

ಮೌಲ್ಯಗಳನ್ನು ವರ್ಗೀಕರಿಸಿದಾಗ, ಅವುಗಳ ಸರಾಸರಿ, ಮಧ್ಯಮ ಬೆಲೆ ಮತ್ತು ರೂಢಿಬೆಲೆಗಳನ್ನು ಕಂಡುಹಿಡಿಯಲು ಸ್ವಲ್ಪ ಬೇರೆ ವಿಧಾನವನ್ನು ಬಳಸುತ್ತೇವೆ. ಆ ವಿಧಾನವನ್ನು ಒಂದು ಉದಾಹರಣೆ ಮೂಲಕ ತಿಳಿಯುವಾ.

ಉದಾ1: ಒಂದು ಮದುವೆ ಸಮಾರಂಭಕ್ಕೆ ಬಂದ 110 ಮಂದಿಯ ವಯಸ್ಸುಗಳ ಪಟ್ಟಿ ಈ ರೀತಿ ಇದೆ.

ರೀತಿ:

ವರ್ಗಾಂತರ(CI)
ವಯಸ್ಸು

ಆವೃತ್ತಿ
(f)

0-10

7

10-20

13

20-30

24

30-40

26

50-60

18

60-70

12

70-79

10

ಗಮನಿಸಿ: ಈ ಮೇಲಿನ ಆವೃತ್ತಿಯಲ್ಲಿ ಪ್ರತೀ ವರ್ಗಾಂತರದಲ್ಲೂ ಪ್ರತೀ ವರ್ಗಾಂತರದ ಮೇಲ್ಮಿತಿಯು ಮುಂದಿನ ವರ್ಗಾಂತರದ ಕೆಳಮಿತಿಯಾಗಿದೆ.(ಉದಾ: 10 ಎರಡು ಸಾರಿ ಬಂದಿದೆ: (0-10) ರಲ್ಲಿ ಒಂದು (10-20)ರಲ್ಲಿ ಇನ್ನೊಂದು).

ಈಗ ಒಂಧು ಪ್ರಶ್ನೆ ಏಳುತ್ತದೆ. ಮೇಲ್ಮಿತಿ ‘10’ ನ್ನ ಯಾವ ವರ್ಗಾಂತರದಲ್ಲಿಡಬೇಕು? ರೂಢಿಯಲ್ಲಿ ಇಂತಹ ಸಂದರ್ಭದಲ್ಲಿ ಮೇಲ್ಮಿತಿಯನ್ನು ಆ ವರ್ಗಾಂತರದಲ್ಲಿ ಇಡುತ್ತೇವೆ.

(ಅಂದರೆ 10 ನ್ನ 10-20 ರಲ್ಲಿ ಇಡದೇ 0-10ರಲ್ಲಿ ಇಡುತ್ತೇವೆ.)

ಈಗ ನಾವು ಈ ಮೇಲಿನ ವರ್ಗೀಕರಿಸಿದ ದತ್ತಾಂಶಗಳ ಸರಾಸರಿ, ಮಧ್ಯಕ ಮತ್ತು ರೂಢಿಬೆಲೆಗಳನ್ನು ಕಂಡುಹಿಡಿಯುವಾ.

ವರ್ಗೀಕರಿಸದ ದತ್ತಾಂಶಗಳಲ್ಲಿ ಸರಾಸರಿ = ಮೌಲ್ಯಗಳ ಮೊತ್ತ / ಮೌಲ್ಯಗಳ ಸಂಖ್ಯೆ

ಅದೇ ರೀತಿ ಮಧ್ಯಾಂಕವು ‘30-40’ ವರ್ಗಾಂತರದಲ್ಲಿದೆ (55ನೇ ಮತ್ತು 56ನೇ ಮೌಲ್ಯಗಳ ಸರಾಸರಿ).

ಪ್ರತಿಯೊಂದು ಮೌಲ್ಯವು ಗೊತ್ತಿಲ್ಲದಿರುವುದರಿಂದ ನಿಖರವಾದ ಮಧ್ಯಾಂಕ ಮತ್ತು ಬಹುಲಕಗಳನ್ನು ಕಂಡುಹಿಡಿಯುವುದು ಕಷ್ಟ. ಇದಕ್ಕಾಗಿ ನಾವು ಹೊಸದೊಂದು ವಿಧಾನವನ್ನು ಬಳಸುತ್ತೇವೆ.

ನಾವು ಸಮಸ್ಯೆ ಬಿಡಿಸಲು ಕೆಲವೊಂದು ಸಂಕೇತಗಳನ್ನು ಬಳಸುತ್ತೇವೆ:-

N = ಮೌಲ್ಯಗಳ ಸಂಖ್ಯೆ = 110

ಮಧ್ಯ ಬಿಂದು(Mid point) (x) = 

f= ಆವೃತ್ತಿ.

f(x) = f*x

ಸಂಚಿತ ಆವೃತ್ತಿಯು (Cumulative frequency)ಅಲ್ಲಿಯ ವರೆಗಿನ ವರ್ಗಾಂತರದ ಆವೃತ್ತಿಗಳ ಮೊತ್ತ ಆಗಿರುತ್ತದೆ.

ವರ್ಗಾಂತರ

ಆವೃತ್ತಿ(f)

ಸಂಚಿತ ಆವೃತ್ತಿ (cf)

ವರ್ಗಾಂತರದ ಮಧ್ಯ ಬಿಂದು (x)

f(x)=f*x

0-10

7

7

5

35

10-20

13

20=7+13

15

195

20-30

24

44=20+24

25

600

30-40

26

70=44+26

35

910

40-50

18

88=70+18

45

810

50-60

12

100=88+12

55

660

60-70

10

110=100+10

65

650

ಒಟ್ಟು

N=110

 

 

= 3860

ವ್ಯಾಖ್ಯೆಯಿಂದ, ಸರಾಸರಿ =  = 35.09

ದತ್ತಾಂಶಗಳ ಸಂಖ್ಯೆ: 110, ಆದ್ದರಿಂದ ಮಧ್ಯಾಂಕವು 55ನೇ ಮತ್ತು 56ನೇ ಮೌಲ್ಯದ ಮಧ್ಯ ಇದೆ. ಇದು ‘30-40’ ರ ವರ್ಗಾಂತರದಲ್ಲಿದೆ..(20-30 ನೇ ವರ್ಗಾಂತರದವರೆಗೆ ಸಂಚಿತ ಆವೃತ್ತಿಗಳ ಮೊತ್ತ 44 , 30-40 ನೇ ವರ್ಗಾಂತರದವರೆಗೆ(cf) 70).

i= ವರ್ಗಾಂತದ ಗಾತ್ರ = 11(ಒಂದು ವರ್ಗಾಂತರದಲ್ಲಿ 11 ಮೌಲ್ಯಗಳಿವೆ)

L= ಮಧ್ಯಾಂಕವಿರುವ ವರ್ಗಾಂತರದ ಕೆಳಮಿತಿ (30)

F =ಮಧ್ಯಾಂಕವಿರುವ ವರ್ಗಾಂತರದವರೆಗಿನ ಸಂಚಿತ ಆವೃತ್ತಿಗಳ ಮೊತ್ತ

m = ವರ್ಗಾಂತರದಲ್ಲಿನ ಆವೃತ್ತಿಗಳು.

ಆಗ,

ಮಧ್ಯಾಂಕ = L+ (  )*i

= 30+ ( )*11 = 30+ *11 = 30+4.65 = 34.65

ಬಹುಲಕ (ರೂಢಿಬೆಲೆ)      = 3*ಮಧ್ಯಾಂಕ-2ಮಧ್ಯಕ(ಸರಾಸರಿ)

= 3*34.65- 2*35.1

= 33.75

ಹರವಿನ ಅಳತೆಗಳು : ವ್ಯಾಪ್ತಿ, ವಿಚಲನೆ

ನಾವೀಗ ಒಂದು ತಿಂಗಳಿನಲ್ಲಿ ಎರಡು ವಿಭಿನ್ನ ವಾರಗಳಲ್ಲಿ ಒಂದು ತರಗತಿಯ ಹಾಜರಾತಿಯನ್ನು ಗಮನಿಸುವಾ.

ಮೊದಲ ವಾರ: 45, 44, 41, 10, 40, 60 : ಸರಾಸರಿ = 40

ಎರಡನೇ ವಾರ: 35, 45, 40, 45, 40, 35: ಸರಾಸರಿ = 40

ಈ ಎರಡೂ ವಾರಗಳಲ್ಲಿ ಸರಾಸರಿ ಹಾಜರಿ = 40.ಆದರೆ ಗಮನಿಸಿ:-

1. ಮೊದಲನೆ ವಾರದಲ್ಲಿ ಕನಿಷ್ಟ ಹಾಜರಾತಿ 10 ಗರಿಷ್ಠ ಹಾಜರಾತಿ 60, ಅಂದರೆ ಸರಾಸರಿಯಿಂದ ವಿಚಲನೆ ತುಂಬಾ ಜಾಸ್ತಿ.

2. ಎರಡನೇ ವಾರದಲ್ಲಿ ಸರಾಸರಿಯಿಂದ ವಿಚಲನೆ ತುಂಬಾ ಕಡಿಮೆ.

ಆದ್ದರಿಂದ ಯಾವುದೇ ದತ್ತಾಂಶಗಳ ಸರಾಸರಿಯು ಯಾವಾಗಲೂ ವಿಷಯದ ಸ್ಪಷ್ಟ ಚಿತ್ರಣ ಕೊಡುವುದಿಲ್ಲ. ಆದ್ದರಿಂದ ಅರ್ಥಪೂರ್ಣ

ತೀರ್ಮಾನಕ್ಕೆ ಬರಬೇಕಾದರೆ ನಮಗೆ ಬೇರೆ ಅಳತೆಗಳು ಬೇಕು. ಈಗ ನಾವು ಈ ಕೆಳಗಿನ ಹೊಸಮಾನದಂಡಗಳನ್ನು ನೋಡುವಾ.

ವಿತರಣೆಯಲ್ಲಿನ ಎರಡೂ ಕೊನೆಗಳಲ್ಲಿರುವ ಮೌಲ್ಯಗಳ ನಡುವಿನ ವ್ಯತ್ಯಾಸವನ್ನು ವ್ಯಾಪ್ತಿ(Range) ಎನ್ನುವರು.

ವ್ಯಾಪ್ತಿ (Range) = ಗರಿಷ್ಠ ಮೌಲ್ಯ- ಕನಿಷ್ಟ ಮೌಲ್ಯ = H-L

ವ್ಯಾಪ್ತಿ ಗಣಕ (Co-efficient of Range)=  =

ನಮಗೀಗಾಗಲೇ ತಿಳಿದಿರುವಂತೆ, ಮಧ್ಯಾಂಶವು ದತ್ತ ಮೌಲ್ಯಗಳ ವಿತರಣೆಯನ್ನು ಎರಡು ಸಮವಾದ ಭಾಗ ಮಾಡುವ ಮೌಲ್ಯ.

ಅದೇ ರೀತಿ ದತ್ತ ಮೌಲ್ಯಗಳ ನಾಲ್ಕು ಸಮಭಾಗ ಚತುರ್ಥಕ (Quartile). ಇಲ್ಲಿ ವಿತರಣೆಯನ್ನು ನಾಲ್ಕು ಭಾಗಮಾಡುತ್ತೇವೆ:-

ಮೊದಲನೇ ಚತುರ್ಥಕ(Q1), ಎರಡನೇ ಚತುರ್ಥಕ (Q2), ಮೂರನೇ ಚತುರ್ಥಕ (Q3). ಇವುಗಳು ಮೌಲ್ಯಗಳ ವಿತರಣೆಯ 1/4 ನೇ, 1/2ನೇ ಮತ್ತು 3/4ನೇ ಭಾಗಗಳಾಗಿರುತ್ತದೆ.

ಎರಡನೇ ಚತುರ್ಥಕವು ಮಧ್ಯಾಂಕವೇ (Median) ಆಗಿರುತ್ತದೆ.

ಚತುರ್ಥಕ ವಿಚಲನೆ (ಚತುರ್ಥಕದೊಳಗಿನ ವ್ಯಾಪ್ತಿಯ ಅರ್ಥ)ಯನ್ನು ಈ ಕೆಳಗಿನ ಸೂತ್ರದಿಂದ ಕಂಡುಹಿಡಿಯುತ್ತೇವೆ.

ಚತುರ್ಥಕ ವಿಚಲನೆ(Quartile deviation:QD) = (Q3-Q1)/2

ಉದಾ.1 : ಕೆಳಗಿನ ಪ್ರಾಪ್ತಾಂಕಗಳಿಗೆ ವ್ಯಾಪ್ತಿ, ವಾಪ್ತಿಗಣಕ, ಚತುರ್ಥಕ ವಿಚಲನೆ ಮತ್ತು ಚತುರ್ಥಕ ವಿಚಲನೆ ಗಣಕ ಕಂಡುಹಿಡಿ:-

16, 40, 23, 25, 29, 24, 20, 30, 32, 34, 43

ರೀತಿ:

ದತ್ತ ಪ್ರಾಪ್ತಾಂಕಗಳನ್ನು ಏರಿಕೆಯ ಕ್ರಮದಲ್ಲಿ ಬರೆಯಿರಿ.

16, 20, 23, 25, 29, 30, 32, 34, 40, 43.

ಇಲ್ಲಿ L= 16, H =43 and N=11

ವ್ಯಾಪ್ತಿ = H-L = 43-16 = 27

ವ್ಯಾಪ್ತಿ ಗಣಕ = = =0.46

ಇಲ್ಲಿ 11 ಪ್ರಾಪ್ತಾಂಕಗಳಿವೆ.

- Q1 3ನೇ (11ರ1/4) ಪ್ರಾಪ್ತಾಂಕ= 23.

- Q3 8th (11ರ 3/4) ಪ್ರಾಪ್ತಾಂಕ = 34.

ಚತುರ್ಥಕ ವಿಚಲನೆ = (Q3-Q1)/2 =  = 5.5

ಚತುರ್ಥಕ ವಿಚಲನೆ ಗಣಕ (Co-efficient of QD) = (Q3-Q1)/ (Q3+Q1) =

= =0.1

ವರ್ಗೀಕರಿಸಿದ ದತ್ತಾಂಶಗಳಲ್ಲಿ,

N = ಪ್ರಾಪ್ತಾಂಕಗಳ ಸಂಖ್ಯೆ

i = ವರ್ಗಾಂತರದ ಗಾತ್ರ.

L = ಮಧ್ಯಾಂಕವಿರುವ ವರ್ಗಾಂತರದ ಕೆಲಮಿತಿ.

F =ಮಧ್ಯಾಂಕವಿರುವ ವರ್ಗಾಂತರದವರೆಗೆನ ಸಂಚಿತ ಆವೃತ್ತಿ.

m = ಮಧ್ಯಾಂಕವಿರುವ ವರ್ಗಾಂತರದಲ್ಲಿನ ಆವೃತ್ತಿ.

ಆಗ,

ಮಧ್ಯಾಂಕ = L+ ( )*i = Q2

ಇದೇ ರೀತಿ ವರ್ಗೀಕೃತ ದತ್ತಾಂಶಗಳಲ್ಲಿ,

Q1 = L+ ( )*i

Q3 = L+ ( )*i

ಇವುಗಳಲ್ಲಿ

L = ಅನುಕ್ರಮ ಚತುರ್ಥಕಗಳಿರುವ ವರ್ಗಾಂತರದ ಕೆಳಮಿತಿ.

F = ಆ ಚತುರ್ಥಕವಿರುವ ವರ್ಗಾಂತರದವರೆಗಿನ ಸಂಚಿತ ಆವೃತ್ತಿ.

m = ಆ ಚತುರ್ಥಕವಿರುವ ವರ್ಗಾಂತರದಲ್ಲಿನ ಆವೃತ್ತಿಗಳು.

ಉದಾ. 2: ಈ ಕೆಳಗಿನ ಪ್ರಾಪ್ತಾಂಕಗಳಿಗೆ ವ್ಯಾಪ್ತಿ, ವ್ಯಾಪ್ತಿಗಣಕ, ಚತುರ್ಥಕ ವಿಚಲನೆ ಮತ್ತು ಚತುರ್ಥಕ ವಿಚಲನೆ ಗಣಕಗಳನ್ನು ಕಂಡುಹಿಡಿ. (100 ಪ್ರಾಪ್ತಾಂಕಗಳನ್ನು ವರ್ಗೀಕರಿಸಿದೆ)

ವರ್ಗಾಂತರ CI

ಆವೃತ್ತಿ f

4-8

6

9-13

10

14-18

18

19-23

20

24-28

15

29-33

15

34-38

9

39-43

7

ರೀತಿ:

ಇಲ್ಲಿ N = 100, i = 5 ಈಗ ಸಂಚಿತ ಆವೃತ್ತಿಗಳನ್ನು ಕಂಡುಹಿಡಿಯುವಾ:

ವರ್ಗಾಂತರ CI

ಆವೃತ್ತಿ f

ಸಂಚಿತ ಆವೃತ್ತಿ cf

4-8

6

6

9-13

10

16

14-18

18

34

19-23

20

54

24-28

15

69

29-33

15

84

34-38

9

93

39-43

7

100

ಮೊದಲ ಚತುರ್ಥಕ Q1ನೋಡಲು 25ನೇ (100ರ 1/4) ಪ್ರಾಪ್ತಾಂಕ ಬೇಕು. ಅದು ’14-18’ ವರ್ಗಾಂತರದಲ್ಲಿದೆ.

L= 13.5, F=16, m= 18

Q1 = L+ ( ) * i

= 14 + *5 = 14 + 2.5 = 16.5

ಮೂರನೇ ಚತುರ್ಥಕ Q3 ನೋಡಲು ನಮಗೆ 75ನೇ ಪ್ರಾಪ್ತಾಂಕ (100ರ 3/4) ಬೇಕು. ಅದು ’29-33’ ವರ್ಗಾಂತರದಲ್ಲಿದೆ.

L = 29, F = 69, m = 15

Q3 = L+ ( )*i

=29+ *5 = 29+2 =31

ಚತುರ್ಥ ವಿಚಲನೆ QD = (Q3-Q1)/2

=7.25

ಚತುರ್ಥ ವಿಚಲನೆ ಗಣಕ = (Q3-Q1)/ (Q3+Q1) =  = = 0.31

ವರ್ಗೀಕರಿಸದ ದತ್ತಾಂಶಗಳಿಗೆ ಸರಾಸರಿ ವಿಚಲನೆ: (ಮಧ್ಯಕವಿಚಲನೆ) (Mean Deviation for Ungrouped data):

ಇಲ್ಲಿ ಹೆಸರೇ ಹೇಳುವಂತೆ, ನಾವು ದತ್ತಾಂಶಗಳ ಸರಾಸರಿ (ಮಧ್ಯಕ)ಯಿಂದ ಆಗುವ ವಿಚಲನೆಗಳ ಸರಾಸರಿಯನ್ನು ಕಂಡುಹಿಡಿಯುತ್ತೇವೆ.

ಗಮನಿಸಿ: ಸರಾಸರಿ ವಿಚಲನೆಯನ್ನು ಕಂಡುಹಿಡಿಯಲು 2 ವಿಧಾನಗಳಿವೆ – ಮಧ್ಯಾಂಕವನ್ನು ಉಪಯೋಗಿಸಿ, ಮಧ್ಯಕವನ್ನು ಉಪಯೋಗಿಸಿ.

ಉದಾ. 1. ಕೆಳಗಿನ ಪ್ರಾಪ್ತಾಂಕಗಳಿಗೆ ಎರಡೂ ವಿಧಾನಗಳಿಂದ ಸರಾಸರಿ ವಿಚಲನೆ ಕಂಡು ಹಿಡಿ.

90, 125, 115, 100, 110.

ಮಾಡುವ ವಿಧಾನ:

ದತ್ತಾಂಕಗಳನ್ನು ಏರಿಕೆಯ ಕ್ರಮದಲ್ಲಿ ಬರೆದಾಗ,

90, 100, 110, 115, 125

ಇಲ್ಲಿ N= 5, ಮಧ್ಯಾಂಕ(M) = 110 (3ನೇ ಪ್ರಾಪ್ತಾಂಕ)

= 90+100+110+115+125=540

ಪ್ರಾಪ್ತಾಂಕಗಳ ಸರಾಸರಿ ( ) =108

ಮೌಲ್ಯಗಳು

I ವಿಧಾನ

ಮಧ್ಯಾಂಕದಿಂದ ವಿಚಲನೆ
D= X-M

II ವಿಧಾನ

ಸರಾಸರಿಯಿಂದ ವಿಚಲನೆ
D= -M

90

-20(90-110)

-18(90-108)

100

-10(100-110)

-8(100-108)

110

0(110-110)

2(110-108)

115

5(115-110)

7(115-108)

125

15(125-110)

17(125-108)

= 540

=20+10+0+5+15= 50

=18+8+2+7+17= 52

 


ಮೇಲಿನ ಲೆಕ್ಕಾಚಾರದಲ್ಲಿ |D| ಯು ಕೇವಲ ಧನಾತ್ಮಕ ಮೌಲ್ಯವನ್ನು ಸೂಚಿಸುವುದು. ಇದನ್ನು ಮಾಡ್D ಎಂದು ಓದುತ್ತೇವೆ.

ಮಧ್ಯಾಂಕದ ವಿಧಾನದಲ್ಲಿ ವಿಚಲನೆ =  =10

ಸರಾಸರಿ ವಿಧಾನದಲ್ಲಿ ಸರಾಸರಿ ವಿಚಲನೆ =  =10.4

ವರ್ಗೀಕರಿಸಿದ ದತ್ತಾಂಶಗಳಲ್ಲಿ ಸರಾಸರಿ ವಿಚಲನೆ(Mean Deviation for Grouped data):

[ವರ್ಗೀಕರಿಸದ ದತ್ತಾಂಶಗಳಲ್ಲಿ ಮಾಡಿದಂತೆಯೇ ಇಲ್ಲಿಯೂ ಕೂಡಾ 2 ವಿಧಾನದಲ್ಲಿ ಸರಾಸರಿ ವಿಚಲನೆಯನ್ನು ಕಂಡು ಹಿಡಿಯಬಹುದು - ಮಧ್ಯಾಂಕದಿಂದ, ಮಧ್ಯಕದಿಂದ]

5.4.4 ಉದಾ. 1. ಸರಾಸರಿ ವಿಚಲನೆ ಕಂಡುಹಿಡಿ.

ವರ್ಗಾಂತರ

ಆವೃತ್ತಿ f

0-20

8

20-40

10

40-60

19

60-80

14

80-100

9

ರೀತಿ:

ಇಲ್ಲಿ N = 60, i= 21

ಮಧ್ಯಾಂಕ (M) = L+ ( )*i

= 40 + *21 = 40+13.3 = 53.3 (ಇಲ್ಲಿ ಬೆಲೆಗಳನ್ನು ಕೆಳಗಿನ ಕೋಷ್ಟಕದಿಂದ ಪಡೆದಿದೆ)

ವರ್ಗಾಂತರC.I

 

 

ಮಧ್ಯ ಬಿಂದು
(x)

ಆವೃತ್ತಿf

 

I ವಿಧಾನ
ಮಧ್ಯಾಂಕದಿಂದ ವಿಚಲನೆ

II ವಿಧಾನ
ಸರಾಸರಿಯಿಂದ ವಿಚಲನೆ

cf

D = x-M

f*|D|

fx

D = x-

f*|D|

0-20

10

8

8

-43.3

346.4

80

-42

336

20-40

30

10

18

-23.3

233

300

-22

220

40-60

50

19

37

-3.3

62.7

950

-2

38

60-80

70

14

51

16.7

233.8

980

18

252

80-100

90

9

60

36.7

330.3

810

38

342

 

 

N=60

 

 

=1206.2

=3120

 

= 1188

ಸರಾಸರಿ ( ) =  = = 52.

ಮಧ್ಯಾಂಕ ವಿಧಾನದಿಂದ, ಸರಾಸರಿ ವಿಚಲನೆ=  = = 20.10

ಸರಾಸರಿ ವಿಧಾನದಿಂದ, ಸರಾಸರಿ ವಿಚಲನೆ =  = = 19.8

ಆವೃತ್ತಿ ವಿತರಣೆಯನ್ನು ನಕ್ಷೆಯಲ್ಲಿ ನಿರೂಪಿಸುವುದು

ದತ್ತಾಂಶಗಳನ್ನು ಒಂದು ನಕ್ಷೆಯ ಮೂಲಕ ನಿರೂಪಿಸಿದಾಗ, ಅದನ್ನು ಅರ್ಥ ಮಾಡಿಕೊಳ್ಳುವುದು ಸುಲಭವೆಂದು ನಾವೀಗಾಗಲೇ ತಿಳಿದಿದ್ದೇವೆ. ಆವೃತ್ತಿ ವಿತರಣೆಯನ್ನು ನಕ್ಷೆಯಲ್ಲಿ ನಿರೂಪಿಸಲು 2 ವಿಧಾನಗಳಿವೆ: (1) ಹಿಸ್ಟೋಗ್ರಾಂ (ಆಯತಚಿತ್ರ) (Histogram)

(2) ಆವರ್ತಾಂಕ ಬಹುಭುಜ(Frequency polygon)

ಹಿಸ್ಟೋಗ್ರಾಂ(ಆಯತ ಚಿತ್ರ):ಇಲ್ಲಿ ನಾವು ವಿತರಣೆಯನ್ನು ನೇರ ಆಯತದಿಂದ ಸೂಚಿಸುತ್ತೇವೆ. ಆಯತಗಳನ್ನು ಒಂದರ ಪಕ್ಕದಲ್ಲಿ ಇನ್ನೊಂದನ್ನು ರಚಿಸುತ್ತೇವೆ. ಆಯತಗಳ ಎತ್ತರವು ಆವೃತ್ತಗಳಿಗನುಸಾರವಾಗಿರುತ್ತದೆ ಮತ್ತು y ಅಕ್ಷದಲ್ಲಿಸೂಚಿಸುತ್ತೇವೆ. ವರ್ಗಾಂತರಗಳನ್ನು x-ಅಕ್ಷದ ಮೇಲೆ ಸೂಚಿಸುತ್ತೇವೆ.

ಈ ನಕ್ಷೆಯನ್ನು ರಚಿಸಲು ನಮಗೆ ಒಂದು ನಕ್ಷಾಹಾಳೆ (ಗ್ರಾಫ್)ಬೇಕು. ವರ್ಗಾಂತರಗಳನ್ನು xಅಕ್ಷದಲ್ಲು, ಆವೃತ್ತಿಯನ್ನು y ಅಕ್ಷದಲ್ಲಿ ಗುರುತಿಸಬೇಕು.

ಉದಾ. 1. ಈ ಕೆಳಗಿನ ದತ್ತಾಂಶಗಳಿಗೆ ಆಯತ ಚಿತ್ರ ಮತ್ತು ಆವರ್ತಾಂಕ ಬಹುಭುಜ ರಚಿಸಿ:

ವರ್ಗಾಂತರ

ಆವೃತ್ತಿ

0-20

8

20-40

10

40-60

19

60-80

14

80-100

9

ಮಾಡುವ ವಿಧಾನ:

ವರ್ಗಾಂತರ ಮತ್ತು ಆವೃತ್ತಿಗಳನ್ನು ಸೂಚಿಸಲು ಸೂಕ್ತವಾದ ಪ್ರಮಾಣ (ಸ್ಕೇಲ್) ತೆಗೆದುಕೊಳ್ಳಿ 
(ಇಲ್ಲಿ 1ವರ್ಗಾಂತರ = 1ಸೆ.ಮಿ. ಮತ್ತು 2ಆವೃತ್ತಿ =1ಸೆ.ಮಿ.)

ಆಯತ ಚಿತ್ರ:

ಹಂತ1: ಒಂದು ನಕ್ಷಾಹಾಳೆ ತೆಗೆದುಕೊಂಡು ಅದರಲ್ಲಿ 0 ಗುರುತಿಸಿ, x ಮತ್ತು y-ಅಕ್ಷಗಳನ್ನು ಎಳೆಯಿರಿ.

ಹಂತ 2: 0ಯಿಂದ ಆರಂಭಿಸಿ, x-ಅಕ್ಷದಲ್ಲಿ ವರ್ಗಾಂತರಗಳನ್ನು ಒಂದರ ನಂತರ 
ಒಂದು ಗುರುತಿಸಿ. ಪ್ರತೀ ವರ್ಗಾಂತರದ ಅಗಲ 1ಸೆ.ಮಿ. ಇರಲಿ. 
(ಆಗ ವರ್ಗಾಂತರದ ಸ್ಕೇಲ್: 1ವರ್ಗಾಂತರ = 1ಸೆ.ಮಿ.)

ಹಂತ 3: ಆವೃತ್ತಿಗಳನ್ನು ಸೂಕ್ತ ಪ್ರಮಾಣಕ್ಕೆ ಪರಿವರ್ತಿಸಿ. 
(ಒಂದೇ ಪುಟದಲ್ಲಿ ಮುಗಿಯುವಂತೆ) ಇಲ್ಲಿ ಪ್ರಮಾಣ: 1ಸೆ.ಮಿ. = 2f. ಆದ್ದರಿಂದ, 
8f =4ಸೆ.ಮಿ., 10f =5ಸೆ.ಮಿ., 19f = 9.5ಸೆ.ಮಿ., 
14f = 7ಸೆ.ಮಿ., 9f =4.5ಸೆ.ಮಿ..(ಆದ್ದರಿಂದ ಆವೃತ್ತಿಯು ಪ್ರಮಾಣ: 2f = 1ಸೆ.ಮಿ.)

ವರ್ಗಾಂತರ

ಆವೃತ್ತಿ

X(ಪಾದ)

Y(ಎತ್ತರ)

0-20

8

0 ರಿಂದ 1 ಸೆ.ಮಿ.

4ಸೆ.ಮಿ.

20-40

10

1 ರಿಂದ 2 ಸೆ.ಮಿ.

5ಸೆ.ಮಿ.

40-60

19

2 ರಿಂದ 3 ಸೆ.ಮಿ.

9.5ಸೆ.ಮಿ.

60-80

14

3 ರಿಂದ 4 ಸೆ.ಮಿ.

7ಸೆ.ಮಿ.

80-100

9

4 ರಿಂದ 5 ಸೆ.ಮಿ.

4.5ಸೆ.ಮಿ.

 

 

 

 

 

 

 

 

 

 

ಹಂತ 4: ಮೊದಲ ವರ್ಗಾಂತರ (0-20)ಸೂಚಿಸುವ4ಸೆ.ಮಿ. ಎತ್ತರದ ಆಯತ ರಚಿಸಿ.

ಹಂತ 5: ಮೇಲಿನ ಆಯತಕ್ಕೆ ತಾಗಿಕೊಂಡು ಮುಂದಿನ ವರ್ಗಾಂತರ ಆವೃತ್ತಗನುಗುಣವಾದ 5ಸೆ.ಮಿ. ಎತ್ತರದ ಆಯತ ರಚಿಸಿ. ಈಗ ಈಎರಡೂ ಆಯತಗಳಿಗೆ

ಒಂದು ಸಾಮಾನ್ಯ ಬಾಹು ಇರುವುದು.

ಇದೇರೀತಿ ಉಳಿದ ವರ್ಗಾಂತರಗಳಿಗೂ ಆಯತಗಳನ್ನು ರಚಿಸಿ.

 

 

ಗಮನಿಸಿ:-

  • ವರ್ಗಾಂತರಗಳಲ್ಲಿ x ಅಕ್ಷದ ಮೇಲೂ, ಆವೃತ್ತಿಗಳು y ಅಕ್ಷದ ಮೇಲೂ ಇವೆ.
  • ಎರಡೂ ಅಕ್ಷಗಳಲ್ಲಿ ಉಪಯೋಗಿಸಿದ ಸ್ಕೇಲ್ (ಪ್ರಮಾಣ) ಒಂದೇ ಆಗಿರಬೇಕಾಗಿಲ್ಲ.
  • ವರ್ಗಾಂತರದ ಗಾತ್ರಗಳಲ್ಲೂ ಒಂದೇ ಆಗಿರುವುದರಿಂದ ಆಯತಗಳ ಅಗಲ ಒಂದೇ ಆಗಿವೆ.
  • ವರ್ಗಾಂತರಗಳ ಮಧ್ಯ ಖಾಲಿ ಇಲ್ಲದಿರುವುದರಿಂದ ಆಯತಗಳ ಬಾಹುಗಳು ಒಂದೇ ಆಗಿವೆ.
  • ಆಯತಗಳ ಎತ್ತರವು ವರ್ಗಾಂತರಗಳ ಆವೃತ್ತಿಗಳಿಗನುಸಾರವಾಗಿ ಇವೆ.
  • ವರ್ಗಾಂತರಗಳ ಮಧ್ಯೆ ಖಾಲಿ ಇದ್ದರೆ (ಹೆಚ್ಚಾಗಿ ಆರಂಭದಲ್ಲಿ ಅದನ್ನು ಓರೆಕೋರೆ ಕಂಸಗಳಿಂದ ಸೂಚಿಸುತ್ತೇವೆ.)

ಆವರ್ತಾಂಕ ಬಹುಭುಜ (1ನೇ ವಿಧಾನ) (Frequency Polygon- Method I):

ಆಯತ ಚಿತ್ರದ ಅನುಕ್ರಮ ಆಯತಗಳ ಮೇಲ್ಭಾಗದ ಮಧ್ಯ ಬಿಂದುಗಳನ್ನು ಜೋಡಿಸಿದಾಗ ಸಿಗುವ ರೇಖೆಯೇ ಆವರ್ತಾಂಕ ಬಹುಭುಜ(frequency polygon).

ಹಂತ 1: ಮೇಲಿನಂತೆಯೇ ಆಯತ ಚಿತ್ರ ರಚಿಸಿರಿ.

ಹಂತ 2: x- ಅಕ್ಷದಲ್ಲಿ ಈಗ ಇರುವ ವರ್ಗಾಂತರಗಳ ಆರಂಭದಲ್ಲಿ ಮತ್ತು ತುದಿಯಲ್ಲಿ ಒಂದೊಂದು ವರ್ಗಾಂತರಗಳನ್ನು ಗುರುತಿಸಿ.

(ಇಲ್ಲಿ f = 0 ಆದ್ದರಿಂದ, (-20- 0) ಮತ್ತು (100 -120) ವರ್ಗಾಂತರಗಳ ಎತ್ತರ = 0cm)

ಹಂತ 3: ಪ್ರತೀ ವರ್ಗಾಂತರದ ನಕ್ಷೆಗಳ ಮಧ್ಯ ಬಿಂದುಗಳನ್ನು ಗುರುತಿಸಿ.(x-ಅಕ್ಷದಲ್ಲಿ -0.5, 0.5, 1.5, 2.5, 3.5, 4.5 ಮತ್ತು 5.5ಸೆ.ಮಿ. ಮತ್ತುyಯಲ್ಲಿ ಕ್ರಮವಾಗಿ 0, 4, 5, 9.5, 7, 4.5 ಮತ್ತು 0).

 

ವರ್ಗಾಂತರ

f

X ಪಾದದ ಮಧ್ಯ

y

(x, y)

(-20) -0

0

-0.5

0

(-0.5 , 0)

0-20

8

0.5

4

(0.5, 4)

20-40

10

1.5

5

(1.5, 5)

40-60

19

2 .5

9.5

(2.5, 9.5)

60-80

14

3.5

7

(3.5, 7)

80-100

9

4.5

4.5

(4.5, 4.5)

100-120

0

5.5

0

(5.5, 0)

 

ಹಂತ 4: ಅನುಕ್ರಮ ಆಯತಗಳ ತುದಿಗಳ ಮಧ್ಯ ಬಿಂದುಗಳನ್ನು ಸರಳರೇಖೆಯಿಂದ ಜೋಡಿಸಿ. ಈಗ ನಮಗೆ ದೊರೆತದ್ದೇ ಆವರ್ತಾಂಕಬಹುಭುಜ.

 

 

ಆವರ್ತಾಂಕ ಬಹುಭುಜ

ಹಂತ 1: ಕೊಟ್ಟಿರುವ ವರ್ಗಾಂತರಗಳ ಎರಡೂ ಕಡೆ ಇಲ್ಲದೇ ಇರುವ ಒಂದೊಂದು ವರ್ಗಾಂತರಗಳನ್ನು ಗುರುತಿಸಿ (-20- 0) ಮತ್ತು(100 – 120).

ಹಂತ 2: x-ಅಕ್ಷದ ಮೇಲೆ ಪ್ರತೀ ವರ್ಗಾಂತರದ ಮಧ್ಯ ಬಿಂದುಗಳನ್ನು ಗುರುತಿಸಿ. (ಸೂಕ್ತ ಪ್ರಮಾಣಕ್ಕನುಸಾರವಾಗಿ)

(1C.I. = 1cm).

ಈ ಬಿಂದುಗಳು -0.5, 0.5, 1.5, 2.5, 3.5, 4.5 ಮತ್ತು 5.5

ಹಂತ 3: ದತ್ತ ಸ್ಕೇಲ್‌ಗನುಗುಣವಾಗಿ ಪ್ರತೀ ವರ್ಗಾಂತರದ ಆವೃತ್ತಿಗನುಗುಣವಾದ ಎತ್ತರಗಳನ್ನು ಗುರುತಿಸಿ.(2f=1cm).

ಈ ಬಿಂದುಗಳು y-ಅಕ್ಷದಲ್ಲಿ : 0, 4, 5, 9.5, 7, 4.5 ಮತ್ತು 0 ಆಗಿವೆ.

 

ವರ್ಗಾಂತರ

f

X (ಪಾದದ ಮಧ್ಯ)

y

(x, y)

-20 -0

0

-0.5

0

(0, 0)

0-20

8

0.5

4

(.5, 4)

20-40

10

1.5

5

(1.5, 5)

40-60

19

2 .5

9.5

(2.5, 9.5)

60-80

14

3.5

7

(3.5, 7)

80-100

9

4.5

4.5

(4.5, 4.5)

100-120

0

5.5

0

(5.5, 0)

 

ಹಂತ 4: ಈ ಮೇಲಿನ ಎಲ್ಲಾ ಬಿಂದುಗಳನ್ನು ಗುರುತಿಸಿ, ಜೋಡಿಸಿ.

 

ಸಂಚಿತ ಆವೃತ್ತಿ ವಕ್ರ ರೇಖೆ

ಇಂತಹ ನಕ್ಷೆಯಲ್ಲಿ ನೀಡಿದ ದತ್ತಾಂಶಗಳ (ವರ್ಗೀಕೃತ  ಅಥವಾ ಅವರ್ಗೀಕೃತ) ಸಂಚಿತ ಆವೃತ್ತಿಗನುಗುಣವಾಗಿ  ನಕ್ಷೆಯಲ್ಲಿ ಬಿಂದುಗಳನ್ನು ಗುರುತಿಸಿ ಒಂದು ನಯವಾದ ವಕ್ರ ರೇಖೆಯ ಮೂಲಕ ಸೇರಿಸುತ್ತೇವೆ.ದತ್ತಾಂಶ ಅಥವಾ ವರ್ಗಾಂತರದ ಮೇಲ್ಮಿತಿಯನ್ನು x ಅಕ್ಷದ  ಮೇಲೆ ಮತ್ತು ಸಂಚಿತ ಆವೃತ್ತಿಯನ್ನು y ಅಕ್ಷದ  ಮೇಲೆ ಗುರುತಿಸುತ್ತೇವೆ.

ನಕ್ಷೆ ರಚಿಸಲು  5.4.5.1 ಉದಾಹರಣೆಯನ್ನೇ ತೆಗೆದುಕೊಳ್ಳುವಾ.

ಉದಾ. 2. ಅಗೀವ್ ನಕ್ಷೆ ರಚಿಸಿರಿ.

C.I

f

0-20

8

20-40

10

40-60

19

60-80

14

80-100

9

ಕ್ರಮ:

1. ಮೊದಲು 0 ಆವೃತ್ತಿ ಇರುವ ಹಾಗೆ ಒಂದು ಕಾಲ್ಪನಿಕ ವರ್ಗಾಂತರವನ್ನು ನಿರ್ಧರಿಸಿ.

( ಇಲ್ಲಿ ಅದು -20 ದಿಂದ  0 ಆಗಿದೆ)

2. ಕೆಳಗೆ ಕಾಣಿಸಿದಂತೆ  (-20 ದಿಂದ 0) ದಿಂದ ಆರಂಭಿಸಿ ವರ್ಗಾಂತರದ  ತ:ಖ್ತೆ ಯನ್ನು ರಚಿಸಿ.

 

ವರ್ಗಾಂತರ

f

cf

(x,y) ಬಿಂದು

-20-0

0

0

(0,0)

0-20

8

8

(20,8)

20-40

10

18

(40,18)

40-60

19

37

(60,37)

60-80

14

51

(80,51)

80-100

9

60

(100,60

 

3. ಸೂಕ್ತ ಸ್ಕೇಲ್ ಉಪಯೋಗಿಸಿ ವರ್ಗಾಂತರದ ಮೇಲ್ಮಿತಿಯನ್ನು  x ಅಕ್ಷದ  ಮೇಲೆ ಗುರುತಿಸಿ.

(ಇಲ್ಲಿ 1 ಸೆ.ಮೀ =10   ವರ್ಗಾಂತರ )

4. ಸೂಕ್ತ ಸ್ಕೇಲ್ ಉಪಯೋಗಿಸಿ ಸಂಚಿತ ಆವೃತ್ತಿಯನ್ನು y ಅಕ್ಷದ  ಮೇಲೆ ಗುರುತಿಸಿ.

(ಇಲ್ಲಿ 1 ಸೆ.ಮೀ =10cf)

5. ವರ್ಗಾಂತರದ ಮೇಲ್ಮಿತಿಗೆ ಅನುಗುಣವಾದ ಬಿಂದುಗಳನ್ನು ನಯವಾದ ವಕ್ರರೇಖೆಯಿಂದ ಜೋಡಿಸಿ. ಈ ರೇಖೆಯೇ ಆಗೀವ್.

 

ಗಮನಿಸಿ:-ಆಗೀವ್ ನಕ್ಷೆಯ ಮೂಲಕ ಬೇರೆ ಬೇರೆ ವರ್ಗಾಂತರಗಳ ಸಂಚಿತ ಆವೃತ್ತಿಯನ್ನು ಸುಲಭವಾಗಿ ಕಂಡುಹಿಡಿಯಬಹುದು(ಉದಾಹರಣೆಗೆ 30 ರ ವರೆಗಿನ ದತ್ತಾಂಶಗಳ ಸಂಚಿತ ಆವೃತ್ತಿ 13.(ಕೆಂಪು ವೃತ್ತದಿಂದ ಸೂಚಿಸಿದೆ)

ಮಾನಕ ವಿಚಲನೆ

ಪೀಠಿಕೆ:

ನೀವು ವಾರ್ತಾಪತ್ರಿಕೆಗಳಲ್ಲಿ ಇಬ್ಬರು ಕ್ರಿಕೆಟ್ ಆಟಗಾರರ ಆಟದ ತುಲನೆ ಮಾಡುವುದನ್ನು ಓದಿರಬಹುದು. ಅವರು ಏನನ್ನು ತುಲನೆ ಮಾಡುತ್ತಾರೆ? ಒಬ್ಬನು ಇನ್ನೊಬ್ಬನಿಗಿಂತ ಸ್ಥಿರವಾಗಿದ್ದಾನೆ ಅಥವಾ ಒಬ್ಬನು ಇನ್ನೊಬ್ಬನಿಗಿಂತ ಹೆಚ್ಚುಕಲಾತ್ಮಕವಾಗಿ ಆಡುತ್ತಾನೆ ಎನ್ನುತ್ತಾರೆ. ಕಲಾತ್ಮಕತೆ ಎಂಬುದು ಒಂದು ವಿಶಿಷ್ಟಗುಣ ಮತ್ತು ಅದನ್ನು ಹೋಲಿಕೆ ಮಾಡಲು ಕಷ್ಟ. ಆದರೆ ಅವರು ಗಳಿಸಿದ ರನ್ನುಗಳ ಆಧಾರದ ಮೇಲೆ ಅವರ ಸ್ಥಿರತೆಯನ್ನು ಲೆಕ್ಕ ಹಾಕುತ್ತಾರೆ.

ಹಾಗಾದರೆ ಈ ವಿಚಾರದಲ್ಲಿ ಸಂಖ್ಯಾಶಾಸ್ತ್ರವು ಹೇಗೆ ಸಹಾಯಕವಾಗಿದೆ ನೋಡೋಣ

ಮಾನಕ ವಿಚಲನೆ (Standard deviation):

ನೀವು ವಿಚಲನೆ ಶಬ್ದಪ್ರಯೋಗವನ್ನು ತಿಳಿದಿರಬಹುದು. (ನಿಯಮದಿಂದ ವಿಚಲನೆ, ಕೆಲಸದಿಂದ ವಿಚಲನೆ, ಫಲಿತಾಂಶದಿಂದ ವಿಚಲನೆ... ಇತ್ಯಾದಿ) ವಿಚಲನೆಯನ್ನು ಯಾವುದೇ ಒಂದು ಸ್ಥಿರ ಮಾನದಂಡಕ್ಕನುಗುಣವಾಗಿ ಲೆಕ್ಕ ಹಾಕುತ್ತೇವೆ.

‘ಮಾನ’ವು ಸಾಮಾನ್ಯವಾಗಿ ದತ್ತಾಂಶಗಳ ‘ಸರಾಸರಿ’ ಆಗಿರುತ್ತದೆ.

ಉದಾ.1: ಒಬ್ಬ ಕ್ರಿಕೆಟ್ ಆಟಗಾರನು 6 ಇನ್ನಿಂಗ್ಸ್ ನಲ್ಲಿ ಗಳಿಸಿದ ರನ್ ಗಳು: 48,50,54,46,48,54

ವಿಧಾನ:

ಉಪಯೋಗಿಸುವ ಸಂಕೇತಗಳು:

X = ಪ್ರಾಪ್ತಾಂಕಗಳ ಗಣ. (48,50,54,46,48,54)

N = ಪ್ರಾಪ್ತಾಂಕಗಳ ಸಂಖ್ಯೆ (=6)

= ದತ್ತಾಂಶಗಳ ಸರಾಸರಿ (AM) = ( )/N

d = ಸರಾಸರಿಯಿಂದ ವಿಚಲನೆ = X -

ಹಂತ 1: ದತ್ತಾಂಶಗಳ ಸರಾಸರಿ ಕಂಡುಹಿಡಿಯಿರಿ = (48+50+54+46+48+54)/6 = 50

ಹಂತ 2: d (= X-AM) ಮತ್ತು d2 ಗಳನ್ನು ಪ್ರತಿ ಮೌಲ್ಯಕ್ಕೂ ಕಂಡುಹಿಡಿಯಿರಿ.

ಲೆಕ್ಕಾಚಾರದ ತಃಖ್ತೆ:

ಸಂ.

ರನ್ನುಗಳು (X)

ವಿಚಲನೆ (d)

= X-

(ವಿಚಲನೆ)2

= d2

1

48

-2

4

2

50

0

0

3

54

4

16

4

46

-4

16

5

48

-2

4

6

54

4

16

 

=300

=0

= 56

ಹಂತ 3: ಪ್ರಸರಣ ವಿಚಲನೆಯನ್ನು ಲೆಕ್ಕ ಹಾಕಿ = / N

ಹಂತ 4: ಮಾನಕ ವಿಚಲನೆ ಲೆಕ್ಕ ಹಾಕಿ: (SD) = 

ಮಾನಕ ವಿಚಲನೆಯನ್ನು ಗ್ರೀಕ್ ಅಕ್ಷರ   (ರೋ) ದಿಂದ ಸೂಚಿಸುತ್ತೇವೆ.

ಮಾನಕ ವಿಚಲನೆ = = = 3.05.

ವ್ಯಾಖ್ಯೆ: ಮಾನಕ ವಿಚಲನೆಯು(Standard deviation) ಸರಾಸರಿಯಿಂದ ವಿಚಲನೆಗಳ ವರ್ಗಗಳ ಮೊತ್ತದ ಧನಾತ್ಮಕ ವರ್ಗಮೂಲ ಆಗಿರುವುದು.

ವಿವರಣೆ: ಈ ಮೇಲಿನ ಉದಾಹರಣೆಯಲ್ಲಿ ಸುಮಾರಾಗಿ ಆಟಗಾರನು ಗಳಿಸಿದ ರನ್ನುಗಳ ಅಂಕಗಣಿತದ ಸರಾಸರಿ (=50) ಯಿಂದ 3.05 ( 3) ರಷ್ಟು ವಿಚಲನೆ ಹೊಂದುತ್ತವೆ.

ಅಂದರೆ ಅರ್ಥ ಮುಂದಿನ ಪಂದ್ಯದಲ್ಲಿ ಆಟಗಾರನು ಸಾಧಾರಣ 47-53 {(50-3)-(50+3)} ರನ್ನುಗಳನ್ನು ಗಳಿಸಬಹುದು.

ಗಮನಿಸಿ: ಅಕಸ್ಮಾತ್ ಆಟಗಾರನ ರನ್ನುಗಳು 48,100,50,10,2,80 ಆಗಿದ್ದರೆ, ಅವನ ಸ್ಥಿರತೆಯನ್ನು ಊಹಿಸಲು ಕಷ್ಟ. ಆದರೆ ಮೇಲಿನ ಉದಾಹರಣೆಯಲ್ಲಿ ಅವನ ರನ್ನುಗಳು 50ರ ಸುತ್ತಮುತ್ತ ಇರುವುದರಿಂದ ನಾವು ಮುಂದಿನ ಪಂದ್ಯಗಳಲ್ಲಿಅವನು

ಗಳಿಸಬಹುದಾದ ರನ್ನುಗಳನ್ನು ಊಹಿಸಬಹುದು.

ಸಾಮಾನ್ಯ ಕ್ರಮ:-

ಪ್ರಾಪ್ತಾಂಕಗಳು:X = {x1, x2 , x3……….. xn} ಆಗಿರಲಿ.

N = ಪ್ರಾಪ್ತಾಂಕಗಳ ಸಂಖ್ಯೆ.

= ಅಂಕಗಣಿತ ಸರಾಸರಿ (AM) = (x1+x2 + x3+…… xn)/N=  / N

ಹಂತ 1: ಪ್ರತೀ ಪ್ರಾಪ್ತಾಂಕಕ್ಕು ಸರಾಸರಿಯಿಂದ ವಿಚಲನೆ ಕಂಡುಹಿಡಿ. (d=X-) ಮತ್ತು ಅದೇ ರೀತಿ d2 ವನ್ನು ಕಂಡುಹಿಡಿ.

ಹಂತ 2: ಪ್ರಸರಣ ವಿಚಲನೆಯನ್ನು ಲೆಕ್ಕ ಹಾಕಿ = ( )/ N

ಹಂತ 3: ಮಾನಕ ವಿಚಲನೆ (SD) ಲೆಕ್ಕ ಮಾಡಿ.

SD =

ಪರ್ಯಾಯ ವಿಧಾನ: ಸರಾಸರಿಯು ಪೂರ್ಣಾಂಕವಾಗದೇ ಇರುವಾಗ ಕಂಡುಹಿಡಿಯುವುದು

ಮೇಲಿನ ಉದಾಹರಣೆಯಲ್ಲಿ ಸರಾಸರಿಯು ಒಂದು ಪೂರ್ಣಾಂಕವಾಗಿದೆ. ಹಾಗಾಗಿ ಲೆಕ್ಕ ಮಾಡಲು ಸುಲಭವಾಯಿತು. ಆದರೆ, ಅಂಕಗಣಿತದ ಸರಾಸರಿಯು ಒಂದು ಪೂರ್ಣಾಂಕವಾಗದೇ ದಶಮಾಂಶ ಸಂಖ್ಯೆಯಾದಾಗ, d2ವನ್ನುಕಂಡುಹಿಡಿಯುವುದು ಕಷ್ಟ. ಅದಕ್ಕಾಗಿ ಇಂತಹ ಸಂದರ್ಭದಲ್ಲಿ ನಾವು ಬೇರೆಯೇ ಕ್ರಮವನ್ನು ಅನುಸರಿಸುತ್ತೇವೆ.

1.      ಯಾವುದಾದರೂ ಒಂದು ಪ್ರಾಪ್ತಾಂಕವನ್ನು ಅಂದಾಜು ಸರಾಸರಿ (A) ಎಂದು ಇಟ್ಟುಕೊಳ್ಳಿ.

2.      ಅಂದಾಜು ಸರಾಸರಿಯಿಂದ ವಿಚಲನೆ D(= X-A) ಗಳನ್ನು ಕಂಡು ಹಿಡಿಯಿರಿ.

3.      ವಿಚಲನೆಗಳ ಮೊತ್ತ  ಕಂಡುಹಿಡಿ.

4.      ಪ್ರತಿ ಪ್ರಾಪ್ತಾಂಕದ ವಿಚಲನೆಗಳ ವರ್ಗವನ್ನು ಲೆಕ್ಕಿಸಿ ಮತ್ತು ಈ ವರ್ಗಗಳ ಮೊತ್ತ (d2) ವನ್ನು ಕಂಡು ಹಿಡಿಯಿರಿ.

ನೈಜ ಸರಾಸರಿ = ಅಂದಾಜು ಸರಾಸರಿ + ( )/N

ಮಾನಕ ವಿಚಲನೆ =  [( d2)/N - (( d)/N)2]

ಈಗ ನಾವು ಮೇಲೆ ನೋಡಿದ ಉದಾಹರಣೆಯನ್ನೇ ತೆಗೆದುಕೊಂಡು, ಈ ವಿಧಾನದಲ್ಲಿ ಮಾನಕ ವಿಚಲನೆಯನ್ನು ಲೆಕ್ಕ ಹಾಕುವಾ.

ಪ್ರಾಪ್ತಾಂಕಗಳ ಅಂದಾಜು ಸರಾಸರಿ 54 (A = 54.) ಎಂದಿಟ್ಟುಕೊಳ್ಳುವಾ. N = 6.

ಲೆಕ್ಕಾಚಾರದ ತಃಖ್ತೆ

ಸಂಖ್ಯೆ

ರನ್ನುಗಳು (X)

ವಿಚಲನೆ (D)

d= X-A

(ವಿಚಲನೆ)2

= d2

1

48

-6

36

2

50

-4

16

3

54

0

0

4

46

-8

64

5

48

-6

36

6

54

0

0

 

 

= -24

= 152

 

ನೈಜ ಸರಾಸರಿ = ಅಂದಾಜು ಸರಾಸರಿ + ( )/N= 54 + (-24/6) = 54-4 = 50

ಮಾನಕ ವಿಚಲನೆ =  [( d2)/N - (( d)/N)2]

=   [152/6 –(24/6)2] =  (25.33-16) =  (9.33) =3.05

ಎರಡೂ ವಿಧಾನಗಳಲ್ಲೂ ಮಾನಕ ವಿಚಲನೆ ಒಂದೇ ಆಗಿದೆ ಎಂದು ಗಮನಿಸಿ.

ಒಂದೇ ಪ್ರಾಪ್ತಾಂಕಗಳು ದತ್ತಾಂಕದಲ್ಲಿ ಹಲವು ಸಾರಿ ಬಂದಿದ್ದರೆ ಈ ಕ್ರಮ ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಅದಕ್ಕಾಗಿ ಸ್ವಲ್ಪ ಬೇರೆ ವಿಧಾನ ಅನುಸರಿಸುತ್ತೇವೆ.

ವರ್ಗೀಕರಿಸಿದ ದತ್ತಾಂಕಗಳಲ್ಲಿ ಮಾನಕ ವಿಚಲನೆ

ಒಂದು ವಿತರಣೆಯಲ್ಲಿ ಪ್ರಾಪ್ತಾಂಕಗಳು ಮತ್ತು ಆವೃತ್ತಿಗಳು ಹೀಗಿವೆ:

ಮೌಲ್ಯಗಳು (X) ---à

X1

X2

X3

……

Xn

ಆವೃತ್ತಿ (f) ------à

f1

f2

f3

……..

fn

N = ಆವೃತ್ತಿಗಳ ಮೊತ್ತ = f1 + f2 + f3 +…….. fn

ಹಂತ 1: ಪ್ರತೀ ಪ್ರಾಪ್ತಾಂಕಕ್ಕೂ  f*x ಕಂಡು ಹಿಡಿಯಿರಿ.

ಹಂತ 2: ಅವುಗಳ ಸರಾಸರಿ ಕಂಡುಹಿಡಿ  = ( )/N

ಹಂತ 3: ಪ್ರತಿ ಪ್ರಾಪ್ತಾಂಕಕ್ಕೂ ವಿಚಲನೆ ಕಂಡುಹಿಡಿಯಿರಿ d = (X-)

ಹಂತ 4: ಪ್ರಸರಣೆಯ ವಿಚಲನೆ ಕಂಡುಹಿಡಿಯಿರಿ = ( (f*d2))/N

ಹಂತ 5: ಮಾನಕ ವಿಚಲನೆ ಕಂಡುಹಿಡಿಯಿರಿ: ( ) =  [( (f*d2))/N]

ಉದಾ. 2: ಒಂದು ಪರೀಕ್ಷೆಯಲ್ಲಿ 60 ವಿದ್ಯಾರ್ಥಿಗಳು ಗಳಿಸಿದ ಅಂಕಗಳು ಕೆಳಗಿನಂತಿವೆ. ಇವುಗಳಲ್ಲಿ ಮಾನಕ ವಿಚಲನೆ ಕಂಡುಹಿಡಿಯಿರಿ.

ಅಂಕಗಳು (X)    ---à

10

20

30

40

50

60

ಆವೃತ್ತಿ(ವಿದ್ಯಾರ್ಥಿಗಳು) (f)--à

8

12

20

10

7

3

 

ವಿಧಾನ:

N (ಆವೃತ್ತಿಗಳ ಮೊತ್ತ)  = = 8+12+20+10+7+3=60

ಮೌಲ್ಯಗಳು (X)

ಆವೃತ್ತಿ (f)

fX

ಮೌಲ್ಯಗಳು =

d=(X-)

d2

f*d2

10

8

80

-20.83

433.89

3471.11

20

12

240

-10.83

117.29

1407.47

30

20

600

-.83

0.69

13.78

40

10

400

9.17

84.09

840.89

50

7

350

19.17

367.49

2572.42

60

3

180

29.17

850.89

2552.67

 

N= =60

= 1850

 

 

(f*d2)=10858.33

ಸರಾಸರಿ == ( )/N= 1850/60 =30.83

ಪ್ರಸರಣ ವಿಚಲನೆ = ( f*d2)/N = 10858.33/60= 180.97

ಮಾನಕ ವಿಚಲನೆ: ( ) =  [ (f*d2)/N] = (180.97) =13.45

ತೀರ್ಮಾನ: ವಿದ್ಯಾರ್ಥಿ ಗಳಿಸಿದ ಅಂಕಗಳ ಸರಾಸರಿ = 30.83. ವಿದ್ಯಾರ್ಥಿಗಳ ಅಂಕಗಳು ಸರಾಸರಿಯಿಂದ 13.45ರಷ್ಟು ವಿಚಲನೆ ಹೊಂದಿರುತ್ತವೆ.

ಈ ಮೇಲಿನ ಉದಾಹರಣೆಯಲ್ಲಿ  ಸರಾಸರಿ ದಶಮಾಂಶ ಸಂಖ್ಯೆಯಾಗಿದೆ. ಆದ್ದರಿಂದಲೇ d, d2 ಮತ್ತು f*d2 ಗಳು ದಶಮಾಂಶ ಸಂಖ್ಯೆಗಳಾಗಿದ್ದು ಲೆಕ್ಕ ಕಷ್ಟವಾಗಿದೆ ಅದಕ್ಕಾಗಿ, ಇಲ್ಲಿ ಪರ್ಯಾಯ ವಿಧಾನದಿಂದ ಲೆಕ್ಕ ಮಾಡಬೇಕು.

ಪರ್ಯಾಯ ವಿಧಾನ (Alternate Method)

ಹಂತ 1:  ದತ್ತಾಂಶದಲ್ಲಿರುವ ಯಾವುದೇ ಮೌಲ್ಯವನ್ನು ಸರಾಸರಿಯೆಂದಿಟ್ಟುಕೊಳ್ಳಿ (A)

ಹಂತ 2: ಪ್ರತೀ ಮೌಲ್ಯಕ್ಕೂ ಈ ಸರಾಸರಿಯಿಂದ ವಿಚಲನೆ (d) ಯನ್ನು ಲೆಕ್ಕ ಹಾಕಿ.

ಹಂತ 3: ಪ್ರತೀ ಮೌಲ್ಯಕ್ಕೂ  f*d, d2 ,f*d2 ಕಂಡು ಹಿಡಿ.

ಹಂತ 4: ಸರಾಸರಿ ಮತ್ತು ಮಾನಕ ವಿಚಲನೆಯನ್ನು ಈ ಕೆಳಗಿನಂತೆ ಲೆಕ್ಕ ಹಾಕಿ.

ಸರಾಸರಿ == A +  /N, N =

ಮಾನಕ ವಿಚಲನೆ: ( )= [ (f*d2)/N - ( (f*d)/N)2 ]

ಈಗ ಮೇಲಿನ ಉದಾಹರಣೆಯಲ್ಲಿ 30 ನ್ನು ಅಂದಾಜು ಸರಾಸರಿಯಾಗಿಟ್ಟುಕೊಳ್ಳುವಾ. ಆಗ,

ಮೌಲ್ಯಗಳು (X)

ಆವೃತ್ತಿ (f)

ವಿಚಲನೆ (d)

=X-A

f*d

d2

f*d2

10

8

-20

-160

400

3200

20

12

-10

-120

100

1200

30

20

0

0

0

0

40

10

10

100

100

1000

50

7

20

140

400

2800

60

3

30

90

900

2700

 

N= =60

 

=50

 

(f*d2)=10900

 

ಸರಾಸರಿ = A+ ( )/ (N) = 30+50/60 = 30+0.83= 30.83

ಮಾನಕ ವಿಚಲನೆ ( ) =  [ (f*d2)/N - ( (f*d)/N)2]

[(10900/60) – (50/60)2]

(181.67 - 0.69) = (180.97) =13.45

ವಿದ್ಯಾರ್ಥಿಗಳ ಅಂಕಗಳ ಸರಾಸರಿ = 30.83. ವಿದ್ಯಾರ್ಥಿಗಳ ಅಂಕಗಳು ಸರಾಸರಿಯಿಂದ 13 ಅಂಕಗಳಷ್ಟು ವಿಚಲನೆ ಹೊಂದುತ್ತವೆ.

ಎರಡೂ ವಿಧಾನದಲ್ಲೂ ಒಂದೇ  ಉತ್ತರ ಬಂದಿರುವುದನ್ನು ಗಮನಿಸಿ.

ಹೆಚ್ಚಿನ ಸಂದರ್ಭದಲ್ಲಿ ವರ್ಗೀಕರಿಸಿದ ದತ್ತಾಂಶಗಳನ್ನು ಕೊಡುವುದರಿಂದ ಬೇರೆ ರೀತಿಯಲ್ಲಿ ಮಾನಕ ವಿಚಲನೆಯನ್ನು ಕಂಡು ಹಿಡಿಯಬೇಕಾಗುತ್ತದೆ.

ವರ್ಗೀಕೃತ ದತ್ತಾಂಶಗಳಲ್ಲಿ ಮಾನಕ ವಿಚಲನೆಯನ್ನು ಕಂಡು ಹಿಡಿಯುವ ಕ್ರಮ

ಹಂತ 1: ಪ್ರತಿ ವರ್ಗಾಂತರದ ಮಧ್ಯ ಬಿಂದುವನ್ನು ಕಂಡು ಹಿಡಿಯಿರಿ.

ಹಂತ 2: ಪ್ರತೀ ವರ್ಗಾಂತರಕ್ಕು  f*x ಕಂಡು ಹಿಡಿಯಿರಿ.

ಹಂತ 3: ಅಂಕಗಣಿತದ ಸರಾಸರಿ ಕಂಡು ಹಿಡಿಯಿರಿ == (  )/N, N = .

ಹಂತ 4: ಪ್ರತಿ ವರ್ಗಾಂತರಕ್ಕೂ ಸರಾಸರಿಯಿಂದ  ()ವಿಚಲನೆ ಕಂಡು ಹಿಡಿಯಿರಿ (d=X-)

ಹಂತ 5: ಪ್ರತಿ ವರ್ಗಾಂತರಕ್ಕೂ d2 ಮತ್ತು f*d2 ಕಂಡು ಹಿಡಿಯಿರಿ.

ಹಂತ 6: ಮಾನಕ ವಿಚಲನೆ ಕಂಡು ಹಿಡಿಯಿರಿ.:  ( ) =  [ (f*d2)/N]

ಉದಾ. 3: ಒಂದು ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಗಳಿಸಿದ ಅಂಕಗಳು ಹೀಗಿವೆ:-

 

ಅಂಕಗಳು

ಆವೃತ್ತಿ (f)

ಮಧ್ಯ ಬಿಂದು (x)

f*x

d=(X-)

d2

f*d2

25-30

5

28

140

-9.2

84.64

423.2

30-35

10

33

330

-4.2

17.64

176.4

35-40

25

38

950

0.8

0.64

16

40-45

8

43

344

5.8

33.64

269.12

45-50

2

48

96

10.8

116.64

233.28

 

N = = 50

 

=1860

 

 

(f*d2)=1118

 

ವಿಧಾನ:

ಅಂಕಗಣಿತದ ಸರಾಸರಿ ==  /N = 1860/50 = 37.2

ಮಾನಕ ವಿಚಲನೆ: ( ) =  [ (f*d2)/N] =  (1118/50) =  (22.36) =4.728

ತೀರ್ಮಾನ: ವಿದ್ಯಾರ್ಥಿಗಳ ಅಂಕಗಳ ಸರಾಸರಿ =37.2. ವಿದ್ಯಾರ್ಥಿಗಳ ಅಂಕಗಳು ಸರಾಸರಿಯಿಂದ 5 ವಿಚಲನೆ ಹೊಂದುತ್ತವೆ.

ಪರ್ಯಾಯ ವಿಧಾನ (ಹಂತ - ವಿಚಲನಾಕ್ರಮ) [Alternate Method (Step – Deviation Method)]:

ಹಂತ 1: ದತ್ತಾಂಶಗಳಲ್ಲಿ ಸಾಧಾರಣ ಮಧ್ಯದಲ್ಲಿರುವ ಮೌಲ್ಯವನ್ನು ಸರಾಸರಿ ಎಂದಿಟ್ಟುಕೊಳ್ಳಿ (A).

ಹಂತ 2: ಊಹಿಸಿಕೊಂಡ ಸರಾಸರಿಯಿಂದ ‘ಹಂತ-ವಿಚಲನೆ’ (=d) ಯನ್ನು ಕಂಡುಹಿಡಿಯಿರಿ:

d=(X-A)/i: ‘i’ ವರ್ಗಾಂತರದ ಗಾತ್ರ.

ಹಂತ 3: d2, f*d ಮತ್ತು f*d2 ಗಳನ್ನು ಪ್ರತಿ ವರ್ಗಾಂತರಕ್ಕು ಕಂಡುಹಿಡಿಯಿರಿ.

ಹಂತ 4: ಅಂಕಗಣಿತದ ಸರಾಸರಿ ಮತ್ತು ಮಾನಕ ವಿಚಲನೆಗಳನ್ನು ಕೆಳಗಿನ ಸೂತ್ರದಂತೆ ಲೆಕ್ಕಹಾಕಿ.

ಅಂಕಗಣಿತದ ಸರಾಸರಿ: == A + [ /N]*i

ಮಾನಕ ವಿಚಲನೆ: ( ) =  [ (f*d2)/N - ( (f*d)/N)2]*i

ಮೇಲಿನ ಉದಾಹರಣೆ ಲೆಕ್ಕವನ್ನು ಈ ವಿಧಾನದಲ್ಲಿ ಮಾಡುವಾ.

ಅಲ್ಲಿ 43 ನ್ನ ಅಂದಾಜು ಸರಾಸರಿ (A) ಎಂದು ಊಹಿಸುವಾ.

i = ವರ್ಗಾಂತರದ ಗಾತ್ರ = 5.

ಹಂತ 1 ರಿಂದ 3 ರ ರೀತ್ಯಾ:

ಅಂಕಗಳು

ಆವೃತ್ತಿ (f)

ಮಧ್ಯ ಬಿಂದು(x)

d=(X-A)/i

f*d

d2

f*d2

25-30

5

28

-3

-15

9

45

30-35

10

33

-2

-20

4

40

35-40

25

38

-1

-25

1

25

40-45

8

43

0

0

0

0

45-50

2

48

1

2

1

2

 

N = = 50

 

= - 58

 

(f*d2)=112

 

ಅಂಕಗಣಿತದ ಸರಾಸರಿ == A+ [ /N]*i = 43 + [(-58/50)*5] = 43 + (-1.16)*5 = 43-5.8 = 37.2

ಮಾನಕ ವಿಚಲನೆ:

( ) =  [ (f*d2)/N - ( (f*d)/N)2]*i

[(112/50)- {-58/50} 2]*5

[2.24 - {-1.16} 2]*5

[2.24 – 1.3456]*5

[0.8944]*5

=.9457*5

=4.728

ತೀರ್ಮಾನ: ವಿದ್ಯಾರ್ಥಿಗಳು ಗಳಿಸಿದ ಅಂಕಗಳ ಸರಾಸರಿ = 37.2. ಅವರು ಗಳಿಸಿದ ಅಂಕಗಳು ಸರಾಸರಿಯಿಂದ 5 ಅಂಕಗಳಷ್ಟು ವಿಚಲಿತವಾಗುತ್ತವೆ.

ಸಾಮಾನ್ಯವಾಗಿ ವ್ಯಕ್ತಿಗಳ ತಂಡಗಳ ಸಾಧನೆಯನ್ನು ಹೋಲಿಸುವಾಗ ಅವರ ಸ್ಥಿರತೆಯ ಬಗ್ಗೆ ಮಾತನಾಡುತ್ತೇವೆ. ಸಂಖ್ಯಾ ಶಾಸ್ತ್ರದಲ್ಲಿ

ಈ ‘ಸ್ಥಿರತೆ’ಯನ್ನು ಹೇಗೆ ಗುರುತಿಸಬಹುದು?

ಈ ಸ್ಥಿರತೆಯನ್ನು ಲೆಕ್ಕ ಮಾಡಲು “ಮಾರ್ಪಿನ ಗುಣಾಂಕ” (Co efficient of variation) ವನ್ನು ಬಳಸುತ್ತೇವೆ. ಇದು ಹರವಿನ ಒಂದು ಸಾಪೇಕ್ಷ ಅಳತೆಯಾಗಿದೆ. ಇದನ್ನು ಈ ಕೆಳಗಿನ ಸೂತ್ರದಿಂದ ಲೆಕ್ಕ ಹಾಕುತ್ತೇವೆ.

ಮಾರ್ಪಿನ ಗುಣಾಂಕ = ಮಾರ್ಪಿನ ಗುಣಾಂಕ *100/ ಸರಾಸರಿ.

 

ಆದ್ದರಿಂದ ಮಾರ್ಪಿನ ಗುಣಾಂಕವು ಮೂಲಮಾನಗಳಿಂದ ಮುಕ್ತವಾದ ಒಂದು ಸಂಖ್ಯೆ. ಇದನ್ನು ಸಾಮಾನ್ಯವಾಗಿ ಶೇಕಡಾ ರೂಪದಲ್ಲಿ ಸೂಚಿಸಲಾಗುವುದು.

ಶೇಕಡಾ ಪ್ರಮಾಣ ಕಡಿಮೆಯಾದಷ್ಟು ಸ್ಥಿರತೆ ಹೆಚ್ಚು. ಸರಾಸರಿಗೆ ಹೋಲಿಸಿದಾಗಮಾನಕ ವಿಚಲನೆಯು ಚಿಕ್ಕ ಸಂಖ್ಯೆಯಾದರೆ,

ಮಾರ್ಪಿನ ಗುಣಾಂಕ ಕಡಿಮೆಯಾಗುತ್ತದೆ.

ಮೇಲಿನ ಉದಾಹರಣೆಯಲ್ಲಿ,

ಮಾರ್ಪಿನ ಗುಣಾಂಕ = (4.728*100)/37.2  =12.68

ಉದಾ. 4: A ಮತ್ತು B  ಎಂಬ ಇಬ್ಬರು ಕ್ರಿಕೆಟ್ ಆಟಗಾರರು 6 ಇನಿಂಗ್ಸ್‍ಗಳಲ್ಲಿ ಗಳಿಸಿದ ರನ್ನುಗಳು ಹೀಗಿದೆ:-

 

A ಆಟಗಾರ

48

50

54

46

48

54

B ಆಟಗಾರ

46

44

43

46

45

46

 

ಈ ಮೇಲಿನ ಇಬ್ಬರಲ್ಲಿ ಯಾರು ಉತ್ತಮ ಸ್ಕೋರರ್? ಯಾರು ಹೆಚ್ಚು ಸ್ಥಿರತೆ ಹೊಂದಿದ್ದಾರೆ?

ವಿಧಾನ:

ಈ ಇಬ್ಬರ ಸ್ಥಿರತೆಯನ್ನು ಕಂಡುಹಿಡಿಯಲು ಮಾರ್ಪಿನ ಗುಣಾಂಕ ಕಂಡುಹಿಡಿಯಬೇಕು.

ಉದಾ. (5.1) ರಲ್ಲಿ ಈ A ಆಟಗಾರರ ರನ್ನುಗಳ ಸರಾಸರಿ ಮತ್ತು ಮಾನಕ ವಿಚಲನೆಯನ್ನು ಲೆಕ್ಕ ಮಾಡಿದ್ದೇವೆ.

ಅಂಕಗಣಿತ ಸರಾಸರಿ = 50

ಮಾನಕ ವಿಚಲನೆ = 3.05

ಮಾರ್ಪಿನ ಗುಣಾಂಕ = ಮಾರ್ಪಿನ ಗುಣಾಂಕ *100/ ಸರಾಸರಿ = 3.05*100/50 = 6.1%

ಈಗ B ಆಟಗಾರನ ಸರಾಸರಿ ಮತ್ತು ಮಾರ್ಪಿನ ಗುಣಾಂಕ ಕಂಡುಹಿಡಿಯುವಾ.

ಸರಾಸರಿ = 270/6 = 45

ಸಂ.

ರನ್ನುಗಳು (X)

ವಿಚಲನೆ (D)

d= X-

d2

1

46

1

1

2

44

-1

1

3

43

-2

4

4

46

1

1

5

45

0

0

6

46

1

1

 

=270

=0

=8

 

 

ಮಾನಕ ವಿಚಲನೆ,

( /N)=  (8/6) = (1.33) = 1.15

ಮಾರ್ಪಿನ ಗುಣಾಂಕ = ಮಾನಕ ವಿಚಲನೆ *100/ ಸರಾಸರಿ = 1.15*100/45 =2.55%

ಫಲಿತಾಂಶ:

1. Aಯ ಸರಾಸರಿಯು B ಗಿಂತ ಹೆಚ್ಚು (50>45) ಆದ್ದರಿಂದ A ಯು B ಗಿಂತ ಉತ್ತಮ ಸ್ಕೋರರ್.

2. B ಯ ಮಾರ್ಪಿನ ಗುಣಾಂಕ  A ಗಿಂತ ಕಡಿಮೆ  (1.15<6.1) ಆದ್ದರಿಂದ B ಯು  ಹೆಚ್ಚು ಸ್ಥಿರ ಆಟಗಾರ.

ಉದಾ. 5: ಒಂದು ಪರೀಕ್ಷೆಯಲ್ಲಿ 10ನೇ ತರಗತಿಯ A ಮತ್ತು B ವಿಭಾಗದ ವಿದ್ಯಾರ್ಥಿಗಳು ಗಳಿಸಿದ ಅಂಕಗಳು ಹೀಗಿವೆ:-

ಅಂಕಗಳು

A ವಿಭಾಗದವಿದ್ಯಾರ್ಥಿಗಳ ಸಂಖ್ಯೆ

B ವಿಭಾಗದ ವಿದ್ಯಾರ್ಥಿಗಳಸಂಖ್ಯೆ

25-30

5

5

30-35

10

12

35-40

25

20

40-45

8

8

45-50

2

5

 

 

ಯಾವ ವಿಭಾಗದ ಸಾಧನೆ ಉತ್ತಮವಾಗಿದೆ? ಯಾವ ವಿಭಾಗದ ಸಾಧನೆ ಹೆಚ್ಚು ಅಸ್ಥಿರ? ಈ ಸಮಸ್ಯೆ ಬಿಡಿಸಲು, ಅಂಕಗಣಿತ ಸರಾಸರಿ ಮತ್ತು ಮಾರ್ಪಿನ ಗುಣಾಂಕ ಬೇಕು.

ರ ಉದಾಹರಣೆ 3 ರಲ್ಲಿ A ವಿಭಾಗದ ಸರಾಸರಿ ಮತ್ತು ಮಾನಕ ವಿಚಲನೆಗಳನ್ನು ಲೆಕ್ಕ ಮಾಡಿದ್ದೇವೆ.

ಅಂಕಗಣಿತದ ಸರಾಸರಿ =37.2

ಮಾನಕ ವಿಚಲನೆ=4.728

ಮಾರ್ಪಿನ ಗುಣಾಂಕ = ಮಾನಕ ವಿಚಲನೆ *100/ಸರಾಸರಿ = 4.728*100/37.2 =12.7%

ಈಗ B ಭಾಗಕ್ಕೆ ಸರಾಸರಿ ಮತ್ತು ಮಾನಕ ವಿಚಲನೆಯನ್ನು ‘ಹಂತ-ವಿಚಲನ’ ಕ್ರಮದಲ್ಲಿ ಕಂಡುಹಿಡಿಯುವಾ.

ಹಂತ 1: ಅಂದಾಜಿನ ಸರಾಸರಿ: A =38 ಆಗಿರಲಿ. (A=28,33,43,48 ಯಾವುದೂ ಆಗಬಹುದು)

ಹಂತ 2: ಅಂದಾಜಿನ ಸರಾಸರಿಯಿಂದ ಹಂತ ವಿಚಲನೆಯನ್ನು (d) ಲೆಕ್ಕಹಾಕಿ.

d=(X-A)/i: ‘i’  ವರ್ಗಾಂತರದ ಗಾತ್ರ = 5.

ಹಂತ 3: ಪ್ರತೀ ವರ್ಗಾಂತರಕ್ಕೂ d2, f*d, f*d2 ಕಂಡುಹಿಡಿಯಿರಿ.

ಹಂತ 4: ಸರಾಸರಿ ಮತ್ತು ಮಾನಕ ವಿಚಲನೆಗಳನ್ನು ಈ ಕೆಳಗಿನಂತೆ ಲೆಕ್ಕ ಹಾಕಿ.

ಅಂಕಗಣಿತದ ಸರಾಸರಿ =  = A+ [ /N]*i

ಮಾನಕ ವಿಚಲನೆ = ( ) =  [ (fd2)/N- { (fd)/N} 2]*i:

ಅಂಕಗಳು

ಆವೃತ್ತಿ (f)

ಮಧ್ಯ ಬಿಂದು(x)

d=(X-A)/i

fd

d2

fd2

25-30

5

28

-2

-10

4

20

30-35

12

33

-1

-12

1

12

35-40

20

38

0

0

0

0

40-45

8

43

1

8

1

8

45-50

5

48

2

10

4

20

 

N = = 50

 

= - 4

 

(fd2)=60

 

ಅಂಕಗಣಿತ ಸರಾಸರಿ =  = A+ [( )/N]*i

= 38 +[(-4/50)*5]

= 38+ -0.08*5 = 43-0.4  = 37.6

ಮಾನಕ ವಿಚಲನೆ ( ) =  [ (f*d2)/N - ( (f*d)/N)2]*i

[(60/50)- {-4/50} 2]*5

[1.2 - {-0.08} 2]*5

[1.2 – 0.0064]*5

[1.1936]*5

=1.0925*5 =5.4625

ಮಾರ್ಪಿನ ಗುಣಾಂಕ = ಮಾನಕ ವಿಚಲನೆ *100/ ಸರಾಸರಿ = 5.4625*100/37.6  = 14.52%

ತೀರ್ಮಾನ:

1. B ವಿಭಾಗದ ಸರಾಸರಿ ಅಂಕವು A ವಿಭಾಗಕ್ಕಿಂತ ಹೆಚ್ಚಿದೆ (37.6>37.2), ಆದ್ದರಿಂದ B ಯ ಸಾಧನೆ A ಗಿಂತ ಉತ್ತಮ.

2. B ಯ ಮಾರ್ಪಿನ ಗುಣಾಂಕವು A ವಿಭಾಗಕ್ಕಿಂತ ಹೆಚ್ಚಿದೆ (14.52>12.7), ಆದ್ದರಿಂದ B ಯ ಸಾಧನೆಯು A ವಿಭಾಗಕ್ಕಿಂತ ಹೆಚ್ಚು ಅಸ್ಥಿರ.

ಉದಾ. 6: ಒಂದು ಕೈಗಾರಿಕಾ ಪ್ರದೇಶದಲ್ಲಿ A ಮತ್ತು B ಗಳೆಂಬ ಎರಡು ಕಾರ್ಖಾನೆಗಳಲ್ಲಿ ಕೊಡುವ ಸರಾಸರಿ ವಾರದ ವೇತನ ಮತ್ತು ಮಾನಕ ವಿಚಲನೆ ಹೀಗಿದೆ:-

ಕಾರ್ಖಾನೆ

ಸರಾಸರಿ ವೇತನ (ರೂ.ಗಳಲ್ಲಿ)

ವೇತನ ಮಾನಕವಿಚಲನೆ (ರೂ.)

A

34.5

6.21

B

28.5

4.56

 

ಯಾವ ಕಾರ್ಖಾನೆಯಲ್ಲಿ ವೇತನದಲ್ಲಿ ಹೆಚ್ಚು ತಾರತಮ್ಯವಿದೆ?

ವಿಧಾನ:

ಈಗ ನಾವು ಮಾರ್ಪಿನ ಗುಣಾಂಕವನ್ನು ಕಂಡು ಹಿಡಿಯಬೇಕು.

A ಕಾರ್ಖಾನೆಯ ಮಾರ್ಪಿನ ಗುಣಾಂಕ = ಮಾನಕ ವಿಚಲನೆ *100/ಸರಾಸರಿ = 6.21*100/34.5 = 18%

B ಕಾರ್ಖಾನೆಯ ಮಾರ್ಪಿನ ಗುಣಾಂಕ = ಮಾನಕ ವಿಚಲನೆ *100/ಸರಾಸರಿ = 4.56*100/28.5 = 16%

A ಕಾರ್ಖಾನೆಯ ಮಾರ್ಪಿನ ಗುಣಾಂಕವು B ಕಾರ್ಖಾನೆಯ ದರಕ್ಕಿಂತ ಹೆಚ್ಚು (18>16). ಆದ್ದರಿಂದ A ಕಾರ್ಖಾನೆಯಲ್ಲಿ ವೇತನದಲ್ಲಿ ಹೆಚ್ಚು ತಾರತಮ್ಯವಿದೆ.

(A ಕಾರ್ಖಾನೆಯಲ್ಲಿ ನೌಕರಿಗೆ ಹೆಚ್ಚು ವೇತನವನ್ನು ಕೊಟ್ಟರೂ ಸಹ, ಅವರ ವೇತನಗಳಲ್ಲಿ ಹೆಚ್ಚು ತಾರತಮ್ಯವಿದೆ. )

ಕಲಿತ ಸಾರಾಂಶ

X = ಪ್ರಾಪ್ತಾಂಕಗಳ ಗಣ

= ಅಂಕಗಣಿತದ ಸರಾಸರಿ (AM)

d = ಸರಾಸರಿಯಿಂದ ವಿಚಲನೆ.

f = ಮೌಲ್ಯಗಳ ಆವೃತ್ತಿ.

i = ವರ್ಗಾಂತರದ ಗಾತ್ರ.

x= ವರ್ಗಾಂತರದ ಮಧ್ಯ ಬಿಂದು.

ಸಂ.

ಸಂದರ್ಭ

ಆಯ್ಕೆ

N=

AM=

ವಿಚಲನೆ(d)

ಮಾನಕ ವಿಚಲನೆ ( )

1

ಬಿಡಿ

ಮೌಲ್ಯಗಳು

 

ಪ್ರಾಪ್ತಾಂಕಗಳ

ಸಂಖ್ಯೆ

=( )/N

X-

A =ಯಾವುದೇ

ಪ್ರಾಪ್ತಾಂಕ

ಪ್ರಾಪ್ತಾಂಕಗಳ

ಸಂಖ್ಯೆ

= A+ ( )/N

X-A

2

ಆವರ್ತ

ಇರುವ

ಮೌಲ್ಯಗಳು

 

= /N

X-

A =ಯಾವುದೇ

ಪ್ರಾಪ್ತಾಂಕ

= A +  /N

X-A

3

ಆವರ್ತ

ಇರುವ

ವರ್ಗಾಂತರ

 

/N

X-

A =ಯಾವುದೇ

ಪ್ರಾಪ್ತಾಂಕ

= A+ [ /N]*i

d=(X-A)/i

 

ಸೂಚನೆ:ಮಾನಕ ವಿಚಲನೆಗೆ ಯಾವಾಗಲೂ ಸಾಮಾನ್ಯ ಸೂತ್ರ ನೆನಪಿಡಿ:-

ವರ್ಗೀಕರಣ ಮಾಡದೇ ಇರುವ/ಆವರ್ತ ಇಲ್ಲದೇ ಇರುವ ಸಂದರ್ಭದಲ್ಲಿ, f=1, i=1 ಆದೇಶಿಸಿ, ಸಮಸ್ಯೆಗೆ ಸರಿಯಾದ ಸೂತ್ರ ಪಡೆಯಿರಿ

ಯಾವುದೇ ಮೌಲ್ಯವನ್ನು ಅಂದಾಜು ಸರಾಸರಿಯಾಗಿ ತೆಗೆದುಕೊಳ್ಳದಿದ್ದಾಗ,  =0

ಮೂಲ : ಫ್ರೀ ಗಣಿತ

ಬೀಜಗಣಿತವು ಚರಾಕ್ಷರ (ಗೊತ್ತಿಲ್ಲದ ಸಂಖ್ಯೆ)ಕ್ಕೆ ಸ್ಥಿರ ಬೆಲೆಯನ್ನು ಕೊಟ್ಟು ವ್ಯವಹರಿಸುವ ಗಣಿತ ಶಾಸ್ತ್ರದ ಒಂದು ಭಾಗವಾಗಿದೆ.ಭಾಸ್ಕರಾಚಾರ್ಯರು ಬೀಜಗಣಿತದ ಮೇಲೆ ಪುಸ್ತಕ ಬರೆದಿದ್ದರೆಂದರೆ ಅದರ ಮಹತ್ವದ ಅರಿವಾಗುತ್ತದೆ.

ಆಸಕ್ತಿಗಾಗಿ ಕೆಳಗಿನ ಗಣಿತ ಸಮಸ್ಯೆಗಳಿಗೆ ಉತ್ತರ ಹೇಳುವಿರಾ?

  1. 10.5*9.5  ರ ಬೆಲೆ ಸುಲಭವಾಗಿ ಕಂಡುಹಿಡಿ.  2 ಸಂಖ್ಯೆಗಳ ವ್ಯತ್ಯಾಸ 8. ಅವುಗಳ ವರ್ಗಗಳ ವ್ಯತ್ಯಾಸ 400 ಆದರೆ, ಸಂಖ್ಯೆಗಳು ಯಾವುವು? (ಲೀಲಾವತಿ: ಶ್ಲೋಕ 59)
  2. 2 ಸಂಖ್ಯೆಗಳ ವ್ಯತ್ಯಾಸ 8. ಅವುಗಳ ವರ್ಗಗಳ ವ್ಯತ್ಯಾಸ 400 ಆದರೆ, ಸಂಖ್ಯೆಗಳು ಯಾವುವು? (ಲೀಲಾವತಿ: ಶ್ಲೋಕ 59)
  3. ನನ್ನ ಮತ್ತು ನನ್ನ ತಂದೆಯ ಒಟ್ಟು ಪ್ರಾಯ 55 ವರ್ಷಗಳು. 16 ವರ್ಷಗಳ ನಂತರ ನನ್ನ ತಂದೆಯ ವಯಸ್ಸು ನನ್ನ ವಯಸ್ಸಿನ ಎರಡರಷ್ಟಾಗುವುದಾದರೆ, ಈಗ ನನ್ನ ವಯಸ್ಸೆಷ್ಟು?
  4. ನೀವು, ನಿಮ್ಮ ಸ್ನೇಹಿತರು ಒಟ್ಟಿಗೆ ಒಂದು ಪ್ರವಾಸಕ್ಕೆ ಹೋಗಲು ಬಯಸುತ್ತೀರಿ. ಆಹಾರಕ್ಕಾಗಿ ಒಟ್ಟು 480ರೂ. ಖರ್ಚಾಗುತ್ತದೆಂದು ಲೆಕ್ಕ ಹಾಕಿದಿರಿ. ಆದರೆ ಕೊನೆಯ ಕ್ಷಣದಲ್ಲಿ 8 ಮಂದಿ ನಿಮ್ಮ ಸ್ನೇಹಿತರು ಪ್ರವಾಸಕ್ಕೆ ಹೋಗಲಿಲ್ಲ. ಇವರು ಬಾರದಿದ್ದುದರಿಂದ, ಪ್ರತಿಯೊಬ್ಬರೂ ಆಹಾರಕ್ಕಾಗಿ 10ರೂ. ಹೆಚ್ಚಿಗೆ ಕೊಡಬೇಕಾಯಿತು. ಹಾಗಾದರೆ ಪ್ರತಿಯೊಬ್ಬರೂ ಕೊನೆಗೆ ಕೊಟ್ಟ ಹಣ ಎಷ್ಟು?
  5. ಒಂದು ವಿಮಾನವು ನಿಗದಿತ ಸಮಯಕ್ಕಿಂತ 30 ನಿಮಿಷ ತಡವಾಗಿ ಹೊರಟಿತು. ಅದು ಪಯಣಿಸಬೇಕಾದ ದೂರ 1500 ಕಿ.ಮಿ. ನಿಗದಿತ ಸಮಯಕ್ಕೇ ಅಲ್ಲಿಗೆ ತಲುಪಲು ಅದು ತನ್ನ ವೇಗವನ್ನು ಮಾಮೂಲು ವೇಗಕ್ಕಿಂತ 250ಕಿ.ಮಿ. ನಷ್ಟು ಹೆಚ್ಚಿಸಬೇಕು. ಹಾಗಾದರೆ ಅದರ ಮಾಮೂಲು ವೇಗ ಮತ್ತು ಮಾಮೂಲು ಅವಧಿ ಕಂಡುಹಿಡಿಯಿರಿ.

ಈ ಸಮಸ್ಯೆಗಳನ್ನು ಮುಂದಿನ ಪಾಠ 2.4, 2.8, 2.14, 2.19 ಗಳಲ್ಲಿ ಬಿಡಿಸಲಿದ್ದೇವೆ.

ಬೀಜಗಣಿತದ ಮೂಲ ಕಲ್ಪನೆಗಳು:

ಬದಲಾಗದ ಬೆಲೆಯನ್ನು ಹೊಂದಿರುವ ಸಂಖ್ಯೆಗಳನ್ನು ಸ್ಥಿರಾಂಕ(Constant) ಎನ್ನುವರು. ವಾಸ್ತವಿಕ ಸಂಖ್ಯೆಗಳೆಲ್ಲವೂ ಸ್ಥಿರಾಂಕಗಳು.

ಉದಾ: - 4, 0, 1/3, 5/2, 1.19,

ಸ್ಥಿರ ಬೆಲೆಯನ್ನು ಹೊಂದಿಲ್ಲದೇ ಯಾವುದೇ ಬೆಲೆಯನ್ನು ಪಡೆಯಬಲ್ಲ ಸಂಕೇತವೇ ಚರಾಕ್ಷರ (Variable). ಚರಾಕ್ಷರಗಳನ್ನು ಇಂಗ್ಲಿಷ್ ಅಕ್ಷರಗಳಿಂದ ಸೂಚಿಸುತ್ತೇವೆ. ಉದಾ- x, y, a+b.

ಬೀಜಾಕ್ಷರ ಪದ (Algebraic term) ಯಾವುದೇ ಸಂಖ್ಯೆ, ಬೀಜಸಂಖ್ಯೆ ಅಥವಾ ಸಂಖ್ಯೆ ಮತ್ತು ಚರಾಕ್ಷರಗಳ ಗುಣಲಬ್ಧ ಅಥವಾ ಭಾಗಲಬ್ಧವನ್ನು ಬೀಜಾಕ್ಷರ ಪದ ಎನ್ನುವರು. ಉದಾ- 4ab, 2x, 3y, 10, z, m/n, -p/q…

ಈಗ ಒಂದು ಪದವನ್ನು ಗಮನಿಸೋಣ:2x= 2*x ಇದು 2 ಮತ್ತು x ಗಳ ಗುಣಲಬ್ಧ. ‘2’ ನ್ನು2x ನ ಸಂಖ್ಯಾ ಸಹಗುಣಕ (numerical co-efficient) ಎನ್ನುವರು. ‘x’ ನ್ನು ಬೀಜಸಂಖ್ಯೆ, ಬೀಜಸಹಗುಣಕ ಅಥವಾ ಚರಾಕ್ಷರ (literal factor or literal co-efficient ಎನ್ನುವರು.

ಒಂದೇ ಬೀಜಸಂಖ್ಯೆಯ ಅಪವರ್ತನಗಳನ್ನು ಹೊಂದಿರುವ ಮತ್ತು ಒಂದೇ ಘಾತಗಳನ್ನು ಪಡೆದಿರುವ ಪದಗಳನ್ನು ಸಜಾತಿ ಪದ (like terms) ಗಳೆನ್ನುವರು.

ಉದಾ:

(x, 2x, -7x)        ---> ಇಲ್ಲಿ ಚರಾಕ್ಷರ x ಮಾತ್ರ

(2mn, 5mn, -1/3mn)     ---> ಇಲ್ಲಿ ಬೀಜ ಸಹಗುಣಕ: mn

(x3, 5 x3, -5/6 x3)        ---> ಇಲ್ಲಿ x3 ಎಂಬುದು ಬೀಜಸಹಗುಣಕ. ಈ ಮೂರೂ ಪದಗಳಲ್ಲಿ ಚರಾಕ್ಷರದ ಘಾತ 3.

ಬೇರೆ ಬೇರೆ ಬೀಜ ಸಂಖ್ಯೆಯ ಅಪವರ್ತನಗಳು ಮತ್ತು ಬೇರೆ ಬೇರೆ ಘಾತಗಳಿರುವ ಪದಗಳನ್ನು ವಿಜಾತಿ ಪದ (unlike terms) ಗಳೆಂದು ಕರೆಯುತ್ತೇವೆ.

ಉದಾ:

(x, x3, x2)                ---> [ಇಲ್ಲಿ ಚರಾಕ್ಷರ ಒಂದೇ ಆದರೂ ಘಾತ ಸೂಚಿಗಳು ಬೇರೆ ಬೇರೆ (1, 3, 2)]

(2x, 2a,-2mn)          ---> (ಇಲ್ಲಿ ಚರಾಕ್ಷರಗಳು ಬೇರೆ ಬೇರೆ x, a, mn)

ಬೀಜೋಕ್ತಿ(Algebraic expression) : ಒಂದು ಅಥವಾ ಒಂದಕ್ಕಿಂತ ಹೆಚ್ಚು ಪದಗಳು + ಅಥವಾ – ಚಿಹ್ನೆಗಳಿಂದ ಸಹಯೋಗವಾಗಿದ್ದರೆ, ಅವನ್ನು ಬೀಜೋಕ್ತಿಗಳೆನ್ನುವರು

ಉದಾ: 4x+ax3+9x2+ (2a/3b), -2mn+45+ y-2 +

ಬಹುಪದಗಳು (polynomial)  : ಧನಾತ್ಮಕವಾದ ಪೂರ್ಣಾಂಕ ಘಾತಗಳನ್ನು ಹೊಂದಿರುವ ಚರಾಕ್ಷರಗಳನ್ನೊಳಗೊಂಡ ಬೀಜಾಕ್ಷರಪದಗಳನ್ನು ಬಹುಪದಗಳೆನ್ನುವರು.

ಉದಾ: 4x+ax3+9x2+ (2a/3b), -2mn+45

ವಿ.ಸೂ:y-2+ x3/2 ಇದು ಬಹುಪದವಲ್ಲ. ಏಕೆಂದರೆ yಯ ಘಾತ:– 2, x ನ ಘಾತಾಂಕ 3/2 – ಈ ಎರಡೂ ಘಾತಾಂಕಗಳು ಧನ ಪೂರ್ಣಾಂಕಗಳಲ್ಲ..

 

ಬೀಜೋಕ್ತ್ತಿಯ ವಿಧಗಳು

ಉದಾಹರಣೆಗಳು

ಒಂದು ಬೀಜೋಕ್ತ್ತಿಯು

ಒಂದು ಪದವನ್ನು ಹೊಂದಿದ್ದರೆ ಅದು ಏಕಪದ

3a, 2x,-1/3y,

ಒಂದು ಬೀಜೋಕ್ತಿಯು

ಎರಡು ಪದಗಳನ್ನು ಹೊಂದಿದ್ದರೆ ಅದು ದ್ವಿಪದ

3-4a, 5x2-z

ಒಂದು ಬೀಜೋಕ್ತ್ತಿಯು

ಮೂರು ಪದಗಳನ್ನು ಹೊಂದಿದ್ದರೆ ಅದು ತ್ರಿಪದ

4x+ax3+9x2

ಚರಾಕ್ಷರಗಳ ಘಾತಗಳು ಏರಿಕೆಯ ಅಥವಾ ಇಳಿಕೆಯ ಕ್ರಮದಲ್ಲಿ ಬರೆದ ಬಹು ಪದಗಳು ಆದರ್ಶ (standard form) ರೂಪದಲ್ಲಿರುವುವು.

ಉದಾ:

y2-2y4+3y-y3+4 - ಇದು ಆದರ್ಶರೂಪದಲ್ಲಿಲ್ಲ.

ಮೇಲಿನ ಬಹುಪದವನ್ನು  ಆದರ್ಶರೂಪದಲ್ಲಿ ಹೀಗೆ ಬರೆಯಬಹುದು:

-2y4-y3+ y2+3y+4 ಅಥವಾ 4+3y+ y2-y3-2y4.

ಒಂದು ಬಹುಪದದಲ್ಲಿ 'n’ ಚರಾಕ್ಷರಗಳಿದ್ದರೆ, ಅದನ್ನ n- ಚರಾಕ್ಷರದ ಬಹುಪದ (polynomial in ‘n’ variables) ಎನ್ನುವರು.

ಉದಾ:

  • 9x5+3x3+9x2+7x+5: ಒಂದೇ ಚರಾಕ್ಷರವಿರುವ ಬಹುಪದ (ಇಲ್ಲಿ ಚರಾಕ್ಷರ: x ಮಾತ್ರ)
  • 9x5+ax3+9x2+7x+5: 2 ಚರಾಕ್ಷರಗಳ ಬಹುಪದ (x ಮತ್ತು a ಚರಾಕ್ಷರಗಳು)

ಒಂದಕ್ಕಿಂತ ಹೆಚ್ಚು ಚರಾಕ್ಷರ ಇರುವ ಬಹುಪದಗಳಲ್ಲಿ ಚರಾಕ್ಷರಗಳ ಘಾತಗಳ ಮೊತ್ತವನ್ನು ಪ್ರತಿಪದಕ್ಕೂ ತೆಗೆದುಕೊಳ್ಳುವುದು. ಅತಿಹೆಚ್ಚು ಮೊತ್ತವು ಆ ಬಹುಪದದ ಘಾತವನ್ನು (degree of the polynomial) ಸೂಚಿಸುತ್ತದೆ.

ಉದಾ:

  • 4y2- x2y2+ x2+6y ಈ ಬಹುಪದದ ಘಾತ= 4 (x2y2 ದ ಘಾತಗಳ ಮೊತ್ತ 4. ಇದು ಉಳಿದ ಪದಗಳ ಘಾತಂಕಗಳ ಮೊತ್ತಗಳಿಗಿಂತ ಹೆಚ್ಚು)
  • 10p3q2+4p2q-5+ p4– ಈ ಬಹುಪದದ ಘಾತ= 5 (p3q2 ದ ಘಾತಗಳ ಮೊತ್ತ 5. ಇದು ಉಳಿದ ಪದಗಳ ಘಾತಂಕಗಳ ಮೊತ್ತಗಳಿಗಿಂತ ಹೆಚ್ಚು)

ಪೂರ್ಣಾಂಕಗಳಿಗೆ ಅನ್ವಯವಾಗುವ ಎಲ್ಲಾ ನಿಯಮಗಳು ಚಿಹ್ನೆಗಳನ್ನೊಳಗೊಂಡ ಬೀಜ ಸಂಖ್ಯೆಗಳ ಕ್ರಿಯೆಗಳಿಗೂ ಅನ್ವಯವಾಗುವುದು.

ಉದಾ:

5 – (-6) = 5+6 =11,  -2 – (+5) = -2-5 =-7. ಇತ್ಯಾದಿ

ಅದೇರೀತಿ : (a+b)+c =a+(b+c) …….

ಬೀಜಪದಗಳ ಸಂಕಲನದಲ್ಲಿ ಸಜಾತಿ ಪದಗಳ ಸಂಖ್ಯಾ ಸಹಗುಣಕಗಳನ್ನು ಕೂಡಿಸಬೇಕು.

ಉದಾ:

  • 8y4 -2y4 = (8-2)y4 = 6y4
  • -11ab + -6ab = {-11+(-6)}ab = (-11-6)ab = -17ab

ವಿಜಾತಿ ಪದಗಳನ್ನು ಸಂಕಲನ ಮಾಡಲಾಗುವುದಿಲ್ಲ.

ಉದಾ:8y4 -2y2 ಇದನ್ನು ಮತ್ತೆ ಸಂಕ್ಷೇಪಿಸಲಾಗುವುದಿಲ್ಲ.

  • ಸಮಸ್ಯೆ1: ಕೂಡಿಸಿ::   (5a2-6a+3), (2a2+3a-1), (3a2-a-5)

ಪರಿಹಾರ:

(5a2-6a+3)+ (2a2+3a-1) + (3a2-a-5)

=5a2-6a+3+2a2+3a-1+3a2-a-5

= (5a2+2a2 +3a2) + (-6a+3a-a) + (3-1-5) (ಸಜಾತಿ ಪದಗಳನ್ನು ಒಟ್ಟಿಗೆ ಬರೆಯಿರಿ.)

= (5+2+3) a2 + (-6+3-1)a + (3-1-5) (ಸಜಾತಿ ಪದಗಳ ಸಂಖ್ಯಾ ಸಹಗುಣಕಗಳನ್ನು ಕೂಡಿಸಿದೆ.)=10 a2 + (-4a)-3

=10a2 -4a-3

  • ಸಮಸ್ಯೆ 2 2x3-x2+4x-6 ದಿಂದ x3+5x2-4x+6ನ್ನು ಕಳೆಯಿರಿ.

ಪರಿಹಾರ:

(x3+5x2-4x+6) – (2x3-x2+4x-6)

= x3+5x2-4x+6 - 2x3 -(-x2) -(+4x) –(-6)

=x3+5x2-4x+6 - 2x3+x2-4x+6 ( -(- x2) = x2 ಮತ್ತು–(-6) =+6 )

= (x3 - 2x3)+(5x2+x2)+(-4x -4x) +(6+6) (ಸಜಾತಿ ಪದಗಳನ್ನು ಒಟ್ಟಿಗೆ ಸೇರಿಸಿದೆ.)

= - x3+6x2-8x +12

  • ಸಮಸ್ಯೆ 3 : x3+2x2-3x+7 ರಿಂದ ಎಷ್ಟನ್ನು ಕಳೆದರೆ x3+x2+x -1 ಸಿಗುತ್ತದೆ?

ಪರಿಹಾರ:

ಈ ಸಮಸ್ಯೆಯು 9 ರಿಂದ 3 ನ್ನು ಪಡೆಯಲು ಎಷ್ಟನ್ನು ಕಳೆಯಬೇಕು ಎಂದಂತೆಯೇ. ಇದಕ್ಕೆ ಉತ್ತರ  6. 9 ರಿಂದ 3 ನ್ನು ಕಳೆದಾಗ ಸಿಕ್ಕಿತು. ಅದೇರೀತಿ ನಾವೀಗ ಕಂಡುಹಿಡಿಯಬೇಕಾದದ್ದು:

ಕಂಡುಹಿಡಿಯಬೇಕಾದದ್ದು:

(x3+2x2-3x+7) – (x3+x2+x -1)

= x3+2x2-3x+7 – x3-x2-x –(-1)

= (x3– x3)+(2x2-x2)+(-3x –x) +(7+1) ( –(-1) =+1)

= 0+x2-4x+8

= x2-4x+8

ತಾಳೆ:

(x3+x2+x -1) + (x2-4x+8)

= x3+(x2 + x2) +(x-4x) -1+8 (ಸಜಾತೀಯ ಪದಗಳನ್ನು ಒಟ್ಟಿಗೆ ಬರೆದಾಗ)

= x3+2x2-3x -7 (ಇದೇ ದತ್ತಾಂಶ)

ಕಲಿತ  ಸಾರಾಂಶ

ಸಂಖ್ಯೆ

ಕಲಿತ ಮುಖ್ಯಾಂಶಗಳು

1

ಸ್ಥಿರಾಂಕ, ಚರಾಕ್ಷರಗಳು, ಘಾತ, ಏಕಪದ, ದ್ವಿಪದ, ತ್ರಿಪದ, ಬಹುಪದ - ಇವುಗಳ ವ್ಯಾಖ್ಯೆಗಳು.

ಘಾತಾಂಕಗಳು

ಒಂದು ಕೋಟಿಯಲ್ಲಿ 1 ರ ಮುಂದೆ ಎಷ್ಟು 0 ಗಳಿವೆ?

ರಾಮಾಯಣದ ಯುದ್ಧ ಕಾಂಡದಲ್ಲಿನ ಈ ಶ್ಲೋಕಗಳನ್ನು ಗಮನಿಸಿ:

ಶತಂ ಶತಸಹಸ್ರಾಣಾಂ ಕೋಟಿ ಮಾಹುರ್ಮನೀಷಣ |1|

ಅರ್ಥ: 100*100*1000  = ಕೋಟಿ

ಶತಂ ಕೋಟಿಸಹಸ್ರಾಣಾಂ ಶಂಖ ಇತ್ಯಭಿಧೀಯತೇ ||2||

ಅರ್ಥ: 100* ಕೋಟಿ *1000   = ಶಂಖ

ಶಂಖದಲ್ಲಿ 1 ರ ಮುಂದೆ ಎಷ್ಟು 0 ಗಳಿವೆ?

ಶತಂ ಶಂಖ ಸಹಸ್ರಾಣಾಂ ಮಹಾಶಂಖ ಇತಿಸ್ಮೃತ:|3|

ಅರ್ಥ: 100* ಶಂಖ * 1000 =   ಮಹಾಶಂಖ

ರಾಮಾಯಣದ ಕಾಲ ಅತಿ ಕಡಿಮೆ ಎಂದರೆ ಕ್ರಿ. ಪೂ 4000 ಆಗಿದ್ದು, ಆಗಿನ ಕಾಲದಲ್ಲೆ ಸೊನ್ನೆ ಮತ್ತು ದಶಮಾಂಶ ಪದ್ಧತಿಯು ಬಳಕೆಯಲ್ಲಿ ಇತ್ತು  ಎಂದು ಇದರಿಂದ ತಿಳಿದು ಬರುತ್ತದೆ.

ಮೇಲೆ ತಿಳಿಸಿದಂತಹ ಡೊಡ್ಡ ಸಂಖ್ಯೆಗಳನ್ನು  ಸುಲಭವಾಗಿ ನೆನಪಿನಲ್ಲಿ ಇಟ್ಟುಕೊಳ್ಳುವುದು ಮತ್ತು ಗುಣಿಸುವುದು ಹೇಗೆ ಎಂದು ಇಲ್ಲಿ ಕಲಿಯಲಿದ್ದೇವೆ.

16 = 2*2*2*2 (ಸಂಖ್ಯೆ 2ನ್ನು 4 ಬಾರಿ ಗುಣಿಸಿದೆ.)

ಆದ್ದರಿಂದ 16 – ಇದನ್ನು 2ರ 4ನೇ ಘಾತ ಎನ್ನುವರು

16 = 24.

2ನ್ನು 4ನೆ ಘಾತಕ್ಕೆ ಏರಿಸಿದಾಗ 16 ದೊರೆಯುವುದು

16= 4*4 = 42 (4 ರ ಘಾತ 2 = 16)

ಸ್ವಾಭಾವಿಕ ಸಂಖ್ಯೆಗಳನ್ನು ಅಪವರ್ತಿಸಿದ ಹಾಗೆಯೇ ಬೀಜೋಕ್ತಿಗಳನ್ನು ಅಪವರ್ತಿಸಬಹುದು.

ಉದಾ:

x3= x*x*x

x3 ನ್ನು xನ  3 ನೇ ಘಾತ ಎನ್ನುವರು.

ಈ ರೀತಿ  x*x*x ನ್ನು x3 ರಿಂದ ಸೂಚಿಸುವ ಈ ಕ್ರಮವನ್ನು ‘ಘಾತಾಂಕದ ಸಂಕೇತದಿಂದ ಸೂಚಿಸುವಿಕೆ’ ( ‘exponential notation’ ) ಎನ್ನುವರು.

ಸಾಮಾನ್ಯವಾಗಿ:

xn = x *x*x* …. n ಬಾರಿ

ಇಲ್ಲಿ x ನ್ನು ‘ಆಧಾರ ಸಂಖ್ಯೆ’ (base) ಮತ್ತು n ನ್ನು ‘ಘಾತ ಸೂಚಿ’ (exponent  Or ‘index’) ಎಂತಲೂ ಕರೆಯುತ್ತಾರೆ.

(ಆಧಾರಸಂಖ್ಯೆ) ಘಾತಾಂಕ = ಸಂಖ್ಯೆ

(Base) Exponent = Number

ಗಮನಿಸಿ:a = a1

ಸಮಸ್ಯೆ1: 1331 ನ್ನು11 ರ ಆಧಾರದಲ್ಲಿ ಬರೆಯಿರಿ.

ಪರಿಹಾರ:

1331 ರ ಅಪವರ್ತನೆಗಳು = 11, 11, 11

1331 = 11*11*11 = 113

ಈಗ ನಾವು  25 ಮತ್ತು  23 ಗಳ ಗುಣಲಬ್ಧ ನೋಡುವಾ

25 *23 = (2*2*2*2*2)*(2*2*2) = 28

ಇಲ್ಲಿ ಗಮನಿಸಿ: 8 =5+3

ಮೇಲಿನ ಉದಾಹರಣೆಯಿಂದ ಘಾತಾಂಕದ ಮೊದಲ ನಿಯಮ (Product Law) ವನ್ನು ಹೀಗೆ ಬರೆಯಬಹುದು

x ಒಂದು ವಾಸ್ತವ ಸಂಖ್ಯೆಯಾಗಿದ್ದು x 0 ಮತ್ತು m, n ಗಳು ಯಾವುದೇ ಸಂಖ್ಯೆಗಳಾಗಿದ್ದರೆ,,

xm *xn = x(m+n)

  • ಸಮಸ್ಯೆ 2: ಸಂಕ್ಷೇಪಿಸಿ: a14 *b32 * a4 *b16

ಪರಿಹಾರ

a14 *b32 * a4 *b16

= (a14 * a4 )*(b32 * b16)  ( ಪದಗಳನ್ನು ವ್ಯವಸ್ಥೆಗೊಳಿಸಿದೆ.)

= (a14+4)*(b32+16) (ಮೊದಲ ನಿಯಮ.)

=a18 *b48

ಈಗ ನಾವು 25 ನ್ನ 23 ದಿಂದ ಭಾಗಿಸುವಾ.

25 /23 = (2*2*2*2*2)/(2*2*2) =  2*2=22

ಅದೇ ರೀತಿ, 23 /25 = (2*2*2)/ (2*2*2*2*2) = 1/(2*2) = 1/(22)

23 /23 = (2*2*2)/(2*2*2) = 1

ಮೇಲಿನ ಉದಾಹರಣೆಗಳಿಂದ ಘಾತಾಂಕದ 2 ನೇ ನಿಯಮವನ್ನು (Quotient Law) ಹೀಗೆ ಬರೆಯಬಹುದು

x ಒಂದು ವಾಸ್ತವ ಸಂಖ್ಯೆಯಾಗಿದ್ದು x 0 , m ಮತ್ತು n ಗಳು ಯಾವುದೇ ಸಂಖ್ಯೆಗಳಾಗಿದ್ದು m>n

ಆದಾಗ, xm /xn = 1/x(m-n)

x ಒಂದು ವಾಸ್ತವ ಸಂಖ್ಯೆಯಾಗಿದ್ದು x 0 ,m ಮತ್ತು n ಗಳು ಯಾವುದೇ ಸಂಖ್ಯೆಗಳಾಗಿದ್ದು m<n

ಆದಾಗ, xm /xn = 1/(x(n-m) )

ವ್ಯಾಖ್ಯೆಯಂತೆ, x  0 ಆದಾಗ,

  • xm = 1/( x-m)
  • x-m = 1/ ( xm)
  • n ಒಂದು ಧನ ಪೂರ್ಣಾಂಕವಾದಾಗ, a  0 ಆದಾಗ, = a1/n
  • a   0 ಆದಾಗ, n 0 ಒಂದು ಸ್ವಾಭಾವಿಕ ಸಂಖ್ಯೆಯಾದಾಗ, am/n=

ಗಮನಿಸಿ:

x0 =1 ( 1 = xm /xm = x(m-m) )

ಸಮಸ್ಯೆ3:10-5 ಮತ್ತು 2/m-1 ಗಳನ್ನು ಧನ ಘಾತಾಂಕರೂಪದಲ್ಲಿ ಬರೆ.

ಪರಿಹಾರ:

10-5 = 1/105

2/m-1= 2/(1/m1) = 2m1 =2m

  • ಸಮಸ್ಯೆ4: ಸಂಕ್ಷೇಪಿಸಿ: xa+b /xb-c

ಪರಿಹಾರ:

xa+b /xb-c

= xa+b /1/(x-(b-c))

= xa+b *x-(b-c)

= xa+b+(-(b-c)) (2ನೇ ನಿಯಮ)

= xa+b-b+c( -(b-c) = -b+c)

= xa+c

ಈಗ  52 , 52 ಮತ್ತು 52 ಗಳ ಗುಣಲಬ್ಧ ಕಂಡುಹಿಡಿಯುವಾ.

52 *52*52= (5*5)*(5*5)*(5*5) = 56

ಇದನ್ನು ಈ ರೀತಿಯಾಗಿಯೂ ಬರೆಯಬಹುದು.

52 *52*52 = (52)3 = 52*3

ಮೇಲಿನ ಉದಾಹರಣೆಯಿಂದ ಘಾತಾಂಕಗಳ 3 ನೇ ನಿಯಮವನ್ನು (Power law) ಹೀಗೆ ಬರೆಯಬಹುದು

x ಎಂಬುದು ಸೊನ್ನೆಯಲ್ಲದ ವಾಸ್ತವ ಸಂಖ್ಯೆಯಾಗಿದ್ದು m ಮತ್ತು n ಗಳು ಸಂಖ್ಯೆಗಳಾಗಿದ್ದರೆ,

(xm )n = xmn

  • ಸಮಸ್ಯೆ5 : ಸಂಕ್ಷೇಪಿಸಿ [{(x2)2}2]2

ಪರಿಹಾರ:

(x2)2= x4

{(x2)2}2 = {x4}2 = x8

[{(x2)2}2]2 =  [x8]2= x16

ಅಭ್ಯಾಸ : ಪ್ರತಿ ಪದವನ್ನು ವಿಸ್ತರಿಸಿ ತಾಳೆನೋಡಿ

ಈಗ, (2*5)3 ಇದನ್ನು ವಿಸ್ತರಿಸುವಾ:

(2*5)3 = (2*5)*(2*5)*(2*5) ವ್ಯಾಖ್ಯೆಯಂತೆ.

= (2*2*2)*(5*5*5)

= (2)3*(5)3

ಈ ಮೇಲಿನ ಉದಾಹರಣೆಯಿಂದ ಘಾತಾಂಕಗಳ 4 ನೇ ನಿಯಮವನ್ನು ಹೀಗೆ ಬರೆಯಬಹುದು

x ಮತ್ತು y ಗಳು ಸೊನ್ನೆಯಲ್ಲದ ವಾಸ್ತವ ಸಂಖ್ಯೆಗಳಾದಾಗ,ಮತ್ತು m ಯಾವುದೇ ಸಂಖ್ಯೆಯಾದಾಗ,

(x*y)m = (xm)* (ym)

  • ಸಮಸ್ಯೆ6:ಸಂಕ್ಷೇಪಿಸಿ: (5x-3 y-2)3

ಪರಿಹಾರ:

(5x-3 y-2)3

= (5)3 *(x-3)3*(y-2)3 ( 4 ನೇ ನಿಯಮ)

= 53* x-9* y-6 (3 ನೇ ನಿಯಮ)

= 53/( x9* y6)           (ವ್ಯಾಖ್ಯೆಯಿಂದ)

ಅಭ್ಯಾಸ : ಪ್ರತಿ ಪದವನ್ನು ವಿಸ್ತರಿಸಿ ತಾಳೆನೋಡಿ

  • ಸಮಸ್ಯೆ7: ಸಂಕ್ಷೇಪಿಸಿ: (3x-2 y)-1

ಪರಿಹಾರ:

(3x-2 y)-1

= (3) -1*( x-2)-1 *(y)-1 --à( 4 ನೇ ನಿಯಮ)

= (3) -1* x+2 *y-1 ----à  (3 ನೇ ನಿಯಮ)

= x2 /3*y--à (ವ್ಯಾಖ್ಯೆಯಿಂದ)

ಪ್ರತಿ ಪದವನ್ನು ವಿಸ್ತರಿಸಿ ತಾಳೆನೋಡಿ

ಈಗ (2*5)3 ನ್ನು ವಿಸ್ತರಿಸುವಾ:

(2/5)3 = (2/5)*(2/5)*(2/5)

= (2*2*2)/(5*5*5)

= (2)3/(5)3

ಈ ಮೇಲಿನ ಉದಾಹರಣೆಯಿಂದ ಘಾತಾಂಕಗಳ 5 ನೇ ನಿಯಮವನ್ನು ಹೀಗೆ ಬರೆಯಬಹುದು

x ಮತ್ತು y ಗಳು ಸೊನ್ನೆಯಲ್ಲದ ವಾಸ್ತವ ಸಂಖ್ಯೆಗಳಾದಾಗ, m ಒಂದು ಸಂಖ್ಯೆಯಾದಾಗ,

(x/y)m = (xm)/ (ym)

ಗಮನಿಸಿ:

(-1)2 = (-1)*(-1) =+1 and (-1)3 = (-1)*(-1)*(-1) = -1

  • m ಒಂದು ಸಮ ಸಂಖ್ಯೆಯಾದಾಗ, (-a)m = (-1)m *am = am
  • m ಒಂದು ಬೆಸ ಸಂಖ್ಯೆಯಾದಾಗ (-a)m = (-1)m *am = -am

ಸಾಧನೆ:

  • m ಒಂದು ಸಮ ಸಂಖ್ಯೆಯಾದಾಗ ಅದರ ರೂಪ 2n  ರೀತಿಯಲ್ಲಿ ಇರುತ್ತದೆ (n= 1,2.3 . . .)

(-1)m = (-1)2n = ((-1)2 )n ----à3 ನೇ ನಿಯಮ

= 1n = 1

2. m ಒಂದು ಬೆಸ ಸಂಖ್ಯೆಯಾದಾಗ ಅದರ ರೂಪ 2n+1  ರೀತಿಯಲ್ಲಿ ಇರುತ್ತದೆ (n= 0,1,2.3 . . .)

(-1)m = (-1)2n+1 = (-1)2n *(-1)1 ----à 2 ನೇ ನಿಯಮ

= 1n *-1        ----à (ಹಿಂದಿನ ಹಂತದಲ್ಲಿ ಸಾಧಿಸಿದೆ)

=  -1

  • ಸಮಸ್ಯೆ ಸಂಕ್ಷೇಪಿಸಿ: (am/an)p*(an/ap)m*(ap/am)n

ಪರಿಹಾರ:

(am/an)p

= (am)p/(an)p (5ನೇ ನಿಯಮ)

= amp/ anp (3ನೇ ನಿಯಮ)

(am/an)p*(an/ap)m*(ap/am)n

= (amp/ anp)* (anm/ apm)* (apn/ amn)

= (amp* anm* apn)/ (anp*apm*amn) (ಅಂಶ, ಛೇದಗಳೆರಡೂ ಒಂದೇ)

=1

  • ಸಮಸ್ಯೆ9 : ಸಂಕ್ಷೇಪಿಸಿ:(a4b-5/ a2b-4)-3

ಪರಿಹಾರ:

ಮೊದಲು ಆವರಣದ ಒಳಗಿರುವ ಭಾಗವನ್ನು ಸಂಕ್ಷೇಪಿಸಿದಾಗ,

(a4b-5/ a2b-4)

= (a4/ a2) * (b-5/ b-4)

= (a2/ b) ( (2 ನೇ ನಿಯಮ)- (a4/ a2) = (a4-2) = a2, (b-5/ b-4) = (b-5-(-4)) = b-5+4= b-1= 1/b )

ಈಗ ಕೊಟ್ಟ ಸಮಸ್ಯೆ ನೋಡುವಾ

(a4b-5/ a2b-4)-3

= (a2/ b)-3

= (a2/ b)-3

= (a2)-3/ (b)-3 (3ನೇ ನಿಯಮ)

=a-6/b-3

= b3/a6

ಪರ್ಯಾಯ ವಿಧಾನ

(a4b-5/ a2b-4)-3

= (a-12b+15/ a-6b+12) (3ನೇ ನಿಯಮ)

=(a-12/ a-6)* (b15/ b12)   (ಪದಗಳನ್ನು ಜೋಡಿಸಿದಾಗ)

=(a-12* a6)* (b15* b- 12) (ಸೂತ್ರ x -m = 1/( xm) )

=(a-12+6)* (b15-12)         (ಮೊದಲ ನಿಯಮ)

=a-6*b3

= b3/a6

ಕಲಿತ ಸಾರಾಂಶ

ಸಂಖ್ಯೆ

ಕಲಿತಮುಖ್ಯಾಂಶಗಳು

1

ವ್ಯಾಖ್ಯೆಯಂತೆ, xn = x*x*x*x – n ಬಾರಿ

2

(ಆಧಾರಸಂಖ್ಯೆ) ಘಾತಾಂಕ = ಸಂಖ್ಯೆ

3

ವ್ಯಾಖ್ಯೆಯಂತೆ, x0 =1

4

ವ್ಯಾಖ್ಯೆಯಂತೆ, x - m = 1/( xm)

5

ಮೊದಲ ನಿಯಮ:xm *xn = x(m+n)

6

2 ನೇ ನಿಯಮ xm /xn = x(m-n)

7

3 ನೇ ನಿಯಮ (xm )n = xmn

8

4 ನೇ ನಿಯಮ (x*y)m = (xm)* (ym)

9

5 ನೇ ನಿಯಮ (x/y)m = (xm)/ (ym)

ಹೆಚ್ಚಿನ ಕಲಿಕೆಗಾಗಿ

  • ಸಮಸ್ಯೆ10 : 1960 = 2a5b7c ಆದರೆ,  2-a7b5-c ನ ಬೆಲೆ ಕಂಡುಹಿಡಿ.

ಪರಿಹಾರ:

1960  =  2*2*2*5*7*7=  235172

a=3, b=1 , c=2

2-a =1/8 and  5-c =1/25

2-a7b5-c

= (1/8)*7*(1/25) = 7/200

  • ಸಮಸ್ಯೆ11 : ಸಂಕ್ಷೇಪಿಸಿ: {(8x3)/ 125y3}2/3

ಪರಿಹಾರ:

ಈಗ:

8x3=(2x)3 and 125y3=(5y)3

(8x3)/125y3

=(2x/5y)3

{(8x3)/125y3}2/3

={(2x/5y)3}2/3

=(2x/5y)3*2/3

=(2x/5y)2

= 4x2/25y2

  • ಸಮಸ್ಯೆ12 :3x-1 = 9*34 ಆದರೆ x ನ ಬೆಲೆ ಕಂಡುಹಿಡಿ.

ಪರಿಹಾರ:

9 = 32

9*34= 32*34=36

ಈಗ

3x-1 = 9*34 =36,

x-1 = 6

x=7

ತಾಳೆ:

x ನ ಬೆಲೆಯನ್ನು(=7)ದತ್ತ ಸಮಸ್ಯೆಯಲ್ಲಿ ಆದೇಶಿಸಿ, ವಿಸ್ತರಿಸಿ ಉತ್ತರವನ್ನು ತಾಳೆನೋಡಿ (= 729

ಬೀಜೋಕ್ತಿಗಳ ಗುಣಾಕಾರ

ಸಂಕಲನ ಮತ್ತು ವ್ಯವಕಲನಗಳಲ್ಲಿ, ಸಂಖ್ಯೆಗಳಲ್ಲಿ ಮತ್ತು ಬೀಜೋಕ್ತಿಗಳಲ್ಲಿ ಅನುಸರಿಸುವ  ನಿಯಮಗಳನ್ನೇ ಬೀಜೋಕ್ತಿಗಳ ಗುಣಾಕಾರದಲ್ಲೂ ಉಪಯೋಗಿಸುತ್ತೇವೆ. (ಪರಿವರ್ತನ ಮತ್ತು ಸಹವರ್ತನ ನಿಯಮಗಳು)

  • ಎರಡು ಏಕಪದಗಳ ಗುಣಲಬ್ಧ ಸಂಖ್ಯಾಸಹಗುಣಕವು ,ಆ ಎರಡು ಏಕಪದಗಳ ಸಂಖ್ಯಾ ಸಹಗುಣಕಗಳ ಗುಣಲಬ್ಧವಾಗುತ್ತದೆ (6a*5 = (6*5)*a = 30a).
  • ಎರಡು ಏಕಪದಗಳ ಗುಣಲಬ್ಧ ಚರಾಕ್ಷರದ ಭಾಗವು ,ಆ ಏಕ ಪದಗಳ ಅವ್ಯಕ್ತ ಪದಗಳ ಗುಣಲಬ್ಧವಾಗಿರುತ್ತದೆ (6a*5b = (6*5)*a*b = 30a*b = 30ab).
  • ಸಮಸ್ಯೆ1: ಸಂಕ್ಷೇಪಿಸಿ: (1/10)*(x5y2) *10x3y

ಪರಿಹಾರ:

(1/10)*(x5y2) * 10x3y

=(1/10)*10 *(x5y2) *x3y ( ಸಂಖ್ಯಾ ಸಹಗುಣಕ ಮತ್ತು ಚರಾಕ್ಷರಗಳನ್ನು ಒಟ್ಟಿಗೆ ಬರೆದಾಗ)

= 1*(x5 *x3) * y2y

= (x5+3 ) * y2+1

= x8 y3

  • ಸಮಸ 2: -3x2y, 4xy2z  ಮತ್ತು (5/4) ಗಳ ಗುಣಲಬ್ಧ ಕಂಡುಹಿಡಿ

ಪರಿಹಾರ:

ಮೊದಲು ಮೊದಲನೇ ಎರಡು ಪದಗಳನ್ನು ತೆಗೆದುಕೊಳ್ಳುವಾ:

-3x2y* 4xy2z

= (-3*4) (x2*x) (y*y2)z  ( ಸಂಖ್ಯಾ ಸಹಗುಣಕ ಮತ್ತು ಚರಾಕ್ಷರಗಳನ್ನು ಒಟ್ಟಿಗೆ ಬರೆದಾಗ)

= -12 x3 y3z            (ಘಾತಾಂಕಗಳ ಮೊದಲನೇ ನಿಯಮದ ಪ್ರಕಾರ)

ಈಗ ಎಲ್ಲಾ ಮೂರು ಪದಗಳನ್ನು ತೆಗೆದುಕೊಳ್ಳುವಾ:

(-3x2y* 4xy2z) * (5/4)z

= -12 x3 y3z* (5/4)z

= (-12)*(5/4) x3 y3z*z

= -15 x3 y3 z2

  • ಏಕಪದವನ್ನು ದ್ವಿಪದದಿಂದ ಗುಣಿಸುವುದು(Multiplication of monomial by a binomial)

24 = 2*12 = 2*(8+4) = 2*8+2*4 = 16+8: ಇದೇರೀತಿ.

a*(b +c) = a*b + a*c = ab+ac ( ವಿಭಾಜಕ ನಿಯಮ)

ಒಂದು ಏಕಪದ ಮತ್ತು ಒಂದು ದ್ವಿಪದ - ಇವೆರಡನ್ನು ಗುಣಿಸುವಾಗ, ದ್ವಿಪದದ ಪ್ರತೀ ಪದವನ್ನು ಏಕಪದದಿಂದ ಗುಣಿಸಿ, ಸಂಕ್ಷೇಪಿಸಬೇಕು..

  • ಸಮಸ್ಯೆ 1:(-11p2q-q2) ವನ್ನು (-2pq) ದಿಂದ ಗುಣಿಸಿ.

ಪರಿಹಾರ:

-2pq *(-11p2q-q2)

= (-11p2q)* (-2pq) -(q2)* (-2pq) (ಪ್ರತೀಪದವನ್ನು -11p2q-q2 ದಿಂದ ಗುಣಿಸಿದಾಗ)

= (-11)*(-2)p2*p*q*q  -(1*-2)*p*q2* q

= 22p3q2+2pq3

  • ಎರಡ ದ್ವಿಪದಗಳ ಗುಣಾಕಾರ<(Multiplication of two binomials

ಈಗ ನಾವು 12 ನ್ನ 8 ರಿಂದ ಗುಣಿಸುವಾ 12*8 = 96

ಇದನ್ನು ನಾವು ಬೇರೆ ಕ್ರಮದಲ್ಲಿ ಮಾಡುವಾ 12 = 8+4 and 8= 6+2

12*8

= (8+4)*(6+2)

= 8*(6+2) + 4*(6+2)

= (8*6+8*2)+ (4*6 +4*2)

= 48+16+24+8 = 96

ಇದೇರೀತಿ

(a+b)*(c+d) = a*(c+d)+b*(c+d)

= ac+ad+bc+bd

ಸಾಮಾನ್ಯವಾಗಿ ಹೇಳುವುದಾದರೆ, ಎರಡು ದ್ವಿಪದಗಳನ್ನು ಗುಣಿಸುವಾಗ ಒಂದು ದ್ವಿಪದದ ಪ್ರತೀಯೊಂದು ಪದದಿಂದಲ್ಲೂ 2ನೇ ದ್ವಿಪದದ ಪ್ರತಿಯೊಂದು ಪದವನ್ನು ಗುಣಿಸಿ, ಸಂಕ್ಷೇಪಿಸಬೇಕು.ಪ್ರತೀಪದಗಳ ಗುಣಾಕಾರದಲ್ಲೂ ನಾವು ಇದೇ ಕ್ರಮವನ್ನು ಅನುಸರಿಸುತ್ತೇವೆ.

  • ಸಮಸ್ಯೆ1: 2x2-3x +1 ನ್ನ (x-3) ರಿಂದ ಗುಣಿಸಿ

ಪರಿಹಾರ:

(x-3)* (2x2-3x +1)

= x*(2x2-3x +1) -3*(2x2-3x +1) (ಮೊದಲನೆ ದ್ವಿಪದದ ಪ್ರತೀ ಪದವನ್ನು 2ನೇ ತ್ರಿಪದದ ಪ್ರತಿ ಪದದಿಂದ ಗುಣಿಸಿದಾಗ)

= (2x2*x-3x*x +1*x)+( -3*2x2-3*-3x -3*1) (ಸಂಕ್ಷೇಪಿಸಿದಾಗ)

= (2x3-3x2+x) + (- 6 x2+9x-3)

=2x3 -3x2- 6 x2+x +9x -3 (ಸಜಾತಿಯ ಪದಗಳನ್ನು ಒಟ್ಟಿಗೆ ಬರೆದಾಗ)=2x3 -9x2+10x -3

  • ನಿತ್ಯ ಸಮಿಕರಣಗಳು(Identities and formulae):

ಚರಾಕ್ಷರಗಳ ಎಲ್ಲಾ ಬೆಲೆಗಳಿಗೆ ವಾಸ್ತವವಾಗಿರುವ ಸಮೀಕರಣಗಳನ್ನು ನಿತ್ಯ ಸಮಿಕರಣಗಳೆನ್ನುವರು. ಈಗ ಚರಾಕ್ಷರಗಳಾದ a,b,c ಅಥವಾ x ಗಳ ಎಲ್ಲಾ ಬೆಲೆಗಳಿಗೆ ವಾಸ್ತವವಾಗಿರುವ ಕೆಲವು ನಿತ್ಯಸಮಿಕರಣಗಳನ್ನು ನೋಡುವಾ:

ಕೆಳಗಿನವುಗಳನ್ನು ನಾವು ಕಲಿತಿದ್ದೇವೆ.

(a+b)*(c+d) = a*(c+d)+b*(c+d)

= ac+ad+bc+bd       ------------------->(1)

ಮೇಲಿನ ಸಮೀಕರಣದಲ್ಲಿ a ಯನ್ನು x , c ಯನ್ನು x, b ಯನ್ನು a ಮತ್ತು d ಯನ್ನು b ದಿಂದ ಬದಲಾಯಿಸಿದಾಗ (x+a)*(x+b)

= x*x+ xb+ax+ab

= x2+xa+xb+ab

= x2+x(a+b)+ab

  • ಸಮಸ್ಯೆ1 :102*106 ಗುಣಲಬ್ಧವೇನು?

ಪರಿಹಾರ:

102 = 100+2

106 = 100+6

102*106

= (100+2)*(100+6)          [ಸೂತ್ರ (x+a)*(x+b)]

= 1002+ 100*(2+6)+ 2*6

= 10000+800+12 = 10812

  • ಸಮಸ್ಯೆ2: 97 ಮತ್ತು 95 ರ ಗುಣಲಬ್ಧವೇನು?

ಪರಿಹಾರ:

97 =100-3

95 =100-5

(x+a)*(x+b) = x2+x(a+b)+ab ಸಮೀಕರಣದಲ್ಲಿ

x=100, a=-3 and b=-5.

97*95

= (100-3)*(100-5)

= 1002+ 100*(-3+-5)+ (-3*-5)

= 10000-800+15 = 9215

  • ಸಮಸ್ಯೆ3: 103 ನ್ನ 96 ರಿಂದ ಗುಣಿಸಿ.

ಪರಿಹಾರ:

103 = 100+3

96 = 100-4

(x+a)*(x+b) = x2+x(a+b)+ab  ಸಮೀಕರಣ

x=100, a=+3 ಮತ್ತು b=-4.

103*96

= (100+3)*(100-4)

= 1002+ 100*(3+-4)+ (3*-4)

= 10000-100-12 = 9888

ಸಮೀಕರಣ (1) ರಲ್ಲಿ c ಯನ್ನು a, ಮತ್ತು d ಯನ್ನುb ನಿಂದ ಬದಲಾಯಿಸಿದಾಗ

( i.e. (a+b)*(c+d) = ac+ad+bc+bd )

ಈಗ,

(a+b)*(a+b) = aa+ab+ba+bb

= a2+ 2ab+b2

(a+b)2= a2+ 2ab+b2

  • ಸಮಸ್ಯೆ4: (10.1)2 ದ ಬೆಲೆ ಕಂಡುಹಿಡಿ.

ಪರಿಹಾರ:

10.1 = 10+0.1

(10.1)2= 10+0.1 [ಈಗ (a+b)2= a2+ 2ab+b2 ಸಮೀಕರಣ ಬಳಸಿ]

= 102+ 2*10*0.1+ (0.1)2

= 100+2+0.01 = 102.01

  • ಸಮಸ್ಯೆ5: 4x2+12xy+8y2) ವನ್ನು ಒಂದು ಪೂರ್ಣವರ್ಗವನ್ನಾಗಿ ಮಾಡಲು ಅದಕ್ಕೆ ಏನನ್ನು ಕೂಡಿಸಬೇಕು?

ಪರಿಹಾರ:

4x2 ವು a2 ರೂಪದಲ್ಲಿದೆ (a = 2x).

ಆದರೆ 8y2 ಪೂರ್ಣವರ್ಗವಲ್ಲ. 9y2 ವು ಪೂರ್ಣವರ್ಗ. b = 3y

=2ab = 2*2x*3y = 12xy

4x2+12xy+ 9 y2 ಈ ಬೀಜೋಕ್ತಿಯು ಪೂರ್ಣವರ್ಗ.

ಆದ್ದರಿಂದ ದತ್ತ ಬೀಜೋಕ್ತಿಯನ್ನು ಒಂದು ಪೂರ್ಣವರ್ಗವನ್ನಾಗಿ ಮಾಡಲು ಅದಕ್ಕೆ (y2) ವನ್ನು ಕೂಡಿಸಬೇಕು.

[ಈ ಸಮಸ್ಯೆಗೆ ಇನ್ನೂ ಹಲವು ಪರಿಹಾರ ಕ್ರಮಗಳಿವೆ.]

ಈಗ ಇನ್ನೊಂದು ನಿತ್ಯ ಸಮೀಕರಣ ನೋಡುವಾ.

ಸಮೀಕರಣ (1) ರಲ್ಲಿ bಯನ್ನು-b, c ಯನ್ನುa ಮತ್ತು d ಯನ್ನು-b ದಿಂದ ಬದಲಾಯಿಸಿದಾಗ,

(a-b)*(a-b)

= a*a+ a(*-b) + (–b)*a +b*(-b)

= a2-ab-ab+ b2

= a2-2ab+ b2

  • ಸಮಸ್ಯೆ 6 : (4.9)2 ದ ಬೆಲೆ ಕಂಡುಹಿಡಿಯಿರಿ.

ಪರಿಹಾರ:

4.9 = (5-0.1)

(4.9)2 – ಇದು (a-b)2 ರೂಪದಲ್ಲಿದೆ. a=5 and b=0.1

4.92 = (5-0.1)

= 52+-2*5*0.1+ (0.1)2

= 25 -1 +.01

= 24.01

  • ಸಮಸ್ಯೆ 7: (x-1/x)2 - ಸುಲಭೀಕರಿಸಿ.\

ಪರಿಹಾರ:

ಇದು (a-b)2 ರೂಪದಲ್ಲಿದೆ ಹಾಗೂ a=x  ಮತ್ತು b=1/x

(x-1/x)2= x2-2x(1/x)+ (1/x)2

= x2-2+ 1/x2

ಸಮೀಕರಣ(1) ರಲ್ಲಿ cಯನ್ನು a , d ಯನ್ನು -b ದಿಂದ ಬದಲಾಯಿಸುವ.

ಈಗ ಇನ್ನೊಂದು ಗುಣಲಬ್ಧ ನೋಡುವಾ.

(a+b)*(a-b) = aa+a*(-b)+ba+b*(-b)

= a2-ab+ab-b2 ( -ab+ab=0)

= a2-b2

  • ಸಮಸ್ಯೆ 8:ಗುಣಲಬ್ಧ ಕಂಡುಹಿಡಿ: 9.5*10.5

9.5 * 10.5 = (10-0.5 )*(10+0.5)

9.5* 10.5  ಎನ್ನುವುದು (a+b)(a-b) ರೂಪದಲ್ಲಿದೆ ಮತ್ತು ಇಲ್ಲಿ a=10, b=0.5.

9.5*10.5

= 102- (0.5)2

= 100-0.25  = 99.75

  • ಸಮಸ್ಯೆ 9:ಸುಲಭ ರೂಪಕ್ಕೆ ತನ್ನಿ: (x+2)(x-2)( x2+4)

ಪರಿಹಾರ:

(a+b)*(a-b) ರೂಪದಲ್ಲಿರುವ ಸಮೀಕರಣದಲ್ಲಿ ಮೊದಲ ಎರಡು ಪದಗಳನ್ನು ಸುಲಭೀಕರಿಸುವ.

(x+2)(x-2) = ( x2-4)

(x+2)(x-2)( x2+4)= ( x2-4) * ( x2+4)

= ( x4-16) ( x2 ನ ವರ್ಗ x4)

ಸಮೀಕರಣ (1) ರಲ್ಲಿ b ಯನ್ನು b+c, c ಯನ್ನು a+b ಮತ್ತು d ಯನ್ನು c ದಿಂದ ಬದಲಾಯಿಸುವ.

ಈಗ ತ್ರಿಪದದೋಕ್ತಿಯ ವರ್ಗ ನೋಡುವಾ:

(a+(b+c))*((a+b)+c))

= a(a+b) + ac+ (b+c)(a+b)+ (b+c)c

= (a.a+ab)+ac+(ba+ b.b+ca+cb)+(bc+ c.c)

= a2+ab+ac+ba+ b2+ca+cb+bc+ c2

= a2 + b2+ c2+ab+ba+ac+ca+ cb+bc (ಪದಗಳನ್ನು ಹೊಂದಿಸಿ ಬರೆದಾಗ)

= a2 + b2+ c2+2ab+2bc+2ca

(a+b+c)2 = a2 + b2+ c2+2ab+2bc+2ca

  • ಸಮಸ್ಯೆ10: 1732 ದ ಬೆಲೆ ಕಂಡುಹಿಡಿ.

ಪರಿಹಾರ:

173 ನ್ನು (100+70+3) ಎಂದು ಬರೆಯಬಹುದು.

1732 ನ್ನು (a+b+c)2 ದ ರೂಪದಲ್ಲಿ ಬರೆದಾಗ,

a=100,b=70 and c=3

1732= 1002+702+32+ 2*100*70 +2*70*3+2*3*100

= 10000+4900+9+14000+420+600

=  29929

  • ಸಮಸ್ಯೆ11:ಸುಲಭೀಕರಿಸಿ (x2 + y2- z2)2 -(x2 - y2-+z2)2

ಪರಿಹಾರ:

(x2 + y2- z2)2 ಇದು (a+b+c)2 ಈ ರೂಪದಲ್ಲಿದೆ.

ಇಲ್ಲಿ a = x2 , b = y2 and c = - z2

= (x2 + y2- z2)2 = (x4 + y4+z4 + 2 x2 y2 - 2 y2 z2-2 z2 x2)

ಇದೇ ರೀತಿ,

(x2 - y2+z2)2 = (x4 + y4+z4 - 2 x2 y2 - 2 y2 z2+2 z2 x2)

(x2 + y2- z2)2 -(x2 - y2-+z2)2

= (x4 + y4+z4 + 2 x2 y2 - 2 y2 z2-2 z2 x2) -(x4 + y4+z4 - 2 x2 y2 - 2 y2 z2+2 z2 x2)

= (x4 + y4+z4 + 2 x2 y2 - 2 y2 z2-2 z2 x2) -x4 - y4-z4 +2 x2 y2 + 2 y2 z2-2 z2 x2

= 4x2 y2 -4 z2 x2

=4x2 (y2 -z2)

(a+b)3 ಇದನ್ನು ವಿಸ್ತರಿಸಿ.

(a+b)3

= (a+b)*(a+b)*(a+b)

= (a+b)*( a2+ 2ab+b2) ( (a+b)2= a2+ 2ab+b2)

= a*( a2+ 2ab+b2)+b*( a2+ 2ab+b2) (ಮೊದಲನೆ ಬೀಜಾಕ್ಷರ ಪದದ ಪ್ರತೀಪದವನ್ನು ಇನ್ನೊಂದು ಬೀಜಾಕ್ಷರ ಪದದ ಪ್ರತೀಪದದೊಂದಿಗೆ ಗುಣಿಸಿದಾಗ)

= a3+ 3a2b+ 3ab2+b3 (ಸಜಾತೀಯ ಪದಗಳನ್ನು ಕೂಡಿಸಿದಾಗ)

= a3+ 3ab(a+b)+b3 (ಸಾಮಾನ್ಯ ಪದವನ್ನು ಹೊರತೆಗೆದಾಗ)

ವಿ. ಸೂ. ಈ ಸೂತ್ರವನ್ನು ಭಾಸ್ಕರನು ಲೀಲಾವತಿಯ 27 ನೇ ಶ್ಲೋಕದಲ್ಲಿ ನೀಡಿದ್ದಾನೆ.

ಅಭ್ಯಾಸ: (a-b)3= a3-3ab(a-b)-b3 - ಈ ಸೂತ್ರವನ್ನು ಸಾಧಿಸಿ.

  • ಸಮಸ್ಯೆ 12: 513 ಇದರ ಬೆಲೆ ಕಂಡು ಹಿಡಿಯಿರಿ.

ಪರಿಹಾರ:

51  = 50+1.( ಇದು (a+b)3 ರೂಪದಲ್ಲಿದೆ.)

513 = 503+ 3*50*1(50+1)+13 [(a+b)3 = a3+ 3ab(a+b)+b3]

= 125000+7650+1

=132651

  • ಸಮಸ್ಯೆ 13: ಸುಲಭೀಕರಿಸಿ: (x+1/x)3

ಪರಿಹಾರ:

(x+1/x)3 ಇದು (a+b)3 ರೂಪದಲ್ಲಿದೆ.

(x+1/x)3

= x3+ 3x*1/x(x+1/x)+(1/x)3

= x3+ 3(x+1/x)+(1/x3)

= x3+ 3x+3/x+1/x3

  • 2.4.3 ಸಮಸ್ಯೆ14 : (9.9)3 – ಇದರ ಬೆಲೆ ಕಂಡುಹಿಡಿ.

ಪರಿಹಾರ:

9.9 = (10-0.1)

= 9.93 ಇದು (a-b)3 ರೂಪದಲ್ಲಿದೆ a=10 , b=0.1.

(9.9)3= 103-3*10*0.1*(10-0.1)-(0.1)3

= 1000-3*9.9- 0.001

= 1000-29.7-.001

= 970.299

  • ಸಮಸ್ಯೆ15: ವಿಸ್ತರಿಸಿ:  (x/2-y/3)3

ಪರಿಹಾರ:

(x/2-y/3)3 ಇದು (a-b)3 ರೂಪದಲ್ಲಿದೆ.

(x/2-y/3)3

= (x/2)3- 3(x/2)*(y/3)(x/2-y/3)-(y/3)3

= x3/8 – (xy/2)*(x/2-y/3)-y3/27 (ಸಂಕ್ಷೇಪಿಸಿದಾಗ)

= x3/8 – x2y/4 +xy2/6-y3/27

  • ಸಮಸ್ಯೆ 16: (a+b) (a2+b2-ab) = a3+b3 ಎಂದು ತೋರಿಸಿ.

ಪರಿಹಾರ:

(a+b) (a2+b2-ab)

= a(a2+b2-ab) +b(a2+b2-ab)

= a*a2+a*b2-a*ab + b*a2+b*b2-b*ab

=a3+ab2-a2b + ba2+b3-ab2 (ಸಮಾನ ಧನಾತ್ಮಕ ಮತ್ತು ಋಣಾತ್ಮಕ ಪದಗಳನ್ನು ಸರಿದೂಗಿಸಿದಾಗ)

=a3+b3

  • 2.4.3 ಸಮಸ್ಯೆ 17: a+b+c = 12 , a2+b2+ c2 =50 ಆದರೆ ab+bc+ca ಯ ಬೆಲೆ ಕಂಡುಹಿಡಿ.

ಪರಿಹಾರ:

(a+b+c)2 = (a2+b2+ c2)+2ab+2bc+2ca

ಮೇಲಿನ ಸಮಿಕರಣದಲ್ಲಿ ದತ್ತ ಬೆಲೆಗಳನ್ನು ಆದೇಶಿಸಿದಾಗ,

122= 50+2(ab+bc+ca)

144-50 = 2(ab+bc+ca)

ab+bc+ca = 47

  • ಸಮಸ್ಯೆ 18: x3+y3+ z3 = 3xyz ಮತ್ತು x+y+z=0 ಆದರೆ,

(x+y)2/xy +(y+z)2/yz+(z+x)2/zx ರ ಬೆಲೆ ಕಂಡು ಹಿಡಿಯಿರಿ

ಪರಿಹಾರ:

ದತ್ತ x+y+z=0

ಆದ್ದರಿಂದ x+y = -z, y+z = -x and z+x = -y

(x+y)2/xy +(y+z)2/yz+(z+x)2/zx

= z2/xy+x2/yz+y2/zx

= z3/xyz+x3/xyz+y3/zxy (xyz ನ್ನ ಸಾಮಾನ್ಯ ಛೇದ ಮಾಡಿದೆ)

= (x3+y3+ z3)/xyz

= 3xyz/xyz

=3

ಕಲಿತ  ಸಾರಾಂಶ

ಸಂ.

ಸೂತ್ರ

ವಿಸ್ತರಣೆ

1

(a+b)(c+d)

ac+ad+bc+bd

2

(x+a)*(x+b)

x2+x(a+b)+ab

3

(a+b)2

a2+b2+2ab

4

(a-b)2

a2+b2-2ab

5

(a+b)(a-b)

a2-b2

6

(a+b+c)2

a2+b2+ c2+2ab+2bc+2ca

7

(a+b)3

a3+b3+3ab(a+b)

8

(a-b)3

a3-b3-3ab(a-b)

ಬೀಜೋಕ್ತಿಗಳ ಮ.ಸಾ.ಅ ಮತ್ತು ಲ.ಸಾ.ಅ(HCF(GCD) and LCM of Algebraic terms):

ಎರಡು ಅಥವಾ ಹೆಚ್ಚು ಸಂಖ್ಯೆಗಳ ಮ.ಸಾ.ಅ ಎಂದರೇನೆಂದು ನಮಗೀಗಾಗಲೇ ತಿಳಿದಿದೆ. ಅದು ಎಲ್ಲಾ ಸಂಖ್ಯೆಗಳ ಸಾಮಾನ್ಯ ಅಪವರ್ತನಗಳಲ್ಲಿ ಅತಿದೊಡ್ಡದಾಗಿದೆ.

ಉದಾಹರಣೆಗೆ 4, 8, 20, 16. - ಈ ನಾಲ್ಕು ಸಂಖ್ಯೆಗಳನ್ನು ನೋಡಿ. 2 ಮತ್ತು 4  ಇವೆರಡು ಮೇಲಿನ ನಾಲ್ಕು ಸಂಖ್ಯೆಗಳ ಸಾಮಾನ್ಯ ಅಪವರ್ತನವಾಗಿದ್ದು 4 ದೊಡ್ಡದಾಗಿದೆ. 4, 8, 20, 16- ಇವುಗಳ ಮ.ಸಾ.ಅ 4.

ಮ.ಸಾ.ಅ ವು ಭಿನ್ನರಾಶಿಗಳನ್ನು ಸುಲಭ ರೂಪಕ್ಕೆ ತರಲು ಉಪಯುಕ್ತ.

ಉದಾಹರಣೆಗೆ ಒಂದು ಭಿನ್ನರಾಶಿ = 30/48 ನ್ನು ನೋಡುವಾ.

30 ಮತ್ತು 48 ರ ಮ.ಸಾ.ಅ 6.

30/48 =  (6*5)/(6*8) ಅಂಶ ಮತ್ತು ಛೇದಗಳಲ್ಲಿನ ಸಾಮಾನ್ಯ ಅಪವರ್ತ್ಯಗಳನ್ನು ತೆಗೆದಾಗ

= 5/8

ಲ.ಸಾ.ಅ ಎಂದರೇನು? ಅದು ದತ್ತ ಸಂಖ್ಯೆಗಳ ಸಾಮಾನ್ಯ ಗುಣಕ (ಅಪವರ್ತ್ಯ) ಗಳಲ್ಲಿ ಚಿಕ್ಕದು ಆಗಿರುತ್ತದೆ.

ಉದಾಹರಣೆಗೆ 4, 8, 20, 16 ಇವುಗಳ ಸಾಮಾನ್ಯ ಅಪವರ್ತ್ಯಗಳು  =80, 160, 320 … ಇವುಗಳಲ್ಲಿ ಚಿಕ್ಕದು = 80 .

ಇದು ದತ್ತ ಸಂಖ್ಯೆಗಳ ಲ.ಸ.ಅ.

ಲ.ಸಾ.ಅ ವು ಭಿನ್ನರಾಶಿಗಳನ್ನು ಕೂಡಿಸಲು ಉಪಯುಕ್ತ.

ಈಗ  1/4, 1/8, 1/20 ನ್ನ ಕೂಡಿಸುವಾ.

4,8,20 ರ ಲ.ಸಾ.ಅ = 40

1/4 = 10/40

1/8 = 5/40

1/20 = 2/40

1/4+1/8+1/20 = 10/40+5/40+2/40 = (10+5+2)/40 = 17/40

ಬೀಜೋಕ್ತಿಗಳ ಮ.ಸಾ.ಅ ಮತ್ತು ಲ.ಸಾ.ಅಗಳನ್ನು ಕಂಡುಹಿಡಿಯಲು ಕೂಡಾ ನಾವು ಮೇಲಿನ ಕ್ರಮವನ್ನೇ ಅನುಸರಿಸುತ್ತೇವೆ. ಈಗ ಸಂಖ್ಯೆಗಳ ಮ.ಸಾ.ಅ ಕಂಡುಹಿಡಿಯುವ ಕ್ರಮವನ್ನು ಪುನರಾವರ್ತಿಸುವಾ

ಹಂತ

ವಿಧಾನ

1

ಎಲ್ಲಾ ಸಂಖ್ಯೆಗಳನ್ನು ಪಟ್ಟಿಮಾಡಿ.

2

ಎಡಭಾಗದಲ್ಲಿ ಎಲ್ಲ ಸಂಖ್ಯೆಗಳ ಸಾಮಾನ್ಯ ವಿಭಾಜಕವನ್ನು ಬರೆಯಿರಿ.

3

2ನೇ ಸಾಲಿನಲ್ಲಿ ಭಾಗಲಬ್ಧಗಳನ್ನು ಬರೆಯಿರಿ.

4

2ನೇ ಸಾಲಿನಲ್ಲಿ ಪಡೆದ ಸಂಖ್ಯೆಗಳ ಕನಿಷ್ಠ ಸಾಮಾನ್ಯ ಭಾಜಕವನ್ನು ಎಡಬದಿಯಲ್ಲಿ ಬರೆಯಿರಿ.

5

ಎಲ್ಲಾ ಪದಗಳಿಗೂ ಸಾಮಾನ್ಯ ಅಪವರ್ತನಗಳು ಸಿಗುವವರೆಗೂ ಈ ಕ್ರಿಯೆಯನ್ನು ಮುಂದುವರಿಸಿ.

 

ಸಾಮಾನ್ಯ ಭಾಜಕಗಳ ಗುಣಲಬ್ಧವೇ ದತ್ತ ಸಂಖ್ಯೆಗಳ ಮ.ಸಾ.ಅ.

ಉದಾ: 16,24,20 ರ ಮ.ಸಾ.ಅ ಕಂಡುಹಿಡಿಯಿರಿ.

2 | 16,24,20

2 |  8,12,10

4, 6, 5

4, 6, 5 ಮೂರು ಸಂಖ್ಯೆಗಳಿಗೆ ಇನ್ನು ಸಾಮಾನ್ಯ ಭಾಜಕ ಇಲ್ಲ. ಆದ್ದರಿಂದ ಭಾಗಾಕಾರವನ್ನು ಇಲ್ಲಿಗೇ ನಿಲ್ಲಿಸಿ.

16,24,20 ಇವುಗಳ ಮ.ಸಾ.ಅ = (2*2)  = 4

ಲ.ಸಾ.ಅ ಕಂಡು ಹಿಡಿಯುವುದು

ಹಂತ

ವಿಧಾನ

1

ಎಲ್ಲಾ ಸಂಖ್ಯೆಗಳನ್ನು ಪಟ್ಟಿಮಾಡಿ.

2

ಎಡಭಾಗದಲ್ಲಿ ಎಲ್ಲ ಸಂಖ್ಯೆಗಳ ಸಾಮಾನ್ಯ ವಿಭಾಜಕವನ್ನು ಬರೆಯಿರಿ.

3

2ನೇ ಸಾಲಿನಲ್ಲಿ ಭಾಗಲಬ್ಧಗಳನ್ನು ಬರೆಯಿರಿ.

4

2ನೇ ಸಾಲಿನಲ್ಲಿ ಪಡೆದ ಸಂಖ್ಯೆಗಳ ಕನಿಷ್ಟ ಸಾಮಾನ್ಯ ಭಾಜಕವನ್ನ ಎಡಬದಿಯಲ್ಲಿ ಬರೆಯಿರಿ.

5

ಯಾವುದೇ ಎರಡು ಪದಗಳಿಗೆ ಸಾಮಾನ್ಯ ಅಪವರ್ತನಗಳು ಇಲ್ಲದೇ ಇರುವಾಗ ಈ ಕ್ರಿಯೆಯನ್ನು ನಿಲ್ಲಿಸಿ.

ಸಾಮಾನ್ಯ ಭಾಜಕಗಳ ಮತ್ತು ಉಳಿದ ಸಂಖ್ಯೆಗಳ ಗುಣಲಬ್ಧವೇ ಲ.ಸಾ.ಅ.

ಉದಾ: 16,24,20 ಇವುಗಳ ಲ.ಸಾ.ಅ

2 | 16,24,20

2 |  8,12,10

2 |  4,6,5

|  2,3,5

ದತ್ತ ಸಂಖ್ಯೆಗಳ ಲ.ಸಾ.ಅ (2*2*2)*(2*3*5) = 240

ಗಮನಿಸಿ : ಯಾವುದೇ 2 ಸಂಖ್ಯೆಗಳ ಮ.ಸಾ.ಅ * ಲ.ಸಾ.ಅ = ಆ ಸಂಖ್ಯೆಗಳ ಗುಣಲಬ್ಧ..

ಈ ನಿಯಮವನ್ನು ಬೀಜಾಕ್ಷರ ಪದಗಳಿಗೂ ಉಪಯೋಗಿಸಬಹುದು. ಹೀಗಾಗಿ 2ಪದಗಳ ಗುಣಲಬ್ಧ ಮತ್ತು ಅವುಗಳ ಮ.ಸಾ.ಅ ಅಥವಾ ಲ.ಸಾ.ಅ ನಮಗೆ ತಿಳಿದಿದ್ದರೆ, ಕ್ರಮವಾಗಿ ಲ.ಸಾ.ಅ ಅಥವಾ ಮ.ಸಾ.ಅ ಗಳನ್ನು ನಾವುಕಂಡುಹಿಡಿಯಬಹುದು.

ಸಮಸ್ಯೆ 1 : 16a4b3x3, 24b2m3n4y, 20a2b3nx3 ಇವುಗಳ ಮ.ಸಾ.ಅ ಕಂಡುಹಿಡಿಯಿರಿ.

ಪರಿಹಾರ:

ದತ್ತ ಬೀಜೋಕ್ತಿಗಳ ಸಂಖ್ಯಾ ಸಹಗುಣಕಗಳ (16,24,20) ಮ.ಸಾ.ಅ = 4

ಚರಾಕ್ಷರಗಳ ಭಾಗ :  a4b3x3, b2m3n4y, a2b3nx3 ಇವುಗಳಲ್ಲಿ b ಯು ಸಾಮಾನ್ಯ ಅಪವರ್ತನ.

4b | 16a4b3x3, 24b2m3n4y, 20a2b3nx3 (ಎಲ್ಲಾ ಪದಗಳಿಗೆ 4b ಯು ಸಾಮಾನ್ಯ ಪದವಾಗಿರುವುದರಿಂದ, 4b ನಿಂದ ಭಾಗಿಸುವಾ.

b | 4a4b2x3, 6bm3n4y, 5a2b2nx3 (b ಯು  ಎಲ್ಲಾ ಪದಗಳಿಗೆ ಸಾಮಾನ್ಯ ಪದ)

|4a4bx3, 6m3n4y, 5a2bnx3

ಇನ್ನು ಎಲ್ಲವುದಕ್ಕೂ ಸಾಮಾನ್ಯ ಅಪವರ್ತನಗಳು ಇಲ್ಲ. ಆದ್ದರಿಂದ ಭಾಗಾಕಾರ ಇಲ್ಲಿಗೇ ನಿಲ್ಲಿಸಿ.

ದತ್ತ ಪದಗಳ ಮ.ಸಾ.ಅ = 4b*b= 4b2

ಬೀಜೋಕ್ತಿಗಳ ಸಂಕಲನ, ವ್ಯವಕಲನದಲ್ಲಿ ಸಾಮಾನ್ಯ ಅಪವರ್ತನಗಳನ್ನು ಪ್ರತ್ಯೇಕಿಸಿ, ಸುಲಭರೂಪಕ್ಕೆ ತರಲು ಮ.ಸಾ.ಅ ಸಹಾಯಕ

ಉದಾ: 16a4b3x3+24b2m3n4y- 20a2b3nx3

16a4b3x3+24b2m3n4y- 20a2b3nx3

=4b2(4a4bx3+6m3n4y- 5a2bnx3)

ಸಮಸ್ಯೆ 2 : 6x2y3, 8x3y2, 12x4y3, 10x3y4 – ಇವುಗಳ ಮ.ಸಾ.ಅ ಮತ್ತು ಲ.ಸ.ಅ ಕಂಡುಹಿಡಿ.

ಪರಿಹಾರ:

1)      ಮ.ಸ.ಅ ಕಂಡುಹಿಡಿಯುವುದು:

ಸಂಖ್ಯಾ ಸಹಗುಣಕಗಳ ಮ.ಸಾ.ಅ = 2

ಉಳಿದ ಭಾಗಗಳ ಕನಿಷ್ಟ ಭಾಜಕ = x

2x | 6x2y3, 8x3y2, 12x4y3, 10x3y4 (2x  ಎಲ್ಲಾ ಪದಗಳಿಗೆ ಸಾಮಾನ್ಯ ಪದ )

x | 3xy3, 4x2y2, 6x3y3, 5x2y4

y |3y3,   4xy2,   6x2y3, 5xy4

y |3y2,   4xy,    6x2y2, 5xy3

3y,   4x,     6x2y,   5xy2

ಎಲ್ಲಾ ಪದಗಳಿಗೆ ಸಾಮಾನ್ಯ ಪದ ಇಲ್ಲದೇ ಇರುವುದರಿಂದ ಭಾಗಾಕಾರವನ್ನು ಇಲ್ಲಿಗೇ ನಿಲ್ಲಿಸಿ.

ದತ್ತ ಪದಗಳ ಮ.ಸಾ.ಅ = 2x*x*y*y = 2x2y2

ಮ.ಸ.ಅ ದ ಉಪಯೋಗ

ಸಂಕ್ಷೇಪಿಸಿ: 6x2y3+8x3y2-12x4y3+10x3y4

6x2y3+8x3y2-12x4y3+10x3y4

= 2x2y2(3y+4x-6x2y+5xy2)

ಲ.ಸ.ಅ ಕಂಡುಹಿಡಿಯುವುದು:

2x | 6x2y3, 8x3y2, 12x4y3, 10x3y4 (2x ಎಲ್ಲಾ ಪದಗಳಿಗೆ ಸಾಮಾನ್ಯ ಪದ)

x | 3xy3, 4x2y2, 6x3y3, 5x2y4

y |3y3,   4xy2,   6x2y3, 5xy4

y |3y2,   4xy,    6x2y2, 5xy3

Y |3y,     4x,    6x2y , 5xy2

x | 3,      4x     6x2,     5xy

2 | 3,      4      6x       5y

3 | 3,      2      3x       5y

1,     2 x 5y

ಯಾವುದೇ ಎರಡು ಪದಗಳಿಗೆ ಸಾಮಾನ್ಯ ಪದ ಇಲ್ಲದೇ ಇರುವುದರಿಂದ ಭಾಗಾಕಾರವನ್ನು ಇಲ್ಲಿಗೇ ನಿಲ್ಲಿಸಿ.

ದತ್ತ ಪದಗಳ ಲ.ಸಾ.ಅ =( 2x*x*y*Y)*(Y*x*2*3*2*x*5y) =2x2y2* 60x2y2 = 120x4y4

ಲ. ಸ.ಉಪಯೋಗ:

ಸಂಕ್ಷೇಪಿಸಿ:: (1/6x2y3)+(1/8x3y2)-(1/12x4y3 )+(1/10x3y4)  

ಗಮನಿಸಿ:

(1/6x2y3)  = (20x2y/120x4y4)

(1/8x3y2)  = (15xy2/120x4y4)

(1/12x4y3) = (10y/120x4y4)

(1/10x3y4) = (12x/120x4y4)

(1/6x2y3)+(1/8x3y2)-(1/12x4y3 )+(1/10x3y4)

= (20x2y+15xy2-10y+12x)÷(120x4y4)

ಮೂಲ : ಫ್ರೀ ಗಣಿತ

ತ್ರಿಪದೋಕ್ತಿಗಳನ್ನು ಅಪವರ್ತಿಸುವುದು

ಬೀಜಗಣಿತದ ಸಮಸ್ಯೆಗಳನ್ನು ಪರಿಹರಿಸಲು ಬೀಜೋಕ್ತಿಗಳನ್ನು ಸುಲಭರೂಪಕ್ಕೆ ತರುವುದು ಬಹಳ ಅಗತ್ಯ. 5-(3a2-2a)( 6-3a2+2a) = (3a+1)(a-1) (3a-5)(a+1)  ಎಂದು ನಿಮಗೆ ಗೊತ್ತೇ?    a=1, -1 ಎಂಬ ಬೆಲೆಗಳಿಗೆ ಇದುಸರಿಯಿದೆಯೇ ಎಂದು ಪರೀಕ್ಷಿಸಿ.ಹಾಗಿದ್ದಲ್ಲಿ a ನ ಎಲ್ಲಾ ಬೆಲೆಗೆ ಇದು ಸರಿ ಹೊಂದುತ್ತದೆ ಎಂದು ಸಾಧಿಸುವುದು ಹೇಗೆ? ( ಸಮಸ್ಯೆ 6 ನ್ನು ನೋಡಿ) ಬೀಜೋಕ್ತಿಗಳನ್ನು ಎರಡು ಅಥವಾ ಹೆಚ್ಚು ಪದಗಳ (ಅಪವರ್ತನಗಳ)ಗುಣಲಬ್ಧವಾಗಿಬರೆಯುವ  ಕ್ರಮವನ್ನು ಅಪವರ್ತಿಸುವಿಕೆ ಎನ್ನುವರು.ಬೀಜೋಕ್ತಿಗಳನ್ನು ಸುಲಭರೂಪಕ್ಕೆ ತರಲು ಅಪವರ್ತಿಸುವಿಕೆ ಅಗತ್ಯ.

ಬೀಜೋಕ್ತಿಗಳ ಮ. ಸಾ. ಅ ವನ್ನು ಹೊರಗೆ ತೆಗೆದು ಸುಲಭರೂಪಕ್ಕೆ ತರಬಹುದು. ಉದಾ:

4x2y, 8x3 ಮತ್ತು 12xy  ಗಳ ಮ.ಸಾ.ಅ 4x

4x2y+8x3+12xy = 4x (xy+2x2+3y)

ಎಲ್ಲಾ ಸಂದರ್ಭಗಳಲ್ಲಿ ಸುಲಭ ರೂಪದಲ್ಲಿ ತರಲು ಸಾಧ್ಯವಾಗದೇ ಇರಬಹುದು ಉದಾ:  4x2+5y (ಏಕೆ ಎಂದು ಯೋಚಿಸಿ)

x2+mx +c  ರೂಪದ ತ್ರಿಪದೋಕ್ತಿಯನ್ನು ಅಪವರ್ತಿಸುವುದು ಹೇಗೆ?

ಉದಾ: x2+x(a+b)+ab - ಈ ಬೀಜೋಕ್ತಿಯನ್ನು ತೆಗೆದುಕೊಳ್ಳುವಾ.

x2+x(a+b)+ab

= (x2+xa)+(xb+ab) ( ಪದಗಳ ಪುನರ್ಜೋಡಣೆ)

= x(x+a)+b(x+a) ( x2 ಮತ್ತು xa ನ  ಸಾಮಾನ್ಯ ಪದ x, ಮತ್ತು xb ಮತ್ತು ab ನ  ಸಾಮಾನ್ಯ ಪದ b )

= (x+a)(x+b)

ಆದ್ದರಿಂದ  x+a ಮತ್ತು x+b ಗಳು x2+x(a+b)+ab ಈ ಬೀಜೋಕ್ತಿಯ ಅಪವರ್ತನಗಳು.

ಅರ್ಥಾತ್ x2+x(a+b)+ab ಯನ್ನು x+a ಮತ್ತು x+b ಎಂಬ ಪದಗಳ ಗುಣಲಬ್ಧವಾಗಿ ಬರೆಯಬಹುದು

ಉದಾ:

x2+5x+6

=x2+3x+2x+6

=x(x+3)+2(x+3)

=(x+3)*(x+2)

x+3 ಮತ್ತು x+2 ಇವುಗಳು x2+5x+6 ರ ಅಪವರ್ತನಗಳು.

ಇವು x+a ಮತ್ತು x+b ರೂಪದಲ್ಲಿವೆ.

ಈ x+a ಮತ್ತು x+b ಎಂಬ ಅಪವರ್ತನಗಳು ಹೇಗಿವೆ?

a+b= 5 , ab=6 ರೂಪದಲ್ಲಿವೆ.

ಪರಿಶೀಲನೆಯಿಂದ, a=3 ಮತ್ತು  b=2 ಬೆಲೆಗಳು a+b=5 ಮತ್ತು ab=6 ಎಂಬ ನಿಯಮಕ್ಕೆ ಬದ್ಧವಾಗಿವೆ.

ಆದ್ದರಿಂದಲೇ 5x ನ್ನು 3x+2x ಎಂದು ವಿಭಜಿಸಿದ್ದು.

ಬೇರೆ ಯಾವುದೇ ರೀತಿಯಲ್ಲಿ 5x ನ್ನು ವಿಭಾಗಿಸಲಾಗುವುದಿಲ್ಲ.

ಆದರೆ ಎಲ್ಲಾ ತ್ರಿಪದೋಕ್ತಿಗಳನ್ನು ಈ ರೀತಿ ಅಪವರ್ತಿಸಲು ಸಾಧ್ಯವಿಲ್ಲ. ಅಂಥ ಬೀಜೋಕ್ತಿಗಳ ಬಗ್ಗೆ ಮುಂದೆ ತಿಳಿಯುವಾ

x2+5x+6 ಬೀಜೋಕ್ತಿಯು x2+mx +c  ರೂಪದಲ್ಲಿದೆ m = 5 and c=6.

ಸಮಸ್ಯೆ 1: ಅಪವರ್ತಿಸಿ x2+27x+176

ಪರಿಹಾರ:

ಈಗ ನಾವು a+b=27 ab=176 ಆಗುವಂತೆ a ಮತ್ತು b ಗಳ ಬೆಲೆ ಕಂಡುಹಿಡಿಯಬೇಕು.

176 ರ ಅಪವರ್ತನಗಳು: (2, 88), (4, 44), (8, 22), (16, 11).

176 ರ ಋಣ ಅಪವರ್ತನಗಳನ್ನು ಬಿಟ್ಟಿದ್ದೇವೆ. ಏಕೆಂದರೆ ಅವುಗಳ ಮೊತ್ತ ಧನಸಂಖ್ಯೆಯಾಗಲು ಸಾಧ್ಯವಿಲ್ಲ.

ಮೇಲಿನ ಗುಂಪುಗಳಲ್ಲಿ (16, 11)  ನಮಗೆ ಬೇಕಾದ a ಮತ್ತು b ಗಳ ಸಂಬಂಧಕ್ಕೆ  ಅನುಸಾರವಾಗಿದೆ.

ಇಲ್ಲಿ a= 16 ಮತ್ತು b=11

x2+27x+176 = x2+16x+11x+ 176

=x(x+16) +11(x+16)

=(x+16) (x+11)

x2+27x+176 ರ ಅಪವರ್ತನಗಳು: (x+16) ಮತ್ತು (x+11)

ತಾಳೆ:

(x+16)(x+11) ಇದು (x+a)*(x+b) ರೂಪದಲ್ಲಿದೆ a=16 , b=11

(x+16)*(x+11) = x2+ x(16+11)+ 16*11

= x2+27x+176  ದತ್ತ ಬೀಜೋಕ್ತಿ.

ಸಮಸ್ಯೆ 2 : ಅಪವರ್ತಿಸಿ  x2-6x-135

ಪರಿಹಾರ:

a+b= -6 , ab= -135  ಆಗುವಂತೆ a ಮತ್ತು b ಗಳನ್ನು ಕಂಡುಹಿಡಿಯಬೇಕು.

-135 ರ ಅಪವರ್ತನಗಳು: (3,-45), (-3, +45), (5,-27), (-5, +27), (9,-15), (-9, +15)

ಈ ಜೋಡಿಗಳಲ್ಲಿ, 9-15 = -6 , 9*-15 = -135. ಈ ಜೋಡಿ ನಮಗೆ ಬೇಕಾದ a ಮತ್ತು b ಗಳ ಸಂಬಂಧಕ್ಕೆ  ಅನುಸಾರವಾಗಿದೆ.

a= 9 , b= -15

x2-15x+9x -135

=x(x-15)+9(x-15)

=(x-15)(x+9)

x2-6x-135 ರ ಅಪವರ್ತನಗಳು:

(x-15) ಮತ್ತು (x+9)

ತಾಳೆ:

(x-15)(x+9) ಇದು (x+a)*(x+b) ರೂಪದಲ್ಲಿದೆ. a=-15, b=9

(x-15)*(x+9) = x2+ x(-15+9)+ (-15*9)= x2-6x-135 - ದತ್ತ ಬೀಜೋಕ್ತಿ.

ಸಮಸ್ಯೆ 3: ಅಪವರ್ತಿಸಿ, m2+4m-96

ಪರಿಹಾರ:

ಈಗ a+b= 4 ,ab= -96 ಆಗುವಂತೆ a ಮತ್ತು b ಗಳನ್ನು ಕಂಡುಹಿಡಿಯಬೇಕು.

(-96) ರ ಅಪವರ್ತನಗಳು: (2,-48), (-2, 48), (3,-32), (-3, +32), (4,-24), (-4, +24), (6,-16), (-6,16), (8,-12), (-8,12)

ಇವುಗಳಲ್ಲಿ - 8+12 = 4 , -8*12 = -96. ಈ ಜೋಡಿ ನಮಗೆ ಬೇಕಾದ a ಮತ್ತು b ಗಳ ಸಂಬಂಧಕ್ಕೆ  ಅನುಸಾರವಾಗಿದೆ.

a= -8 , b=12

m2-8m+12m -96

=m(m-8)+12(m-8)

=(m-8)(m+12)

m2+4m-96 ರ ಅಪವರ್ತನಗಳು: (m-8) ಮತ್ತು  (m+12)

ತಾಳೆ:

(m-8)(m+12) ಇದು (m+a)*(m+b) ರೂಪದಲ್ಲಿದ್ದು

a=-8, b=12

(m-8)*(m+12) = m2+ m(-8+12)+ -8*12

= m2+4m-96 - ದತ್ತ ಬೀಜೋಕ್ತಿ

ಈಗ, px2+mx +c ರೂಪದ ಬೀಜೋಕ್ತಿಗಳನ್ನು ಅಪವರ್ತಿಸುವಾ.ಇಲ್ಲಿ x2, ದ ಸಹಗುಣಕ 1 ರ ಬದಲಾಗಿ p.

ನಾವಿಲ್ಲಿ a+b=m ಮತ್ತು ab=pc ಆಗುವಂತೆ a ಮತ್ತು b ಗಳನ್ನು ಕಂಡುಹಿಡಿಯಬೇಕು.

ಸಮಸ್ಯೆ 3: ಮೂರು ಅನುಕ್ರಮ ಸಮ ಸಂಖ್ಯೆಗಳ ಮೊತ್ತ 252. ಆದರೆ ಆ ಸಂಖ್ಯೆಗಳಾವುವು : ಅಪವರ್ತಿಸಿ 24x2-65x+21

ಪರಿಹಾರ:

ಈಗ ನಾವು a+b= -65 ಮತ್ತು ab= 24*21 =504 ಆಗುವಂತೆ a ಮತ್ತು b ಗಳನ್ನು ಕಂಡುಹಿಡಿಯಬೇಕು.

(24*21) ರ ಅಪವರ್ತನಗಳ ಜೊತೆಗಳು:(2,252), (-2,-252), (3, 138 ), (-3,-138), (4,126), (-4,-126),  (6,83),

(-6,-83), (8,63), (-8,-63), (9,56), (-9,-56), (12,42), (-12,-42)

ಇವುಗಳಲ್ಲಿ, (-9-56) = -65 , -9*(-56)  = 504=24*21 ಈ ಜೋಡಿ ನಮಗೆ ಬೇಕಾದ a ಮತ್ತು b ಗಳ ಸಂಬಂಧಕ್ಕೆ  ಅನುಸಾರವಾಗಿದೆ.

a= -9 , b= -56

24x2-65x+21

=24x2-9x -56x+21 ( -65x ನ್ನು  -9x-56x ಎಂದು ಬರೆದಿದೆ.)

=3x(8x-3) -7(8x-3) {(24x2 ಮತ್ತು , 9x. ಗಳ ಮ.ಸಾ.ಅ 3x

-56x ಮತ್ತು  21 ಗಳ ಮ.ಸಾ.ಅ -7)}

= (8x-3)(3x-7) ( 8x-3 ಸಾಮಾನ್ಯ ಪದ)

24x2-65x+21 ರ ಅಪವರ್ತನಗಳು: (8x-3) ಮತ್ತು (3x-7 )

ತಾಳೆ:

(8x-3)(3x-7)

=8x(3x-7)-3(3x-7) (ಪ್ರತೀ ಪದವನ್ನು ಗುಣಿಸಿದಾಗ)

=24x2-56x -9x+21 (ಸುಲಭೀಕರಿಸಿದಾಗ)

=24x2-65x+21 – ದತ್ತ ಬೀಜೋಕ್ತಿ.

ಸಮಸ್ಯೆ 5: ಅಪವರ್ತಿಸಿ 6p2+11pq -10q2

ಪರಿಹಾರ:

ಈಗ, a+b= 11 , ab= 6*(-10) =-60 ಆಗುವಂತೆ a ಮತ್ತು b ಗಳನ್ನು ಕಂಡುಹಿಡಿಯಬೇಕು.

-60 ರ ಅಪವರ್ತನಗಳ ಜೊತೆಗಳು: (2,-30), (-2,30),(3, -20 ),(-3,20) (4,-15), (-4,15), (5,-12),(-5,12),(6,-10),

(-6,10)

ಇವುಗಳಲ್ಲಿ,- 4+15 = 11 , -4*15  = -60  a=15, b=-4. ಈ ಜೋಡಿ ನಮಗೆ ಬೇಕಾದ a ಮತ್ತು b ಗಳ ಸಂಬಂಧಕ್ಕೆ  ಅನುಸಾರವಾಗಿದೆ.

6p2+11pq -10q2

=6p2+15pq -4pq-10q2( 11pq = 15pq-4pq)

=3p(2p+5q) -2q(2p+5q)

=(2p+5q)(3p-2q)

6p2+11pq -10q2 ರ ಅಪವರ್ತನಗಳು: 2p+5q ಮತ್ತು 3p-2q

ತಾಳೆ:

(2p+5q)(3p-2q)

=2p(3p-2q)+5q(3p-2q) (ಪ್ರತೀ ಪದವನ್ನು ಗುಣಿಸಿದಾಗ)

=6p2-4pq +15qp-10q2 (ಸುಲಭೀಕರಿಸಿದಾಗ)

= 6p2+11pq -10q2 - ದತ್ತ ಬೀಜೋಕ್ತಿ.

ಸಮಸ್ಯೆ 6: ಅಪವರ್ತಿಸಿ,  5-(3a2-2a) (6-3a2+2a)

ಪರಿಹಾರ:

ಇಲ್ಲಿ x =3a2-2a ಎಂದು ತೆಗೆದುಕೊಳ್ಳುವಾ.

ಆದ್ದರಿಂದ 5-x( 6-x) ವನ್ನು ಅಪವರ್ತಿಸಬೇಕು.

5-x( 6-x)

= 5 -6x + x2

= x2 -6x +5 = x2 -5x -x+5

= x(x-5)-1(x-5)

= (x-1)(x-5)

x ನ ಬೆಲೆಯನ್ನು ಆದೇಶಿಸಿದಾಗ,

5-(3a2-2a)( 6-3a2+2a)

= (3a2-2a -1) (3a2-2a-5)

ಆದರೆ 3a2-2a -1 = 3a2-3a+a -1 = 3a(a-1)+1(a-1) = (3a+1)(a-1)

3a2-2a-5 = 3a2+3a -5a-5 = 3a(a-1)-5(a+1) = (3a-5)(a+1)

5-(3a2-2a)( 6-3a2+2a) = (3a+1)(a-1) (3a-5)(a+1)

ತಾಳೆ:

  • ಪ್ರತೀ ಪದವನ್ನು ಪ್ರತೀ ಪದದೊಂದಿಗೆ ಗುಣಿಸಿರಿ.
  • a=2 ಎಂಬ ಬೆಲೆಗೆ ಸರಿಯಿದೆಯೇ ಎಂದು ಪರೀಕ್ಷಿಸಿ,(5 -8*-2) = 21 = (7*1*1*3)

ರೇಖಾತ್ಮಕ ಸಮೀಕರಣಗಳು

  • ಮೂರು ಅನುಕ್ರಮ ಸಮ ಸಂಖ್ಯೆಗಳ ಮೊತ್ತ 252. ಆದರೆ ಆ ಸಂಖ್ಯೆಗಳಾವುವು? (ಅವು 80,82,84 ?  70,72,74 ?)
  • ಒಂದು ಆಯತದ ಉದ್ದವು ಅಗಲಕ್ಕಿಂತ 4 ಸೆಂ.ಮೀ ಹೆಚ್ಚಿದೆ. ಸುತ್ತಳತೆಯು ಅಗಲಕ್ಕಿಂತ 11ಸೆಂ.ಮೀ. ಹೆಚ್ಚಿದ್ದಲ್ಲಿ ಆಯತದ ಉದ್ದ ಮತ್ತು ಅಗಲಗಳನ್ನು ಕಂಡುಹಿಡಿಯಿರಿ.(ಉದ್ದ 6, ಅಗಲ 2) ?   (ಉದ್ದ 7, ಅಗಲ 3 ? )
  • ಒಬ್ಬ ಯಾತ್ರಿಕನು ತನ್ನ ಹಣದ ಅರ್ಧ ಭಾಗವನ್ನು ಪ್ರಯಾಗದಲ್ಲಿಯೂ, ಉಳಿದುದರ 2/9 ಭಾಗವನ್ನು ಕಾಶಿಯಲ್ಲಿಯೂ, ಉಳಿದುದರ 1/4 ಭಾಗವನ್ನು ತೆರಿಗೆಗಳಿಗೂ, ಇನ್ನುಳಿದುದರ 6/10 ಭಾಗವನ್ನು ಗಯೆಯಲ್ಲಿಯೂ ಖರ್ಚುಮಾಡಿದನಂತರ ಉಳಿದ 63 ನಿಷ್ಕಗಳನ್ನು(ಹಣದ ಅಳತೆ) ಮನೆಗೆ ತಂದರೆ, ಯಾತ್ರೆಗೆ ತೆಗೆದು ಕೊಂಡು ಹೋದ ಹಣ ಎಷ್ಟು?(ಲೀಲಾವತಿ ಶ್ಲೋಕ 55)

ಇಂತಹ ಸಮಸ್ಯೆಗಳನ್ನು ಬಿಡಿಸುವುದನ್ನು ಇಲ್ಲಿ ಕಲಿಯುತ್ತೇವೆ.

ವ್ಯಾಖ್ಯೆ:ಎರಡು ಬೀಜೋಕ್ತಿಗಳ ಸಮಾನತೆಯನ್ನು ಸೂಚಿಸುವ ಹೇಳಿಕೆಯನ್ನು ‘ಸಮೀಕರಣ’ (Equations) ಎನ್ನುತ್ತೇವೆ. ಸಮೀಕರಣದಲ್ಲಿ ಬರುವ ಒಂದು ಅಥವಾ ಒಂದಕ್ಕಿಂತ ಹೆಚ್ಚು ಅವ್ಯಕ್ತ ಪದಗಳ ರಾಶಿಯನ್ನು ‘ಚರಾಕ್ಷರ’ಗಳೆನ್ನುವರು.

ಉದಾ:   x+2 =5

ಸಮೀಕರಣದ ಎಡಭಾಗವನ್ನು (LHS) ಎಂತಲೂ ಬಲಭಾಗವನ್ನು (RHS) ಎಂತಲೂ ಹೇಳುತ್ತೇವೆ.

ಗಮನಿಸಿ:

6=6  ಇದು ಸರಿತಾನೆ?  ======è  (1)

ಇಲ್ಲಿ ಎಡಭಾಗ (LHS) ದಲ್ಲಿ 6 ಇದೆ. ಬಲಭಾಗದಲ್ಲೂ 6 ಇದೆ. ಇವೆರಡೂ ಪರಸ್ಪರ ಸಮ.

ಈಗ 2 ನ್ನು ಸಮೀಕರಣ (1)ರ ಎರಡೂ ಬದಿಗಳಿಗೆ ಕೂಡಿಸುವಾ.

ಎಡಭಾಗ (LHS) =6+2=8 , ಬಲಭಾಗ (RHS) = 6+2 =8

ಈಗಲೂ ಕೂಡಾ ಎರಡೂ ಭಾಗಗಳು ಪರಸ್ಪರ ಸಮ.

ಈಗ ಸಮೀಕರಣ (1) ಎರಡೂ ಬದಿಗಳಿಂದ 3 ನ್ನ ಕಳೆಯುವಾ.

ಎಡಭಾಗ = 6-3 =3 , ಬಲಭಾಗ = 6-3 =3

ಈಗಲೂ ಕೂಡಾ ಎರಡೂ ಭಾಗಗಳು ಸಮ.

ಈಗ ಎರಡೂ ಬದಿಗಳಿಗೆ 6 ರಿಂದ ಗುಣಿಸಿ

ಎಡಭಾಗ = 6*6=36 , ಬಲಭಾಗ = 6*6 =36

ಈಗಲೂ ಎಡಭಾಗ = ಬಲಭಾಗ.

ಸಮೀಕರಣ (1)ರ ಎರಡೂ ಬದಿಗಳನ್ನು 3 ರಿಂದ ಭಾಗಿಸಿ.

ಎಡಭಾಗ = 6/3=2 , ಬಲಭಾಗ = 6/3=2

ಎಡಭಾಗ = ಬಲಭಾಗ.

ಸಮಾನತೆಯ ಗುಣಗಳು(ಸ್ವಯಂ ಸಿದ್ಧಗಳು) (Properties of Equality):(Axioms)

  • ಒಂದೇ ಪರಿಮಾಣವನ್ನು ಸಮೀಕರಣದ ಎರಡೂ ಬದಿಗಳಿಗೆ ಕೂಡಿಸಿದರೆ, ಸಮಾನತೆ ಬದಲಾಗುವುದಿಲ್ಲ.
  • ಒಂದೇ ಪರಿಮಾಣವನ್ನು ಸಮೀಕರಣದ ಎರಡೂ ಬದಿಗಳಿಗೆ ಕಳೆದರೆ, ಸಮಾನತೆ ಬದಲಾಗುವುದಿಲ್ಲ.
  • ಒಂದೇ ಪರಿಮಾಣದಿಂದ ಸಮೀಕರಣದ ಎರಡೂ ಬದಿಗಳಿಗೆ ಗುಣಿಸಿದರೆ, ಸಮಾನತೆ ಬದಲಾಗುವುದಿಲ್ಲ.
  • ಒಂದೇ ಪರಿಮಾಣದಿಂದ ಸಮೀಕರಣದ ಎರಡೂ ಬದಿಗಳಿಗೆ ಭಾಗಿಸಿದರೆ, ಸಮಾನತೆ ಬದಲಾಗುವುದಿಲ್ಲ

LHS=RHS ಇರುವ ಯಾವುದೇ ಸಮೀಕರಣದಲ್ಲಿ ಮೇಲಿನ ಯಾವುದಾದರೂ ಕ್ರಿಯೆಯನ್ನು ನಡೆಸಿದರೆ,ಫಲಿತಾಂಶವೂ LHS=RHS ಆಗಿರುತ್ತದೆ.

ವ್ಯಾಖ್ಯೆ:ಏಕ ಪರಿಮಾಣಾತ್ಮಕವಿರುವ ಬಹುಪದಗಳಾಗಲೀ, ಮೊದಲನೇ ಘಾತವಿರುವ ಚರಾಕ್ಷರಗಳನ್ನಾಗಲೀ ಹೊಂದಿರುವ ಸಮೀಕರಣಗಳೇ ರೇಖಾತ್ಮಕ ಸಮೀಕರಣಗಳು. (‘linear equation’)

ಉದಾ:   x+2 =5, 3*(a-5) =6, ½ x -4/5 = 3x+7.

ಆದರೆ x2-4 =0 ಇದು ರೇಖಾತ್ಮಕ ಸಮೀಕರಣವಲ್ಲ (ಏಕೆಂದರೆ x ನ ಘಾತಾಂಕ 2)

ಉದಾಹರಣೆ1:

x-3 = 1 ಈ ಹೇಳಿಕೆಯನ್ನು ಗಮನಿಸಿ. ಇಲ್ಲಿ x ಒಂದು ಚರಾಕ್ಷರ.

ಈ ಹೇಳಿಕೆಯನ್ನ ಹೀಗೂ ಹೇಳಬಹುದು: “xನ ಬೆಲೆಯನ್ನು ಕಂಡು ಹಿಡಿಯಿರಿ- ಹೇಗೆಂದರೆ ಅದರಲ್ಲಿ 3 ನ್ನ ಕಳೆದಾಗ ಫಲಿತಾಂಶ 1 ಆಗಬಹುದು.”

ಈಗ x-3 =1 ಹೇಳಿಕೆಯಲ್ಲಿನ x ಗೆ ಬೇರೆಬೇರೆ ಬೆಲೆಗಳನ್ನು ಆದೇಶಿಸುವಾ.

1. x = 1 ಆಗಲು ಸಾಧ್ಯವೆ? ಇಲ್ಲ. ಏಕೆಂದರೆ 1-3 =-2

2. x = 2 ಆಗಲು ಸಾಧ್ಯವೆ? ಇಲ್ಲ. ಏಕೆಂದರೆ 2-3 =-1

3. x =5 ಆಗಲು ಸಾಧ್ಯವೆ? ಇಲ್ಲ. ಏಕೆಂದರೆ 5-3 =2

4. x =4 ಆಗಲು ಸಾಧ್ಯವೆ? ಹೌದು 4-3=1.

ಈ ರೀತಿಯಲ್ಲಿ xನ ಬೆಲೆ ಕಂಡುಹಿಡಿಯಲು ತುಂಬಾ ಸಮಯಬೇಕು.

ಆದರೆ ಗಣಿತ ಶಾಸ್ತ್ರದಲ್ಲಿ ಇದಕ್ಕೆ ಸುಲಭ ವಿಧಾನವಿದೆ.

ದತ್ತ ಹೇಳಿಕೆಯ ಎರಡೂಬದಿಗೆ  3ನ್ನೇ ಕೂಡಿಸುವಾ.

x-3+3= 1+3

x+0 = 4.

x= 4

ಇಲ್ಲಿ ನಾವೀಗ ಒಂದೇ ಪರಿಮಾಣ(=3)ವನ್ನು ಎರಡೂ ಬದಿಗಳಿಗೆ ಕೂಡಿಸಿದ್ದೇವೆ.

ಕೂಡಿಸಲು 3ನ್ನೇ ಯಾಕೆ ತೆಗೆದು ಕೊಂಡಿದ್ದೇವೆ?

ನಮಗೆ ಎಡಭಾಗದಲ್ಲಿ x ಬಿಟ್ಟು ಉಳಿದ ಯಾವ ಸಂಖ್ಯೆಯೂ ಬೇಡ. ಅದನ್ನು ತೆಗೆಯಲಿಕ್ಕಾಗಿ  -3 ನ್ನು ತೆಗೆಯಲು 3 ನ್ನ ಕೂಡಿಸಬೇಕಾಯಿತು

ಉದಾಹರಣೆ 2: 6x+4 = 3x+10 ಆದರೆ x ನ ಬೆಲೆ ಕಂಡುಹಿಡಿಯಿರಿ.

ಇಲ್ಲಿ: 6x+4

ಬಲಭಾಗ: 3x+10

ಹಂತ 1:

3x ನ್ನ ಎರಡೂ ಬದಿಗಳಿಂದ ಕಳೆಯಿರಿ.(ಯಾಕೆಂದರೆ ಬಲಭಾಗದಲ್ಲಿರುವ ಚರಾಕ್ಷರವನ್ನು ತೆಗೆಯಬೇಕು.)

ಬಲಭಾಗ = 3x+10-3x= 10

ಎಡಭಾಗ= 6x+4-3x = 3x+4

2 ನೇ ಸ್ವಯಂಸಿದ್ಧದಿಂದ, ಬಲಭಾಗ= ಎಡಭಾಗ.

ಹಂತ 2:

ಈಗ ಎಡಭಾಗದಲ್ಲಿರುವ 4 ನ್ನ ತೆಗೆಯಬೇಕು.ಆದ್ದರಿಂದ ಎರಡೂಬದಿಗಳಿಂದ 4ನ್ನ ಕಳೆಯಿರಿ

ಎಡಭಾಗ= 3x+4-4=3x

ಬಲಭಾಗ = 10-4 = 6

2 ನೇ ಸ್ವಯಂಸಿದ್ಧದಿಂದ, ಬಲಭಾಗ= ಎಡಭಾಗ.

ಹಂತ 3

ಎಡಭಾಗದ x ನ ಸಹಗುಣಕ 3ರಿಂದ ಎರಡೂ ಬದಿಗಳನ್ನ ಭಾಗಿಸಿ.

ಎಡಭಾಗ= 3x/3 =x

ಬಲಭಾಗ = 6/3 =2

4 ನೇ ಸ್ವಯಂಸಿದ್ಧದಿಂದ, ಬಲಭಾಗ= ಎಡಭಾಗ.

x=2

ಈಗ ಮೊದಲೆರಡು ಹಂತಗಳಲ್ಲಿ ನಾವೇನು ಮಾಡಿದ್ದೇವೆ?

ಮೊದಲು ಎರಡೂ ಬದಿಗಳಿಂದ 3xನ್ನ ಕಳೆದು, ನಂತರ ಸ್ಧಿರಾಂಕ 4ನ್ನ ಕಳೆದಿದ್ದೇವೆ.

ಇದರ ಅರ್ಥ: 3xನ್ನ ಮತ್ತು 4ರ ಸಂಕಲನದ ವಿಲೋಮ (-3x ಮತ್ತು-4) ನ್ನ ಎರಡೂ ಬದಿಗಳಿಗೆ ಕೂಡಿಸಿದ್ದು.

ಅಥವಾ 3x ನ ಚಿಹ್ನೆ ಬದಲಾವಣೆ ಮಾಡಿ, ಇನ್ನೊಂದು ಬದಿಗೆ ಹಾಕಿದ್ದೇವೆ.

ಅದೇರೀತಿ 4 ರ ಚಿಹ್ನೆ ಬದಲಾಯಿಸಿ ಇನ್ನೊಂದು ಬದಿಯಲ್ಲಿ ಬರೆದಿದ್ದೇವೆ.

ಈಗ ಹಂತಗಳನ್ನು ಕ್ರೋಢೀಕರಿಸುವಾ:

ಹಂತ

ಹೇಳಿಕೆ

ವಿವರಣೆ

1

6x+4= 3x+10

ದತ್ತ ಸಮೀಕರಣ

2

6x+4-3x =10

i.e. 3x+4 =10

ಬಲಭಾಗದಿಂದ ಎಡಭಾಗಕ್ಕೆ 3x  ಚಿಹ್ನೆ ಬದಲಾಯಿಸಿಕೊಂಡು ಹೋಗಿದೆ..

3

3x= 10-4

i.e. 3x =16

4 ಎಡಭಾಗದಿಂದ ಬಲಭಾಗಕ್ಕೆ ಚಿಹ್ನೆ ಬದಲಾಯಿಸಿಕೊಂಡು ಹೋಗಿದೆ.

4

x=2

ಸುಲಭರೂಪಕ್ಕೆ ತಂದಿದೆ(ಎರಡೂ ಬದಿಯನ್ನು 3 ರಿಂದ ಭಾಗಿಸಿದೆ)

 

ತಾಳೆ

ಸಮೀಕರಣ (1) ರಲ್ಲಿ x ನ ಬದಲಾಗಿ 2 ನ್ನ ಆದೇಶಿಸಿ.

ಎಡಭಾಗ= 6*2+4 = 16

ಬಲಭಾಗ= 3*2+10 =16

ಬಲಭಾಗ= ಎಡಭಾಗ.=16 ; x=2 ಇದು ಸರಿಯಾದ ಉತ್ತರ.

ವ್ಯಾಖ್ಯೆ

ಯಾವ ಚರಾಕ್ಷರದ ಬೆಲೆಯನ್ನು ಸಮೀಕರಣದಲ್ಲಿ ಆದೇಶಿಸಿದಾಗ, ಎರಡೂ ಕಡೆ (ಎಡಭಾಗ ಮತ್ತು ಬಲಭಾಗ) ಸಮವಾಗುವುದೋ, ಆ ಅವ್ಯಕ್ತ ಪದದ ಬೆಲೆಯನ್ನು ಕಂಡು ಹಿಡಿಯುವುದನ್ನು ‘ಸಮೀಕರಣದ ಪರಿಹಾರ (’‘solution’)ಕಂಡು ಹಿಡಿಯುವುದು ಎನ್ನುತ್ತೇವೆ. ಇದನ್ನೇ ‘ಸಮೀಕರಣ ಬಿಡಿಸುವುದು’ ಎಂತಲೂ ಕರೆಯುತ್ತೇವೆ.

ಮೇಲಿನ ಉದಾಹರಣೆಯಲ್ಲಿ x =2 - ಇದು ಸಮೀಕರಣದ ಪರಿಹಾರ.ಈ ಮೇಲಿನ ಸಮೀಕರಣಕ್ಕೆ x=1  ಪರಿಹಾರವಲ್ಲ.ಏಕೆಂದರೆ 1ನ್ನು x ಸ್ಥಾನದಲ್ಲಿ ಆದೇಶಿಸಿದಾಗ LHS = 10  ,RHS=13  ಆಗುತ್ತದೆ. ಹೀಗಾಗಿ LHS

ಸಮಸ್ಯೆ 1 : ಈ ಸಮೀಕರಣ ಬಿಡಿಸಿ (x ನ ಬೆಲೆ ಕಂಡು ಹಿಡಿ): 5*(2x-3) = 2*(3x-7)

ಪರಿಹಾರ:

ಹಂತ

ಹೇಳಿಕೆ

ವಿವರಣೆ

1

5*(2x-3) = 2*(3x-7)

ಪರಿಹಾರ

2

10x -15 = 6x -14

ದತ್ತ ಸಮೀಕರಣ

3

10x -6x= -14+15

ಸುಲಭರೂಪಕ್ಕೆ ತಂದಿದೆ.

4

4x = 1:i,e x = 1/4

6x ಮತ್ತು 15 ಇವುಗಳನ್ನು ಚಿಹ್ನೆ ಬದಲಾಯಿಸಿ ಇನ್ನೊಂದು ಬದಿಗೆ ವರ್ಗಾಯಿಸಿದೆ.

ತಾಳೆ

1/4 ನ್ನ x ದತ್ತ ಸಮೀಕರಣದಲ್ಲಿ ಆದೇಶಿಸಿ.

ಎಡಭಾಗ= 5*(2*1/4 -3)  =  5*(1/2-3) = 5*(-5/2) = -25/2

ಬಲಭಾಗ= 2*(3*1/4-7)  = 2*(3/4-7) = 2*(-25/4)  = -25/2

ಎಡಭಾಗ= ಬಲಭಾಗ= -25/2,  x =1/4 ಇದು ಸರಿಯಾದ ಪರಿಹಾರ.

ಸಮಸ್ಯೆ 2 : x ನ ಬೆಲೆ ಕಂಡುಹಿಡಿ .

= 1/2

ಪರಿಹಾರ:

ಸಮೀಕರಣದ ಎರಡೂ ಬದಿಗಳನ್ನು ವರ್ಗಮಾಡಿ.

(x-2)/(x+1) = 1/4

ಅಡ್ಡ ಗುಣಕಾರ ಮಾಡಿ.

4(x-2) = x+1

i.e. 4x – 8 = x+1 (ಸುಲಭರೂಪಕ್ಕೆ ತಂದಿದೆ.)

i.e. 4x –x = 1+8  ( ವರ್ಗಾಯಿಸಿದೆ.)

i.e.  3x = 9

x=3

ತಾಳೆ:

xನ ಬೆಲೆ 3ನ್ನ ದತ್ತ ಸಮೀಕರಣದಲ್ಲಿ ಆದೇಶಿಸಿ. = 1/2

ಸಮಸ್ಯೆ 3: ಮೂರು ಅನುಕ್ರಮ ಸಮ ಸಂಖ್ಯೆಗಳ ಮೊತ್ತ 252. ಆದರೆ ಆ ಸಂಖ್ಯೆಗಳಾವುವು?

ಪರಿಹಾರ:

ಹಂತ 1 : ಮೊದಲ ಸಮ ಸಂಖ್ಯೆ x ಆಗಿರಲಿ

ಹಂತ 2 : ಮುಂದಿನ ಅನುಕ್ರಮ ಸಮ ಸಂಖ್ಯೆಗಳು =  (x+2) ಮತ್ತು (x+4).

ಹಂತ 3 : x+(x+2)+(x+4) = 3x+6 = 252. (ದತ್ತ)

3x+6 = 252

3x = 252-6=246

x = 82

ಮೂರು ಅನುಕ್ರಮ ಸಮ ಸಂಖ್ಯೆಗಳು     82(=x),

84(=x+2)

86(=x+4)

ತಾಳೆ:

82, 84, 86 ಈ ಮೂರು ಅನುಕ್ರಮ ಸಮಸಂಖ್ಯೆಗಳನ್ನು ಕೂಡಿಸಿ. ಮೊತ್ತ = 252

ಸಮಸ್ಯೆ 4: ಒಂದು ಹಡಗು ಪ್ರವಾಹದ ದಿಕ್ಕಿನಲ್ಲಿ ಒಂದು ಬಂದರಿನಿಂದ ಇನ್ನೊಂದು ಬಂದರಿಗೆ 9 ಗಂಟೆಗಳಲ್ಲಿ ತಲಪುವುದು. ಪ್ರವಾಹದ ವಿರುದ್ಧ ದಿಕ್ಕಿನಲ್ಲಿ ಅದೇ ದೂರವನ್ನು ಪ್ರಯಾಣ ಮಾಡಲು 10 ಗಂಟೆಗಳನ್ನು ತೆಗೆದುಕೊಳ್ಳುವುದು. ಪ್ರವಾಹದ ವೇಗ ಗಂಟೆಗೆ 1ಕಿ.ಮಿ. ಇದ್ದರೆ, ಎರಡು  ಬಂದರುಗಳಿಗಿರುವ ದೂರವನ್ನು ಕಂಡು ಹಿಡಿಯಿರಿ.

ಪರಿಹಾರ:

1) ನಿಶ್ಚಲ ನೀರಿನಲ್ಲಿ ಹಡಗಿನ ವೇಗ ಗಂಟೆಗೆ x ಕಿ.ಮೀ. ಆಗಿರಲಿ.

ಪ್ರವಾಹದ ದಿಕ್ಕಿನಲ್ಲಿ ಹಡಗಿನ ವೇಗ = (x+1) ಕಿ.ಮೀ./ಗಂ.

ಪ್ರವಾಹದ ವಿರುದ್ಧವಾಗಿ ಹಡಗಿನ ವೇಗ = (x-1) ಕಿ.ಮೀ./ಗಂ.

ಪ್ರವಾಹದ ನೇರದಲ್ಲಿ 9 ಗಂಟೆಯಲ್ಲಿ ಚಲಿಸಿದ ದೂರ =9(x+1).

ಪ್ರವಾಹದ ವಿರುದ್ಧವಾಗಿ 10 ಗಂಟೆಯಲ್ಲಿ ಚಲಿಸಿದ ದೂರ = 10(x-1)

2) ಈ ಎರಡೂ ದೂರಗಳು ಪರಸ್ಪರ ಸಮ

9(x+1) = 10(x-1)

3) 9x+9 =10x-10 :9+10 =10x-9x(ವರ್ಗಾಯಿಸಿದೆ.)  19=  x =19 ನ್ನು, 9(x+1) ರಲ್ಲಿ ಆದೇಶಿಸಿ. ಪ್ರವಾಹದ ನೇರದಲ್ಲಿ ಹಡಗು ಚಲಿಸಿದ ದೂರ =9(x+1) = 9*(19+1)=9*20 = 180 ಕಿ.ಮೀ.

= 180 ಕಿ.ಮೀ.

 

ತಾಳೆ:

ಪ್ರವಾಹದ ದಿಕ್ಕಿನಲ್ಲಿ ಹಡಗಿನ ವೇಗ= (ದೂರ/ಸಮಯ)- ಪ್ರವಾಹದ ವೇಗ= (180/9)-1   = (20-1) ಕಿ.ಮೀ./ಗಂ=19 ಕಿ.ಮೀ./ಗಂ

ಪ್ರವಾಹದ ವಿರುದ್ಧದಲ್ಲಿ ಹಡಗಿನ ವೇಗ= (ದೂರ/ಸಮಯ)+ ಪ್ರವಾಹದ ವೇಗ= (180/10) +1 = (18+1) ಕಿ.ಮೀ./ಗಂ=19 ಕಿ.ಮೀ./ಗಂ

ಈ ಮೇಲಿನಿಂದ ನಮ್ಮ ಪರಿಹಾರ ಸರಿಯಾಗಿದೆ ಎಂದು ತಿಳಿಯಬಹುದು.

ಸಮಸ್ಯೆ 5: ಒಂದು ಸಂಖ್ಯೆಯಲ್ಲಿ ಎರಡು ಅಂಕಿಗಳಿವೆ. ದಶಕಸ್ಥಾನದ ಅಂಕೆಯು ಏಕಸ್ಥಾನದ ಅಂಕದ ಎರಡರಷ್ಟಿದೆ. ಸಂಖ್ಯೆಯ ಅಂಕಗಳನ್ನು ಅದಲು ಬದಲು ಮಾಡಿದಾಗ ಬರುವ ಸಂಖ್ಯೆಯು ಮೂಲ ಸಂಖ್ಯೆಗಿಂತ 27 ಕಡಿಮೆ ಇದ್ದರೆ ಮೂಲ ಸಂಖ್ಯೆಯನ್ನು ಕಂಡುಹಿಡಿಯಿರಿ.

ಪರಿಹಾರ:

1 ಸಂಖ್ಯೆಯ ಏಕ ಸ್ಥಾನದ ಅಂಕೆ x ಆಗಿರಲಿ. ದಶಕಸ್ಥಾನದ ಅಂಕೆಯು ಏಕಸ್ಥಾನದ ಅಂಕೆಯ 2 ರಷ್ಟಿರುವುದರಿಂದ, ದಶಕ ಸ್ಥಾನದ ಅಂಕೆ =2x.

ಸಂಖ್ಯೆಯಲ್ಲಿ 2 ಅಂಕಿಗಳಿರುವುದರಿಂದ ಅದರ ಬೆಲೆ  =10*ದಶಕ ಸ್ಥಾನದ ಅಂಕೆ+ ಏಕ ಸ್ಥಾನದ ಅಂಕೆ = 10*2x+x. =20x+x = 21 x -------------è (1)

ಅಂಕಿಗಳನ್ನು ಅದಲು ಬದಲು ಮಾಡಿದಾಗ, ದಶಕ ಸ್ಥಾನದಲ್ಲಿ x ಬರುತ್ತದೆ, 2x ಏಕಸ್ಥಾನದಲ್ಲಿ ಬರುತ್ತದೆ.

ಆಗ ಸಂಖ್ಯೆಯ ಬೆಲೆ = 10* ದಶಕ ಸ್ಥಾನದ ಅಂಕೆ + ಏಕಸ್ಥಾನದ ಅಂಕೆ.

= 10*x+2x =10x+2x = 12 x    --------------è ತಿರುಗಿಸಿದ ಸಂಖ್ಯೆ.

ದತ್ತಾಂಶದಂತೆ, ಹೊಸ ತಿರುಗಿಸಿದ ಸಂಖ್ಯೆ = ಹಳೇ ಸಂಖ್ಯೆ – 27  10x+2x  = 20x+x-27   12x  = 21x-27

27 = 21x-12x(12x ಮತ್ತು 27ರ ಸ್ಥಾನ ಬದಲಿಸಿದಾಗ)

27 =9x  x = 3. ಮೂಲ ಸಂಖ್ಯೆಯ ಬಿಡಿಸ್ಥಾನದ ಅಂಕೆ = 3, ಮೂಲ ಸಂಖ್ಯೆಯ ದಶಕಸ್ಥಾನದ ಅಂಕೆ = 3*2 = 6 ಮೂಲ ಸಂಖ್ಯೆ = 63

 

 

 

 

 

 

ತಾಳೆ:

ಮೂಲ ಸಂಖ್ಯೆ = 63

ಅಂಕೆಗಳನ್ನು ಅದಲು ಬದಲು ಮಾಡಿದಾಗ ಬರುವ ಸಂಖ್ಯೆ = 36(36 = 63 -27.)

ಇದು ದತ್ತಾಂಶಕ್ಕೆ ಸರಿಯಾಗಿದೆ.

ಸಮಸ್ಯೆ 6: ಒಂದು ಆಯತದ ಉದ್ದವು ಅಗಲಕ್ಕಿಂತ 4 ಸೆಂ.ಮೀ ಹೆಚ್ಚಿದೆ. ಸುತ್ತಳತೆಯು ಅಗಲಕ್ಕಿಂತ 11ಸೆಂ.ಮೀ. ಹೆಚ್ಚಿದ್ದಲ್ಲಿ ಆಯತದ ಉದ್ದ ಮತ್ತು ಅಗಲಗಳನ್ನು ಕಂಡುಹಿಡಿಯಿರಿ.

ಪರಿಹಾರ:

ಹಂತ 1: ಆಯತದ ಅಗಲ x ಆಗಿರಲಿ. ಉದ್ದ = x+4.

ಆಯತದ ಸುತ್ತಳತೆ P = 2* ಉದ್ದ + 2* ಅಗಲ

= 2(x+4)+2x

= 2x+8+2x

P = 4x +8        --------------è (1)

ಆದರೆ ದತ್ತಾಂಶದಂತೆ, ಸುತ್ತಳತೆಯು ಅಗಲಕ್ಕಿಂತ 11ಸೆಂ.ಮೀ ಹೆಚ್ಚಿದೆ.

P =  x+11    --------------è (2)

ಹಂತ 2 :

ಸಮೀಕರಣ (1) ಮತ್ತು (2) ರಿಂದ,

2x+8+2x = x+11

4x+8 = x+11

4x-x = 11-8(x ಮತ್ತು 8ರ ಸ್ಥಾನ ಬದಲಿಸಿದೆ.)

3x = 3

x = 1.

ಆಯತದ ಅಗಲ =11ಸೆಂ.ಮೀ., ಉದ್ದ = x+4 = 5 ಸೆಂ.ಮೀ.

ತಾಳೆ:

ಆಯತದ ಸುತ್ತಳತೆ P = 2* ಉದ್ದ + 2* ಅಗಲ

= 2*5+2*1

= 10+2

= 12 ಸೆಂ.ಮೀ

= 11 ಸೆಂ.ಮೀ +1 ಸೆಂ.ಮೀ

= 11 ಸೆಂ.ಮೀ + ಅಗಲ

ಸಮಸ್ಯೆ 7: ಒಂದು ಭಿನ್ನರಾಶಿಯಲ್ಲಿ ಅಂಶದ ಎರಡರಷ್ಟು ಛೇದಕ್ಕಿಂತ 2 ಹೆಚ್ಚಿದೆ.3ನ್ನ ಅಂಕ ಮತ್ತು ಛೇದ ಎರಡಕ್ಕೂ ಸೇರಿಸಿದಾಗ ಬರುವ ಭಿನ್ನರಾಶಿಯು 2/3 ಆದರೆ, ಮೂಲ ಭಿನ್ನರಾಶಿಯನ್ನು ಕಂಡುಹಿಡಿಯಿರಿ.

ಪರಿಹಾರ:

ಹಂತ 1: ಭಿನ್ನರಾಶಿಯ  ಅಂಶವು x ಆಗಿರಲಿ.

ಅಂಶದ ಎರಡರಷ್ಟು = ಛೇದಕ್ಕಿಂತ 2 ಹೆಚ್ಚು.

2x = ಛೇದ +2.

ಛೇದ= 2x-2

ಮೂಲ ಭಿನ್ನರಾಶಿ = x/2x-2

3 ನ್ನ ಛೇದಕ್ಕೆ ಕೂಡಿಸಿದಾಗ , ಹೊಸ ಛೇದ = (2x-2) +3=2x+1

3 ನ್ನ ಅಂಶಕ್ಕೆ ಕೂಡಿಸಿದಾಗ ಹೊಸ ಅಂಶ = x+3

ಹೊಸ ಭಿನ್ನರಾಶಿ = (x+3)/ (2x+1)

ದತ್ತಾಂಶದಂತೆ ಹೊಸ ಭಿನ್ನರಾಶಿ 2/3

ಹಂತ 2 : 2/3 = (x+3)/(2x+1)  --------------è(1)

ಅಡ್ಡ ಗುಣಕಾರ ಮಾಡಿದಾಗ,

2*(2x+1) =3 (x+3)               --------------è(2)

4x+2 =3x+9 (3x ಮತ್ತು 2 ನ್ನ ಪರಸ್ಪರ ವರ್ಗಾಯಿಸಿದೆ.)

4x-3x= 9-2

x= 7

ಮೂಲ ಭಿನ್ನರಾಶಿಯ ಛೇದ = 2x-2 =14-2=12

ಮೂಲ ಭಿನ್ನರಾಶಿ = 7/12

ತಾಳೆ:

ಮೂಲ ಭಿನ್ನರಾಶಿ = 7/12

3ನ್ನ ಅಂಕ ಮತ್ತು ಛೇದಗಳಿಗೆ ಕೂಡಿಸಿದಾಗ = 10/15 = 2/3 - ದತ್ತ

ಸಮಸ್ಯೆ 8: ದೊಡ್ಡಭಾಗವನ್ನು ಚಿಕ್ಕಭಾಗದಿಂದ ಭಾಗಿಸಿದಾಗ, ಭಾಗಲಬ್ಧ 2 ಮತ್ತು ಶೇಷ 5 ಆಗಿರುವಂತೆ, 32 ನ್ನ ಎರಡು ಭಾಗ ಮಾಡಿ..

ಪರಿಹಾರ:

ದೊಡ್ಡಭಾಗ = ಆಗಿರಲಿ ಚಿಕ್ಕಭಾಗ = 32-x

ಭಾಜ್ಯ= ಭಾಗಲಬ್ಧ*ಭಾಜಕ ± ಶೇಷ..

x/(32-x) = 2+ 5(±ಶೇಷ.)ಒಂದು ಘನಾಕೃತಿಯ ಉದ್ದ.(5x+2 ಸೆಂ.ಮೀ., ಅಗಲ (5x-1) ಸೆಂ.ಮೀ., ಎತ್ತರ (5x+3) ಸೆಂ.ಮೀ.ಇದ್ದರೆ ಘನಫಲವನ್ನುಕಂಡುಹಿಡಿಯಿರಿ.

ಅಭ್ಯಾಸ: ಈ ಸಮೀಕರಣವನ್ನು ಬಿಡಿಸಿ(x =23 ,ಇನ್ನೊಂದು ಸಂಖ್ಯೆ = 9)

 

ಸಮಸ್ಯೆ 9: x2-9/( x2+5) =  -5/9  ಆಗಿರುವ ಸಮೀಕರಣದಲ್ಲಿ x ನ ಧನಾತ್ಮಕ ಬೆಲೆಯನ್ನು ಕಂಡುಹಿಡಿಯಿರಿ.

ಪರಿಹಾರ:

ದತ್ತಾಂಶದಂತೆ x2-9/( x2+5) =  -5/9

ಅಡ್ಡ ಗುಣಾಕಾರ ಮಾಡಿದಾಗ 9(x2-9) = -5(x2+5)

ಸಂಕ್ಷೇಪಿಸಿದಾಗ 9x2-81 = -5x2 -25

ಸ್ಥಾನ ಬದಲಾಯಿಸಿದಾಗ 14x2 = 56

x2 = 4

x =  +2 ಅಥವಾ -2

ತಾಳೆ:

ದತ್ತ ಸಮೀಕರಣದಲ್ಲಿ x=2 ನ್ನು ಆದೇಶಿಸಿದಾಗ, LHS = -5/9 = RHS, ಆದ್ದರಿಂದ ಇದು ಸರಿಯಾದ ಪರಿಹಾರ.

ಸಮಸ್ಯೆ 10: ದುಂಬಿಗಳ ಸಮೂಹದಲ್ಲಿ  1/5 ರ ಭಾಗ ಕದಂಬ ವೃಕ್ಷಕ್ಕೂ, 1/3 ನೇ ಭಾಗ ಶಿಲೀಂಧ್ರಕ್ಕೂ ಹೊರಟವು. ಅವೆರಡರ ವ್ಯತ್ಯಾಸದ ಮೂರರಷ್ಟು ಕುಟಜ ವೃಕ್ಷಕ್ಕೂ ಹೋದ ಮೇಲೆ ಉಳಿದ ಒಂದೇ ಒಂದು ದುಂಬಿಯು ಕೇತಕಮಾಲತೀ ಪುಷ್ಪದ ಸುಗಂಧದಿಂದ ಆಕರ್ಷಿಸಲ್ಪಟ್ಟು ಆಕಾಶದಲ್ಲಿ ಹಾರಾಡುತ್ತಿತ್ತು. ಹಾಗಾದರೆ ಎಲೈ ಲೀಲಾವತಿ, ದುಂಬಿಗಳ ಒಟ್ಟು ಸಂಖ್ಯೆಎಷ್ಟು? (ಲೀಲಾವತಿ ಶ್ಲೋಕ 56)

ಪರಿಹಾರ:

ಒಟ್ಟು ಸಂಖ್ಯೆ x ಇರಲಿ.

ಹಂತ

ಎಲ್ಲಿಗೆ

ಎಷ್ಟು

1

ಕದಂಬಕ್ಕೆ

(x/5)

2

ಶಿಲೀಂಧ್ರಕ್ಕೆ

(x/3)

3

ಮೇಲಿನವುಗಳ ವ್ಯತ್ಯಾಸ

(x/3) – (x/5) = (2x/15)

4

ಕುಟಜಕ್ಕೆ

3*(2x/15)=(2x/15)

5

ಉಳಿದದ್ದು

1

 

x- {(x/5)+(x/3)+(2x/5) =1

{15x-(3x+5x+6x)/15} =1

x=15

ತಾಳೆ:

ಕದಂಬಕ್ಕೆ 3, ಶಿಲೀಂಧ್ರಕ್ಕೆ 5, ಕುಟಜಕ್ಕೆ 6 { =3*(5-3)} ಉಳಿದದ್ದು 1

ಸಮಸ್ಯೆ 11:ಒಬ್ಬ ಯಾತ್ರಿಕನು ತನ್ನ ಹಣದ ಅರ್ಧ ಭಾಗವನ್ನು ಪ್ರಯಾಗದಲ್ಲಿಯೂ, ಉಳಿದುದರ 2/9 ಭಾಗವನ್ನು ಕಾಶಿಯಲ್ಲಿಯೂ, ಉಳಿದುದರ 1/4 ಭಾಗವನ್ನು ತೆರಿಗೆಗಳಿಗೂ, ಇನ್ನುಳಿದುದರ 6/10 ಭಾಗವನ್ನು ಗಯೆಯಲ್ಲಿಯೂಖರ್ಚುಮಾಡಿದ ನಂತರ ಉಳಿದ 63 ನಿಷ್ಕಗಳನ್ನು(ಹಣದ ಅಳತೆ) ಮನೆಗೆ ತಂದರೆ, ಯಾತ್ರೆಗೆ ತೆಗೆದು ಕೊಂಡು ಹೋದ ಹಣ ಎಷ್ಟು?(ಲೀಲಾವತಿ ಶ್ಲೋಕ 55)

ಪರಿಹಾರ:

ಒಟ್ಟು ಸಂಖ್ಯೆ x ಇರಲಿ.

ಹಂತ

ಎಲ್ಲಿ/ಏತಕ್ಕೆ

ಎಷ್ಟು

ನಂತರ ಉಳಿದದ್ದು

1

ಪ್ರಯಾಗ

(x/2)

x-(x/2) = (x/2)

2

ಕಾಶಿ

(2/9)*(x/2)=(x/9)

(x/2)-(x/9) = (7x/18)

3

ತೆರಿಗೆ

(1/4)*(7x/18) =(7x/72)

(7x/18) - (7x/72)= (21x/72) =(7x/24)

4

ಗಯೆ

(6/10)*(7x/24)=(7x/40)

(7x/24)- (7x/40) ={(35x-21x)/120}=(7x/60)

5

ಉಳಿದದ್ದು

63

 

 

(7x/60) =63

x=540

ತಾಳೆ:

ನೀವೇ ಮಾಡಿ

ಬೀಜೋಕ್ತಿಗಳ ಅಪವರ್ತಿಸುವಿಕೆ

ನಾವು ಈಗಾಗಲೇ ಕೆಲವು ಬೀಜೋಕ್ತಿಗಳನ್ನು ಅಪವರ್ತಿಸಲು ಕಲಿತಿದ್ದೇವೆ.

ಉದಾ:

ಸಂ.

ಬೀಜೋಕ್ತಿ

ಅಪವರ್ತನಗಳು

1

(p-q)2- 3(p-q)

(p-q){(p-q)-3}

2

2x(a-4b)+3y(a-4b)

(a-4b)(2x+3y)

3

m2(pq+r)+mn(pq+r)+ n2(pq+r)

(pq+r) (m2+mn+ n2)

 

ಪಾಠ 2.5 ರಲ್ಲಿ  px2+mx +c ರೂಪದ ಬೀಜೋಕ್ತಿಗಳನ್ನು ಅಪವರ್ತಿಸಿದ್ದೇವೆ.

ನಿತ್ಯಸಮೀಕರಣಗಳು / ಸೂತ್ರಗಳನ್ನುಪಯೋಗಿಸಿ ಅಪವರ್ತಿಸುವುದು (Factorisation using identities/formulae):

ಪಾಠ 2.3 ರಲ್ಲಿ ಕೆಳಗಿನ ಸಮೀಕರಣಗಳನ್ನು ನೋಡಿದ್ದೇವೆ.

ಕ್ರ.ಸಂ.

ಸಮೀಕರಣ

ವಿಸ್ತರಣೆ

ಅಪವರ್ತನಗಳು

1

(a+b)2

a2+b2+2ab

(a+b) ಮತ್ತು (a+b)

2

(a-b)2

a2+b2-2ab

(a-b) ಮತ್ತು (a-b)

3

(a+b)(a-b)

a2-b2

(a+b) ಮತ್ತು (a-b)

4

(x+a)*(x+b)

x2+x(a+b)+ab

(x+a) ಮತ್ತು (x+b)

 

ಸಮಸ್ಯೆ 1 : ನಿತ್ಯ ಸಮೀಕರಣವನ್ನುಪಯೋಗಿಸಿ ಅಪವರ್ತಿಸಿ 9p2+12pq +4q2

ಪರಿಹಾರ:

ದತ್ತ ಬೀಜೋಕ್ತಿಯನ್ನು 9p2 +4q2+12pq. ಎಂದು ಬರೆಯುವಾ. ಇದು a2+b2+2ab ರೂಪದಲ್ಲಿದೆ. a2= 9p2 , b2=  4q2 , 2ab=12pq

9p2 = 3p*3p =(3p)2

4q2 = 2q*2q= (2q)2

12pq = 2*3p*2q

a=3p and b=2q

ದತ್ತ ಬೀಜೋಕ್ತಿಯನ್ನು a2+b2+2ab ರೂಪದಲ್ಲಿರುವುದರಿಂದ, ಅದರ ಅಪವರ್ತನಗಳು: (a+b) ಮತ್ತು (a+b)

ದತ್ತ ಬೀಜೋಕ್ತಿಯ ಅಪವರ್ತನಗಳು: (3p+2q) ಮತ್ತು (3p+2q)

ತಾಳೆ:

(3p+2q)(3p+2q)

=3p(3p+2q)+2q(3p+2q) (ಪ್ರತೀ ಪದವನ್ನು ಗುಣಿಸಿರಿ.)

=9p2+6pq +6qp+4q2 (ಸಂಕ್ಷೇಪಿಸಿದಾಗ.)

= 9p2+12pq +4q2 - ಇದು ದತ್ತ ಬೀಜೋಕ್ತಿ

ಸಮಸ್ಯೆ 2: ಸೂಕ್ತ ಸಮೀಕರಣದ ಸಹಾಯದಿಂದ 36x2-60x +25 ಅಪವರ್ತಿಸಿ.

ಪರಿಹಾರ:

ದತ್ತ ಬೀಜೋಕ್ತಿ: 36x2 +25-60x. E°è a2= 36x2, b2=  25=52 ಮತ್ತು -2ab=-60x

(6x)2 +(5)2 -2*6x*5

ಇದು a2+b2-2ab ರೂಪದಲ್ಲಿದೆ. a=6x ,b=5.

ದತ್ತ ಬೀಜೋಕ್ತಿಯ ಅಪವರ್ತನಗಳು: (a-b) ,(a-b).

= (6x-5) ಮತ್ತು (6x-5).

ತಾಳೆ:

(6x-5) (6x-5)

=6x(6x-5)-5(6x-5) (ಪ್ರತೀ ಪದವನ್ನು ಗುಣಿಸಿರಿ.)

=36x2-30x -30x+25 (ಸಂಕ್ಷೇಪಿಸಿದಾಗ)

= 36x2-60x +25  - ದತ್ತ ಬೀಜೋಕ್ತಿ

ಸಮಸ್ಯೆ 3 : ಸೂಕ್ತ ಸಮೀಕರಣ ಉಪಯೋಗಿಸಿ ಅಪವರ್ತಿಸಿ: (x+2)2+18(x+2) +81.

ಪರಿಹಾರ:

ದತ್ತ ಬೀಜೋಕ್ತಿ ಯನ್ನು ಹೀಗೆ ಬರೆಯುವಾ: (x+2)2 +81+18(x+2).

ಇದು a2+b2+2ab ರೂಪದಲ್ಲಿದೆ. a2= (x+2)2 , b2= 81=92

2ab=18(x+2)

a=(x+2),b=9    2ab = 2(x+2)*9 =18(x+2)

ದತ್ತ ಬೀಜೋಕ್ತಿಯ ಅಪವರ್ತನಗಳು: a2+b2+2ab ರೂಪದಲ್ಲಿರುವುದರಿಂದ ಅದರ ಅಪವರ್ತನಗಳು: (a+b) ಮತ್ತು (a+b)

ದತ್ತ ಬೀಜೋಕ್ತಿಯ ಅಪವರ್ತನಗಳು:  (x+2+9) (x+2+9)

=(x+11) ಮತ್ತು (x+11)

ತಾಳೆ:

(x+11) ನ್ನ (x+11) ರಿಂದ ಗುಣಿಸಿ, ದತ್ತ ಬೀಜೋಕ್ತಿಯನ್ನು ವಿಸ್ತರಿಸಿ, ತಾಳೆನೋಡಿ.

ಸಮಸ್ಯೆ 4: ಸೂಕ್ತ ಸಮೀಕರಣ ಉಪಯೋಗಿಸಿ ಅಪವರ್ತಿಸಿ: p4/16- q2/64

ಪರಿಹಾರ:

ದತ್ತ ಬೀಜೋಕ್ತಿಯು a2-b2 ರೂಪದಲ್ಲಿದೆ.

a2= p4/16= (p2/4)2 , b2= q2/64 = (q/8)2

a=p2/4 ,b=q/8.

ದತ್ತ ಬೀಜೋಕ್ತಿಯು a2-b2 ರೂಪದಲ್ಲಿರುವುದರಿಂದ, ಅದರ ಅಪವರ್ತನಗಳು (a+b) ಮತ್ತು (a-b).

ದತ್ತ ಬೀಜೋಕ್ತಿಯ ಅಪವರ್ತನಗಳು: (p2/4+q/8) ಮತ್ತು (p2/4-q/8).

ತಾಳೆ:

(p2/4+q/8)(p2/4-q/8)

=p2/4(p2/4-q/8)+q/8(p2/4-q/8) (ಪ್ರತೀ ಪದವನ್ನು ಗುಣಿಸಿರಿ.)

=(p2/4)2-p2q/32 +qp2/32 –(q/8)2 (ಸಂಕ್ಷೇಪಿಸಿದಾಗ.)

= p4/16- q2/64  - ದತ್ತ ಬೀಜೋಕ್ತಿ

2.8.1 ಸಮಸ್ಯೆ 5: ನಿತ್ಯಸಮೀಕರಣದಿಂದ ಅಪವರ್ತಿಸಿ: 8(x+1/x)2-18(x-1/x)2

ಪರಿಹಾರ:

8 ಮತ್ತು 18 ಇವೆರಡೂ ಪೂರ್ಣವರ್ಗಗಳಲ್ಲ

ಆದರೆ 8 =2*4 , 18 =2*9.

4=22 9=33

8(x+1/x)2-18(x-1/x)22{4(x+1/x)2-9(x-1/x)2}.

ಈಗ 4(x+1/x)2-9(x-1/x)2 ಇದು a2-b2 ರೂಪದಲ್ಲಿದೆ.

a2= 4(x+1/x)2 =(2(x+1/x))2

b2=(3(x-1/x))2

ಈಗ a=2(x+1/x) , b=3(x-1/x)

ಬೀಜೋಕ್ತಿಯು a2-b2 ರೂಪದಲ್ಲಿರುವುದರಿಂದ, ಅಪವರ್ತನಗಳು (a+b) , (a-b)

ದತ್ತ ಬೀಜೋಕ್ತಿಯ ಅಪವರ್ತನಗಳು: (2(x+1/x) + 3(x-1/x)) ಮತ್ತು (2(x+1/x) - 3(x-1/x))

ಇಲ್ಲಿ 2 ಸಾಮಾನ್ಯ ಅಪವರ್ತನ.

ದತ್ತ ಬೀಜೋಕ್ತಿಯ ಅಪವರ್ತನಗಳು: 2 , (2(x+1/x) + 3(x-1/x))

(2(x+1/x) - 3(x-1/x))

ಅಭ್ಯಾಸ: ತಾಳೆ ನೋಡಿ: 2(2(x+1/x) + 3(x-1/x))(2(x+1/x) - 3(x-1/x))= 8(x+1/x)2-18(x-1/x)2

ಸಮಸ್ಯೆ 6: ಎರಡು ಸಂಖ್ಯೆಗಳ ವರ್ಗಗಳ ವ್ಯತ್ಯಾಸ 400. ಸಂಖ್ಯೆಗಳ ವ್ಯತ್ಯಾಸ 8 ಆದರೆ, ಸಂಖ್ಯೆಗಳು ಯಾವುವು? (ಲೀಲಾವತಿ: ಶ್ಲೋಕ 59)

ಸಂಖ್ಯೆಗಳು x,y ಆಗಿರಲಿ. ಆಗ

x2 -y2 =400

x-y= 8  ( x= y+8)   ------(1)

x2 -y2 = (x+y)*(x –y)  {a2-b2 =(a+b)*(a-b)}

= 8(x+y)           ( x-y =8)

400 = 8(x+y)          ( x2 -y2 =400)

(x+y) = 50             ( 8 ರಿಂದ ಭಾಗಿಸಿ)

y+8+y =50            (  (1) ರಂತೆ)

2y = 42                (ಸುಲಭೀಕರಿಸಿ)

y =21

x=  29                  (  (1) ರಂತೆ)

ಅಭ್ಯಾಸ:

29-21 =8

292-212 = ??

ಮೂರು ದ್ವಿಪದೋಕ್ತಿಗಳ ಗುಣಲಬ್ಧ

 

(x+a)*(x+b) = x2+x(a+b)+ab  - ಈಗಾಗಲೇ ನೋಡಿದ್ದೇವೆ.

ಈಗ ಮೂರು ದ್ವಿಪದೋಕ್ತಿಗಳು: (x+a)*(x+b)*(x+c) ಯ ಗುಣಲಬ್ಧ ನೋಡುವಾ.

(x+a)*(x+b)*(x+c)

= {(x+a)*(x+b)}*(x+c)

= {x2+x(a+b)+ab}*(x+c)

= x2(x+c)+x(a+b)*(x+c) + ab(x+c)    ({x2+x(a+b)+ab} ರ ಪ್ರತೀ ಪದವನ್ನು (x+c) ಯ ಪ್ರತೀಪದದೊಂದಿಗೆ ಗುಣಿಸಿದೆ.)

= x3+ x2c + x(a+b)*x+x(a+b)*c + abx+abc  ( x(a+b) ರ ಪ್ರತೀ ಪದವನ್ನು (x+c) ಯ ಪ್ರತೀಪದದೊಂದಿಗೆ ಗುಣಿಸಿದೆ.))

= x3+ x2c + x2(a+b)+x(a+b)*c + abx+abc ವಿಸ್ತರಿಸಿದಾಗ.)

= x3+ x2(c+a+b)+xac+xbc + abx+abc ವಿಸ್ತರಿಸಿ,ಸುಲಭೀಕರಿಸಿದಾಗ.)

= x3+ x2(a+b+c)+x(ac+bc+ ab)+abc ಸುಲಭೀಕರಿಸಿದಾಗ.)

= x3+ (a+b+c) x2+(ab+bc+ca)x+abc ಪುನರ್ಜೋಡಣೆ.)

ಮೇಲಿನ ಸಮೀಕರಣದಲ್ಲಿ b=a , c=a ಹಾಕುವಾ.

ಆಗ, (x+a)(x+a)(x+a) = x3+ (a+a+a) x2+(a*a+a*a+a*a)x+a*a*a

= x3+ 3ax2+3a2x+ a3

= x3+ 3ax(x+a)+ a3

ಈಗ x ನ್ನa ಯಿಂದಲೂ, a ಯನ್ನು b ಯಿಂದಲೂ (a+b)3 = a3+ 3ab(a+b)+ b3

‘b’ ಇರುವಲ್ಲಿ (–b) ಯನ್ನು ಆದೇಶಿಸಿದರೆ,

(a-b)3 = a3+ 3a*-b(a-b)+ (-b)3

= a3-3ab(a-b)-b3

ಸಮಸ್ಯೆ 1: 1.05*0.97*.98 ರ ಬೆಲೆ ಕಂಡುಹಿಡಿ

ಪರಿಹಾರ:

1.05 = 1+.05, 0.97 = 1-0.03 , 0.98 = 1-0.02.

x=1 and a=.05, b=-0.03 ಮತ್ತು c= -0.02

ದತ್ತಪದಗಳ ಗುಣಲಬ್ಧವನ್ನು (x+a)(x+b)(x+c) ರೂಪದಲ್ಲಿ ಬರೆಯಬಹುದು.

(x+a)(x+b)(x+c) = x3+ (a+b+c) x2+(ab+bc+ca)x+abc

1.05*0.97*.98

= 13+ (0.05-0.03-0.02) 12 +((0.05*-0.03) (–0.03* -0.02)(-0.02*0.05))1+ 0.05*-0.03*-0.02

= 1+ 0 12+(-0.0015+0.0006-0.0010)1+ 0.000030

= 1- 0.0019+0.00003 =0.998130

ತಾಳೆ:

ಕ್ಯಾಲ್ಕ್ಯುಲೇಟರ್ ಉಪಯೋಗಿಸಿ ತಾಳೆನೋಡಿ: 1.05*0.97*0.98 = 0.998130.

ಸಮಸ್ಯೆ 2 : ಒಂದು ಘನಾಕೃತಿಯ ಉದ್ದ.(5x+2 ಸೆಂ.ಮೀ., ಅಗಲ (5x-1) ಸೆಂ.ಮೀ., ಎತ್ತರ (5x+3) ಸೆಂ.ಮೀ.ಇದ್ದರೆ ಘನಫಲವನ್ನು ಕಂಡುಹಿಡಿಯಿರಿ.

ಪರಿಹಾರ:

ಘನಾಕೃತಿಯ ಗಾತ್ರ = ಉದ್ದ*ಅಗಲ*ಎತ್ತರ.

ದತ್ತ ಘನಾಕೃತಿಯ ಗಾತ್ರ =(5x+2)(5x-1)(5x+3) ಘ.ಸೆಂ.ಮೀ.

ಇದು (x+a)(x+b)(x+c) ರೂಪದಲ್ಲಿದೆ.

x=5x , a=2, b=-1 , c=3

ಸೂತ್ರ:

(x+a)(x+b)(x+c)= x3+ (a+b+c) x2+(ab+bc+ca)x+abc

= (5x)3+ (2-1+3) (5x)2+(-2-3+6)(5x)+ 2*-1*3,  = 125x3+ 100x2+5x-6

ತಾಳೆ:

xಗೆ ಒಂದು ಬೆಲೆ (=2) ಕೊಡುವಾ

ಆಗ,

1.      5x+2=5*2+2=12

2.      5x-1 =5*2-1=9

3.      5x+3 =5*2+3= 13

125x3+ 100x2+5x- 6 = 125*8+100*4+5*2-6

= 1000+400+10-6=1404

(5x+2)(5x-1)(5x+3)

=12*9*13 = 1404

ಘನಾಕೃತಿಯ ಘನಫಲ = ಉದ್ದ* ಅಗಲ*ಎತ್ತರ.

=12*9*13

= 1404 ಘ.ಸೆಂ.ಮೀ.

ಇದರಿಂದ (x+a)(x+b)(x+c)= x3+ (a+b+c) x2+(ab+bc+ca)x+abc ಎಂದು ತಿಳಿಯಬಹುದು,ಹಾಗೂ

1. (a+b+c) x2 x2 ನ ಸಹಗುಣಕ (a+b+c)

2. (ab+bc+ca)x ರಲ್ಲಿ x ನ ಸಹಗುಣಕ (ab+bc+ca) ಎಂದು ಗಮನಿಸಬಹುದು.

ಸಮಸ್ಯೆ 3: (3x-1)(3x-1)(3x+4) ರಲ್ಲಿ x2 ಮತ್ತು x ನ ಸಹಗುಣಕವನ್ನು ಕಂಡುಹಿಡಿಯಿರಿ.

ಪರಿಹಾರ:

ಗುಣಲಬ್ಧವು (x+a)(x+b)(x+c) ರೂಪದಲ್ಲಿದೆ. x=3x , a=-1, b=-1 , c=4

ಆದ್ದರಿಂದ ಗುಣಲಬ್ಧವನ್ನು (x+a)(x+b)(x+c) ರೂಪದಲ್ಲಿ ಬರೆಯಬಹುದು.

ಸೂತ್ರ:: (x+a)(x+b)(x+c)= x3+ (a+b+c) x2+(ab+bc+ca)x+abc

= (3x)3+(a+b+c)(3x)2 + (ab+bc+ca)(3x)+abc (x=3x ಎಂದು ಆದೇಶಿಸಿದಾಗ)

1.(a+b+c)(3x)2 ನಲ್ಲಿ x2 ನ ಸಹಗುಣಕ: (a+b+c)*9. a,b ,c ಗಳ ಬೆಲೆಗಳನ್ನು ಆದೇಶಿಸಿದಾಗ,

(a+b+c)*9

= (-1-1+4)*9

= 18

2.  (ab+bc+ca)(3x) ನಲ್ಲಿ x ನ ಸಹಗುಣಕ (ab+bc+ca)*3. a,b ,c ಗಳ ಬೆಲೆಗಳನ್ನು ಆದೇಶಿಸಿದಾಗ,

(ab+bc+ca)*3

= (1-4-4)*3

= -21

ತಾಳೆ:

(3x-1)(3x-1)(3x+4) ನ್ನು ವಿಸ್ತರಿಸಿ ಸಹಗುಣಕಗಳನ್ನು ತಾಳೆನೋಡಿ.

ನಾವು ಈ ಹಿಂದೆ ಕಲಿತ ಸೂತ್ರ:

(a+b)3 = a3+ 3ab(a+b)+ b3

(a+b)3 -3ab(a+b) = a3+ b3(ವರ್ಗಾಯಿಸಿದೆ.)

i,e a3+ b3

=(a+b)3 -3ab(a+b)

= (a+b){ (a+b)2 -3ab}

= (a+b) { a2 +b2 +2ab -3ab}((a+b)2 ನ್ನು ವಿಸ್ತರಿಸಿದಾಗ.)

= (a+b) (a2 +b2 -ab)

‘b’ ಗೆ ಬದಲಾಗಿ (–b) ಯನ್ನು ಆದೇಶಿಸಿದಾಗ,

a3+ (-b)3 = (a+-b) (a2 +(-b)2 -a*(-b))

= (a-b) (a2 +b2 +ab)

ಆದರೆ, a3+ (-b)3= a3-b3

a3-b3= (a-b) (a2 +b2 +ab)

ಸಮಸ್ಯೆ 4: ಅಪವರ್ತಿಸಿ: 0.027 p3+0.008 q3

ಪರಿಹಾರ:

0.3*0.3*0.3=0.027 , 0.2*0.2*0.2=0.008

a3+b3=(a+b) (a2+b2-ab)  ಸೂತ್ರದಲ್ಲಿ

a=0.3p , b= 0.2q

0.027 p3+0.008 q3

= (0.3p+0.2q) ((0.3p)2 +(0.2q)2 -0.3p*0.2q)

= (0.3p+0.2q) (0.09p2 +0.04q2 -0.06pq)

ತಾಳೆ:

(p ಮತ್ತು q ಗಳ ಒಂದು ಬೆಲೆಗೆ)

p=1 , q=1, ಆಗಿರಲಿ.

ಆಗ, (0.3p+0.2q) (0.09p2 +0.04q2 -0.06pq)

= 0.5*(0.09+0.04-0.06) = 0.5*0.07 = 0.035

ದತ್ತ ಬೀಜೋಕ್ತಿ: 0.027 p3+0.008 q3

=0.027+0.008 =0.035

ಎರಡೂ ವಿಧಾನಗಳಿಂದ ಫಲಿತಾಂಶ ಒಂದೇ ಇರುವುದರಿಂದ,ನಮ್ಮ ಪರಿಹಾರ ಸರಿಯಿದೆ ಎಂದು ತಿಳಿಯಬಹುದು

ಸಮಸ್ಯೆ 5: ಅಪವರ್ತಿಸಿ 125 -1/ a3b3

ಪರಿಹಾರ:

125 = 53 , 1/ a3b3=(1/ ab)3

a3-b3 ಸೂತ್ರದಲ್ಲಿ, ಇಲ್ಲಿ a=5 , b= 1/ab

a3-b3=(a-b) (a2 +b2 +ab) ಉಪಯೋಗಿಸಿ,a ಮತ್ತು b ಯ ಬೆಲೆಗಳನ್ನು ಆದೇಶಿಸಿದಾಗ,

125 -1/ a3b3

= (5 -1/ab) (52 +(1/ab)2 +5*1/ab)

= (5 -1/ab) (25 +1/a2 b2 +5/ab)

ತಾಳೆ:

(a ಮತ್ತು bಗಳ ಒಂದು ಬೆಲೆಗೆ)

a=1 ,b=2, ಆಗಿರಲಿ.

(5 -1/ab) (25 +1/a2 b2 +5/ab)

=(5-1/2)(25+1/4+5/2) =124.875(ಕ್ಯಾಲ್ಕ್ಯುಲೇಟರನ್ನು ಉಪಯೋಗಿಸಿ.)

ದತ್ತ ಬೀಜೋಕ್ತಿ: 125 -1/ a3b3

= 125-1/8= 124.875 (ಕ್ಯಾಲ್ಕ್ಯುಲೇಟರನ್ನು ಉಪಯೋಗಿಸಿ.)

ಎರಡೂ ವಿಧಾನಗಳಿಂದ ಫಲಿತಾಂಶ ಒಂದೇ ಇರುವುದರಿಂದ,ನಮ್ಮ ಪರಿಹಾರ ಸರಿಯಿದೆ ಎಂದು ತಿಳಿಯಬಹುದು.

ಕಲಿತ ಸಾರಾಂಶ

ಸಂ.

ಸೂತ್ರ

ವಿಸ್ತರಣೆ

ಅಪವರ್ತನಗಳು

1

(a+b)2

a2+b2+2ab

(a+b) ಮತ್ತು (a+b)

2

(a-b)2

a2+b2-2ab

(a-b ಮತ್ತು (a-b)

3

(a+b)(a-b)

a2-b2

(a+b) ಮತ್ತು (a-b)

4

(x+a)*(x+b)

x2+x(a+b)+ab

(x+a) ಮತ್ತು (x+b)

5

(x+a)(x+b)(x+c)

x3+ (a+b+c)x2+(ab+bc+ca)x+abc

(x+a),(x+b) ಮತ್ತು (x+c)

6

(a+b)3

a3+b3+3ab(a+b)

(a+b),(a+b) ಮತ್ತು (a+b)

7

(a-b)3

a3-b3-3ab(a-b)

(a-b),(a-b) ಮತ್ತು (a-b)

8

a3+b3

(a+b) (a2 +b2 -ab)

(a+b) ಮತ್ತು (a2 +b2 -ab)

9

a3-b3

(a-b) (a2 +b2 +ab)

(a-b) ಮತ್ತು (a2 +b2 +ab)

ಬೀಜೋಕ್ತಿಗಳ ಮ.ಸಾ.ಅ & ಲ.ಸಾ.ಅ

ಯಾವುದೇ ಬೀಜೋಕ್ತಿಗಳ ಮ.ಸಾ.ಅ ಮತ್ತು ಲ.ಸಾ.ಅ ಕಂಡುಹಿಡಿಯಲು ನಾವು ಭಾಗಾಕಾರ ಕ್ರಮವನ್ನು ಅನುಸರಿಸುವುದನ್ನು ಈಗಾಗಲೇ ಪಾಠ 2.5 ರಲ್ಲಿ ಕಲಿತಿದ್ದೇವೆ

ಸಮಸ್ಯೆ 1: (p+3)3, 2p3+54+18p(p+3), (p2+6p+9) ಇವುಗಳ ಮ.ಸಾ.ಅ ಮತ್ತು ಲ.ಸಾ.ಅ ಕಂಡುಹಿಡಿಯಿರಿ.

ಪರಿಹಾರ:

ಹಂತ 1: ಎಲ್ಲಾ ಬೀಜೋಕ್ತಿಗಳನ್ನು ಮೊದಲಿಗೆ ಅಪವರ್ತಿಸಿರಿ.

1. (p+3)3 – ಇದರ ಅಪವರ್ತನಗಳು: (p+3),(p+3) ಮತ್ತು (p+3)

2. ಈಗ 2ನೇ ಪದವನ್ನು ಅಪವರ್ತಿಸುವಾ.

2p3+54+18p(p+3)

= 2(p3+27)+18p(p+3)

= 2*(p+3)( p2+9-3p)+18p(p+3),  [(p3+27) ಇದು a3+b3 ರೂಪದಲ್ಲಿದೆ. a=p , b=3, a3+b3 =(a+b) (a2 +b2 -ab)]

=(p+3)*((2*(p2+9-3p))+18p)

= (p+3) *2*( p2+9-3p+9p)

=2(p+3)( p2+9+6p) [  (p2+9+6p ಇದು ( a2+ b2+2ab) ರೂಪದಲ್ಲಿದೆ. a=p , b=3, ( a2+ b2+2ab)= (a+b)2 ]

= 2(p+3)(p+3)2

2p3+54+18p(p+3) ಯ ಅಪವರ್ತನಗಳು: 2, (p+3),(p+3),(p+3)

3. (p2+6p+9) =(p+3)2 -- (ಮೇಲೆ ನೋಡಿದೆ.)

(p2+6p+9) ಈ ಬೀಜೋಕ್ತಿಯ ಅಪವರ್ತನಗಳು: (p+3)2

ಹಂತ 2: ಈಗ ಮ.ಸಾ.ಅ. ಮತ್ತು ಲ.ಸಾ.ಅ ನೋಡಲು ಭಾಗಾಕಾರ ಕ್ರಮವನ್ನು ಬಳಸಿ.

ದತ್ತ ಬೀಜೋಕ್ತಿಗಳನ್ನು ಹೀಗೆ ಬರೆಯಬಹುದು: ( p+3)(p+3)(p+3), 2(p+3)(p+3)(p+3), (p+3)(p+3)

ಮೇಲಿನವುಗಳ ಸಾಮಾನ್ಯ ಅಪವರ್ತನ ( p+3)ಆಗಿರುವುದರಿಂದ ( p+3)ನಿಂದಲೇ ಭಾಗಾಕಾರ ಮಾಡೋಣ

(p+3) | ( p+3)(p+3)(p+3),  2(p+3)(p+3)(p+3), (p+3)(p+3)

(p+3) | (p+3)(p+3),            2(p+3)(p+3),          (p+3)

(p+3),                     2(p+3)                            1

ಇನ್ನು ಎಲ್ಲಾವುದಕ್ಕೂಸಾಮಾನ್ಯ ಭಾಜಕಗಳು ಇಲ್ಲ. ಆದ್ದರಿಂದ ಭಾಗಾಕಾರವನ್ನು ಇಲ್ಲಿಗೇ ನಿಲ್ಲಿಸಿ.

ಆದ್ದರಿಂದ ಮ.ಸಾ.ಅ = (p+3)(p+3)= (p+3)2

ಮತ್ತು

(p+3) | ( p+3)(p+3)(p+3),  2(p+3)(p+3)(p+3), (p+3)(p+3)

(p+3) | (p+3)(p+3),            2(p+3)(p+3),          (p+3)

(p+3) | (p+3),                     2(p+3)                            1

1,                          2,                                    1

ಇನ್ನು ಎಲ್ಲಾವುದಕ್ಕೂ ಸಾಮಾನ್ಯ ಭಾಜಕಗಳು ಇಲ್ಲದುದರಿಂದ ಭಾಗಾಕಾರ ಇಲ್ಲಿಗೇ ಮುಗಿಯಿತು.

ಲ.ಸಾ.ಅ = (p+3)(p+3)(p+3)*1*2*1 = 2(p+3)3

ತಾಳೆ:

p=2 ಬೆಲೆ ಆದೇಶಿಸಿ ತಾಳೆನೋಡುವಾ

ಮ.ಸಾ.ಅ = (p+3)2 = (2+3)2 =25

ಲ.ಸಾ.ಅ = 2(p+3)3= 2(2+3)3= 2*125=250

ದತ್ತ ಬೀಜೋಕ್ತಿಗಳು: (p+3)3 , 2p3+54+18p(p+3), (p2+6p+9)

(2+3)3, (2*23+54+18*2(2+3)), (22+6*2+9)

= {125, 250,25}

ಇವುಗಳ ಮ.ಸಾ.ಅ =25 , ಲ.ಸಾ.ಅ =250 ಪರಿಹಾರ ಸರಿಯಾಗಿದೆ.

ಸಮಸ್ಯೆ 2: 10(x2-y2), 15(x2-2xy+y2),  20(x3- y3), 5(-3x +3y) ಗಳ ಮ.ಸಾ.ಅ ಮತ್ತು ಲ.ಸಾ.ಅ ಕಂಡುಹಿಡಿಯಿರಿ.

ಪರಿಹಾರ:

ಹಂತ 1: ಮೊತ್ತ ಮೊದಲಿಗೆ ದತ್ತ ಬೀಜೋಕ್ತಿಗಳನ್ನು ಅಪವರ್ತಿಸಬೇಕು.

1.      ಮೊದಲ ಬೀಜೋಕ್ತಿ: 10(x2-y2) ಇದರಲ್ಲಿ (x2-y2) ವು (a2-b2) ರೂಪದಲ್ಲಿದೆ.

ಅದರ ಅಪವರ್ತನಗಳು:  (a+b) (a-b):

10(x2-y2)=10(x+y)(x-y)

2.      ಎರಡನೇ ಬೀಜೋಕ್ತಿ: 15(x2-2xy+y2)

ಇದರಲ್ಲಿ (x2-2xy+y2) ವು (a2-2ab+b2)  ರೂಪದಲ್ಲಿದೆ. ಇದರ ಅಪವರ್ತನಗಳು (a-b) ಮತ್ತು (a-b)

15(x2-2xy+y2)= 15(x-y) (x-y)

3. ಮೂರನೇ ಬೀಜೋಕ್ತಿ: 20, (x3-y3): 20, (x-y), (x2 +y2 +xy)

4. ನಾಲ್ಕನೇ ಬೀಜೋಕ್ತಿ: 5*-3(x-y) = 5*(-3)(x-y)=-15, (x-y)

ಹಂತ 2: ಭಾಗಾಕಾರ ಕ್ರಮವನ್ನು ಬಳಸಿ.

ಇಲ್ಲಿ ಅಪವರ್ತನಗಳು 5 ಮತ್ತು (x-y) ಆಗಿರುವುದರಿಂದ ಇವೆರಡರಿಂದ ಜೊತೆಯಾಗಿ ಭಾಗಾಕಾರ ಮಾಡೋಣ.

5 (x-y) | 10(x+y) (x-y), 15(x-y) (x-y), 20(x-y)(x2 +y2 +xy), -15(x-y)

2(x+y),             3(x-y),             4(x2 +y2 +xy),        -3

 

ಸಾಮಾನ್ಯ ಅಪವರ್ತನಗಳು ಇನ್ನಿಲ್ಲ.

ಮ.ಸಾ.ಅ = 5(x-y)

ಈಗ ಲ.ಸಾ.ಅ ಕಂಡು ಹಿಡಿಯಲು ಪುನ:    5(x-y) ರಿಂದ ಭಾಗಿಸಬೇಕು.

5(x-y) | 10(x+y) (x-y), 15(x-y) (x-y), 20(x-y)(x2 +y2 +xy), -15(x-y)

2|  2(x+y),             3(x-y),             4(x2 +y2 +xy),        -3 (ಸಾಮಾನ್ಯ ಪದಗಳು ಇರುವರೆಗೂ ನಾವು ಭಾಗಾಕಾರ ಮಾಡೋಣ.)

3|   (x+y),              3(x-y),             2(x2 +y2 +xy),       -3

(x+y),                (x-y),             2(x2 +y2 +xy)         -1

ಲ.ಸಾ.ಅ =5(x-y)* 2*3*(x+y)*(x-y)*2(x2 +y2 +xy)

= 60*(x-y)(x+y)*(x-y)(x2 +y2 +xy)     ( (x-y)(x2 +y2 +xy) ವು (a-b)( (a2 +b2 +ab) ರೂಪದಲ್ಲಿದೆ ಮತ್ತು a=x and b= y)

= 60*(x2-y2)* (x3-y3)

ತಾಳೆ:

x=3 , y=2 ಬೆಲೆ ಆದೇಶಿಸಿ ತಾಳೆನೋಡುವಾ

ಮ.ಸಾ.ಅ = 5(x-y) = 5*(3-2) = 5

ಲ.ಸಾ.ಅ = 60*(x2- y2)* (x3-y3)

= 60*(9-4)*)(27-8)

=60*5*19=5700

ಈಗ ಬೀಜೋಕ್ತಿಗಳು:

10(x2-y2), 15(x2-2xy+y2) 20(x3- y3),5(-3x +3y)

10(32-22), 15(32-2*3*2+22), 20(33- 23),5(-3*3 +3*2)

= {50, 15, 380, -15}

ಈ ಪದಗಳ ಮ.ಸಾ.ಅ =5

ಲ.ಸಾ.ಅ ಕಂಡು ಹಿಡಿಯಲು ಭಾಗಾಕಾರ ಮಾಡುವಾ.

5 | 50,15,380,-15

2 | 10,3,76,-3

3 | 5,3,38,-3

|  5,1,38,-1

ಲ.ಸಾ.ಅ = 5*2*3*5*38=5700 ಪರಿಹಾರ ಕಾರ್ಯ ಸರಿಯಾಗಿದೆ.

ಸಮಸ್ಯೆ 3 : ಯಾವ a ಮತ್ತು b  ಬೆಲೆಗಳಿಗೆ ಕೆಳಗಿನ ಬೀಜೋಕ್ತಿಗಳಲ್ಲಿ

p(x) = (x2+3x+2) (x2+2x+a), q(x) = (x2+7x+12) (x2+7x+b)

(x+1)(x+3) ಅವುಗಳ  ಮ.ಸಾ.ಅ ಆಗಿರುತ್ತದೆ.

ಪರಿಹಾರ:

(x2+3x+2) = (x+1)(x+2)

(x2+7x+12) = (x+4)(x+3)

p(x) = (x+1)(x+2)(x2+2x+a)

q(x) = (x+4)(x+3) (x2+7x+b)

ದತ್ತದಂತೆ (x+1)(x+3) p(x), ನ ಮ.ಸಾ.ಅ ಆಗಿರುವುದರಿಂದ

(x2+2x+a) ರ ಅಪವರ್ತನ  (x+3) ಇರಲೇ ಬೇಕು

I.e.  x=-3 ಎಂದು  ಆದೇಶಿಸಿದಾಗ ಸಮೀಕರಣ  (x2+2x+a) =0 ಆಗಲೇ ಬೇಕು

(-3)2+2(-3)+a =0

I.e. 9-6+a =0

a =-3

ದತ್ತದಂತೆ (x+1)(x+3) ರ ಮ.ಸಾ.ಅ q(x), ಆಗಿರುವುದರಿಂದ

(x2+7x+b) ರ ಅಪವರ್ತನ (x+1)

I.e. x=-1 ಎಂದು  ಆದೇಶಿಸಿದಾಗ ಸಮೀಕರಣ (x2+7x+b) =0 ಆಗಲೇ ಬೇಕು

(-1)2+7(-1)+b =0

I.e. 1-7+b =0

b =6

ತಾಳೆ:

a ಮತ್ತು b ಯ ಬೆಲೆಗಳನ್ನು p(x) ಮತ್ತು q(x) ದಲ್ಲಿ ಆದೇಶಿಸಿದಾಗ,

p(x) = (x2+3x+2) (x2+2x-3) = (x+1) (x+2) (x+3) (x-1) {  (x2+2x-3) = (x+3)(x-1)}

q(x) =(x2+7x+12) (x2+7x+6) = (x+4) (x+3) (x+1) (x+6) {  (x2+7x+6)= (x+1)(x+6)}

p(x) ಮತ್ತು q(x) ರ ಅಪವರ್ತನಗಳನ್ನು ನೋಡಿದಾಗ p(x) ) ) ಮತ್ತು q(x) ರ ಮ.ಸಾ.ಅ (x+1) (x+3) ಆಗಿದೆ ಎಂದು ತಿಳಿಯಬಹುದು.

ಬಹುಪದಗಳ ಭಾಗಾಕಾರ

ಯಾವುದೇ ಸಂಖ್ಯೆಗೆ: ಭಾಜ್ಯ = (ಭಾಗಲಬ್ಧ*ಭಾಜಕ) + ಶೇಷ.

ಈ ಮೇಲಿನ ಸಂಬಂಧ ಬಹುಪದಗಳಿಗೂ ಅನ್ವಯಿಸುತ್ತದೆ.

ಏಕಪದವನ್ನು ಏಕಪದದಿಂದ ಭಾಗಿಸುವುದು

ಸಮಸ್ಯೆ 1: 12m3 ನ್ನು 4 m2 n ನಿಂದ ಭಾಗಿಸಿ.

ಪರಿಹಾರ:

ಹಂತ 1: 12m3 n5 / 4 m2 n =  (12/4)* (m3 n5 /m2 n)

ಹಂತ 2: 12/4 =   3,

ಹಂತ 3:

m3 n5/ m2 n = m3-2 n5-1 = m n4

12m3 n5 /4 m2 n = 3 m n4

ತಾಳೆ:

(ಭಾಗಲಬ್ಧ*ಭಾಜಕ) + ಶೇಷ = 4 m2 n*3 m n4 +0 =12 m2+1 n1+4 =12m3 n5 - ಭಾಜ್ಯ

ಸಮಸ್ಯೆ 2 : 57x2y2z2 ನ್ನು 19xyz ನಿಂದ ಭಾಗಿಸಿ.

ಹಂತ 1 :

57x2y2z2 /19xyz  = (57/19) * (x2y2z2)/xyz

ಹಂತ 2:

57/19 =3

ಹಂತ 3:

x2y2z2/xyz = x2-1y2-1z2-1 = xyz

57x2y2z2 /19xyz  = (57/19) * (x2y2z2)/xyz  =3xyz

ತಾಳೆ:

(ಭಾಗಲಬ್ಧ*ಭಾಜಕ) + ಶೇಷ = (3xyz * 19xyz) +0 = (3*19)*xyz*xyz +0=   57x1+1y1+1z1+1+0=57x2y2z2 - ಭಾಜ್ಯ

ಈ ಮೇಲಿನ ಸಮಸ್ಯೆಯಲ್ಲಿ ಗಮನಿಸಬೇಕಾದ ಅಂಶಗಳು:

3  ಎನ್ನುವುದು 57/19 ಅಂದರೆ ಏಕ ಪದಗಳ ಸಹಗುಣಕಗಳ ಭಾಗಲಬ್ಧ.

ಅದೇರೀತಿ xyz ಎಂಬುದು ಚರಾಕ್ಷರಗಳ ಭಾಗಲಬ್ಧ..

ಏಕಪದವನ್ನು ಏಕಪದದಿಂದ ಭಾಗಿಸುವಾಗ ಅನುಸರಿಸುವ ಹಂತಗಳು

ಭಾಗಲಬ್ಧವು ಎರಡು ಭಾಗಗಳನ್ನು ಹೊಂದಿದೆ - ಸಂಖ್ಯಾ ಸಹಗುಣಕ ಮತ್ತು ಚರಾಕ್ಷರಗಳು. ಇದನ್ನು ಪಡೆಯುವುದು ಹೇಗೆ?

1.      ಎರಡು ಏಕಪದಗಳ ಭಾಗಲಬ್ಧದ ಸಹಗುಣಕವು ಆ ಎರಡು ಏಕಪದಗಳ ಸಂಖ್ಯಾ ಸಹಗುಣಕಗಳ ಭಾಗಲಬ್ಧಕ್ಕೆ ಸಮ.

2.      ಎರಡು ಏಕಪದಗಳ ಭಾಗಲಬ್ಧದ ಚರಾಕ್ಷರ ಭಾಗವು ಆ ಎರಡು ಏಕಪದಗಳ ಚರಾಕ್ಷರಗಳ ಭಾಗಲಬ್ಧವೇ ಆಗಿರುತ್ತದೆ.

ಬಹುಪದವನ್ನು ಏಕಪದದಿಂದ ಭಾಗಿಸುವುದು (Division of a Polynomial by a Monomial):

ಸಮಸ್ಯೆ 1: 4023m2n2-6032m2n -8042m3 ಈ ಬೀಜೋಕ್ತಿಯನ್ನು (-2012m2) ದಿಂದ ಭಾಗಿಸಿ.

ಪರಿಹಾರ:

4023= (2x201)3= (2)3x(201)3, 6032 = (3x201)2 = (3)2x(201)2, 8042 = (4x201)2 = (4)2x(201)2

[4023m2n2-6032m2n -8042m3 n4]/(-2012m2)

=[(2)3*(201)3 m2n2-(3)2*(201)2 m2n -(4)2*(201)2m3 n4]/(-2012m2)

= -[ (2)3*(201) n2-(3)2* n -(4)2*m1 n4] = - (8*201* n2-9n -16mn4)

ತಾಳೆ:

ಭಾಜಕ* ಭಾಗಲಬ್ಧ + ಶೇಷ = (-2012m2)*[-(8*201* n2+9n +16mn4)]+0

= +(2012m2)*(8*201* n2 -2012m2*9n -2012m2*16mn4) +0

= 8*2013m2 n2 -9*2012m2+2n-16*2012m2+1n4)

= 23* 2013m2 n2 - 32 *2012m4n-42*2012 m3 n4

= (2*201)3m2n2-(3*201)2 m2n –(4*201)2 m3 n4

= 4023 m2n2 - 6032 m2n - 8042 m3 n4

= ಭಾಜ್ಯ.

ಸಮಸ್ಯೆ 2 : 2a4 b3+ 8a2 b2 ವನ್ನು 2ab ಯಿಂದ ಭಾಗಿಸಿ.

ಪರಿಹಾರ:

(2a4 b3+ 8a2 b2)/2ab = (2a4 b3/2ab) + (8a2 b2 / 2ab) = a3 b2 +4a b

ತಾಳೆ:

ಭಾಜಕ* ಭಾಗಲಬ್ಧ + ಶೇಷ = 2ab*(a3 b2 +4a b) +0= 2a4 b3+ 8a2 b2 = ಭಾಜ್ಯ

ಬಹುಪದವನ್ನು ಏಕಪದದಿಂದ ಭಾಗಿಸುವಾಗ ಅನುಸರಿಸುವ ಹಂತಗಳು

1.      ಬಹುಪದದ ಪ್ರತೀ ಪದವನ್ನು ಏಕಪದದಿಂದ ಭಾಗಿಸಿ.

2.      ಈ ರೀತಿ ಪಡೆದ ಭಾಗಲಬ್ಧಗಳನ್ನು ಒಟ್ಟಿಗೆ ಸೇರಿಸಿ.(ಸೂಕ್ತ ಚಿಹ್ನೆಯಿಂದ).

ಬಹುಪದವನ್ನು ದ್ವಿಪದದಿಂದ ಭಾಗಿಸುವುದು

1:ಮೊತ್ತ ಮೊದಲಿಗೆ 7+x3-6x (ತ್ರಿಪದ)ವನ್ನ ಒಂದು ದ್ವಿಪದ x+1 ರಿಂದ ಭಾಗಿಸುವಾ.

ಪರಿಹಾರ:

ಭಾಜ್ಯವು 3ನೇ ಘಾತದ ಬೀಜೋಕ್ತಿ, ಭಾಜಕವು 1ನೇ ಘಾತದ ದ್ವಿಪದ.

ಹಂತ

ವಿಧಾನ

1

ಭಾಜ್ಯ ಮತ್ತು ಭಾಜಕಗಳನ್ನು ಅವುಗಳ ಘಾತ ಸೂಚಿಯ ಇಳಿಕೆಯ ಕ್ರಮದಲ್ಲಿ ಬರೆಯಿರಿ.

2

ಯಾವುದೇ ಘಾತದ ಬೀಜ ಪದ ಇಲ್ಲದಿದ್ದರೆ ಸಹಗುಣಕ ‘0’ ಹಾಕಿ, ಬರೆಯಿರಿ

x3 -6x+7  ನ್ನು (x3 +0x2-6x+7) ಎಂದು ಬರೆಯಿರಿ.

3

ಭಾಜ್ಯದ ಮೊದಲ ಪದವನ್ನು ಭಾಜಕದ ಮೊದಲ ಪದದಿಂದ ಭಾಗಿಸಿ ( x3/x = x2). ಆದ್ದರಿಂದ

x2 ವು ಭಾಗಲಬ್ಧ ಮೊದಲನೇ ಪದ ಇದನ್ನು ಮೇಲ್ತುದಿಯಲ್ಲಿ ಬರೆಯಿರಿ.

4

ಭಾಜಕವನ್ನು ಭಾಗಲಬ್ಧ ಮೊದಲ ಪದ (x2) ರಿಂದ ಗುಣಿಸಿ, ಭಾಜ್ಯದ ಕೆಳಗೆ ಬರೆಯಿರಿ (=x3+ x2)

5

ಹಂತ 4 ರಲ್ಲಿ ಬಂದ ಉತ್ತರವನ್ನು ಭಾಜ್ಯದಿಂದ ಕಳೆಯಿರಿ.( x3 +0x2 ) – (x3+ x2) =  - x2

6

ಭಾಜ್ಯದ ಮುಂದಿನ ಪದವನ್ನು ತೆಗೆದುಕೊಂಡು,(=-6x) ಹಂತ 5ರ ಉತ್ತರದ ಮುಂದೆ ಬರೆಯಿರಿ. ಆಗ

-x2 – 6x. ಇದು ಹೊಸ ಭಾಜ್ಯ.

7

ಹಂತ 3 ರಿಂದ 6 ರವರೆಗಿನದ್ದನ್ನು ಪುನರಾವರ್ತಿಸಿ, ಭಾಗಾಕಾರವನ್ನು ಮುಂದುವರಿಸಿ

8

ಶೇಷದ ಘಾತ ಸೂಚಿಯು ಭಾಜಕದ ಘಾತ ಸೂಚಿಗಿಂತ ಕಡಿಮೆಯಾದಾಗ ಭಾಗಾಕಾರ ಕ್ರಿಯೆ ನಿಲ್ಲಿಸಿ.

ತಾಳೆ:

ಭಾಜಕ* ಭಾಗಲಬ್ಧ + ಶೇಷ = (x+1)* (x2-x-5)+12

= x*(x2-x-5) +1*(x2-x-5)+12

= (x3-x2-5x)+ (x2-x-5)+12 = x3-x2+ x2-5x-x -5+12

= x3-0x2-6x +7

= x3-6x +7 – ಇದು ದತ್ತ ಭಾಜ್ಯ.

ಸಮಸ್ಯೆ 2: x5 -9x2 +12x-14 ದಿಂದ x -3 ಭಾಗಿಸಿ.

ಪರಿಹಾರ:

ಭಾಜ್ಯವು ಘಾತಾಂಶದ ಇಳಿಕೆಯ ಕ್ರಮದಲ್ಲಿಯೇ ಇದೆ. ಆದರೆ ಬಹುಪದದಲ್ಲಿ ಇಲ್ಲದ x ನ ಘಾತಾಂಕಗಳನ್ನು ಸೊನ್ನೆ ಸಹಗುಣಕ ಸೇರಿಸಿ ಬರೆಯಬೇಕು.

xಭಾಜ್ಯ: x5 +0x4 +0x3-9x2 +12x-14.

ಭಾಜಕವು ಘಾತಾಂಕದ ಇಳಿಕೆಯ ಕ್ರಮದಲ್ಲಿಯೇ ಇದೆ.

- | x5 -3x4

- |3x4 +0x3

- |3x4 -9x3

- |9x3 -9x2

- |9x3 -27x2

- |18x2+12x

- |18x2 -54x

-|66x-14

-|66x-198

184

ತಾಳೆ:

ಭಾಗಲಬ್ಧವನ್ನು ಭಾಜ್ಯದಿಂದ ಗುಣಿಸಿ, ಶೇಷವನ್ನು ಕೂಡಿಸಿ ತಾಳೆ ನೋಡಬಹುದು. ಆದರೆ ಬೀಜೋಕ್ತಿಯು ತುಂಬಾ ದೊಡ್ಡದಿರುವುದರಿಂದ, ತಾಳೆ ನೋಡಲು ಬೇರೆ ವಿಧಾನ ಬಳಸುವಾ.

x=2 ಆದಾಗ ಫಲಿತಾಂಶವನ್ನು ನೋಡುವಾ.

x=2 ಆದಾಗ,

ಭಾಜಕ =x5 -9x2 +12x-14 = 25 -9*22 +12*2-14

= 32-36+24-14

= 6

ಭಾಜಕ = x-3 =2-3 = -1

ಭಾಗಲಬ್ಧ = 

= 24 +3*23 +9*22+18*2+66

= 16+24+36+66=178

ಈಗ,

ಭಾಗಲಬ್ಧ*ಭಾಜಕ + ಶೇಷ = 178*-1+184

= -178+184

= 6 - ದತ್ತ ಭಾಜ್ಯ

ಸಮಸ್ಯೆ 3: (6p3 -19p2 -8p) ಯನ್ನು (p2 -4p+2) ರಿಂದ ಭಾಗಿಸಿ.

ಪರಿಹಾರ:

6p+5

p2 -4p+2

( -) |6p3 -24p2 +12p --à ---- (1)      {= 6p*(p2 -4p+2)}

(=) |+5 p2 -20p --à -----(2)     {ಸಮೀಕರಣ (1) ನ್ನು ಭಾಜ್ಯದಿಂದ ಕಳೆಯಿರಿ}

( -) | 5p2 - 20p+10 --à -----(3)      {= 5*(p2 -4p+2)}

(=) -10           --à  ಶೇಷ         {ಸಮೀಕರಣ (3) ರಿಂದ (2)ನ್ನು ಕಳೆಯಿರಿ. }

ತಾಳೆ:

ಭಾಗಲಬ್ಧ*ಭಾಜಕ = (6p+5)* (p2 -4p+2)

= 6p* p2 +6p*-4p+6p*2+5* p2+5*-4p+5*2

= 6p3 -24p2+12p+5p2-20p+10

= 6p3 -19p2-8p+10

ಭಾಗಲಬ್ಧ*ಭಾಜಕ + ಶೇಷ = (6p3 -19p2-8p+10)-10

= 6p3 -19p2-8p - ದತ್ತ ಭಾಜ್ಯ

ಸಮಸ್ಯೆ 4: a5 +b5 ನ್ನು (a+b) ಯಿಂದ ಭಾಗಿಸಿ.

ಪರಿಹಾರ:

a+b

(-)  |a5+ a4b

(=) - a4b+0

(-) |a4b-a3b2

(=) a3b2+0

(-) | a3b2+ a2b3

(=) - a2b3+0

(-) |-a2b3-ab4

(=) ab4 + b5

(-) |ab4 + b5

(=) 0

ಅಭ್ಯಾಸ: ಭಾಜಕ*ಭಾಗಲಬ್ಧ+ಶೇಷ = ಭಾಜ್ಯ ಆಗುವುದೋ ಎಂದು ನೋಡಿ.

ಮೂಲ : ಫ್ರೀ ಗಣಿತ

ಮಾರ್ಪು

ಕೆಳಗೆ ನೀಡಿರುವ  ನಿಜಜೀವನದ ಉದಾಹರಣೆಗಳನ್ನು ಗಮನಿಸಿ:

ಉದಾ 1 : 180 ಜನರು ಪ್ರತಿದಿನ 10 ಗಂಟೆ ಕೆಲಸ ಮಾಡಿ 6 ದಿನಗಳಲ್ಲಿ  60m ಉದ್ದದ 1m ಅಗಲದ 1m ಆಳದ ಕಾಲುವೆಯನ್ನು ತೋಡುತ್ತಾರೆ. 100 ಜನರು ದಿನಕ್ಕೆ 8 ಗಂಟೆ ಕೆಲಸಮಾಡಿ, 100m ಉದ್ದದ  1.5m ಅಗಲದ 1.2mಆಳದ ಕಾಲುವೆಯನ್ನು ಎಷ್ಟು ದಿನಗಳಲ್ಲಿ  ತೋಡುತ್ತಾರೆ?

ಉದಾ 2 : ಒಂದು ವಸ್ತುವಿನ ತೂಕವು ಭೂಮಿಯ ಕೇಂದ್ರದಿಂದಿರುವ  ಅಂತರದ ವರ್ಗಕ್ಕೆ ವಿಲೋಮವಾಗಿರುವುದು. ಭೂಮಿಯ ಸರಿಸುಮಾರು ತ್ರಿಜ್ಯ 6380 KM ಆದರೆ 80 KG ದ್ರವ್ಯರಾಶಿಯ ವ್ಯಕ್ತಿಯು ಭೂಮಿಯ ಮೇಲ್ಮೈಯಿಂದ  1600 KM ಎತ್ತರದಲ್ಲಿ ಎಷ್ಟು ತೂಗುತ್ತಾನೆ?

ಮೇಲಿನಂತಹ ಸಮಸ್ಯೆಗಳನ್ನು ಬಗೆಹರಿಸುವುದು ಹೇಗೆ?

ಮಾರ್ಪು ಎಂದರೆ ಬದಲಾವಣೆ. ನಮ್ಮ ಕಾಲದಲ್ಲಿ ಹೀಗಿರಲಿಲ್ಲ, ಈಗ ಬಹಳ ಬದಲಾವಣೆಯಾಗಿದೆ ಎಂದು ಕೆಲವರು ಹೇಳುವುದನ್ನು ಕೇಳುತ್ತಿರುತ್ತೇವೆ. ನಮ್ಮಕಾಲದಲ್ಲಿ ಒಂದು ಕೇಜಿ ಅಕ್ಕಿಗೆ ಹಲವು ಆಣೆಗಳಿಗೆ ಸಿಗುತ್ತಿತ್ತು. ಈಗಲೋ ಹಲವು ಹತ್ತು ರೂಗಳಾಗಿವೆ. ಬದುಕುವುದೇ ಕಷ್ಟ. ಹಾಗಾದರೆ  ಕಾಲ ಕಳೆದಂತೆ ಅಕ್ಕಿಯ ಬೆಲೆ ಏರುತ್ತಲೇ ಹೋಗಿದೆಯೇ? ಇಲ್ಲ. ಅದು ಇಳಿದುದೂ ಉಂಟು. ಅಕ್ಕಿ, ಚಿನ್ನ  ಹಾಗೇ ಪೆಟ್ರೋಲ್ ಬೆಲೆ ಕಾಲಕಳೆದಂತೆ ಹೆಚ್ಚಾಗುತ್ತಲೇ ಹೋಗಿಲ್ಲ. ಆದುದರಿಂದ ಬೆಲೆಗಳ ಏರಿಕೆಗೂ ಕಾಲಕ್ಕೂ ನೇರ ಸಂಬಂಧ ಇಲ್ಲ ಎಂದಾಯಿತು. ಅದೇ ರೀತಿ ವ್ಯಕ್ತಿಯ ಎತ್ತರಕ್ಕೂ ಆತನ ವಯಸ್ಸಿಗೂ ನೇರ ಸಂಬಂಧ ಇದೆಯೇ? ಆರಂಭದಲ್ಲಿ ಅದು ಹೆಚ್ಚಾಗುತ್ತಾ ಹೋದರೂ, ಒಂದು ಹಂತದಲ್ಲಿ( 16-17ವರ್ಷ) ಹೆಚ್ಚುವುದು ನಿಲ್ಲುತ್ತದೆ ಅಲ್ಲವೇ?  ಅಂದರೆ ಎತ್ತರಕ್ಕೂ ವಯಸ್ಸಿಗೂ ನೇರ ಸಂಬಂಧ ಇಲ್ಲವೆಂದಾಯಿತು.

ನೇರ ಮಾರ್ಪು

ಹಾಗಾದರೆ ಸಮಯಕ್ಕನುಗುಣವಾಗಿ  ಏರಿಕೆಯಲ್ಲಿ/ಇಳಿತದಲ್ಲಿ ನೇರ ಸಂಬಂಧ ಇರುವಂತಹದೇನಾದರೂ ಇದೆಯೇ? ಇದೆ. ಚಲಿಸುತ್ತಿರುವ ಟ್ರೈನ್ ಅಥವಾ ಬಸ್ಸು ಕ್ರಮಿಸುವ ದೂರ, ಅದರ ಜವವನ್ನು ಅನುಸರಿಸಿ ಸಮಯಕ್ಕನುಗುಣವಾಗಿ ನೇರವಾಗಿ ಹೆಚ್ಚಾಗುತ್ತದೆ. ನಮಗೆ ತಿಳಿದಂತೆ  ಕ್ರಮಿಸಿದ ದೂರ= ಜವ*ಸಮಯ. ಅಥವಾ d=st. ಸಮಯ ಕಡಿಮೆಯಾದಾಗ ಕ್ರಮಿಸಿದ ದೂರ ಕಡಿಮೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಕ್ರಮಿಸಿದ ದೂರವು ಸಮಯದೊಂದಿಗೆ ನೇರ ಅನುಪಾತವನ್ನು ಹೊಂದಿದೆ ಎಂದು ಹೇಳುತ್ತೇವೆ.  ಹಾಗೇ dt  ಎಂದು ಸೂಚಿಸುತ್ತೇವೆ.  d/t = k ಎನ್ನುವುದು  ಸ್ಥಿರಾಂಕ( ಇಲ್ಲಿ ಜವ) ಆಗಿರುವುದನ್ನೂ ಗಮನಿಸಿ. ಯನ್ನು  ಅನುಪಾತೀಯ ಸ್ಥಿರಾಂಕ('constant of proportionality' ) ಎಂದು ಕರೆಯುತ್ತೇವೆ. ಹಾಗೆಯೇ  d ಮತ್ತು  t ಗಳು ಚರಾಂಶ(ಅವ್ಯಕ್ತ)ಗಳಾಗಿವೆ. ಅವಧಿ ಮತ್ತು ಬಡ್ಡಿಯ ದರ ನಿಗದಿಯಾಗಿರುವಾಗ ಠೇವಣಿ ಮೇಲೆ ಬ್ಯಾಂಕ್ ನೀಡುವ ಬಡ್ಡಿಯು ಅಥವಾ ಸಾಲದ ಮೇಲೆ ಬ್ಯಾಂಕ್ ವಸೂಲಿ ಮಾಡುವ ಬಡ್ದಿಯು ಠೇವಣಿ ಹಣ ಅಥವಾ ಸಾಲದ ಹಣದ ಮೇಲೆ ನೇರ ಅನುಪಾತವನ್ನು ಹೊಂದಿರುತ್ತದೆ.

ವೃತ್ತದ ಪರಿಧಿ = 2pr.  ತ್ರಿಜ್ಯ ಜಾಸ್ತಿ ಆದ ಹಾಗೆ ಪರಿಧಿಯು ಜಾಸ್ತಿಯಾಗುತ್ತಾ ಹೋಗುತ್ತದೆ. ಗಮನಿಸಿ: C/r = 2p  (ಸ್ಥಿರಾಂಕ) ವಾಗಿರುವುದರಿಂದ Cr.

ವೃತ್ತದ ವಿಸ್ತೀರ್ಣ= pr2. ತ್ರಿಜ್ಯ ಕಡಿಮೆ ಆದ ಹಾಗೆ ವಿಸ್ತೀರ್ಣವು ಕಡಿಮೆಯಾಗುತ್ತಾ ಹೋಗುತ್ತದೆ.  ಆದುದರಿಂದ A/r2= p ಮತ್ತು Ar.

ಎರಡು ಸ್ಥಳಗಳ ಮಧ್ಯೆ ಇರುವ ದೂರವನ್ನು ಕಂಡುಹಿಡಿಯಲು ನಾವು  ಭೂಪಟದಲ್ಲಿನ ದೂರಕ್ಕೆ ಸ್ಕೇಲ್(ಉದಾ: 1 ಸೆ.ಮೀ= 10 ಕಿ.ಮೀ) ಪ್ರಮಾಣದಿಂದ ಗುಣಿಸಿ ನಿಜವಾದ ದೂರವನ್ನು ಕಂಡು ಹಿಡಿಯುತ್ತೇವೆ. ಇಲ್ಲಿ ಸ್ಕೇಲ್ ಎನ್ನುವುದು ಅನುಪಾತೀಯ ಸ್ಥಿರಾಂಕವಾಗಿರುತ್ತದೆ. ಮಾನವನ ತೂಕವು ಅವನ ವಯಸ್ಸಿಗೆ ನೇರ ಅನುಪಾತದಲ್ಲಿ ಇರುತ್ತದೆಯೇ? – ಇಲ್ಲ.

ಸಮಸ್ಯೆ 1 : ವಿಶ್ರಾಂತ ಸ್ಥಿತಿಯಿಂದ ಬೀಳುತ್ತಿರುವ ಒಂದು ವಸ್ತುವಿನ ಚಲಿಸಿದ ದೂರವು ಅದು ತೆಗೆದುಕೊಳ್ಳುವ ಕಾಲದ ವರ್ಗಕ್ಕೆ ತಕ್ಕಂತೆ ಮಾರ್ಪಡುತ್ತದೆ. ಒಂದು ವಸ್ತುವು 2 ಸೆಕೆಂಡ್ ಕಾಲದಲ್ಲಿ 64cm ದೂರ ಕೆಳಗೆ ಬಿದ್ದರೆ 6ಸೆಕೆಂಡ್ ಗಳಲ್ಲಿ ವಸ್ತುವು ಎಷ್ಟು ದೂರ ಕೆಳಗೆ ಬೀಳುವುದು? ಈ ಸಮಸ್ಯೆಯನ್ನು ಏಕಮಾನ ಪದ್ಧತಿಯ ರೀತಿಯಲ್ಲಿ ಕೆಳಗಿನಂತೆ ಪರಿಹರಿಸಲು ಸಾಧ್ಯವಿಲ್ಲ

ಪರಿಹಾರ:

ಈ ಸಮಸ್ಯೆಯನ್ನು ಏಕಮಾನ ಪದ್ಧತಿಯ ರೀತಿಯಲ್ಲಿ ಕೆಳಗಿನಂತೆ ಪರಿಹರಿಸಲು ಸಾಧ್ಯವಿಲ್ಲ

2sec >>> 64cm

6sec  >>> (64/2)*6= 192

ಇದು  ಪರಿಹಾರವಲ್ಲ.

dt2 - ದತ್ತ

d/t2= k

k = 64/4= 16

ಆದುದರಿಂದ  k = 16= d/62=d/36

d= 16*36= 576

6 ಸೆಕೆಂಡ್ ಗಳಲ್ಲಿ ವಸ್ತುವು 576 cms ದೂರ ಕೆಳಗೆ ಬೀಳುವುದು.

ವಿಲೋಮ  ಮಾರ್ಪು

ಅಧಿಕ ಇಳುವರಿಯಿಂದಾಗಿ ಟೊಮ್ಯಾಟೋ ತರಕಾರಿ ಬೆಳೆದವರು ರಸ್ತೆಗಳಲ್ಲಿ ಅದನ್ನು ಸುರಿಯುವುದನ್ನು ನೀವು ಕೇಳಿರುವಿರಿ ಅಲ್ಲವೇ? ಅದು ಏಕೆ? ಹಾಗೆಯೇ

  • ಬತ್ತ, ಗೋಧಿ ತರಕಾರಿ ...  ಇವುಗಳ ಪೂರೈಕೆ ಜಾಸ್ತಿ ಆದಾಗ ಬೆಲೆ ಇಳಿಯುತ್ತದೆ
  • ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನದ ಪೂರೈಕೆ ಜಾಸ್ತಿಯಾಗಿ  ಆದಾಗ ಪೆಟ್ರೋಲ್ ಬೆಲೆ ಇಳಿಯುತ್ತದೆ

ಉದಾಹರಣೆಗಳು:

  • ಹೆಚ್ಚಿನ  ಕಾರ್ಮಿಕರನ್ನು ಬಳಸಿಕೊಂಡಾಗ, ಯಾವುದೇ ಕೆಲಸ ಮುಗಿಸಲು ಕಡಿಮೆ ಸಮಯ ಸಾಕಾಗುತ್ತದೆ.
  • ಭೂಮಿಯಿಂದ ದೂರ ಹೋದ ಹಾಗೆ ನಮ್ಮ ತೂಕ ಕಡಿಮೆಯಾಗುತ್ತದೆ

ನೇರ ಮಾರ್ಪಿನಲ್ಲಿ, ಒಂದು ಚರಾಂಶ(ಅವ್ಯಕ್ತ)ವು ಹೆಚ್ಚಾದಾಗ, ಅದನ್ನು ಹೊಂದಿಕೊಂಡಿರುವ ಇನ್ನೊಂದು ಚರಾಂಶ(ಅವ್ಯಕ್ತ)ವು ಹೆಚ್ಚಾಗುತ್ತದೆ. ಆದರೆ ಮೇಲಿನ ಉದಾಹರಣೆಗಳನ್ನು ಗಮನಿಸಿದಾಗ ಒಂದು ಚರಾಂಶ(ಅವ್ಯಕ್ತ)ವು ಹೆಚ್ಚಾದಾಗ, ಅದನ್ನು ಹೊಂದಿಕೊಂಡಿರುವ ಇನ್ನೊಂದು ಚರಾಂಶ(ಅವ್ಯಕ್ತ)ವು  ಕಡಿಮೆಯಾಗುತ್ತದೆ. ಅಂತಹ ಸಂದರ್ಭಗಳಲ್ಲಿ  ಆ ಚರಾಂಶ(ಅವ್ಯಕ್ತ)ಗಳನ್ನು ಹೊಂದಿಕೊಂಡಂತಹ ಗುಣಲಬ್ಧವು ಸ್ಥಿರಾಂಕವಾಗಿರುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ,  xಮತ್ತು y  ಚರಾಂಶ(ಅವ್ಯಕ್ತ)ಗಳಾದಾಗ x1/y.  x  ಎನ್ನುವುದು  y ಗೆ ವಿಲೋಮ ಅನುಪಾತದಲ್ಲಿವೆ ಎನ್ನುತ್ತೇವೆ ಮತ್ತು xy=k (ಸ್ಥಿರಾಂಕ)

ಹೀಗೆಯೇ,  x1/y2 ,  x1/y4 , x1/ . . . .  ಆದಾಗ xy2, xy4, x ಗಳು ಅನುಕ್ರಮವಾಗಿ ಸ್ಥಿರಾಂಕವಾಗಿರುತ್ತವೆ.

ಸಮಸ್ಯೆ 2 : ಒಂದು ಚೆಂಡನ್ನು ಮೇಲ್ಮುಖವಾಗಿ ಎಸೆದಾಗ, ಚೆಂಡು ಗಾಳಿಯಲ್ಲಿರುವ ಕಾಲ T  ಸೆಕೆಂಡ್ ಗಳು ಆದರೆ, ತಲುಪಿದ ಎತ್ತರ h ಮೀಟರ್ ಗಳ ವರ್ಗಮೂಲಕ್ಕೆ ನೇರ ಅನುಪಾತದಲ್ಲಿರುತ್ತದೆ.  ಎತ್ತರ h=25m  ಆದಾಗ,T=4.47 sec  ಇರುತ್ತದೆ.

  • ಗೆ ಸೂತ್ರವನ್ನು 'h' ನಲ್ಲಿ ಕಂಡು ಹಿಡಿಯಿರಿ
  • h=50 ಆದಾಗ T ಎಷ್ಟು?
  • ಮೇಲಕ್ಕೆ ಎಸೆದ ಚೆಂಡು 5 ಸೆಕೆಂಡ್ ಗಳ ಕಾಲ ಇರುವುದಾದರೆ 'h' ಎಷ್ಟು?.

ಪರಿಹಾರ:

T

T= k

4.47= 5k

k = 0.894

T = 0.894 

h =50 ಆದಾಗ

T= 0.894* = 0.894*7.07 6.32

T =5 ಆದಾಗ

= T/k = 5/0.894 5.60 31.36 ಮೀ.

ಜಂಟಿ ಮಾರ್ಪು

ಅನುಪಾತವು  ಹಲವು ಚರಾಂಶ(ಅವ್ಯಕ್ತ)ಗಳನ್ನು ಅವಲಂಬಿಸುವ ಸಾಧ್ಯತೆ ಇದೆಯೇ? ಸರಳ ಬಡ್ಡಿ ಮತ್ತು ಚಕ್ರಬಡ್ಡಿಯ ಸೂತ್ರಗಳು:

SI = PTR/100

ಮತ್ತು

CI = P(1+R/100)T-P

ನಾವು ಏನನ್ನು ಗಮನಿಸಬಹುದು? ಸರಳ ಬಡ್ಡಿಯು  ಠೇವಣಿ(P), ಅವಧಿ(T)  ಮತ್ತು ಬಡ್ಡಿ(R) ಗಳಿಗೆ ನೇರ ಅನುಪಾತದಲ್ಲಿವೆ. ಮತ್ತು ಚಕ್ರಬಡ್ಡಿಯು ಆ ಮೂರು ಚರಾಂಶ(ಅವ್ಯಕ್ತ)ಗಳನ್ನು ಅವಲಂಬಿಸಿದೆ. ಹಾಗೆಯೇ ವ್ಯಕ್ತಿಯ ತೂಕವು ಭೂಮಿಯಿಂದ ಎಷ್ಟು ದೂರದಲ್ಲಿದ್ದಾನೆ ಎನ್ನುವುದರ ಮೇಲೆ ಅವಲಂಬಿತವಾಗಿದೆ.

ಕೆಲಸ,ಕೆಲಸಗಾರರು,ದಿನಗಳು ಮತ್ತು ಗಂಟೆಗಳು

ಮಾಡುವ ಕೆಲಸವು ವ್ಯಕ್ತಿಗಳು(M), ಕೆಲಸದ ದಿನಗಳು(D), ದಿನದಲ್ಲಿ ಕೆಲಸ ಮಾಡುವ  ಗಂಟೆ(H) ಗಳಿಗೆ ನೇರ ಅನುಪಾತದಲ್ಲಿವೆ ಎನ್ನುವುದು ನಮಗೆ ತಿಳಿದಿದೆ.

ಅಂದರೆ WM, WD, WH

WM*D*H ಅಥವಾ M*D*H/W = ಸ್ಥಿರಾಂಕ

ಸಮಸ್ಯೆ 3 : 36 ಜನರು 140M ಉದ್ದದ ಗೋಡೆಯನ್ನು 21 ದಿನಗಳಲ್ಲಿ ಕಟ್ಟುವುದಾದರೆ,  50M ಉದ್ದದ ಅದೇ ರೀತಿಯ ಗೋಡೆಯನ್ನು  18 ದಿನಗಳಲ್ಲಿ ಕಟ್ಟಲು ಎಷ್ಟು ಜನರು ಬೇಕು?

ಪರಿಹಾರ:

ಇಲ್ಲಿ W1= 140, M1=36, D1=21  ಮತ್ತು  W2= 50, D2=18, ಕೊಟ್ಟಾಗ M2 ಕಂಡುಹಿಡಿಯಬೇಕು. H ದಿನದಲ್ಲಿ ಕೆಲಸ ಮಾಡುವ  ಗಂಟೆಗಳಾಗಿದ್ದು ಅದು ಸಮವಾಗಿರುತ್ತದೆ.

M*D*H/W = ಸ್ಥಿರಾಂಕ

36*21*H/140 = M2*18*H/50

ಬಿಡಿಸಿದಾಗ M2 = 15

ಸಮಸ್ಯೆ 4 : ಕೊಳಾಯಿ A, ಒಂದು ನೀರಿನ ತೊಟ್ಟಿಯನ್ನು 8 ಗಂಟೆಗಳಲ್ಲಿ ತುಂಬುತ್ತದೆ. ಮತ್ತು ಕೊಳಾಯಿ B, 12 ಗಂಟೆಗಳಲ್ಲಿ ಖಾಲಿ ಮಾಡುತ್ತದೆ. ಎರಡೂ ಕೊಳಾಯಿಗಳನ್ನು  ಏಕಕಾಲದಲ್ಲಿ ತೆರೆದರೆ ತೊಟ್ಟಿ ತುಂಬಲು ಎಷ್ಟು ಗಂಟೆಗಳ ಕಾಲ ಬೇಕಾಗುವುದು?

ಪರಿಹಾರ:

1 ಗಂಟೆಯಲ್ಲಿ ತುಂಬಿದ ತೊಟ್ಟಿಯ ಭಾಗ = (1/8-1/12)= (3-2)/24= 1/24.

ತೊಟ್ಟಿ ತುಂಬಲು 24 ಗಂಟೆಗಳು ಬೇಕು.

ಸಮಸ್ಯೆ 5 : 180 ಜನರು ಪ್ರತಿದಿನ 10 ಗಂಟೆ ಕೆಲಸ ಮಾಡಿ 6 ದಿನಗಳಲ್ಲಿ  60m ಉದ್ದದ 1m ಅಗಲದ 1m ಆಳದ ಕಾಲುವೆಯನ್ನು ತೋಡುತ್ತಾರೆ. 100 ಜನರು ದಿನಕ್ಕೆ 8 ಗಂಟೆ ಕೆಲಸಮಾಡಿ, 100m ಉದ್ದದ  1.5m ಅಗಲದ1.2m ಆಳದ ಕಾಲುವೆಯನ್ನು ಎಷ್ಟು ದಿನಗಳಲ್ಲಿ  ತೋಡುತ್ತಾರೆ?

ಪರಿಹಾರ:

ಇಲ್ಲಿ W1= 60*1*1, M1=180, D1=6 ಮತ್ತು H1 =10, ಮತ್ತು W2= 100*1.5*1.2, M2=100, ಮತ್ತು H2 =8,  ಕೊಟ್ಟಾಗ D2 ಕಂಡುಹಿಡಿಯಬೇಕು.

M*D*H/W = ಸ್ಥಿರಾಂಕ

M1*D1*H1/W1 = M2*D2*H2/W2

180*6*10/60 = 100*D2*8*/(100*1.5*1.2)

ಬಿಡಿಸಿದಾಗ  D2 = 40.5

ಕಾಲುವೆ ತೋಡಲು 40.5 ದಿನಗಳು ಬೇಕು

ಸಮಸ್ಯೆ 6 : ಒಂದು ವಸ್ತುವಿನ ತೂಕವು ಭೂಮಿಯ ಕೇಂದ್ರದಿಂದಿರುವ  ಅಂತರದ ವರ್ಗಕ್ಕೆ ವಿಲೋಮವಾಗಿರುವುದು. ಭೂಮಿಯ ಸರಿಸುಮಾರು ತ್ರಿಜ್ಯ 6380 KM ಆದರೆ 80 KG ದ್ರವ್ಯರಾಶಿಯ ವ್ಯಕ್ತಿಯು ಭೂಮಿಯ ಮೇಲ್ಮೈಯಿಂದ  1600 KM ಎತ್ತರದಲ್ಲಿ ಎಷ್ಟು ತೂಗುತ್ತಾನೆ?

ಪರಿಹಾರ:

ಇಲ್ಲಿ W1/d2

ವ್ಯಕ್ತಿಯು ಭೂಮಿಯ ಮೇಲಿರುವಾಗ ಆತನ ತೂಕ = 80 KG d1 =ಭೂಮಿಯ ತ್ರಿಜ್ಯ=6380 KM

W2 ವ್ಯಕ್ತಿಯು ಭೂಮಿಯ ಮೇಲ್ಮೈಯಿಂದ  1600 KM ಎತ್ತರದಲ್ಲಿರುವಾಗಿನ ತೂಕ ಆಗಿರಲಿ.

W1 d12= W2 d22

80*63802= W2*79802

ಬಿಡಿಸಿದಾಗ  W2= 51.14

ಸಮಸ್ಯೆ 7 : A ಯು ಒಬ್ಬನೇ ಒಂದು ಕೆಲಸಮಾಡಲು ಅವನು  ಮತ್ತು B ಒಟ್ಟಿಗೆ ಸೇರಿ ಕೆಲಸಮಾಡುವ ಸಮಯಕ್ಕಿಂತ 5 ಹೆಚ್ಚಿನ ದಿನಗಳನ್ನು ತೆಗೆದು ಕೊಳ್ಳುತ್ತಾನೆ. ಅದೇ  B ಯು ಒಬ್ಬನೇ ಕೆಲಸಮಾಡಲು ಅವನು  ಮತ್ತು A ಒಟ್ಟಿಗೆ ಸೇರಿ ಕೆಲಸಮಾಡುವ ಸಮಯಕ್ಕಿಂತ 20 ಹೆಚ್ಚಿನ ದಿನಗಳನ್ನು ತೆಗೆದು ಕೊಳ್ಳುತ್ತಾನೆ. ಹಾಗಾದರೆ  A  ಮತ್ತು B ಒಟ್ಟಿಗೆ ಸೇರಿ ಕೆಲಸಮಾಡಲು ಎಷ್ಟು ದಿನ ತೆಗೆದುಕೊಳ್ಳುತ್ತಾರೆ?

ಪರಿಹಾರ:

A  ಮತ್ತು B ಒಟ್ಟಿಗೆ ಸೇರಿ ಕೆಲಸಮಾಡಲು ತೆಗೆದುಕೊಳ್ಳುವ x ದಿನಗಳು ಆಗಿರಲಿ.

A ಯು ಒಬ್ಬನೇ  ಕೆಲಸಮಾಡಲು ತೆಗೆದುಕೊಳ್ಳುವ ದಿನಗಳು =   x+5

B ಯು ಒಬ್ಬನೇ  ಕೆಲಸಮಾಡಲು ತೆಗೆದುಕೊಳ್ಳುವ ದಿನಗಳು =   x+20

ಸೂತ್ರದಂತೆ A ಮತ್ತು B ಒಟ್ಟಿಗೆ ಸೇರಿ ಕೆಲಸಮಾಡಲು ತೆಗೆದುಕೊಳ್ಳುವ  ದಿನಗಳು(=x)= (x+5)*(x+20)/{(x+5)+(x+20)}

x= x2+25x+100/2x+25

2x2+25x= x2+25x+100

x2=100

x=10

A  ಮತ್ತು B ಒಟ್ಟಿಗೆ ಸೇರಿ ಕೆಲಸಮಾಡಲು ತೆಗೆದುಕೊಳ್ಳುವ  ದಿನಗಳು 10.

ತಾಳೆ:

A ಯು ಒಬ್ಬನೇ  ಕೆಲಸಮಾಡಲು ತೆಗೆದುಕೊಳ್ಳುವ ದಿನಗಳು = x+5 = 15 ದಿನಗಳು

B ಯು ಒಬ್ಬನೇ  ಕೆಲಸಮಾಡಲು ತೆಗೆದುಕೊಳ್ಳುವ ದಿನಗಳು = x+25 = 30 ದಿನಗಳು

ಸೂತ್ರದಂತೆ A ಮತ್ತು B ಒಟ್ಟಿಗೆ ಸೇರಿ ಕೆಲಸಮಾಡಲು ತೆಗೆದುಕೊಳ್ಳುವ  ದಿನಗಳು = 30*15/45= 10

ಸಮಸ್ಯೆ 8 : ಪಂಪ್ A ಯು ಒಂದು ತೊಟ್ಟಿಯನ್ನು 1 ಗಂಟೆಯಲ್ಲಿ, ಪಂಪ್ B ಯು  ಅದೇ ತೊಟ್ಟಿಯನ್ನು 1 ಗಂಟೆ 40 ನಿಮಿಷಗಳಲ್ಲಿ ಮತ್ತು ಪಂಪ್ C ಯು ತೊಟ್ಟಿಯನ್ನು ತುಂಬಲು ತೆಗೆದುಕೊಳ್ಳುವ ಕಾಲವು  ಅವೆರಡು ಪಂಪ್ ಗಳು ತೆಗೆದುಕೊಳ್ಳುವ ಸರಾಸರಿ ಕಾಲವಾಗಿರುತ್ತದೆ.  A ಮತ್ತು  B ಪಂಪ್ ಗಳನ್ನು ಒಟ್ಟಿಗೆ ಪ್ರಾರಂಭಿಸಿ ಮತ್ತು ಪಂಪ್ C ಸಾಮರ್ಥ್ಯದ 2 ಪಂಪ್ ಗಳನ್ನು ಖಾಲಿಮಾಡಲು ಏಕಕಾಲದಲ್ಲಿ ಚಾಲೂ ಮಾಡಿದರೆ, ತೊಟ್ಟಿ ಭರ್ತಿಯಾಗುವ ಸಂಭವ ಉಂಟೇ? ಹಾಗಾದರೆ ಎಷ್ಟು ಕಾಲದಲ್ಲಿ ಭರ್ತಿಯಾಗುವುದು?

ಪರಿಹಾರ:

A ಯು ತೆಗೆದುಕೊಳ್ಳುವ  ಕಾಲ= 60 ನಿಮಿಷಗಳು

B ಯು ತೆಗೆದುಕೊಳ್ಳುವ  ಕಾಲ = 100 ನಿಮಿಷಗಳು

C ಯು ತೆಗೆದುಕೊಳ್ಳುವ  ಕಾಲ = 80 ನಿಮಿಷಗಳು

t ಯು ತೊಟ್ಟಿ ತುಂಬಲು ತೆಗೆದುಕೊಳ್ಳುವ ಕಾಲವಾಗಿರಲಿ.

ಸೂತ್ರದಂತೆ

1/t = 1/60+1/100- 2(1/80)

= 1/60+1/100-1/40= (10+6-15)/600 = 1/600

ತೊಟ್ಟಿ ತುಂಬಲು ತೆಗೆದುಕೊಳ್ಳುವ ಕಾಲ= 600 ನಿಮಿಷಗಳು= 10 ಗಂಟೆಗಳು

ಏಕಕಾಲಿಕ ರೇಖಾತ್ಮಕ ಸಮೀಕರಣಗಳನ್ನು ಬಿಡಿಸುವುದು

ಬೀಜಗಣಿತದ ಆರಂಭದಲ್ಲಿ  ನೀಡಿದ ಕೆಳಗಿನ ಸಮಸ್ಯೆಯನ್ನು ಬಿಡಿಸುವುದನ್ನು ಇಲ್ಲಿ ಕಲಿಯಲಿದ್ದೇವೆ.

“ನನ್ನ ಮತ್ತು ನನ್ನ ತಂದೆಯ ಒಟ್ಟು ಪ್ರಾಯ 55 ವರ್ಷಗಳು. 16 ವರ್ಷಗಳ ನಂತರ ನನ್ನ ತಂದೆಯ ವಯಸ್ಸು ನನ್ನ ವಯಸ್ಸಿನ ಎರಡರಷ್ಟಾಗುವುದಾದರೆ, ಈಗ ನನ್ನ ವಯಸ್ಸೆಷ್ಟು”?

ನಾವೀಗಾಗಲೇ x+1 = 5, 2a+6 =10, ಈ ರೀತಿಯ ಸಮೀಕರಣಗಳನ್ನು ಬಿಡಿಸುವುದನ್ನು ಕಲಿತಿದ್ದೇವೆ. ಇವುಗಳಲ್ಲೆಲ್ಲಾ ಒಂದೇ ಚರಾಕ್ಷರವಿದೆ. ಇಂತಹ ಸಮೀಕರಣಗಳನ್ನು ರೇಖಾತ್ಮಕ ಸಮೀಕರಣಗಳೆನ್ನುತ್ತೇವೆ..

ಈಗ ಒಂದು ಸಮೀಕರಣ x+y = 5 ತೆಗೆದುಕೊಳ್ಳುವಾ.ಇದರಲ್ಲಿ x ಮತ್ತು y ಎಂಬ ಎರಡು ಚರಾಕ್ಷರಗಳಿವೆ. ಈಗ ಈ ಸಮೀಕರಣದಲ್ಲಿ x ಮತ್ತು y ಗಳಿಗೆ ಬೇರೆಬೇರೆ ಬೆಲೆಗಳನ್ನು ಕೊಡುವಾ. ಆಗ (x=1,y=4), (x=2,y=3), (x=3,y=2), (x=0,y=5), (x= -2, y=7) ಈ ರೀತಿ ನಿರ್ದಿಷ್ಟ ಬೆಲೆ ಇರದ ಹಲವು ಬೆಲೆಗಳ ಗುಂಪುಗಳು ಸಮೀಕರಣವನ್ನು ತೃಪ್ತಿಪಡಿಸುತ್ತವೆ. x ಮತ್ತು y ಗಳಿಗೆ ಅಸಂಖ್ಯಾತ ಬೆಲೆಗಳು ಸಿಗುತ್ತವೆ. ಹಾಗಾದರೆ, ಇದು ಏಕೆ?ಸಮೀಕರಣದಲ್ಲಿ x ನ್ನ ಪಕ್ಷಾಂತರಿಸಿದಾಗ, y = 5-x ಆಗುತ್ತದೆ. x  ನ ಯಾವುದೇ ಬೆಲೆಗೆ y ಗೆ ಪ್ರತ್ಯೇಕ ಬೆಲೆಗಳು ದೊರೆಯುತ್ತವೆ. ಈ ರೀತಿಯ ಸಮೀಕರಣಗಳನ್ನು ಬಿಡಿಸಲು ನಮಗೆ x ಮತ್ತು y ಗಳನ್ನೊಳಗೊಂಡು ಇನ್ನೊಂದು ಸಮೀಕರಣಬೇಕು.

ಎರಡು ಚರಾಕ್ಷರಗಳಿರುವ ರೇಖಾತ್ಮಕ ಸಮೀಕರಣಕ್ಕೆ ಅನಂತ ಬೆಲೆಗಳು ಸಿಗುವುದರಿಂದ,ಇಂಥ ಸಮೀಕರಣಗಳನ್ನು ಬಿಡಿಸಲು ಅದೇ ಚರಾಕ್ಷರಗಳನ್ನು ಹೊಂದಿರುವ ಇನ್ನೊಂದು ಸಮೀಕರಣ ಬೇಕು.

ಈಗ ನಿಮ್ಮ ಸ್ನೇಹಿತನು ನಿಮಗೊಂದು ಆಟದ ಲೆಕ್ಕವನ್ನು ಕೊಡುತ್ತಾನೆಂದು ಭಾವಿಸಿ. ನೀವು ಸರಿಯುತ್ತರ ಹೇಳಿದರೆ, ಅವನ ವಯಸ್ಸಿನಷ್ಟೇ ಸಂಖ್ಯೆಯ ಸಿ.ಡಿ.ಗಳನ್ನು ನಿಮಗೆ ಕೊಡುತ್ತಾನೆ. ಈ ಪಂದ್ಯವನ್ನು ನೀವು ಸ್ವೀಕರಿಸುತ್ತೀರಾ?

ಸಮಸ್ಯೆ 1 (ಪಂದ್ಯದ ಲೆಕ್ಕ): “ನನ್ನ ಮತ್ತು ನನ್ನ ತಂದೆಯ ಒಟ್ಟು ಪ್ರಾಯ 55 ವರ್ಷಗಳು. 16 ವರ್ಷಗಳ ನಂತರ ನನ್ನ ತಂದೆಯ ವಯಸ್ಸು ನನ್ನ ವಯಸ್ಸಿನ ಎರಡರಷ್ಟಾಗುವುದಾದರೆ, ಈಗ ನನ್ನ ವಯಸ್ಸೆಷ್ಟು”?

ಅಂದಾಜಿನಿಂದಲೇ ಲೆಕ್ಕವನ್ನು ನೀವು ಮಾಡಬಹುದು. ನಿಮ್ಮ ಸ್ನೇಹಿತನು ಚಿಕ್ಕ ಮಗುವು ಆಗದೇ ಇರುವುದರಿಂದ ಅತನ ವಯಸ್ಸು 9 ವರ್ಷಗಳಿಂದ ಆರಂಭಿಸಿ ಸಮಸ್ಯೆಯನ್ನು ಬಿಡಿಸುವಾ.

ಈಗ(ಒಟ್ಟು =55)

16 ವರ್ಷಗಳ ನಂತರ

ಸ್ನೇಹಿತನ ವಯಸ್ಸು

ಅವನ ತಂದೆಯ ವಯಸ್ಸು

ಸ್ನೇಹಿತನ ವಯಸ್ಸು

ಅವನ ತಂದೆಯ ವಯಸ್ಸು

9

46

25

62

10

45

26

61

11

44

27

60

12

43

28

59

13

42

29

58

14

41

30

57

15

40

31

56

ಮೇಲಿನ ತ:ಖ್ತೆಯಿಂದ ತಿಳಿದು ಬರುವುದೇನಂದರೆ,ನಿಮ್ಮ ಸ್ನೇಹಿತನ ವಯಸ್ಸು ಈಗ 13 ವರ್ಷಗಳಾದರೆ 15 ವರ್ಷಗಳ ನಂತರ, ಅವನ ತಂದೆಯ ವಯಸ್ಸು(58) ಆತನ ವಯಸ್ಸಿನ(29) ಎರಡರಷ್ಟಾಗಲಿದೆ.ಈಗ ನೀವು ನಿಮ್ಮ ಸ್ನೇಹಿತನಿಂದ 13ಸಿ.ಡಿ.ಗಳನ್ನು ಕೇಳಬಹುದು.

ಆದರೆ ಜಟಿಲ ಸಮಸ್ಯೆಗಳಲ್ಲಿ ಈ ಕ್ರಮವನ್ನು ಅನುಸರಿಸಲು ಸಾಧ್ಯವಿಲ್ಲ. ಹಾಗಾದರೆ ಇದಕ್ಕೊಂದು ನಿಯಮಬದ್ಧವಾದ ಕ್ರಮವಿದೆಯೆ?

ಪರಿಹಾರ:

ನಿಮ್ಮ ಸ್ನೇಹಿತನ ಈಗಿನ ವಯಸ್ಸು = y ವರ್ಷಗಳಾಗಿರಲಿ.

ಅವನ ತಂದೆಯ ವಯಸ್ಸು = x ವರ್ಷಗಳಾಗಿರಲಿ.

ಅವರಿಬ್ಬರ ವಯಸ್ಸಿನ ಮೊತ್ತ 55 ವರ್ಷಗಳಾದ್ದರಿಂದ,

x+y =55

16 ವರ್ಷಗಳ ನಂತರ ನಿಮ್ಮ ಸ್ನೇಹಿತನ ವಯಸ್ಸು = y+16

ನಿಮ್ಮ ಸ್ನೇಹಿತನ ತಂದೆಯ ವಯಸ್ಸು = x+16.

ಸಮಸ್ಯೆಯಲ್ಲಿ ಕೊಟ್ಟಂತೆ, x+16 =2*(y+16)

x+16 = 2y+ 32    (ಸುಲಭೀಕರಿಸಿದೆ.)

x-2y = 32-16 =16 (ಪಕ್ಷಾಂತರಿಸಿದೆ.)

ಕೊನೆಯಲ್ಲಿ ನಮಗೀಗ ಎರಡು ಸಮೀಕರಣಗಳು ದೊರೆತವು:

(1) x+y =55

(2) x-2y = 16

ರೇಖಾತ್ಮಕ ಸಮೀಕರಣಗಳನ್ನು ಬಿಡಿಸಲು ಸಮೀಕರಣದಲ್ಲಿ ಒಂದೇ ಚರಾಕ್ಷರ ಬೇಕು.ಆದ್ದರಿಂದ ಒಂದು ಚರಾಕ್ಷರವನ್ನು ಸಮೀಕರಣದಿಂದ ಹೋಗಲಾಡಿಸಬೇಕು. ಹೇಗೆ?

ದತ್ತ ಸಮೀಕರಣಗಳು:

x+y =55   ==è (1)

x-2y=16   ==è (2)

----------

(2) ನ್ನು (1)   ರಿಂದ ಕಳೆಯಿರಿ     0+3y =39   ==è (3)

-----------

3y = 39

y=13

x+y =55    ==è (1)

x = 55-y ಪಕ್ಷಾಂತರಿಸಿದೆ.)

ಮೇಲಿನ ಸಮೀಕರಣದಲ್ಲಿ y=13 ಎಂದು ಆದೇಶಿಸಿದಾಗ,

x=55-13

=42

ನಿಮ್ಮ ಸ್ನೇಹಿತನ ವಯಸ್ಸು = 13 ವರ್ಷ

ಅವನ ತಂದೆಯ ವಯಸ್ಸು = 42 ವರ್ಷ

ತಾಳೆ:

ಈಗ ನಿಮ್ಮ ಸ್ನೇಹಿತನ ವಯಸ್ಸು = 13 ವರ್ಷ, ಅವನ ತಂದೆಯ ವಯಸ್ಸು = 42 ವರ್ಷ ಆದಾಗ ಅವರ ಒಟ್ಟು ಪ್ರಾಯ 55 ವರ್ಷಗಳು.

16 ವರ್ಷಗಳ ನಂತರ,ನಿಮ್ಮ ಸ್ನೇಹಿತನ ವಯಸ್ಸು = 29 ವರ್ಷ, ಅವನ ತಂದೆಯ ವಯಸ್ಸು =58( ಆಗ ಅವನ ವಯಸ್ಸು ತಂದೆಯ ವಯಸ್ಸಿನ ಎರಡರಷ್ಟಾಗುವುದು)

2. x ಮತ್ತು y ಗಳ ಬೆಲೆಗಳನ್ನು (1) ರಲ್ಲಿ ಆದೇಶಿಸಿದಾಗ x+y = 42+13 = 55 , (2) ರಲ್ಲಿ ಆದೇಶಿಸಿದಾಗ: x-2y = 42-26 = 16

ಸಮಸ್ಯೆ2:ಒಂದು ಕಂಪಾಸು ಪೆಟ್ಟಿಗೆಯ ಬೆಲೆಯು ಒಂದು ಪೆನ್ನಿನ ಬೆಲೆಗಿಂತ ರೂ.18 ಜಾಸ್ತಿ. ನಿಮ್ಮ ಅಧ್ಯಾಪಕರು ನಿಮಗೆ 240 ರೂ ಗಳನ್ನು ಕೊಟ್ಟು 5 ಕಂಪಾಸು ಪೆಟ್ಟಿಗೆ ಮತ್ತು 10 ಪೆನ್ನುಗಳನ್ನು ತರಲು ಹೇಳಿದರೆ, ಒಂದು ಕಂಪಾಸುಪೆಟ್ಟಿಗೆ ಮತ್ತು ಒಂದು ಪೆನ್ನಿನ ಕ್ರಯ ಕಂಡುಹಿಡಿ

ಪರಿಹಾರ:

ಒಂದು ಕಂಪಾಸು ಪೆಟ್ಟಿಗೆಯ ಕ್ರಯ = y ಆಗಿರಲಿ

ಒಂದು ಪೆನ್ನಿನ ಕ್ರಯ = x ಆಗಿರಲಿ

(1) y = x+18       ===(1)

(2) 5y+10x = 240 ===(2)

(1)   ನ್ನ  ಸರಿಯಾದ ರೂಪದಲ್ಲಿ ಬರೆದಾಗ, y-x =18     ====(3)

(2)   ನ್ನ 5  ರಿಂದ ಭಾಗಿಸಿದಾಗ,          y+2x= 48   ====(4)

(3)   ರಲ್ಲಿ (4) ನ್ನ ಕಳೆದಾಗ                  -----------

-3x =-30 -------(2)

x = -30/-3  =10 -------(3)

ಒಂದು ಪೆನ್ನಿನ ಕ್ರಯ = 10 ರೂ.

ಒಂದು ಕಂಪಾಸು ಪೆಟ್ಟಿಗೆಯ ಕ್ರಯ = 28 ರೂ.

ಅಭ್ಯಾಸ: x ಮತ್ತು y ಯ ಬೆಲೆಗಳನ್ನು ಸಮೀಕರಣ (1) ಮತ್ತು (2)ರಲ್ಲಿ ಆದೇಶಿಸಿ, ತಾಳೆನೋಡಿ.

ಸಮಸ್ಯೆ 3: ಬಿಡಿಸಿ: 2x+2y =4   ಮತ್ತು   x+y =2

ಪರಿಹಾರ:

2x+2y =4   ====(1)

x+y =    2  ====(2)

(2) ನ್ನು 2 ರಿಂದ ಗುಣಿಸಿ.

2x+2y=4     ====(3)

(1) ರಿಂದ(3) ನ್ನು ಕಳೆಯಿರಿ 0 =0 ಇದು ಯಾವಾಗಲೂ ಸತ್ಯ.

x ಮತ್ತು y ಗಳಿಗೆ ಯಾವುದೇ ಬೆಲೆಗಳನ್ನು ಕೊಡಬಹುದು. ಅವುಗಳಿಗೆ ನಿರ್ದಿಷ್ಟವಾದ ಬೆಲೆಗಳಿಲ್ಲ( ಏಕಂದರೆ ಎರಡನೇ ಸಮೀಕರಣ ಮೊದಲನೆಯದರ ಅರ್ಧದಷ್ಟಿದೆ)

ಸಮಸ್ಯೆ 4: ಬಿಡಿಸಿ: 2x+2y =4 ಮತ್ತು  x+y = 3

ಪರಿಹಾರ:

ದತ್ತ ಸಮೀಕರಣಗಳು:                                      2x+2y =4   ====è(1)

x+y = 3  =====è(2)

(2) ನ್ನು 2 ರಿಂದ ಗುಣಿಸಿದಾಗ,

2x+2y=6  =====è(3)

(3) ರಿಂದ (1) ನ್ನ ಕಳೆದಾಗ, 0 =2 ಇದು ನಿಜವಲ್ಲ.

ಆದ್ದರಿಂದ x ಮತ್ತು y ಗಳ ಯಾವ ಬೆಲೆಗಳೂ ಕೊಟ್ಟ ಸಮೀಕರಣಗಳನ್ನು ತೃಪ್ತಿಪಡಿಸುವುದಿಲ್ಲ.

ವ್ಯಾಖ್ಯೆ:ಎರಡು ಚರಾಕ್ಷರಗಳುಳ್ಳ ಎರಡು ರೇಖಾತ್ಮಕ ಸಮೀಕರಣಗಳನ್ನು ಒಟ್ಟಿಗೆ ತೆಗೆದುಕೊಂಡಾಗ, ಅವುಗಳನ್ನು “ಏಕಕಾಲಿಕ ರೇಖಾತ್ಮಕ ಸಮೀಕರಣಗಳು” (simultaneous linear equations) ಎನ್ನುತ್ತೇವೆ..

ಅವುಗಳು, a1 x+ b1 y = c1 ಮತ್ತು     a2 x+b2 = c2

ಇಲ್ಲಿ a1, b1, a2, b2, c1 ,c2 ಗಳು ಸ್ಥಿರಾಂಶಗಳು, x ಮತ್ತು y  ಗಳು ಚರಾಕ್ಷರಗಳು ( ಇವುಗಳ ಬೆಲೆಯನ್ನೇ ನಾವು ಕಂಡುಹಿಡಿಯಬೇಕಾದದ್ದು.)

ಹೀಗಿರುವ ಏಕಕಾಲಿಕ ರೇಖಾತ್ಮಕ ಸಮೀಕರಣಗಳನ್ನು ನಾವು ಹೇಗೆ ಬಿಡಿಸಿದ್ದೇವೆ?

ಸಹ ಅಪವರ್ತನಗಳನ್ನು ಸಮಗೊಳಿಸಿ,ಹೋಗಲಾಡಿಸುವ ಕ್ರಮ

ಅನುಸರಿಸಬೇಕಾದ ಹಂತಗಳು

  • ಚರಾಕ್ಷರಗಳ ಸಂಖ್ಯಾ ಸಹಅಪವರ್ತನಗಳನ್ನು ಸಮಗೊಳಿಸಲು, ಸಮೀಕರಣಗಳನ್ನು (ಒಂದು ಅಥವಾ ಎರಡೂ) ಸೂಕ್ತವಾದ ಸಂಖ್ಯೆಗಳಿಂದ ಗುಣಿಸಿ.
  • ಪದಗಳು ಸಮ ಸಂಖ್ಯಾ ಅಪವರ್ತನಗಳನ್ನು ಹೊಂದಿದ್ದು ವಿಜಾತಿಯ ಚಿಹ್ನೆಗಳನ್ನು ಪಡೆದಿದ್ದರೆ ಸಮೀಕರಣಗಳನ್ನು ಕೂಡಿಸಬೇಕು. ಸಜಾತಿಯ ಚಿಹ್ನೆಗಳನ್ನು ಹೊಂದಿದ್ದರೆ ಕಳೆಯಬೇಕು.
  • ಈ ರೀತಿ ಪಡೆದ ಸಮೀಕರಣವನ್ನು ಬಿಡಿಸಿ ಅದರಲ್ಲಿನ ಒಂದು ಚರಾಕ್ಷರದ ಬೆಲೆಯನ್ನು ಕಂಡುಹಿಡಿಯಬೇಕು.
  • ಸಿಕ್ಕಿದ ಚರಾಕ್ಷರದ ಬೆಲೆಯನ್ನು ಯಾವುದಾದರೊಂದು ಸಮೀಕರಣದಲ್ಲಿ ಆದೇಶಿಸಿ, ಇನ್ನೊಂದು ಬೆಲೆಯನ್ನು ಕಂಡುಹಿಡಿಯಬೇಕು.

ಗಮನಿಸಿ:

ಎಲ್ಲಾ ಸಂದರ್ಭಗಳಲ್ಲೂ ಏಕಕಾಲಿಕ ಸಮೀಕರಣ ಬಿಡಿಸಲು ಸಾಧ್ಯವಿಲ್ಲ.

1. a1 x+ b1 y = c1

2. a2 x+b2 = c2

1.      (a1 / a2) = (b1 / b2)   (c1 / c2) ಆದರೆ ಫಲಿತಾಂಶ ಇಲ್ಲ.

2.      (a1 / a2) = (b1 / b2) = (c1 / c2) ಆದರೆ ಅಸಂಖ್ಯಾತ ಪರಿಹಾರಗಳಿವೆ

3.      (a1 / a2 (b1 / b2)  ಆದಾಗ ಮಾತ್ರ ನಿರ್ದಿಷ್ಟ ಫಲಿತಾಂಶ ಪಡೆಯಲು ಸಾಧ್ಯ.

ಸಮಸ್ಯೆ 5:

ಬಿಡಿಸಿ: x+y =2xy   ------à(1)

x-y = 6xy  -----à(2)

ಪರಿಹಾರ:

ಎರಡೂ ಸಮೀಕರಣಗಳನ್ನು ಕೂಡಿಸಿ 2x = 8xy

ಅಂದರೆ  1 = 4y

y = 1/4

y ಯ ಬೆಲೆಯನ್ನು ಸಮೀಕರಣ (1) ರಲ್ಲಿ ಆದೇಶಿಸಿದಾಗ,

x+ 1/4 =  2x/4 = x/2

ಪಕ್ಷಾಂತರಿಸಿದಾಗ, x-x/2 = - 1/4

x = -1/2

ತಾಳೆ:

x,y ಬೆಲೆಗಳನ್ನು ಆದೇಶಿಸಿದಾಗ:

x+y =  -1/2+1/4 = -1/4

2xy =  2*(-1/2)*(1/4) = -1/4

x+y =2xy

x-y =  -1/2-1/4 = -3/4

6xy=  6*(-1/2)*(1/4) = -3/4

x-y = 6xy

ಸಮಸ್ಯೆ6:ಒಂದು ಪರೀಕ್ಷೆಯಲ್ಲಿ ಉತ್ತೀರ್ಣತೆಗೂ ಅನುತ್ತೀರ್ಣತೆಗೂ ಇರುವ ಅನುಪಾತ 4:1( ಉತ್ತೀರ್ಣರಾದವರು ಅನುತ್ತೀರ್ಣರಾದವರ 4 ಪಟ್ಟು). ಒಂದು ವೇಳೆ ಪರೀಕ್ಷೆಗೆ ಕುಳಿತವರಲ್ಲಿ 30 ವಿದ್ಯಾರ್ಥಿಗಳು ಪರೀಕ್ಷೆಗೆಹಾಜರಾಗದಿದ್ದಲ್ಲಿ, 20 ವಿದ್ಯಾರ್ಥಿಗಳು ಕಡಿಮೆ ಉತ್ತೀರ್ಣರಾಗುತ್ತಿದ್ದರು. ಆಗ ಆ ಅನುಪಾತ 5:1 ಆಗಿರುತ್ತಿತ್ತು. ( ಉತ್ತೀರ್ಣರಾದವರು ಅನುತ್ತೀರ್ಣರಾದವರ 5 ಪಟ್ಟು) ಹಾಗಾದರೆ ಪರೀಕ್ಷೆಗೆ ಹಾಜರಾದ ವಿದ್ಯಾಥಿಗಳ ಸಂಖ್ಯೆ ಕಂಡುಹಿಡಿ.

ಪರಿಹಾರ:

ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾಥಿಗಳು: x ಆಗಿರಲಿ.

ಅನುತ್ತೀರ್ಣರಾದ ವಿದ್ಯಾರ್ಥಿಗಳು y ಆಗಿರಲಿ.

x=4y      ------à(1)

ಪರೀಕ್ಷೆಗೆ ಕುಳಿತವರು = x+y

30 ಮಂದಿ ಕಡಿಮೆ ಹಾಜರಾದಾಗ, 20  ಮಂದಿ (x-20) ಕಡಿಮೆ ಉತ್ತೀರ್ಣರಾಗುತ್ತಿದ್ದರು. ಆಗ

1)   ಹಾಜರಾಗಲಿರುವ ಒಟ್ಟು ವಿದ್ಯಾರ್ಥಿಗಳು = x+y-30

2)   ಉತ್ತೀರ್ಣರಾಗಲಿರುವ ವಿದ್ಯಾರ್ಥಿಗಳು = (x+y-30) –(x-20)

= y-10

3)  ಉತ್ತೀರ್ಣತೆಗೂ ಅನುತ್ತೀರ್ಣತೆಗೂ ಇರುವ ಅನುಪಾತ 5:1 ಆಗುತ್ತಿತ್ತು.

(x-20) = 5(y-10)   -----à(2)

ಈಗ ನಮಗೆ ಎರಡು ಸಮೀಕರಣಗಳು ಸಿಕ್ಕಿದವು. : 1 ನೇ ಸಮೀಕರಣದ  x ನ ಬೆಲೆಯನ್ನು 2 ನೇ ಸಮೀಕರಣದಲ್ಲಿ ಆದೇಶಿಸಿದಾಗ

4y-20 = 5(y-10)   ---

= 5y-50

4y-20 -4y+20 = 5y-50-4y+20 (ಎರಡೂ ಬದಿಯಿಂದ 4y ನ್ನು ಕಳೆದು 20 ನ್ನು  ಕೂಡಿಸಿದಾಗ)

0= y-30

30=y

x=4*30( y  ನ ಬೆಲೆಯನ್ನು 1 ನೇ ಸಮೀಕರಣದಲ್ಲಿ ಆದೇಶಿಸಿದಾಗ)

=120

ತಾಳೆ:

ಉತ್ತೀರ್ಣರು: ಅನುತ್ತೀರ್ಣರು = 120:30 (ಇದು 4:1 ರ ಅನುಪಾತದಲ್ಲಿ ಇದೆ)

ಮೊದಲು ಪರೀಕ್ಷೆಗೆ ಕುಳಿತವರು = 120+30=150

30 ಮೊದಲು ಪರೀಕ್ಷೆಗೆ ಕುಳಿತವರು = 150-30 =120 ಮತ್ತು 20 ಮಂದಿ ಕಡಿಮೆ ಉತ್ತೀರ್ಣರಾಗುತ್ತಿದ್ದರು. ಆಗ

ಉತ್ತೀರ್ಣರು = 120-20 =100

ಅನುತ್ತೀರ್ಣರು = 120-100 = 20

ಉತ್ತೀರ್ಣರು: ಅನುತ್ತೀರ್ಣರು = 100:20 (ಇದು 5:1 ರ ಅನುಪಾತದಲ್ಲಿ ಇದೆ)

ಸಮಸ್ಯೆ7:ಎರಡು ಅಂಕಿ ಸಂಖ್ಯೆಯ ಬಿಡಿ ಆಂಕೆಗಳ ಮೊತ್ತ 9.  ಈ ಸಂಖ್ಯೆಯ 9 ರಷ್ಟು, ಬಿಡಿ ಆಂಕಿಗಳನ್ನು ಅದಲು ಬದಲು ಮಾಡಿದಾಗ ದೊರೆತ ಹೊಸ ಸಂಖ್ಯೆಯ ಎರಡರಷ್ಟಕ್ಕೆ ಸಮ ಇದ್ದರೆ ಅಂಕಿಗಳು ಯಾವುವು?

ಪರಿಹಾರ:

x ಅಂಕಿಯು ಹತ್ತರ ಸ್ಥಾನದಲ್ಲೂ y ಯು ಬಿಡಿ ಸ್ಥಾನದಲ್ಲೂ ಇರಲಿ. ಆಗ ಸಂಖ್ಯೆಯ (xy) ಬೆಲೆ 10x+y. ಇದರ ಸ್ಥಾನಗಳನ್ನು ಬದಲಿಸಿದಾಗ ದೊರೆಯುವ ಸಂಖ್ಯೆಯ (yx) ಬೆಲೆ 10y+x.

ದತ್ತಾಂಶದಂತೆ:

x+y = 9   (xy)

9(10x+y) =  2(10y+x)

ಅಭ್ಯಾಸ:

ಈ ಸಮೀಕರಣಗಳನ್ನು ಬಿಡಿಸಿ (x =1 and y=8). ಸಂಖ್ಯೆ 18 ಆಗಿರುತ್ತದೆ.

1+8 = 9

9*18 =2*81

ಸಮಸ್ಯೆ8:ನಿಮ್ಮ ತಾಯಿಯ ಜೊತೆಗೆ ನಿಮ್ಮ ಊರಿಗೆ ಹೋಗಬೇಕಾಗಿದೆ ಎಂದು ಭಾವಿಸಿರಿ, ನೀವು ವಿದ್ಯಾರ್ಥಿಯಾಗಿರುವುದರಿಂದ ನಿಮಗೆ ಟಿಕೇಟ್ ನ ಬೆಲೆಯಲ್ಲಿ 50% ಕಡಿತ ಇರುತ್ತದೆ, ಆದರೆ ಕಾದಿರಿಸುವ ಶುಲ್ಕ ದಲ್ಲಿ ರಿಯಾಯಿತಿಇರುವುದಿಲ್ಲ.  ಕಾದಿರಿಸುವ ಶುಲ್ಕ ಸೇರಿ ನಿಮ್ಮ ತಾಯಿಯ ಟಿಕೆಟ್ 2125 ರೂ ಇದ್ದು ನಿಮ್ಮಿಬ್ಬರ ಟಿಕೆಟ್ ಗೆ 3200 ರೂ ಆದರೆ, ಒಬ್ಬ ವಯಸ್ಕನ ಟಿಕೆಟ್ ನ ಬೆಲೆ ಮತ್ತು ಕಾದಿರಿಸುವ ಶುಲ್ಕ ಏಷ್ಟು?

ಪರಿಹಾರ:

x ಟಿಕೆಟ್ ನ ಬೆಲೆ ಮತ್ತು y ಕಾದಿರಿಸುವ ಶುಲ್ಕ ಇರಲಿ. ನೀವು ವಿದ್ಯಾರ್ಥಿ ಆಗಿರುವದರಿಂದ ನಿಮ್ಮ ಟಿಕೆಟ್ ನ ಬೆಲೆ (1/2)x

x+y = 2125    ----à(1)

ನೀವು ವಿದ್ಯಾರ್ಥಿ ಆಗಿರುವದರಿಂದ ನಿಮ್ಮ ಟಿಕೆಟ್ ನ ಬೆಲೆ (1/2)x . ಕಾದಿರಿಸುವ ಶುಲ್ಕದಲ್ಲಿ ವಿನಾಯಿತಿ ಇಲ್ಲದೇ ಇರುವುದರಿಂದ ಅದು ಇಬ್ಬರಿಗೂ y ಯೇ ಆಗಿರುತ್ತದೆ.

ನಿಮ್ಮಿಬ್ಬರ ಟಿಕೆಟ್ ನ ಬೆಲೆ = {(1/2)x+y} + (x +y) =3200

(3/2)x+2y =3200 = 3200

3x+4y =6400   ----à(2) (ಎರಡೂ ಕಡೆ ಗುಣಿಸಿದಾಗ)

ಸಮೀಕರಣಗಳನ್ನು  ಬಿಡಿಸಿದಾಗ x = 2100, y = 25 ಎಂದು ದೊರೆಯುತ್ತದೆ.

ತಾಳೆ:

2125 = 2100+25

3200 = 2100+25+1050+25

ಕಲಿತ  ಸಾರಾಂಶ

ಸಂ

ಕಲಿತ ಮುಖ್ಯಾಂಶಗಳು

1

( a1 x+ b1 y = c1, a2 x+b2 = c2) ಈ ರೀತಿಯ ಏಕಕಾಲಿಕಸಮೀಕರಣಗಳನ್ನು ಸರಳ ಸಮೀಕರಣಗಳಾಗಿ ಪರಿವರ್ತಿಸಿ, ಬಿಡಿಸುವುದು..

2

ಎಲ್ಲಾ ಏಕಕಾಲಿಕ ರೇಖಾತ್ಮಕ ಸಮೀಕರಣಗಳನ್ನು ಬಿಡಿಸಲು ಸಾಧ್ಯವಿಲ್ಲ

ಹೆಚ್ಚಿನ ಮಾಹಿತಿ

ಪರ್ಯಾಯ ವಿಧಾನ (Alternate method): ಆದೇಶದಿಂದ ಹೋಗಲಾಡಿಸುವುದು (Method of elimination by substitution)

ಏಕಕಾಲಿಕ ರೇಖಾತ್ಮಕ ಸಮಿಕರಣಗಳನ್ನು ಇನ್ನೊಂದು ವಿಧಾನದಿಂದಲ್ಲೂ ಬಿಡಿಸಬಹುದು:

  • ಯಾವುದಾದರೊಂದು ಸಮಿಕರಣದಲ್ಲಿ ಒಂದು ಚರಾಕ್ಷರದ ಬೆಲೆಯನ್ನು (y) ಇನ್ನೊಂದು ಚರಾಕ್ಷರದ (x) ರೂಪದಲ್ಲಿ ಬರೆಯಿರಿ.
  • ಮೇಲಿನ ಹಂತದಲ್ಲಿ  ಪಡೆದ (y) ಯ ಬೆಲೆಯನ್ನು ಇನ್ನೊಂದು ಸಮಿಕರಣದಲ್ಲಿ ಆದೇಶಿಸಿ,(x) ನ ಬೆಲೆ ಕಂಡುಹಿಡಿಯಿರಿ..
  • (x) ನ ಬೆಲೆಯನ್ನು ಯಾವುದಾದರೊಂದು ಸಮಿಕರಣದಲ್ಲಿ ಆದೇಶಿಸಿ,(y) ಯ ಬೆಲೆ ಕಂಡುಹಿಡಿಯಿರಿ.

ಈಗ 2.14.2   ಸಮಸ್ಯೆಯನ್ನು ಈ ವಿಧಾನದಲ್ಲಿ ಬಿಡಿಸುವಾ.

ಬಿಡಿಸಿ:

5y+10x =240     ----(1)

5y -5X =   90     ----(2)

5y= 5x + 90 (ಸಮೀಕರಣ 2 ರಲ್ಲಿ 5xನ್ನ ಪಕ್ಷಾಂತರಿಸಿದೆ)

5 ರಿಂದ ಭಾಗಿಸಿ y = x+18

y ಯ ಬೆಲೆಯನ್ನು ಸಮೀಕರಣ 1 ರಲ್ಲಿ ಆದೇಶಿಸಿ,

5y +10x =240

5(x+18)+10x=240

5x+90+10x=240

15x= 240-90

=150

ಅಂದರೆ 150 = 15x

x = 10

x ನ ಬೆಲೆಯನ್ನು 1ರಲ್ಲಿ ಆದೇಶಿಸಿ,

5y+10*10 = 240

ಅಂದರೆ 5y = 240-100=140

y = 28

ಈ ಬೆಲೆಗಳು ಉದಾ.2.14.2 ರಲ್ಲಿ ಕೂಡಾ ದೊರೆತಿವೆ.

ಬೈಜಿಕ ಸಂರಚನೆ

ನಾವೀಗಾಗಲೇ ಸಂಖ್ಯೆಗಳ ಮೇಲೆ ಸಂಕಲನ, ವ್ಯವಕಲನ, ಗುಣಾಕಾರ ಮತ್ತು ಭಾಗಾಕಾರ ಕ್ರಿಯೆಗಳನ್ನು ಮಾಡಿದ್ದೇವೆ. ಈ ಕ್ರಿಯೆಗಳನ್ನು ಗಣಿತದ ಮೂಲ ಕ್ರಿಯೆಗಳು ಎನ್ನುತ್ತೇವೆ.

ಇವುಗಳನ್ನು ಆಧರಿಸಿ, ಇನ್ನೂ ಬೇರೆ ಕ್ರಿಯೆಗಳನ್ನು ಮಾಡಲು ಸಾಧ್ಯವೆ? ಹೌದು, ಕೆಲವು ಕ್ರಿಯೆಗಳಿವೆ:-

  • ಎರಡು ಸಂಖ್ಯೆಗಳ ಮೊತ್ತವನ್ನು 2ರಿಂದ ಭಾಗಿಸುವುದು: {(a+b)/2} – ಸರಾಸರಿ
  • ಒಂದು ಸಂಖ್ಯೆಯನ್ನು ಇನ್ನೊಂದು ಸಂಖ್ಯೆಯ ಘಾತಕ್ಕೆ ಏರಿಸುವುದು

ಸಂಖ್ಯೆಗಳ ಲಕ್ಷಣಗಳನ್ನು ಬರೆಯುವಾಗ ಉಪಯೋಗಿಸುವ ಕೆಲವು ಸಂಕೇತಗಳು:-

ಅರ್ಥ

ಸಂಕೇತ

ಸೇರಿದೆ

ಸೇರಿಲ್ಲ

ಎಲ್ಲಾ(ಪ್ರತಿಯೊಂದೂ)

ಅಸ್ತಿತ್ವವಿದೆ

ಹೀಗಾಗುವಂತೆ

:

ಸ್ವಾಭಾವಿಕ ಸಂಖ್ಯೆಗಳ ಗಣ N = {1,2,3,4 …} =  { n: n  ಸ್ವಾಭಾವಿಕ ಸಂಖ್ಯೆಗಳು }

ಪೂರ್ಣ ಸಂಖ್ಯೆಗಳ ಗಣ W = {0,1,2,3,….} = {n: n =0, ಮತ್ತು  n {N}}

ಉದಾಹರಣೆ 1:

S = {2, 4, 8, 16….} = { 2 ರ ಘಾತ ಸಂಖ್ಯೆಗಳು 2} = {2m ; ಇಲ್ಲಿ m ಎಂಬುದು ಒಂದು ಸ್ವಾಭಾವಿಕ ಸಂಖ್ಯೆ ಹಾಗೂ m >1}

ಈಗ ನಾವು ಈ ಗಣದ ಗಣಾಂಶಗಳಲ್ಲಿ ಸಂಕಲನ, ಗುಣಾಕಾರ, ಘಾತ ಕ್ರಿಯೆಗಳನ್ನು ಮಾಡುವಾ. ಈ ಕೆಳಗಿನ ಅಂಶಗಳನ್ನು ನಾವು ಗಮನಿಸುತ್ತೇವೆ.

1.      S ಗಣದಲ್ಲಿರುವ ಯಾವುದೇ ಎರಡು ಸಂಖ್ಯೆಗಳನ್ನು ಕೂಡಿಸಿದಾಗ ಆ ಮೊತ್ತವು S ಗಣದಲ್ಲಿಲ್ಲ. (ಉದಾ; 6(=2+4),10(=2+8),12(=4+8) ಇವೆಲ್ಲ S ಗಣದಲ್ಲಿಲ್ಲ.)

2.      S ನಲ್ಲಿರುವ ಯಾವುದೇ 2 ಸಂಖ್ಯೆಗಳ ಗುಣಲಬ್ಧವೂ ಕೂಡಾ S ಗಣದ ಗಣಾಂಶವೇ ಆಗಿದೆ. ಏಕೆ?

( 2m ಮತ್ತು 2n ಇವೆರಡು S ನಲ್ಲಿರುವ ಗಣಾಂಶಗಳಾದರೆ ಗುಣಲಬ್ಧ (2m )*(2n) = 2m+n ಇದು S ಗಣದ ಒಂದು ಗಣಾಂಶವೇ ಆಗಿದೆ.)

3.      2 ರ ಯಾವುದೇ ಘಾತದ ಸಂಖ್ಯೆಯು S ಗಣದ ಗಣಾಂಶವೇ ಆಗಿದೆ. ಏಕೆ?

(2m ಮತ್ತು 2n ಇವು S ಗಣದ ಗಣಾಂಶಗಳಾಗಿದ್ದರೆ, 2mz [=(2m )z ಇಲ್ಲಿ z =2n ಇದೂ ಕೂಡಾ S ಗಣದ ಗಣಾಂಶವೇ ಆಗಿರುತ್ತದೆ.)

ಫಲಿತಾಂಶ:

S ಗಣದಲ್ಲಿರುವ ಯಾವುದೇ ಗಣಾಂಶಗಳ ಸಂಕಲನದಿಂದ ಬರುವ ಮೊತ್ತವು S ಗಣದಲ್ಲಿಲ್ಲ. ಆದರೆ S ಗಣದ ಗಣಾಂಶಗಳ ಮೇಲೆ ಮಾಡಿದ ಗುಣಾಕಾರ ಮತ್ತು ಘಾತಾಂಕ ಕ್ರಿಯೆಗಳ S ಗಣದಲ್ಲಿ ಆವೃತ ಕ್ರಿಯೆಗಳಾಗಿವೆ.

ವ್ಯಾಖ್ಯೆ:

1. a, b  A ಆದಾಗ, a, b  ಗಳ ಮೇಲೆ ಮಾಡಿದ ಕ್ರಿಯೆಯ ಫಲಿತಾಂಶ   A ಆದರೆ, A ಯು ಆ ಕ್ರಿಯೆಗೆ ಸಂಬಂಧಪಟ್ಟಂತೆ ಆವೃತ ಗುಣ ಹೊಂದಿದೆ ಎನ್ನುತ್ತೇವೆ.

2. a, b  ಆದಾಗ ಮತ್ತು c = (a ಕ್ರಿಯೆ b) A ಆದರೆ ಆ ಕ್ರಿಯೆಯನ್ನು ದ್ವಿಮಾನ ಕ್ರಿಯೆ (Binary operation) ಎನ್ನುತ್ತೇವೆ. ರೂಢಿಯಲ್ಲಿ ಈ ಕ್ರಿಯೆಯನ್ನು ‘ ’ ದಿಂದ ಸೂಚಿಸುತ್ತೇವೆ ಮತ್ತು

a ಕ್ರಿಯೆ b ಯನ್ನು ಓದುವ ಕ್ರಮ  a ಸ್ಟಾರ್(ನಕ್ಷತ್ರ) b.

ಮೇಲಿನ ಉದಾಹರಣೆಯಲ್ಲಿ S ಗಣವು ಸಂಕಲನದಲ್ಲಿ ಆವೃತ ಗುಣವನ್ನು ಹೊಂದಿಲ್ಲ. ಆದ್ದರಿಂದ ಸಂಕಲನವು S ಗಣದಲ್ಲಿ ಒಂದು ಕ್ರಿಯೆ ಅಲ್ಲ.

ಆದರೆ ಗುಣಾಕಾರ ಮತ್ತು ಘಾತ ಕ್ರಿಯೆಗಳು ಆವೃತ ಗುಣವನ್ನು ತೃಪ್ತಿ ಪಡಿಸುತ್ತವೆ. ಆದ್ದರಿಂದ ಈ ಎರಡು ಕ್ರಿಯೆಗಳು S ಗಣದಲ್ಲಿ ಕ್ರಿಯೆಗಳು.

ಉದಾಹರಣೆಗಳು:

ಸಂ.

ಗಣ

ಕ್ರಿಯೆ: ನಕ್ಷತ್ರ ( )

ಅವಲೋಕನ

ಫಲಿತಾಂಶ

ಕಾರಣ

1

N = {1,2,3; ¸ ಸ್ವಾಭಾವಿಕ ಸಂಖ್ಯೆಗಳು }

ಮೊತ್ತ

,a,b N, a+b N

N ಗಣವು + ಕ್ರಿಯೆಯಲ್ಲಿ ಆವೃತ ಗುಣವನ್ನು ಹೊಂದಿದೆ.

2 ಸ್ವಾಭಾವಿಕ ಸಂಖ್ಯೆಗಳ ಮೊತ್ತ ಒಂದು ಸ್ವಾಭಾವಿಕ ಸಂಖ್ಯೆ.

2

N = {1,2,3; ¸ ಸ್ವಾಭಾವಿಕ ಸಂಖ್ಯೆಗಳು }

ಗುಣಲಬ್ಧ

,a,b  N, a* b N

N ಗಣವು * ಕ್ರಿಯೆಯಲ್ಲಿ ಆವೃತ ಗುಣವನ್ನು ಹೊಂದಿದೆ.

2  ಸ್ವಾಭಾವಿಕ ಸಂಖ್ಯೆಗಳ ಗುಣಲಬ್ಧ ಒಂದು ಸ್ವಾಭಾವಿಕ ಸಂಖ್ಯೆಯೇ ಆಗಿದೆ.

3

A = {1,3,5 ಬೆಸ ಸಂಖ್ಯೆಗಳು }

ಮೊತ್ತ

,a,b N, a+b N

A ಯು  + ಕ್ರಿಯೆಯಲ್ಲಿ ಆವೃತ ಗುಣಹೊಂದಿಲ್ಲ.

2 ಬೆಸ ಸಂಖ್ಯೆಗಳ ಮೊತ್ತವು ಬೆಸ ಸಂಖ್ಯೆ ಅಲ್ಲ

(ಅದು ಸಮ ಸಂಖ್ಯೆ)

4

B = {1,3,5 ಬೆಸ ಸಂಖ್ಯೆಗಳು }

ಗುಣಲಬ್ಧ

,a,b  N, a*b N

B ಗಣವು * ಕ್ರಿಯೆಯಲ್ಲಿ ಆವೃತ ಗುಣವನ್ನು ಹೊಂದಿದೆ.

2  ಸ್ವಾಭಾವಿಕ ಸಂಖ್ಯೆಗಳ ಗುಣಲಬ್ಧ ಒಂದು ಸ್ವಾಭಾವಿಕ ಸಂಖ್ಯೆಯೇ ಆಗಿದೆ..

5

Z =(0,-1,1,2,-2:  ಪೂರ್ಣಾಂಕಗಳು)

ಸರಾಸರಿ

,a,b  Z, a b=(a+b)/2  Z

Z ಗಣವು ‘ಸರಾಸರಿ’ ಕ್ರಿಯೆಯಲ್ಲಿ ಆವೃತ ಗುಣ ಹೊಂದಿಲ್ಲ.

1 = (0+1)/2 ಇದು ಪೂರ್ಣಾಂಕವಲ್ಲ.

 

6

Q = (p/q, ಇಲ್ಲಿ p,q  Z, q  0)

 

ಭಾಗಾಕಾರ

,a,b  Q, a/b Q

Q ಗಣವು / ಕ್ರಿಯೆಯಲ್ಲಿ ಆವೃತ ಗುಣಹೊಂದಿಲ್ಲ.

ಭಾಗಲಬ್ಧ ಸಂಖ್ಯೆಗಳನ್ನು 0 ಯಿಂದ ಭಾಗಿಸಿದಾಗ ಭಾಗಲಬ್ಧವು ಅಸ್ತಿತ್ವದಲ್ಲಿಲ್ಲ.  0 Q ಆದರೂ 1/0  Q)

ಆವೃತ ಗುಣಕ್ಕೂ ದ್ವಿಮಾನ ಕ್ರಿಯೆಗೂ ಇರುವ ಸಂಬಂಧ

ಯಾವುದೇ ಗಣವು ಒಂದು ಕ್ರಿಯೆಯಲ್ಲಿ ಆವೃತ ಗುಣವನ್ನು ತೃಪ್ತಿ ಪಡಿಸಿದರೆ. ಆ ಕ್ರಿಯೆಯು ಒಂದು ದ್ವಿಮಾನ ಕ್ರಿಯೆ. ವಿಲೋಮವಾಗಿ, ಒಂದು ಗಣದಲ್ಲಿ ಒಂದು ಕ್ರಿಯೆಯು ದ್ವಿಮಾನ ಕ್ರಿಯೆಯಾಗಿದ್ದರೆ, ಆ ಗಣವು ಆ ಕ್ರಿಯೆಯಲ್ಲಿ ಆವೃತ ಗುಣ ಹೊಂದಿರುತ್ತದೆ.

ವ್ಯಾಖ್ಯೆ:

ಒಂದು ಶೂನ್ಯವಲ್ಲದ ಗಣವು ಒಂದು ದ್ವಿಮಾನ ಕ್ರಿಯೆಯನ್ನು ಹೊಂದಿದ್ದರೆ, ಅದನ್ನು ಒಂದು ಬೈಜಿಕ ಸಂರಚನೆ (algebraic structure) ಎಂದು ಕರೆಯುತ್ತಾರೆ. ಅದನ್ನು ಸಾಮಾನ್ಯವಾಗಿ (S,*) ಸಂಕೇತದಿಂದ ಸೂಚಿಸುತ್ತಾರೆ.

ಮೇಲಿನ ಉದಾಹರಣೆಗಳಲ್ಲಿ (N,+),(N,*),(B,*) ಇವೆಲ್ಲವೂ ಬೈಜಿಕ ಸಂರಚನೆಗಳು (A,+),(Z, ಸರಾಸರಿ), (Q,/) ಇವು ಬೈಜಿಕ ಸಂರಚನೆಗಳಲ್ಲ..

ಬಹುಪದಗಳ ಭಾಗಾಕಾರ

ಯಾವುದೇ ಸಂಖ್ಯೆಗೆ: ಭಾಜ್ಯ = (ಭಾಗಲಬ್ಧ*ಭಾಜಕ) + ಶೇಷ.

ಈ ಮೇಲಿನ ಸಂಬಂಧ ಬಹುಪದಗಳಿಗೂ ಅನ್ವಯಿಸುತ್ತದೆ.

ಏಕಪದವನ್ನು ಏಕಪದದಿಂದ ಭಾಗಿಸುವುದು

ಸಮಸ್ಯೆ 1: 12m3 ನ್ನು 4 m2 n ನಿಂದ ಭಾಗಿಸಿ.

ಪರಿಹಾರ:

ಹಂತ 1: 12m3 n5 / 4 m2 n =  (12/4)* (m3 n5 /m2 n)

ಹಂತ 2: 12/4 =   3,

ಹಂತ 3:

m3 n5/ m2 n = m3-2 n5-1 = m n4

12m3 n5 /4 m2 n = 3 m n4

ತಾಳೆ:

(ಭಾಗಲಬ್ಧ*ಭಾಜಕ) + ಶೇಷ = 4 m2 n*3 m n4 +0 =12 m2+1 n1+4 =12m3 n5 - ಭಾಜ್ಯ

ಸಮಸ್ಯೆ 2 : 57x2y2z2 ನ್ನು 19xyz ನಿಂದ ಭಾಗಿಸಿ.

ಹಂತ 1 :

57x2y2z2 /19xyz  = (57/19) * (x2y2z2)/xyz

ಹಂತ 2:

57/19 =3

ಹಂತ 3:

x2y2z2/xyz = x2-1y2-1z2-1 = xyz

57x2y2z2 /19xyz  = (57/19) * (x2y2z2)/xyz  =3xyz

ತಾಳೆ:

(ಭಾಗಲಬ್ಧ*ಭಾಜಕ) + ಶೇಷ = (3xyz * 19xyz) +0 = (3*19)*xyz*xyz +0=   57x1+1y1+1z1+1+0=57x2y2z2 - ಭಾಜ್ಯ

ಈ ಮೇಲಿನ ಸಮಸ್ಯೆಯಲ್ಲಿ ಗಮನಿಸಬೇಕಾದ ಅಂಶಗಳು:

3  ಎನ್ನುವುದು 57/19 ಅಂದರೆ ಏಕ ಪದಗಳ ಸಹಗುಣಕಗಳ ಭಾಗಲಬ್ಧ.

ಅದೇರೀತಿ xyz ಎಂಬುದು ಚರಾಕ್ಷರಗಳ ಭಾಗಲಬ್ಧ..

ಏಕಪದವನ್ನು ಏಕಪದದಿಂದ ಭಾಗಿಸುವಾಗ ಅನುಸರಿಸುವ ಹಂತಗಳು

ಭಾಗಲಬ್ಧವು ಎರಡು ಭಾಗಗಳನ್ನು ಹೊಂದಿದೆ - ಸಂಖ್ಯಾ ಸಹಗುಣಕ ಮತ್ತು ಚರಾಕ್ಷರಗಳು. ಇದನ್ನು ಪಡೆಯುವುದು ಹೇಗೆ?

  • ಎರಡು ಏಕಪದಗಳ ಭಾಗಲಬ್ಧದ ಸಹಗುಣಕವು ಆ ಎರಡು ಏಕಪದಗಳ ಸಂಖ್ಯಾ ಸಹಗುಣಕಗಳ ಭಾಗಲಬ್ಧಕ್ಕೆ ಸಮ.
  • ಎರಡು ಏಕಪದಗಳ ಭಾಗಲಬ್ಧದ ಚರಾಕ್ಷರ ಭಾಗವು ಆ ಎರಡು ಏಕಪದಗಳ ಚರಾಕ್ಷರಗಳ ಭಾಗಲಬ್ಧವೇ ಆಗಿರುತ್ತದೆ.

ಬಹುಪದವನ್ನು ಏಕಪದದಿಂದ ಭಾಗಿಸುವುದು

ಸಮಸ 1: 4023m2n2-6032m2n -8042m3 ಈ ಬೀಜೋಕ್ತಿಯನ್ನು (-2012m2) ದಿಂದ ಭಾಗಿಸಿ.

ಪರಿಹಾರ:

4023= (2x201)3= (2)3x(201)3, 6032 = (3x201)2 = (3)2x(201)2, 8042 = (4x201)2 = (4)2x(201)2

[4023m2n2-6032m2n -8042m3 n4]/(-2012m2)

=[(2)3*(201)3 m2n2-(3)2*(201)2 m2n -(4)2*(201)2m3 n4]/(-2012m2)

= -[ (2)3*(201) n2-(3)2* n -(4)2*m1 n4] = - (8*201* n2-9n -16mn4)

ತಾಳೆ:

ಭಾಜಕ* ಭಾಗಲಬ್ಧ + ಶೇಷ = (-2012m2)*[-(8*201* n2+9n +16mn4)]+0

= +(2012m2)*(8*201* n2 -2012m2*9n -2012m2*16mn4) +0

= 8*2013m2 n2 -9*2012m2+2n-16*2012m2+1n4)

= 23* 2013m2 n2 - 32 *2012m4n-42*2012 m3 n4

= (2*201)3m2n2-(3*201)2 m2n –(4*201)2 m3 n4

= 4023 m2n2 - 6032 m2n - 8042 m3 n4

= ಭಾಜ್ಯ.

ಸಮಸ್ಯೆ 2 : 2a4 b3+ 8a2 b2 ವನ್ನು 2ab ಯಿಂದ ಭಾಗಿಸಿ.

ಪರಿಹಾರ:

(2a4 b3+ 8a2 b2)/2ab = (2a4 b3/2ab) + (8a2 b2 / 2ab) = a3 b2 +4a b

ತಾಳೆ:

ಭಾಜಕ* ಭಾಗಲಬ್ಧ + ಶೇಷ = 2ab*(a3 b2 +4a b) +0= 2a4 b3+ 8a2 b2 = ಭಾಜ್ಯ

ಬಹುಪದವನ್ನು ಏಕಪದದಿಂದ ಭಾಗಿಸುವಾಗ ಅನುಸರಿಸುವ ಹಂತಗಳು

  • ಬಹುಪದದ ಪ್ರತೀ ಪದವನ್ನು ಏಕಪದದಿಂದ ಭಾಗಿಸಿ.
  • ಈ ರೀತಿ ಪಡೆದ ಭಾಗಲಬ್ಧಗಳನ್ನು ಒಟ್ಟಿಗೆ ಸೇರಿಸಿ.(ಸೂಕ್ತ ಚಿಹ್ನೆಯಿಂದ).

ಬಹುಪದವನ್ನು ದ್ವಿಪದದಿಂದ ಭಾಗಿಸುವುದು

ಸಮಸ್ಯೆ 1: ಮೊತ್ತ ಮೊದಲಿಗೆ 7+x3-6x (ತ್ರಿಪದ)ವನ್ನ ಒಂದು ದ್ವಿಪದ x+1 ರಿಂದ ಭಾಗಿಸುವಾ.

ಪರಿಹಾರ:

ಭಾಜ್ಯವು 3ನೇ ಘಾತದ ಬೀಜೋಕ್ತಿ, ಭಾಜಕವು 1ನೇ ಘಾತದ ದ್ವಿಪದ.

ಹಂತ

ವಿಧಾನ

 

1

ಭಾಜ್ಯ ಮತ್ತು ಭಾಜಕಗಳನ್ನು ಅವುಗಳ ಘಾತ ಸೂಚಿಯ ಇಳಿಕೆಯ ಕ್ರಮದಲ್ಲಿ ಬರೆಯಿರಿ.

2

ಯಾವುದೇ ಘಾತದ ಬೀಜ ಪದ ಇಲ್ಲದಿದ್ದರೆ ಸಹಗುಣಕ ‘0’ ಹಾಕಿ, ಬರೆಯಿರಿ

x3 -6x+7  ನ್ನು (x3 +0x2-6x+7) ಎಂದು ಬರೆಯಿರಿ.

3

ಭಾಜ್ಯದ ಮೊದಲ ಪದವನ್ನು ಭಾಜಕದ ಮೊದಲ ಪದದಿಂದ ಭಾಗಿಸಿ ( x3/x = x2). ಆದ್ದರಿಂದ

x2 ವು ಭಾಗಲಬ್ಧ ಮೊದಲನೇ ಪದ ಇದನ್ನು ಮೇಲ್ತುದಿಯಲ್ಲಿ ಬರೆಯಿರಿ.

4

ಭಾಜಕವನ್ನು ಭಾಗಲಬ್ಧ ಮೊದಲ ಪದ (x2) ರಿಂದ ಗುಣಿಸಿ, ಭಾಜ್ಯದ ಕೆಳಗೆ ಬರೆಯಿರಿ (=x3+ x2)

5

ಹಂತ 4 ರಲ್ಲಿ ಬಂದ ಉತ್ತರವನ್ನು ಭಾಜ್ಯದಿಂದ ಕಳೆಯಿರಿ.( x3 +0x2 ) – (x3+ x2) =  - x2

6

ಭಾಜ್ಯದ ಮುಂದಿನ ಪದವನ್ನು ತೆಗೆದುಕೊಂಡು,(=-6x) ಹಂತ 5ರ ಉತ್ತರದ ಮುಂದೆ ಬರೆಯಿರಿ. ಆಗ

-x2 – 6x. ಇದು ಹೊಸ ಭಾಜ್ಯ.

7

ಹಂತ 3 ರಿಂದ 6 ರವರೆಗಿನದ್ದನ್ನು ಪುನರಾವರ್ತಿಸಿ, ಭಾಗಾಕಾರವನ್ನು ಮುಂದುವರಿಸಿ

8

ಶೇಷದ ಘಾತ ಸೂಚಿಯು ಭಾಜಕದ ಘಾತ ಸೂಚಿಗಿಂತ ಕಡಿಮೆಯಾದಾಗ ಭಾಗಾಕಾರ ಕ್ರಿಯೆ ನಿಲ್ಲಿಸಿ.

ತಾಳೆ:

ಭಾಜಕ* ಭಾಗಲಬ್ಧ + ಶೇಷ = (x+1)* (x2-x-5)+12

= x*(x2-x-5) +1*(x2-x-5)+12

= (x3-x2-5x)+ (x2-x-5)+12 = x3-x2+ x2-5x-x -5+12

= x3-0x2-6x +7

= x3-6x +7 – ಇದು ದತ್ತ ಭಾಜ್ಯ.

ಸಮಸ್ಯೆ 2: x5 -9x2 +12x-14 ದಿಂದ x -3 ಭಾಗಿಸಿ.

ಪರಿಹಾರ:

ಭಾಜ್ಯವು ಘಾತಾಂಶದ ಇಳಿಕೆಯ ಕ್ರಮದಲ್ಲಿಯೇ ಇದೆ. ಆದರೆ ಬಹುಪದದಲ್ಲಿ ಇಲ್ಲದ x ನ ಘಾತಾಂಕಗಳನ್ನು ಸೊನ್ನೆ ಸಹಗುಣಕ ಸೇರಿಸಿ ಬರೆಯಬೇಕು.

xಭಾಜ್ಯ: x5 +0x4 +0x3-9x2 +12x-14.

ಭಾಜಕವು ಘಾತಾಂಕದ ಇಳಿಕೆಯ ಕ್ರಮದಲ್ಲಿಯೇ ಇದೆ.

- | x5 -3x4

- |3x4 +0x3

- |3x4 -9x3

- |9x3 -9x2

- |9x3 -27x2

- |18x2+12x

- |18x2 -54x

-|66x-14

-|66x-198

184

ತಾಳೆ:

ಭಾಗಲಬ್ಧವನ್ನು ಭಾಜ್ಯದಿಂದ ಗುಣಿಸಿ, ಶೇಷವನ್ನು ಕೂಡಿಸಿ ತಾಳೆ ನೋಡಬಹುದು. ಆದರೆ ಬೀಜೋಕ್ತಿಯು ತುಂಬಾ ದೊಡ್ಡದಿರುವುದರಿಂದ, ತಾಳೆ ನೋಡಲು ಬೇರೆ ವಿಧಾನ ಬಳಸುವಾ.

x=2 ಆದಾಗ ಫಲಿತಾಂಶವನ್ನು ನೋಡುವಾ.

x=2 ಆದಾಗ,

ಭಾಜಕ =x5 -9x2 +12x-14 = 25 -9*22 +12*2-14

= 32-36+24-14

= 6

ಭಾಜಕ = x-3 =2-3 = -1

ಭಾಗಲಬ್ಧ = 

= 24 +3*23 +9*22+18*2+66

= 16+24+36+66=178

ಈಗ,

ಭಾಗಲಬ್ಧ*ಭಾಜಕ + ಶೇಷ = 178*-1+184

= -178+184

= 6 - ದತ್ತ ಭಾಜ್ಯ

ಸಮಸ್ಯೆ 3: (6p3 -19p2 -8p) ಯನ್ನು (p2 -4p+2) ರಿಂದ ಭಾಗಿಸಿ.

ಪರಿಹಾರ:

6p+5

p2 -4p+2

( -) |6p3 -24p2 +12p --à ---- (1)      {= 6p*(p2 -4p+2)}

(=) |+5 p2 -20p --à -----(2)     {ಸಮೀಕರಣ (1) ನ್ನು ಭಾಜ್ಯದಿಂದ ಕಳೆಯಿರಿ}

( -) | 5p2 - 20p+10 --à -----(3)      {= 5*(p2 -4p+2)}

(=) -10           --à  ಶೇಷ         {ಸಮೀಕರಣ (3) ರಿಂದ (2)ನ್ನು ಕಳೆಯಿರಿ. }

ತಾಳೆ:

ಭಾಗಲಬ್ಧ*ಭಾಜಕ = (6p+5)* (p2 -4p+2)

= 6p* p2 +6p*-4p+6p*2+5* p2+5*-4p+5*2

= 6p3 -24p2+12p+5p2-20p+10

= 6p3 -19p2-8p+10

ಭಾಗಲಬ್ಧ*ಭಾಜಕ + ಶೇಷ = (6p3 -19p2-8p+10)-10

= 6p3 -19p2-8p - ದತ್ತ ಭಾಜ್ಯ

ಸಮಸ್ಯೆ 4: a5 +b5 ನ್ನು (a+b) ಯಿಂದ ಭಾಗಿಸಿ.

ಪರಿಹಾರ:

a+b

(-)  |a5+ a4b

(=) - a4b+0

(-) |a4b-a3b2

(=) a3b2+0

(-) | a3b2+ a2b3

(=) - a2b3+0

(-) |-a2b3-ab4

(=) ab4 + b5

(-) |ab4 + b5

(=) 0

ಅಭ್ಯಾಸ: ಭಾಜಕ*ಭಾಗಲಬ್ಧ+ಶೇಷ = ಭಾಜ್ಯ ಆಗುವುದೋ ಎಂದು ನೋಡಿ.

ಶೇಷ ಪ್ರಮೇಯ ಮತ್ತು ಅಪವರ್ತನ ಪ್ರಮೇಯ (Remainder & Factor Theorem):

ಸಮೀಕರಣದ ಮೂಲಗಳು/ಬಹುಪದೋಕ್ತಿಯ ಶೂನ್ಯತೆಗಳು

4023m2n2 - 6032m2n - 8042m3 n4 ಈ ಬಹುಪದೋಕ್ತಿಯನ್ನು ಗಮನಿಸಿ.

ಇಲ್ಲಿ ಬಹುಪದೋಕ್ತಿಯು m ಮತ್ತು  n ಎನ್ನುವ ಚರಾಂಶಗಳನ್ನು ಹೊಂದಿರುವುದರಿಂದ ಈ ಬಹುಪದೋಕ್ತಿಯನ್ನು f(m,n) ಎಂದು ಗುರುತಿಸಬಹುದು.

f(m,n) = 4023m2n2 - 6032m2n - 8042m3 n4

ಬಹುಪದೋಕ್ತಿ f(x), x ಚರಾಕ್ಷರವನ್ನು ಮಾತ್ರ ಹೊಂದಿದ್ದು  ಈ ಕೆಳಗಿನ ಬೀಜೋಕ್ತಿಯ ರೂಪದಲ್ಲಿ ಇರುತ್ತದೆ.

f(x) = anxn+ an-1xn-1+ an-2xn-2+ ………. a2x2+ a1x+ a0 = 0

ಇಲ್ಲಿ  a0,a1,a2,……… an-1,an ಗಳು  ಸ್ಥಿರಾಂಕಗಳು ಮತ್ತು  an 0

a0,a1,a2,……… an-1 ಮತ್ತು an ಗಳನ್ನು ಅನುಕ್ರಮವಾಗಿ  x0,x1,x2……. xn-1 ಮತ್ತು xn ಗಳ ‘ಸಹಗುಣಕ (co-efficients)’ ಮತ್ತು  n ನ್ನು ಬಹುಪದೋಕ್ತಿಯ  ‘ಮಹತ್ತಮ ಘಾತ(Degree)’ ಎನ್ನುತ್ತೇವೆ.

anxn, an-1xn-1,………. a2x2, a1x1, a0 ಗಳನ್ನು ಬಹುಪದೋಕ್ತಿಯ ‘ಪದಗಳು(Term)’ ಎನ್ನುತ್ತೇವೆ..

f(x) = x5 - 9x2 + 12x - 14 ಆಗಿರಲಿ

x = 0 ಎಂದು ಆದೇಶಿಸಿದಾಗ f(0) =  0 -9*0 +12*0 -14 = -14

x = 1 ಎಂದು ಆದೇಶಿಸಿದಾಗ f(1) =   1-9+12-14= -10

x = -1 ಎಂದು ಆದೇಶಿಸಿದಾಗ f(-1) =  -36

f(a) = a5 - 9a2 + 12a - 14

a ಯ ಯಾವುದೇ ಬೆಲೆಗೆ  (x=a), f(x) = 0 ಆದಾಗ  ‘a’ ಯನ್ನು ಸಮೀಕರಣ f(x)=0 ನ ಮೂಲ(root) ಎನ್ನುತ್ತೇವೆ.

ಬಹುಪದೋಕ್ತಿ f(x) ನಲ್ಲಿ   f(a)=0 ಆದಾಗ  ‘a’ ಯನ್ನು ಬಹುಪದೋಕ್ತಿಯ  'ಶೂನ್ಯ(zero)' ಎನ್ನುತ್ತೇವೆ.

ಭಾಗಾಕಾರದ ಕುರಿತು

ಭಾಜ್ಯ = ಭಾಜಕ*ಭಾಗಲಬ್ಧ + ಶೇಷ 

ವಾಸ್ತವಿಕ ಸಂಖ್ಯೆಗಳಿಗೆ ಹೇಗೆ ಮೇಲಿನ ಸಂಬಂಧ ಅನ್ವಯಿಸುವುದೋ ಅದೇ ರೀತಿ ಈ ಸಂಬಂಧ ಬಹುಪದೋಕ್ತಿಗೂ ಅನ್ವಯಿಸುತ್ತದೆ.

ಮೇಲಿನ ಸಂಬಂಧವನ್ನು ಯೂಕ್ಲಿಡ್ ನ ಬಹುಪದೋಕ್ತಿಯ ಮೇಲಿನ ಭಾಗಾಕಾರದ ಅನುಪ್ರಮೇಯ(Lemma) ಎನ್ನುತ್ತೇವೆ.

f(x)= g(x)*q(x)r(x) ---(1)

[ ಇಲ್ಲಿ  ಭಾಜಕ g(x) ವು ಭಾಜ್ಯ  f(x) ನ್ನು ಭಾಗಿಸಿದಾಗ  ಭಾಗಲಬ್ಧ q(x) ಮತ್ತು ಶೇಷ  r(x) ದೊರಕುತ್ತದೆ. ಗಮನಿಸಿ: g(x) 0 ಮತ್ತು r(x) =0  ಅಥವಾ ಅದರ  ಮಹತ್ತಮ ಘಾತ < g(x) ನ ಮಹತ್ತಮ ಘಾತ]

ಮೇಲಿನ (1) ರಲ್ಲಿ ಯಾವುದೇ ಮೂರು ಬಹುಪದೋಕ್ತಿಯನ್ನು ನೀಡಿದಾಗ ನಾಲ್ಕನೆಯ ಬಹುಪದೋಕ್ತಿಯನ್ನು ಈ ಕೆಳಗಿನಂತೆ ಕಂಡುಹಿಡಿಯಬಹುದು.

f(x), q(x) ಮತ್ತು r(x) ನೀಡಿದಾಗ g(x)= {f(x)-r(x)}/q(x)

f(x), g(x) ಮತ್ತು q(x) ನೀಡಿದಾಗ r(x)=   f(x)-{ g(x) *q(x)}

ಭಾಗಾಕಾರ ಮಾಡದೇ, ಬಹುಪದೋಕ್ತಿಯನ್ನು ಭಾಗಿಸಿದಾಗ  ಭಾಗಲಬ್ಧ ಮತ್ತು ಶೇಷವನ್ನು ಕಂಡುಹಿಡಿಯಲು ಸಾಧ್ಯವೇ?

2.11 ಸಮಸ್ಯೆ 1: f(x) = x3+4x2-6x+2 ನ್ನು  g(x)= (x-3) ರಿಂದ ಭಾಗಿಸಿದಾಗ ಭಾಗಲಬ್ಧ ಮತ್ತು ಶೇಷ ಕಂಡು ಹಿಡಿ

ಪರಿಹಾರ:

f(x)= g(x)*q(x)r(x) ಆದಾಗ r(x) ನ ಮಹತ್ತಮ ಘಾತ < g(x) ನ ಮಹತ್ತಮ ಘಾತ ಎಂದು ತಿಳಿದಿದೆ. ಆದುದರಿಂದ  g(x) ನ ಮಹತ್ತಮ ಘಾತ 0 ಆಗಿರಲೇಬೇಕು.  ಭಾಜ್ಯದ ಮಹತ್ತಮ ಘಾತ = 3 ಮತ್ತು ಭಾಜಕದ ಮಹತ್ತಮ ಘಾತ =1 ಆಗಿರುವುದರಿಂದ ಭಾಗಲಬ್ಧದ ಮಹತ್ತಮ ಘಾತ 2(=3-1) ಆಗಿರಲೇ ಬೇಕು.

r(x) = k  (ಸ್ಥಿರಾಂಕ) ಹಾಗೆಯೇ  a, b ಮತ್ತು c ನ ಯಾವುದೇ ಬೆಲೆಗೆ q(x) = ax2+bx+c ಆಗಿರಲಿ.

x3+4x2-6x+2 =(x-3)* (ax2+bx+c)+k= (ax3+bx2+cx)+(-3ax2-3bx-3c)+ k = ax3+x2(b-3a)+x(c-3b)+k-3c.

a=1;4=b-3a; -6=c-3b;2=k-3c (ಪದಗಳ ಸಹಗುಣಕಗಳನ್ನು ಸಮೀಕರಿಸಿದಾಗ)

a=1; b=4+3a; c=3b-6; k=2+3c

ಇನ್ನೂ ಸುಲಭೀಕರಿಸಿದಾಗ a=1, b=7, c=15 ಮತ್ತು k= 47

q(x) = ax2+bx+c

q(x) = x2+7x+15 ಮತ್ತು r(x) = 47

ತಾಳೆ:

x3+4x2-6x+2 = (x-3)* (x2+7x+15)+47 ಎಂದು ಪರೀಕ್ಷಿಸಿ.

ಒಂದು  ಬಹುಪದೋಕ್ತಿಯನ್ನು ಇನ್ನೊಂದು  ಬಹುಪದೋಕ್ತಿಯಿಂದ ನಿಶ್ಶೇಷವಾಗಿ ಭಾಗಿಸಲ್ಪಡುವಂತೆ ಬದಲಿಸಲು  ಸಾಧ್ಯವೇ?

f(x)= g(x)*q(x)r(x)

f(x) ನ್ನು  g(x) ನಿಶ್ಶೇಷವಾಗಿ ಭಾಗಿಸಬೇಕಾದರೆ r(x) ಶೂನ್ಯವಾಗಿರಲೇ ಬೇಕು.

  • ಮೊದಲು  f(x)  ನ್ನು  g(x) ನಿಂದ ಯಾವುದೇ ವಿಧಾನವನ್ನು ಅನುಸರಿಸಿ ಭಾಗಿಸಿ.( ಪಾಠ 2.10 ರಲ್ಲಿ ಕಲಿತ ದೀರ್ಘ ಭಾಗಾಕಾರ ವಿಧಾನ ಅಥವಾ   ಸಮಸ್ಯೆ 2.11.1 ಯನ್ನು ಬಿಡಿಸುವಲ್ಲಿ ಕಲಿತ ವಿಧಾನ).
  • ಆಗ  ಶೇಷ  r(x) ದೊರಕುತ್ತದೆ.
  • ಈ ಶೇಷವನ್ನು  f(x)  ನಿಂದ ಕಳೆಯಿರಿ. ಆಗ ದೊರಕುವ ಬೀಜೋಕ್ತಿಯು  g(x) ನಿಂದ ನಿಶ್ಶೇಷವಾಗಿ ಭಾಗಿಸಲ್ಪಡುತ್ತದೆ

ಸಮಸ್ಯೆ 2: x3+5x2+5x+8  ನಿಂದ ಎಷ್ಟನ್ನು ಕಳೆದರೆ ಅಥವಾ ಕೂಡಿಸಿದರೆ ಅದು x2+3x-2  ರಿಂದ  ನಿಶ್ಶೇಷವಾಗಿ ಭಾಗಿಸಲ್ಪಡುತ್ತದೆ?

ಪರಿಹಾರ:

x3+5x2+5x+8 ನ್ನು x2+3x-2 ರಿಂದ ಭಾಗಿಸಿದಾಗ  ನಮಗೆ ಸಿಗುವ ಶೇಷ:x+4

x3+5x2+5x+8 ನಿಶ್ಶೇಷವಾಗಿ ಭಾಗಿಸಲ್ಪಡಬೇಕಾದರೆ ಶೇಷ 0 ಆಗಿರಬೇಕಾಗಿರುವುದರಿಂದ  x3+5x2+5x+8 ರಿಂದ x+4 ನ್ನು ಕಳೆಯಬೇಕು.

ಉತ್ತರ = (x3+5x2+5x+8) – (x+4)= x3+5x2+5x+8-x-4 = x3+5x2+4x+4

ಅಧ್ಯಾಯ 2.10 ರಲ್ಲಿ ಕಲಿತಂತೆ ಭಾಗಾಕಾರ ಕ್ರಮದಲ್ಲಿ ಶೇಷವನ್ನು ಕಂಡುಹಿಡಿಯಲು ತುಂಬಾ ಸಮಯ ಬೇಕು. ಹಾಗಾದರೆ, ಶೇಷವನ್ನು ಮಾತ್ರ ಕಂಡುಹಿಡಿಯುವ ಸುಲಭ ದಾರಿ ಇದೆಯ?

ಅಧ್ಯಾಯ 2.10 ರಲ್ಲಿ  ಬಿಡಿಸಿದ ಸಮಸ್ಯೆಗಳನ್ನು ಪರಿಶೀಲಿಸಿದಾಗ ಕೆಲವೊಂದು ಅಂಶಗಳು ಕಂಡುಬರುತ್ತವೆ.

ರ ಸಮಸ್ಯೆಯನ್ನು ತಿರುಗಿ ಪರಿಶೀಲಿಸುವ: 7+x3-6x ನ್ನು  x+1 ರಿಂದ ಭಾಗಿಸಿ.

ಇಲ್ಲಿ ಭಾಜ್ಯವನ್ನು f(x)  {‘x’  ನ ಸತ್ಪನ್ನ (Function)}ಎಂದು ಕರೆಯುತ್ತೇವೆ.}

f(x) = 7+x3-6x

ಈಗ f(a) ಯ ಬೆಲೆಯನ್ನು ‘a’ ಯ ಬೇರೆಬೇರೆ ಬೆಲೆಗಳಿಗೆ (1, 2,0,-1,-2) ಕಂಡುಹಿಡಿಯುವಾ.

f(1) =  2, f(0) =7, f(-1) = 12, f(-2) = 11.

ಈಗ ನಾವೇನು ನೋಡುತ್ತೇವೆ? f(-1)=12 – ಇದೇ ಶೇಷ.

(x4-2x3+x-7) ನ್ನು    (x+2)  ರಿಂದ ಭಾಗಿಸುವ ಲೆಕ್ಕವನ್ನು ಪರಿಶೀಲಿಸುವಾ. (ಸಮಸ್ಯೆ 2.10.3.2)

f(x) = x4-2x3+x-7

f(x)  ನ ಬೆಲೆಯನ್ನು 'x' ನ  ಬೇರೆ ಬೇರೆ ಬೆಲೆಗಳಿಗೆ( 1, 2, 0,-1,-2) ಕಂಡು ಹಿಡಿಯುವಾ

f(1) =  -7, f(2)  =-5,  f(0)  =-7, f(-1) =-5,  f(-2)=23  ಯು ಶೇಷವಾಗಿರುತ್ತದೆ.

ಈಗ ಬೇರೆಬೇರೆ ಕೆಲವು ಭಾಜ್ಯ ಮತ್ತು ಭಾಜಕಗಳಿಗೆ ಶೇಷದ ತಃಖ್ತೆ ಮಾಡುವಾ.

ಭಾಜ್ಯ - f(x)

ಭಾಜಕ g(x)

ಶೇಷ r(x)

ಶೇಷ = ಸತ್ಪನ್ನದ ಬೆಲೆf(k)

x3-6x +7

x+1

12

f(-1)

x4-2x3+x-7

x+2

23

f(-2)

x+1

x+1

0

f(-1)

x-1

x-1

0

f(1)

x+a

x+a

0

f(-a)

x-a

x-a

0

f(a)

x2+4x+4

x+2

0

f(-2)

ಈ ಮೇಲಿನ ಅಂಶಗಳನ್ನು ಗಮನಿಸಿದಾಗ ನಾವು ಹೀಗೆ ಹೇಳಬಹುದು:

ಒಂದು ಬಹುಪದೋಕ್ತಿ f(x) ನ್ನು  (x+a) ರೂಪದ ಏಕಪದೋಕ್ತಿಯಿಂದ ಭಾಗಿಸಿದಾಗ ಬರುವ ಶೇಷವು f(-a) ಆಗಿರುತ್ತದೆ.

ಇದನ್ನು ಶೇಷ ಪ್ರಮೇಯ(Remainder Theorem) ಎನ್ನುತ್ತೇವೆ.

ಶೇಷ ಪ್ರಮೇಯದ  ಸಾಧನೆ

ಸಾಧನೆ:

ಒಂದು ಬಹುಪದೋಕ್ತಿ f(x) ಯನ್ನು (x+a)  ಯಿಂದ ಭಾಗಿಸಿದಾಗ ಶೇಷ f(-a) ಆಗಿರುತ್ತದೆ ಎನ್ನುವುದೇ  ಶೇಷ ಪ್ರಮೇಯ.

f(x)  ನ್ನು  (x+a) ಯಿಂದ ಭಾಗಿಸಿದಾಗ ಸಿಗುವ  q(x)  ಮತ್ತು   r(x)  ಗಳು  ಭಾಗಲಬ್ದ ಮತ್ತು ಶೇಷಗಳಾಗಿರಲಿ.

ಭಾಜ್ಯ = ಭಾಜಕ*ಭಾಗಲಬ್ಧ + ಶೇಷ

f(x) = q(x)*(x+a) + r(x)

ಗಮನಿಸಿ:

ಭಾಜಕ (=(x+a)) ದ ಮಹತ್ತಮ ಘಾತ :1.

ಶೇಷ  (= r(x)) ದ ಮಹತ್ತಮ ಘಾತ <  ಭಾಜಕದ ಮಹತ್ತಮ ಘಾತ.

ಅದುದರಿಂದ ಶೇಷದ ಮಹತ್ತಮ ಘಾತ  = 0 ಆಗಿರುತ್ತದೆ, ಅಂದರೆ ಶೇಷವು  x ಪದವನ್ನು ಹೊಂದಿರದೇ ಒಂದು ಸ್ಥಿರಾಂಕವಾಗಿರುತ್ತದೆ(= ‘r’)

f(x) = q(x)*(x+a)+r

ಮೇಲಿನ ಸಮೀಕರಣದಲ್ಲಿ   x = -a  ಎಂದು ಆದೇಶಿಸಿದಾಗ:

f(-a) = q(-a)*(-a+a)+r = q(-a)*0+r = r

ಅಂದರೆ ಪ್ರಮೇಯವನ್ನು ಸಾಧಿಸಿದಂತಾಯಿತು.

ಗಮನಿಸಿ: ಬಹುಪದೋಕ್ತಿ f(x),ನ್ನು (ax+b)  ರಿಂದ ಭಾಗಿಸಿದಾಗ ಶೇಷ  = f(-b/a) [  ax+b = (x+b/a) ]

ಅಪವರ್ತನ ಪ್ರಮೇಯ

f(-a) = 0  ಆದಾಗ  (x+a) ಯು  ಬಹುಪದೋಕ್ತಿ f(x) ನ ಅಪವರ್ತನವಾಗಿರುತ್ತದೆ.

ಸಾಧನೆ:

f(-a) = 0  ಆಗಿರಲಿ.

ಶೇಷ ಪ್ರಮೇಯದಂತೆ f(x) ನ್ನು  (x+a)   ಯಿಂದ ಭಾಗಿಸಿದಾಗ ಸಿಗುವ ಶೇಷ = f(-a). ಇದು 0 ಆಗಿರುವುದರಿಂದ (x+a) ಯು  f(x) ನ್ನು ನಿಶ್ಶೇಷವಾಗಿ ಭಾಗಿಸುತ್ತದೆ. ಅಂದರೆ (x+a) ಯು  ಬಹುಪದೋಕ್ತಿ f(x) ನ ಅಪವರ್ತನವಾಗಿರುತ್ತದೆ

ಸಮಸ್ಯೆ3: (x3+2x2-x+6) ನ್ನು (x-3) ರಿಂದ ಭಾಗಿಸಿದಾಗ ಬರುವ ಶೇಷವನ್ನು ಕಂಡುಹಿಡಿಯಿರಿ.

ಪರಿಹಾರ:

ಇಲ್ಲಿ f(x) = x3+2x2-x+6

ಭಾಜಕ = x-3

ಶೇಷ ಪ್ರಮೇಯದಂತೆ ಭಾಜಕವು (x+a) ಆಗಿದ್ದರೆ, ಶೇಷವು f(-a) ಆಗಿರುತ್ತದೆ.

ಭಾಜಕ (x+a) ಆದರೆ , f(-(-3) = f(3) ಶೇಷವಾಗಿರುತ್ತದೆ.

f(x) ನಲ್ಲಿ x ನ ಬದಲಾಗಿ 3 ನ್ನು ಆದೇಶಿಸಿದಾಗ,

f(3) = 27+ 18-3+6 = 48 ಶೇಷ

ಸಮಸ್ಯೆ4: (4x4+2x3-3x2+8x+5a) ಯ ಒಂದು ಅಪವರ್ತನ (x+2) ಆದರೆ, ‘a’ ಯ ಬೆಲೆ ಕಂಡುಹಿಡಿ.

ಪರಿಹಾರ:

(x+2) ಎಂಬುದು f(x) ನ ಅಪವರ್ತನವಾದ್ದರಿಂದ ಶೇಷವು ಸೊನ್ನೆ.  ಅಂದರೆ ಶೇಷ ಪ್ರಮೇಯದ ಪ್ರಕಾರ ಶೇಷ = f(-2)

ಆದರೆ f(-2) =0 (ದತ್ತ)

f(-2) = 4*16+2*(-8)-3*4 -16+5a

= 64-16-12-16+5a = 20 +5a

f(-2) =0 ಆಗಿರುವುದರಿಂದ  20+5a = 0 ಅಂದರೆ 5a = -20 ಅಂದರೆ a= -4

ತಾಳೆ:

a= -4 ಆಗಿರುವುದರಿಂದ, -4 ನ್ನು  f(x) ನಲ್ಲಿ ಆದೇಶಿಸಿದಾಗ

f(x) = 4x4+2x3-3x2+8x-20

f(-2)  = 4*16+2(-8)-3*4 -16 -20 = 64-16-12-16-20 = 0

x+2 ವು 4x4+2x3-3x2+8x-20 ನ ಅಪವರ್ತನ ಎಂದು ಸಮರ್ಥಿಸುತ್ತದೆ.

ಸಮಸ್ಯೆ 5: 3x3+7x ನ ಅಪವರ್ತನವು 7+3x ಆಗಿದೆಯೇ ಎಂದು ಪರೀಕ್ಷಿಸಿ.

ಪರಿಹಾರ:

f(x) = 3x3+7x

f(x) ನ ಅಪವರ್ತನವು 7+3x ಆಗಿದ್ದರೆ  ಅದರ ಅಪವರ್ತನ  3*(7/3+x) ಆಗಿರಲೇ ಬೇಕು.

( m 0, n 0   ಮತ್ತು y=mn  ಹಾಗೂ  y  f(x) ನ ಅಪವರ್ತನವಾಗಿದ್ದರೆ, m ಮತ್ತು n ಗಳೂ  ಕೂಡ  f(x  ನ ಅಪವರ್ತನವಾಗಿರುತ್ತವೆ.)

f(-7/3) = 3(-7/3)3 +7(-7/3) =  -343/9 -49/3  0

7+3x  ನೀಡಿದ ಬಹುಪದೋಕ್ತಿಯ  ಅಪವರ್ತನವಲ್ಲ.

ಗಮನಿಸಿ: 3x3+7x = x(3x2+7) ಆಗಿರುವುದರಿಂದ  7+3x  ಅದರ  ಅಪವರ್ತನವಲ್ಲ.

ಸಮಸ್ಯೆ 6: ಸಮೀಕರಣ x2-2x=0 ರ ಮೂಲಗಳು 0, 1, 2 ಆಗಿವೆಯೇ?

ಪರಿಹಾರ:

f(x) = x2-2x ಆಗಿರಲಿ.

f(0) = 02-2*0 = 0,

f(1) = 12-2 = -1

f(2) = 22-2*2 = 0

0 ಮತ್ತು 2 ಬಹುಪದೋಕ್ತಿಯ ಮೂಲಗಳು ಆದರೆ 1 ಅಲ್ಲ.

ಸಮಸ್ಯೆ 7: f(x) = x2+5x+p ಮತ್ತು q(x) = x2+3x+q ಸಾಮಾನ್ಯ ಅಪವರ್ತನವನ್ನು ಹೊಂದಿದೆ.

(i) ಸಾಮಾನ್ಯ ಅಪವರ್ತನ ಕಂಡು ಹಿಡಿ

(ii) (p-q)2= 2(3p-5q) ಎಂದು ತೋರಿಸಿ

ಪರಿಹಾರ:

f(x)  ನ ಮಹತ್ತಮ ಘಾತ  2 ಮತ್ತು ಅದು ಅಪವರ್ತನ ಹೊಂದಿರುವುದರಿಂದ, ಅಪವರ್ತನದ ಮಹತ್ತಮ ಘಾತ 1 ಆಗಿರಲೇ ಬೇಕು.

ಅಪವರ್ತನ  x-k ಆಗಿರಲಿ

f(k) = k2+5k+p = 0

x-k ಯು  q(x) ನ ಅಪವರ್ತನ ಆಗಿರುವುದರಿಂದ

q(k) = k2+3k+q = 0

k2+5k+p = k2+3k+q: ಸುಲಭೀಕರಿಸಿದಾಗ

k = (1/2)(q-p)

ಆದುದರಿಂದ ಸಾಮಾನ್ಯ ಅಪವರ್ತನ = x-k = x - (1/2)(q-p)

= x + (1/2)(p-q)

K ನ ಬೆಲೆಯನ್ನು f(x) ನಲ್ಲಿ ಆದೇಶಿಸಿದಾಗ

((q-p)/2)2+5(q-p)/2+p = 0

i.e. (p-q)2/4+5(q-p)/2+p = 0

i.e. (p-q)2+10(q-p)+4p = 0

i.e. (p-q)2 = 10p-10q-4p

= 6p-10q

= 2(3p-5q)

ಸಮಸ್ಯೆ 8: f(1/3) ಮತ್ತು f(3/2)=0 ಎಂದು ಕೊಟ್ಟಿರುವಾಗ  6x2-11x+3  ನ್ನು  ಅಪವರ್ತಿಸಿ

ಪರಿಹಾರ:

f(x) = 6x2-11x+3

(x-1/3) ಮತ್ತು (x-3/2) ಗಳು f(x) ನ ಅಪವರ್ತನಗಳು ಎಂದು ನೀಡಿದೆ.

(x-1/3)*(x-3/2)

= x2 - (1/3)x – (3/2)x + 3/6

= x2 - (11/6)x +3/6

= (6x2-11x+3)/6.

ಎರಡೂ ಬದಿಯನ್ನು  6 ರಿಂದ ಗುಣಿಸಿದಾಗ

f(x) = 6x2-11x+3 = 6(x-1/3)*(x-3/2)

ಸಮಸ್ಯೆ 9: x3 +2x2 - 5x – 6 ನ ಅಪವರ್ತನ (x+1)  ಆಗಿದ್ದು ಉಳಿದ ಅಪವರ್ತನವನ್ನು ಕಂಡುಹಿಡಿ.

ಸೂಚನೆ:

f(x) = x3 + 2x2- 5x - 6

f(-1) = -1+2+5-6 =0 ಆಗಿರುವುದರಿಂದ  f(x)  ನ ಅಪವರ್ತನ (x+1).

2.10 ರಲ್ಲಿ ಕಲಿತಂತೆ ದೀರ್ಘಭಾಗಾಕಾರದಂತೆ

f(x) = (x+1)(x2+x-6)

ಆದರೆ (x2+x-6)

= (x2+3x-2x-6)

= x(x+3)-2(x+3)

= (x+3)(x-2)

f(x) = (x+1)(x-2)(x+3)

ಸಮಸ್ಯೆ 10: ಒಂದು ವರ್ಗಬಹುಪದೋಕ್ತಿಯನ್ನು (x-1), (x+1) ಮತ್ತು (x-2) ಭಾಗಿಸಿದಾಗ ಶೇಷವು ಕ್ರಮವಾಗಿ 2,4 ಮತ್ತು 4 ಆಗಿದ್ದರೆ, ಆ ವರ್ಗಬಹುಪದೋಕ್ತಿಯನ್ನು ಕಂಡು ಹಿಡಿ.

ಪರಿಹಾರ:

f(x) = ax2+bx+c  ಆಗಿರಲಿ.

f(1)=2, f(-1)=4 ಮತ್ತು f(2)=4 ಎಂದು ನೀಡಿದೆ.

ಆದರೆ f(1) = a+b+c, f(-1) = a–b+c ಮತ್ತು f(2) = 4a+2b+c

  • a+b+c = 2
  • a-b+c = 4
  • 4a+2b+c = 4

 

ರಲ್ಲಿ ವಿವರಿಸಿದಂತೆ ಈ ಸಮೀಕರಣವನ್ನು ಬಿಡಿಸಿದಾಗ

a=1, b=-1 ಮತ್ತು c=2

ಆದುದರಿಂದ ವರ್ಗಬಹುಪದೋಕ್ತಿಯು x2-x+2.

ಸಮಸ್ಯೆ 11: px2+qx+6 ನ್ನು (2x+1) ರಿಂದ ಭಾಗಿಸಿದಾಗ ಶೇಷ 1 ಮತ್ತು  2qx2+6x+p ನ್ನು (3x-1) ರಿಂದ ಭಾಗಿಸಿದಾಗ ಶೇಷ 2 ಉಳಿದರೆ, p ಮತ್ತು q ಕಂಡು ಹಿಡಿ.

ಪರಿಹಾರ:

f(x) = px2+qx+6,  g(x) = 2qx2+6x+p  ಆಗಿರಲಿ.

f(x) ನ್ನು (2x+1) ರಿಂದ ಭಾಗಿಸಿದಾಗ ಶೇಷ = 1. ಆದುದರಿಂದ  f(-1/2) = 1

p/4 –q/2+6 = 1

i.e. p-2q = -20 (ಸುಲಭೀಕರಿಸಿದಾಗ)    ---à(1)

g(x) ನ್ನು (3x-1) ರಿಂದ ಭಾಗಿಸಿದಾಗ ಶೇಷ = 2. ಆದುದರಿಂದ  g(1/3) = 2

2q/9 + 6/3 +p = 2

i.e. 9p+2q = 0 (ಸುಲಭೀಕರಿಸಿದಾಗ)      ---à(2)

(1) ಮತ್ತು (2) ಬಿಡಿಸಿದಾಗ

p = -2 ಮತ್ತು q = 9

ಸಂಶ್ಲೇಷಿತ ಭಾಗಾಕಾರ

(x-a) ಭಾಜಕವು  ಆದಾಗ

ದೀರ್ಘಭಾಗಾಕಾರ ಕ್ರಮಕ್ಕಿಂತ ಸುಲಭವಾಗಿ ಈ ವಿಧಾನದಲ್ಲಿ ಶೇಷವನ್ನು ಕಂಡುಹಿಡಿಯಬಹುದು. ಒಂದು ಸಮಸ್ಯೆಯನ್ನು ಆಧರಿಸಿ ಈ ವಿಧಾನವನ್ನು ಕಲಿಯಬಹುದು. (2.10.3 ಸಮಸ್ಯೆ 2 ನೋಡಿ).

x5 -9x2 +12x-14 ನ್ನು (x -3) ರಿಂದ ಭಾಗಿಸಿ.

ಪರಿಹಾರ:

ಭಾಜ್ಯ x5 -9x2 +12x-14 ನ್ನು  ಘಾತಾಂಕದ ಇಳಿಕೆಯ ಕ್ರಮದಲ್ಲಿ ಬರೆದಾಗ  ಅದು: 1x50x40x3 - 9x212- 14.

ಇಲ್ಲಿ ಭಾಜಕದ ಸ್ಥಿರಾಂಕ  -3

  • ಮೊದಲು ’ಭಾಜಕ’ ದ ಕೆಳಗೆ ಭಾಜಕದ  ಋಣ ಸ್ಥಿರಾಂಕವನ್ನು ಮೊದಲ ಅಡ್ಡ ಸಾಲಿನ ಮೊದಲ ಕಂಬಸಾಲಿನಲ್ಲಿ ಬರೆಯಿರಿ.( ಈ ಲೆಕ್ಕದಲ್ಲಿ 3 ) ಮೊದಲ ಸಾಲಿನ ಮುಂದಿನ ಕಂಬಸಾಲುಗಳಲ್ಲಿ  ಭಾಜ್ಯದ ಸಹಗುಣಕಗಳನ್ನು(1, 0, 0, -9, 12, -14) ಬರೆಯಿರಿ.
  • ಭಾಜ್ಯದ ಮೊದಲ ಪದದ ಸಹಗುಣಕವನ್ನು 3 ನೇ ಅಡ್ಡ ಸಾಲಿನ ಸರಿಹೊಂದುವ(ಮೊದಲ) ಕಂಬಸಾಲಿನಲ್ಲಿ ಬರೆಯಿರಿ ( ಈ ಲೆಕ್ಕದಲ್ಲಿ 1 )
  • 3 ನೇ ಅಡ್ಡ ಸಾಲಿನ ಈ ಕಂಬಸಾಲಿನಿಂದ ಆರಂಭಿಸಿ ಭಾಜಕ( ಈ ಲೆಕ್ಕದಲ್ಲಿ 3 )  ಮತ್ತು ಈ ಕಂಬಸಾಲಿನಲ್ಲಿನ ( ಈ ಲೆಕ್ಕದಲ್ಲಿ 1 ) ಸಂಖ್ಯೆಯನ್ನು ಗುಣಿಸಿ, ಅದೇ 2 ನೇ ಅಡ್ಡಸಾಲಿನ ಮುಂದಿನ ಕಂಬಸಾಲಿನಲ್ಲಿ ಬರೆಯಿರಿ. ( ಈ ಲೆಕ್ಕದಲ್ಲಿ  3 ನೇ ಕಂಬಸಾಲಿನಲ್ಲಿ  3*1=3 ),
  • 3 ನೇ ಕಂಬಸಾಲಿನ ಕೆಳಗಿರುವ 1 ನೇ ಮತ್ತು 2 ನೇ ಆಡ್ಡಸಾಲಿನಲ್ಲಿನ ಸಂಖ್ಯೆಗಳ ಮೊತ್ತವನ್ನು  3  ನೇ ಅಡ್ಡಸಾಲಿನಲ್ಲಿ ಬರೆಯಿರಿ( ಈ ಲೆಕ್ಕದಲ್ಲಿ  0+3=3).
  • ಈ ಕ್ರಮವನ್ನು  ಕೊನೇ ಕಂಬಸಾಲಿನಲ್ಲಿ ಉತ್ತರ ಬರುವ ತನಕ ಮುಂದುವರಿಸಿ.
  • 3 ನೇ ಅಡ್ಡ ಸಾಲಿನ ಕೊನೇ ಕಂಬಸಾಲಿನಲ್ಲಿನ ಸಂಖ್ಯೆಯೇ  ಶೇಷವಾಗಿರುತ್ತದೆ
  • 3 ನೇ ಅಡ್ಡ ಸಾಲಿನ ಉಳಿದ ಕಂಬಸಾಲಿನಲ್ಲಿನ ಸಂಖ್ಯೆಗಳು ಭಾಗಲಬ್ಧದ ಸಹಗುಣಕಗಳು.

ಭಾಜಕ

ಭಾಜ್ಯಕ್ಕೆ ಸಂಬಂಧಿಸಿದ ಹಾಗೆ ಕಂಬ ಸಾಲುಗಳು(2 ರಿಂದ)

 

3

1

0

0

-9

12

-14

ಮೊದಲ ಅಡ್ಡ ಸಾಲು

 

3(=3*1)

9(= 3*3)

27(= 3*9)

54(= 3*18)

198(= 3*66)

2 ನೇ ಅಡ್ಡ ಸಾಲು

 

1

3=(0+3)

9(= 0+9)

18(=-9+27)

66(=12+54)

184(=-14+198)

3 ನೇ ಅಡ್ಡ ಸಾಲು

ಭಾಗಲಬ್ಧವು 1x4+3x3+9x2+18x+54  ಆಗಿದ್ದು ಶೇಷವು  184, ಆಗಿರುವುದನ್ನು ಗಮನಿಸಿ. ಇದೇ ಉತ್ತರ 2.10.3 ಸಮಸ್ಯೆ 2 ರಲ್ಲಿ ನಮಗೆ ದೊರಕಿತ್ತು.

ಮೂಲ : ಫ್ರೀ  ಗಣಿತ

ಕೊನೆಯ ಮಾರ್ಪಾಟು : 10/14/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate