ಸಂಪರ್ಕಪಡಿಸಿರುವ ಸಾಧನಗಳೇ ಜನರ ಸುತ್ತಮುತ್ತಲೂ ಇರುತ್ತವೆ. ಇತ್ತೀಚಿನ ಗೃಹೋಪಯೋಗಿ ಉಪಕರಣಗಳೂ ಸಹ ಇಂಟರ್ನೆಟ್ ಮತ್ತು ಹೋಮ್ ನೆಟ್‌ವರ್ಕ್‌ಗೆ ಸಂಪರ್ಕಿತಗೊಳ್ಳಬಹುದು. ಈ "ಸಂಪರ್ಕಿತ ಅಪ್ಲಿಕೇಶನ್‌ಗಳು" ವೆಬ್‌ನಿಂದ ಇತ್ತೀಚಿನ ವಿಷಯವನ್ನು ಬಳಸಿಕೊಳ್ಳುತ್ತವೆ.
ಸೂಕ್ತವಾದ API ಆರಿಸಿಕೊಳ್ಳುವುದು
ಇಂಟರ್ನೆಟ್ ಅಥವಾ ಖಾಸಗಿ ನೆಟ್‌ವರ್ಕ್‌ಗಳ ಮೂಲಕ ಇತರ ಕಂಪ್ಯೂಟರ್‌ಗಳು ಮತ್ತು ಸಾಧನಗಳೊಂದಿಗೆ ಸಂವಹನ ಮಾಡಲು ಬಳಕೆದಾರ ಅಪ್ಲಿಕೇಶನ್ ಬಳಸಬಹುದಾದ ವಿವಿಧ ನೆಟ್‌ವರ್ಕಿಂಗ್ API ಗಳನ್ನು ವಿಂಡೋಸ್ 8 ಒದಗಿಸುತ್ತದೆ. ವೆಬ್ ಸೇವೆಗಳು ಮತ್ತು ವೆಬ್ ಸೈಟ್‌ಗಳೊಂದಿಗೆ ಸಂಪರ್ಕಪಡಿಸುವ ಹಲವಾರು API ಗಳನ್ನು ವಿಂಡೋಸ್ 8 ಹೊಂದಿದೆ. ಈ API ಗಳೊಂದಿಗೆ ಬಳಕೆದಾರ ಅಪ್ಲಿಕೇಶನ್‌ಗಳು REST ಬೆಂಬಲಿಸುವ ವೆಬ್ ಸೇವೆಗಳನ್ನು ಪ್ರವೇಶಿಸಬಹುದು ಅಥವಾ ಬೇಸಿಕ್ HTTP ಪ್ರೋಟೋಕಾಲ್ ಆದೇಶಗಳನ್ನು ಕಳುಹಿಸಬಹುದು. ವೆಬ್ ಪ್ರವೇಶಕ್ಕೆ, ಅಪ್ಲಿಕೇಶನ್ ಅಭಿವೃದ್ಧಿ ಪಡಿಸಲು ಬಳಸುವ ಭಾಷೆಯ ಮೇಲೆ API
ಬಳಕೆದಾರ ಅವಲಂಬಿತವಾಗಿರುತ್ತದೆ:
• XMLHTTPRequest ಮತ್ತು WinJS.xhr—JavaScript ಮತ್ತು HTML ನಲ್ಲಿ ಬರೆದ ಅಪ್ಲಿಕೇಶನ್‌ಗಳು.
• HttpClient—C# ಅಥವಾ Visual Basic .NET ಮತ್ತು XAML ನಲ್ಲಿ ಬರೆದ ಅಪ್ಲಿಕೇಶನ್‌ಗಳು.
• XML HTTP Request 2 (IXHR2)— C++ ಮತ್ತು XAML ನಲ್ಲಿ ಬರೆದ ಅಪ್ಲಿಕೇಶನ್‌ಗಳು.
Windows.Networking.BackgroundTransfer API ಎನ್ನುವುದು ಬಳಕೆದಾರ ಅಪ್ಲಿಕೇಶನ್ ರನ್ ಆಗದೇ ಇದ್ದರೂ ಸಹ ಫೈಲ್‌ಗಳನ್ನು ಡೌನ್‌ಲೋಡ್ ಮಾಡುವ ಮತ್ತು ಅಪ್‌ಲೋಡ್ ಮಾಡುವ ಸಾಮರ್ಥ್ಯವನ್ನು ಒದಗಿಸುತ್ತದೆ. ಮುನ್ನೆಲೆಯಲ್ಲಿ ರನ್ ಆಗುತ್ತಿರುವಾಗ ವರ್ಗಾವಣೆಯನ್ನು ಅಪ್ಲಿಕೇಶನ್ ಪ್ರಾರಂಭಿಸುತ್ತದೆ ಮತ್ತು ಫೋಕಸ್ ಹೊಂದಿರುತ್ತದೆ ಮತ್ತು ನಂತರದಲ್ಲಿ ಇನ್ನುಮುಂದೆ ಅಪ್ಲಿಕೇಶನ್ ರನ್ ಆಗದೇ ಇದ್ದರೂ ಹಿನ್ನೆಲೆಯಲ್ಲಿ ವರ್ಗಾವಣೆಯನ್ನು ವಿಂಡೋಸ್ 8 ಮುಂದುವರಿಸುತ್ತದೆ.
Windows.Web.Syndication API ಎನ್ನುವುದು RSS ಅಥವಾ ಆಟೋಮ್ ಸ್ವರೂಪಗಳಲ್ಲಿ ಫೀಡ್‌ಗಳನ್ನು ಹಿಂಪಡೆಯಬಹುದು. ಜೊತೆಗೆ, Windows.Web.AtomPub API ಎನ್ನುವುದು ವಿವಿಧ ಆಟೋಮ್‌ಪಬ್ ಸ್ವರೂಪಗಳಲ್ಲಿ ಡೇಟಾ ಪ್ರಕಟಿಸಲು ಅವಕಾಶ ನೀಡುತ್ತದೆ.
ಸರಿಯಾದ ನೆಟ್‌ವರ್ಕ್ ಸಾಮರ್ಥ್ಯಗಳನ್ನು ಆಯ್ಕೆಮಾಡಿ
ವಿಂಡೋಸ್ ಸಕ್ರಿಯವಾಗಿ ನೆಟ್‌ವರ್ಕ್ ಮಿತಿಗಳನ್ನು ಅನ್ವೇಷಿಸುತ್ತದೆ ಮತ್ತು ನೆಟ್‌ವರ್ಕ್ ಐಸೋಲೇಶನ್‌ಗಾಗಿ ನೆಟ್‌ವರ್ಕ್ ಪ್ರವೇಶ ನಿಯಂತ್ರಣಗಳನ್ನು ವಿಧಿಸುತ್ತದೆ. ಬಳಕೆದಾರರು ಅವುಗಳನ್ನು ಸರಿಯಾಗಿ ನಿಯೋಜಿಸಿದಾಗ, ಈ ಸಾಮರ್ಥ್ಯಗಳು ದುರುದ್ದೇಶಪೂರಿತ ಆಕ್ರಮಣಗಳಿಂದ ಬಳಕೆದಾರರು ಮತ್ತು ಅಪ್ಲಿಕೇಶನ್‌ಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ.
ನೆಟ್‌ವರ್ಕ್ ಪ್ರವೇಶದ ಪ್ರಾಮುಖ್ಯತೆಯನ್ನು ವಿವರಿಸಲು ನೆಟ್‌ವರ್ಕ್ ಐಸೋಲೇಶನ್ ಸಾಮರ್ಥ್ಯಗಳನ್ನು ಅಪ್ಲಿಕೇಶನ್‌ಗಳು ಘೋಷಣೆ ಮಾಡಬೇಕು.
ನೆಟ್‌ವರ್ಕ್ ಪ್ರವೇಶ ವಿನಂತಿಗಳು ಎರಡು ವರ್ಗಗಳಲ್ಲಿ ಬರುತ್ತವೆ:
1. ಔಟ್‌ಬೌಂಡ್, ಕ್ಲೈಂಟ್-ಪ್ರಾರಂಭಿಸಿದ ವಿನಂತಿಗಳು: ಕ್ಲೈಂಟ್ ಆಗಿ ಬಳಕೆದಾರ ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತದೆ ಮತ್ತು ಸಾಮಾನ್ಯವಾಗಿ ಸರ್ವರ್ ಆಗಿರುವ ರಿಮೋಟ್ ಕಂಪ್ಯೂಟರ್‌ಗೆ ಪ್ರಾರಂಭಿಕ ನೆಟ್‌ವರ್ಕ್ ವಿನಂತಿಯನ್ನು ಕಳುಹಿಸುವ ಮೂಲಕ ನೆಟ್‌ವರ್ಕ್ ಪ್ರವೇಶವನ್ನು ಪ್ರಾರಂಭಿಸುತ್ತದೆ.
2. ಇನ್‌ಬೌಂಡ್, ಅನಪೇಕ್ಷಿತ ವಿನಂತಿಗಳು: ನೆಟ್‌ವರ್ಕ್ ಸರ್ವರ್ ಆಗಿ ಬಳಕೆದಾರ ಅಪ್ಲಿಕೇಶನ್ ಕಾರ್ಯನಿರ್ವಹಿಸುತ್ತದೆ ಮತ್ತು ರಿಮೋಟ್ ಕಂಪ್ಯೂಟರ್‌ನಿಂದ ಇನ್‌ಬೌಂಡ್ ನೆಟ್‌ವರ್ಕ್ ವಿನಂತಿಗಳಿಗೆ ಕೇಳುತ್ತದೆ. ಬಳಕೆದಾರ ಅಪ್ಲಿಕೇಶನ್‌ಗೆ ಪ್ರಾರಂಭಿಕ ವಿನಂತಿಯನ್ನು ಕಳುಹಿಸುವ ಮೂಲಕ ನೆಟ್‌ವರ್ಕ್ ಪ್ರವೇಶವನ್ನು ರಿಮೋಟ್ ಕಂಪ್ಯೂಟರ್ ಪ್ರಾರಂಭಿಸುತ್ತದೆ ಮತ್ತು ಇದು ರಿಮೋಟ್ ಕಂಪ್ಯೂಟರ್‌ಗೆ ಮರಳಿ ಪ್ರತಿಕ್ರಿಯೆಯನ್ನು ಕಳುಹಿಸುತ್ತದೆ.
ನೆಟ್‌ವರ್ಕ್ ಮೂಲಕ ಪ್ರಮಾಣೀಕರಿಸುವಾಗ ಬಳಕೆದಾರ ರುಜುವಾತುಗಳು ಮತ್ತು ಪ್ರಮಾಣಪತ್ರಗಳಿಗೆ ಪ್ರವೇಶವೂ ಸಹ ಕೆಲವು ಅಪ್ಲಿಕೇಶನ್‌ಗಳಿಗೆ ಅಗತ್ಯವಾಗಬಹುದು.
ಮೈಕ್ರೋಸಾಫ್ಟ್ ವಿಶುವಲ್ ಸ್ಟುಡಿಯೋ 2012 ರಲ್ಲಿ ಅಪ್ಲಿಕೇಶನ್ ಮ್ಯಾನಿಫೆಸ್ಟ್ ಡಿಸೈನರ್ ಬಳಸುವುದು
ಮೀಟರ್‌ಗೊಳಿಸಿದ ನೆಟ್‌ವರ್ಕ್‌ಗೆ ಅಪ್ಲಿಕೇಶನ್ ನಡವಳಿಕೆಯನ್ನು ಹೊಂದಿಕೊಳ್ಳುವುದು
ಲಭ್ಯವಿರುವ ನೆಟ್‌ವರ್ಕ್ ಸಂಪನ್ಮೂಲಗಳನ್ನು ಮೇಲ್ವಿಚಾರಣೆ ಮಾಡಲು ಅಪ್ಲಿಕೇಶನ್‌ಗಳಿಗೆ ಅನುಮತಿಸುವ ಮೂಲಕ ಮತ್ತು ಮೀಟರ್‌ಗೊಳಿಸಿದ ನೆಟ್‌ವರ್ಕ್‌ಗಳಲ್ಲಿರುವಾಗ ಆ ಪ್ರಕಾರವಾಗಿ ನಡೆದುಕೊಳ್ಳುವ ಮೂಲಕ ಬಳಕೆದಾರ ಸಮಸ್ಯೆಯನ್ನು ವಿಂಡೋಸ್ 8 ಪರಿಹರಿಸುತ್ತದೆ.
Windows.Networking.Connectivity API ಎನ್ನುವುದು ನೆಟ್‌ವರ್ಕ್ ಸಂಪರ್ಕದ ಪ್ರಕಾರ ಮತ್ತು ವೆಚ್ಚದ ಕುರಿತು ಮಾಹಿತಿಯನ್ನು ಒದಗಿಸುತ್ತದೆ. ಕನೆಕ್ಷನ್‌ಪ್ರೊಫೈಲ್ ಎನ್ನುವುದು ನೆಟ್‌ವರ್ಕ್ ಸಂಪರ್ಕವನ್ನು ಪ್ರತಿನಿಧಿಸುತ್ತದೆ. ಕನೆಕ್ಷನ್‌ಪ್ರೊಫೈಲ್‌ನ ಕನೆಕ್ಷನ್‌ಕಾಸ್ಟ್ ಅನ್ನು ಅದರ ನಡವಳಿಕೆಯನ್ನು ಜಾರಿಗೊಳಿಸಬೇಕೇ ಎಂಬುದನ್ನು ನಿರ್ಧರಿಸಲು ಬಳಕೆದಾರ ಅಪ್ಲಿಯು ಬಳಸುತ್ತದೆ. ಅನಿಯಂತ್ರಿತ, ಸ್ಥಿರ, ಮಾರ್ಪಡಿಸುವುದು ಮತ್ತು ಅಜ್ಞಾತ ದಂತಹ ನೆಟ್‌ವರ್ಕ್ ಸಂಪರ್ಕದ ಪ್ರಕಾರವನ್ನು ನೆಟ್‌ವರ್ಕ್‌ಕಾಸ್ಟ್‌ಟೈಪ್ ಗುಣಲಕ್ಷಣವು ಸೂಚಿಸುತ್ತದೆ.
ಕನೆಕ್ಷನ್‌ಕಾಸ್ಟ್‌ಗಾಗಿ ಹಲವು ಇತರ ಬೂಲಿಯನ್ ಗುಣಲಕ್ಷಣಗಳು ರೋಮಿಂಗ್, ಡೇಟಾ ಮಿತಿಯನ್ನು ತಲುಪುವುದು ಮತ್ತು ಡೇಟಾ ಮಿತಿ ಹೆಚ್ಚಳದ ಕುರಿತು ಹೆಚ್ಚು ಮಾಹಿತಿಯನ್ನು ಒದಗಿಸುತ್ತದೆ.
ಅಪ್ಲಿಕೇಶನ್‌ಗಳು ಬಳಸುತ್ತಿರುವ ನೆಟ್‌ವರ್ಕ್ ಡೇಟಾದ ಪ್ರಮಾಣವನ್ನು ನೋಡಲು ಟಾಸ್ಕ್ ಮ್ಯಾನೇಜರ್ ಅನ್ನೂ ಸಹ ಬಳಕೆದಾರರು ರನ್ ಮಾಡಬಹುದು.
ನೆಟ್‌ವರ್ಕ್ ಸ್ಥಿತಿ ಬದಲಾವಣೆಗಳಿಗೆ ಪ್ರತಿಕ್ರಿಯಿಸುವುದು
ಯಾವುದೇ ಮೊಬೈಲ್ ಸಾಧನದಲ್ಲಿ ನೆಟ್‌ವರ್ಕ್‌ಗಳು ಲಭ್ಯವಿರುತ್ತವೆ. ಬಳಕೆದಾರರು ಮನೆಯಿಂದ ಹೊರಬಂದಾಗ ವೈ-ಫೈ ವ್ಯಾಪ್ತಿ ಕಳೆದುಹೋಗುತ್ತದೆ. ನೆಟ್‌ವರ್ಕ್ ಸ್ಟೇಟಸ್ ಚೇಂಜಡ್ ಈವೆಂಟ್ ಎನ್ನುವುದು ಬದಲಾಗಿರಬಹುದಾದ ಲಭ್ಯವಿರುವ ವೆಚ್ಚ ಅಥವಾ ಸಂಪರ್ಕ ಆಯ್ಕೆಗಳನ್ನು ಸೂಚಿಸುತ್ತದೆ. ಹಾಗೆಯೇ ಇದು ದೋಷ ಅಥವಾ ನೆಟ್‌ವರ್ಕ್ ನಷ್ಟದ ಕಾರಣದ ಕನೆಕ್ಷನ್ ನಷ್ಟವನ್ನೂ ಸಹ ನಿರ್ವಹಣೆ ಮಾಡುತ್ತದೆ.
ಹೊಸ ನೆಟ್‌ವರ್ಕ್ ಲಭ್ಯತೆ
ಸಾಧನವು ಬಹು ನೆಟ್‌ವರ್ಕ್‌ಗಳಿಗೆ ಸಂಪರ್ಕಗೊಂಡಿರುವ ಸಂದರ್ಭಗಳಿರಬಹುದು. ವಿಂಡೋಸ್ 8 ರಲ್ಲಿ ಡೀಫಾಲ್ಟ್ ನೀತಿಯು ಮೀಟರ್‌ಗೊಳಿಸಿದ ನೆಟ್‌ವರ್ಕ್‌ನಲ್ಲಿ ಅನಿಯಂತ್ರಿತ ನೆಟ್‌ವರ್ಕ್‌ಗೆ ಆದ್ಯತೆ ನೀಡುವುದು ಮತ್ತು ನಿಧಾನ ನೆಟ್‌ವರ್ಕ್‌ನಲ್ಲಿ ವೇಗದ ನೆಟ್‌ವರ್ಕ್‌ಗೆ ಆದ್ಯತೆ ನೀಡುವುದಾಗಿದೆ. ಅಪ್ಲಿಕೇಶನ್ ಸ್ಥಾಪಿಸಿದ ಪ್ರಸ್ತುತ ಸಂಪರ್ಕಗಳು ಹೊಸ ನೆಟ್‌ವರ್ಕ್‌ಗೆ ಸ್ವಯಂಚಾಲಿತವಾಗಿ ಬದಲಾಗುವುದಿಲ್ಲ. ಅಪ್ಲಿಕೇಶನ್ ಒಳಗೊಳ್ಳಬೇಕು, ಏಕೆಂದರೆ ಅಪ್ಲಿಕೇಶನ್ ಮಾತ್ರವೇ ಹೊಸ ನೆಟ್‌ವರ್ಕ್‌ಗೆ ಬದಲಾಗಬೇಕೇ ಅಥವಾ ಬೇಡವೇ ಎಂಬುದರ ಅತ್ಯುತ್ತಮ ನಿರ್ಧಾರ ಮಾಡಬಹುದು.
ನೆಟ್‌ವರ್ಕ್ ವೆಚ್ಚದಲ್ಲಿ ಬದಲಾವಣೆ
ನೆಟ್‌ವರ್ಕ್ ವೆಚ್ಚದಲ್ಲಿ ಬದಲಾವಣೆಯು ನೆಟ್‌ವರ್ಕ್ ವೆಚ್ಚ ಪ್ರಕಾರವು ಸ್ಥಿರವಾಗಿರುವಾಗ ಮತ್ತು ಬಳಕೆಯು ಡೇಟಾ ಮಿತಿಗೆ ತಲುಪುತ್ತಿರುವಾಗ ಅಥವಾ ಡೇಟಾ ಮಿತಿಯ ಮೇಲೆ ಹೋಗುವಾಗ ಸಂಭವಿಸುತ್ತದೆ. ನೆಟ್‌ವರ್ಕ್ ವೆಚ್ಚದಲ್ಲಿ ಬದಲಾವಣೆಯು ನೆಟ್‌ವರ್ಕ್ ಕಾಸ್ಟ್ ಟೈಪ್ ಎನ್ನುವುದು ಮಾರ್ಪಡಣೆ ಆದರೆ ಅಥವಾ ರೋಮಿಂಗ್ ಬದಲಾವಣೆಯು ನಿಜವಾದರೆ ಕಾರಣವಾಗುತ್ತದೆ.
ಮೂಲ : ಭಾಷಾಇಂಡಿಯ
ಕೊನೆಯ ಮಾರ್ಪಾಟು : 7/25/2020