ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಭಾಗ-4

ಸಾಮಾನ್ಯ ಜ್ಞಾನ ಬಗ್ಗೆ ಇಲ್ಲಿ ತಿಳಿಸಲಾಗಿದೆ

ಪ್ರಶ್ನೆಗಳು:

ಉತ್ತರಗಳು:

೧. ಕರ್ನಾಟಕದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ
ಪ್ರಥಮ ನಿರ್ದೇಶಕರು ಯಾರು?
೨. ಟೆಲ್ಕೊ (TELCO) ನ ವಿಸ್ತೃತ ರೂಪವೇನು?
೩. ಕೋಟಿ ವಿದ್ಯೆಗಳಲ್ಲಿ ಮೇಟಿ ವಿಧ್ಯೆಯೇ ಮೇಲು
ಎಂದು ಹೇಳಿದವರು ಯಾರು?
೪. ಬಂಕಲೇಶ್ವರಲಿಂಗ ಇದು ಯಾರ
ಅಂಕಿತನಾಮವಾಗಿದೆ?
೫. ಶೃಂಗೇರಿಯ ಶಾರದಾ ಪೀಠ ಸ್ಥಾಪಿಸಿದವರು
ಯಾರು?
೬. ಸಮೀಪ ದೃಷ್ಟಿದೋಶವನ್ನು ನಿವಾರಿಸಲು
ಬಳಸುವ ಮಸೂರ ಯಾವುದು?
೭. ರಾಸಾಯನಿಕ ಪದಾರ್ಥಗಳಿಂದ ತಯಾರಾಗುವ ದಾರ
ಯಾವುದು?
೮. ಮದ್ದೂರು ವಡೆಗೆ ಪ್ರಸಿದ್ಧವಾದರೆ ಧಾರವಾಡ ಯಾವುದಕ್ಕೆ
ಪ್ರಸಿದ್ಧವಾಗಿದೆ?
೯. ಕವನ ಸಂಕಲನ ಆಧರಿಸಿ ನಿರ್ಮಿಸಿದ ಏಕೈಕ
ಕನ್ನಡ ಚಲನಚಿತ್ರ ಯಾವುದು?
೧೦. ಸೂರ್ಯನಿಗೆ ಅತಿ ದೂರದಲ್ಲಿರುವ ಗ್ರಹ ಯಾವುದು?
೧೧. ಕೊಲ್ಕತ್ತಾದ ಇಂಡಿಯನ್
ಸ್ಟಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ನ ಸ್ಥಾಪಕರಾರು?
೧೨. ಬೇಗಮ್ ಅಖ್ತರ್ ರವರು ಯಾವುದಕ್ಕೆ ಪ್ರಸಿದ್ಧರು?
೧೩. ರಾಷ್ಟ್ರೀಯ ಕಲ್ಲಿದ್ದಲು ಅಭಿವೃದ್ದಿ
ಮಂಡಳಿ ಸ್ಥಾಪನೆಯಾದ ವರ್ಷ ಯಾವುದು?
೧೪. ಆಹಾರದಲ್ಲಿ ಕೊಬ್ಬಿನ ಅಂಶ
ಕಡಿಮೆಯಾದಲ್ಲಿ ಉಂಟಾಗುವ ಕಾಯಿಲೆ ಯಾವುದು?
೧೫. ಆನಂದ ಇದು ಯಾರ ಕಾವ್ಯನಾಮವಾಗಿದೆ?
೧೬. ಭಾರತದ ಬಾವುಟದಲ್ಲಿರುವ ಚಕ್ರವು ಯಾವ ರಾಜನಿಗೆ
ಸಂಬಂಧಿಸಿದೆ?
೧೭. ಕೃಷ್ಣದೇವರಾಯನು ತೆಲಗು ಭಾಷೆಯಲ್ಲಿ ಬರೆದ
ಗ್ರಂಥ ಯಾವುದು?
೧೮. ವಿಶ್ವ ಪ್ರಸಿದ್ಧ ನಯಾಗರ್ ಜಲಪಾತ ಯಾವ
ದೇಶದಲ್ಲಿದೆ?
೧೯. ಭಾರತೀಯ ರಿಸರ್ವ್ ಬ್ಯಾಂಕಿನ
ಲಾಂಛನದಲ್ಲಿ ಯಾವ ಪ್ರಾಣಿ ಅಂಕಿತವಾಗಿದೆ?
೨೦. ಭಾರತದಲ್ಲಿ ಶೇಕಡವಾರು ಅತಿ ಕಡಿಮೆ ಅರಣ್ಯ
ಹೊಂದಿರುವ ರಾಜ್ಯ ಯಾವುದು?
೨೧. ಅಬ್ದುಲ್ ಸಲಾಂ ಅಂತರಾಷ್ಟ್ರೀಯ
ಪತ್ರಿಕೋದ್ಯಮ ಪ್ರಶಸ್ತಿಯನ್ನು ಪಡೆದ
ಮೊದಲ ಕನ್ನಡಿಗ ಯಾರು?
೨೨. ರಾಷ್ಟ್ರಕೂಟರ ರಾಜ್ಯ ಲಾಂಛನ ಯಾವುದಾಗಿತ್ತು?
೨೩. ಹಜಾರಿಬಾಗ್ ನ್ಯಾಷನಲ್ ಪಾರ್ಕ್ ಯಾವ
ರಾಜ್ಯದಲ್ಲಿದೆ?
೨೪. ಥರ್ಮಾಸ್  ಪ್ಲಾಸ್ಕ್ ನ್ನು ಕಂಡುಹಿಡಿದವರು ಯಾರು?
೨೫. ನಾರ್ಥ್ ವೆಲ್ಸ್ ಕಪ್ ಯಾವ ಕ್ರೀಡೆಗೆ
ಸಂಬಂಧಿಸಿದೆ?
೨೬. ಇಂಗ್ಲೆಂಡಿನಲ್ಲಿದ್ದ ಟಿಪ್ಪುವಿನ
ಖಡ್ಗವನ್ನು ಮತ್ತೆ ಭಾರತಕ್ಕೆ ತಂದವರು ಯಾರು?
೨೭. ಸರ್ನಿಯಾ ಫೋಟೋ ವೋಲ್ಟಾಯಿಕ್ ಪವರ್ ಪ್ಲಾಂಟ್
ಯಾವ ದೇಶದಲ್ಲಿದೆ?
೨೮. ಕರ್ನಾಟಕದಲ್ಲಿ ಅತಿ ಹೆಚ್ಚು ದೇವಸ್ಥಾನಗಳನ್ನು
ನಿರ್ಮಿಸಿದ ರಾಜ ಮನೆತನ ಯಾವುದು?
೨೯. ಬಾಸ್ಕೆಟ್ ಬಾಲ್ ಕ್ರೀಡೆಯಲ್ಲಿರುವ ಆಟಗಾರರ
ಸಂಖ್ಯೆ ಎಷ್ಟು?
ಪ್ರಶ್ನೆಗಳು:
30. ವಿಶ್ವಸಂಸ್ಥೆಯ ಶಿಕ್ಷಣ ವೈಜ್ಞಾನಿಕ ಮತ್ತು
ಸಾಂಸ್ಕೃತಿಕ ಸಂಸ್ಥೆಯ ಮುಖ್ಯ ಕಛೇರಿ ಎಲ್ಲಿದೆ?
31. ಯುನಿಸೆಫ್ (UNICEF) ವಿಸ್ತೃತ ರೂಪವೇನು?
೩2. ವೀಚಿ ಇದು ಯಾರ ಕಾವ್ಯನಾಮವಾಗಿದೆ?
33. ೧೯೧೮ರಲ್ಲಿ ಆರಂಭವಾದ ಪ್ರಬುದ್ಧ ಕರ್ನಾಟಕ
ಪತ್ರಿಕೆಯ ಮೊದಲ ಸಂಪಾದಕರು
ಯಾರಾಗಿದ್ದರು?
34. ಸಲ್ಮಾನ್ ಖಾನ್ ಮೇಣದ ಪ್ರತಿಮೆ ಲಂಡನ್ನಿನ
ಯಾವ ಮ್ಯೂಸಿಯಂನಲ್ಲಿದೆ?
35. ದೇಶದ ಮೊಟ್ಟ ಮೊದಲ ಮಹಿಳಾ
ಐಪಿಎಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕಿರಣ
ಬೇಡಿಯವರು ಇತ್ತೀಚೆಗೆ ಯಾವ ಪಕ್ಷ
ಸೇರಿಕೊಂಡರು?
36. ಭಾರತಕ್ಕೆ ಸ್ವತಂತ್ರ್ಯ ದೊರೆತಾಗ
ಇಂಗ್ಲೆಂಡಿನ ಪ್ರಧಾನಿ ಯಾರಾಗಿದ್ದರು?
37. ತೆಲುಗು ಸಾಹಿತ್ಯದ ಪ್ರಥಮ ಕಾದಂಬರಿ ಯಾವುದು?
38. ಸಂಗೀತ ಗಂಗಾದೇವಿ ಎಂದು
ಕರ್ನಾಟಕದ ಯಾವ ಮಹಿಳೆಯನ್ನು ಕರೆಯುತ್ತಾರೆ?
39. ಮೊದಲ ಕನ್ನಡ ಪುಸ್ತಕ ಪ್ರಾಧಿಕಾರದ
ಅಧ್ಯಕ್ಷರಾಗಿದ್ದವರು ಯಾರು?
40. ಕೆಳದಿ ರಾಜ್ಯದ ಸಂಸ್ಥಾಪಕರು ಯಾರು?
41. ಸಾರೆ ಜಹಾಂಸೆ ಅಚ್ಚಾ ಈ ಗೀತೆಯ
ಶೀರ್ಷಿಕೆ ಯಾವುದು?
42. ಭಾರತದಲ್ಲಿ ರಾಷ್ಟ್ರೀಯ ಕ್ರೀಡಾ
ಸಂಸ್ಥೆಯನ್ನು ಯಾವ ವರ್ಷ ಆರಂಭಿಸಲಾಯಿತು?
43. ಭಾರತೀಯ ಸೆಣಬು ಸಂಶೋಧನಾ
ಸಂಸ್ಥೆ ಎಲ್ಲಿದೆ?
44. ಭಾತರದ ಸಂವಿಧಾನದಲ್ಲಿ ರಾಜ್ಯ ನೀತಿ
ನಿರ್ದೇಶಕ ತತ್ವಗಳನ್ನು ಯಾವ ದೇಶದ
ಸಂವಿಧಾನದಿಂದ ಆರಿಸಿಕೊಳ್ಳಲಾಗಿದೆ?
45. ಅಶೋಕನ ಮನ ಪರಿವರ್ತಿಸಿದ ಕಳಿಂಗ ಯುದ್ಧ
ನಡೆದ ಸ್ಥಳ ಇಂದಿನ ಯಾವ ರಾಜ್ಯದಲ್ಲಿ ಬರುತ್ತದೆ?
46. ಅಜಗಣ್ಣ ತಂದೆ ಇದು ಯಾರ
ಅಂಕಿತನಾಮವಾಗಿದೆ?
47. ಗಾಯಗಳು ಬೇಗ ವಾಸಿಯಾಗಲು ಬೇಕಾಗುವ ವಿಟಮಿನ್
ಯಾವುದು?
48. ಮಾನವನ ಉಸಿರಾಟವನ್ನು ಅಳೆಯಲು ಬಳಸುವ
ಉಪಕರಣ ಯಾವುದು?
49. ಅರುಣಾಚಲ ಪ್ರದೇಶಕ್ಕೆ ಇದ್ದ ಮೊದಲ
ಹೆಸರು ಯಾವುದು?
50. ಭಾರತದ ಸಂವಿಧಾನ ರಚನಾ ಸಮಿತಿಯ
ಅಧ್ಯಕ್ಷರಾದವರು ಯಾರು?
51. ನಂದರ ವಂಶ ಸ್ಥಾಪಕ ಯಾರು?
52. ಪ್ರಪಂಚದ ಅತೀ ವೇಗದ ರೈಲು
ಯಾವುದು?
53. ಭಾರತದ ಮೊಘಲ್ ಸಾಮ್ರಾಜ್ಯದ
ಕೊನೆಯ ಚಕ್ರವರ್ತಿ ಯಾರು?
54. ಅತಿ ಹೆಚ್ಚು ಅಂತರಾಷ್ಟ್ರೀಯ
ಪುಟ್ಬಾಲ್ ಪಂದ್ಯಗಳನ್ನು ಆಡಿದ ಆಟಗಾರ ಯಾರು?
55. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್
ವರ್ಲ್ಡ್ಕಲ್ಚರ್ ಕರ್ನಾಟಕದಲ್ಲಿ ಎಲ್ಲಿದೆ?
56. ಗೋಕಾಕ್ ಕರದಂಟಿಗೆ ಪ್ರಸಿದ್ಧಯಾದರೆ ಮದ್ದೂರು
ಯಾವುದಕ್ಕೆ ಪ್ರಸಿದ್ಧವಾಗಿದೆ?
57. ೨೪ ಘಂಟೆಗಳ ನಿರಂತರ
ಶಾಸ್ತ್ರೀಯ ಗಾಯನದಲ್ಲಿ ಗಿನ್ನಿಸ್ ದಾಖಲೆ ಮಾಡಿದ
ಕನ್ನಡಿಗ ಯಾರು?
58. ಇತ್ತೀಚಿಗೆ ಬಿಡುಗಡೆಯಾದ ತಮಿಳು ಲಿಂಗ
ಚಿತ್ರದ ನಿರ್ಮಾಪಕರು ಯಾರು?

೧. ಎ.ಎನ್ ಮೂರ್ತಿರಾವ್
೨. ಟಾಟಾ ಇಂಜಿನಿಯರಿಂಗ್ ಅಂಡ್ ಲೋಕೋಮೋಟಿವ್
ಕಂಪನಿ
೩. ಸರ್ವಜ್ಞ
೪. ಸುಂಕದ ಬಂಕಣ್ಣ
೫. ಶಂಕರಾಚಾರ್ಯರು
೬. ನಿಮ್ನಮಸೂರ
೭. ಟೆರೆಲಿನ್
೮. ಪೇಡ
೯. ಮೈಸೂರು ಮಲ್ಲಿಗೆ
೧೦. ಯುರೇನೆಸ್
೧೧. ಪಿ.ಸಿ.ಮೆಹಲನೋಬಿಸ್
೧೨. ಗಜಲ್ ಹಾಡುಗಾರಿಕೆ
೧೩. ೧೯೫೬
೧೪. ಫೈನೋಡರ್ಮ
೧೫. ಅಜ್ಜಂಪುರ ಸೀತಾರಾಂ
೧೬. ಅಶೋಕ
೧೭. ಅಮುಕ್ತ ಮೌಲ್ಯದ
೧೮. ಅಮೇರಿಕಾ
೧೯. ಹುಲಿ
೨೦. ಹರಿಯಾಣ
೨೧. ಪಿ.ಲಂಕೇಶ್
೨೨. ಗರುಡ
೨೩. ಬಿಹಾರ
೨೪. ಜೇಮ್ಸ್ ದಿವಾರ್
೨೫. ಶೂಟಿಂಗ್
೨೬. ವಿಜಯ ಮಲ್ಯ
೨೭. ಕೆನಡಾ
೨೮. ಹೊಯ್ಸಳ
೨೯. ಐದು ಜನ
30. ಪ್ಯಾರಿಸ್
31. ಯುನೈಟೆಡ್ ನೇಷನ್ಸ್ ಇಂಟರ್ನ್ಯಾಷನಲ್ ಚಿಲ್ಡ್ರನ್
ಎಮರ್ಜೆನ್ಸಿ ಫಂಡ್
32. ವೀ.ಚಿಕ್ಕವೀರಯ್ಯಾ
33. ಎ.ಆರ್.ಕೃಷ್ಣಶಾಸ್ತ್ರಿ
34. ಮೇಡಂ ಟುಸ್ಸಾಡ್ಸ್ ಮ್ಯೂಸಿಯಂ
35. ಬಿಜೆಪಿ
36. ಕ್ಲೆಮೆಂಟ್ ಆಟ್ಲೆ
37. ರಾಜಶೇಖರ ಚರಿತ್ರಮು
38. ಗಂಗೂಬಾಯಿ ಹಾನಗಲ್
39. ಪ್ರೊ.ಎಲ್.ಎಸ್.ಶೇಷಗಿರಿರಾವ್
40. ಚೌಡಪ್ಪ ಮತ್ತು ಭದ್ರಪ್ಪ ಸಹೋದರರು
41. ತರಾನಾ – ಯೇ – ಹಿಂದಿ
42. ೧೯೬೧
೪3. ಬ್ಯಾರಕ್ಪುರ (ಪ.ಬಂಗಾಳ)
44. ಐರ್ಲೆಂಡ್
45. ಒರಿಸ್ಸಾ
46. ಮುಕ್ತಾಯಕ್ಕ
47. ಸಿ ವಿಟಮಿನ್
48. ಕೈಮೊಗ್ರಾಫ್
49. ನೇಫಾ
50. ಡಾ|| ರಾಜೇಂದ್ರಪ್ರಸಾದ
51. ಮಹಾಪದ್ಮನಂದ
52. ಜಪಾನಿನ ಮೋನೋ ರೈಲ್
53. ೨ನೇ ಬಹುದ್ದೂರ್ ಶಾ
54. ಮಾಜೀದ್ ಅಬ್ದುಲ್ಲಾ (ಸೌದಿ ಅರೇಬಿಯಾ)
55. ಬೆಂಗಳೂರು
56. ವಡೆ
57. ಪ್ರಸನ್ನ ಮಾಧವಗುಡಿ
58. ರಾಕ್ಲೈನ್ ವೆಂಕಟೇಶ್

ಪ್ರಶ್ನೆಗಳು:

ಉತ್ತರಗಳು:

೧. ರವೀಂದ್ರನಾಥ ಠಾಗೂರರ ಪ್ರಥಮ ಕವನ
ಸಂಕಲನ ಯಾವುದು?
೨. ಎಪಿಎಮ್ಸಿ (APMC) ನ ವಿಸ್ತೃತ ರೂಪವೇನು?
೩. ನ್ಯಾಷನಲ್ ಏರೋನಾಟಿಕಲ್ ಲ್ಯಾಬೋರೇಟರಿ (NAL)
ಕರ್ನಾಟಕದಲ್ಲಿ ಎಲ್ಲಿದೆ?
೪. ಹಂಸ ಪಕ್ಷಿಯನ್ನು ತನ್ನ ವಾಹನವನ್ನಾಗಿ
ಹೊಂದಿರುವ ದೇವತೆ ಯಾರು?
೫. ಉತ್ತರ ಕನ್ನಡ ಜಿಲ್ಲೆಯ ಯಾವ ತಾಲ್ಲೂಕನ್ನು
ಗಾಂಧಿನೆಲೆ ಎಂದು ಕರೆಯುತ್ತಾರೆ?
೬. ದೊಡ್ಡ ಟೈಡಲ್ ವಿದ್ಯುತ್ ಸ್ಥಾವರವನ್ನು
ಸ್ಥಾಪಿಸಿದ ಮೊದಲ ದೇಶ ಯಾವುದು?
೭. ಯುರೇನಿಯಂ ಖನಿಜವನ್ನು ಅಧಿಕ ಪ್ರಮಾಣದಲ್ಲಿ
ಹೊಂದಿರುವ ರಾಜ್ಯ ಯಾವುದು?
೮. ಪ್ರಥ್ವಿವಲ್ಲಭ ಎಂದು ಬಿರುದು
ಹೊಂದಿದ್ದ ರಾಷ್ಟ್ರಕೂಟರ ದೊರೆ
ಯಾರು?
೯. ಹುತ್ತರಿಹಬ್ಬ ಕುಣಿತಕ್ಕೆ ಪ್ರಸಿದ್ಧವಾಗಿರುವ ಜಿಲ್ಲೆ
ಯಾವುದು?
೧೦. ಕೇಂದ್ರೀಯ ಹತ್ತಿ ತಂತ್ರಜ್ಞಾನ
ಸಂಶೋಧನಾ ಸಂಸ್ಥೆ ಎಲ್ಲಿದೆ?
೧೧. ಮೊದಲ ವಿಶ್ವಕನ್ನಡ ಸಮ್ಮೇಳನ
ನಡೆದ ಸ್ಥಳ ಯಾವುದು?
೧೨. ವಿಶ್ವವಿಖ್ಯಾತ ಹಂಪಿಯಲ್ಲಿ ಕಲ್ಲಿನ ರಥ
ಯಾವ ದೇವಾಲಯದಲ್ಲಿದೆ?
೧೩. ಬ್ಯಾಡಗಿ ಮೆಣಸಿನ ಕಾಯಿಗೆ ಪ್ರಸಿದ್ಧವಾದರೆ
ಇಲಕಲ್ ಯಾವುದಕ್ಕೆ ಪ್ರಸಿದ್ಧವಾಗಿದೆ?
೧೪. ಟಿಬೇಟಿಯನ್ ಸನ್ಯಾಸಿಗಳನ್ನ ಏನೆಂದು
ಕರೆಯುತ್ತಾರೆ?
೧೫. ಶ್ರೀ ಕೃಷ್ಣ ಇದು ಯಾರ
ಅಂಕಿತನಾಮವಾಗಿದೆ?
೧೬. ಜಲಜನಕವನ್ನು ಕಂಡು ಹಿಡಿದವರು ಯಾರು?
೧೭. ಶ್ರೀ ವೈಷ್ಣವ ಸಿದ್ಧಾಂತವನ್ನು
ಸ್ಥಾಪಿಸಿದವರು ಯಾರು?
೧೮. ಕನ್ನಡದ ಕೆಲಸಕ್ಕೆ ಡಾಕ್ಟರೇಟ್ ಪದವಿ ಗಳಿಸಿದ
ಮೊದಲಿಗ ಯಾರು?
೧೯. ವಿಶ್ವಾಮಿತ್ರನ ಆಶ್ರಮದ ಹೆಸರೇನು?
೨೦. ಸತತವಾಗಿ ನಾಲ್ಕು ಬಾರಿ ಅಮೇರಿಕಾದ ಅಧ್ಯಕ್ಷ
ಹುದ್ದೆ ಅಲಂಕರಿಸಿದವರು ಯಾರು?
೨೧. ಕುಂಬಾಸ ಇದು ಯಾರ ಕಾವ್ಯ ನಾಮವಾಗಿದೆ?
೨೨. ಗಂಟೆಗಳನ್ನು ಯಾವ ಲೋಹದ ಮಿಶ್ರಣದಿಂದ
ತಯಾರಿಸುತ್ತಾರೆ?
೨೩. ಝೂನ್ಸಿ ರಾಣಿ ಲಕ್ಷ್ಮಿಬಾಯಿಯ ದತ್ತು ಪುತ್ರನ
ಹೆಸರೇನು?
೨೪. ಫಿರ್ದೂಸಿ ಇವರು ಯಾರ ಆಸ್ಥಾನದ ಕವಿ ಆಗಿದ್ದರು?
೨೫. ಭಾರತದ ವಿದೇಶಿ ನೀತಿಯ ಮುಖ್ಯ ಶಿಲ್ಪಿ
ಯಾರು?
೨೬. ಕ್ಯಾಲ್ಸಿಯಂ ಸಲ್ಫೇಟ್ನ್ನು ಸಾಮಾನ್ಯವಾಗಿ
ಯಾವ ಹೆಸರಿನಿಂದ ಕರೆಯುತ್ತಾರೆ?
೨೭. ಆಧುನಿಕ ಶಿಕ್ಷಣದ ಪಿತಾಮಹಾನೆಂದು
ಕರೆಯಲ್ಪಡುವ ಶಿಕ್ಷಣ ತಜ್ಞ ಯಾರು?
೨೮. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ
ಎಲ್ಲಿದೆ?
೨೯. ಉತ್ತರಖಂಡ ರಾಜ್ಯವಾಗಿ ಅಸ್ತಿತ್ವಕ್ಕೆ
ಬಂದ ವರ್ಷ ಯಾವುದು?

೧. ಸಾಂಗ್ಸ್ ಆಫ್ ದಿ ಮಾರ್ನಿಂಗ್
೨. ಅಗ್ರಿಕಲ್ಚರ್ ಪ್ರೊಡ್ಯೂಸ್ ಮಾರ್ಕೆಟಿಂಗ್
ಕಮಿಟಿ
೩. ಬೆಂಗಳೂರು
೪. ವಿದ್ಯಾ ಸರಸ್ವತಿ
೫. ಅಂಕೋಲ
೬. ಫ್ರಾನ್ಸ್
೭. ಬಿಹಾರ
೮. ದಂತಿದುರ್ಗ
೯. ಕೊಡಗು
೧೦. ಮುಂಬೈ
೧೧. ಮೈಸೂರು
೧೨. ವಿಜಯ ವಿಠಲ
೧೩. ಸೀರೆಗಳು
೧೪. ಲಾಮೋಗಳು
೧೫. ವ್ಯಾಸರಾಯರು
೧೬. ಕ್ಯಾವೆಂಡಿಸ್
೧೭. ಶ್ರೀ ರಾಮಾನುಜಾಚಾರ್ಯರು
೧೮. ಫರ್ಡಿನಾಂಡ್ ಕಿಟೆಲ್
೧೯. ಸಿದ್ಧಾಶ್ರಮ
೨೦. ಫ್ರಾಂಕಲಿನ್ ರೂಜ್ವೆಲ್ಟ್
೨೧. ಕುಂಚೂರು ಬಾರಿಕೇರ ಸದಾಶಿವ
೨೨. ತಾಮ್ರ ಮತ್ತು ತವರ
೨೩. ದಾಮೋದರ
೨೪. ಘಜ್ನಿ ಮಹಮ್ಮದ್
೨೫. ಜವಹರಲಾಲ್ ನೆಹರು
೨೬. ಜಿಪ್ಸಂ
೨೭. ರೋಸೋ
೨೮. ಹುಬ್ಬಳಿ
೨೯. ೦೯.೧೧.೨೦೦೦

ಪ್ರಶ್ನೆಗಳು:

ಉತ್ತರಗಳು:

