ಕ್ರಿಸ್ಟ್ ದಿ ರಿಡೀಮರ್ (1931) ರಿಯೊ ಡಿ ಜನೇರೋ, ಬ್ರೆಜಿಲ್
ಏಸು ಕ್ರಿಸ್ತನ ಈ ವಿಗ್ರಹವು ಸುಮಾರು 38 ಮೀಟರ್ ಎತ್ತರವಾಗಿದೆ, ಕೊರ್ಕೊವಾಡೊ ಪರ್ವತದ ಶಿಖರದ ಮೇಲಿದ್ದು ರಿಯೊ ಡಿ ಜನೇರೋವನ್ನು ಮೇಲಿನಿಂದ ಗಮನಿಸುವಂತಿದೆ. ಇದನ್ನು ಬ್ರೆಜಿಲ್‌ನ ಹೆಯಿಟರ್ ಡಾ ಸಿಲ್ವ ಕೊಸ್ಟಾ ವಿನ್ಯಾಸಗೊಳಿಸಿದರು ಮತ್ತು ಪ್ರೆಂಚ್ ಶಿಲ್ಪಿ ಪೌಲ್ ಲಾಂಡೊವ್ಸ್‌ಕಿ ರಚಿಸಿದರು, ಇದು ಪ್ರಪಂಚದ ಅತ್ಯಂತ ಜನಪ್ರಿಯ ಸ್ಮಾರಕಗಳಲ್ಲಿ ಒಂದಾಗಿದೆ. ಈ ವಿಗ್ರಹವನ್ನು ನಿರ್ಮಿಸಲು ಐದು ವರ್ಷಗಳ ಕಾಲ ತೆಗೆದುಕೊಳ್ಳಲಾಯಿತು ಮತ್ತು ಆಕ್ಟೋಬರ್, 12, 1931ರಲ್ಲಿ ಉದ್ಘಾಟಿಸಲಾಯಿತು. ಇದು ನಗರದ ಮತ್ತು ತೆರೆದ ಬಾಹುಗಳಿಂದ ಪ್ರವಾಸಿಗರನ್ನು ಸ್ವೀಕರಿಸುವ, ಬ್ರೆಜಿಲಿನ ಜನರ ಪ್ರೀತಿಯ ಒಂದು ಲಾಂಛನವಾಗಿದೆ.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 7/5/2020