অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಭಾಗ-5

ಭಾಗ-5

ಪ್ರಶ್ನೆಗಳು:

ಉತ್ತರಗಳು:

೧. ಇತ್ತೀಚಿಗೆ ಭಾರತ ರತ್ನ ಪುರಸ್ಕಾರಕ್ಕೆ
ಯಾರನ್ನು ಆಯ್ಕೆ ಮಾಡಲಾಯಿತು?
೨. ಜಿಎಮ್ಟಿ (GMT)ಯ ವಿಸ್ತೃತ ರೂಪವೇನು?
೩. ಅಡಿಗೆಉಪ್ಪಿನ ರಾಸಾಯನಿಕ ಹೆಸರೇನು?
೪. ಆಹಾರ ಶಕ್ತಿಯನ್ನು ಯಾವ ಮಾನದಿಂದ
ಅಳೆಯುತ್ತಾರೆ?
೫. ಅಶ್ವಿನಿ ಇದು ಯಾರ ಕಾವ್ಯ ನಾಮವಾಗಿದೆ?
೬. ಪ್ರಸಿದ್ಧ ಶಿರಹಟ್ಟಿಯ ಫಕಿರೇಶ್ವರ ಮಠ
ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
೭. ರಾಷ್ಟ್ರೀಯ ಕೂಲಿಗಾಗಿ ಕಾಳು
ಕಾರ್ಯಕ್ರಮವನ್ನು ಜಾರಿಗೊಳಿಸಲಾದ ವರ್ಷ
ಯಾವುದು?
೮. ಡೆನ್ಮಾರ್ಕ್ ವಿಶಿಷ್ಟವಾಗಿ ಯಾವ ಪ್ರಾಣಿಗಳಿಗೆ
ಪ್ರಸಿದ್ಧಿ ಪಡೆದಿದೆ?
೯. ಕನ್ನಡದ ಮೊದಲ ತ್ರಿಪದಿ ಶಾಸನ
ಯಾವುದು?
೧೦. ಮೌಸಾರಿ ಗಿರಿಧಾಮ ಯಾವ ರಾಜ್ಯದಲ್ಲಿದೆ?
೧೧. ವಸ್ತುವಿನ ಸಾಪೇಕ್ಷ ವೇಗವನ್ನು ಅಳೆಯಲು
ಉಪಯೋಗಿಸುವ ಉಪಕರಣ ಯಾವುದು?
೧೨. ಕರ್ನಾಟಕದಲ್ಲಿ ಪ್ರಥಮ ಹಾಲು ಉತ್ಪನ್ನ ಘಟಕ
ಸ್ಥಾಪನೆ ಎಲ್ಲಿ ಆಯಿತು?
೧೩. ಸೆಂಟ್ರಲ್ ಇನ್ಸ್ಟಿಟ್ಯೂಷನ್ ಆಫ್
ಇಂಡಿಯನ್ ಲ್ಯಾಂಗ್ವೇಜಸ್ ಕರ್ನಾಟಕದಲ್ಲಿ
ಎಲ್ಲಿದೆ?
೧೪. ಕೇಂದ್ರ ಸಾಹಿತ್ಯ ಅಕಾಡೆಮಿಯ ಇಂಡಿಯಾ
ಲಿಟರೇಚರ್ ಪತ್ರಿಕೆಯ ಸಂಪಾದಕರಾದ ಮೊದಲ
ಕನ್ನಡಿಗ ಯಾರು?
೧೫. ತೆಲುಗಿನಲ್ಲಿ ಪಂಚರತ್ನ
ಕೀರ್ತನೆಗಳನ್ನು ಬರೆದವರು ಯಾರು?
೧೬. ಪಾಟಲಿಪುತ್ರ ಯಾವ ವಂಶದ ಅರಸರ
ರಾಜಧಾನಿಯಾಗಿತ್ತು?
೧೭. ಶ್ಯಾಮ್ ಚಿ ಆಯಿ ಈ ಪ್ರಸಿದ್ಧ ಕೃತಿ ಯಾವ
ಭಾಷೆಯಲ್ಲಿದೆ?
೧೮. ಬೀಡಿ ಹೊಗೆಸೊಪ್ಪನ್ನು
ಹೆಚ್ಚು ಉತ್ಪಾದಿಸುವ ರಾಜ್ಯ ಯಾವುದು?
೧೯. ಕ್ರೈಸ್ತರ ಪವಿತ್ರಗ್ರಂಥ ಬೈಬಲ್ನ್ನು ಕನ್ನಡಕ್ಕೆ
ಮೊದಲು ಅನುವಾದಿಸಿದವರು ಯಾರು?
೨೦. ಸಬಲೇಶ್ವರ ದೇವ ಇದು ಯಾರ
ಅಂಕಿತನಾಮವಾಗಿದೆ?
೨೧. ಕರ್ನಾಟಕದ ಅತ್ಯಂತ ದೊಡ್ಡ
ವಿವಿದೋದ್ದೇಶ ನದಿ ಕಣಿವೆ ಯೋಜನೆ ಯಾವುದು?
೨೨. ಸಮೀಪದ ದೃಷ್ಟಿದೋಷ ನಿವಾರಿಸಲು ಬಳಸುವ
ಮಸೂರ ಯಾವುದು?
೨೩. ಟಾನ್ಸಿಲ್ ಕಾಯಿಲೆ ಯಾವ ಭಾಗಕ್ಕೆ
ಸಂಬಂಧಿಸಿದೆ?
೨೪. ೧೮೫೭ರ ದಂಗೆಯನ್ನು ಭಾರತದ
ಮೊದಲ ಸ್ವಾತಂತ್ರ್ಯ ಸಂಗ್ರಾಮ
ಎಂದು ಕರೆದವರು ಯಾರು?
೨೫. ಭಕ್ತಿ ಪಂಥ ಚಳುವಳಿಯಲ್ಲಿ ರಾಮ ಮತ್ತು
ರಹೀಮ ಒಬ್ಬನೇ ಎಂದು ಹೇಳಿದವರು ಯಾರು?
೨೬. ದಾಖಲೆಯ ಪ್ರದರ್ಶನ ನೀಡಿದ
ಬಂಗಾರದ ಮನುಷ್ಯ ಚಿತ್ರದ ನಿರ್ದೇಶಕರು ಯಾರು?
೨೭. ಟೊಮೋಟೊ ಸಾಸ್ನಲ್ಲಿರುವ
ಆಮ್ಲ ಯಾವುದು?
೨೮. ಖಿಲಾಫತ್ ಚಳುವಳಿ ಭಾರತದಲ್ಲಿ ಆರಂಭವಾದ
ವರ್ಷ ಯಾವುದು?
೨೯. ವಿಜಯ ಪಥ್ ಸಿಂಘಾನಿಯಾ ಯಾವ
ಕ್ರೀಡೆಯಲ್ಲಿ ಹೆಸರು ಮಾಡಿದ್ದಾರೆ?

