ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಕನ್ನಡದಲ್ಲಿ ಬ್ಲಾಗಿಂಗ್

ಎಲ್ಲರಿಗೂ ಓದಲು ಅನುಕೂಲವಾಗುವಂತೆ ಅಂತರಜಾಲದಲ್ಲಿ (ಇಂಟರ್‌ನೆಟ್‌ನಲ್ಲಿ) ಇಟ್ಟಂತಹ ತೆರೆದ ದಿನಚರಿ ಅಥವಾ ಡೈರಿಯನ್ನು ಬ್ಲಾಗ್ ಎನ್ನುತ್ತಾರೆ. ಬ್ಲಾಗ್‌ನ ಕ್ರಿಯಾರೂಪವೇ ಬ್ಲಾಗಿಂಗ್ ಅಂದರೆ ಬ್ಲಾಗ್ ನಡೆಸುವ ಕ್ರಿಯೆ. ಬ್ಲಾಗ್ ಬರೆಯುವ ವ್ಯಕ್ತಿಯೇ ಬ್ಲಾಗರ್.

ಎಲ್ಲರಿಗೂ ಓದಲು ಅನುಕೂಲವಾಗುವಂತೆ ಅಂತರಜಾಲದಲ್ಲಿ (ಇಂಟರ್‌ನೆಟ್‌ನಲ್ಲಿ) ಇಟ್ಟಂತಹ ತೆರೆದ ದಿನಚರಿ ಅಥವಾ ಡೈರಿಯನ್ನು ಬ್ಲಾಗ್ ಎನ್ನುತ್ತಾರೆ. ಬ್ಲಾಗ್‌ನ ಕ್ರಿಯಾರೂಪವೇ ಬ್ಲಾಗಿಂಗ್ ಅಂದರೆ ಬ್ಲಾಗ್ ನಡೆಸುವ ಕ್ರಿಯೆ. ಬ್ಲಾಗ್ ಬರೆಯುವ ವ್ಯಕ್ತಿಯೇ ಬ್ಲಾಗರ್.

ಈ ಬ್ಲಾಗಿಂಗ್‌ ಇಂಗ್ಲಿಷ್ ಭಾಷೆಯಲ್ಲೇ ಇರಬೇಕೇ? ಖಂಡಿತ ಇಲ್ಲ. ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಬ್ಲಾಗಿಂಗ್ ನಡೆಸಲು ಸಾಧ್ಯವಿದೆ. ಇದು ಸಾಧ್ಯವಾಗಿರುವುದು ಜಾಗತಿಕ ಶಿಷ್ಟತೆಯಾದ ಯುನಿಕೋಡ್‌ನಿಂದ.

ಬ್ಲಾಗ್ ಪ್ರಾರಂಭಿಸಬೇಕಾದರೆ ಮೊತ್ತಮೊದಲನೆಯದಾಗಿ ಯಾವುದಾದರೊಂದು ಬ್ಲಾಗಿಂಗ್ ತಾಣದಲ್ಲಿ ಒಂದು ಖಾತೆ ಹೊಂದಬೇಕು. ಕೆಲವು ಜನಪ್ರಿಯ ಬ್ಲಾಗಿಂಗ್ ತಾಣಗಳು – spaces.live.com, blogger.com (blogspot.com), blogdrive.com, wordpress.com, ಇತ್ಯಾದಿ. ಈ ಎಲ್ಲ ತಾಣಗಳು ಯುನಿಕೋಡನ್ನು ಬೆಂಬಲಿಸುತ್ತವೆ. ಅಂದರೆ ಈ ಬ್ಲಾಗಿಂಗ್ ತಾಣಗಳಲ್ಲಿ ಖಾತೆ ಹೊಂದಿದ್ದರೆ ಕನ್ನಡದಲ್ಲಿ ಬ್ಲಾಗಿಂಗ್ ನಡೆಸಬಹುದು. ಈ ತಾಣಗಳಲ್ಲದೆ ತಮ್ಮದೇ ಸ್ವಂತ ಅಂತರಜಾಲ ತಾಣ ಉಳ್ಳವರೂ ಕೂಡ ಸೂಕ್ತ ಬ್ಲಾಗಿಂಗ್ ತಂತ್ರಾಂಶ ಬಳಸಿ ಬ್ಲಾಗಿಂಗ್ ನಡೆಸಬಹುದು.

Spaces.live.com ತಾಣದಲ್ಲಿ ಖಾತೆ ಹೊಂದಬೇಕಾದರೆ live.com ತಾಣದಲ್ಲಿ ಅಥವಾ hotmail.com ನಲ್ಲಿ ಖಾತೆ ಹೊಂದಿದ್ದರೂ ಸಾಕು. ಅದೇ ರೀತಿ blogspot.com ಅರ್ಥಾತ್ blogger.com ನಲ್ಲಿ ಖಾತೆ ಹೊಂದಬೇಕಿದ್ದರೆ ಅಥವಾ ಬ್ಲಾಗ್ ಮಾಡಬೇಕಿದ್ದರೆ google.com ನಲ್ಲಿ ಖಾತೆ ಹೊಂದಿರಬೇಕು ಅರ್ಥಾತ್ gmail.com ಮೂಲಕ ಇಮೈಲ್ ಖಾತೆ ಹೊಂದಿರಬೇಕು. ಸಾಮಾನ್ಯವಾಗಿ ಈ ಎಲ್ಲ ಬ್ಲಾಗಿಂಗ್ ತಾಣಗಳೂ ಬ್ಲಾಗಿಂಗ್ ಇಂಟರ್‌ಫೇಸ್ ನೀಡುತ್ತವೆ. ಇದರಲ್ಲಿ ಹೊಸ ಬ್ಲಾಗ್ ಸೇರಿಸುವುದು, ಹಳೆಯ ಬ್ಲಾಗನ್ನು ತಿದ್ದುವುದು, ಇರುವ ಬ್ಲಾಗನ್ನು ಅಳಿಸಿಹಾಕುವುದು, ಬ್ಲಾಗ್ ಬಗ್ಗೆ ಇತರರು ಹಾಕಿರುವ ಟಿಪ್ಪಣಿಗಳನ್ನು ಸಂಪಾದಿಸುವುದು –ಇತ್ಯಾದಿ ಸೌಲಭ್ಯಗಳು ಸೇರಿವೆ.
ನ್ನಡದಲ್ಲಿ ಬ್ಲಾಗಿಂಗ್ ಮಾಡಬೇಕಾದರೆ ಮುಖ್ಯವಾಗಿ ಬೇಕಾಗಿರುವ ಸವಲತ್ತೆಂದರೆ ಕನ್ನದ ಕೀಲಿಮಣೆ ತಂತ್ರಾಂಶ. ವಿಂಡೋಸ್ ಎಕ್ಸ್‌ಪಿಯಲ್ಲಿ ಇದು ಅಡಕವಾಗಿದೆ. ಅದನ್ನ ಸಕ್ರಿಯಗೊಳಿಸಬೇಕಷ್ಟೆ. ಹೆಚ್ಚಿನ ಕೀಲಿಮಣೆ ತಂತ್ರಾಂಶಗಳನ್ನುಭಾಷಾಇಂಡಿಯ ತಾಣದಿಂದ ಡೌನ್‌ಲೋಡ್ ಮಾಡಿ ಅನುಸ್ಥಾಪಿಸಿಕೊಳ್ಳಬಹುದು. ಮೈಕ್ರೋಸಾಫ್ಟ್‌ ವರ್ಡ್‌ನಲ್ಲಿ ಕನ್ನದಲ್ಲಿ ಬೆರಳಚ್ಚು ಮಾಡುವ ಬಗ್ಗೆ ಬರೆದ ಲೇಖನದಲ್ಲಿ ವಿವರಿಸಿದ ವಿಧಾನವನ್ನೇ ಬಳಸಿ ಕನ್ನದಲ್ಲಿ ಬೆರಳಚ್ಚು ಮಾಡಬಹುದು.

ಲ್ಲಿನೀಡಿರುವ ಸ್ಕ್ರೀನ್‌ಶಾಟ್‌ನಲ್ಲಿ spaces.live.com ಬಳಸಿ ಬ್ಲಾಗ್ ಮಾಡುವುದನ್ನು ತೋರಿಸಲಾಗಿದೆ. ಬೆರಳಚ್ಚು ಮಾಡಿದ ನಂತರ Publish ಎಂಬ ಆದೇಶದ ಮೇಲೆ ಕ್ಲಿಕ್ ಮಾಡದಾಗ ಬ್ಲಾಗ್ ಪ್ರಕಾಶನಗೊಳ್ಳುತ್ತದೆ. ಈ ಹಿಂದೆ ಮಾಡಿದ ಬ್ಲಾಗ್ ಕೆಳಗೆ ತಳ್ಳಲ್ಪಟ್ಟು ಈಗ ಬೆರಳಚ್ಚು ಮಾಡಿದ ಬ್ಲಾಗ್ ಪಟ್ಟಿಯಲ್ಲಿ ಮೇಲೆ ಕಂಡುಬರುತ್ತದೆ.

ಮೂಲ : ಭಾಷಾಇಂಡಿಯ

2.99236641221
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top