অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಆನ್‌ಲೈನ್ ಖರೀದಿ

ಖರೀದಿಗೆ ಮುನ್ನ ಕಾನೂನು ಸಲಹೆ

ಶೀಘ್ರದಲ್ಲೇ ಮನೆ ಖರೀದಿಗೆ ಯೋಜನೆ ರೂಪಿಸಿದ್ದರೆ, ಈ ಖರೀದಿ ಪ್ರಕ್ರಿಯೆ ಒಳಗೊಂಡಿರುವ ಕಾನೂನಿನ ಅಂಶಗಳ ಬಗ್ಗೆ ನಿಮಗೆ ತಿಳಿವಳಿಕೆ ಇರಲೇಬೇಕು. ಈ ಮೂಲಕ ಕಷ್ಟ ಪಟ್ಟು ದುಡಿದು ಉಳಿತಾಯ ಮಾಡಿದ ದೊಡ್ಡ ಮೊತ್ತದ ಹಣದ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಕು. ನಿಮ್ಮ ಅವಶ್ಯಕತೆಗೆ ಅನುಗುಣವಾಗಿದೆ ಎಂಬ ಏಕಮಾತ್ರ ಕಾರಣದಿಂದ ಮನೆ ಖರೀದಿಸದೆ, ಅದು ಕಾನೂನು ಬದ್ಧವಾಗಿದೆಯಾ? ಇಲ್ಲವಾ ? ಎಂಬುದನ್ನು ಮೊದಲು ಪರಿಶೀಲಿಸಬೇಕು.

ಪ್ರಾಪರ್ಟಿಯ ಕಾನೂನು ಬದ್ಧತೆಯ ಪ್ರಶ್ನೆ ಬಂದಾಗ ಹಲವಾರು ಅಂಶಗಳ ಬಗ್ಗೆ ಗಮನ ನೀಡಬೇಕಾಗುತ್ತದೆ. ಹಲವಾರು ಪ್ರಮುಖ ದಾಖಲೆಗಳನ್ನು ಮಾರಾಟಗಾರರಿಂದ ಪಡೆದು ಅದನ್ನು ಪರಿಶೀಲನೆಗೆ ಒಳಪಡಿಸಬೇಕು. ಇವುಗಳ ಪೈಕಿ ಅಲಾಟ್‌ಮೆಂಟ್ ಲೆಟರ್, ಸೇಲ್ ಡೀಡ್, ಸ್ಯಾಂಕ್ಷನ್ ಪ್ಲಾನ್, ಸೊಸೈಟಿ ದಾಖಲೆ, ಸ್ವಾಧೀನ ಪ್ರಮಾಣ ಪತ್ರ, ಸೇಲ್ ಅಗ್ರಿಮೆಂಟ್ ಸೇರಿದಂತೆ ಹಲವು ದಾಖಲೆಗಳಿವೆ.

ಸೇಲ್ ಅಗ್ರಿಮೆಂಟನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ಪ್ರಾಪರ್ಟಿಯ ಮಾರಾಟ ಅಥವಾ ಖರೀದಿಯ ಬಹು ಮುಖ್ಯ ದಾಖಲೆ ಇದಾಗಿರುತ್ತದೆ. ಇದರಲ್ಲಿ ಮಾರಾಟಗಾರ ಯಾವ ರೀತಿ ಮಾರಾಟ ಮಾಡುತ್ತಿದ್ದಾನೆ, ಯಾವ ಯಾವ ಷರತ್ತುಗಳನ್ನು ಈ ಮಾರಾಟ ಅಥವಾ ಖರೀದಿ ಒಳಗೊಂಡಿರುತ್ತದೆ ಎಂಬುದನ್ನು ಕಾನೂನು ಬದ್ಧವಾಗಿ ಸಾರುವ ಪತ್ರ ಇದಾಗಿರುತ್ತದೆ. ಈ ಒಪ್ಪಂದದಿಂದ ವಿಳಂಬವಿಲ್ಲದೆ ಪ್ರಾಪರ್ಟಿ ವರ್ಗಾವಣೆ ಮಾಡಲು ಸಾಧ್ಯವಾಗುತ್ತದೆ. ಈ ಒಪ್ಪಂದದಲ್ಲಿ ಉಭಯ ಪಕ್ಷಗಳು ಯಾವೆಲ್ಲಾ ಕಾನೂನಿನ ಬಾಧ್ಯತೆ ಹೊಂದಿರುತ್ತವೆ ಎಂಬುದನ್ನು ವಿವರಿಸಲಾಗುತ್ತಿದ್ದು, ಈ ಮೂಲಕ ಇಬ್ಬರನ್ನೂ ಕಾನೂನಿನ ಷರತ್ತುಗಳ ವ್ಯಾಪ್ತಿಗೆ ತರುತ್ತದೆ.

ಪ್ರಾಪರ್ಟಿಯನ್ನು ನೋಡಿ ಪರಿಶೀಲಿಸುವ ಮೊದಲೇ ಆಕಾಂಕ್ಷಿ ದಾಖಲೆಗಳನ್ನು ಪರಿಶೀಲಿಸಬಹುದು. ವ್ಯವಹಾರವನ್ನು ಅಂತಿಮಗೊಳಿಸುವ ಮೊದಲು ಅಸಲು ದಾಖಲೆಗಳನ್ನು ಪಡೆದು ಚೆಕ್ ಮಾಡಬೇಕು. ಇನ್ನು ಸಂಬಂಧಪಟ್ಟ ಸೊಸೈಟಿ ಅಧಿಕಾರಿಗಳಿಂದ ನಿಮಗೆ ಪ್ರಾಪರ್ಟಿ ನೀಡಲಾಗಿದೆ ಎಂಬುದಕ್ಕೆ ಅಲಾಟ್‌ಮೆಂಟ್ ಸರ್ಟಿಫಿಕೇಟ್ ಪ್ರಾಥಮಿಕ ದಾಖಲೆಯಾಗಿರುತ್ತದೆ.

ಅದೇ ರೀತಿ ನೀವು ಹೂಡಿಕೆ ಮಾಡಲಿರುವ ಪ್ರಾಪರ್ಟಿಯ ಡೆವಲಪರ್‌ನ ಕಾನೂನಾತ್ಮಕ ಹಿನ್ನೆಲೆಯನ್ನು ಕೂಡ ಪರಿಶೀಲಿಸುವುದು ಬಹು ಮುಖ್ಯವಾಗುತ್ತದೆ. ಭೂಮಿ ಒದಗಿಸಿದ ದಾಖಲೆ ಮತ್ತು ಬಿಲ್ಡಿಂಗ್ ಕಟ್ಟಲು ಪಡೆದುಕೊಂಡು ಅನುಪತಿ ಪತ್ರದ ಪ್ರತಿಯನ್ನು ಕೂಡ ಕೇಳಿ ಪಡೆದುಕೊಂಡು ಪರಿಶೀಲಿಸಿ. ಪ್ರಾಜೆಕ್ಟ್ ವಿಳಂಬವ ಆದರೆ ದಂಡ ವಿಧಿಸಬಹುದಾದ ಅಂಶವನ್ನು ಕೂಡ ಸೇಲ್ ಅಗ್ರಿಮೆಂಟ್‌ನಲ್ಲಿ ಪರೀಕ್ಷಿಸಿಕೊಳ್ಳಿ.

ಇವುಗಳು ಪ್ರಾಥಮಿಕ ದಾಖಲೆಗಳು ಮಾತ್ರ. ಉಳಿದಂತೆ ಖರೀದಿ ಪತ್ರದಲ್ಲಿ ಇರಬೇಕಾದ ಅಂಶಗಳು, ಯಾರ ಹೆಸರಿನಲ್ಲಿ ಮನೆ ಖರೀದಿಸಿದರೆ ತೆರಿಗೆ ಉಳಿಕೆ ಸೇರಿದಂತೆ ಲಾಭಗಳು ಹೆಚ್ಚು, ಹೊಸ ಪ್ರಾಪರ್ಟಿ ಖರೀದಿಸಿ ಬಳಿಕ ಅದನ್ನು ರದ್ದು ಮಾಡಬೇಕಾದರೆ ಮುಂದಿರುವ ಆಯ್ಕೆಗಳು ಏನೇನು ? ಮೊದಲಾದ ಪ್ರಮುಖ ಪ್ರಶ್ನೆಗಳಿಗೂ ಉತ್ತರ ಕಂಡು ಕೊಳ್ಳಬೇಕು. ಕಾನೂನು ವ್ಯಾಪ್ತಿಯನ್ನು ಹೊರತಾದ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡ ಬಳಿಕವಷ್ಟೇ ಅಂತಿಮ ನಿರ್ಧಾರ ಕೈಗೊಳ್ಳಿ

ಆನ್‌ಲೈನ್ ಖರೀದಿ ಲಾಭ ಹಲವು

ಖರೀದಿ ಸೇವಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಮ್ಯಾಜಿಕ್‌ಬ್ರಿಕ್ಸ್ ಡಾಟ್ ಕಾಮ್, ಆನ್‌ಲೈನ್ ಖರೀದಿಯ ಕುರಿತ ಗೊಂದಲಕ್ಕೆ ತೆರೆ ಎಳೆಯುತ್ತಿದೆ. ನೂರಾರು ಸಂಖ್ಯೆಯಲ್ಲಿ ಆನ್‌ಲೈನ್ ಖರೀದಿಯ ಕುರಿತ ಅನುಮಾನಗಳನ್ನು ಗ್ರಾಹಕರು ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಪರಿಹಾರವಾಗಿ ಆನ್‌ಲೈನ್ ಖರೀದಿಯ ಲಾಭ ಸೇರಿದಂತೆ ಸಮಗ್ರ ವಿವರವನ್ನು ಇಲ್ಲಿ ನೀಡಲಾಗಿದೆ. ಈ ಮೂಲಕ ನಿಮಗೆ ಮಾರ್ಗದರ್ಶನ ನೀಡಿ, ಗೊಂದಲವನ್ನು ಪರಿಹರಿಸುವ ಯತ್ನವಿದು.

ಪಾವತಿ ರೀತಿ : ಆನ್‌ಲೈನ್ ಖರೀದಿಯ ಪಾವತಿ ಹೇಗೆ ? ಇದು ಮೊದಲು ಕಾಡುವ ಪ್ರಶ್ನೆ. ಈಗ ಬುಕ್ಕಿಂಗ್ ಸೇರಿದಂತೆ ಖರೀದಿಗೆ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಎಟಿಎಂ ಕಮ್ ಡೆಬಿಟ್ ಕಾರ್ಡ್, ರುಪೇ ಡೆಬಿಟ್ ಕಾರ್ಡ್, ಮ್ಯಾಸ್ಟ್ರೋ ಡೆಬಿಟ್ ಕಾರ್ಡ್ ಮತ್ತುಎಂ-ಪೆಸಾ ಮೊಬೈಲ್ ವ್ಯಾಲೆಟ್‌ನ ಮೂಲಕ ಪಾವತಿ ಸ್ವೀಕರಿಸಲಾಗುತ್ತದೆ.

ಯಶಸ್ವಿ ವ್ಯವಹಾರ : ಮ್ಯಾಜಿಕ್‌ಬ್ರಿಕ್ಸ್ ಡಾಟ್ ಕಾಮ್ ಮೂಲಕ ಪ್ರಾಪರ್ಟಿಯನ್ನು ಆನ್‌ಲೈನ್ ಖರೀದಿ ಮಾಡಿ, ಯಶಸ್ವಿಯಾಗಿ ಪಾವತಿ ಮಾಡಿದರೆ, ಸ್ವಯಂ ಚಾಲಿತವಾಗಿ ನಿಮ್ಮ ನೆಟ್ ಅನನ್ಯ ವೋಚರ್ ಕೋಡ್ ಇರುವ ಕನ್‌ಫರ್ಮೇಶನ್ ಪೇಜ್‌ಗೆ ಹೋಗುತ್ತದೆ. ಈ ಪೇಜ್‌ನಲ್ಲಿ ನಿಮ್ಮ ಪಾವತಿ ಯಶಸ್ವಿಯಾದ ಬಗ್ಗೆ ಸಂದೇಶ ಬರುತ್ತದೆ. ಇದರ ಜೊತೆಗೆ ಬುಕ್ಕಿಂಗ್ ಸಮಯದಲ್ಲಿ ನೀಡಿದ ಇಮೇಲ್‌ಗೆ ಪಾವತಿ ಖಾತರಿಯಾದ ಬಗ್ಗೆ ಸಂದೇಶ ಬರುತ್ತದೆ.

ಕೋಡ್ ಬಳಕೆ : ಒಮ್ಮೆ ನಿಮ್ಮ ಪಾವತಿ ಖಾತರಿಯಾಗಿ, ವೋಚರ್ ಕೋಡ್ ಸಿಕ್ಕ ಬಳಿಕ, ಅದನ್ನು ಪ್ರಿಂಟ್ ಅಥವಾ ಮೊಬೈಲ್ ಟ್ಯಾಬ್ಲೆಟ್‌ಗೆ ಇಮೇಲ್ ಮೂಲಕ ವರ್ಗಾಯಿಸಿಕೊಂಡು ಬಿಲ್ಡರ್ ಹತ್ತಿರ ಹೋಗಿ ತೋರಿಸಬೇಕು. ಆಗ ಬಿಲ್ಡರ್ ನಿಮ್ಮ ವೋಚರ್ ಕೋಡ್‌ನ್ನು ಖಾತರಿ ಪಡಿಸಿಕೊಂಡು ಮುಂದಿನ ಪ್ರಕ್ರಿಯೆಗೆ ಚಾಲನೆ ನೀಡುತ್ತಾರೆ. ಬಾಕಿ ಉಳಿದ ಪಾವತಿಗೆ ಬಿಲ್ಡರ್ ಬೇರೆ ಒಪ್ಪಂದ ಮಾಡಿಕೊಳ್ಳುತ್ತಾರೆ. ಒಂದು ವೇಳೆ ಬಿಲ್ಡರ್ ವೋಚರ್ ಪಡೆಯಲು ನಿರಾಕರಿಸಿದರೆ ತಕ್ಷಣವೇ ಮ್ಯಾಜಿಕ್‌ಬ್ರಿಕ್ಸ್ ಡಾಟ್ ಕಾಮ್‌ನ ಕಸ್ಟಮರ್ ಕೇರ್ ಸಂಖ್ಯೆಯಾದ 0124-4869300ಗೆ ಕರೆ ಮಾಡಿ. ತಕ್ಷಣವೇ ಸಮಸ್ಯೆಯನ್ನು ಪರಿಹಾರ ಮಾಡಲಾಗುತ್ತದೆ.

ಶುಲ್ಕ ರಹಿತ : ಮ್ಯಾಜಿಕ್‌ಬ್ರಿಕ್ಸ್ ಡಾಟ್ ಕಾಮ್‌ನಲ್ಲಿ ಆನ್‌ಲೈನ್ ಪ್ರಾಪರ್ಟಿ ಬುಕ್ಕಿಂಗ್‌ಗೆ ಯಾವುದೇ ಶುಲ್ಕವಿರುವುದಿಲ್ಲ. ನೀವು ನೀಡಬೇಕಾದ ಎಲ್ಲಾ ಶುಲ್ಕವನ್ನು ಅಂತಿಮವಾಗಿ ಬಿಲ್ಡರ್ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತದೆ.

ಸ್ಟ್ಯಾಂಪ್ ಡ್ಯೂಟಿ : ಬಹುತೇಕ ಪ್ರಾಪರ್ಟಿ ಖರೀದಿ-ಮಾರಾಟ ಪ್ರಕರಣಗಳಲ್ಲಿ ನಿರ್ದಿಷ್ಟವಾಗಿ ನಮೂದಿಸದಿದ್ದರೆ, ಪ್ರಾಪರ್ಟಿ ಬೆಲೆಯು ಸ್ಟ್ಯಾಂಪ್‌ಡ್ಯೂಟಿ ಸೇರಿದಂತೆ ಸರಕಾರಿ ವೆಚ್ಚಗಳನ್ನು ಒಳಗೊಂಡಿರುವುದಿಲ್ಲ.

ರದ್ಧತಿ ಸಮದರ್ಭ : ಕೋಡ್ ಇರುವ ವೋಚರ್‌ನ್ನು ಬಿಲ್ಡರ್ ಬಳಿಗೆ ತೆಗೆದುಕೊಂಡು ಹೋಗಿ ಉಳಿದ ಬಾಕಿ ಹಣವನ್ನು ಪಾವತಿಸುವುದರೊಳಗೆ ನೀವು ಬುಕ್ಕಿಂಗ್ ರದ್ದು ಮಾಡಿಕೊಳ್ಳಬಹುದು. ಆಗ ನೀವು ಆನ್‌ಲೈನ್‌ನಲ್ಲಿ ಪಾವತಿ ಮಾಡಿದ ಹಣವನ್ನು ಪೂರ್ಣವಾಗಿ ವಾಪಸ್ ನೀಡಲಾಗುತ್ತದೆ. ಬೇರೆ ಬೇರೆ ಅಂತರ್ಜಾಲದಲ್ಲಿ ಇದಕ್ಕೆ ಬೇರೆ ಬೇರೆ ಪ್ರಕ್ರಿಯೆಗಳಿರುತ್ತವೆ. ಆದರೆ ಮ್ಯಾಜಿಕ್‌ಬ್ರಿಕ್ಸ್ ಡಾಟ್ ಕಾಮ್‌ನಲ್ಲಿ ಕಸ್ಟಮರ್ ಕೇರ್ ಫೋನ್ ಮಾಡಿ ವಿವರ ತಿಳಿಸಿದರೆ, ಕೂಡಲೇ ಅವರು ಹಣ ವಾಪಸಾತಿ ಪ್ರಕ್ರಿಯೆಗೆ ಚಾಲನೆ ನೀಡುತ್ತಾರೆ. ಇದಲ್ಲದೆ ಈ ಇಮೇಲ್ ಠ್ಠಟ್ಟಠಿಃಞಜಜ್ಚಿಚ್ಟಿಜ್ಚಿ.್ಚಟಞ ಞಜ್ಝಿಠಿಟ:ಠ್ಠಟ್ಟಠಿಃಞಜಜ್ಚಿಚ್ಟಿಜ್ಚಿ.್ಚಟಞ ಗೆ ಕೂಡ ನೀವು ಬರೆಯಬಹುದು.

ಮರು ಪಾವತಿ ಪ್ರಕ್ರಿಯೆ : ಹಣ ವಾಪಸಾತಿ ಪ್ರಕ್ರಿಯೆಯು ಸುಮಾರು 10ರಿಂದ 12 ಕೆಲಸದ ದಿನಗಳನ್ನು ತೆಗೆದುಕೊಳ್ಳುತ್ತದೆ. ಇದು ಬ್ಯಾಂಕ್ ಮತ್ತು ನಿಮ್ಮ ಅಕೌಂಟ್‌ನ್ನು ಅವಲಂಬಿಸಿರುತ್ತದೆ.

ಒಟ್ಟಿನಲ್ಲಿ ಆನ್‌ಲೈನ್ ಖರೀದಿಗೆ ಮುಂದಾಗುವವರಿಗೆ ಮ್ಯಾಜಿಕ್‌ಬ್ರಿಕ್ಸ್ ಡಾಟ್ ಕಾಮ್ ಅತ್ಯುತ್ತಮ ವೇದಿಕೆ ಒದಗಿಸಿದೆ. ಸರಳ-ಸುಲಭ ಪ್ರಕ್ರಿಯೆಗಳ ಮೂಲಕ ಇಡೀ ಖರೀದಿ ಸುಖಕರ ಪ್ರಯಾಣದಂತೆ ಆಗುವುದರಲ್ಲಿ ಸಂಶಯವಿಲ್ಲ.

ಮೂಲ : ವಿಜಯಕರ್ನಾಟಕ© 2006–2019 C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate