অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹೊಸ ದಾಖಲೆಯೊಂದನ್ನು ಸೃಷ್ಟಿಸುವುದು

ಹೊಸ ದಾಖಲೆಯೊಂದನ್ನು ಸೃಷ್ಟಿಸುವುದು

ವರ್ಡ್  ಪ್ರೊಸೆಸರ್   ಆರಂಭಗೊಂಡಾಗ, ಅದು  ಖಾಲಿಯಾದ  ದಾಖಲೆಯೊಂದನ್ನು    ಪ್ರದರ್ಶಿಸುತ್ತದೆ.  ಆದರೆ, ವರ್ಡ್  ಪ್ರೊಸಸರ್  ವಿಂಡೋ  ಈಗಾಗಲೇ  ತೆರೆಯಲ್ಪಟ್ಟಿದ್ದಲ್ಲಿ, ಈ ಕೆಳಗಿನ  ಕ್ರಮಗಳನ್ನು    ಅನುಸರಿಸುವುದರ  ಮೂಲಕ  ನೀವು  ಹೊಸದೊಂದು  ಖಾಲಿ  ದಾಖಲೆಯೊಂದನ್ನು  ಸೃಷ್ಟಿಸಬಹುದು.

  1. ಫೈಲ್  ಮೆನುವಿನ  ಮೇಲೆ,  ನ್ಯೂ ಅನ್ನು  ಕ್ಲಿಕ್ ಮಾಡಿ. ನ್ಯೂ  ಡಾಕ್ಯೂಮೆಂಟ್‌ನ ಕಾರ್ಯ ಕಿಂಡಿ  ಮೂಡುತ್ತದೆ.
  2. ಟೆಕ್ಸ್ಟ್  ಡಾಕ್ಯೂಮೆಂಟ್‌ ಅನ್ನು  ಕ್ಲಿಕ್ ಮಾಡಿ.

ಇದು  ಹೊಸದೊಂದು  ಖಾಲಿಯಾದ   ವರ್ಡ್  ಪ್ರೊಸೆಸರ್  ದಾಖಲೆಯನ್ನು  ಸೃಷ್ಟಿಸುತ್ತದೆ.

ಪಠ್ಯವನ್ನು  ಆಯ್ಕೆ  ಮಾಡುವುದು:

ಪಠ್ಯವನ್ನು ಆಯ್ಕೆ  ಮಾಡಲು, ಮೌಸ್ ಪಾಯಿಂಟರ್  ಅನ್ನು  ಕ್ಲಿಕ್  ಮಾಡಿ  ಮತ್ತು  ಪಠ್ಯದ ಮೂಲಕ  ಡ್ರ್ಯಾಗ್  ಮಾಡಿ. ಉದಾಹರಣೆಗೆ, ಸ್ಟಾಂಡರ್ಡ್  ಎಂಬ  ಪದವನ್ನು  ಆಯ್ಕೆ  ಮಾಡಲು  ಕ್ಲಿಕ್  ಮಾಡಿ  ಮತ್ತು  ಪಾಯಿಂಟರ್  ಅನ್ನು  ಅದರ  ಮೂಲಕ  ಡ್ರ್ಯಾಗ್ ಮಾಡಿ.  ಸ್ಟಾಂಡರ್ಡ್  ಎಂಬ  ಪದ  ಎದ್ದು  ಕಾಣುತ್ತದೆ. ಸ್ಟಾಂಡರ್ಡ್ ಎಂಬ ಪದವನ್ನು  ತೆಗೆದು ಹಾಕಲು ನೀವು ಡಿಲೀಟ್ ಅಥವಾ ಬ್ಯಾಕ್  ಸ್ಪೇಸ್  ಮಾಡಬಹುದು.

ಪರ್ಯಾಯವಾಗಿ,  ದೊಡ್ಡ  ವಾಕ್ಯ ವೃಂದವನ್ನು   ಆಯ್ಕೆ  ಮಾಡಲು, ವಾಕ್ಯದ  ಪ್ರಾರಂಭದಲ್ಲಿ  ಒಮ್ಮೆ   ಕ್ಕಿಕ್  ಮಾಡಿ, ಷಿಫ್ಟ್  ಗುಂಡಿಯನ್ನು  ಒತ್ತಿ ಹಿಡಿಯಿರಿ  ಮತ್ತು  ನಂತರ  ವಾಕ್ಯದ  ಕೊನೆಯಲ್ಲಿ  ಒಮ್ಮೆ   ಕ್ಲಿಕ್  ಮಾಡಿ.

ಪಠ್ಯವನ್ನು   ಸೇರಿಸುವುದು:

ವಿಭಾಗದ  ಮೂರನೆಯ  ಪ್ರಶ್ನೆಯಲ್ಲಿ , ನೀವು  ಖಾಲಿ  ಬಿಟ್ಟ  ಸ್ಥಳವನ್ನು  ತುಂಬಿ  ನಾರ್ಮಲ್  ಎಂಬ  ಪದವನ್ನು, ಟೆಂಪರೇಚರ್  ಪದದ  ಹಿಂದೆ  ಸೇರಿಸಬೇಕೆಂದಿದ್ದೀರಿ.  ಹಾಗೆ  ಮಾಡಲು:

ಪಠ್ಯವನ್ನು  ಎಲ್ಲಿ   ಸೇರಿಸಬೇಕೋ  ಅಲ್ಲಿ  ಕ್ಲಿಕ್  ಮಾಡಿ.

ಪಠ್ಯವನ್ನು   ಟೈಪ್  ಮಾಡಿ.

ದಾಖಲೆಯೊಂದಿಗೆ  ಕೆಲಸ  ಮಾಡುವುದು:

ಈ ಅಧಿವೇಶನವು, ದಾಖಲೆಯನ್ನು ವೀಕ್ಷಿಸುವುದು, ದಾಖಲೆಗಳ  ನಡುವೆ ಓಡಾಡುವುದು, ದಾಖಲೆಯೊಂದನ್ನು ರಕ್ಷಿಸುವುದು, ದಾಖಲೆಯೊಂದರ ಪೂರ್ವವೀಕ್ಷಣೆ ಮಾಡುವುದು, ದಾಖಲೆಯೊಂದನ್ನು   ಮುದ್ರಿಸುವುದು  ಮತ್ತು  ದಾಖಲೆಯೊಂದನ್ನು ಪಾಸ್ವರ್ಡ್ನಿಂದ  ರಕ್ಷಣೆ  ಮಾಡುವುದನ್ನೊಳಗೊಂಡಂತೆ   ದಾಖಲೆಯಲ್ಲಿ   ಚತುರತೆಯಿಂದ  ಕೆಲಸ  ಮಾಡುವ  ವಿವಿಧ  ರೀತಿಗಳನ್ನು  ಸಚಿತ್ರವಾಗಿ  ವಿವರಿಸುತ್ತದೆ.

ದಾಖಲೆಯೊಂದರ  ಪುಟದ  ಸೆಟ್ಅಪ್  ಅನ್ನು   ಬದಲಾಯಿಸುವುದು:

ನೀವು  ಒಂದು  ದಾಖಲೆಯನ್ನು  ಸೃಷ್ಟಿಸಿದಾಗ, ವರ್ಡ್ ಮೇಲಿನ  ಕೆಳಗಿನ, ಎಡಬದಿಯ  ಮತ್ತು  ಬಲಬದಿಯ  ಪುಟದ  ಅಂಚುಗಳನ್ನು   ನಿಗದಿ  ಪಡಿಸುತ್ತದೆ.  ನೀವು ಅಂಚುಗಳನ್ನು  ಬದಲಾಯಿಸ  ಬಯಸುವುದಾದರೆ,  ನೀವು  ಪೇಜ್  ಸೆಟ್ಅಪ್  ಅನ್ನು   ಉಪಯೋಗಿಸಿ  ಹಾಗೆ  ಮಾಡಬಹುದು.  ನೀವು  ಪೇಪರ್‌ನ   ಮೇಲೆ  ಪಠ್ಯವು  ಮುದ್ರಿಸಲ್ಪಡುವ  ದಿಕ್ಕನ್ನು   ಸಹ  ಬದಲಾಯಿಸಬಹುದು.

ಪುಟದ  ಸೆಟ್ ಅಪ್ ಅನ್ನು   ಬದಲಾಯಿಸಲು:-

ಫಾರ್ಮ್ಯಾಟ್‌ ಮೆನುವಿನ  ಮೇಲೆ,  ಪೇಜ್  ಸೆಟ್ ಅಪ್‌ ಅನ್ನು  ಕ್ಲಿಕ್  ಮಾಡಿ.

ಪೇಜ್   ಸ್ಟೈಲ್‌ ಅಥವಾ ಪೇಜ್‌ ಸೆಟ್ ಅಪ್  ಡೈಲಾಗ್  ಬಾಕ್ಸ್ ನಲ್ಲಿ ಪೇಜ್ ಟ್ಯಾಬ್‌ನ   ಮೇಲೆ ಕ್ಲಿಕ್‌ ಮಾಡಿ.

ಮಾರ್ಜಿನ್  ಟ್ಯಾಬ್‌ನ ಮೇಲೆ, ಟಾಪ್,  ಬಾಟಮ್, ಲೆಫ್ಟ್   ಮತ್ತು  ರೈಟ್  ಬಾಕ್ಸ್ ಗಳಲ್ಲಿ  ನಿಮಗೆ ಬೇಕಾದ  ಅಂಚುಗಳ  ಗಾತ್ರವನ್ನು    ಹೊಂದಿಸಿ.

ಓರಿಯೆಂಟೇಷನ್‌ನ  ಕೆಳಗೆ, ನಿಮಗೆ  ಬೇಕಾದ  ಪುಟದ  ತಿರುಗುವಿಕೆಯ  ದಿಕ್ಕನ್ನು ಕ್ಲಿಕ್  ಮಾಡಿ. ನೀವು ಪೋರ್ ಟ್ರೇಟ್  ಅಥವಾ  ಲ್ಯಾಂಡ್ ಸ್ಕೇಪ್‌ಗಳಲ್ಲಿ  ಯಾವುದಾದರೊಂದನ್ನು   ಕ್ಲಿಕ್  ಮಾಡಿ.

ಪೋರ್ ಟ್ರೇಟ್:

ಪಠ್ಯವನ್ನು  ಪುಟದಲ್ಲಿ  ಉದ್ದವಾಗಿ  ಪ್ರದರ್ಶಿಸುತ್ತದೆ. ಹಾಗೆಂದರೆ,  ಇದು ದಾಖಲೆಯನ್ನು   ಪೇಪರ್ ನ  ಚಿಕ್ಕದಾದ  ಅಂಚಿನ  ಭಾಗವು  ಪುಟದ  ಮೇಲುಭಾಗಕ್ಕೆ   ಬರುವಂತೆ ಮುದ್ರಿಸುತ್ತದೆ.

ಲ್ಯಾಂಡ್ ಸ್ಕೇಪ್:

ಪಠ್ಯವನ್ನು  ಪುಟದಲ್ಲಿ  ಅಗಲವಾಗಿ   ಪ್ರದರ್ಶಿಸುತ್ತದೆ.  ಹಾಗೆಂದರೆ, ಇದು ದಾಖಲೆಯನ್ನು  ಪೇಪರ್‌ನ  ಉದ್ದವಾದ  ಅಂಚಿನ  ಭಾಗವು  ಮೇಲುಭಾಗಕ್ಕೆ  ಬರುವಂತೆ ಮುದ್ರಿಸುತ್ತದೆ.

ಪ್ರಿಂಟ್ ಲೇಔಟ್ ವ್ಯೂ:

ದಾಖಲೆಯನ್ನು   ಪೇಪರ್ ನಲ್ಲಿ   ಮುದ್ರಿಸಿದಾಗ  ಮೂಡಿ  ಬರುವಂತಹ  ರೀತಿಯಲ್ಲಿಯೇ  ವೀಕ್ಷಿಸಲು ಪ್ರಿಂಟ್ ಲೇಔಟ್ ವ್ಯೂ  ಸಹಾಯವಾಗುತ್ತದೆ. ನೀವು  ಈ  ವೀಕ್ಷಣೆಯಲ್ಲಿ,  ಹಲವು  ಕೆಲಸಗಳನ್ನು   ಮಾಡಬಹುದು,  ಅವುಗಳೆಂದರೆ,  ಅಂಚುಗಳನ್ನು   ಹೊಂದಿಸುವುದು,  ಅಂಕಣಗಳನ್ನು  ಸೇರಿಸುವುದು,  ವಸ್ತುಗಳನ್ನು   ಸೇರಿಸುವುದು  ಮತ್ತು  ಹೆಡರ್‌ ಮತ್ತು  ಫೂಟರ್‌  ಗಳನ್ನು  ಸೇರಿಸುವುದು.

ನೀವು  ದಾಖಲೆಯು  ಒಂದು  ವೀಕ್ಷಣೆಯಲ್ಲಿ  ಪ್ರದರ್ಶಿಸಲ್ಪಟ್ಟಿದ್ದಾಗ, ವ್ಯೂ ಮೆನುವನ್ನು  ಉಪಯೋಗಿಸಿ  ಬೇರೆಯ  ವೀಕ್ಷಣೆಗೆ   ಬದಲಿಸಬಹುದು.  ಬೇರೆಯ  ವೀಕ್ಷಣೆಗೆ  ಬದಲಿಸಲು,  ವ್ಯೂ  ಮೆನುವಿನ  ಮೇಲೆ  ಸೂಕ್ತವಾದ  ಕಮಾಂಡ್ ಅನ್ನು   ಕ್ಲಿಕ್  ಮಾಡಿ.

ದಾಖಲೆಯೊಂದನ್ನು  ರಕ್ಷಿಸುವುದು:

ನೀವು  ಟೈಪಿಂಗ್   ಅನ್ನು  ಮುಗಿಸಿದ  ಮೇಲೆ,  ದಾಖಲೆಯನ್ನು ನಿಮಗೆ ಅಗತ್ಯ ವಿದ್ದಾಗ   ಉಪಯೋಗಿಸಲು  ರಕ್ಷಿಸಬೇಕಾದ  ಅಗತ್ಯವಿದೆ.  ನೀವು  ದಾಖಲೆಯನ್ನು   ರಕ್ಷಿಸದೇ  ಹೋದಲ್ಲಿ , ನೀವು  ವರ್ಡ್  ಪ್ರೊಸೆಸರ್‌ನಿಂದ  ನಿರ್ಗಮಿಸಿದಾಗ  ಅಥವಾ  ಕಂಪ್ಯೂಟರ್  ಅನ್ನು  ಶಟ್  ಡೌನ್  ಮಾಡಿದಾಗ  ದಾಖಲೆಯಲ್ಲಿನ  ವಿಷಯವನ್ನು  ಕಳೆದುಕೊಳ್ಳಬೇಕಾಗುತ್ತದೆ.

ಒಂದು  ದಾಖಲೆಯನ್ನು   ಮೊದಲನೆಯ ಬಾರಿ  ರಕ್ಷಿಸಲು ಅಥವಾ ಅಸ್ತಿತ್ವದಲ್ಲಿರುವ  ದಾಖಲೆಯನ್ನು   ಬೇರೆಯ  ಫೋಲ್ಡರ್ ನಲ್ಲಿ   ರಕ್ಷಿಸಲು:-

ಫೈಲ್  ಮೆನುವಿನ   ಮೇಲೆ  save as ಅನ್ನು  ಕ್ಲಿಕ್  ಮಾಡಿ.

ಸೇವ್ ಇನ್  ಪಟ್ಟಿಯಲ್ಲಿ, ಫೈಲ್ ಅನ್ನು  ರಕ್ಷಿಸಲು ನಿಮಗೆ  ಬೇಕಾದ  ಸ್ಥಳವನ್ನು  ಕ್ಲಿಕ್  ಮಾಡಿ.

ನೀವು ದಾಖಲೆಗೆ ಬೇರೆಯ  ಹೆಸರನ್ನು  ನೀಡಬಯಸುವುದಾದರೆ,  ಫೈಲ್  ನೇಮ್  ಬಾಕ್ಸ್ ನಲ್ಲಿ ಹೊಸ  ಹೆಸರನ್ನು  ಟೈಪ್  ಮಾಡಿ.

ಸೇವ್ ಅನ್ನು  ಕ್ಲಿಕ್  ಮಾಡಿ.

ದಾಖಲೆಯೊಂದನ್ನು  ಮುದ್ರಿಸುವುದು:

ವಿದ್ಯಾರ್ಥಿಗಳಿಗೆ  ವಿತರಿಸಲು  ನೀವು  ಪ್ರಶ್ನೆ    ಪತ್ರಿಕೆಗಳನ್ನು    ಮುದ್ರಿಸಬೇಕಾಗುತ್ತದೆ.

ದಾಖಲೆಯೊಂದನ್ನು   ಮುದ್ರಿಸಲು:-

  • ಫೈಲ್  ಮೆನು ವಿನ  ಮೇಲೆ,  ಪ್ರಿಂಟ್ ಅನ್ನು  ಕ್ಲಿಕ್  ಮಾಡಿ
  • ನೇಮ್  ಪಟ್ಟಿಯಲ್ಲಿ ,  ಪ್ರಿಂಟರ್  ಒಂದನ್ನು    ಕ್ಲಿಕ್   ಮಾಡಿ
  • ಪೇಜ್  ರೇಂಜ್ ನ  ಕೆಳಗೆ,  ನಿಮಗೆ  ಬೇಕಾದದ್ದನ್ನು  ಆಯ್ಕೆ  ಮಾಡಿ
  • ದಾಖಲೆಯನ್ನು   ಸಂಪೂರ್ಣವಾಗಿ   ಮುದ್ರಿಸಲು, ಆಲ್ (all) ಅನ್ನು ಕ್ಲಿಕ್  ಮಾಡಿ.
  • ಚಾಲ್ತಿಯಲ್ಲಿರುವ  ಪುಟವನ್ನು   ಮಾತ್ರ  ಮುದ್ರಿಸಲು,  ಕರೆಂಟ್ ಪೇಜ್ ಅನ್ನು  ಕ್ಲಿಕ್ ಮಾಡಿ

ಪಠ್ಯವನ್ನು  ತಿದ್ದುವುದು

ಹಿಂದಿನ ಅಧ್ಯಾಯದಲ್ಲಿ ನೀವು  ವರ್ಡ್  ದಾಖಲೆಯೊಂದನ್ನು  ಸೃಷ್ಟಿಸುವುದು, ತಿದ್ದುವುದು  ಮತ್ತು  ರಕ್ಷಿಸುವುದನ್ನು ಕಲಿತಿರುತ್ತೀರಿ. ಈ ಅಧಿವೇಶನದಲ್ಲಿ, ನೀವು  ಹೆಚ್ಚು  ಮುಂದುವರಿದ  ತಿದ್ದುವ ತಂತ್ರಗಳನ್ನು ಮತ್ತು ದಾಖಲೆಯಲ್ಲಿ ಪಠ್ಯದ ತೋರುವಿಕೆಯನ್ನು  ಇನ್ನೂ  ಹೇಗೆ ಅಭಿವೃದ್ಧಿ  ಪಡಿಸಬಹುದೆಂಬುದನ್ನು  ಕಲಿಯುತ್ತೀರಿ.

ನೀವು ಒಂದು ಪ್ರಸ್ತುತ ಸ್ಥಳದಿಂದ  ವಾಕ್ಯವನ್ನು ಹೊಸ  ಸ್ಥಳಕ್ಕೆ  ಚಲಿಸುವಂತೆ  ಮಾಡಬಹುದು. ಪಠ್ಯವನ್ನು ಚಲಿಸುವಂತೆ  ಮಾಡಲು(Cut & Paste)
  • ನೀವು ಚಲಿಸಬೇಕಾದ ಪಠ್ಯವನ್ನು ಆಯ್ಕೆ ಮಾಡಿ.
  • ಎಡಿಟ್ ಮೆನುವಿನ ಮೇಲೆ, ಕಟ್ ಅನ್ನು  ಕ್ಲಿ ಕ್ ಮಾಡಿ.
  • ನೀವು ಯಾವ ಸ್ಥಳದಲ್ಲಿ ಪಠ್ಯವನ್ನು ಪೇಸ್ಟ್ ಮಾಡಬೇಕೆಂದಿದ್ದೀರೋ ಆ ಸ್ಥಳದಲ್ಲಿ ಕ್ಲಿಕ್ ಮಾಡಿ.
  • ಎಡಿಟ್ ಮೆನುವಿನ ಮೇಲೆ ಪೇಸ್ಟ್ ಅನ್ನು ಕ್ಲಿಕ್ ಮಾಡಿ.

 

ಪರ್ಯಾಯವಾಗಿ:

  • ನೀವು ಕತ್ತರಿಸಬೇಕಾದ ಪಠ್ಯವನ್ನು ಆಯ್ಕೆ ಮಾಡಿ
  • ಪಠ್ಯದ ಮೇಲೆ ರೈಟ್ ಕ್ಲಿಕ್ ಮಾಡಿ.
  • ಶಾರ್ಟ್ ಕಟ್ ಮೆನುವಿನ ಮೇಲಿರುವ ಕಟ್ ಅನ್ನು ಕ್ಲಿಕ್ ಮಾಡಿ
  • ಆಯ್ಕೆ ಮಾಡಿರುವ ಪಠ್ಯವು ಅದರ ಮೂಲ ಸ್ಥಳದಿಂದ ತೆಗೆದು ಹಾಕಲ್ಪಟ್ಟಿದೆ.
  • ಪಠ್ಯವು ಮೂಡಿ ಬರಬೇಕಾದ ಸ್ಥಳದಲ್ಲಿ ಕ್ಲಿಕ್ ಮಾಡಿ, ನಂತರ ರೈಟ್ ಕ್ಲಿಕ್ ಮಾಡಿ ಮತ್ತು ಪೇಸ್ಟ್ ಅನ್ನು ಕ್ಲಿಕ್ ಮಾಡಿ.

ಪಠ್ಯವನ್ನು ಕಾಪಿ ಮತ್ತು ಪೇಸ್ಟ್ ಮಾಡುವುದು:

ವರ್ಡ್‌ ನಲ್ಲಿ ನೀವು ಪಠ್ಯವನ್ನು ಚಲಿಸುವುದು ಮಾತ್ರವಲ್ಲದೆ ಕಾಪಿ ಮತ್ತು ಪೇಸ್ಟ್  ಕಮಾಂಡ್ ಗಳನ್ನು ಉಪಯೋಗಿಸಿ ಪಠ್ಯವನ್ನು ಕಾಪಿ ಸಹಾ ಮಾಡಬಹುದು. ನೀವು ಕಾಪಿ ಕಮಾಂಡ್ ಅನ್ನು ಉಪಯೋಗಿಸಿದಾಗ ಪಠ್ಯವು ಪ್ರಸುತ್ತ ಇರುವ ಸ್ಥಳದಿಂದ ತೆಗೆದು ಹಾಕಲ್ಪಡುವುದಿಲ್ಲ. ಬದಲಾಗಿ ಒಂದೇ ಪಠ್ಯವು ಅದೇ ದಾಖಲೆಯಲ್ಲಿ ಅಥವಾ ಹಲವು ದಾಖಲೆಗಳಲ್ಲಿ  ಬೇರೆ ಬೇರೆ ಸ್ಥಳಗಳಲ್ಲಿ ಮೂಡಿಬರುತ್ತದೆ.

ಪಠ್ಯವನ್ನು ಕಾಪಿ ಮಾಡಲು:-

  • ಕಾಪಿ ಮಾಡಬೇಕಾದ ಪಠ್ಯವನ್ನು ಆಯ್ಕೆ ಮಾಡಿ.
  • ಎಡಿಟ್ ಮೆನುವಿನ ಮೇಲೆ ಕಾಪಿಯನ್ನು ಕ್ಲಿಕ್ ಮಾಡಿ.
  • ನೀವು ಪಠ್ಯವನ್ನು ಅಂಟಿಸಬೇಕಾದ ಕಡೆ ಕ್ಲಿಕ್ ಮಾಡಿ.
  • ಎಡಿಟ್ ಮೆನುವಿನ ಮೇಲೆ, ಪೇಸ್ಟ್ ಅನ್ನು ಕ್ಲಿಕ್ ಮಾಡಿ

 

 

ಮೂಲ: ಕರ್ನಾಟಕ ಶಿಕ್ಷಣ

ಕೊನೆಯ ಮಾರ್ಪಾಟು : 7/10/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate