ಮಾಚು ಪಿಚ್ಚು (1460-1470), ಪೆರು
15ನೆ ಶತಮಾನದಲ್ಲಿ ಇಂಕಾನ್ ಚಕ್ರವರ್ತಿ ಪಚಾಕ್ಯುಟೆಕ್ ಮಾಚು ಪಿಚ್ಚು ("ಪುರಾತನ ಪರ್ವತ") ಎಂಬ ಹೆಸರಿನ ಪರ್ವತದ ಮೇಲೆ ಮೋಡಗಳ ನಡುವೆ ಒಂದು ನಗರವನ್ನು ಕಟ್ಟಿದನು. ಈ ಅಸಾಮಾನ್ಯವಾದ ನಿವಾಸ ಸ್ಥಳವು ಅಮೆಜಾನ್ ಕಾಡಿನ ನಡುವೆ, ಅಂಡೆಸ್ ಪ್ರಸ್ಥಭೂಮಿ ಮಧ್ಯಬಾಗದಲ್ಲಿ ಮತ್ತು ಉರುಬಾಂಬ ನದಿಯ ಮೇಲ್ಭಾಗದಲ್ಲಿ ಹರಡಿದೆ. ಸಿಡಿಬು ರೋಗದ ತೀವ್ರತೆಯಿಂದ ಇದನ್ನು ಬಹುಶಃ ಇಂಕಾಸ್ ಗಳು ತೊರೆದಿರಬಹುದು.ಮತ್ತು, ಇಂಕಾನ್ ಸಾಮ್ರಾಜ್ಯವನ್ನು ಸ್ಪ್ಯಾನಿಷ್ ಸೋಲಿಸಿದ ನಂತರ, ನಗರವು ಸುಮಾರು ಮೂರು ಶತಮಾನಗಳ ವರೆಗೆ ’ಗೋಚರವಾಗದೆ’ಉಳಿದಿತ್ತು. ಇದನ್ನು 1911ರಲ್ಲಿ ಹಿರಾಮ್ ಬಿಂಗಹಂ ಮೂಲಕ ಪುನಃ ಶೋಧಿಸಲಾಯಿತು.
ಮೂಲ: ಪೋರ್ಟಲ್ ತಂಡ
ಕೊನೆಯ ಮಾರ್ಪಾಟು : 2/17/2020