ಬಂಕಿಮ ಚಂದ್ರ ಚಟರ್ಜಿಯವರು ವಂದೆ ಮಾತರಂ ಹಾಡನ್ನು ಸಂಸ್ಕೃತದಲ್ಲಿ ಬರೆದರು. ಇದು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಜನರಿಗೆ ಸ್ಪೂರ್ತಿಯ ಸೆಲೆಯಾಗಿತ್ತು. ಇದಕ್ಕೆ “ಜನ ಗಣ ಮನ “ ದಷ್ಟೆ ಗೌರವದ ಸ್ಥಾನವಿದೆ. ಇದನ್ನು ಪ್ರಥಮ ಬಾರಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧಿವೇಶನದಲ್ಲಿ 1896 ರಲ್ಲಿ ಹಾಡಲಾಯಿತು. ಅದರ ಮೊದಲ ಚರಣವನ್ನು ಕೆಳಗೆ ಕೊಡಲಾಗಿದೆ.
ವಂದೆ ಮಾತರಂ!
ಸುಜಲಾಂ, ಸುಫ ಲಾಂ, ಮಲಯಜ ಶೀತಲಾಂ,
ಸಸ್ಯ ಶ್ಯಾಮಲಾಂ ಮಾತರಂ!
ವಂದೆ ಮಾತರಂ !
ಶುಭ್ರ ಜ್ಯೋಸ್ನಾ ಪುಲಕಿತ ಯಾಮಿನಿ,
ಫುಲ್ಲ ಕುಸುಮಿತ ಧೃಮದಳ ಶೋಭಿನಿ,
ಸುಹಾಸಿನಿ ಸುಮಧುರ ಭಾಷಿಣಿ,
ಸುಖದಾಂ ವರದಾಂ ಮಾತರಂ!
ವಂದೆ ಮಾತರಂ ವಂದೆ ಮಾತರಂ !
ಶ್ರೀ ಅರವಿಂದರು ಮಾಡಿದ ಇಂಗ್ಲಿಷ್ ಭಾಷಾಂತರದ ಕನ್ನಡ ಭಾವಾನುವಾದ ಕೆಳಗೆ ನೀಡಿದೆ :
ನಮನ ತಾಯೆ ನಮನ
ಜಲ ಸಮೃದ್ಧಿ- ಫಲ ಸಮೃದ್ಧಿ,
ತೆಂಕಣ ಗಾಳಿಯ ತಂಪು,
ಸುಗ್ಗಿಯ ಬೆಳೆಯ ಸೊಂಪು ,
ತಾಯೇ!
ಅವಳ ರಾತ್ರಿಗಳು, ಬೆಳದಿಂಗಳಲಿ ಬೆಳಗುವವು,
ಅವಳ ಭುವಿ ಮರಗಿಡ, ಹೂಗಳಿಂದ ಸುಂದರವು,
ನಗುವೂ ಸಿಹಿ, ಮಾತೂ ಸವಿ,
ವರ ಕೊಡುವ ತಾಯೆ ಸುಖ ಕೊಡುವ ತಾಯೆ
ನಮನ ನಿನಗೆ ನಮನ ನಿನಗೆ,
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 1/28/2020