ಆ್ಯಲನ್ , ಹೀಗೆರ್ –(1936--)- ೨೦೦೦
ಅಸಂಸಂ-ಭೌತಶಾಸ್ತ್ರ-ವಾಹಕ ಪಾಲಿಮರ್’ಗಳನ್ನು ಕುರಿತಾಗಿ ಸಂಶೋಧಿಸಿದಾತ.
ಆ್ಯಲನ್ ಅಯೋವಾ ರಾಜ್ಯದ ಸಿಯೋಕ್ಸ್ ನಗರದಲ್ಲಿ 22 ಜನವರಿ 1936 ರಂದು ಜನಿಸಿದನು. ಆ್ಯಲನ್ ತಾತ ರಷ್ಯದ ಯಹೂದಿಯಾಗಿದ್ದು 1904ರಲ್ಲಿ ಅಸಂಸಂಗಳಿಗೆ ವಲಸೆ ಬಂದಿದ್ದನು. ಆ್ಯಲನ್ 9 ವರ್ಷದವನಿರುವಾಗ ಆತನ ತಂದೆ ಹೃದಯಾಘಾತದಿಂದ ಮೃತನಾದನು. ನಂತರ ಆ್ಯಲನ್ ತಾಯಿ ತನ್ನ ಸೋದರಿಯ ಕುಟುಂದೊಂದಿಗೆ ಸೇರಿ ಒಂಟಿಯಾಗಿ ಮಕ್ಕಳನ್ನು ಸಾಕಿದಳು. ಬಾಲ್ಯದಿಂದಲೇ ಮಕ್ಕಳು ಉನ್ನತ ವಿಧ್ಯಾಭ್ಯಾಸ ಹೊಂದುವಂತೆ ಪ್ರೇರೇಪಿಸುತ್ತಿದ್ದಳು. ಆ್ಯಲನ್ ತಂದೆ ಹಾಗೂ ತಾಯಿಯ ಕಡೆಯಲ್ಲಿ ಯಾರೊಬ್ಬರು ಕಾಲೇಜಿನ ಮೆಟ್ಟಿಲು ಹತ್ತಿರಲಿಲ್ಲ. ನೆಬ್ರಾಸ್ಕ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಪದವಿಗೆ ಸೇರಿದ ಆ್ಯಲನ್ ನಂತರ ಭೌತಶಾಸ್ತ್ರಕ್ಕೆ ಬದಲಾಯಿಸಿಕೊಂಡನು. ನಂತರ ಕ್ಯಾಲಿಫೊರ್ನಿಯಾದ ಪಾಲೋ ಆಲ್ಟೋದಲ್ಲಿರುವ ಲಾರ್‍ಹೆಡ್ ಅಂತರಿಕ್ಷ ಹಾಗೂ ಕ್ಷಿಪಣಿ ವಿಭಾಗದಲ್ಲಿ ಕೆಲಸಮಾಡುತ್ತಲೇ ಅರೆಕಾಲಿಕ ಸಂಶೋಧಕ ವಿದ್ಯಾರ್ಥಿಯಾಗಿ ಆ್ಯಲನ್ ಶ್ರಮಿಸಿದನು. ಪೆನ್ಸೆಲ್ವೇನಿಯಾ “ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದಲ್ಲಿ ಸಾಂದ್ರೀಕೃತ ದ್ರವ್ಯದ ಪ್ರಯೋಗಗಳಲ್ಲಿ ಭಾಗಿಯಾದನು. ಲೋಹಗಳಲ್ಲಿನ ಕಾಂತೀಯ ಕಲುಷಿತಗಳು (ಒಚಿgಟಿeಣiಛಿ ಆoಠಿes) ಹಾಗೂ ಕೊಂಡೋ ಪರಿಣಾಮಗಳ ಕುರಿತಾಗಿ ಅಧ್ಯಯನ ನಡೆಸಿದ ಅ್ಯಲನ್‍ಗೆ ಅ್ಯಂಥೋನಿ ಗ್ಯಾರಿಟೋನಿಂದ ಟೆಟ್ರಾಸಯನೋಕ್ವಿನೋಡಿಮಿಥೇನ್ (ಟೆಸಿಎನ್‍ಕ್ಯು) ಸಂಯುಕ್ತದ ಪರಿಚಯವಾಯಿತು. 1970ರಿಂದ 1975ರವರೆಗೆ ಆ್ಯಂಥೋನಿಯೊಂದಿಗೆ, ಅಣ್ವಯಿಕ ಹರಳುಗಳ ಅಸ್ಥಿರತೆಯನ್ನು ಅರಿಯಲು ಯತ್ನಿಸಿದನು. 1975ರಲ್ಲಿ ಬಹು ವಿಶೇಷವಾದ ಸಲ್ಫರ್ ನೈಟ್ರೈಡ್ ಲೌಹಿಕ ಪಾಲಿಮರ್ (Metallic Polymer) ಬಗೆಗೆ ವಿಜ್ಞಾನಿಗಳು ಆಸಕ್ತಿ ತೋರತೊಡಗಿದರು. ಆ್ಯಲನ್, ಅ್ಯಲನ್ ಡಯಾರ್‍ಮಿಡ್‍ನೊಂದಿಗೆ ಈ ಹೊಸ ಪಾಲಿಮರ್‍ಗಳ ಸಂಶ್ಲೇಷಣೆ ಪ್ರಾರಂಭಿಸಿದನು. ಜಪಾನಿಗೆ ಭೇಟಿ ನೀಡಿದ ಮೆಕ್‍ಡಯಾರ್‍ಮಿಡ್ ವರ್ಣ ರಂಜಿತ ಸ್ಪಟಿಕ ಲೇಪನಗಳನ್ನು ಹಿಡೆಕಿ ಶಿರಾಕವಾನಿಗೆ ತೋರಿಸಿದನು. ಇಂತಹುದೇ ಪಾಲಿಅಸಿಟಲೀನ್ ಬಹ್ವಂಗಿಯನ್ನು (Polymer) ಹಿಡೆಕಿ ಸಹ ಪಡೆದಿದ್ದನು. ಅತ್ಯಲ್ಪ ಕಾಲದಲ್ಲೇ ಈ ಬಗೆಯ ಪಾಲಿಮರ್‍ಗಳು ಅವಾಹಕ ಹಾಗೂ ವಾಹಕಗಳ ಸ್ಥಿತ್ಯಂತರದಲ್ಲಿರುವುವೆಂದು ತಿಳಿದು ಬಂದಿತು. ವಾಹಕಶೀಲ ಪಾಲಿಮರ್‍ಗಳ ಅಭಿವೃದ್ಧಿಯಲ್ಲಿ ಆ್ಯಲನ್ ವಹಿಸಿದ ಗಮನಾರ್ಹ ಕಾರ್ಯಕ್ಕಾಗಿ 2000ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ಲಭಿಸಿತು. 1990ರ ನಂತರ ರಿಚರ್ಡ್ ಫ್ರೆಂಡ್ ಪಾಲಿಮರ್ ಎಲ್‍ಇಡಿಗಳನ್ನು (LED-Light Emmitting Diode) ವಾಣಿಜ್ಯ ಬಳಕೆಗೆ ತಂದನು. ಇವು ದ್ಯುತಿಕೋಶ, ದ್ಯುತಿ ಪತ್ತೆಕಾರಕ ಸೇರಿದಂತೆ ಹಲವಾರು ಕಡೆ ಬಳಕೆಯಾಗುತ್ತಿವೆ.
ಮೂಲ: ವಿಜ್ಞಾನಿಗಳು
ಕೊನೆಯ ಮಾರ್ಪಾಟು : 10/31/2019