অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ವಿಂಡೋಸ್ 8 ಗಾಗಿ ವಿಂಡೋಸ್ ಮಾಧ್ಯಮ ಕೇಂದ್ರ

ವಿಂಡೋಸ್ 8 ಗಾಗಿ ವಿಂಡೋಸ್ ಮಾಧ್ಯಮ ಕೇಂದ್ರ

ಈ ಫೋರಂಗಳಲ್ಲಿ ಜೊತೆಗೆ ಇಮೇಲ್‌ನಲ್ಲಿಯೂ ಸಹ ಮಾಧ್ಯಮ ಕೇಂದ್ರವೆನ್ನುವುದು ಬಹಳಷ್ಟು ಚರ್ಚೆಯ ಮತ್ತು ಪ್ರತಿಕ್ರಿಯೆಯ ಕೇಂದ್ರಬಿಂದುವಾಗಿದೆ.

 

ವಿಂಡೋಸ್ 8 ಡೆವಲಪರ್ ಪ್ಲಾಟ್‌ಫಾರ್ಮ್, ಪ್ರಮಾಣಿತ HTML5 ವೆಬ್ ಪ್ಲಾಟ್‌ಫಾರ್ಮ್ ಅನ್ನು ಬೆಂಬಲಿಸುವ ಇಂಟರ್ನೆಟ್ ಎಕ್ಸ್‌ಫ್ಲೋರರ್ 10 ರೊಂದಿಗೆ ವ್ಯಾಪಕ ಶ್ರೇಣಿಯ ಉದ್ಯಮ-ಪ್ರಮಾಣಿತ ಮಾಧ್ಯಮ ಸ್ವರೂಪಗಳನ್ನು ಒಳಗೊಂಡಿದೆ. ವಿಶ್ವ-ಗುಣಮಟ್ಟದ ವೀಡಿಯೋ ಮತ್ತು ಆಡಿಯೋ ಮನರಂಜನೆ ಅನುಭವನ್ನು ವಿಂಡೋಸ್ 8 ಒದಗಿಸುತ್ತದೆ. ತೊಡಗಿಸಿಕೊಳ್ಳುವ ಮತ್ತು ವಿಭಿನ್ನವಾದ ಅಪ್ಲಿಕೇಶನ್‌ಗಳನ್ನು ನಿರ್ಮಾಣ ಮಾಡಲು ಡೆವಲಪರ್‌ಗಳಿಗೆ ವ್ಯಾಪಕವಾದ ವೀಡಿಯೋ ಮತ್ತು ಆಡಿಯೋ ಪ್ಲಾಟ್‌ಫಾರ್ಮ್ ಅನ್ನು ಒದಗಿಸುವುದು ನಮ್ಮ ಗಮನವಾಗಿದೆ. ಹಾಗೆಯೇ ಈ ಆಧುನಿಕ ಮಾಧ್ಯಮ ಅನುಭವಗಳನ್ನು ನೀಡಲು ಡೀಕೋಡರ್‌ಗಳ ಗುಂಪು ಮತ್ತು ಹೊಸ ಡೆವಲಪರ್ ಕಾರ್ಯಕ್ಷಮತೆಯನ್ನು ಇದು ಒಳಗೊಂಡಿರುತ್ತದೆ.


ಮೆಟ್ರೋ ಶೈಲಿ ಅಪ್ಲಿಕೇಶನ್‌ಗಳು ವಿಂಡೋಸ್‌ನಲ್ಲಿ ಒಳಗೊಂಡಿರುವ ಯಾವುದೇ ಡೀಕೋಡರ್‌ಗಳನ್ನು ಬಳಸಬಹುದು. ಈ ಡೀಕೋಡರ್‌ಗಳನ್ನು ಸಿಸ್ಟಮ್ ವಿಶ್ವಾಸಾರ್ಹತೆ, ಬ್ಯಾಟರಿ ಬಾಳಿಕೆ ಮತ್ತು ನಿರ್ವಹಣೆಗಾಗಿ ಆಪ್ಟಿಮೈಸ್‌ ಮಾಡಲಾಗಿದೆ ಮತ್ತು ಯೂಟ್ಯೂಬ್ ವೀಡಿಯೋ, ನೆಟ್‌ಫ್ಲಿಕ್ಸ್ ವೀಡಿಯೋ, ಅಮೇಜಾನ್ ಆಡಿಯೋ/ವೀಡಿಯೋ, H.264 ವೆಬ್ ಬ್ರೌಸಿಂಗ್/ಸ್ಟ್ರೀಮಿಂಗ್, ಹುಲು ವೀಡಿಯೋ, MP4 ವೀಡಿಯೋ, ಕ್ಯಾಮ್‌ಕಾರ್ಡರ್‌ಗಳಿಂದ AVCHD ವೀಡಿಯೋ, ಅಲ್ಟ್ರಾವೈಲೆಟ್ ವೀಡಿಯೋನಂತಹ ಮುಖ್ಯವಾಹಿನಿಯ ವಿಷಯಗಳಿಗೆ ಪ್ಲೇಬ್ಯಾಕ್ ಸಂಗತಿಗಳನ್ನು ಮತ್ತು HTML5 ವೀಡಿಯೋ ಟ್ಯಾಗ್ ಅನ್ನು ಒಳಗೊಂಡಿರುತ್ತದೆ. Metro style apps can also include additional decoders (such as FLAC, MKV, OGG, etc.) in their apps package for use within the apps ತಮ್ಮ ಅಪ್ಲಿಕೇಶನ್‌ಗಳ ಒಳಗೆ ಬಳಸಲು ಮೆಟ್ರೋ ಶೈಲಿ ಅಪ್ಲಿಕೇಶನ್‌ಗಳು ತಮ್ಮ ಅಪ್ಲಿಕೇಶನ್‌ಗಳ ಪ್ಯಾಕೇಜ್ ಒಳಗಡೆ ಹೆಚ್ಚುವರಿ ಡಿಕೋಡರ್‌ಗಳನ್ನು (FLAC, MKV, OGG ನಂತಹ ಇತರ) ಸಹ ಒಳಗೊಂಡಿರಬಹುದು.

 

ಮೈಕ್ರೋಸಾಫ್ಟ್ ಪ್ರಕಾರ ಡೀಕೋಡರ್ ಪರವಾನಗಿ ನೀಡುವಿಕೆಯು ವೆಚ್ಚದ ಪ್ರಮುಖ ಅಂಶವಾಗಿದ್ದು ಅದಕ್ಕೆ ಅದು ಪರಿಹಾರವನ್ನು ಕಂಡುಕೊಂಡಿದೆ. ವಿಂಡೋಸ್ 8 ಬಳಕೆದಾರರಿಗೆ ವಿಂಡೋಸ್‌ 8 ಗೆ ಫೀಚರ್‌ಗಳನ್ನು ಸೇರಿಸು ಕಂಟ್ರೋಲ್ ಪ್ಯಾನೆಲ್ ಮೂಲಕ ವಿಂಡೋಸ್ ಮೀಡಿಯಾ ಸೆಂಟರ್ ಲಭ್ಯವಿದೆ. ಮಾಧ್ಯಮ ಕೇಂದ್ರದಲ್ಲಿ ಆಸಕ್ತಿಯನ್ನು ಹೊಂದಿರುವ ಬಳಕೆದಾರರು ಅದನ್ನು ಪಡೆಯಲು ಅನುಕೂಲಕರವಾದ ಮಾರ್ಗವನ್ನು ಹೊಂದಿದ್ದಾರೆಂದು ಇದು ಖಚಿತಪಡಿಸುತ್ತದೆ. ಎಲ್ಲಾ ಆವೃತ್ತಿಗಳಲ್ಲಿ ಆದರೆ ಡಿವಿಡಿ ಪ್ಲೇಬ್ಯಾಕ್ ಬೆಂಬಲವಿಲ್ಲದೇ ವಿಂಡೋಸ್ ಮೀಡಿಯಾ ಪ್ಲೇಯರ್ ಲಭ್ಯವಿರುವುದು ಮುಂದುವರಿಯುತ್ತದೆ.

 

ವಿಂಡೋಸ್ 8 ಪ್ರೋ ಎನ್ನುವುದನ್ನು ವ್ಯಾಪಕವಾದ ವಿಂಡೋಸ್ 8 ತಂತ್ರಜ್ಞಾನ ಸಮೂಹವನ್ನು ಪಡೆಯಲು ತಂತ್ರಜ್ಞಾನದಲ್ಲಿ ಆಸಕ್ತಿಯಿರುವ ವ್ಯಕ್ತಿಗಳಿಗೆ ವಿನ್ಯಾಸಗೊಳಿಸಲಾಗಿದೆ. ವಿಂಡೋಸ್ 8 ಮೀಡಿಯಾ ಸೆಂಟರ್ಪ್ಯಾಕ್ ಅಥವಾ ವಿಂಡೋಸ್ 8 ಪ್ರೋ ಪ್ಯಾಕ್ ಅನ್ನು ಪಡೆದುಕೊಳ್ಳುವುದು ನಿಮಗೆ ಡಿವಿಡಿ ಪ್ಲೇಬ್ಯಾಕ್ (ಮೀಡಿಯಾ ಸೆಂಟರ್‌ನಲ್ಲಿ, ಮೀಡಿಯಾ ಪ್ಲೇಯರ್‌ನಲ್ಲಿ ಅಲ್ಲ) ಬ್ರಾಡ್‌ಕಾಸ್ಟ್ ಟಿವಿ ರೆಕಾರ್ಡಿಂಗ್ ಮತ್ತು ಪ್ಲೇಬ್ಯಾಕ್ ಮತ್ತು VOB ಫೈಲ್ ಪ್ಲೇಬ್ಯಾಕ್‌ ಒಳಗೊಂಡು ಮೀಡಿಯಾ ಸೆಂಟರ್ ಅನ್ನು ನೀಡುತ್ತದೆ.

ಮೂಲ : ಭಾಷಾಇಂಡಿಯ

ಕೊನೆಯ ಮಾರ್ಪಾಟು : 10/24/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate