ವೆಬ್‌ನಲ್ಲಿ ವೀಡಿಯೋ ಕ್ಯಾಪ್ಶನಿಂಗ್ ಎನ್ನುವುದು ಪ್ರಮುಖವಾಗಿ ಉತ್ತಮವಾದ, ವೃತ್ತಿಪರ-ಗುಣಮಟ್ಟದ ಆನ್‌ಲೈನ್ ವೀಡಿಯೋ ವಿತರಣೆಯನ್ನು ಮತ್ತು ಪ್ಲೇಬ್ಯಾಕ್ ಅನ್ನು ಸಕ್ರಿಯಗೊಳಿಸುವ ಮತ್ತೊಂದು ಪ್ರಮುಖ ಭಾಗವಾಗಿದೆ. ಟೆಲಿವಿಶನ್ ಪ್ರಸಾರದ ಅನುಭವವನ್ನು ಸಾಧಿಸಲು, ವರ್ಡ್ ಹೈಲೈಟಿಂಗ್, ಕ್ಯಾಪ್ಶನ್ ಮತ್ತು ಮಾತನಾಡುವ ಪದಗಳ ನಡುವೆ ಗಾಢವಾದ ಸಿಂಕ್ರೊನೈಸೇಶನ್, ಅನುಕೂಲಕರ ಕ್ಯಾಪ್ಶನ್ ಸ್ಥಿತಿಗೊಳಿಸುವಿಕೆ, ಕ್ಯಾಪ್ಶನ್ ಶೈಲಿ ಮತ್ತು ಕ್ಯಾಪ್ಶನ್ ಅನಿಮೇಶನ್‌ಗಳನ್ನು ಒಳಗೊಂಡು ಕ್ಯಾಪ್ಶನಿಂಗ್ ಸಾಮರ್ಥ್ಯಗಳನ್ನು ವೆಬ್ ಒದಗಿಸಬೇಕಾಗುತ್ತದೆ- ಇವುಗಳೆಲ್ಲವೂ W3C ಟೈಮ್ಡ್ ಟೆಕ್ಸ್ಟ್ ವರ್ಕಿಂಗ್ ಗ್ರೂಪ್ (TTWG) ನಿಂದ ಇತ್ತೀಚಿಗೆ ಪ್ರಕಟಿಸಿದ ಪ್ರೊಫೈಲ್ ಮಾನದಂಡದ ಭಾಗವಾಗಿರುತ್ತದೆ. ಮಾಹಿತಿಯನ್ನು ವಿನಿಮಯ ಮಾಡುವುದು ಮತ್ತು ಸ್ವೀಕರಿಸುವುದು ಮತ್ತು ಸ್ಟ್ರೀಮ್‌ಲೈನ್ ಕ್ಲೋಸ್ಡ್ ಕ್ಯಾಪ್ಶನ್ ಪ್ರಮಾಣೀಕರಣ ಮತ್ತು ವಿತರಣೆಯನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಮಾನದಂಡಗಳನ್ನು ಅಭಿವೃದ್ಧಿಪಡಿಸಲು ವಿಷಯ ಮಾಲೀಕರು, ವೀಡಿಯೋ ವಿತರಣೆಗಾರರು ಮತ್ತು ಸಾಧನ ಒದಗಿಸುವವರೊಂದಿಗೆ ಮೈಕ್ರೋಸಾಫ್ಟ್ ಸೇರಿಕೊಂಡಿದೆ.
ಕ್ಯಾಪ್ಶನಿಂಗ್
ಕ್ಯಾಪ್ಶನಿಂಗ್ ಎನ್ನುವುದು ವೃತ್ತಿಪರ-ಗುಣಮಟ್ಟ ವೀಡಿಯೋ ಅನುಭವದ ಅಂತರ್ಗತ ಭಾಗವಾಗಿದೆ ಮತ್ತು ಶ್ರವಣ ವೈಕಲ್ಯತೆಯನ್ನು ಹೊಂದಿರುವವರಿಗೆ ವೀಡಿಯೋ ವಿಷಯಕ್ಕೆ ಪೂರ್ಣ ಅಸೆಸ್ ಅನ್ನು ನೀಡಲು ಸಕ್ರಿಯಗೊಳಿಸುವುದಕ್ಕಿಂತ ಹೆಚ್ಚು ಪರಿಣಾಮವನ್ನು ಇದು ಹೊಂದಿದೆ. ಕ್ಯಾಪ್ಶನ್‌ಗಳನ್ನು ದೊಡ್ಡ ಧ್ವನಿಯ ವಾತಾವರಣಗಳಲ್ಲಿ ಆನ್ ಮಾಡಲಾಗುತ್ತದೆ. ಕ್ಯಾಪ್ಶನಿಂಗ್ ಅನ್ನು ವಿದೇಶಿ ಭಾಷೆಯ ಚಲನಚಿತ್ರಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಲು ಬಳಸಲಾಗುತ್ತದೆ.
ಕ್ಲೋಸ್ಟ್ ಕ್ಯಾಪ್ಶನ್ಸ್ (SDP-US) ಪ್ರೊಫೈಲ್ ಮಾನದಂಡಗಳಿಗಾಗಿ TTML ಸಿಂಪಲ್ ಡೆಲಿವರಿ ಪ್ರೊಫೈಲ್ ಅನ್ನು ವಿತರಣೆ ಮಾಡಲು W3C ಟೈಮ್ಡ್ ಟೆಕ್ಸ್ಟ್ ವರ್ಕಿಂಗ್ ಗ್ರೂಪ್ (TTWG) ನಲ್ಲಿ ಉದ್ಯಮದ ಶೇರುದಾರರ ಪಟ್ಟಿಗೆ ಮೈಕ್ರೋಸಾಫ್ಟ್ ಸೇರಿಕೊಂಡಿದೆ. ಈ ಹೊಸ ಪ್ರೊಫೈಲ್ ಅನ್ನು DECE, SMPTE, EBU ನಿಂದ ಮಾಧ್ಯಮ ಉದ್ಯಮದ ತಜ್ಞರು ಮತ್ತು ಆಡೋಬ್, ಮೂವಿಲ್ಯಾಬ್ಸ್, NBC, ಯೂನಿವರ್ಸಲ್, ಕಾಕ್ಸ್, ಆಪಲ್, ನೆಟ್‌ಫ್ಲಿಕ್ಸ್ ಮತ್ತು ಮೈಕ್ರೋಸಾಫ್ಟ್ ಒಳಗೊಂಡು ಉದ್ಯಮ ನಿರ್ವಹಣೆಗಾರರಿಂದ ಸಲಹೆಗಳನ್ನು ಆಧರಿಸಿ ನಿರ್ಮಿಸಲಾಗಿದೆ.
ಕ್ಯಾಪ್ಶನ್ ಇಂಟರ್‌ಚೇಂಜ್ ಮಾನದಂಡವಾದ ಟೈಮ್ಡ್ ಟೆಕ್ಸ್ಟ್ ಮಾರ್ಕಪ್ ಲಾಂಗ್ವೇಜ್ (TTML) ನಲ್ಲಿ SDP-US ಆಧರಿಸಿದ್ದು, ಇದನ್ನು ವರ್ಷಗಳಿಂದ ವೃತ್ತಿಪರ ವೀಡಿಯೋ ಉದ್ಯಮದಲ್ಲಿ ಬಳಸಲಾಗುತ್ತಿದೆ ಮತ್ತು ಇದು ವಿನ್ಯಾಸ, ಶೈಲಿ, ಸಮಯ ಮತ್ತು ವಿಷಯ ಅಗತ್ಯತೆಗಳಂತಹ ಪ್ರಮುಖ ಕ್ಯಾಪ್ಶನ್ ಫಾರ್ಮ್ಯಾಟ್ ಫೀಚರ್‌ಗಳನ್ನು ವಿವರಿಸುತ್ತದೆ ಮತ್ತು ವಿಷಯದ ಲೇಖಕರು ಮತ್ತು ಸಾಧನದ ಒದಗಿಸುವವರಿಗೆ ಉದ್ಯಮದ ಅಗತ್ಯತೆಗಳನ್ನು ಪೂರೈಸುವ ಇಂಟೆರೋಪೆರೇಬಲ್ ಕ್ಯಾಪ್ಶನ್ ಫೈಲ್‌ಗಳನ್ನು ಸುಲಭವಾಗಿ ರಚಿಸಲು ಸಕ್ರಿಯಗೊಳಿಸುತ್ತದೆ. ಸಾಧನಗಳಲ್ಲಿ ಅಥವಾ ಮೈಕ್ರೋಸಾಫ್ಟ್ ಮೀಡಿಯಾ ಪ್ಲೇಯರ್ ಫ್ರೇಮ್‌ವರ್ಕ್ ಬಳಸಿಕೊಂಡು ನಿರ್ಮಿಸಿದ ಅಪ್ಲಿಕೇಶನ್‌ಗಳ ಮುಖಾಂತರ ಬ್ರೌಸರ್‌ನಲ್ಲಿ ವ್ಯಾಪಕ ವಿಧದ ಸಾಫ್ಟ್‌ವೇರ್ ಮತ್ತು ಸಾಧನಗಳಾದ್ಯಂತ ವೆಬ್‌ಗೆ ಮಾಧ್ಯಮ ವಿಷಯವನ್ನು ವಿತರಣೆ ಮಾಡಲು ಕ್ಲೋಸ್ಟ್ ಕ್ಯಾಪ್ಶನ್‌ಗಳ ರಚನೆಯನ್ನು ಸರಾಗಗೊಳಿಸಲು SDS-US ಸಹಾಯ ಮಾಡುತ್ತದೆ.
TTML ಮತ್ತು ವೆಬ್ VTT ಫೈಲ್ ಫಾರ್ಮ್ಯಾಟ್‌ಗಳೊಂದಿಗೆ <ಟ್ರ್ಯಾಕ್> ಎಲಿಮೆಂಟ್ ಮುಖಾಂತರ HTML5- ಆಧಾರಿತ ವೀಡಿಯೋ ಕ್ಯಾಪ್ಶನಿಂಗ್‌ಗೆ ಮುಂಚಿನ ಬೆಂಬಲವನ್ನು ಸೇರಿಸಿಕೊಂಡ ಮೊದಲ ಬ್ರೌಸರ್‌ಗಳಲ್ಲಿ ಇಂಟರ್ನೆಟ್ ಎಕ್ಸ್ ಪ್ಲೋರರ್ ಒಂದಾಗಿದೆ. ಇಂಟರ್ನೆಟ್ ಸಂಪರ್ಕಿತ ಸಾಧನಗಳಲ್ಲಿ ಬ್ರೌಸರ್‌ಗಳು ಮತ್ತು ಇತರ ಸಾಫ್ಟ್‌ವೇರ್‌ಗೆ ಹೊರಹೊಮ್ಮುತ್ತಿರುವ ಅಗತ್ಯತೆಗಳನ್ನು ಪೂರೈಸುವ ಮಾಹಿತಿಯನ್ನು ವಿನಿಮಯ ಮಾಡುವ ಮತ್ತು ಬಳಸುವ, ಸರಳವಾದ ಮತ್ತು ಪೂರ್ಣ-ಫೀಚರ್‌ನ ಕ್ಯಾಪ್ಶನ್ ಪರಿಹಾರವು ವಿಷಯ ಲೇಖಕರಿಗೆ ಅಗತ್ಯವಿರುತ್ತದೆ. HTML5 <ಟ್ರ್ಯಾಕ್> ಎಲಿಮೆಂಟ್‌ಗೆ ಸರಾಗಗೊಳಿಸಿದ ಕ್ಯಾಪ್ಶನಿಂಗ್ ಸಾಮರ್ಥ್ಯಗಳ ಸೆಟ್ ಅನ್ನು ವಿವರಿಸುವ ಮೂಲಕ ಈ ಅಗತ್ಯತೆಯನ್ನು SDP-US ಪೂರೈಸುತ್ತದೆ. ವೀಡಿಯೋ ಸಂಭಾಷಣೆ ಅಥವಾ ಕ್ರಿಯೆಗಳ ಶೈಲಿಯ ಪಠ್ಯ ಪ್ರಾತಿನಿಧ್ಯತೆಗಳನ್ನು ಒಳಗೊಂಡಿರುವ ಕ್ಯಾಪ್ಶನ್ ಫೈಲ್ ಅನ್ನು ಒದಗಿಸುವ ಮೂಲಕ ಮತ್ತು ಫೈಲ್‌ನ ವಿಷಯಗಳನ್ನು ನೀಡಲು ಮತ್ತು ಪ್ರದರ್ಶಿಸಲು <ಟ್ರ್ಯಾಕ್> ಎಲಿಮೆಂಟ್ ಅನ್ನು ಬಳಸುವ ಮೂಲಕ HTML5 ವೀಡಿಯೋಗೆ ಕ್ಯಾಪ್ಶನಿಂಗ್ ಅನ್ನು ಸೇರಿಸಲು ಡೆವಲಪರ್‌ಗಳಿಗೆ ಸಾಧ್ಯವಾಗುತ್ತದೆ
SDP-US ನೊಂದಿಗೆ ಡೀಫಾಲ್ಟ್ ಖಾಲಿ ಪಠ್ಯ ಶೈಲಿ ಮತ್ತು ಸ್ಥಿತಿಯೊಂದಿಗೆ ಕ್ಯಾಪ್ಶನ್‌ಗಳನ್ನು ಇಂಟರ್ನೆಟ್ ಎಕ್ಸ್‌ಪ್ಲೋರರ್ ನೀಡುತ್ತದೆ, ಕ್ಯಾಪ್ಶನ್ ಲೇಖಕರು ಕ್ಯಾಪ್ಶನ್ ಸ್ಥಿತಿಗೊಳಿಸುವಿಕೆ ಮತ್ತು ಶೈಲಿ ಮಾಡುವಿಕೆಯಲ್ಲಿ ಮತ್ತಷ್ಟು ಅನುಕೂಲತೆಯನ್ನು ಹೊಂದಿರುತ್ತಾರೆ.
ವೃತ್ತಿಪರ-ಗುಣಮಟ್ಟದ ಆನ್‌ಲೈನ್ ವೀಡಿಯೋ ಎನ್ನುವುದು ಮುಂಬರುವ ನೈಜತೆಯಾಗಿದ್ದು, ಇದು ಹೊರಹೊಮ್ಮುತ್ತಿರುವ ವೆಬ್ ಮಾನದಂಡಗಳು ಮತ್ತು ಶಕ್ತಿಶಾಲಿ ವಿಷಯ ವಿತರಣೆ ಮೂಲಭೂತ ಸೌಕರ್ಯಗಳಿಂದ ಕ್ರಿಯಾತ್ಮಕವಾಗಿರುತ್ತದೆ. ಕ್ಯಾಪ್ಶನಿಂಗ್ ಎನ್ನುವದು ವೃತ್ತಿಪರ- ಗುಣಮಟ್ಟದ ವೀಡಿಯೋವನ್ನು ಸಕ್ರಿಯಗೊಳಿಸಲು ಪ್ರಮುಖ ಮೂಲಭೂತ ಅಂಶವಾಗಿದೆ ಮತ್ತು ಶ್ರೀಮಂತ ಕ್ಯಾಪ್ಶನಿಂಗ್ ಅನುಭವಗಳನ್ನು ಸಕ್ರಿಯಗೊಳಿಸಲು ಉದ್ಯಮದ ಪಾಲುದಾರರೊಂದಿಗೆ ಮೈಕ್ರೋಸಾಫ್ಟ್ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ
ಮೂಲ : ಭಾಷಾಇಂಡಿಯ
ಕೊನೆಯ ಮಾರ್ಪಾಟು : 6/9/2020