1. ಕರ್ನಾಟಕದ ಗತವೈಭವ ಕೃತಿಯ ಕರ್ತೃ ಯಾರು?
2. ಕರ್ನಾಟಕದಲ್ಲಿ ಪ್ರಥಮ ಏಕೀಕರಣ
ಸಮ್ಮೇಳನ ನಡೆದ ಸ್ಥಳ ಯಾವುದು?
3. ಕರ್ನಾಟಕ ಏಕೀಕರಣ ಮಹಾಸಮಿತಿಯ
ಪ್ರಥಮ ಅಧ್ಯಕ್ಷರು ಯಾರು?
4. ಅಂಕೋಲಾ ಉಪ್ಪಿನ ಸತ್ಯಾಗ್ರಹದ ಪ್ರಮುಖ
ಪಾತ್ರದಾರಿ ಯಾರು?
5. ಅರ್ಕೇಶ್ವರ ಲಿಂಗ ಇದು ಯಾರ
ಅಂಕಿತನಾಮವಾಗಿದೆ?
6. ವಿಂಗ್ಸ್ ಆಫ್ ಫೇರ್ ಕೃತಿಯ ಕರ್ತೃ ಯಾರು?
7. ಭೌಗೋಳಿಕವಾಗಿ ವಿಶ್ವದಲ್ಲಿ ಹೆಚ್ಚು ಭೂ ಪ್ರದೇಶವನ್ನು
ಹೊಂದಿರುವ ಭೂ ಖಂಡ ಯಾವುದು?
8. ಮೌರ್ಯ ಸಾಮ್ರಾಜ್ಯದಲ್ಲಿ ಚಲಾವಣೆಯಲ್ಲಿದ್ದ
ಹಣದ ಹೆಸರೇನು?
9. ದೀನಬಂಧು ಎಂದು ಬಿರುದು
ಹೊಂದಿದ ಭಾರತದ ಪ್ರಸಿದ್ಧ ವ್ಯಕ್ತಿ ಯಾರು?
10. ಇಂಡಿಯನ್ ರೇರ್ ಅರ್ಥ್ ಲಿಮಿಟೆಡ್ ಪರಮಾಣು
ಸಂಶೋಧನಾ ಕೇಂದ್ರ ಯಾವ ರಾಜ್ಯದಲ್ಲಿದೆ?
11. ಒರಿಸ್ಸಾದ ಗಜಪತಿ ಮನೆತನದ ಸಂಸ್ಥಾಪಕ
ಯಾರು?
12. ಶುದ್ಧ ಅದ್ವೈತ ವೇದಾಂತವನ್ನು ಸ್ಥಾಪಿಸಿದವರು
ಯಾರು?
13. ಭಾರತದಲ್ಲಿ ಮೊದಲ ಬಾರಿಗೆ ಬಂದ
ಇಂಗ್ಲೀಷ್ ಹಡಗು ಯಾವುದು?
14. ಪ್ರಸಿದ್ಧವಾದ ಬೇಲೂರು – ಹಳೇಬೀಡು
ದೇವಾಲಯಗಳ ಸ್ಥಾಪನೆಗೆ ಕಾರಣಗಳಾದ ಮಹಿಳೆ ಯಾರು?
15.    ಸಂಸ ಇದು ಯಾರ ಕಾವ್ಯ ನಾಮವಾಗಿದೆ?
16.    ಕಲ್ಪಕಂ ಅಣುಸ್ಥಾವರ ಯಾವ ರಾಜ್ಯದಲ್ಲಿದೆ?
17. ಚಿತ್ತೂರಿನ ಕೀರ್ತಿ ಸ್ತಂಭ
ನಿರ್ಮಿಸಿದವರು ಯಾರು?
18. ಭಾರತದ ಯಾವ ರಾಜ್ಯವನ್ನು ಗೋಧಿಯ ಕಣಜ
ಎಂದು ಕರೆಯುತ್ತಾರೆ?
19. ನೀರನ್ನು ಸಸ್ಯದ ಮೇಲ್ಭಾಗಕ್ಕೆ
ಸಾಗಿಸುವಲ್ಲಿ ಸಹಾಯ ಮಾಡುವ ಅಂಗ ಯಾವುದು?
20. ಮಜಗಾಂವ್ ಡಾಕ್ ಲಿಮಿಟೆಡ್ ಯಾವ
ರಾಜ್ಯದಲ್ಲಿದೆ?
21. ದೇಶದ ವಿದೇಶ ವಿನಿಮಯ ಸಂಗ್ರಹ ಮಾಡುವ
ಬ್ಯಾಂಕ್ ಯಾವುದು?
22. ಸಂಸ್ಕೃತ ಎಲ್ಲಾ ಭಾಷೆಗಳ ಮಾತೃ ಎಂಬ
ಅಭಿಪ್ರಾಯವನ್ನು ನೀಡಿದವರು ಯಾರು?
23.    ಯಾವ ಸೂಫಿ ಸಂತನ ದರ್ಗಾ ಅಜ್ಮೇರದಲ್ಲಿದೆ?
24.    ಲಂಡನ್ ಯಾವ ನದಿಯ ದಡದ ಮೇಲಿದೆ?
25. ಭಾರತೀಯ ಜೀವವಿಮಾ ನಿಗಮ
ಸ್ಥಾಪನೆಯಾದ ವರ್ಷ ಯಾವುದು?
26. ಅರುಂಧತಿ ರಾಯ್ ರವರ ಯಾವ ಕೃತಿಗೆ ಬೂಕರ್
ಪ್ರಶಸ್ತಿ ದೊರಕಿದೆ?
27. ಭಾರತ ಮತ್ತು ಶ್ರೀಲಂಕಾವನ್ನು
ಭೌಗೋಳಿಕವಾಗಿ ಪ್ರತ್ಯೇಕಿಸುವ ಜಲಭಾಗ ಯಾವುದು?
28. ದೆಹಲಿ ಸುಲ್ತಾನರ ಕಾಲದಲ್ಲಿ ಲಾಡ್ ಭಕ್ಷಯೆಂದು
ಹೆಸರಾಗಿದ್ದರು ಯಾರು?
29.    ಬಕ್ಸಾರ್ ಕದನ ನಡೆದ ವರ್ಷ ಯಾವುದು?

1. ಆಲೂರು ವೆಂಕಟರಾಯರು
2. ಧಾರವಾಡ
3. ಎಸ್. ನಿಜಲಿಂಗಪ್ಪ
4. ಆರ್.ಆರ್.ದಿವಾಕರ್
5. ಮಧುವಯ್ಯ
6. ಎಪಿಜೆ ಅಬ್ದುಲ್ ಕಲಾಂ
7. ಏಷ್ಯಾ ಖಂಡ
8. ಪಣ
9. ಶ್ರೀ ಸಿ.ಎಫ್.ಆಂಡ್ರೋಸ್
10.    ಕೇರಳ
11.    ಕಪಿಲೇಂದ್ರ
12.    ವಲ್ಲಭಾಚಾರ್ಯ
13.    ರೆಡ್ ಡ್ರಾಗನ್
14.    ಶಾಂತಲೆ
15.    ಎ.ಎನ್.ಸ್ವಾಮಿ ವೆಂಕಟಾದ್ರಿ ಐಯ್ಯರ್
16.    ತಮಿಳುನಾಡು
17.    ರಾಣಾ ಪ್ರತಾಪ್
18.    ಪಂಜಾಬ್
19.    ಕ್ಲ್ಯೆಲಮ್
20.    ಗೋವಾ
21.    ಭಾರತೀಯ ರಿಸರ್ವ್ ಬ್ಯಾಂಕ್
22.    ಜೇಮ್ಸ್ ಮಿಲ್
23.    ಸಲೀಂ ಚಿಸ್ತಿ
24.    ಥೇಮ್ಸ್
25.    1956
26.    ಗಾಡ್ ಆಫ್ ದಿ ಸ್ಮಾಲ್ ಥಿಂಗ್ಸ್
27.    ಪಾಕ್ ಜಲಸಂಧಿ
28.    ಕುತುಬ್ ಉದ್ದಿನ್ ಐಬಕ್
29.    ೧೭೬೪

ಪ್ರಶ್ನೆಗಳು:

ಉತ್ತರಗಳು:

೧. ಕನ್ನಡದ ಮೊದಲ ರಾಷ್ಟ್ರಕವಿ ಯಾರು?
೨. ಕರ್ನಾಟಕಕ್ಕೆ ಕಾಫಿ ಬೀಜ ತಂದವರು ಯಾರು?
೩. ಸಂಸತ್ತಿನಲ್ಲಿ ಮೊದಲು ಕನ್ನಡ ಮಾತನಾಡಿದ ಕರ್ನಾಟಕದ
ಸಂಸದ ಯಾರು?
೪. ಕರ್ನಾಟಕದ ಮೊದಲ ಉಪ ಮುಖ್ಯಮಂತ್ರಿ ಯಾರು?
೫. ಕರ್ನಾಟಕದಲ್ಲಿ ಮೊದಲ ಸ್ವತಂತ್ರ
ಘೋಶಿಸಿಕೊಂಡ ಗ್ರಾಮ ಯಾವುದು?
೬. ಸಾವಿರ ಹಾಡುಗಳ ಸರದಾರ ಯಾರು?
೭. ಕರ್ನಾಟಕದ ಗಾಂಧಿ ಎಂದು ಯಾರನ್ನು ಕರೆಯುತ್ತಾರೆ?
೮. ವಿಜ್ಞಾನವನ್ನು ಜನಪ್ರಿಯಗೊಳಿಸುವ ಕೆಲಸಕ್ಕಾಗಿ ಮೊಟ್ಟ
ಮೊದಲ ರಾಷ್ಟ್ರೀಯ ಪುರಸ್ಕಾರವನ್ನು ಪಡೆದ ಸಂಸ್ಥೆ
ಯಾವುದು?
೯. ಕಮಲಾದೇವಿ ಚಟ್ಟೋಪಾದ್ಯಾಯ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಯಾರು?
೧೦. ದಕ್ಷಿಣ ಭಾರತದ ಮೊದಲನೆಯ ಸಾಮಾಜಿಕ ಚಲನಚಿತ್ರ ಯಾವುದು?
೧೧. ಕನ್ನಡದ ಮೊದಲ ದಿನ ಪತ್ರಿಕೆ ಯಾವುದು?
೧೨. ಸಂಪೂರ್ಣ ಸಾಕ್ಷರತೆ ಸಾಧಿಸಿದ ಕರ್ನಾಟಕದ ಮೊದಲ ಜಿಲ್ಲೆ
ಯಾವುದು?
೧೩. ’ತಿರುಕ’ ಇದು ಯಾರ ಕಾವ್ಯನಾಮ?
೧೪. ಭಾರತದ ಪ್ರಧಾನಿಯಾಗಿದ್ದ ಮೊದಲ ಕನ್ನಡಿಗ ಯಾರು?
೧೫. ಕನ್ನಡದ ಮೊದಲ ಕೃತಿ ಯಾವುದು?
೧೬. ಕರ್ನಾಟಕದಲ್ಲಿ ಮೊದಲ ಮಹಿಳಾ ರಾಜ್ಯಪಾಲರು ಯಾರು?
೧೭. ಕರ್ನಾಟಕ ವಿಧಾನ ಸಭೆಯ ಮೊದಲ ಮಹಿಳಾ ಸ್ಪೀಕರ್
ಯಾರು?
೧೮. ೨೦೧೩ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರು?
೧೯. ಕನ್ನಡದ ಮೊದಲ ಕವಯತ್ರಿ ಯಾರು?
೨೦. ಕನ್ನಡದ ಮೊದಲ ಗದ್ಯ ಬರಹ ಯಾವುದು?
೨೧. ಕರ್ನಾಟಕದ ಮೊದಲ ಬ್ಯಾಂಕ್ ಯಾವುದು?
೨೨. ಕನ್ನಡದ ಮೊದಲ ವರ್ಣ ಚಿತ್ರ ಯಾವುದು?
೨೩. ಕಾವ್ಯಾನಂದ ಇದು ಯಾರ ಕಾವ್ಯ ನಾಮ?
೨೪. ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ಎಲ್ಲಿ ನಡೆಯಿತು?
೨೫. ಕಡಲ ತೀರದ ಕಾಳು ಮೆಣಸಿನ ರಾಣಿ ಎಂದು ಯಾರನ್ನು
ಕರೆಯುತ್ತಾರೆ?
೨೬. ಕನ್ನಡದ ಮೊದಲ ಐತಿಹಾಸಿಕ ಚಲನಚಿತ್ರ ಯಾವುದು?
೨೭. ದಕ್ಷಿಣ ಏಷ್ಯಾದ ಮೊದಲ ಪಾಲಿಟೆಕ್ನಿಕ್ ಯಾವುದು?
೨೮. ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು?
೨೯. ಕನ್ನಡದ ಪ್ರಥಮ ಮಹಮದೀಯ ಕವಿ ಯಾರು?
೩೦. ಕನ್ನಡ ಸಾಹಿತ್ಯ ಸಮ್ಮೇಳನವೊಂದರ ಅಧ್ಯಕ್ಷ ಸ್ಥಾನಕ್ಕೆ
ಆಯ್ಕೆಯಾದ ಮೊದಲ ಕನ್ನಡತಿ ಯಾರು?

೧. ಮಂಜೇಶ್ವರ ಗೋವಿಂದ ಪೈ
೨. ಬಾಬಾಬುಡನ್
೩. ಜೆ.ಎಚ್.ಪಟೇಲ್
೪. ಎಸ್.ಎಮ್.ಕೃಷ್ಣ
೫. ಈಸೂರು (ಶಿವಮೊಗ್ಗ ಜಿಲ್ಲೆ)
೬. ಬಾಳಪ್ಪ ಹುಕ್ಕೇರಿ (ಬೆಳಗಾವಿ ಜಿಲ್ಲೆ)
೭. ಹರ್ಡೆಕರ್ ಮಂಜಪ್ಪ
೮. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್
೯. ಗಿರೀಶ್ ಕಾರ್ನಾಡ್
೧೦. ಕನ್ನಡದ ಸಂಸಾರ ನೌಕೆ (೧೯೩೬)
೧೧. ಮಂಗಳೂರು ಸಮಾಚಾರ
೧೨. ದಕ್ಷಿಣ ಕನ್ನಡ
೧೩. ಡಾ|| ಶ್ರೀ ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿ
೧೪. ಹೆಚ್.ಡಿ.ದೇವೆಗೌಡ
೧೫. ಕವಿ ರಾಜ್ಯ ಮಾರ್ಗ (ಕ್ರಿ.ಶ. ೯ನೇ ಶತಮಾನದ ಕೃತಿ)
೧೬. ವಿ.ಎಸ್.ರಮಾದೇವಿ
೧೭. ಕೆ.ಎಸ್.ನಾಗರತ್ನಂ
೧೮. ಕೋ.ಚನ್ನಬಸಪ್ಪ (ಬೀಜಾಪುರ)
೧೯. ಅಕ್ಕಮಹದೇವಿ
೨೦. ವಡ್ಡಾರಾಧನೆ
೨೧. ಚಿತ್ರದುರ್ಗ ಬ್ಯಾಂಕ್ ಲಿಮಿಟೆಡ್ (೧೮೭೦)
೨೨. ಅಮರ ಶಿಲ್ಪಿ ಜಕಣಾಚಾರಿ
೨೩. ಸಿದ್ದಯ್ಯ ಪುರಾಣಿಕ್
೨೪. ಅಂಕೋಲಾ (ಉತ್ತರ ಕನ್ನಡ ಜಿಲ್ಲೆ)
೨೫. ರಾಣಿ ಅಬ್ಬಕ್ಕ
೨೬. ರಣಧೀರ ಕಂಠೀರವ
೨೭. ಬೆಂಗಳೂರಿನ ಶ್ರೀ ಜಯ ಚಾಮರಾಜೇಂದ್ರ ಪಾಲಿಟೆಕ್ನಿಕ್
ಇನ್ಸ್ಟಿಟ್ಯೂಟ್
೨೮. ಡಾ|| ಕುವೆಂಪು
೨೯. ಸಂತ ಶಿಶುನಾಳ ಷರೀಪರು
೩೦. ಜಯದೇವಿತಾಯಿ ಲಿಗಾಡೆ (೧೯೭೪ ಮಂಡ್ಯ)

ಮೂಲ : ಲಯನ್ ಡಿ.ವಿ.ಜಿ.

2.94
ನಿಂಗೇಗೌಡ ಹೆಚ್ ಡಿ Apr 27, 2017 03:51 PM

ಒಳ್ಳೆಯ ಮಾಹಿತಿ ಧನ್ಯವಾದಗಳು

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top