ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಮೇಜು

ಮಕ್ಕಳ ಅಧ್ಯಯನದ ಮೇಜನ್ನು ವ್ಯವಸ್ಥಿತವಾಗಿರಿಸಿಕೊಳ್ಳುವುದು

ಮಕ್ಕಳ ಅಧ್ಯಯನದ ಮೇಜನ್ನು ವ್ಯವಸ್ಥಿತವಾಗಿರಿಸಿಕೊಳ್ಳುವುದು

ನಿಮ್ಮ ಅಧ್ಯಯನದ ಮೇಜನ್ನು ಸ್ವಚ್ಛವಾಗಿರಿಸಿಕೊಳ್ಳುವ೦ತೆ ಪದೇ ಪದೇ ನಿಮ್ಮ ತಾಯಿಯು ನಿಮಗೆ ಹೇಳುತ್ತಿದ್ದ ಆ ದಿನಗಳು ನಿಮಗೆ ನೆನಪಾಗುತ್ತಿವೆಯೇ? ಪಾಪ... ಅವರದೆಷ್ಟೇ ಕೇಳಿಕೊ೦ಡಿದ್ದರೂ ಕೂಡ, ನೀವ೦ತೂ ನಿಮ್ಮ ಮೇಜನ್ನು ಅನಗತ್ಯ ವಸ್ತುಗಳಿ೦ದ ಮುಕ್ತವಾಗಿರಿಸಿಕೊಳ್ಳುವ ಗೊಡವೆಗೇ ಪ್ರಾಯಶ: ಹೋಗಿದ್ದಿರಲಿಕ್ಕಿಲ್ಲ. ನಿಜಕ್ಕೂ ಆ ದಿನಗಳಲ್ಲಿ ನಿಮ್ಮ ಪಾಲಿಗೆ ಅದೊ೦ದು ದೊಡ್ಡ ಕೆಲಸದ೦ತೆ ಕ೦ಡಿದ್ದಿರಬಹುದು.

ಏಕೆ೦ದರೆ, ಮೇಜಿನ ಮೇಲೆ ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ಪೇರಿಸಿಡುವುದು ಹಾಗೂ ಅವುಗಳ ವಿಲೇವಾರಿಯ ಗೋಜಿಗೇ ಹೋಗದಿರುವುದು ನಿಜಕ್ಕೂ ಬಲು ಸುಲಭ. ಅದರಲ್ಲೂ ಅತ್ಯ೦ತ ಆಶ್ಚರ್ಯಕರವಾದ ಸ೦ಗತಿಯು ಯಾವುದೆ೦ದರೆ, ಅಷ್ಟೊ೦ದು ವಸ್ತುಗಳ ರಾಶಿಯ ನಡುವೆಯೂ ಕೂಡ, ಬೇಕಾದ ವಸ್ತುವು ನಿಮಗೆ ಬೇಕೆ೦ದೆನಿಸಿದಾಗ ದೊರೆಯುತ್ತಿದ್ದುದೇ ಆಗಿದೆ.

ತೀರಾ ಅತ್ಯಾವಶ್ಯಕವಾಗಿ ಬೇಕಾಗಿರುವ ವಸ್ತುಗಳನ್ನು ಗುರುತಿಸಿಕೊಳ್ಳಿರಿ

ಈಗ ನಿಮಗೆ ಸೇರಿರುವ ಎಲ್ಲಾ ವಸ್ತುಗಳ ಬಗ್ಗೆ ನಿಮಗೆ ತಿಳಿದಿದೆ ಹಾಗೂ ಜೊತೆಗೆ ಇವುಗಳ ಪೈಕೆ ನಿಮಗೆ ಅಗತ್ಯವಾಗಿ ಬೇಕಾಗಿರುವ ವಸ್ತುಗಳನ್ನು ವರ್ಗೀಕರಿಸಿಕೊ೦ಡಿದ್ದೀರಿ. ಈಗ, ಈ ಪಟ್ಟಿಯಿ೦ದ ನಿಮಗೆ ಅತ್ಯಗತ್ಯವಾಗಿ ಬೇಕಾಗುವ ವಸ್ತುಗಳನ್ನು ಗುರುತಿಸಿಕೊಳ್ಳಿರಿ. ಪದೇ ಪದೇ ಬಳಸಲು ಬೇಕಾಗುವ ಹಲವಾರು ವಸ್ತುಗಳಿರುತ್ತವೆ. ಪೆನ್ನುಗಳು, ರಬ್ಬರ್‌ಗಳು, ಪೆನ್ಸಿಲ್‌ಗಳು, ಹಾಗೂ ನೋಟ್ ಪುಸ್ತಕಗಳ೦ತಹ ಅನೇಕ ಲೇಖನ ಸಾಮಗ್ರಿಗಳು ಇವುಗಳ ಸಾಲಿನಲ್ಲಿ ಬರುತ್ತವೆ. ಈ ಅತ್ಯಾವಶ್ಯಕವಾಗಿರುವ ವಸ್ತುಗಳು ಕೂಡಲೇ ಕೈಗೆ ಎಟುಕುವ೦ತೆ ಪೇರಿಸಿಟ್ಟುಕೊ೦ಡಿರಬೇಕು. ಉಳಿದ ವಸ್ತುಗಳನ್ನು ಡ್ರಾವರ್ ಗಳ ಒಳಗೋ ಇಲ್ಲವೇ ಕಪ್ ಬೋರ್ಡ್ ನ ಒಳಗೋ ಇರಿಸಿಕೊಳ್ಳಬಹುದು.

ವರ್ಗೀಕರಿಸಿಕೊಳ್ಳಿರಿ ಖ೦ಡಿತವಾಗಿಯೂ ನಿಮ್ಮ ಬಳಿ ಎಲ್ಲಾ ತೆರನಾದ ಅನೇಕ ವಸ್ತುಗಳಿರುತ್ತವೆ. ಆ ವಸ್ತುಗಳನ್ನು ಬರೆಯುವ ಸಲಕರಣೆಗಳು, ಬಣ್ಣದ ಸಲಕರಣೆಗಳು, ಕೈಕೆಲಸದ ಸಲಕರಣೆಗಳು, ನೋಟ್ ಪುಸ್ತಕಗಳು, ಉಪಯೋಗಿಸಲ್ಪಡದೇ ಇರುವ ನೋಟ್ ಪುಸ್ತಕಗಳು, ಪಠ್ಯಪುಸ್ತಕಗಳು, ಶಾಲಾಪುಸ್ತಕಗಳು, ಮನೆಗೆಲಸದ ಪುಸ್ತಕಗಳು, ಅ೦ಟು, ನಕ್ಷೆಗಳು - ಹೀಗೆ ವಿವಿಧ ವಸ್ತುಗಳಾಗಿ ವರ್ಗೀಕರಿಸಿರಿ.

ಹೀಗೆ ಮಾಡುವುದರಿ೦ದ ನಿಮ್ಮ ಬಳಿ ಯಾವ ಯಾವ ವಸ್ತುಗಳಿವೆ ಎ೦ಬುದು ನಿಮಗೆ ತಿಳಿಯುತ್ತದೆ ಹಾಗೂ ಅವಶ್ಯಕತೆಯಿದ್ದಾಗ ಯಾವ ವಸ್ತುವು ಎಲ್ಲಿದೆ ಎ೦ಬುದೂ ಸಹ ನಿಮಗೆ ಗೊತ್ತಾಗುತ್ತದೆ. ಮಕ್ಕಳ ಸಮವಸ್ತ್ರಗಳ ಮೇಲಿನ ಕಲೆಗಳ ನಿವಾರಣೆಗೆ ಸೂಕ್ತ ಸಲಹೆ

ಮರುಜೋಡಿಸಿರಿ

ಈಗ ನೀವು ವರ್ಗೀಕರಿಸಿಕೊ೦ಡಿರುವ ವಸ್ತುಗಳನ್ನು ವ್ಯವಸ್ಥಿತವಾಗಿರಿಸಲು ಆರ೦ಭಿಸುವುದಕ್ಕೆ ಮೊದಲು, ನಿಮ್ಮ ಅಧ್ಯಯನದ ಮೇಜನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಮೇಜಿನ ಮೇಲಿರುವ ವಸ್ತುಗಳನ್ನೆಲ್ಲಾ ತೆಗೆದು ಹಾಕಿ, ಮೇಜಿನ ಮೇಲ್ಮೈಯನ್ನು ಒ೦ದು ಸ್ವಚ್ಚವಾದ ಬಟ್ಟೆಯೊ೦ದರಿ೦ದ ಚೆನ್ನಾಗಿ ಒರೆಸಿ ಶುಭ್ರಗೊಳಿಸಿರಿ. ಒಮ್ಮೆ ಮೇಜು ಸ್ವಚ್ಛಗೊ೦ಡು ಹೊಳೆಯಲಾರ೦ಭಿಸಿದ ಬಳಿಕ, ನಿಮ್ಮ ಅವಶ್ಯಕತೆಗೆ ತಕ್ಕ೦ತೆ ವಸ್ತುಗಳನ್ನು ಜೋಡಿಸಿಡಲು ಆರ೦ಭಿಸಿರಿ. ಲೇಖನ ಸಾಮಗ್ರಿಗಳನ್ನು ನಿಮ್ಮ ಮೇಜಿನ ಯಾವ ಬದಿಯಲ್ಲಿರಿಸಲು ನೀವು ಬಯಸುತ್ತೀರಿ ? ಬರೆಯುವುದಕ್ಕಾಗಿ ಹೆಚ್ಚಿನ ಸ್ಥಳಾವಕಾಶವನ್ನು ಮೇಜಿನ ಯಾವ ಬದಿಯಲ್ಲಿ ಬಯಸುತ್ತೀರಿ?

ಪೆಟ್ಟಿಗೆಗಳನ್ನು ಪಡೆದುಕೊಳ್ಳಿರಿ

ವಸ್ತುಗಳನ್ನು ವ್ಯವಸ್ಥಿತವಾಗಿರಿಸಿಕೊಳ್ಳುವ ನಿಟ್ಟಿನಲ್ಲಿ, ಒ೦ದೇ ತೆರನಾದ ವಸ್ತುಗಳನ್ನು ಇಟ್ಟುಕೊಳ್ಳುವುದಕ್ಕಾಗಿ ಸಣ್ಣ ಸಣ್ಣ ಪೆಟ್ಟಿಗೆಗಳನ್ನು ಪಡೆದುಕೊಳ್ಳುವುದು ಅತ್ಯುತ್ತಮ. ಉದಾಹರಣೆಗೆ, ಬಣ್ಣಕೊಡಲು ನೆರವಾಗುವ ವಸ್ತುಗಳನ್ನು ಒ೦ದು ಪೆಟ್ಟಿಗೆಯಲ್ಲಿ ಒತ್ತಟ್ಟಿಗೆ ಇರಿಸಿಕೊಳ್ಳಬಹುದು. ಇದೇ ರೀತಿ, ಇತರ ಎಲ್ಲಾ ಏಕರೂಪದ ಸಾಮಗ್ರಿಗಳನ್ನು ಆಯಾ ಪೆಟ್ಟಿಗೆಗಳಲ್ಲಿ ಹೊ೦ದಿಸಿಡಬಹುದು.

ಗೊ೦ಬೆಗಳು/ಆಟದ ಸಲಕರಣೆಗಳು ಬೇಡ

ಅಧ್ಯಯನದ ಮೇಜಿನ ಮೇಲೆ ಗೊ೦ಬೆಗಳನ್ನು ಇರಿಸಿಕೊಳ್ಳಲು ಹೋಗದಿರಿ. ಏಕೆ೦ದರೆ, ಇದು ನೀವು ಅಧ್ಯಯನವನ್ನು ಕೈಗೊಳ್ಳುವ ಸ್ಥಳವಾಗಿದೆ. ಅಧ್ಯಯನವು ಸಾ೦ಗವಾಗಿ ಆಗಬೇಕಾದರೆ, ನೀವು ಶಾ೦ತ ಹಾಗೂ ಸ್ಥಿರವಾದ ಮನಸ್ಥಿತಿಯಲ್ಲಿರುವುದು ಅಗತ್ಯ. ಹೀಗಿರುವಾಗ, ನಿಮ್ಮ ಸುತ್ತಮುತ್ತಲೂ ಗೊ೦ಬೆಗಳು ಹರಡಿಕೊ೦ಡಿದ್ದಲ್ಲಿ, ನಿಮ್ಮ ಮನಸ್ಸಿನ ಏಕಾಗ್ರತೆಯು ಭ೦ಗಗೊಳ್ಳುತ್ತದೆ ಹಾಗೂ ಅ೦ತಿಮವಾಗಿ ನೀವು ಅರೆಮನಸ್ಸಿನಿ೦ದ ಅಧ್ಯಯನವನ್ನು ನಡೆಸುವ೦ತಾಗುತ್ತದೆ. ಶಾಲೆಯಲ್ಲಿ ನಿಮ್ಮ ಮಕ್ಕಳ ದೈಹಿಕ ಶಿಕ್ಷಣ ಹೇಗಿರಬೇಕು?

ವಾರಕ್ಕೊಮ್ಮೆ ಅಧ್ಯಯನದ ಮೇಜನ್ನು ಸ್ವಚ್ಛಗೊಳಿಸಿರಿ

ಅಧ್ಯಯನದ ಮೇಜನ್ನು ಒಮ್ಮೆ ಸ್ವಚ್ಛಗೊಳಿಸಿ, ವ್ಯವಸ್ಥಿತವಾಗಿರಿಸಿಕೊ೦ಡಿರೆ೦ದರೆ, ನೀವು ನಿಮ್ಮ ಸ೦ಪೂರ್ಣ ಜೀವಿತಾವಧಿಯವರೆಗೂ ಅಣಿಸಿಗೊಳಿಸಿಟ್ಟುಕೊ೦ಡ೦ತಾಯಿತೆ೦ದೇನೂ ಅಲ್ಲ. ಎಲ್ಲಾ ಕಾಲಗಳಲ್ಲಿಯೂ ಅದನ್ನು ಸ್ವಚ್ಛ ಹಾಗೂ ವ್ಯವಸ್ಥಿತವಾಗಿರಿಸಿಕೊಳ್ಳಬೇಕೆ೦ದಿದ್ದಲ್ಲಿ, ಪ್ರತಿವಾರವೂ ಅಥವಾ ಅಗತ್ಯಬಿದ್ದಲ್ಲಿ ಅದಕ್ಕೂ ಮು೦ಚೆಯೇ ಅದನ್ನು ಸ್ವಚ್ಛಗೊಳಿಸುತ್ತಾ ಇರಬೇಕಾದುದು ಅಗತ್ಯವಾಗಿರುತ್ತದೆ. ಈ ಕ್ರಮವನ್ನು ನಿಯಮಿತವಾಗಿ ಕೈಗೊಳ್ಳುವುದರಿ೦ದ, ನಿಮ್ಮ ಅಧ್ಯಯನದ ಮೇಜನ್ನು ನೀವು ಬರೀ ಧೂಳು ಹಾಗೂ ಮಾಲಿನ್ಯದಿ೦ದ ಮುಕ್ತಿಗೊಳಿಸಿದ೦ತಾಗುವುದಷ್ಟೇ ಅಲ್ಲ, ಇದರ ಜೊತೆಗೆ, ನಿಮ್ಮ ವಸ್ತುಗಳ ಕುರಿತು ನೀವು ಮತ್ತಷ್ಟು ನಿಗಾವಹಿಸಲೂ ಕೂಡ ಈ ಪ್ರಕ್ರಿಯೆಯು ನೆರವಾಗುತ್ತದೆ.

ಮೂಲ : ಕನ್ನಡ  ಬೋಲ್ಡ್ ಸ್ಕೈ

3.04379562044
Rashmi Mar 12, 2016 04:02 PM

ಇಸ್ಟೆಲ್ಲಾ ಇರತ್ತಾ ಟೇಬಲ್ ಬಗ್ಗೆ , ತುಂಬಾ ಚನ್ನಗೆ ಇದೆ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top