অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಇಂಟರ್ನೆಟ್ ಎಕ್ಸ್‌ ಪ್ಲೋರರ್ 10

ಇಂಟರ್ನೆಟ್ ಎಕ್ಸ್‌ ಪ್ಲೋರರ್ 10

ಮೈಕ್ರೋಸಾಫ್ಟ್ 10 ಅನ್ನು ವಿನ್ಯಾಸಗೊಳಿಸಿದೆ ಮತ್ತು ನಿರ್ಮಿಸಿದೆ ಮತ್ತು ವಿಂಡೋಸ್‌ನಲ್ಲಿ ವೆಬ್ ಅನ್ನು ಅನುಭವಿಸಲು ಇದು ಅತ್ಯುತ್ತಮ ವಿಧಾನವೆಂದು ಭರವಸೆ ನೀಡುತ್ತಿದೆ. ಬಳಕೆದಾರರು ಇದೀಗ ಹೆಚ್ಚು ಸ್ಪರ್ಶ-ಸ್ನೇಹಿ ಮತ್ತು ಸುಂದವರಾದ, ವೇಗವಾದ ಮತ್ತು ಸರಾಗವಾದ ವೆಬ್ ಅಪ್ಲಿಕೇಶನ್‌ಗಳನ್ನು ನವೀಕರಿಸಿದ IE10 ಇಂಜಿನ್‌ನೊಂದಿಗೆ ಅನುಭವಿಸಬಹುದು ಮತ್ತು ಹೆಚ್ಚಿನ HTML ಬೆಂಬಲಕ್ಕೆ ಸುಧಾರಿತ ನಿರ್ವಹಣೆ ಮತ್ತು ಬೆಂಬಲದೊಂದಿಗೆ ಬಂದಿದೆ.

 

ಒಂದು HTML ಬ್ರೌಸಿಂಗ್ ಇಂಜಿನ್ ಅನ್ನು ವಿಂಡೋಸ್ 8 ಒಳಗೊಂಡಿದ್ದು ಇದು HTML5 ಮತ್ತು ಜಾವಾಸ್ಟ್ರಿಪ್ಟ್ ಅನ್ನು ಬಳಸುವ ಬ್ರೌಸಿಂಗ್ ಅನುಭವಗಳು (ಮೆಟ್ರೋ ಶೈಲಿಯೊಂದನ್ನು ಮತ್ತು ಡೆಸ್ಕ್‌ಟಾಪ್ ಒಂದನ್ನು) ಜೊತೆಗೆ ಮೆಟ್ರೋ ಶೈಲಿ ಅಪ್ಲಿಕೇಶನ್‌ಗಳನ್ನು ಶಕ್ತಿಯುತವಾಗಿಸುತ್ತದೆ. ಸಾಮಾನ್ಯ HTML5 ಇಂಜಿನ್ ವೆಬ್ ಮಾನದಂಡಗಳಿಗೆ ಮತ್ತು ವೆಬ್ ಪ್ರೋಗ್ರಾಮಿಂಗ್ ಮಾದರಿಗೆ, ಎರಡೂ ಬ್ರೌಸರ್ ಅನುಭವಗಳಿಗೆ ಜೊತೆಗೆ ಮೆಟ್ರೋ ಶೈಲಿ ಅಪ್ಲಿಕೇಶನ್‌ಗಳಿಗೆ ನಿರಂತರವಾಗಿ ವೇಗವಾದ, ಸುರಕ್ಷಿತ ಮತ್ತು ಶಕ್ತಿಯುತ ಬೆಂಬಲವನ್ನು ನೀಡುತ್ತದೆ.

 

ಗ್ರಾಹಕರು ಈ ಸಾಮರ್ಥ್ಯವನ್ನು ಮೂಲಭೂತವಾದ ಹಾರ್ಡ್‌ವೇರ್ ಪ್ರಯೋಜನವನ್ನು ಸುರಕ್ಷಿತವಾಗಿ ಉಪಯೋಗಪಡಿಸಿಕೊಳ್ಳುವ ಶ್ರೀಮಂತವಾದ, ಸುಂದರವಾದ ದೃಶ್ಯಾತ್ಮಕ ಪರಿಣಾಮಗಳೊಂದಿಗೆ ಅನುಭವಿಸುತ್ತಾರೆ. ಬಳಕೆದಾರರು ಪ್ರಯತ್ನಿಸಬಹುದಾದ ಕೆಲವು ಉದಾಹರಣೆಗಳೆಂದರೆ ವೆಬ್ ಪುಟಗಳಲ್ಲಿ ವೇಗವಾದ ಮತ್ತು ಸರಾಗವಾದ ಬಹು-ಸ್ಪರ್ಶ ಬೆಂಬಲ ಮತ್ತು ಇತ್ತೀಚಿನ ಡೇಟಾಬೇಸ್ API ಗಳು. ಇದು ವೆಬ್‌ಸೈಟ್‌ನಿಂದ ಆಫ್‌ಲೈನ್‌ನಲ್ಲಿ ಫೋಟೋಗಳನ್ನು ತೆಗೆದುಕೊಳ್ಳಲು ಸಕ್ರಿಯಗೊಳಿಸುತ್ತದೆ.

 

ಶ್ರೀಮಂತ ಅನುಭವವನ್ನು ನೀಡಲು ಮತ್ತು ವಿಭಿನ್ನ ಸಾಧನಗಳ ಮುಖಾಂತರ ಆ ಅನುಭವವನ್ನು ನೀಡಲು, ಪ್ಲಗ್-ಇನ್‌ಗಳು ಲಭ್ಯವಿರದೇ ಇದ್ದಾಗ ಪತ್ತೆಹಚ್ಚಲು ಡೆವಲಪರ್‌ಗಳಿಗೆ ಮೈಕ್ರೋಸಾಫ್ಟ್ ಶಿಫಾರಸು ಮಾಡುವುದನ್ನು ಮತ್ತು ಮೂಲ ಬ್ರೌಸರ್ ವಿನ್ಯಾಸಗಳ ಮೇಲೆ ಅವಲಂಬಿತವಾಗಿರುವುದನ್ನು ಶಿಫಾರಸು ಮಾಡುತ್ತದೆ. ಮೆಟ್ರೋ ಶೈಲಿ ಅನುಭವದಲ್ಲಿ IE10 ಎನ್ನುವುದು ಪ್ಲಗ್-ಇನ್ ಮುಕ್ತವಾಗಿದೆ. ಎಲ್ಲಾ ಫೋನ್‌ಗಳು ಮತ್ತು ಸಾಧನಗಳು ಈಗಾಗಲೇ ಪ್ಲಗ್-ಇನ್ ಮುಕ್ತವಾಗಿವೆ.

 

ಬಳಕೆದಾರರು ಡೆವಲಪರ್‌ಗಳಿಗೆ ಲಭ್ಯವಾಗಿರುವ ಹೊಸ ಕಾರ್ಯವಿಧಾನಗಳ ಪೂರ್ಣ ಪಟ್ಟಿಯನ್ನು IE10 ಡೆವಲಪರ್ ಮಾರ್ಗದರ್ಶಿಯಲ್ಲಿ http://msdn.microsoft.com/en-us/ie/gg192966 ನಲ್ಲಿ ಕಾಣಬಹುದು.

 

ವಿಭಿನ್ನ ಬ್ರೌಸರ್‌ಗಳ HTML5 ಇಂಜಿನ್‌ಗಳ ಗುಣಮಟ್ಟ ಮತ್ತು ಸರಿಯಾಗಿರುವಿಕೆಗಳು ವ್ಯಾಪಕವಾಗಿ ಬದಲಾಗುವುದನ್ನು ಮುಂದುವರಿಸುತ್ತದೆ. ಇಂಟೆರೋಪೆರಬಲಿಟಿ ಮತ್ತು ಅದೇ ಮಾರ್ಕಪ್‌ನ ಗುರಿಯನ್ನು ಇನ್ನಷ್ಟು ಹೆಚ್ಚಿಸಲು HTML5 ಮಾನದಂಡಗಳ ವರ್ಗಗಳಲ್ಲಿ ಹಲವು ಪರೀಕ್ಷೆಯನ್ನು ಮೈಕ್ರೋಸಾಫ್ಟ್ ಮಾಡುತ್ತಿದೆ.

ಮೂಲ : ಭಾಷಾಇಂಡಿಯ

ಕೊನೆಯ ಮಾರ್ಪಾಟು : 12/16/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate