অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

అಲೆಕ್ಸಾಂಡರ್, ಪ್ರೊಖೊರೊವ್

అಲೆಕ್ಸಾಂಡರ್, ಪ್ರೊಖೊರೊವ್

అಲೆಕ್ಸಾಂಡರ್, ಮಿಖಾಯಿಲೋವಿಖ್ ಪ್ರೊಖೊರೊವ್ (1916-2002) -೧೯೬೪

ರಷ್ಯಾ-ಭೌತಶಾಸ್ತ್ರ-ಮೇಸರ್ ಹಾಗೂ ಲೇಸರ್ ತತ್ವ ವಿವರಿಸಿದಾತ.

ಅಲೆಕ್ಸಾಂಡರ್ 11 ಜುಲೈ 1916ರಲ್ಲಿ ಆಸ್ಟ್ರೇಲಿಯಾದಲ್ಲಿ ಜನಿಸಿದನು.  ರಷ್ಯಾದ ಅಕ್ಟೋಬರ್ ಮಹಾಕ್ರಾಂತಿಯ ನಂತರ 1923ರಲ್ಲಿ ಆತನ ತಂದೆ ತಾಯಿಗಳು ರಷ್ಯಾಕ್ಕೆ ಹೋಗಿ ನೆಲೆಸಿದರು.  1934ರಲ್ಲಿ ಅಲೆಕ್ಸಾಂಡರ್ ಲೆನಿನ್ ಗ್ರಾಡ್ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗ ಸೇರಿ ತನ್ನ ಪದವಿ ಶಿಕ್ಷಣ ಆರಂಭಿಸಿದನು.  ಇಲ್ಲಿ ಖ್ಯಾತನಾಮರಾದ ವಿಜ್ಞಾನಿಗಳು ಉಪನ್ಯಾಸ ನೀಡುತ್ತಿದ್ದರು. ವಿ.ಎ ಫಾಕ್ಸ್ ಕ್ವಾಂಟಂ ಬಲವಿಜ್ಞಾನ, ಸಾಪೇಕ್ಷ ಸಿದ್ಧಾಂತ, ಫಿû್ರ¥sóï ಸಾಮಾನ್ಯ ಭೌತಶಾಸ್ತ್ರ ರೋಹಿತಶಾಸ್ತ್ರ ಹಾಗೂ ಇ.ಕೆ ಗ್ರಾಸ್ ಅಣ್ವಯಿಕ ಭೌತಶಾಸ್ತ್ರದ (Molecular Physics) ಬೋಧನೆ ಮಾಡುತ್ತಿದ್ದರು.  ಇವರ ಉಪನ್ಯಾಸಗಳು ಅಲೆಕ್ಸಾಂಡರ್ ಭೌತಶಾಸ್ತ್ರದ ಮೂಲ ತತ್ತ್ವಗಳನ್ನು ಅರಿಯಲು ನೆರವಾದವು.  1939ರಲ್ಲಿ ಪದವಿ ಗಳಿಸಿದ ಅಲೆಕ್ಸಾಂಡರ್ ಮಾಸ್ಕೋದ ಫಿûಸಿಕಲ್ ಇನ್ಸಿಟ್ಯೂಟ್‍ನಲ್ಲಿ ಲೆಬೆಡೆವ್ ಮಾರ್ಗದರ್ಶನದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದನು.  ಈ ಅವಧಿಯಲ್ಲಿ ಅಂದೋಳನ ಪ್ರಯೋಗಾಲಯದಲ್ಲಿ  ಪಾಪಲೆಕ್ಸಿಯ ಮಾರ್ಗದರ್ಶನ ಲಭ್ಯವಾಯಿತು.  ಇದರ ನಂತರ ರೇಡಿಯೋ  ಅಲೆಗಳ ಪ್ರಸರಣ ಕುರಿತಾದಂತೆ ಅಲೆಕ್ಸಾಂಡರ್ ಅಧ್ಯಯನ ಪ್ರಾರಂಭಿಸಿದನು. 1941ರಲಿ ಎರಡನೇ ಜಾಗತಿಕ ಯುದ್ದದ ಕರಿನೆರಳು ಚಾಚಿ, ಕೆಂಪು ಸೇನೆಗೆ ನಿಯೋಜಿತನಾದನು.  ಯುದ್ದದಲ್ಲಿ ಭಾಗಿಯಾಗಿ ಎರಡು ಬಾರಿ ಗಾಯಗೊಂಡನು.  1944ರಲ್ಲಿ ಎರಡನೇ  ಬಾರಿ ಗಾಯಗೊಂಡಾಗ, ಆತನನ್ನು ಸೇನೆಯಿಂದ ಬಿಡುಗಡೆಗೊಳಿಸಿ ಆಂದೋಳನ ಪ್ರಯೋಗಾಲಯಕ್ಕೆ ಹೆಚ್ಚಿನ ಸಂಶೋಧನೆಗಾಗಿ ಕಳಿಸಲಾಯಿತು.  ಇಲ್ಲಿ ಎಸ್.ಎಂ.ರೈಟೋನ್ ಕೈ ಕೆಳಗೆ ಅರೇಖೀಯ ಆಂದೋಳನಗಳ (Nonlinear Asscilator) ಅಧ್ಯಯನ ಪ್ರಾರಂಭಿಸಿದನು. 1947ರಲ್ಲಿ  ವಿ.ಐ. ವೆಕ್ಸ್‍ಲರ್, ಸೆಂಟಿಮೀಟರ್ ತರಂಗಾಂತರದ(Wave Length) ವ್ಯಾಪ್ತಿಯಲ್ಲಿನ ಸಂಲಗ್ನಗೊಂಡ (Coherent) ಎಲೆಕ್ಟ್ರಾನ್ ವಿಕಿರಣಗಳನ್ನು ಕುರಿತಾಗಿ ಹೆಚ್ಚಿನ ಸಂಶೋಧನೆ ನಡೆಸುವಂತೆ ಅಲೆಗ್ಸಾಂಡರ್‍ಗೆ ಸೂಚಿಸಿದನು.  ಇದರ ಫಲವಾಗಿ 1951ರಲ್ಲಿ ಅಲೆಕ್ಸಾಂಡರ್ ಸಂಲಗ್ನಗೊಂಡ ವಿಕಿರಣಗಳನ್ನು ವಿವರಿಸುವ ಪಾಂಡಿತ್ಯಪೂರ್ಣ ಲೇಖನ ಪ್ರಕಟಿಸಿದನು. 1946ರಲ್ಲಿ ಪಾಪಲೆಕ್ಸಿ ಮರಣ ಹೊಂದಿದಾಗ, ಅಂದೋಳನ ಪ್ರಯೋಗಾಲಯದ ನೇತೃತ್ವದ ಹೊಣೆ ಲೆಯಾನ್ ಟೋವಿಕ್ ಹೆಗಲಿಗೇರಿತು.  

1950ರಿಂದ ಈತನಿಗೆ ಸಹಾಯಕನಾಗಿ ಅಲೆಕ್ಸಾಂಡರ್ ಶ್ರಮಿಸತೊಡಗಿದನು. ಇಲ್ಲಿ ಅಲೆಗ್ಸಾಂಡರ್ ರೇಡಿಯೋ ರೋಹಿತಶಾಸ್ತ್ರ, ಕ್ವಾಂಟಂ ಎಲೆಕ್ಟ್ರಾನಿಕ್ಸ್‍ಗಳಲ್ಲಿ ಸಂಶೋಧನೆ ಕೈಗೊಂಡಾಗ ತನ್ನ ಶಿಷ್ಯರು ಅದನ್ನು ಮುಂದುವರಿಸಿಕೊಂಡು ಹೋಗುವಂತೆ ಮಾಡಿದನು. ಅಲೆಗ್ಸಾಂಡರ್ ಬಸೋವ್‍ನೊಂದಿಗೆ ಸೂಕ್ಷ್ಮ ತರಂಗ ರೋಹಿತಶಾಸ್ತ್ರದಲ್ಲಿ ನಡೆಸಿದ ಪ್ರಯೋಗಗಳಿಂದ ಅಣ್ವಯಿಕ ಆಂದೋಳನಕಾರಿಗಳ (Molecular Ascilators) ಪರಿಕಲ್ಪನೆ ಮೂಡಿತು.  ಇದನ್ನು ಇವರಿಬ್ಬರೂ ಸೈದ್ಧಾಂತಿಕ ರೂಪದಲ್ಲಿ ವಿವರಿಸಿದರು.  ಅಂತಿಮವಾಗಿ ಅಲೆಕ್ಸಾಂಡರ್ ಹಾಗೂ ಬಸೋವ್ ಅಮೋನಿಯಾದ ಮೇಲೆ ಕ್ರಿಯಾಶೀಲವಾಗಿರುವ ಅಣ್ವಯಿಕ ಆಂದೋಳನಕಾರಕವನ್ನು ನಿರ್ಮಿಸಿದರು. ಇವರಿಬ್ಬರೂ ಸೇರಿ 1955ರಲ್ಲಿ ಋಣಾತ್ಮಕ ಹೀರಿಕೆಯನ್ನು ಪಡೆಯುವ ವಿಧಾನದ ಪ್ರಸ್ತಾವನೆ ನೀಡಿದರು.  1950ರಿಂದ 1955 ರವರೆಗೆ ಅಲೆಕ್ಸಾಂಡರ್ ಹಾಗೂ ಸಂಗಡಿಗರು ಸೂಕ್ಷ್ಮತರಂಗ  ರೋಹಿತಶಾಸ್ತ್ರದ ಆಧಾರದ ಮೇಲೆ ಅಣ್ವಯಿಕ ಸ್ವರೂಪ ನಿರ್ಧರಿಸಿದರು. 1955ರಿಂದ ಅಲೆಕ್ಸಾಂಡರ್ ಎಲೆಕ್ಟ್ರಾನಿಕ್ ಅಣು ಕಾಂತೀಯ ಅನುರಣನ (Molecular Magnetic Resonance) ಸಂಶೋಧನೆಯನ್ನು ಅಭಿವೃದ್ಧಿಗೊಳಿಸತೊಡಗಿದನು.  ಹಲವಾರು ಸ್ಪಟಿಕಗಳಲ್ಲಿನ ಈ ಅನುರಣನದ ವಿಶ್ರಾಂತ ಕಾಲಾವಧಿ ನಿರ್ಧರಿಸಿದನು. ಇದೇ ಕಾಲದಲ್ಲಿ ಅಲೆಕ್ಸಾಂಡರ್, ಎ.ಎ. ಮೆನೆನ್‍ಕೂವ್ ಜೊತೆಗೂಡಿ ಎಲೆಕ್ಟ್ರಾನಿಕ್ ಅನುಕಾಂತೀಯ ಅನುರಣನ ಹಿನ್ನೆಲೆಯಲ್ಲಿ ರೂಬಿ ಸ್ಪಟಿಕವನ್ನು ಲೇಸರ್ ಉತ್ಪಾದಿಸಲು ಬಳಸಬಹುದೆಂದು 1957ರಲ್ಲಿ ಸೂಚಿಸಿದನು.  ಅಲೆಕ್ಸಾಂಡಾರ್ ಹಾಗೂ ಮೆನೆನ್‍ಕೊವ್ ವಿಭಿನ್ನ ಸ್ಪಟಿಕಗಳನ್ನು ಬಳಸಿ ಮೇಸರ್ ಉತ್ಪಾದಿಸಿದರು.  ಮಾಸ್ಕೊ ವಿಶ್ವವಿದ್ಯಾಲಯದ ಬೈಜಿಕ ಭೌತಶಾಸ್ತ್ರ ವಿಭಾಗದ ಮೂಲಕ ಇವರು ನಿರ್ಮಿಸಿದ ಮೇಸರ್ ಉತ್ಪಾದಕವನ್ನು ಪುಷನೋದಲ್ಲಿರುವ ರೇಡಿಯೋ ಖಗೋಳಶಾಸ್ತ್ರ ಸಂಸ್ಥೆಯಲ್ಲಿ 1957ರಲ್ಲಿ ಅಳವಡಿಸಲಾಯಿತು.  1958ರಲ್ಲಿ ಅಲೆಕ್ಸಾಂಡರ್ ಲೇಸರ್ ಉತ್ಪಾದನೆಗೆ ಹಲವಾರು ಕ್ರಾಂತಿಕಾರಕ ಮಾರ್ಗಗಳನ್ನು ಸೂಚಿಸಿದನು. 1963ರಲ್ಲಿ ಅಲೆಕ್ಸಾಂಡರ್ ಎ.ಎಸ್ ಸೆಲಿವೆನೆಂಕೋ ಜೊತೆಗೂಡಿ ದ್ವಿ-ಕ್ವಾಂಟಂ ಸ್ಥಿತ್ಯಂತರಗಳನ್ನು (ಃi-ಕಿuಚಿಟಿಣum ಖಿಡಿಚಿಟಿsiಣioಟಿs)   ಬಳಸಿ ಲೇಸರ್ ಪಡೆಯುವ ಸಾಧ್ಯತೆಯನ್ನು ತಿಳಿಸಿದನು. ಇದಕ್ಕಾಗಿ ಮೇಸರ್ ಹಾಗೂ ಲೇಸರ್‍ಗಳ ಸಾಧನೆಗಾಗಿ, 1964ರಲ್ಲಿ ಅಲೆಕ್ಸಾಂಡರ್ ನೊಬೆಲ್ ಪ್ರಶಸ್ತಿ ಪುರಸ್ಕೃತನಾದನು.

ಮೂಲ: ವಿಜ್ಞಾನಿಗಳು

ಕೊನೆಯ ಮಾರ್ಪಾಟು : 11/14/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate