|
ಭಾರತೀಯ ನವಿಲು ನಮ್ಮ ರಾಷ್ಟ್ರ ಪಕ್ಷಿ. ಇದರ ವೈಜ್ಞಾನಿಕ ಹೆಸರು ಪಾವೊ ಕ್ರಿಸ್ಟಟಸ್. ಇದು ಬಹು ವರ್ಣಮಯ ಹಕ್ಕಿ. ಹಂಸದ ಆಕಾರದಲ್ಲಿದೆ. ಬೀಸಣಿಗೆಯಾಕಾರದ ಗರಿಗಳ ಜುಟ್ಟು ಹೊಂದಿದೆ. ಕಣ್ಣ ಕೆಳಗೆ ಬಿಳಿ ಮಚ್ಚೆ ಇದೆ.ಉದ್ದವಾದ ತೆಳುವಾದ ಕೊರಳನ್ನು ಹೊಂದಿದೆ. ಗಂಡು ನವಿಲು ಹೆಣ್ಣಿಗಿಂತ ತುಂಬ ಚಂದವಾಗಿರುವುದು. |
ಹೊಳೆಯುವ ನೀಲಿ ಬಣ್ಣದ ಎದೆ ಮತ್ತು ಕೊರಳು ಮತ್ತು ವೈಭವಯುತ ಕಂಚಿನ ಬಣ್ಣದ ಪಕ್ಷಿ. 200 ಕ್ಕೂ ಹೆಚ್ಚಿನ ಉದ್ದನೆಯ ಗರಿಗಳಿಂದ ಕೂಡಿದ ಬಾಲ ಇರುವುದು. ಇದರ ಪ್ರಣಯ ನೃತ್ಯವು ಬಹು ಮನ ಮೋಹಕ. ತನ್ನ ಗರಿಗಳನ್ನು ಹರಡಿಕೊಂಡು ಬಣ್ಣ ಬಣ್ಣದ ಪ್ರಭಾವಳಿಯಲ್ಲಿ ಕುಣಿಯುವ ಹಾಗೆ ಕಾಣುವ ನವಿಲಿನ ನೃತ್ಯ ಬಹು ಭವ್ಯ ಮತ್ತು ದಿವ್ಯ ದೃಶ್ಯ
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 6/27/2020