ಮೈಕ್ರೋಸಾಫ್ಟ್ ಆಫೀಸ್ 2003 ತಂತ್ರಾಂಶಗುಚ್ಚದಲ್ಲಿ ವರ್ಡ್, ಎಕ್ಸೆಲ್, ಪವರ್‌ಪಾಯಿಂಟ್, ಔಟ್‌ಲುಕ್ ಇತ್ಯಾದಿಗಳಿವೆ. ವರ್ಡ್‌ನಲ್ಲಿ ಕನ್ನಡದ ಬೆರಳಚ್ಚು ಬಗ್ಗೆ ಇನ್ನೊಂದು ಲೇಖನದಲ್ಲಿ ವಿವರಿಸಲಾಗಿದೆ. ಕನ್ನಡದಲ್ಲಿ ಬೆರಳಚ್ಚು ಮಾಡುವ ಈ ವಿಧಾನವು ಆಫೀಸ್ ತಂತ್ರಾಂಶಗುಚ್ಚದಲ್ಲಿ ಅಡಕವಾಗಿರುವ ಇತರೆ ತಂತ್ರಾಂಶಗಳಿಗೂ ಅನ್ವಯವಾಗುತ್ತದೆ. ಅಂದರೆ ಔಟ್‌ಲುಕ್‌ನಲ್ಲಿ ಕನ್ನಡದಲ್ಲಿ ಬೆರಳಚ್ಚು ಮಾಡಲೂ ಇವೇ ವಿಧಾನಗಳನ್ನು ಬಳಸಬಹುದು.
ಔಟ್‌ಲುಕ್ ಎಂದರೆ ಏನು? ಅದನ್ನು ಯಾಕೆ ಬಳಸಲಾಗುತ್ತದೆ? ಔಟ್‌ಲುಕ್ ಮೂಲಭೂತವಾಗಿ ಇಮೈಲ್, ದಿನಚರಿ, ವಿಳಾಸಪುಸ್ತಕಗಳ ತಂತ್ರಾಂಶ. ಬಹುಪಾಲು ಜನರು ಇದನ್ನು ಇಮೈಲ್‌ಗಳಿಗೆ ಬಳಸುತ್ತಾರೆ. ಇತರೆ ಸೌಕರ್ಯಗಳನ್ನು ಕಡಿಮೆ ಬಳಸುತ್ತಾರೆ. ಔಟ್‌ಲುಕ್ ಕೂಡ ಕನ್ನಡವನ್ನು ಯುನಿಕೋಡ್ ವಿಧಾನದಲ್ಲಿ ಬಳಸುತ್ತದೆ. ಇದರಿಂದಾಗಿ ಕನ್ನಡದ ಅಕಾರಾದಿ ವಿಂಗಡಣೆಯೂ ಸಾಧ್ಯ. ಅಂದರೆ ಸ್ನೇಹಿತರ ವಿಳಾಸಗಳನ್ನು ಕನ್ನಡದಲ್ಲಿ ನಮೂದಿಸಿದ್ದರೆ ಅವುಗಳನ್ನು ಕನ್ನಡದ ಅಕರಾದಿ ವಿಂಗಡಣೆಯ ಸೂತ್ರದಂತೆ ವಿಂಗಡಿಸಿ ನೋಡಬಹುದು ಮತ್ತು ವೇಗವಾಗಿ ಮಾಹಿತಿಯನ್ನು ಹುಡುಕಿ ತೆಗೆಯಬಹುದು.
ಔಟ್‌ಲುಕ್ ತಂತ್ರಾಂಶವನ್ನು ಮುಖ್ಯವಾಗಿ ಜನರು ಬಳಸುವುದು ಇಮೈಲ್ ಮಾಡಲು. ವರ್ಡ್ ಬಳಸಿ ಕನ್ಕಡದಲ್ಲಿ ಬೆರಳಚ್ಚು ಮಾಡುವ ವಿಧಾನವನ್ನೇ ಬಳಸಿ ಔಟ್‌ಲುಕ್‌ನಲ್ಲೂ ಕನ್ನಡದಲ್ಲಿ ಬೆರಳಚ್ಚು ಮಾಡಿ ಇಮೈಲ್ ಕಳುಹಿಸಬಹುದು.
ಮೂಲ : ಭಾಷಾಇಂಡಿಯ
ಕೊನೆಯ ಮಾರ್ಪಾಟು : 10/15/2019