ಔಟ್‌ಲುಕ್‌ನಲ್ಲಿರುವ ಇನ್ನೊಂದು ಬಹುಮುಖ್ಯ ಸೌಲಭ್ಯವೆಂದರೆ ವಿಳಾಸ ಪುಸ್ತಕ. ನಿಮ್ಮ ಸಂಬಂಧಿಕರ, ಸ್ನೇಹಿತರ, ವ್ಯಾಪಾರ ವ್ಯವಹಾರಕ್ಕೆ ಸಂಬಂಧಿಸಿದವರ, ಹೀಗೆ ಬೇರೆ ಬೇರೆ ಕ್ಷೇತ್ರಕ್ಕೆ ಸಂಬಂಧಿಸಿ ನಿಮ್ಮ ಸಂಪರ್ಕದಲ್ಲಿರುವವ ವಿಳಾಸಗಳನ್ನು ಔಟ್‌ಲುಕ್‌ನಲ್ಲಿ ನಮೂದಿಸಬಹುದು. ವಿಳಾಸವೂ ಕನ್ನಡದಲ್ಲೇ ಇರಬಹುದು. ಅಷ್ಟು ಮಾತ್ರವಲ್ಲ ವಿಳಾಸಗಳಲ್ಲಿ ಹುಡುಕುವುದು, ವಿಳಾಸಗಳನ್ನು ಅಕಾರಾದಿಯಾಗಿ ವಿಂಗಡಿಸುವುದು – ಈ ಎಲ್ಲ ಕೆಲಸಗಳನ್ನೂ ಮಾಡಬಹುದು. ಕನ್ನಡ ಭಾಷೆಯಲ್ಲಿ ನಮೂದಿಸಿದ ವಿಳಾಸದ ಉದಾಹರಣೆಯೊಂದು ಇಲ್ಲಿದೆ.
ಈ ಉದಾಹರಣೆಯಲ್ಲಿ ಮೆನು ಕೂಡ ಕನ್ನದಲ್ಲೇ ಇರುವುದುನ್ನು ಗಮನಿಸಬಹುದು. ಈ ಸೌಲಭ್ಯ ಬೇಕಿದ್ದರೆ ಆಫೀಸ್ 2003ಕ್ಕೆ ಕನ್ನಡದ ಹೊದಿಕೆಯನ್ನು ಅಳವಡಿಸಿಕೊಳ್ಳಬೇಕು.
ಮೂಲ : ಭಾಷಾಇಂಡಿಯ
ಕೊನೆಯ ಮಾರ್ಪಾಟು : 10/4/2019