ಹೊಸ ಕೊಡುಗೆ, ಹೊಸ ಡೌನ್‌ಲೋಡ್‌ಗಳು ಮತ್ತು ಪರಿಕರ ವರ್ಧನೆಗಳನ್ನು modern.IE ನಲ್ಲಿ ಮೈಕ್ರೋಸಾಫ್ಟ್ ಲಭ್ಯವಿರುವಂತೆ ಮಾಡುತ್ತಿದೆ. ಕೆಲವು
ಪ್ರಮುಖಾಂಶಗಳಲ್ಲಿ ಇವುಗಳು ಒಳಗೊಂಡಿದೆ :
• Windows 7 ನಲ್ಲಿ IE 10 ಗಾಗಿ ಮತ್ತು Windows XP ನಲ್ಲಿ IE 8 ಹೊಸ ವರ್ಚುವಲ್ ಯಂತ್ರಗಳನ್ನು ಡೌನ್‌ಲೋಡ್ ಮಾಡುವುದು
• ವೆಬ್ ಪುಟದ URL ಅನ್ನು ಸ್ಕ್ಯಾನ್ ಮಾಡುವುದು ಇದೀಗ ಮಾಹಿತಿಯನ್ನು ವಿನಿಮಯ ಮತ್ತು ಬಳಸುವ ಸಾಮರ್ಥ್ಯದ ಸಮಸ್ಯೆಗಳನ್ನು, ಫೈರ್‌ವಾಲ್ ಹಿಂದೆ ನೆಲೆಸಿರುವ ಸೈಟ್‌ಗಳಿಗೂ ಸಹ ಗುರುತಿಸುತ್ತದೆ.
• 18 ಭಾಷೆಗಳಲ್ಲಿ ಲಭ್ಯತೆ
3 ತಿಂಗಳ ಉಚಿತ ಬ್ರೌಸರ್‌ಸ್ಟಾಕ್ ಅಸೆಸ್ ಅನ್ನು ನೀಡುವುದನ್ನು ಮೈಕ್ರೋಸಾಫ್ಟ್ ಮುಂದುವರಿಸುತ್ತದೆ, ಆದ್ದರಿಂದ ಬಳಕೆದಾರರು ಪ್ರೈಮರಿ ಡೆವಲೆಪ್‌ಮೆಂಟ್ ವಾತಾವರಣವನ್ನು ಬದಲಾಯಿಸದೆಯೇ ಬ್ರೌಸರ್‌ಗಳು ಮತ್ತು OS ಪ್ಲಾಟ್‌ಫಾರ್ಮ್‌ಗಳಾದ್ಯಂತ ಸುಲಭವಾಗಿ ಪರೀಕ್ಷಿಸಬಹುದು.
ಸಾಧಿಸಿದ ಫೀಡ್‌ಬ್ಯಾಕ್ ಮೂಲಕ ಸಮಯವನ್ನು ಉಳಿಸಲು ಮತ್ತು ಬಳಕೆದಾರ ವೆಬ್ ಅನುಭವಗಳ ಪರೀಕ್ಷೆಯನ್ನು ಸುಧಾರಿಸಲು ಮೈಕ್ರೋಸಾಫ್ಟ್ ಸಹಾಯ ಮಾಡಬಹುದು. ಈ ಹೆಚ್ಚಿನ ಫೀಡ್‌ಬ್ಯಾಕ್ ಅನ್ನು Modern.IE ಬಿಡುಗಡೆಯು ಒಳಗೊಂಡಿರುತ್ತದೆ. ಮ್ಯಾಕ್ ಬಳಕೆದಾರರು ಪ್ಯಾರಲೆಲ್ಸ್ ಡೆಸ್ಕ್‌ಟಾಪ್ 8 ರೊಂದಿಗೆ ವಿಂಡೋಸ್ 8 ಒಳಗೊಂಡು ವಿಂಡೋಸ್ ಕ್ವಿಕ್‌ಸ್ಟಾರ್ಟ್ ಕಿಟ್ ಅನ್ನು ಪಡೆಯಬಹುದು.
ಬ್ರೌಸರ್‌ಗಳಾದ್ಯಂತ ಬಳಕೆದಾರರು ಪರೀಕ್ಷಿಸುವ ಹೆಚ್ಚು ಸಾಮಾನ್ಯ ಮಾರ್ಗವು ಬ್ರೌಸರ್ ವರ್ಚುವಲೈಸೇಶನ್ ಮೂಲಕ ಮತ್ತು ಹೈಪರ್-ವಿ, VMವೇರ್, ವರ್ಚುವಲ್‌ಬಾಕ್ಸ್ ಅಥವಾ ಪ್ಯಾರೆಲಲ್ಸ್ ನಂತಹ ಮೆಚ್ಚಿನ ವರ್ಚುವಲೈಸೇಶನ್ ಪ್ಲಾಟ್‌ಫಾರ್ಮ್ ಬಳಸಿಕೊಂಡ ಆಪರೇಟಿಂಗ್ ಸಿಸ್ಟಂ ಸಂಯೋಜನೆಗಳ ಮೂಲಕ ಆಗಿದೆ. ಆದರೆ, ಒಂದು ವೇಳೆ ಬಳಕೆದಾರರು ಮೊದಲ ಬಾರಿಯ ಹೊಸ ಬೆಳವಣಿಗೆಗಳಿಗಾಗಿ ಎದುರು ನೋಡುತ್ತಿದ್ದರೆ ಸಾಫ್ಟ್‌ವೇರ್ ಖರೀದಿ ಮಾಡುವ ಮತ್ತು ಪರವಾನಗಿಯ ವೆಚ್ಚಗಳು ಕಷ್ಟದಾಯಕವಾಗಿರಬಹುದು.
ಹೊಸ ವರ್ಚುವಲ್ ಯಂತ್ರಗಳನ್ನು ಡೌನ್‌ಲೋಡ್ ಮಾಡುವುದು
ಎಲ್ಲಾ IE ಆವೃತ್ತಿಗಳಿಗಾಗಿ ಮ್ಯಾಕ್ ಚಿತ್ರಗಳಿಗೆ ಪ್ಯಾರಲೆಲ್ಸ್ ಅನ್ನು ಮೈಕ್ರೋಸಾಫ್ಟ್ ಸೇರಿಸಿದೆ. ಹಲವು ಬಳಕೆದಾರರು ಈ ಹಿಂದೆ VM ಗಳನ್ನು ಡೌನ್‌ಲೋಡ್ ಮಾಡಲು ಸ್ವಲ್ಪ ಸವಾಲುಗಳನ್ನು ಹೊಂದಿದ್ದರು ಮತ್ತು ಪ್ರತಿಕ್ರಿಯೆಯಾಗಿ, VM ಸ್ಥಾಪನೆಯ ಸರಳ ಪ್ರಕ್ರಿಯೆಯನ್ನು ನವೀಕರಿಸಲಾಗಿದೆ.
ಸಾಮಾನ್ಯ ಕೋಡಿಂಗ್ ಸಮಸ್ಯೆಗಳಿಗೆ ವೆಬ್ ಪುಟ URL ಅನ್ನು ಸ್ಕ್ಯಾನ್ ಮಾಡುವುದು
ಹೆಚ್ಚು ಅನುಕೂಲತೆಯನ್ನು ಒದಗಿಸಲು ಮತ್ತು ಹೆಚ್ಚು ವಿವರಪೂರ್ಣವಾದ ಮತ್ತು ಕ್ರಿಯಾತ್ಮಕವಾದ ಮಾರ್ಗದರ್ಶನವನ್ನು ನೀಡಲು ವೆಬ್ ಪುಟ URL ಸ್ಕ್ಯಾನ್ ಮಾಡುವುದನ್ನು ಮೈಕ್ರೋಸಾಫ್ಟ್ ವರ್ಧಿಸಿದೆ. ನಾವು ಸಮುದಾಯದಿಂದ ನೇರವಾಗಿ ನೂರಾರು ಹೊಸ ಆಲೋಚನೆಗಳನ್ನು ಸ್ವೀಕರಿಸಿದ್ದೇವೆ. ಇದರ ಪರಿಣಾಮವಾಗಿಯೇ ಒಂದಿಷ್ಟು ವರ್ಧನೆಗಳು ಹೊರಬಂದಿದ್ದು, ಇದು ಬಳಕೆದಾರ ಸೈಟ್‌ಗೆ ಸ್ಕ್ಯಾನರ್ ಅನ್ನು ಹೆಚ್ಚು ಸಂಪೂರ್ಣ ಪರೀಕ್ಷಾತ್ಮಕ ಪರಿಹಾರವನ್ನಾಗಿ
ಮಾಡಿದೆ:
• ಫೈರ್‌ವಾಲ್ ಹಿಂಬದಿಯಲ್ಲಿ ನಿಮ್ಮ ವೆಬ್ ಪುಟಗಳನ್ನು ಸ್ಕ್ಯಾನ್ ಮಾಡುವುದು: ಹೆಚ್ಚು ಸಾಮಾನ್ಯ ಪ್ರತಿಕ್ರಿಯೆ ಎಂದರೆ, ಅಥೆಂಟಿಕೇಶನ್ ಅನ್ನು ಒಳಪಡಿಸಿಕೊಳ್ಳುವ ಹಲವು ಸೈಟ್‌ಗಳು ಆಂತರಿಕ ಅಥವಾ ವಾಣಿಜ್ಯಿಕ ವ್ಯವಹಾರ ವೆಬ್ ಅಪ್ಲಿಕೇಶನ್‌ಗಳಾಗಿವೆ ಅಥವಾ ಅವುಗಳು ಇಲ್ಲವೇ ಸಾರ್ವಜನಿಕ ಇಂಟರ್ನೆಟ್‌ಗೆ ಲಭ್ಯವಿರುವುದಿಲ್ಲ. ಬಳಕೆದಾರರು ಪ್ರಾಜೆಕ್ಟ್‌ಗಳನ್ನು ಇತರರಿಂದ ಹೆಚ್ಚು ಸುರಕ್ಷಿತವಾಗಿಡುತ್ತಾ, ಕೋಡ್ ಅನ್ನು ಸ್ಕ್ಯಾನ್ ಮಾಡಲು ಮಾಡರ್ನ್ IE ಸ್ಥಳೀಯ ಆವೃತ್ತಿಯೊಂದನ್ನು ಸ್ಥಾಪನೆಗೊಳಿಸಬಹುದು. ಇದನ್ನು node.js ಮೂಲಕ ಸ್ಥಾಪನೆಗೊಳಿಸಿ ಮತ್ತು ಲೋಕಲ್‌ಹೋಸ್ಟ್ ಮುಖಾಂತರ ಸೈಟ್ ಅನ್ನು ಅಸೆಸ್ ಮಾಡಿ.
• ಸಾಮಾನ್ಯ IE ಹೊಂದಾಣಿಕೆ ಸಮಸ್ಯೆಗಳಿಗೆ ಆಳವಾದ ಸ್ಕ್ಯಾನ್: IE ಗಾಗಿ ಪರೀಕ್ಷಿಸುವಾಗ ಮೊದಲ ಹಂತವೆಂದರೆ ಬಳಕೆದಾರ ಸೈಟ್ ಎನ್ನುವುದು ಹೊಂದಾಣಿಕೆಯ ವೀಕ್ಷಣೆ ಪಟ್ಟಿಯಲ್ಲಿದೆಯೇ ಎಂಬುದನ್ನು ತಿಳಿಯುವುದಾಗಿದೆ, ಆದರೆ ನಿಜವಾಗಿಯೂ ಅದು ಹೊಂದಾಣಿಕೆಯ ಸಮಸ್ಯೆಗಳನ್ನು ಸರಿಪಡಿಸುವುದಾಗಿದೆ. ಇದೀಗ ಮಾಡರ್ನ್ IE ನಲ್ಲಿ, ಬಳಕೆದಾರರು ಸೈಟ್ ಅನ್ನು ಬ್ರೌಸರ್ ಆಟೋಮೇಶನ್ ಬಳಸಿಕೊಳ್ಳುವ ಮೂಲಕ ಕಾಂಪಾಟ್ ಇನ್ಸ್‌ಪೆಕ್ಟರ್ ಪರಿಕರವನ್ನು ಬಳಸಿಕೊಂಡು, ಸೈಟ್‌ಗೆ ಒಂದೇ ಒಂದು ಸಾಲಿನ ಕೋಡ್ ಅನ್ನು ಸೇರಿಸದೆಯೇ ಸೈಟ್ ಅನ್ನು ಸ್ಕ್ಯಾನ್ ಮಾಡಬಹುದು. ಇದರ ಪರಿಣಾಮವೇ ಸೂಚಿತ ಪರಿಹಾರಗಳ ಲೈನ್-ಐಟಂ ಪಟ್ಟಿಯಾಗಿದೆ.
• ಜವಾಬ್ದಾರಿಯುತವಾಗಿ ವಿನ್ಯಾಸಗೊಳಿಸಲಾದ ಸೈಟ್‌ಗಳಿಗೆ ಬ್ರೇಕ್‌ಪಾಯಿಂಟ್ ಪತ್ತೆಹಚ್ಚುವಿಕೆ – ಫೋನ್ ಮತ್ತು ಟ್ಯಾಬ್ಲೆಟ್‌ಗಳಿಂದ XBOX ನಲ್ಲಿನ IE ದೊಡ್ಡ ಸ್ಕ್ರೀನ್‌ಗಳಿಗಾಗಿನ ಬೆಳೆಯುತ್ತಿರುವ ಸಾಧನಗಳ ಶ್ರೇಣಿಗಳಿಗೆ ಬೆಂಬಲಿಸಲು ಬಳಕೆದಾರರು ವೆಬ್ ಅನುಭವಗಳಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಸಾಮಾನ್ಯ ಅಡ್ಡ ಸ್ಕ್ರೀನ್ ರೆಸಲ್ಯೂಶನ್‌ಗಳು ಅಥವಾ “ಬ್ರೇಕ್‌ಪಾಯಿಂಟ್‌ಗಳಿಗೆ” ವೆಬ್ ಪುಟವನ್ನು ಆಪ್ಟಿಮೈಸ್ ಮಾಡಿದಾಗ ಪತ್ತೆಹಚ್ಚಲು ವೆಬ್ ಪುಟ URL ಸ್ಕ್ಯಾನ್ ಮಾಡುವ ಪರಿಕರವು ಅಂತರ್ನಿರ್ಮಿತ ಲಾಜಿಕ್ ಅನ್ನು ಹೊಂದಿದೆ. ಬಳಕೆದಾರರು ಸಾಧನಗಳ ಶ್ರೇಣಿಗಳಿಗೆ ಬ್ರೇಕ್ ಪಾಯಿಂಟ್ಸ್ ಸಾಮಾನ್ಯವನ್ನು ನಿರ್ಮಿಸಬಹುದು.
• ಸ್ಪರ್ಶ-ಆಪ್ಟಿಮೈಸೇಶನ್ ಪತ್ತೆಹಚ್ಚುವಿಕೆ: ವೆಬ್ ಸ್ಟ್ಯಾಂಡರ್ಡ್‌ನತ್ತ ಸ್ಪರ್ಶ ಬೆಂಬಲವು ರೂಪಿತವಾಗಿರುವುದರಿಂದ, ಬಹು ಜಾವಾಸ್ಕ್ರಿಪ್ಟ್, HTML ಮತ್ತು CSS-ಆಧಾರಿತ ತಂತ್ರಜ್ಞಾನಗಳಾದ್ಯಂತ ಸ್ಪರ್ಶ ಕಾರ್ಯನಿರ್ವಹಣೆಯನ್ನು ಮಾಡರ್ನ್ IE ಪತ್ತೆಹಚ್ಚುತ್ತದೆ.
• ಬ್ರೌಸರ್ ಪ್ಲಗ್-ಇನ್‌ಗಳು: ವಿಂಡೋಸ್ 8 ಮತ್ತು ಮತ್ತು ವಿಂಡೋಸ್ 8 ರಲ್ಲಿನ ರಲ್ಲಿ ಇಂಟರ್ನೆಟ್ ಎಕ್ಸ್‌ಪ್ಲೋರರ್ 10 ಅನ್ನು ಫ್ಲ್ಯಾಶ್ ವಿಷಯವು ಡೀಫಾಲ್ಟ್ ಆಗಿ ಚಲಾಯಿಸುವಂತೆ ಸಕ್ರಿಯಗೊಳಿಸಲು ನವೀಕರಿಸಲಾಗಿದೆ. ಮಾಡರ್ನ್ IE ನಲ್ಲಿ ಸ್ಕ್ಯಾನ್ ಮಾಡುವ ಮೂಲಕ ಫ್ಲ್ಯಾಶ್ CV ಬ್ಲಾಕ್ ಪಟ್ಟಿಯಲ್ಲಿ ಸೈಟ್ ಇದೆಯೇ ಎಂಬುದನ್ನು ಬಳಕೆದಾರರ ಪರಿಶೀಲಿಸಬಹುದು.
ಕಡಿಮೆ ಸಾಮಾನ್ಯ ಅಭ್ಯಾಸಗಳು ಅಥವಾ ಫ್ರೇಮ್‌ವರ್ಕ್‌ಗಳು ಮತ್ತು ಲೈಬ್ರರಿಗಳನ್ನು ಬಳಸುವ ವೆಬ್ ಪುಟಗಳನ್ನು ನಿರ್ವಹಣೆ ಮಾಡಲು ಸ್ಕ್ಯಾನಿಂಗ್ ಪರಿಕರದಲ್ಲಿನ ಸಾಕಷ್ಟು ಸಮಸ್ಯೆಗಳನ್ನು ನಾವು ಸರಿಪಡಿಸಿದ್ದೇವೆ.
ವರ್ಲ್ಡ್-ವೈಡ್ ವೆಬ್‌ಗಾಗಿ ಮಾಡರ್ನ್ IE
ಮಾಡರ್ನ್ IE 18 ಭಾಷೆಗಳಲ್ಲಿ ಲಭ್ಯವಿದ್ದು, ಈ ಮೂಲಕ ವಿಶ್ವದಾದ್ಯಂತ ಸೈಟ್ ಡೆವಲಪರ್‌ಗಳಿಗೆ ಸುಲಭಗೊಳಿಸಿದೆ. ಬೆಂಬಲಿತ ಭಾಷೆಗಳಲ್ಲಿ ಅರೇಬಿಕ್, ಬಹಾಸಾ ಇಂಡೋನೇಶಿಯಾ, ಚೈನೀಸ್ (ಸರಳೀಕೃತ, ಸಾಂಪ್ರದಾಯಿಕ ಮತ್ತು ಹಾಂಗ್‌ಕಾಂಗ್), ಡಚ್, ಫ್ರೆಂಚ್, ಜರ್ಮನ್, ಇಟಾಲಿಯನ್, ಜಪಾನೀಸ್, ಕೊರಿಯನ್, ಪೋರ್ಚುಗೀಸ್ (ಬ್ರೆಜಿಲಿಯನ್), ರಷ್ಯನ್, ಸ್ಪ್ಯಾನಿಶ್ (ಸ್ಪೇನ್ ಮತ್ತು ಲ್ಯಾಟಿನ್ ಅಮೇರಿಕ), ಸ್ವೀಡಿಶನ್, ಥಾಯಿ, ಟರ್ಕಿಶ್ ಮತ್ತು ವಿಯಟ್ನಾಮೀಸ್.
ಮೂಲ : ಭಾಷಾಇಂಡಿಯ
ಕೊನೆಯ ಮಾರ್ಪಾಟು : 10/16/2019