অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ವಿಂಡೋಸ್ 8 ಬಾಕ್ಸ್ ಅಪ್ಲಿಕೇಶನ್

ವಿಂಡೋಸ್ 8 ಬಾಕ್ಸ್ ಅಪ್ಲಿಕೇಶನ್

ಳಕೆದಾರರಿಗೆ ಅವರ ವಿಷಯವನ್ನು ಎಲ್ಲಿಂದಲಾದರೂ ಪಡೆದುಕೊಳ್ಳಲು ಅನುಮತಿಸುವ ಜೊತೆಗೆ ಅವರನ್ನು ಉತ್ತಮವಾಗಿ ತೊಡಗಿಸಿಕೊಳ್ಳಲು ಹಲವು ಅನನ್ಯ ವಿಂಡೋಸ್ 8 ವೈಶಿಷ್ಟ್ಯಗಳ ಪ್ರಯೋಜನಗಳನ್ನು ಬಾಕ್ಸ್‌ನ ವಿಂಡೋಸ್ ಸ್ಟೋರ್ ಅಪ್ಲಿಕೇಶನ್ ಪಡೆದುಕೊಳ್ಳುತ್ತದೆ.

ಲೈವ್ ಟೈಲ್‌ಗಳು

ಬಾಕ್ಸ್ ಸುಂದರವಾದ ಟೈಲ್ ಅನ್ನು ಹೊಂದಿದ್ದು ಅದು ಹೊಸ ಚಟುವಟಿಕೆಯನ್ನು ತೋರಿಸಲು ನವೀಕರಿಸಲ್ಪಡುತ್ತದೆ. ಇದು ಟೈಲ್‌ನಲ್ಲಿ ಮಾದರಿ ಸಂಖ್ಯೆಯನ್ನು ನೋಡುವುದಕ್ಕಿಂತ ಹೆಚ್ಚು ಉಪಯೋಗಕಾರಿಯಾಗಿದೆ, ಆದರೆ ಇದು ಪೂರ್ಣ ಪ್ರಮಾಣದ ಪ್ರಕಟಣೆಗಳನ್ನು ಪಡೆದುಕೊಳ್ಳುವುದಕ್ಕಿಂತ ಕಡಿಮೆ ಅಂತಸ್ಸರಣೀಯವಾಗಿದೆ.

 



ಸೆಮಾಂಟಿಕ್ ಜೂಮ್
ಸೆಮಾಂಟಿಕ್ ಜೂಮ್ ಎನ್ನುವುದು ವಿಷಯದ ಅತ್ಯಧಿಕ-ಮಟ್ಟದ ವಿಷಯದ ವೀಕ್ಷಣೆಯನ್ನು ತ್ವರಿತವಾಗಿ ಪಡೆಯಲು ಬಳಕೆದಾರರಿಗೆ ಅವಕಾಶ ನೀಡುತ್ತದೆ ಮತ್ತು ಬಾಕ್ಸ್ ಎನ್ನುವುದು ನಿರ್ದಿಷ್ಟವಾಗಿ ಉತ್ತಮ ಜಾರಿಯನ್ನು ಹೊಂದಿದೆ.
ಸೆಮಾಂಟಿಕ್ ಜೂಮ್ ಎನ್ನುವದನ್ನು ಸ್ಕ್ರೀನ್ ಅನ್ನು ಪಿಂಚ್ ಮಾಡುವ ಮೂಲಕ ಅಥವಾ ಕೆಳಭಾಗದ ಬಲ ಮೂಲೆಯಲ್ಲಿ ಕ್ಲಿಕ್ ಮಾಡುವ ಮೂಲಕ ಸಕ್ರಿಯಗೊಳಿಸಲಾಗುತ್ತದೆ. ಸೆಮಾಂಟಿಕ್ ಜೂಮ್ ಇನ್‌ವೋಕ್ ಮಾಡುವ ಮೂಲಕ, ವೀಕ್ಷಕರು ಅಧಿಕ ಮಟ್ಟದ ವೀಕ್ಷಣೆಯನ್ನು ಪಡೆಯುತ್ತಾರೆ ಮತ್ತು ಯಾವುದೇ ಅಕ್ಷರಕ್ಕೆ ತ್ವರಿತವಾಗಿ ಜಂಪ್ ಮಾಡಬಹುದು. ಬಳಕೆದಾರರು ವರ್ಣಾನುಕ್ರಮದ ಬದಲಿಗೆ ದಿನಾಂಕದ ಅಥವಾ ಗಾತ್ರದ ಮೂಲಕ ವಿಂಗಡಿಸುವ ಮೂಲಕ ಅದೇ ವೀಕ್ಷಣೆಯನ್ನು ಪಡೆಯುವ ಆಯ್ಕೆಯನ್ನು ಸಹ ಹೊಂದಿರುತ್ತಾರೆ.

 

 

 

 



ಸೆಮಾಂಟಿಕ್ ಜೂಮ್ ಎನ್ನುವುದು ಹೆಚ್ಚು ವಿಷಯವನ್ನು ತೋರ್ಪಡಿಸಲು ಮತ್ತು ಅಪ್ಲಿಕೇಶನ್‌ನೊಂದಿಗೆ ಬಳಸಿದ ಸಮಯವನ್ನು ಹೆಚ್ಚಿಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ.

ಫೈಲ್ ಪಿಕ್ಕರ್
ವಿಂಡೋಸ್ 8 ರಲ್ಲಿನ ಅನನ್ಯ ವೈಶಿಷ್ಟ್ಯಗಳಲ್ಲಿ ಫೈಲ್ ಪಿಕ್ಕರ್ ಮೂಲಕ ಇತರ ಅಪ್ಲಿಕೇಶನ್‌ಗಳಿಗೆ ಅವುಗಳ ವಿಷಯವನ್ನು ಒಡ್ಡಲು ಅಪ್ಲಿಕೇಶನ್‌ಗಳಿಗೆ ಅವಕಾಶ ನೀಡುವ ಸಾಮರ್ಥ್ಯವು ಒಂದಾಗಿದೆ. ಇದು ಬಾಕ್ಸ್ ನಂತಹ ಅಪ್ಲಿಕೇಶನ್‌ಗೆ ನಿರ್ದಿಷ್ಟವಾಗಿ ಪ್ರಮುಖವಾಗಿರುತ್ತದೆ. ಬಳಕೆದಾರರು ಫೈಲ್‌ಗಳನ್ನು ಬಾಕ್ಸ್ ಅಪ್ಲಿಯೊಳಗೆ ಪ್ರವೇಶಿಸಬಹುದು.
ಉದಾಹರಣೆಗೆ, ಬಳಕೆದಾರರು ಕೆಲವು ಫೈಲ್‌ಗಳನ್ನು ಬಾಕ್ಸ್ ನಿಂದ ಇಮೇಲ್‌ಗೆ, ಬಾಕ್ಸ್ ಅಪ್ಲಿಕೇಶನ್‌ಗೆ ಬದಲಾಗದೆಯೇ ಮತ್ತು ಹೊಸ ಇಮೇಲ್ ಪ್ರಾರಂಭಿಸದೆಯೇ ಲಗತ್ತಿಸಲು ಬಯಸಿದರೆ, ಬಳಕೆದಾರರು ಮೇಲ್‌ನಲ್ಲಿನ ಲಗತ್ತುಗಳ ಐಕಾನ್‌ ಅನ್ನು ತಟ್ಟಬಹುದು. ಇದು ಪಿಕ್ಕರ್ ಅನ್ನು ಮೇಲಕ್ಕೆ ತರುತ್ತದೆ, ಇದು ಹಾರ್ಡ್ ಡ್ರೈವ್‌ನಲ್ಲಿ ಸ್ಥಳಗಳ ಪಟ್ಟಿಯನ್ನು ಜೊತೆಗೆ ಫೈಲ್ ಪಿಕ್ಕರ್ ಒಪ್ಪಂದಗಳನ್ನು ಜಾರಿಗೊಳಿಸಿರುವ ಅಪ್ಲಿಗಳಿಂದ ಆಯ್ಕೆಮಾಡುವ ಅವಕಾಶವನ್ನು ನೀಡುತ್ತದೆ. ಬಳಕೆದಾರರು ಬಾಕ್ಸ್, ಫೈಲ್‌ಗಳನ್ನು ಆಯ್ಕೆಮಾಡಬಹುದು ಮತ್ತು ಲಗತ್ತಿಸು ಅನ್ನು ಕ್ಲಿಕ್ ಮಾಡಬಹುದು.

 



ಫೈಲ್ ಪಿಕ್ಕರ್‌ಗೆ ಪ್ರವೇಶವು ವಿಂಡೋಸ್ ಸ್ಟೋರ್ ಅಪ್ಲಿಕೇಶನ್‌ಗಳನ್ನು ಹಲವು ಉತ್ಪಾದಕತೆ-ಆಧಾರಿತ ಸನ್ನಿವೇಶಗಳಿಗೆ ಹೆಚ್ಚು ಶಕ್ತಿಶಾಲಿಯನ್ನಾಗಿ ಮಾಡುತ್ತದೆ. ಅನನ್ಯ ವಿಂಡೋಸ್ 8 ಕಾರ್ಯಗಳ ಪ್ರಯೋಜನವನ್ನು ಪಡೆದುಕೊಳ್ಳುವ ಉತ್ತಮ-ವಿನ್ಯಾಸಗೊಳಿಸಿದ ಅಪ್ಲಿಕೇಶನ್‌ ಅನ್ನು ನಿರ್ಮಿಸುವ ಮೂಲಕ, ತಮ್ಮ ಗ್ರಾಹಕರು ಹೆಚ್ಚು ಉತ್ಪಾದಕೀಯವಾಗಲು ತಮ್ಮ ಗ್ರಾಹಕರಿಗೆ ಬಾಕ್ಸ್ ಸಹಾಯ ಮಾಡುತ್ತದೆ, ಪರಿಣಾಮವಾಗಿ ಇದು ತೊಡಗಿಸಿಕೊಳ್ಳುವಿಕೆ ಮತ್ತು ತೃಪ್ತಿದಾಯಕತೆಯನ್ನು ಮೂಡಿಸಲು ಸಹಾಯ ಮಾಡುತ್ತದೆ.

ಮೂಲ : ಭಾಷಾಇಂಡಿಯ

ಕೊನೆಯ ಮಾರ್ಪಾಟು : 6/9/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate