অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ವಿಂಡೋಸ್ 8 ರಲ್ಲಿ ಸೆನ್ಸಾರ್‌ಗಳು

ವಿಂಡೋಸ್ 8 ರಲ್ಲಿ ಸೆನ್ಸಾರ್‌ಗಳು

ಬ್ಯಾಟರಿ ಜೀವಿತಾವಧಿಯನ್ನು ರಕ್ಷಿಸುವ ಜೊತೆಗೆ ವಾತಾವರಣಕ್ಕೆ PC ಅನ್ನು ಹೊಂದಿಕೊಳ್ಳಲು ವಿಂಡೋಸ್ 8 ರಲ್ಲಿ ಸೆನ್ಸಾರ್ ಕುರಿತಂತೆ ಮೈಕ್ರೋಸಾಫ್ಟ್ ತಂಡವು ಕಾರ್ಯನಿರ್ವಹಿಸುತ್ತಿದೆ.

 

ಮೊದಲ ಸಿಸ್ಟಮ್ ವೈಶಿಷ್ಟ್ಯವು ಸ್ವಯಂಚಾಲಿತ ಪ್ರದರ್ಶನ ಪ್ರಕಾಶನಮಾನ ನಿಯಂತ್ರಣವಾಗಿದೆ. ಇದು ಆಂಬಿಯೆಂಟ್ ಲೈಟ್ ಸೆನ್ಸಾರ್‌ಗಳು (ಎಎಲ್ಎಸ್) ಬಳಸಿಕೊಂಡು ವಿಂಡೋಸ್ 7 ನಲ್ಲಿ ಮೈಕ್ರೋಸಾಫ್ಟ್ ಪರಿಚಯಿಸಿದ ವೈಶಿಷ್ಟ್ಯವಾಗಿತ್ತು ಮತ್ತು ಸ್ಲೇಟ್‌ಗಳು, ಕನ್ವರ್ಟಿಬಲ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಂತಹ ಮೊಬೈಲ್ ರೂಪದ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಲಾಗಿತ್ತು. ಆಂಬಿಯೆಂಟ್ ಬೆಳಕು ಸ್ಥಿತಿಗಳ ಬದಲಾವಣೆಗಳ ಆಧಾರದ ಮೇಲೆ ಸ್ಕ್ರೀನ್ ಪ್ರಕಾಶಮಾನತೆಯನ್ನು ಡೈನಾಮಿಕ್ ಆಗಿ ನಿಯಂತ್ರಿಸುವ ಮೂಲಕ, ಆರಾಮದಾಯಕ ಓದುವಿಕೆಯ ಮಟ್ಟವನ್ನು ಮೈಕ್ರೋಸಾಫ್ಟ್ ಆಪ್ಟಿಮೈಸ್ ಮಾಡಬಹುದು ಮತ್ತು ಕತ್ತಲೆ ವಾತಾವರಣಗಳಲ್ಲಿ ಸ್ಕ್ರೀನ್ ಅನ್ನು ಮಬ್ಬುಗೊಳಿಸಿದಾಗ ಬ್ಯಾಟರಿ ಜೀವಿತಾವಧಿಯನ್ನು ಉಳಿಸಬಹುದು. ಬೆಳಕಿನ ವಾತಾವರಣಕ್ಕೆ ಟ್ಯಾಬ್ಲೆಟ್ ಪ್ರವೇಶಿಸಿದಾಗ ಮತ್ತು ಸೂರ್ಯನ ಬೆಳಕಿರುವ ಕೊಠಡಿಯಲ್ಲಿ ಡೆಸ್ಕ್‌ಟಾಪ್ PC ಗಳನ್ನು ಬಳಕೆದಾರರು ಬಳಸುತ್ತಿರುವಾಗ ಸ್ವಯಂಚಾಲಿತವಾಗಿ ಸ್ಕ್ರೀನ್ ಪ್ರಕಾಶಮಾನವಾಗುತ್ತದೆ. ಈ ಬಗೆಯ ವಾತಾವರಣದ ಬದಲಾವಣೆಯು ವಿಭಿನ್ನ ಋತುಗಳಲ್ಲಿ ದಿನದ ವಿವಿಧ ಸಮಯಗಳಲ್ಲಿ ಸಂಭವಿಸಬಹುದು.

 

ಸಾಧನವು ತಿರುಗಿದಾಗ, ಗ್ರಾಫಿಕ್ ಪ್ರದರ್ಶನವು ಸಹ ತಿರುಗುತ್ತದೆ ಮತ್ತು ಹೊಸ ಓರಿಯಂಟೇಶನ್‌ಗೆ ಹೊಂದಿಕೊಳ್ಳುತ್ತದೆ ಎಂಬ ನಿರೀಕ್ಷೆಯನ್ನು ಹಲವು ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಮೊಬೈಲ್ ಸಾಧನಗಳು ಸಾಧಿಸಿ ತೋರಿಸಿವೆ. ಅಸ್ಸೆಲೆರೋಮೀಟರ್‌ನಿಂದ ಡೇಟಾವು ಸಾಧನದ ಮೂಲಭೂತ ಓರಿಯಂಟೇಶನ್ ಅನ್ನು ನಿರ್ಧರಿಸಲು ಅನುಮತಿಸುತ್ತದೆ. ಸ್ಕ್ರೀನ್ ಅನ್ನು ಸ್ವಯಂಚಾಲಿತವಾಗಿ ತಿರುಗಿಸುವ ಮೂಲಕ, ಜನರು ತಮ್ಮ ಸಾಧನಗಳನ್ನು ಹೆಚ್ಚು ನೈಸರ್ಗಿಕ ಮತ್ತು ಪ್ರತ್ಯಕ್ಷಜ್ಞಾನದ ರೀತಿಯಲ್ಲಿ ಸಾಫ್ಟ್‌ವೇರ್ ನಿಯಂತ್ರಣಗಳು ಅಥವಾ ಹಾರ್ಡ್‌ವೇರ್ ಬಟನ್‌ಗಳೊಂದಿಗೆ ಸ್ಕ್ರೀನ್ ಅನ್ನು ಹಸ್ತಚಾಲಿತವಾಗಿ ತಿರುಗಿಸುವ ಅಗತ್ಯವಿಲ್ಲದೇ ಬಳಸಬಹುದು.

 

ಅಸ್ಸೆಲರೇಟರ್ ಎನ್ನುವುದು ಗುರುತ್ವಾಕರ್ಷಣ ಶಕ್ತಿಯ ಕಾರಣದ ಬಲವನ್ನು ಮತ್ತು ಸಾಧನದ ಚಲನೆಯನ್ನು ಮಾಪನ ಮಾಡುವ ಸಾಧನವಾಗಿದೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಚಲನೆ ಮತ್ತು ಗುರುತ್ವಾಕರ್ಷಣ ಶಕ್ತಿಗಿಂತ ಹೆಚ್ಚಿನದರ ಅಗತ್ಯವಿರುತ್ತದೆ. ಓರಿಯಂಟೇಶನ್ ಎನ್ನುವುದು ಸಹ ಹಲವು ಅಪ್ಲಿಕೇಶನ್‌ಗಳಿಗೆ ಪ್ರಮುಖ ಅಗತ್ಯತೆಯಾಗಿರುತ್ತದೆ. ಕೆಲವು 3D ಅನುಭವಗಳನ್ನು ಪ್ರೋಟೋಟೈಪ್ ಮಾಡುವ ಮೂಲಕ ಚಲನೆಯ ಅಪ್ಲಿಕೇಶನ್‌ಗಳೊಳಗೆ ಅನ್ವೇಷಣೆಯನ್ನು ಮೈಕ್ರೋಸಾಫ್ಟ್ ಪ್ರಾರಂಭಿಸಿತು. ಮೊದಲ ಸವಾಲು ಎನ್ನುವುದು ಸಾಧನದ ಭೌತಿಕ ಓರಿಯಂಟೇಶನ್ ಅನ್ನು ನೇರವಾಗಿ ಅಪ್ಲಿಕೇಶನ್‌ನಲ್ಲಿ ವರ್ಚುವಲ್ 3D ವಾತಾವರಣದಲ್ಲಿ ಮ್ಯಾಪ್ ಮಾಡುವುದಾಗಿತ್ತು. ಸಾಧನದ ಮೇಲು ಮತ್ತು ಕೆಳಭಾಗದ ಚಲನೆಯನ್ನು 3D ವಾತಾವರಣದ ಮೇಲು ಮತ್ತು ಕೆಳ ಚಲನೆಯೊಂದಿಗೆ ಮ್ಯಾಪ್ ಮಾಡಲು ಅಸ್ಸೆಲರೇಟರ್ ಅನ್ನು ಬಳಸಲಾಗುತ್ತಿತ್ತು. ಮುಂದಿನ ಅನುಭವವು ನಮ್ಮ ವರ್ಚುವಲ್ 3D ವಾತಾವರಣ ಅಪ್ಲಿಕೇಶನ್‌ನಲ್ಲಿ "ಎಡ ನೋಟ" ಮತ್ತು " ಬಲ ನೋಟ" ಸಾಮರ್ಥ್ಯವನ್ನು ಒದಗಿಸುವುದಾಗಿತ್ತು. ಈ ಪ್ರಕಾರದ ಚಲನೆಯನ್ನು ಬೆಂಬಲಿಸಲು 6-ಆಕ್ಸಿಸ್ ಕಂಪಾಸ್ ಪರಿಹಾರವನ್ನು (3D ಅಸ್ಸೆಲರೇಟರ್ + 3D ಮ್ಯಾಗ್ನೆಟೋಮೀಟರ್) ಮೈಕ್ರೋಸಾಫ್ಟ್ ತಂಡವು ಬಳಸಿತು.

 

ಆದರೆ ಎಲ್ಲಾ ಮೂರು ಸೆನ್ಸಾರ್‌ಗಳು, ಮ್ಯಾಗ್ನೆಟೋಮೀಟರ್ ಮತ್ತು ಗೈರೋ ಅನ್ನು ಒಟ್ಟಿಗೆ ಬಳಸಿಕೊಂಡು ಅಸ್ಸೆಲರೇಟರ್ ಅನ್ನು ಬಳಸಿಕೊಂಡು ಪ್ರದರ್ಶಿಸಿದ ಹೆಚ್ಚಿನ ಪ್ರಯೋಗವು ತೊಂದರೆಯನ್ನು ಪರಿಹರಿಸಬಹುದು ಮತ್ತು ಪ್ರಕ್ರಿಯೆಯನ್ನು ಸೆನ್ಸಾರ್ ಫ್ಯೂಶನ್ ಎಂದು ಕರೆಯಲಾಗುತ್ತದೆ.

 

ವಿಂಡೋಸ್ ಸೆನ್ಸಾರ್ ಫ್ಯೂಷನ್ ಪರಿಹಾರದೊಂದಿಗೆ ಕಾರ್ಯನಿರ್ವಹಿಸುವ ಸೆನ್ಸಾರ್ ಪ್ಯಾಕೇಜ್‌ಗಳಿಗೆ ಕಾರ್ಯನಿರ್ವಹಣೆಯ ಅಡಿಪಾಯವನ್ನು ಒದಗಿಸುವುದು ಮೊದಲ ಹಂತವಾಗಿತ್ತು. ಡ್ರೈವರ್‌ಗಳನ್ನು ಅಭಿವೃದ್ಧಿಪಡಿಸುವ ಮತ್ತು ಬೆಂಬಲಿಸುವ ವೆಚ್ಚವನ್ನು ತಗ್ಗಿಸುವುದು ಮತ್ತೊಂದು ಸವಾಲಾಗಿತ್ತು. USB ಮೂಲಕ ಮತ್ತು I2C ಯಂತಹ ಕಡಿಮೆ ಪವರ್ ಬಸ್‌ಗಳ ಮೂಲಕ ಸಂಪರ್ಕಿತವಾದ ಎಲ್ಲಾ ವಿಂಡೋಸ್-ಹೊಂದಿಕೆಯಾಗುವ ಸೆನ್ಸಾರ್ ಪ್ಯಾಕೇಜ್‌ಗಳೊಂದಿಗೆ ಕಾರ್ಯನಿರ್ವಹಿಸುವ ಡ್ರೈವರ್ ಅನ್ನು ಮೈಕ್ರೋಸಾಫ್ಟ್ ಹೊರತಂದಿತು. ಈ ಸೆನ್ಸಾರ್ ಕ್ಲಾಸ್ ಡ್ರೈವರ್ ಎನ್ನುವುದು ಸೆನ್ಸಾರ್ ಹಾರ್ಡ್‌ವೇರ್ ಅನ್ನು ಅನ್ವೇಷಿಸಲು ಹಾರ್ಡ್‌ವೇರ್ ಕಂಪನಿಗಳಿಗೆ ಕ್ರಿಯಾತ್ಮಕಗೊಳಿಸಿತು ಮತ್ತು ಜೊತೆಗೆ ವಿಂಡೋಸ್ ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಹೊಂದುವ ಡ್ರೈವರ್‌ಗಳೊಂದಿಗೆ ಸುಲಭವಾಗಿ ಬೆಂಬಲಿಸುವುದನ್ನು ಖಾತ್ರಿಪಡಿಸಿತ್ತು.

ಮೂಲ : ಭಾಷಾಇಂಡಿಯ

ಕೊನೆಯ ಮಾರ್ಪಾಟು : 10/16/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate