ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಮಗು

ಅಂತರಾಷ್ಟ್ರೀಯ ಕಾನೂನಿನ ಪ್ರಕಾರ , ಮಗು ಎಂದರೆ ೧೮ ವರ್ಷದೊಳಗಿನ ಎಲ್ಲ ಮಾನವ ಜೀವಿಗಳು. ಇದು ಜಗತ್ತಿನಾದ್ಯಂತ ಒಪ್ಪಿತವಾದ ಮಗುವಿನ ನಿರೂಪಣೆ ಮತ್ತು ಇದು ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಸಮಾವೇಶದಲ್ಲಿ ಹೊರಹೊಮ್ಮಿದೆ.

ಮಗುವೆಂದರೆ ಯಾರು ?

ಅಂತರಾಷ್ಟ್ರೀಯ ಕಾನೂನಿನ ಪ್ರಕಾರ , ಮಗು ಎಂದರೆ  ೧೮ ವರ್ಷದೊಳಗಿನ ಎಲ್ಲ ಮಾನವ ಜೀವಿಗಳು.  ಇದು ಜಗತ್ತಿನಾದ್ಯಂತ ಒಪ್ಪಿತವಾದ  ಮಗುವಿನ ನಿರೂಪಣೆ ಮತ್ತು ಇದು ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಸಮಾವೇಶದಲ್ಲಿ .(UNCRC)   ಹೊರಹೊಮ್ಮಿದೆ. ಅಂತರಾಷ್ಟ್ರೀಯ ಕಾನೂನು ಸಾಧನ, ಬಹುತೇಕ ರಾಷ್ಟ್ರಗಳ ಒಪ್ಪಿಗೆ ಮತ್ತು  ಅನುಮೋದನೆ ಪಡೆದಿದೆ

ಭಾರತವು ೧೮ ವರ್ಷದೊಳಗಿನ   ವ್ಯಕ್ತಿಗಳ ಗುಂಪನ್ನು  ಸದಾ  ಕಾನೂನು ಸಮ್ಮತ  ವಿಭಿನ್ನ  ಘಟಕ ಎಂದು ಪರಿಗಣಿಸಿದೆ. ಅದಕ್ಕಾಗಿಯೇ ಅವರು  ಮತದಾನದ ಹಕ್ಕು ,ವಾಹನ ಚಾಲನಾ ಪರವಾನಿಗೆ   ಅಥವ ಕಾನೂನು ಸಮ್ಮತ  ಒಪ್ಪಂದ  ಮಾಡಿಕೊಳ್ಳಲು  ೧೮ ವರ್ಷ ಪೂರೈಸಿರಬೇಕು.  ಹುಡುಗಿಗೆ  ೧೮ ವರ್ಷ,  ಹುಡುಗನಿಗೆ ೨೧ ವರ್ಷ ಆಗದೆ ಇದ್ದರೆ ಬಾಲ್ಯವಿವಾಹ ಕಾಯಿದೆ೧೯೨೯ರ ಪ್ರಕಾರ ಮದುವೆಯಾಗುವ ಹಾಗಿಲ್ಲ. ಅದೂ ಅಲ್ಲದೆ ೧೯೯೨ ರಲ್ಲಿ UNCRC ಯನ್ನು  ಅನುಮೋದನೆ ಮಾಡಿದ ನಂತರ, ಭಾರತವು   ಬಾಲಾಪರಾಧ ನ್ಯಾಯಕ್ಕೆ  ಅನುಗುಣವಾಗಿ ಕಾಯಿದೆಯನ್ನು ಬದಲಾಯಿಸಿದೆ. ಇದರಿಂದ ೧೮  ವರ್ಷದೊಳಗಿನವರಿಗೆ ಅಗತ್ಯವಾದ  ರಕ್ಷಣೆ ಮತ್ತು ಆರೈಕೆಯನ್ನು ದೊರಕುವುದನ್ನು ಖಚಿತ ಪಡಿಸಿಕೊಳ್ಳಲು, ಮತ್ತು ಅದನ್ನು ರಾಜ್ಯದಿಂದ ಪಡೆಯಲು ಅವರಿಗೆ ಅರ್ಹತೆ ಇದೆ. ಆದರೆ ಇನ್ನೂ ಅನೇಕ ಕಾಯಿದೆಗಳು ಮಗುವನ್ನು ವಿಭಿನ್ನವಾಗಿ ಅರ್ಥೈಸಿವೆ. ಮತ್ತು ಅವೆಲ್ಲವನ್ನೂ UNCRC.ಗೆ ಅನುಗುಣವಾಗಿರುವಂತೆ ಮಾಡಬೇಕಿದೆ. ಆದರೆ , ಈ ಮೊದಲೇ ಹೇಳಿದಂತೆ ಕಾನೂನಿನ ಪ್ರಕಾರ ಪ್ರಾಪ್ತ  ವಯಸ್ಕರಾಗಲು ಗಂಡುಹುಡುಗರಿಗೆ ೨೧ ವರ್ಷ ಹೆಣ್ಣು ಹುಡುಗಿಯರಿಗೆ ೧೮ ವರ್ಷ ಅಗತ್ಯ.

ಇದರಂತೆ ೧೮ ವರ್ಷದ ಕೆಳಗಿನ ಗ್ರಾಮ / ಪಟ್ಟಣ / ನಗರದಲ್ಲಿನ ಎಲ್ಲ ವ್ಯಕ್ತಿಗಳನ್ನು ಮಕ್ಕಳೆಂದು ಪರಿಗಣಿಸಬೇಕು ಮತ್ತು ನಿಮ್ಮ ಸಹಾಯ ಮತ್ತು ಆಸರೆಯ ಅವರಿಗೆ  ಅಗತ್ಯ.

ಒಬ್ಬ ವ್ಯಕ್ತಿಯನ್ನು  ಮಗು ಎಂದು ಪರಿಗಣಿಸಲು ಅವನ ವಯಸ್ಸೇ ಅತಿ ಮುಖ್ಯ.  ಒಬ್ಬ ೧೮ ವರ್ಷದ ಒಳಗಿನ ವ್ಯಕ್ತಿಯು  ಮದುವೆಯಾಗಿ ಮಕ್ಕಳನ್ನು ಪಡೆದಿದ್ದರೂ ಕೂಡಾ ಅಂತರಾಷ್ಟ್ರೀಯ ಮಾಪನಕ್ಕೆ ಅನುಗುಣವಾಗಿ ಅವನನ್ನು ಮಗು ಎಂದೆ ಗುರುತಿಸಲಾಗುವುದು.

ಮುಖ್ಯ ಅಂಶಗಳು

 1. ೧೮ ವರ್ಷದೊಳಗಿನ ಎಲ್ಲ ವ್ಯಕ್ತಿಗಳು  ಮಕ್ಕಳೇ.
 2. ಬಾಲ್ಯವು ಎಲ್ಲ ವ್ಯಕ್ತಿಗಳೂ ಹಾದು ಹೋಗುವ ಒಂದು ಹಂತ.
 3. ಮಕ್ಕಳಿಗೆ ಬಾಲ್ಯದಲ್ಲಿ ವಿಭಿನ್ನವಾದ ಅನುಭವಗಳಾಗುತ್ತವೆ.
 4. ಎಲ್ಲ ಮಕ್ಕಳಿಗೂ ದುರ್ಬಳಕೆ ಮತ್ತು ಶೋಷಣೆಯ ವಿರುದ್ಧ ರಕ್ಷಣೆ ಬೇಕಾಗುತ್ತದೆ.
ಮಕ್ಕಳಿಗೆ ವಿಶೇಷ ಗಮನ ಏಕೆ ಬೇಕು?
 1. ಮಕ್ಕಳು ತಾವು ವಾಸಿಸುವಲ್ಲಿನ ಪರಿಸ್ಥಿತಿಯಿಂದ  ವಯಸ್ಕರಿಗಿಂತ ಹೆಚ್ಚಾಗಿ ಬೇಗ ಪರಿಣಾಮಕ್ಕೆ ಒಳಗಾಗುತ್ತಾರೆ.
 2. ಅದರಿಂದ ಸರಕಾರದ ಮತ್ತು ಸಮಾಜದ ಕ್ರಿಯೆ ಅಥವ  ನಿಷ್ಕ್ರಿಯೆಯಿಂದ ಬೇರೆ ವಯೋಮಾನದವರಿಗಿಂತ  ಅವರು  ಹೆಚ್ಚಿನ ಪರಿಣಾಮಕ್ಕೆ ಒಳಗಾಗುತ್ತಾರೆ.
 3. ನಮ್ಮದೂ ಸೇರಿದಂತೆ ಅನೇಕ ಸಮಾಜಗಳಲ್ಲಿ ಮಕ್ಕಳು ತಾಯಿತಂದೆಯರ ಆಸ್ತಿ ಎಂಬ ಭಾವನೆ ಇದೆ ಅಥವ ಅವರು ಇನ್ನೂ ವಯಸ್ಕರಾಗಬೆಕಾದವರು, ಇಲ್ಲವೆ  ಸಮಾಜಕ್ಕೆ ಸದ್ಯಕ್ಕೆ ಯಾವುದೇ ಕೊಡುಗೆ   ನೀಡಲಾಗದವರು ಎಂಬ ಭಾವನೆ ಇದೆ.
 4. ಮಕ್ಕಳೂ ಸಹಾ ಅವರದ್ದೆ ಆದ  ಮನಸ್ಸಿರುವ, ತಮ್ಮದೆ ಅಭಿಪ್ರಾಯವಿರುವ, ಆಯ್ಕೆಯ ಸಾಮರ್ಥ್ಯವಿರುವ, ತೀರ್ಮಾನ ತೆಗೆದು ಕೊಳ್ಳುವ ಶಕ್ತಿ ಇರುವ ವ್ಯಕ್ತಿಗಳೆಂದು  ಪರಿಗಣಿಸುವುದಿಲ್ಲ.
 5. ವಯಸ್ಕರು ಅವರಿಗೆ ಮಾರ್ಗದರ್ಶನ ಮಾಡುವ ಬದಲು, ಅವರ ಜೀವನವನ್ನೇ ನಿರ್ಧರಿಸುವರು.
 6. ಮಕ್ಕಳಿಗೆ ಮತದಾನ ಮಾಡುವ ಹಕ್ಕಿಲ್ಲ,ಅಥವ ರಾಜಕೀಯ ಪ್ರಭಾವ ಇಲ್ಲ, ಆರ್ಥಿಕ ಸ್ವಾತಂತ್ರ ಇಲ್ಲ.  ಅನೇಕ ಬಾರಿ  ಅವರ  ದನಿಯನ್ನು ಕೇಳುವವರೆ ಇರುವುದಿಲ್ಲ.

ಮೂಲ: ಪೋರ್ಟಲ್ ತಂಡ

2.92173913043
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top