ಇದು ತಿರುಳಿನಿಂದ ಕೂಡಿದ ಹಣ್ಣು. ಕಾಯಿಯಾಗಿದ್ದಾಗ ಉಪ್ಪಿನ ಕಾಯಿಯಾಗಿ, ಹಣ್ಣಾದಾಗ ತಿನ್ನಲು ಉಪಯುಕ್ತ. .ಇದರ ವೈಜ್ಞಾನಿಕ ಹೆಸರು ಮೆಗ್ನ ಫೆರಾ ಇಂಡಿಕ. ಮಾವು ಉಷ್ಣವಲಯದ ಅತಿ ಹೆಚ್ಚು ಬೆಳೆವ ಜನಪ್ರಿಯ ಹಣ್ಣು. ಇದು ಎ, ಸಿ ಮತ್ತು ಡಿ ಅನ್ನಾಂಗ (ವಿಟಮಿನ್ A, C ಮತ್ತು D) ಗಳ ಆಗರ. ಭಾರತದಲ್ಲಿ 100 ಕ್ಕೂ ಹೆಚ್ಚಿನ ಜಾತಿಯ ಮಾವಿನ ತಳಿಗಳಿವೆ. ಬೇರೆ ಬೇರೆ ಆಕಾರ, ಗಾತ್ರ , ಬಣ್ಣದ ಹಣ್ಣುಗಳು ಇವೆ. ಅನಾದಿ ಕಾಲದಿಂದಲೂ ಭಾರತದಲ್ಲಿ ಮಾವನ್ನು ಬೆಳೆಯುತ್ತಿದ್ದಾರೆ. ಮಹಾಕವಿ ಕಾಳಿದಾಸನು ಈ ಹಣ್ಣನ್ನು ಹೊಗಳಿದ್ದಾನೆ. ಅಲೆಕ್ಜಾಂಡರ್ ಚಕ್ರವರ್ತಿ ಮಾವಿನ ಹಣ್ಣಿನ ರುಚಿಯನ್ನು ಸವಿದಿದ್ದಾನೆ. ಮೊಘಲ್ ಸಾಮ್ರಾಟ ಅಕ್ಬರನು 100,000 ಮಾವಿನ ಮರಗಳನ್ನು ಬಿಹಾರದ ದರ್ಭಾಂಗದಲ್ಲಿ ಬೆಳಸಿದ್ದನಂತೆ. ಅದು ಈಗಲೂ ಲಾಖಿ ಬಾಗ್ ಎಂದು ಪ್ರಸಿದ್ದಿಯಾಗಿದೆ.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 2/3/2020