অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಭಾಗ 10

ಭಾಗ 10
ಪ್ರಶ್ನೆಗಳು: ಉತ್ತರಗಳು
೧. ಕೇಂದ್ರ ಸಾಹಿತ್ಯ ಅಕಾಡೆಮಿ
ಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗ ಯಾರು?
೨. ಕೆ.ಎಸ್.ಎಸ್.ಐ.ಡಿಸಿ (KSSIDC)ನ ವಿಸ್ತೃತ
ರೂಪವೇನು?
೩. ಕಬುಕಿ ನೃತ್ಯ ಶೈಲಿ ಯಾವ
ದೇಶದ್ದಾಗಿದೆ?
೪. ಜೀತ ಪದ್ಧತಿಯ ನಿರ್ಮೂಲನಕ್ಕಾಗಿ
೧೯೭೬ರಲ್ಲಿ ಜಾರಿಗೊಳಿಸಲಾದ ಶಾಸನ
ಯಾವುದು?
೫. ಕನ್ನಡ ಕವಯತ್ರಿ ಸಂಚಿ ಹೊನ್ನಮ್ಮ
ಯಾರ ಆಸ್ಥಾನದಲ್ಲಿದ್ದಳು?
೬. ಭಾರತದ ಮೊಟ್ಟಮೊದಲ
ಮೀನುಗಾರಿಕೆಯ ಕಾಲೇಜನ್ನು
ಕರ್ನಾಟಕದಲ್ಲಿ ಎಲ್ಲಿ ಸ್ಥಾಪಿಸಲಾಯಿತು?
೭. ಆರ್ಯುವೇದದ ಪಿತಾಮಹ ಯಾರು?
೮. ವಿಜಯನಗರದ ವಾಟರ್ ಲೂ ಎಂದು
ಕರೆಯಲ್ಪಡುವ ಸ್ಥಳ ಯಾವುದು?
೯. ಪೋಪ್ ಅರಮನೆ ವಿಶ್ವದ ಯಾವ
ನಗರದಲ್ಲಿದೆ?
೧೦. ರಾಷ್ಟ್ರಪತಿ ಭವನದಲ್ಲಿ ಎಷ್ಟು
ಕೊಠಡಿಗಳಿವೆ?
೧೧. ಕಾಕೆಮನಿ ಇದು ಯಾರ
ಕಾವ್ಯನಾಮವಾಗಿದೆ?
೧೨. ಇತ್ತೀಚೆಗೆ ಶ್ರವಣಬೆಳಗೋಳದಲ್ಲಿ ನಡೆದ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ
ಅಧ್ಯಕ್ಷರು ಯಾರಾಗಿದ್ದರು?
೧೩. ವಾಲ್ಮೀಕಿ ಅಂಬೇಡ್ಕರ್ ಆವಾಸ್
ಯೋಜನೆ ಜಾರಿಗೊಳಿಸಿದ ವರ್ಷ ಯಾವುದು?
೧೪. ಮುಂಬೈ ಷೇರು ವಿನಿಮಯ
ಸೂಚ್ಯಾಂಕದ ಹೆಸರೇನು?
೧೫. ಲಾರ್ಡ್ ಆಫ್ ದಿ ಇಯರ್ ಇದು ಯಾರನ್ನು
ಕುರಿತು ಬರೆದ ಪುಸ್ತಕವಾಗಿದೆ?
೧೬. ರಾಸಾಯನಿಕವಾಗಿ ಶುದ್ಧ ಚಿನ್ನವು
ಎಷ್ಟು ಕ್ಯಾರೆಟ್ದಾಗಿರುತ್ತದೆ?
೧೭. ಟಾಡಾ ಕಾಯಿದೆ ಯಾವುದಕ್ಕೆ
ಸಂಬಂಧಿಸಿದೆ?
೧೮. ಕುಕ್ ಆಂದೋಲನವನ್ನು ಬ್ರಿಟೀಷರ
ವಿರುದ್ಧ ಸಂಘಟಿಸಿದವರು ಯಾರು?
೧೯. ಚೆನ್ನರಾಯ ಇದು ಯಾರ
ಅಂಕಿತನಾಮವಾಗಿದೆ?
೨೦. ಭಾರತದ ಪ್ರಪ್ರಥಮ ವಿದ್ಯುತ್ ಬ್ಯಾಟರಿ
ಚಾಲಿತ ಕಾರು ಯಾವುದು?
೨೧. ಬಡವರ ಊಟಿ ಎಂದು ಕರೆಯುವ
ಕರ್ನಾಟಕದ ಜಿಲ್ಲೆ ಯಾವುದು?
೨೨. ದೇಶದ ಪ್ರಥಮ ವೃತ್ತಿನಿರತ ತಬಲಾವಾದಕಿ
ಯಾರು?
೨೩. ಕರ್ನಾಟಕ ವಿಶ್ವವಿದ್ಯಾಲಯದ ಮೊದಲ
ಮಹಿಳಾ ಕುಲಪತಿ ಯಾರು?
೨೪. ಪ್ರಕೃತಿಯ ಯಾವ ಮೂಲದಿಂದ ವಿಟಮಿನ್
’ಡಿ’ ದೊರೆಯುತ್ತದೆ?
೨೫. ವಾಯುಭಾರ ಮಾಪಕದಲ್ಲಿ ಬಳಸುವ
ದ್ರವ ಯಾವುದು?
೨೬. ಕನ್ನಡದ ಮೊದಲ ಗಣಿತ ಶಾಸ್ತ್ರಜ್ಞ
ಯಾರು?
೨೭. ಪರಮಾಣುವಿನ ಮೂಲಭೂತ ಕಣಗಳು
ಯಾವುವು?
೨೮. ರಾಕೆಟ್ಗಳನ್ನ ಓಡಿಸಲು ಬಳಸುವ ಇಂಧನ
ಯಾವುದು?
೨೯. ಕೇರಳದ ನಿಶ್ಯಬ್ದ ಕಣಿವೆಯ ಮೂಲಕ
ಹಾಯ್ದು ಹೋಗುವ ನದಿ ಯಾವುದು?
೧. ಡಾ||ವಿ.ಕೃ.ಗೋಕಾಕ್
೨. ಕರ್ನಾಟಕ ಸ್ಟೇಟ್ ಸ್ಮಾಲ್ ಇಂಡಸ್ಟ್ರೀಸ್
ಡೆವಲಪ್ಮೆಂಟ್ ಕಾರ್ಪೋರೇಶನ್
೩. ಜಪಾನ್
೪. ಜೀತ ವಿಮುಕ್ತಿ ಶಾಸನ
೫. ಚಿಕ್ಕದೇವರಾಜ ಒಡೆಯರ್
೬. ಮಂಗಳೂರು
೭. ಚರಕ
೮. ತಾಳಿಕೋಟೆ
೯. ವ್ಯಾಟಿಕನ್ ಸಿಟಿ
೧೦. ೩೪೦ ಕೊಠಡಿಗಳು
೧೧. ಬಿ.ಡಿ.ಸುಬ್ಬಯ್ಯ
೧೨. ಡಾ||ಸಿದ್ಧಲಿಂಗಯ್ಯ
೧೩. ೨೦೦೧
೧೪. ಸೆನ್ಸೆಕ್ಸ್
೧೫. ಪುಟ್ಟಪುರ್ತಿ ಸಾಯಿಬಾಬಾ
೧೬. ೨೪ ಕ್ಯಾರೆಟ್
೧೭. ಟೆರೆರಿಸಮ್
೧೮. ರಾಮ್ಸಿಂಗ್
೧೯. ಏಕಾಂತ ಮಾರಯ್ಯ
೨೦. ರೇವಾ
೨೧. ಹಾಸನ
೨೨. ಅನುರಾಧ ಪಾಲ್
೨೩. ಶ್ರೀಮತಿ ಸಯೀದಾ ಆಖ್ತರ್
೨೪. ಸೂರ್ಯನ ಬೆಳಕು
೨೫. ಪಾದರಸ
೨೬. ಮಹಾವೀರಾಚಾರ್ಯ
೨೭. ನ್ಯೂಟ್ರಾನ್
೨೮. ದ್ರವರೂಪದ ಜಲಜನಕ
೨೯. ಕುಂತೀಪುಳ

ಪ್ರಶ್ನೆಗಳುಉತ್ತರಗಳು
೧. ಪರಮ್ – ೧೦೦೦೦ ಎಂಬ ಸೂಪರ್
ಕಂಪ್ಯೂಟರನ್ನು ವಿನ್ಯಾಸ ಮಾಡಿದ ದೇಶ
ಯಾವುದು?
೨. ವನಮಹೋತ್ಸವವನ್ನು ಆರಂಭಿಸಿದವರು
ಯಾರು?
೩. ಗಗನಚುಕ್ಕಿ ಮತ್ತು ಭರಚುಕ್ಕಿ
ಜಲಪಾತಗಳು ಕಂಡು ಬರುವ ಜಿಲ್ಲೆ
ಯಾವುದು?
೪. ಗೊರುಚ ಇದು ಯಾರ
ಕಾವ್ಯನಾಮವಾಗಿದೆ?
೫. ನ್ಯಾಷನಲ್ ಇನ್ಸ್ಸ್ಟಿಟ್ಯೂಟ್ ಆಫ್ ಮೆಂಟಲ್
ಹೆಲ್ತ್ ಆಂಡ್ ನ್ಯೂರೋ ಸೈನ್ಸ್ಸ್ ಕಾಲೇಜು
ಕರ್ನಾಟಕದಲ್ಲಿ ಎಲ್ಲಿದೆ?
೬. ನಾಟಿ ಎಂಬ ಜಾನಪದ ನೃತ್ಯ ಶೈಲಿ
ಯಾವ ರಾಜ್ಯದಲ್ಲಿ ಕಂಡು ಬರುತ್ತದೆ?
೭. ಪ್ರಪಂಚದ ಚಿಕ್ಕ ಪಕ್ಷಿ ಹಮ್ಮಿಂಗ್ ಬರ್ಡ್
ಕಂಡು ಬರುವ ದೇಶ ಯಾವುದು?
೮. ಕಪಿಲಸಿದ್ಧ ಮಲ್ಲಿಕಾರ್ಜುನ ಇದು ಯಾರ
ಅಂಕಿತನಾಮ ವಾಗಿದೆ?
೯. ಕನ್ನಡ ಕರ್ನಾಟಕದ ಅಧಿಕೃತ ಭಾಷೆ ಎಂದು
ರಾಜ್ಯ ಸರ್ಕಾರ ಘೋಷಿಸಿದ ವರ್ಷ
ಯಾವುದು?
೧೦. ಪೊಲಾರ್ ಪ್ರಶಸ್ತಿ ವಿಜೇತರಾದ
ರವಿಶಂಕರರವರು ಯಾವ ಕ್ಷೇತ್ರದಲ್ಲಿ ಪರಿಣಿತಿ
ಸಾಧಿಸಿದವರು?
೧೧. ಅಷ್ಟ ದಿಗಜ್ಜರು ಎಂಬ ಕವಿಗಳು ಯಾವ
ರಾಜನ ಆಸ್ಥಾನದಲ್ಲಿದ್ದರು?
೧೨. ಗೆಲಿಲಿಯೋನ ಮೊದಲ ವೈಜ್ಞಾನಿಕ
ಸಂಶೋಧನೆ ಯಾವುದು?
೧೩. ಆಕಾಶವಾಣಿಯಲ್ಲಿ ಮಾತನಾಡಿದ
ಮೊದಲ ಕನ್ನಡಿಗ ಯಾರು?
೧೪. ನಿದ್ರಾ ರೋಗಕ್ಕೆ ಕಾರಣವಾಗುವ
ಸೂಕ್ಷ್ಮ ಜೀವಿ ಯಾವುದು?
೧೫. ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ
ಪ್ರಧಾನ ಮಂತ್ರಿ ಯಾರು?
೧೬. ಬೆಂಕಿ ಪೊಟ್ಟಣಗಳ ತಯಾರಿಕೆಯಲ್ಲಿ
ಬಳಸುವ ರಂಜಕ ಯಾವುದು?
೧೭. ಕನಕ ಪುರಂದರ ಪ್ರಶಸ್ತಿ ಪಡೆದುಕೊಂಡ
ಮೊದಲ ಕನ್ನಡಿಗ ಯಾರು?
೧೮. ಅರುಣಾಚಲ ಪ್ರದೇಶಕ್ಕೆ ಇದ್ದ ಮೊದಲ
ಹೆಸರು ಯಾವುದು?
೧೯. ನಾಟಕರತ್ನ ಬಿರುದು ಹೊಂದಿದ
ಕರ್ನಾಟಕದ ಹಿರಿಯ ರಂಗಕರ್ಮಿ ಯಾರು?
೨೦. ಜಗತ್ತಿನ ಅತ್ಯಂತ ಚಿಕ್ಕ ಖಂಡ
ಯಾವುದು?
೨೧. ಸಾಪೇಕ್ಷತಾವಾದವನ್ನು ಮಂಡಿಸಿದ
ವಿಜ್ಞಾನಿ ಯಾರು?
೨೨. ಖಾಸಿ ಜನಾಂಗ ಭಾರತದ ಯಾವ
ರಾಜ್ಯಕ್ಕೆ ಸೇರಿದವರು?
೨೩. ಸತ್ಯಾಶ್ರಯ ಎಂದು ಬಿರುದು
ಹೊಂದಿದ್ದ ಚಾಲುಕ್ಯರ ದೊರೆ ಯಾರು?
೨೪. ಭಾರತದ ಮೊದಲ ಉಪಗ್ರಹ
ಆರ್ಯಭಟವನ್ನು ಭೂ ಪ್ರದಕ್ಷಿಣೆಯ ಕಕ್ಷದಲ್ಲಿ
ಸ್ಥಾಪಿಸಿದ ವರ್ಷ ಯಾವುದು?
೨೫. ನೈಲ್ ನದಿಯ ಕೊಡುಗೆ ಎಂದು ಯಾವ
ದೇಶವನ್ನು ಕರೆಯುತ್ತಾರೆ?
೨೬. ಭಾರತಕ್ಕೆ ಮೊದಲು ಗುಲಾಬಿ
ಗಿಡವನ್ನು ತಂದು ಬೆಳೆಸಿದವರು ಯಾರು?
೨೭. ರಣರಿಸಕ ಎಂಬ ಬಿರುದನ್ನು ಪಡೆದಿದ್ದ
ಚಾಲುಕ್ಯ ದೊರೆ ಯಾರು?
೨೮. ಅಖಿಲ ಭಾರತ ಅಸ್ಪೃಶ್ಯತಾ ವಿರೋಧಿ
ಸಂಘವನ್ನು ಸ್ಥಾಪಿಸಿದವರು ಯಾರು?
೨೯. ಪೋಲೋ ಆಟದಲ್ಲಿ ಪ್ರಥಮ ಬಾರಿಗೆ
ಭಾರತ ವಿಶ್ವಕಪ್ ಗೆದ್ದ ವರ್ಷ ಯಾವುದು?
೧. ಭಾರತ
೨. ಡಾ|| ಕೆ.ಎಂ.ಮುನಿಶ
೩. ಚಾಮರಾಜನಗರ
೪. ಗೊಂಡೇದಹಳ್ಳಿ ರುದ್ರಪ್ಪ ಚನ್ನಬಸಪ್ಪ
೫. ಬೆಂಗಳೂರು
೬. ಹಿಮಾಚಲ ಪ್ರದೇಶ
೭. ಕ್ಯೂಬಾ
೮. ಸೊನಲಿಗ ಸಿದ್ಧರಾಮ
೯. ೧೯೬೩
೧೦. ವಾದ್ಯ ಸಂಗೀತ
೧೧. ಶ್ರೀ ಕೃಷ್ಣದೇವರಾಯ
೧೨. ಲೋಲಕ
೧೩. ಕುವೆಂಪು
೧೪. ಟ್ರಿಪೆನೊಸೋಮಾ ಗ್ಯಾಬಿಯೆನ್ಸಿ
೧೫. ಜವಹರಲಾಲ್ ನೆಹರು
೧೬. ಕೆಂಪು ರಂಜಕ
೧೭. ತಿಟ್ಟೆ ಕೃಷ್ಣಯ್ಯಂಗಾರ್
೧೮. ನೇಫಾ
೧೯. ಗುಬ್ಬಿ ವೀರಣ್ಣ
೨೦. ಅಂಟಾರ್ಟಿಕಾ
೨೧. ಆಲ್ಬರ್ಟ್ ಐನ್ ಸ್ಟೀನ್
೨೨. ಮೇಘಾಲಯ
೨೩. ಕೀರ್ತಿವರ್ಮ
೨೪. ೧೯೭೫
೨೫. ಈಜಿಪ್ಟ್
೨೬. ಬಾಬರ್
೨೭. ವಿಕ್ರಮಾದಿತ್ಯ
೨೮. ಎಂ.ಕೆ.ಗಾಂಧಿ
೨೯. ೧೯೫೭
ಪ್ರಶ್ನೆಗಳುಉತ್ತರಗಳು
೧. ಗುಜರಾತಿ ಲೇಖಕ ಪನ್ನಾಲಾಲ್ ಪಟೇಲವರ ಯಾವ ಕೃತಿಗೆ
ಜ್ಞಾನಪೀಠ ಪ್ರಶಸ್ತಿ ದೊರಕಿದೆ?
೨. ಎಡಕಲ್ಲು ಗುಡ್ಡದ ಮೇಲೆ ಕಾದಂಬರಿಯ ಕರ್ತೃ
ಯಾರು?
೩. ಮೀರಾಬಾಯಿ ಯಾವ ಸಂತತಿಯ ರಾಣಿ?
೪. ಕರ್ನಾಟಕದಲ್ಲಿ ದೊಡ್ಡ ವಿದ್ಯುತ್ ಯೋಜನೆ
ಹೊಂದಿರುವ ನದಿ ಯಾವುದು?
೫. ಮೇಘಾಲಯ ರಾಜ್ಯದ ಪ್ರಾದೇಶಿಕ ಭಾಷೆ ಯಾವುದು?
೬. ಕಾವೇರಿ ನದಿ ಸೃಷ್ಟಿಸಿರುವ ಎರಡು ಪ್ರಮುಖ
ಜಲಪಾತಗಳು ಯಾವುವು?
೭. ರಕ್ಕಸತಂಗಡಿಯ ಯುದ್ಧ ನಡೆದ ವರ್ಷ
ಯಾವುದು?
೮. ಮೂರು ಹಂತದ ಪಂಚಾಯತ್ ರಾಜ್
ವ್ಯವಸ್ಥೆಯನ್ನು ರೂಪಿಸಿದ ಸಮಿತಿ ಯಾವುದು?
೯. ೧೯೯೦ರಲ್ಲಿ ದೇವನೂರು ಮಹಾದೇವ ಅವರ ಯಾವ ಕೃತಿಗೆ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ದೊರಕಿದೆ?
೧೦. ಡಾಲರ್ ಸೊಸೆ ಕೃತಿಯ ಕರ್ತೃ ಯಾರು?
೧೧. ಧ್ವನಿವರ್ಧಕವನ್ನು ಕಂಡುಹಿಡಿದವರು ಯಾರು?
೧೨. ಮೊದಲ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ
ಪಂಗಡದ ಆಯೋಗದ ಅಧ್ಯಕ್ಷರು ಯಾರಾಗಿದ್ದರು?
೧೩. ಮಣಿಪುರದಲ್ಲಿ ಪ್ರಸಿದ್ಧವಾದ ಶಾಸ್ತ್ರೀಯ
ನೃತ್ಯ ಯಾವುದು?
೧೪. ಕೆ.ಪಿ.ಎಸ್.ಸಿ ಯ ವಿಸ್ತೃತ ರೂಪವೇನು?
೧೫. ತುಘಲಕ್ ವಂಶದ ಸ್ಥಾಪಕ ಯಾರು?
೧೬. ಜಗತ್ತಿನ ಕಾಫಿ ಬಂದರುವೆಂದು ಹೆಸರು ಗಳಿಸಿದ
ಸ್ಥಳ ಯಾವುದು?
೧೭. ಬಂಗಾಲಿ ಭಾಷೆಯಲ್ಲಿ ರಾಮಾಯಣ ರಚಿಸಿದ ಕವಿ
ಯಾರು?
೧೮. ಕ್ಷಯ ರೋಗ ನಿರೋಧಕ ಲಸಿಕೆ ಬಿ.ಸಿ.ಜಿ ಯ ವಿಸ್ತೃತ
ರೂಪವೇನು?
೧೯. ಅಲ್ಲಮಪ್ರಭುಗಳು ಯಾವ ಕಾವ್ಯನಾಮದಲ್ಲಿ
ವಚನಗಳನ್ನು ಬರೆದಿದ್ದಾರೆ?
೨೦. ನೀರನ್ನು ಶುದ್ಧಿಗೊಳಿಸಲು
ಬಳಸುವ ಅನಿಲ ಯಾವುದು?
೨೧. ಆಲಿಪ್ತ ಚಳುವಳಿಯ ಮೊದಲ ಸಮಾವೇಶ
ಎಲ್ಲಿ ನಡೆಯಿತು?
೨೨. ನಿರಂಜನ ಇದು ಯಾವ ಕಾವ್ಯ ನಾಮ?
೨೩. ೧೯೯೫ರಲ್ಲಿ ಕೆ.ಎಸ್.ನರಸಿಂಹಸ್ವಾಮಿಯವರ
ಯಾವ ಕೃತಿಗೆ ಪಂಪ ಪ್ರಶಸ್ತಿ ದೊರಕಿದೆ?
೨೪. ೧೯೭೯ರಲ್ಲಿ ಧರ್ಮಸ್ಥಳದಲ್ಲಿ ನಡೆದ ಅಖಿಲ
ಭಾರತ ಕನ್ನಡ ಸಹಿತ್ಯ ಸಮ್ಮೇಳನದ ಅಧ್ಯಕ್ಷರು
ಯಾರಾಗಿದ್ದರು?
೨೫. ಹಿಂದಿ ಭಾಷೆಯ ಪ್ರಸಾರವನು ಹೆಚ್ಚಿಸುವುದು.
ಕೇಂದ್ರದ ಕರ್ತವ್ಯವೆಂದು ಹೇಳುವ ಸಂವಿಧಾನದ
ವಿಧಿ ಯಾವುದು?
೨೬. ಕೆ.ಎಸ್.ಐ.ಎಮ್.ಸಿ ಯ ವಿಸ್ತೃತ ರೂಪವೇನು?
೨೭. ಹದಿಬದೆಯ ಧರ್ಮ ಇದು ಯಾರ ಕೃತಿ?
೨೮. ಪ್ರಥಮ ಬಾರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ
ಪಡೆದವರು ಯಾರು?
೨೯. ವಿಶ್ವ ಮಾನವ ಸಂದೇಶ ಸಾರಿದ ಕವಿ ಯಾರು?
೧. ಮಾನ್ವಿನಿ ಭಾವಾಯಿ
೨. ಭಾರತಿಸುತ
೩. ಚೌಹಾನಾ
೪. ಶರಾವತಿ
೫. ಇಂಗ್ಲೀಷ್
೬. ಶಿವನಸಮುದ್ರ ಮತ್ತು ಹೊಗೆನಕಲ್ ಜಲಪಾತ
೭. ೧೫೬೫
೮. ಬಲವಂತ್ರಾಯ್ ಮೆಹ್ತಾ ಸಮಿತಿ
೯. ಕುಸುಮ ಬಾಲೆ
೧೦. ಸುಧಾಮೂರ್ತಿ
೧೧. ಬರ್ಲೈನರ್
೧೨. ಶ್ರೀ ಬೋಲಾ ಪಾಸ್ವಾನ್ ಶಾಸ್ತ್ರಿ
೧೩. ಮಣಿಪುರಿ
೧೪. ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮಿಷನ್
೧೫. ಘೀಯಾ ಸಂದ್ಧಿನ್ ತುಘಲಕ್
೧೬. ರಿಯಾಡಿಜನೈರೋ
೧೭. ಕೃತಿವಾಸ
೧೮. ಬ್ಯಾಸಲಿಸ್ ಕ್ಯಾಲ್ಮೆಟ್ ಗೆಲಿನ್
೧೯. ಗುಹೇಶ್ವರಾ
೨೦. ಕ್ಲೋರಿನ್
೨೧. ಬೆಲ್ಗ್ರೇಡ್
೨೨. ಕುಳಕುಂದ ಶಿವರಾಮ
೨೩. ದುಂಡುಮಲ್ಲಿಗೆ
೨೪. ಗೋಪಾಲಕೃಷ್ಣ ಅಡಿಗ
೨೫. ೩೫೧ನೇ ವಿಧಿ
೨೬. ಕರ್ನಾಟಕ ಸ್ಮಾಲ್ ಇಂಡಸ್ತ್ರೀಸ್
ಮಾರ್ಕೆಟಿಂಗ್ ಕಾರ್ಪೋರೇಷನ್ .ಲಿ
೨೭. ಸಂಚಿಹೊನ್ನಮ್ಮ
೨೮. ಹುಣಸೂರು ಕೃಷ್ಣಮೂರ್ತಿ
೨೯. ಕುವೆಂಪು
ಪ್ರಶ್ನೆಗಳು ಉತ್ತರಗಳು
೧. ಏಷ್ಯಾ ಖಂಡದಲ್ಲಿಯೇ ಅತ್ಯಂತ
ದೊಡ್ಡ ರೈಲು ಸಂಪರ್ಕ
ಹೊಂದಿರುವ ದೇಶ ಯಾವುದು?
೨. ಪುತಿನ ಇದು ಯಾರ ಕಾವ್ಯ ನಾಮ?
೩. ವೆಸ್ಟ್ ಕೊಸ್ಟ್ ಪೇಪರ್ ಮಿಲ್ ಕಾರ್ಖಾನೆ
ಕರ್ನಾಟಕದಲ್ಲಿ ಎಲ್ಲಿದೆ?
೪. ಮನುಶ್ರೀ ಪ್ರಶಸ್ತಿ ಪಡೆದ ಪ್ರಥಮ
ಮಹಿಳಾ ಸಾಹಿತಿ ಯಾರು?
೫. ಮಲಯಾಳಂನ ಸಾಹಿತಿ ತಕಳಿ ಶಿವಶಂಕರ
ಪಿಳ್ಳೈಯವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ
ದೊರತಿದೆ?
೬. ಬೆಂಗಳೂರಿನಲ್ಲಿ ಹೈಕೋರ್ಟ್ ಸ್ಥಾಪನೆಯಾದ ವರ್ಷ
ಯಾವುದು?
೭. ವಾಯುಭಾರ ಮಾಪಕ ಕಂಡು ಹಿಡಿದವರು ಯಾರು?
೮. ನೊಬೆಲ್ ಪ್ರಶಸ್ತಿ ಪಡೆದ ಪಾಕಿಸ್ತಾನದ ಏಕೈಕ
ವ್ಯಕ್ತಿ ಯಾರು?
೯. ಮಹಾನದಿಯ ಉಗಮ ಸ್ಥಳ ಯಾವುದು?
೧೦. ರಸಗೊಬ್ಬರ ಕಾರ್ಖಾನೆ ಸ್ಥಾಪಿಸಿದ ಭಾರತದ
ಮೊದಲ ರಾಜ್ಯ ಯಾವುದು?
೧೧. ಮಾಗೋಡು ಜಲಪಾತವನ್ನು ಉಂಟು ಮಾಡುವ ನದಿ
ಯಾವುದು?
೧೨. ಅಟಕಾಮಾ ಮರುಭೂಮಿ ಯಾವ ಖಂಡದಲ್ಲಿದೆ?
೧೩. ಸುರ್ ಕಾ ಬಾದ್ ಷಾ ಎಂಬ ಬಿರುದಿಗೆ ಪಾತ್ರರಾದ
ಹಿಂದೂಸ್ತಾನಿ ಸಂಗೀತ ಕಲಾವಿದ ಯಾರು?
೧೪. ಸಂಸ್ಕಾರ ಕೃತಿಯ ಕರ್ತೃ ಯಾರು?
೧೫. ವಿದ್ಯುತ್ ವಾಷಿಂಗ್ ಮಿಷನ್ ನ ಸಂಶೋಧಕರು
ಯಾರು?
೧೬. ಭೂಮಿಯ ಉಗಮದ ಬಗ್ಗೆ ಉಬ್ಬರ ವಿಳತ
ಸಿದ್ಧಾಂತ ನೀಡಿದವರು ಯಾರು?
೧೭. ೧೯೮೯ರಲ್ಲಿ ಶಿವರಾಮ ಕಾರಂತರ ಯಾವ ಕೃತಿಗೆ
ಪಂಪ ಪ್ರಶಸ್ತಿ ದೊರಕಿದೆ?
೧೮. ಮೆಸಪಟೋಮಿಯಾದ ಈಗಿನ ಹೆಸರೇನು?
೧೯. ೧೯೬೨ರಲ್ಲಿ ದೇವುಡು
ನರಸಿಂಹಶಾಸ್ತ್ರೀಯವರ ಯಾವ ಕೃತಿಗೆ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ದೊರಕಿದೆ?
೨೦. ಕೃಷಿ ಸಾಲಕ್ಕೆ ಸಂಬಂಧಿಸಿದಂತೆ ಇರುವ
ಅತಿ ದೊಡ್ಡ ಬ್ಯಾಂಕ್ ಯಾವುದು?
೨೧. ಬ್ರಹ್ಮ ಪುತ್ರ ನದಿಯನ್ನು ಟಿಬೇಟ್ನಲ್ಲಿ ಯಾವ
ಹೆಸರಿನಿಂದ ಕರೆಯುತ್ತಾರೆ?
೨೨. ಹಕ್ಕಿಗಳಲ್ಲಿ ಕಂಡು ಬರುವ ಹೃದಯದ ಕೋಣೆಗಳ
ಸಂಖ್ಯೆ ಎಷ್ಟು?
೨೩. ಮರುಭೂಮಿಯ ಹಡಗು ಎಂದು ಕರೆಯಲ್ಪಡುವ
ಪ್ರಾಣಿ ಯಾವುದು?
೨೪. ದಕ್ಷಿಣ ಕೋರಿಯಾದ ರಾಜಧಾನಿ ಯಾವುದು?
೨೫. ಏಡ್ಸ್ ಮೊಟ್ಟ ಮೊದಲ ಬಾರಿಗೆ
ಯಾವ ದೇಶದಲ್ಲಿ ಕಂಡು ಬಂದಿತು?
೨೬. ರಾಷ್ಟ್ರೀಯ ಜವಳಿ ನಿಗಮ ವಲಯ
(ಎನ್.ಟಿ.ಸಿ) ಯನ್ನು ಸ್ಥಾಪಿಸಿದ ವರ್ಷ ಯಾವುದು?
೨೭. ದೀಪಾ ಮೆಹ್ತಾ ನಿರ್ಮಾಣದ ಯಾವ
ಚಲನಚಿತ್ರ ವಿವಾದನ್ನು ಉಂಟುಮಾಡಿತ್ತು?
೨೮. ಕಳಿಂಗ್ ಕಪ್ ಇದು ಯಾವ ಕ್ರೀಡೆಗೆ
ಸಂಬಂಧಿಸಿದೆ?
೨೯. ಧ್ವನಿಯ ತೀಕ್ಷ್ಣತೆಯನ್ನು ಅಳೆಯುವ
ಸಾಧನ ಯಾವುದು?
೧. ಭಾರತ
೨. ಪು.ತಿ.ನರಸಿಂಹಚಾರ್
೩. ದಾಂಡೇಲಿ
೪. ಉಷಾ ನವರತ್ನರಾಂ
೫. ಕಾಯರ್
೬. ೧೮೬೨
೭. ಟೊರಿಸೆಲ್ಲಿ
೮. ಅಬ್ದುಲ್ ಸಲಾಮ್
೯. ಛತಿಸ ಘಡ್ಡದ ಬಸ್ತರ್ ಪ್ರಸ್ಥಭೂಮಿಯ
ಸಿಂಹಾವ
೧೦. ತಮಿಳುನಾಡು
೧೧. ಬೇಡ್ತಿ
೧೨. ಅಮೇರಿಕಾ
೧೩. ಬಸವರಾಜ ರಾಜಗುರು
೧೪. ಡಾ|| ಯು.ಆರ್.ಅನಂತಮೂರ್ತಿ
೧೫. ಆಲ್ವ.ಜೆ.ಫಿಶರ್ (ಯು.ಎಸ್.ಎ)
೧೬. ಜೀನ್ಸ್ ಮತ್ತು ಜೆಫ್ರಿ
೧೭. ಮೈಮನಗಳ ಸುಳಿಯಲ್ಲಿ
೧೮. ಇರಾಕ್
೧೯. ಮಹಾಕ್ಷತ್ರಿಯ
೨೦. ನಬಾರ್ಡ್
೨೧. ತ್ಸಾಂಗ್ವೊ
೨೨. ನಾಲ್ಕು
೨೩. ಒಂಟೆ
೨೪. ಸಿಯೋಲ್
೨೫. ಅಮೇರಿಕಾ
೨೬. ೧೯೬೮
೨೭. ವಾಟರ್
೨೮. ಬಾಕ್ಸಿಂಗ್
೨೯. ಡೆಸಿಬಲ್

ಮೂಲ : ಲಯನ್ ಡಿ.ವಿ.ಜಿ.© 2006–2019 C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate