অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕನ್ನಡ ಟೈಪಿಂಗ್

ಯಾವುದಾದರೊಂದು ಭಾಷೆಯಲ್ಲಿ ನಾವು ದಾಸ್ತಾವೇಜುಗಳನ್ನು ಮಾಡುವಾಗ ನಮಗೆ ಬೇಕು

  • word processing ತಂತ್ರಾಂಶ
  • ಕನ್ನಡ ಟೈಪ್ ಮಾಡಲು ಬೇಕಾಗುವ ತಂತ್ರಾಂಶ
  • ಫಾಂಟ್ ಗಳು

ಉಬುಂಟುವಿನಲ್ಲಿ ಕನ್ನಡ ಓದುವುದು, ಬರೆಯುವುದು ಬಹಳ ಸುಲಭ. ಇತ್ತೀಚಿನ ಉಬುಂಟು ಆವೃತ್ತಿಗಳಲ್ಲಿ ಕನ್ನಡವನ್ನು ಯಾವುದೇ ಕಷ್ಟವಿಲ್ಲದೇ ಓದಬಹುದು. ಅದಕ್ಕೆ ಬೇಕಿರುವ ಕೆಲವು ಫಾಂಟ್ ಗಳು ಉಬುಂಟುವಿನ ಜೊತೆಯಲ್ಲಿಯೇ ಸ್ಥಾಪಿತವಾಗಿರುತ್ತವೆ.

ಕನ್ನಡದಲ್ಲಿ ಟೈಪಿಸಲು ಐ-ಬಸ್ (ibus) ಎಂಬ ತಂತ್ರಾಂಶ ಲಭ್ಯವಿದ್ದು ಬಹಳ ಸಕ್ಷಮವಾಗಿ ಕೆಲಸ ಮಾಡುತ್ತಿದೆ. ಇದನ್ನು ನಿಮ್ಮ ಉಬುಂಟುವಿನಲ್ಲಿ ಸ್ಥಾಪಿಸಿಕೊಳ್ಳುವುದು ಸುಲಭ ಸಾಧ್ಯ. ಕೆಳಗೆ ಕೊಟ್ಟಿರುವ ಸಲಹೆಗಳನ್ನು ಅಂತೆಯೇ ಬಳಸಿ.

IBUS ಅನ್ನು ಆಯ್ದು ಕೊಳ್ಳುವುದು

ಭಾಷೆಯ ಆಯ್ಕೆ ಇತ್ಯಾದಿಗಳಿಗೆ ಸಹಕರಿಸುವ ತಂತ್ರಾಂಶವನ್ನು ಈ ಮೆನುವಿನಿಂದ ಪಡೆಯಬಹುದು Application  → System Tools  → System Settings → Language Support

ಅದು ಈ ಕೆಳಕಂಡಂತೆ ಕಾಣುತ್ತದೆ.

  • ಇಲ್ಲಿ Install / Remove Languages ಕ್ಲಿಕ್ ಮಾಡಿ, ಮುಂದಿನ ವಿಂಡೋದಲ್ಲಿ ಕನ್ನಡ ಆಯ್ಕೆ ಮಾಡಿ, ಅಪ್ಲೈ ಕ್ಲಿಕ್ ಮಾಡಿ.
  • ನಂತರ, ಮೊದಲನೆ ವಿಂಡೋದಲ್ಲಿ “Keyboard Input Method System” ನಲ್ಲಿ “ibus” ಆಯ್ಕೆ ಮಾಡಿಕೊಂಡು, ವಿಂಡೋವನ್ನು ಮುಚ್ಚಿ.

IBUS ಅನ್ನು ಕ್ರಿಯಾಶೀಲಗೊಳಿಸುವುದು:

ನೀವು  ಲಾಗಿನ್  ಆದಾಗ   IBUS ಸ್ವಯಂ  ಆಗಿ  ಪ್ರಾರಂಭವಾಗುವುದಿಲ್ಲ ,ಹಾಗಾಗಬೇಕಾದರೆ  ಅದನ್ನು  startup applications list ನಲ್ಲಿ  ಸೇರಿಸಬೇಕು.

  • ಡೆಸ್ಕ್ ಟಾಪ್  ಮೇಲಿರುವ  Applications → System Tools →  Preferences →  Startup Applications  ಮೇಲೆ  ಕ್ಲಿಕ್  ಮಾಡಿ.

  • "Add" ಬಟನ್ ಮೇಲೆ ಕ್ಲಿಕ್ ಮಾಡಿ.
  • "ibus-daemon" ಎಂದು  ಕಮಾಂಡ್ ಟೈಪ್ ಮಾಡಿ.
  • "Add" ಬಟನ್ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಭಾಷೆಯನ್ನು ಸೆಟ್ ಮಾಡುವುದು:

  • ಡೆಸ್ಕ್ ಟಾಪ್  ಮೇಲಿರುವ   Application → System Tools → Preferences → Ibus Preferences  ಮೇಲೆ  ಕ್ಲಿಕ್  ಮಾಡಿ.
  • 'Input Method'  ಟ್ಯಾಬ್  ಮೇಲೆ  ಕ್ಲಿಕ್  ಮಾಡಿ.
  • ನಿಮ್ಮ ಭಾಷೆಯನ್ನು   drop down  ಮೆನುವಿನಿಂದ ಆರಿಸಿ.
  • "Add" ಬಟನ್ ಮೇಲೆ ಕ್ಲಿಕ್ ಮಾಡಿ.
  • ಅದನ್ನು ಎಲ್ಲಕ್ಕಿಂತ  ಮೇಲೆ  ತನ್ನಿ.
  • Close ಬಟನ್ ಮೇಲೆ ಕ್ಲಿಕ್ ಮಾಡಿ.

Word Processor ನಲ್ಲಿ ಮಾಡಬೇಕಾದಂತಹ ಸೆಟ್ಟಿಂಗ್ಸ್

  • Application → Office →  OpenOffice.org Word processor ಮೇಲೆ  ಕ್ಲಿಕ್  ಮಾಡಿ
  • Menu bar  ಮೇಲಿರುವ Tools → Options ಮೇಲೆ  ಕ್ಲಿಕ್  ಮಾಡಿ.
  • Tools → Options ಪಟ್ಟಿ ಯಲ್ಲಿರುವ  Language settings  ಮೇಲೆ  ಎರಡು ಬಾರಿ ಕ್ಲಿಕ್  ಮಾಡಿ.
  • Languages ಆಯ್ಕೆ  ಮಾಡಿ.
  • Enabled for Complex Text Layout(CTL)  ಬಾಕ್ಸ್ ಅನ್ನು  ಕ್ರಿಯಾಶೀಲ (Enable)ಗೊಳಿಸಿ  ಮತ್ತು
  • Default languages for Documents ನ  CTL  ನಲ್ಲಿ  Kannada ಆಯ್ಕೆ  ಮಾಡಿ.

  • OK ಮೇಲೆ  ಕ್ಲಿಕ್  ಮಾಡಿ.
  • ಪುನಃ Menu bar  ಮೇಲಿರುವ Tools → Options ಮೇಲೆ  ಕ್ಲಿಕ್  ಮಾಡಿ.
  • Tools → Options ಪಟ್ಟಿ ಯಲ್ಲಿರುವ OpenOffice.org  Writer ಮೇಲೆ ಎರಡು ಬಾರಿ ಕ್ಲಿಕ್ ಮಾಡಿ, Basic Fonts( CTL) ಅನ್ನು ಆಯ್ಕೆ ಮಾಡಿ .
  • Basic Fonts( CTL) ಡೈಲಾಗ್  ಬಾಕ್ಸ್ ನಲ್ಲಿ  Default, Heading, List, Caption, Index ಗಳ ಮುಂದಿನ ಬಾಕ್ಸ್ ಗಳಲ್ಲಿ  Lohit Kannada ವನ್ನು  ಆಯ್ಕೆ ಮಾಡಿ .
  • OK ಮೇಲೆ ಕ್ಲಿಕ್ ಮಾಡಿ.
  • ಗಣಕ ಯಂತ್ರವನ್ನು  ಒಮ್ಮೆ  Log off  ಮಾಡಿ ಮತ್ತು  login ಆಗಿ.

ಮೂಲ: ಕರ್ನಾಟಕ ಶಿಕ್ಷಣ



© 2006–2019 C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate