ವಿಂಡೋಸ್ 2000 ರಲ್ಲಿ ಪರಿಚಯಿಸಿದ ವಿಂಡೋಸ್ 2000, ಮಲ್ಟಿಲಿಂಗ್ವಲ್ ಬಳಕೆದಾರ ಇಂಟರ್ಫೇಸ್ ತಂತ್ರಜ್ಞಾನ ಅಥವಾ MUI ಎನ್ನುವುದು ಬಳಕೆದಾರರಿಗೆ ಅವರ ವಿಂಡೋಸ್ ಪಿಸಿಗಳಲ್ಲಿ ಹೆಚ್ಚುವರಿ ಪ್ರದರ್ಶನ ಭಾಷೆಗಳನ್ನು ಸ್ಥಾಪಿಸಲು ಮತ್ತು ಅವುಗಳ ನಡುವೆ ಬದಲಿಸಲು ಅವಕಾಶ ಮಾಡಿಕೊಟ್ಟಿದೆ. ಆದರೆ ಬಹುಪಾಲು ಬಳಕೆದಾರರು, ಅವರು ಮೊದಲ ಬಾರಿಗೆ ವಿಂಡೋಸ್ ಪಿಸಿ ಅನ್ನು ಬೂಟ್ ಅಪ್ ಮಾಡಿದಾಗ ಕಂಡುಬಂದ ಭಾಷೆಯನ್ನೇ ಉಪಯೋಗಿಸುತ್ತಿರುತ್ತಾರೆ. ವಿಂಡೋಸ್ 8 ಗಾಗಿ ನಾವು ಎಲ್ಲಾ ವಿಂಡೋಸ್ ಬಳಕೆದಾರರಿಗೆ ಹೆಚ್ಚುವರಿ ಪ್ರದರ್ಶನ ಭಾಷೆಗಳನ್ನು ಲಭ್ಯವಾಗುವಂತೆ ಮಾಡುವ ಕುರಿತಾಗಿ ಗಮನವನ್ನು ಹರಿಸಿ ಪ್ರದರ್ಶನ ಭಾಷೆ ಅನುಭವವನ್ನು ನಾವು ಮರು-ಕಲ್ಪಿತಗೊಳಿಸಿದ್ದೇವೆ, ಈ ಮೂಲಕ ಅವುಗಳನ್ನು ಕಂಡುಹಿಡಿಯುವುದು ಮತ್ತು ಸ್ಥಾಪಿಸುವುದನ್ನು ತೀರಾ ಸುಲಭಗೊಳಿಸಿದ್ದೇವೆ ಮತ್ತು ಅವುಗಳ ನಡುವೆ ಬಳಕೆದಾರರು ಬದಲಿಸಲು ಅವಕಾಶ ಕಲ್ಪಿಸಿದ್ದೇವೆ. ಇದನ್ನು ಸಾಧಿಸಲು ವಿಂಡೋಸ್‌ನಲ್ಲಿ ನಾವು ಮಾಡುತ್ತಿರುವ ಬದಲಾವಣೆಗಳನ್ನು ಈ ಬ್ಲಾಗ್ ನಮೂದು ತೆರೆದಿಡುತ್ತದೆ.
ಫೆಬ್ರವರಿ 21 ಎನ್ನುವುದು ಯುನೆಸ್ಕೋದ ಅಂತರಾಷ್ಟ್ರೀಯ ತಾಯಿಯ ದಿನವಾಗಿದೆ. ಇದರ ಸವಿನೆನಪಿಗಾಗಿ, ವಿಂಡೋಸ್ 8 ಎನ್ನುವುದು 14 ಹೊಸ ಭಾಷೆಗಳಲ್ಲಿ ಲಭ್ಯವಿರುತ್ತದೆ ಎಂಬುದನ್ನು ಇಂದು ವಿಂಡೋಸ್ ತಂಡ ಘೋಷಿಸುತ್ತಿದೆ ಮತ್ತು ಈ ಮೂಲಕ ಬೆಂಬಲಿಸಲ್ಪಡುವ ಒಟ್ಟು ಭಾಷೆಗಳ ಸಂಖ್ಯೆಯು 109 ಆಗಿದೆ.
ಇಂದು ಘೋಷಿಸಿರುವ ಭಾಷೆಗಳಲ್ಲಿ
ಇಂಗ್ಲೀಷ್ ಯುಕೆ,
ಪಂಜಾಬಿ (ಪಾಕಿಸ್ತಾನ), ಸಿಂಧಿ (ಪಾಕಿಸ್ತಾನ),
ಸೆಂಟ್ರಲ್ ಖುರ್ದಿಷ್ (ಇರಾಕ್),
ಉಯ್ಗರ್ (ಚೀನಾ ಗಣರಾಜ್ಯ),
ಬೆಲರೂಸಿಯನ್ (ಬೇಲಾರೂಸ್),
ಕಿನ್ಯರ್‌ವಾಂಡಾ (ರುವಾಂಡಾ),
ಟಿಗ್ರಿನಿಯಾ (ಇಥಿಯೋಪಿಯಾ),
ತಾಜಿಕ್ (ತಜಿಕಿಸ್ತಾನ್),
ವೋಲೋಫ್ (ಸೆನೆಗಲ್),
ಕೈಕ್’ (ಗ್ವಾಟೆಮಾಲಾ),
ಸ್ಕಾಟಿಷ್ ಗೇಲಿಕ್ (ಯುನೈಟೆಡ್ ಕಿಂಗ್‌ಡಮ್),
ಚೆರೋಕಿ (ಯುನೈಟೆಡ್ ಸ್ಟೇಟ್ಸ್) ಮತ್ತು
ವ್ಯಾಲೆಸ್ಸೇನಿಯನ್ (ಸ್ಪೇನ್).
ಮೂಲ : ಭಾಷಾಇಂಡಿಯ
ಕೊನೆಯ ಮಾರ್ಪಾಟು : 10/16/2019