೧. ಅಟಲ್ ಬಿಹಾರಿ ವಾಜಪೇಯಿ ಮತ್ತು ಮದನ್ ಮೋಹನ್
ಮಾಳವೀಯ
೨. ಗ್ರೀನ್ವಿಚ್ ಮೀನ್ ಟೈಮ್
೩. ಸೋಡಿಯಂ ಕ್ಲೋರೈಡ್
೪. ಕ್ಯಾಲೋರಿ
೫. ಎಂ.ವಿ.ಕನಕಮ್ಮ
೬. ಗದಗ
೭. ೨೦೦೪ ನವೆಂಬರ್ ೧೪
೮. ಎಮ್ಮೆ
೯. ಕಪ್ಪೆ ಅರೆಭಟ್ಟನ ಶಾಸನ
೧೦. ಉತ್ತರಾಂಚಲ
೧೧. ಡಾಪ್ಲರ್ ರೇಡಾರ್
೧೨. ಮಂಡ್ಯ ಜಿಲ್ಲೆಯ ಗೆಜ್ಜಲಗೆರೆ
೧೩. ಮೈಸೂರು
೧೪. ಎಚ್.ಎಸ್.ಶಿವಪ್ರಕಾಶ್
೧೫. ತ್ಯಾಗರಾಜ
೧೬. ಮಗದುರು
೧೭. ಮರಾಠಿ
೧೮. ಗುಜರಾತ್
೧೯. ಜಾನ್ ಹ್ಯಾಂಡ್
೨೦. ಸಕಲೇಶ ಮಾದರಸ
೨೧. ಕೃಷ್ಣ ಮೇಲ್ದಂಡೆ ಯೋಜನೆ
೨೨. ನಿಮ್ನ ಮಸೂರ
೨೩. ನಾಲಿಗೆ
೨೪. ವಿ.ಡಿ.ಸಾವರ್ಕರ್
೨೫. ಕಬೀರ ದಾಸರು
೨೬. ಸಿದ್ದಲಿಂಗಯ್ಯ
೨೭. ಅಸಿಟಿಕ್ ಆಮ್ಲ
೨೮. ೧೯೧೮
೨೯. ವಾಯುಯಾನರು

ಪ್ರಶ್ನೆಗಳು:

ಉತ್ತರಗಳು:

೧. ಇತ್ತೀಚೆಗೆ ರಾಜ್ಯ
ಪೊಲೀಸ್ ಮಹಾ ನಿರ್ದೇಶಕರಾಗಿ ಯಾರನ್ನು
ನೇಮಕ ಮಾಡಲಾಯಿತು?
೨. ಬಿಸಿಸಿಐ (BCCI) ನ ವಿಸ್ತೃತ ರೂಪವೇನು?
೩. ಎದೆ ಮತ್ತು ಉದರವನ್ನು ಪ್ರತ್ಯೇಕಿಸುವ ದೇಹದ
ಭಾಗದ ಹೆಸರೇನು?
೪. ಕಲಾಂತಕ ಭೀಮೇಶ್ವರಲಿಂಗ ಇದು
ಯಾರ ಅಂಕಿತನಾಮವಾಗಿದೆ?
೫. ತ್ರಿಪುರ ರಾಜ್ಯದ ಆಡಳಿತ ಭಾಷೆ ಯಾವುದು?
೬. ಅಂತರರಾಷ್ರ್ಟೀಯ ಖ್ಯಾತಿ ಪಡೆದ
ಕನ್ನಡದ ಶಿಕ್ಷಣ ತಜ್ಞ ಯಾರು?
೭. ಕಪ್ಪು ಕ್ರಾಂತಿ ಯಾವುದಕ್ಕೆ ಸಂಬಂಧಿಸಿದೆ?
೮. ಷೇಕ್ಸ್ ಫಿಯರ್ ವಿರಚಿತ ಕಾಮಿಡಿ ಆಫ್ ಎರರ್ಸ್ ಆಧರಿಸಿ
ತಯಾರಾದ ಕನ್ನಡ ಚಲನಚಿತ್ರ ಯಾವುದು?
೯. ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ
ಸಂಸ್ಥೆ ಎಲ್ಲಿದೆ?
೧೦. ತೆಲುವಿಕೆಯ ನಿಯಮವನ್ನು ರೂಪಿಸಿದವರು ಯಾರು?
೧೧. ಬೆಳಕನ್ನು ವಿದ್ಯುತ್ ಆಗಿ ಪರಿವರ್ತಿಸುವ ಉಪಕರಣ
ಯಾವುದು?
೧೨. ಯೋಗದ ಮೂಲ ತತ್ವಗಳನ್ನು ತಿಳಿಸಿದ ಪ್ರಥಮ
ಭಾರತೀಯ ಯಾರು?
೧೩. ೨೦೦೩-೨೦೦೮ರ ಅವಧಿಯಲ್ಲಿ ಭಾರತದ ರಿಸರ್ವ್
ಬ್ಯಾಂಕಿನ ಗವರ್ನರ್ ಯಾರಾಗಿದ್ದರು?
೧೪. ರಾವಣನ ತಾಯಿಯ ಹೆಸರೇನು?
೧೫. ನೊಬೆಲ್ ಪರ್ಯಾಯ ಪ್ರಶಸ್ತಿ ರೈಟ್
ಲೈವ್ಲಿಹುಡ್ ಪ್ರಶಸ್ತಿ ಪಡೆದ ಕನ್ನಡಿಗ ಯಾರು?
೧೬. ಪಂಜಾಬ್ ರಾಜ್ಯವಾಗಿ ಅಸ್ತತ್ವಕ್ಕೆ ಬಂದ
ವರ್ಷ ಯಾವುದು?
೧೭. ಏನಾದರು ಸರಿಯೇ ಮೊದಲು ಮಾನವನಾಗು
ಇದು ಯಾವ ಕವಿಯ ರಚನೆಯಾಗಿದೆ?
೧೮. ಜನರಲ್ ಥಿಯರಿ ಗ್ರಂಥದ ಕರ್ತೃ ಯಾರು?
೧೯. ಓಜೋನ್ ರಂಧ್ರವನ್ನು ಗುರುತಿಸಿದ ಉಪಗ್ರಹ
ಯಾವುದು?
೨೦. ಕೇಫ ಇದು ಯಾರ ಕಾವ್ಯನಾಮವಾಗಿದೆ?
೨೧. ಮರೀನಾ ಬೀಚ್ ಎಲ್ಲಿದೆ?
೨೨. ವಚನ ಸಾಹಿತ್ಯ ಯಾವ ಅರಸರ ಕಾಲದಲ್ಲಿ
ರೂಪಗೊಂಡಿತು?
೨೩. ಮುಂಬೈನಲ್ಲಿರುವ ಗೇಟ್ ವೇ ಆಫ್ ಇಂಡಿಯಾ
ನಿರ್ಮಾಣವಾದ ವರ್ಷ ಯಾವುದು?
೨೪. ರಾಷ್ಟ್ರೀಯ ಮಹಿಳಾ ಕೋಶ ಸಹಕಾರಿ
ಸಂಸ್ಥೆ ಸ್ಥಾಪನೆಯಾದ ವರ್ಷ ಯಾವುದು?
೨೫. ಭಾರತದ ನೈರುತ್ಯ ರೈಲ್ವೆ ವಲಯ ಮುಖ್ಯ ಕಛೇರಿ
ಎಲ್ಲಿದೆ?
೨೬. ಮಾನವ ಶರೀರದಲ್ಲಿ ಅತಿ ಹೆಚ್ಚಿನ
ಪ್ರಮಾಣದಲ್ಲಿರುವ ಖನಿಜಾಂಶ ಯಾವುದು?
೨೭. ಜೈನರ ದೇವಾಲಯಗಳಿಗೆ ಬಸದಿ ಅಂತ ಕರೆದರೆ
ಬುದ್ಧರ ದೇವಾಲಯಗಳಿಗೆ ಏನೆಂದು ಕರೆಯುತ್ತಾರೆ?
೨೮. ಇಟಲಿ ದೇಶದಲ್ಲಿ ಚಲಾವಣೆಯಲ್ಲಿರುವ ನಾಣ್ಯದ
ಹೆಸರೇನು?
೨೯. ಇತ್ತೀಚೆಗೆ ಕರ್ನಾಟಕ ರಾಜ್ಯ ಚಲನಚಿತ್ರ
ಪ್ರಶಸ್ತಿ ಪ್ರಧಾನ ಸಮಾರಂಭ ಎಲ್ಲಿ ನಡೆಯಿತು?

೧. ಓಂ.ಪ್ರಕಾಶ್
೨. ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್
ಇಂಡಿಯಾ
೩. ವಪೆ
೪. ಡಕ್ಕೆಯ ಬೊಮ್ಮಣ್ಣ
೫. ಬೆಂಗಾಲಿ
೬. ಸಿ.ಡಿ.ನರಸಿಂಹಯ್ಯ
೭. ಪೆಟ್ರೋಲಿಯಂ
೮. ಉಲ್ಟಾಪಲ್ಟಾ
೯. ಕಾರ್ನಲ್ (ಹರಿಯಾಣ)
೧೦. ಆರ್ಕಿಮಿಡಿಸ್
೧೧. ಪೋಟೋಸೆಲ್
೧೨. ಪತಂಜಲಿ
೧೩. ಡಾ||ವೈ.ವಿ.ರೆಡ್ಡಿ
೧೪. ಕೈಕಸಿ
೧೫. ಆರ್.ಸುದರ್ಶನ್
೧೬. ೧೯೬೬
೧೭. ಸಿದ್ಥಯ್ಯಾ ಪುರಾಣಿಕ
೧೮. ಜೆ.ಎಂ.ಕೇನ್ಸ್
೧೯. ನಿಂಬಸ್ – ೭
೨೦. ಎ.ವಿ.ಕೇಶವಮೂರ್ತಿ
೨೧. ಚೆನ್ನೈ
೨೨. ಕಲಚೂರಿ ಅರಸರು
೨೩. ೧೯೧೧
೨೪. ೧೯೯೩
೨೫. ಹುಬ್ಬಳ್ಳಿ
೨೬. ಕ್ಯಾಲ್ಸಿಯಂ
೨೭. ವಿಹಾರ
೨೮. ಲೀರಾ
೨೯. ಮೈಸೂರು

ಪ್ರಶ್ನೆಗಳು:

ಉತ್ತರಗಳು:

೧. ಇತ್ತೀಚಿಗೆ ನರೇಂದ್ರ ಮೋದಿಯವರು
ಉದ್ಘಾಟಿಸಿದ ಭಾರತದ ಬೃಹತ್ ಫುಡ್ ಪಾರ್ಕ್
ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
೨. ಇತ್ತೀಚಿಗೆ ತಮಿಳುನಾಡಿನ ಮುಖ್ಯ
ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದವರು
ಯಾರು?
೩. ರೊಸಾರಿಯೋ ಚರ್ಚ್ ಕರ್ನಾಟಕದಲ್ಲಿ
ಎಲ್ಲಿದೆ?
೪. ವಿಜಯ ವಿಠಲ ಇದು ಯಾರ
ಅಂಕಿತನಾಮವಾಗಿದೆ?
೫. ಶಾಂತಿ ಸ್ವರೂಪ ಭಟ್ನಾಗರ್
ಪ್ರಶಸ್ತಿಗಳನ್ನು ಯಾವ ಕ್ಷೇತ್ರದಲ್ಲಿ ಸಾಧನೆ
ಮಾಡಿದವರಿಗೆ ನೀಡಲಾಗುವುದು?
೬. ಸನಾದಿ ಅಪ್ಪಣ್ಣ ಕಾದಂಬರಿಯನ್ನು
ಬರೆದವರು ಯಾರು?
೭. ಮಾನವನ ದೇಹದಲ್ಲಿ ಮೂತ್ರಜನಕಾಂಗದ
ಮೇಲೆ ಇರುವ ಗ್ರಂಥಿಯ ಹೆಸರೇನು?
೮. ಉದಯವಾಗಲಿ ನಮ್ಮ ಚಲುವ ಕನ್ನಡ
ನಾಡು ಈ ಗೀತೆಯನ್ನು ಬರೆದವರು ಯಾರು?
೯. ರಷ್ಯಾದಲ್ಲಿ ಪಂಚವಾರ್ಷಿಕ
ಯೋಜನೆಯನ್ನು ಯಾರು ಪ್ರಾರಂಭಿಸಿದರು?
೧೦. ನಿಸರ್ಗ ಪ್ರಿಯ ಇದು ಯಾರ
ಕಾವ್ಯನಾಮ?
೧೧. ಯುರೇನಿಯಂ ಕಾರ್ಪೋರೇಷನ್ ಆಫ್
ಇಂಡಿಯಾ ಪರಮಾಣು ಸಂಶೋಧನಾ
ಕೇಂದ್ರ ಎಲ್ಲಿದೆ?
೧೨. ಹಸಿರು – ಹೊನ್ನು ಈ ಜನಪ್ರಿಯ
ಪುಸ್ತಕದ ಲೇಖಕರು ಯಾರು?
೧೩. ವಾಸ್ಕೋಡಿಗಾಮ ಭಾರತಕ್ಕೆ ಸಮುದ್ರದ
ಮೂಲಕ ಕಾಲಿಟ್ಟ ವರ್ಷ ಯಾವುದು?
೧೪. ಡಾ||ಎಂ.ಎಸ್.ಸ್ವಾಮಿನಾಥರವರು
ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ?
೧೫. ಪಟ್ಟದಕಲ್ಲು ಕರ್ನಾಟಕದ ಯಾವ
ಜಿಲ್ಲೆಯಲ್ಲಿದೆ?
೧೬. ಹರಿದ್ವಾರ ಯಾವ ನದಿಯ ದಡದ ಮೇಲಿದೆ?
೧೭. ಕಸೌಲಿ ಗಿರಿಧಾಮ ಯಾವ ರಾಜ್ಯದಲ್ಲಿದೆ?
೧೮. ಗುರೂಜಿ ಎಂದು ಬಿರುದು ಹೊಂದಿದ
ಭಾರತ ಪ್ರಸಿದ್ಧ ವ್ಯಕ್ತಿ ಯಾರು?
೧೯. ಫಿರಾಕ್ ಗೋರಖ್ ಪುರಿ ಉರ್ದು ಲೇಖಕ
ಅವರ ಯಾವ ಕೃತಿಗೆ ಜ್ಞಾನ ಪೀಠ ಪ್ರಶಸ್ತಿ
ಲಭಿಸಿದೆ?
೨೦.ಮಿಝೋರಾಂ ರಾಜ್ಯದ ರಾಜಧಾನಿ
ಯಾವುದು?
೨೧. ಖ್ವಾಜಾ ಬಂದಾನವಾಜ್ ದರ್ಗಾ
ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
೨೨. ೧೯೯೪ರಲ್ಲಿ ಗಿರೀಶ್ ಕಾರ್ನಾಡರ ಯಾವ
ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಲಭಿಸಿದೆ?
೨೩. ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ಆರ್ಟ್
ಎಲ್ಲಿದೆ?
೨೪. ಭಾರತದ ರಾಷ್ಟ್ರ ಧ್ವಜವನ್ನು ರೂಪಿಸಿದ
ಮಹಿಳೆ ಯಾರು?
೨೫. ಇತ್ತೀಚಿಗೆ ನರೇಂದ್ರ ಮೋದಿ
ಅಮೇರಿಕಾ ಪ್ರವಾಸ ಕೈಗೊಂಡಾಗ
ನ್ಯೂಯಾರ್ಕಿನ ಯಾವ ಸ್ಥಳದಲ್ಲಿ ಬೃಹತ್
ಸಭೆಯನ್ನು ಉದ್ದೇಶಿಸಿ ಮಾತನಾಡಿದರು?
೨೬. ಇತ್ತೀಚಿಗೆ ನಡೆದ ಹದಿನೇಳನೆಯ ಏಷ್ಯಾನ್
ಕ್ರೀಡಾಕೂಟದಲ್ಲಿ ಯೋಗೇಶ್ವರ ದತ್ತ ರವರ
ಯಾವ ಕ್ರೀಡೆಗೆ ಚಿನ್ನದ ಪದಕ ದೊರಕಿದೆ?
೨೭. ವಾಂಖೆಡೆ ಕ್ರೀಡಾಂಗಣ ಯಾವ
ನಗರದಲ್ಲಿದೆ?
೨೮. ಕನ್ನಡದ ಮೊದಲ ಚಲನಚಿತ್ರ ಪತ್ರಿಕೆ
ಯಾವುದು?
೨೯. ಆಸ್ತಿ ಹಕ್ಕನ್ನು ಮೂಲಭೂತ ಹಕ್ಕಿನಿಂದ
ತೆಗೆದು ಹಾಕಿದ ವರ್ಷ ಯಾವುದು?

೧. ತುಮಕೂರು
೨. ಪನ್ನೀರ್ ಸೆಲ್ವಂ
೩. ಮಂಗಳೂರು
೪. ವಿಜಯದಾಸರು
೫. ಶಾಂತಿಗಾಗಿ ಪ್ರಯತ್ನಿಸಿದವರಿಗೆ
೬. ಕೃಷ್ಣಮೂರ್ತಿ ಪುರಾಣಿಕ
೭. ಜನನಗ್ರಂಥಿ
೮. ಹುಯಿಲ್ಗೋಳ ನಾರಾಯಣ್ರಾವ್
೯. ಸ್ಟ್ಯಾಲಿನ್
೧೦. ಸಿದ್ದಲಿಂಗಯ್ಯ
೧೧. ಬಿಹಾರ
೧೨. ಬಿ.ಜಿ.ಎಲ್.ಸ್ವಾಮಿ
೧೩. ೧೪೫೮
೧೪. ಕೃಷಿ
೧೫. ಬಾಗಲಕೋಟೆ
೧೬. ಗಂಗಾ
೧೭. ಹಿಮಾಚಲ ಪ್ರದೇಶ
೧೮. ಶ್ರೀ ಎಂ.ಎನ್.ಗೋಳೆಲ್ಕರ್
೧೯. ಗುಲ್-ಎ-ನಗ್ಮಾ
೨೦. ಐಜ್ವಾಲ್
೨೧. ಗುಲ್ಬರ್ಗಾ
೨೨. ತಲೆದಂಡ
೨೩. ದೆಹಲಿ
೨೪. ಮೇಡಮ್ ರೂಸ್ತುಂ ಕಾಯಾ
೨೫. ಮ್ಯಾಡಿಸನ್ ಸ್ಕ್ವೇರ್
೨೬. ಕುಸ್ತಿ
೨೭. ಮುಂಬೈ
೨೮. ಸಿನಿಮಾ (೧೯೩೬)
೨೯. ೧೯೭೭

ಪ್ರಶ್ನೆಗಳು:

ಉತ್ತರಗಳು:

೧. ಕನ್ನಡದ ಮೊದಲ ರಾಜಮನೆತನ ಯಾವುದು?
೨. ಸತತವಾಗಿ ಮೂರು ಅಖಿಲ ಭಾರತದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ
ಏಕೈಕ ಕನ್ನಡಿಗ ಯಾರು..? ಯಾವ ವರ್ಷ?
೩. ಕನ್ನಡ ನಾಡಿನ ಮೊದಲ ಗಣಿತಜ್ಞ ಯಾರು?
೪. ಕರ್ನಾಟಕದಲ್ಲಿ ಸಾವಿರ ಕಂಬಗಳ ಬಸದಿ ಎಲ್ಲಿದೆ?
೫. ಕನ್ನಡದ ಮೊದಲ ಶಿಲ್ಪಿ ಯಾರು?
೬. ಕನ್ನಡದ ಮೊದಲು ಬೆರಳಚ್ಚುವಿನ ಯಂತ್ರವನ್ನು ರೂಪಿಸಿದವರು
ಯಾರು?
೭. ಕನ್ನಡದ ಉಪಮಾ ಲೋಲ ಕವಿ ಯಾರು?
೮. ೧೯೩೦ರಲ್ಲಿ ಪ್ರಕಟವಾದ ಗೋವಿಂದಪೈ ಅವರ ಮೊದಲ ಕವನ
ಸಂಕಲನ ಯಾವುದು?
೯. ಎಲ್.ಎಂ.ಕರಿಬಸಪ್ಪ ಯಾವ ಸ್ಪರ್ಧೆಯಲ್ಲಿ ಭಾರತ ಶ್ರೇಷ್ಠ ಪ್ರಶಸ್ತಿ
ಪಡೆದಿದ್ದಾರೆ?
೧೦. ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು?
೧೧. ಓಶಿಯಾನಾ ಚಿತ್ರೋತ್ಸವದ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದವರು ಯಾರು?
೧೨. ಕನ್ನಡದ ಪ್ರಪ್ರಥಮ ಪ್ರಾಧ್ಯಾಪಕ ಯಾರು?
೧೩. ಏಷ್ಯಾ ಖಂಡದಲ್ಲಿ ಬೃಹತ್ ಏಕಶೀಲಾ ಬೆಟ್ಟವಿರುವ
ಕರ್ನಾಟಕದ ಜಿಲ್ಲೆ ಯಾವುದು?
೧೪. ಅಕ್ಕಾ ಕೇಳವ್ವ ನಾವೊಂದು ಕನಸ ಕಂಡೆ
ಅಕ್ಕಮಹದೇವಿಯವರ ಈ ವಚನವನ್ನು ಹಾಡಿ ಜನಪ್ರಿಯಗೊಳಿಸಿದ ಖ್ಯಾತ
ಸಂಗೀತಜ್ಞ ಯಾರು?
೧೫. ಜಲವಿದ್ಯುತ್ ಯೋಜನೆಗಳಲ್ಲಿ ಭಾರತದಲ್ಲೇ ಪ್ರಥಮ ಸ್ಥಾನದಲ್ಲಿರುವ ರಾಜ್ಯ
ಯಾವುದು?
೧೬. ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಪ್ರಥಮ ಜಾರಿಗೆಯಾಗಿದ್ದು ಯಾವಾಗ?
೧೭. ಕರ್ನಾಟಕದಲ್ಲಿ ನೋಟು ಮುದ್ರಣಾಲಯವನ್ನು ಹೊಂದಿರುವ ನಗರ
ಯಾವುದು?
೧೮. ಕರ್ನಾಟಕದ ಅತ್ಯಂತ ಎತ್ತರವಾದ ಶಿಖರ ಯಾವುದು?
೧೯. ಕರ್ನಾಟಕದ ಪ್ರತಿಷ್ಠಿತ ನಾಗರೀಕ ಪ್ರಶಸ್ತಿ ಯಾವುದು?
೨೦. ಕರ್ನಾಟಕದ ಪ್ರಥಮ ಮಹಿಳಾ ನ್ಯಾಯಾಧೀಶರು ಯಾರು?
೨೧. ಕಣ್ಣಿನ ಶಸ್ತ್ರಚಿಕಿತ್ಸೆಯಲ್ಲಿ ವಿಶ್ವದಾಖಲೆ ಮಾಡಿದ್ದ ಕರ್ನಾಟಕ ವೈಧ್ಯ
ಯಾರು?
೨೨. ಪಂಚಲೋಹಗಳು ಯಾವುವು?
೨೩. ಕರ್ನಾಟಕದ ವಿಸ್ತೀರ್ಣವೆಷ್ಟು?
೨೪. ಮಹಾ ವಿಷ್ಣುವಿನ ಚತ್ರದ ಹೆಸರೇನು?
೨೫. ವೀರೇಶ ಚರಿತ – ಇದು ಯಾರ ಕೃತಿ.
೨೬. ನೇಗಿಲಯೋಗಿ ಗೀತೆಯನ್ನು ಕನ್ನಡದ ಯಾವ ಚಿತ್ರದಲ್ಲಿ
ಅಳವಡಿಸಲಾಗಿದೆ?
೨೭. ಕರ್ನಾಟಕದ ‘ತೊಗರಿಯ ಕಣಜ’ ಎಂದು ಯಾವ ಜಿಲ್ಲೆಗೆ
ಕರೆಯುತ್ತಾರೆ?
೨೮. ‘ಶಿಸ್ತು’ ಕಂದಾಯ ಪದ್ಧತಿಯನ್ನು ಜಾರಿಗೆ ತಂದ ಪಾಳೆಗಾರ ಯಾರು?
೨೯. ಶಿವನು ಸಂಧ್ಯಾಕಾಲದಲ್ಲಿ ಮಾಡುವ ನೃತ್ಯಕ್ಕೆ ಏನೆಂದು ಹೆಸರು?

೧. ಕದಂಬ

೨. ಎಚ್.ವಿ.ನಂಜುಂಡಯ್ಯ
(೧೯೧೫-೧೬-೧೭)  
೩. ಮಹಾವೀರಾಚಾರ್ಯರು
೪. ಮೂಡಬಿದರೆ
೫.ಟಿಣಕ 
೬. ಅನಂತ ಸುಬ್ಬರಾವ್  
೭. ಲಕ್ಷ್ಮೀಶ 
೮.ಗಿಳಿವಿಂಡು 
೯. ದೇಹದಾರ್ಢಯ 
೧೦. ಶಬ್ದಮಣಿ ದರ್ಪಣ 
೧೧.ಉಮಾಶ್ರೀ (ಗುಲಾಬಿ ಟಾಕೀಸ್) 
೧೨.ಟಿ.ಎನ್.ವೆಂಕಣ್ಣಯ್ಯ  
೧೩. ತುಮಕೂರು (ಮಧುಗಿರಿ) 
೧೪. ಮಲ್ಲಿಕಾರ್ಜುನ
ಮನ್ಸೂರ್ 
೧೫. ಕರ್ನಾಟಕ  
೧೬. ೧೯೭೧ರಲ್ಲಿ 
೧೭. ಮೈಸೂರು (ರಿಸರ್ವ್
ಬ್ಯಾಂಕ್ ನೋಟು ಮುದ್ರಣ)
೧೮. ಮುಳ್ಳಯ್ಯನ ಗಿರಿ(ಚಿಕ್ಕಮಗಳೂರು) 
೧೯.ಕರ್ನಾಟಕ ರತ್ನ 
೨೦. ಮಂಜುಳಾ ಚೆಲ್ಲೂರ್ 
೨೧. ಡಾ||ಎಂ.ಸಿ.ಮೋದಿ
೨೨. ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ, ತವರ 
೨೩.೧.೯೧.೭೯೧ಚ.ಕಿ.ಮೀ  
೨೪. ಸುದರ್ಶನ ಚಕ್ರ 
೨೫.ರಾಘವಾಂಕ 
೨೬. ಕಾಮನಬಿಲ್ಲು 
೨೭. ಗುಲ್ಬರ್ಗಾ 
೨೮. ಶಿವಪ್ಪನಾಯಕ
೨೯. ತಾಂಡವ

ಮೂಲ : ಲಯನ್ ಡಿ.ವಿ.ಜಿ.

ಕೊನೆಯ ಮಾರ್ಪಾಟು : 12/23/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate