ವಿಂಡೋಸ್ 8 ಬಿಡುಗಡೆಯೊಂದಿಗೆ ಬಹುಭಾಷೆ ಇಂಟರ್ಫೇಸ್ ಎನ್ನುವುದು PC ಗಳಲ್ಲಿ ಬಹು ಭಾಷೆಗಳ ಪೂರ್ವಸ್ಥಾಪನೆಯೊಂದಿಗೆ ಹೆಚ್ಚು ಸುಲಭವಾಗಿದೆ. ಕಂಟ್ರೋಲ್ ಪ್ಯಾನೆಲ್ನಲ್ಲಿನ ಹೊಸ ಭಾಷೆ ಆದ್ಯತೆಗಳು ಎನ್ನುವುದು ವಿಂಡೋಸ್ 8 ರಲ್ಲಿ ಎಲ್ಲಾ ವಿಂಡೋಸ್ ಪ್ರದರ್ಶನ ಭಾಷೆಗಳನ್ನು ಹುಡುಕಲು ಒಂದೇ ಸ್ಥಳವಾಗಿದೆ. ಬಳಕೆದಾರರು ಭಾಷೆಗಳ ನಡುವೆ ಬದಲುಗೊಳ್ಳಬಹುದು ಮತ್ತು ಕೆಳಗಿನ ಚಿತ್ರದಲ್ಲಿ ತೋರಿಸಿರುವಂತೆ ಭಾಷೆ ಪ್ಯಾನೆಲ್ನಲ್ಲಿ “ಭಾಷೆಯೊಂದನ್ನು ಸೇರಿಸು” ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಮತ್ತೊಂದು ಭಾಷೆಯನ್ನು ಸೇರಿಸಬಹುದು.
ನಂತರ ಅಗತ್ಯ ಭಾಷೆಯನ್ನು ಆಯ್ಕೆಮಾಡಬೇಕಾಗುತ್ತದೆ ಮತ್ತು ಇದನ್ನು ಭಾಷೆ ಪಟ್ಟಿಗೆ ಸೇರಿಸಲಾಗುತ್ತದೆ ಆದರೆ ಇನ್ನೂ ಸಹ ಸ್ಥಾಪನೆಗೊಳಿಸಲಾಗುವುದಿಲ್ಲ. ಇದಕ್ಕಾಗಿ ನಾವು ಆಯ್ಕೆಗಳು ಬಟನ್ ಕ್ಲಿಕ್ ಮಾಡಬೇಕಾಗುತ್ತದೆ ಮತ್ತು “ಭಾಷೆ ಪ್ಯಾಕ್ ಅನ್ನು ಡೌನ್ಲೋಡ್ ಮಾಡಿ ಮತ್ತು ಸ್ಥಾಪನೆಗೊಳಿಸಿ” ಆಯ್ಕೆ ಮಾಡಬೇಕಾಗುತ್ತದೆ. ಹೊಸತಾಗಿ ಸ್ಥಾಪಿಸಲಾದ ಭಾಷೆಗೆ ಬದಲುಗೊಳ್ಳಲು, ನಾವು “ ಇದನ್ನು ಮೂಲಭೂತ ಭಾಷೆಯನ್ನಾಗಿಸು” ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ
ವಿಂಡೋಸ್ 8 ಗಾಗಿ 14 ಹೆಚ್ಚುವರಿ ಪ್ರದರ್ಶನ ಭಾಷೆಗಳೊಂದಿಗೆ ಭಾಷೆ ಬೆಂಬಲದಲ್ಲಿ ಮೈಕ್ರೋಸಾಫ್ಟ್ ಎನ್ನುವುದು ಮಾರುಕಟ್ಟೆಯಲ್ಲಿ ಅಗ್ರಗಣ್ಯ ಸ್ಥಾನದಲ್ಲಿರುವ ಜೊತೆಗೆ, ಒಟ್ಟು ಭಾಷೆಗಳ ಸಂಖ್ಯೆಯನ್ನು 109 ಕ್ಕೆ ತಂದಿದೆ. ವಿಂಡೋಸ್ನಲ್ಲಿ ಪ್ರದರ್ಶನ ಭಾಷೆಯು ಬಹುಮುಖ್ಯ ಸಂಗತಿಯಾಗಿತ್ತು ಎನ್ನುವುದುನ್ನು ಗಮನಿಸಬೇಕು. ಸುಮಾರು ಎರಡು ಮಿಲಿಯನ್ ಪದಗಳನ್ನು ಹೊಂದಿರುವ ಜೊತೆಗೆ ಬಳಕೆದಾರರ ಅನುಭವವನ್ನು ಬೆಂಬಲಿಸಲು ಫಾಂಟ್ಗಳನ್ನು, ಲೋಕಲೈಸ್ ಮಾಡಿದ ಪಠ್ಯಗಳನ್ನು ಮತ್ತು ಇನ್ಪುಟ್ ವಿಧಾನಗಳನ್ನು ವಿಂಡೋಸ್ ಬೆಂಬಲಿಸಬೇಕಾಗುತ್ತದೆ.
ವಿಂಡೋಸ್ ಪ್ರದರ್ಶನ ಭಾಷೆಗಳ ಪಟ್ಟಿಗೆ ಯುನೈಟೆಡ್ ಕಿಂಗ್ಡಮ್ಗಾಗಿ ಇಂಗ್ಲೀಷ್ ಭಾಷೆಯ ಸೇರ್ಪಡೆಯನ್ನು ಘೋಷಿಸಲು ವಿಂಡೋಸ್ ಸಂತೋಷ ಪಡುತ್ತದೆ.
ಮೂಲ : ಭಾಷಾಇಂಡಿಯ
ಕೊನೆಯ ಮಾರ್ಪಾಟು : 10/15/2019