ವಿಶ್ವದಲ್ಲಿ ಹೆಚ್ಚು ವ್ಯಾಪಕವಾಗಿ ಅಳವಡಿಸಿಕೊಂಡಿರುವ ಡೇಟಾ ಪ್ಲಾಟ್ಫಾರ್ಮ್ ಆದ ಮೈಕ್ರೋಸಾಫ್ಟ್ SQL ಸರ್ವರ್ 2012 ನ ಇತ್ತೀಚಿನ ಆವೃತ್ತಿಯನ್ನು ತಯಾರಿಕೆಗಾಗಿ ಬಿಡುಗಡೆ ಮಾಡಲಾಗಿದೆ ಎಂದು ಮೈಕ್ರೋಸಾಫ್ಟ್ ಘೋಷಿಸಿದೆ. SQL ಸರ್ವರ್ 2012 ಎನ್ನುವುದು ತ್ವರಿತವಾಗಿ ಡೇಟಾವನ್ನು ಕ್ರಿಯಾತ್ಮಕಗೊಳಿಸುವ ವ್ಯವಹಾರ ಅಂತರ್ನೋಟಗಳಿಗೆ ಬದಲಾಯಿಸುವ ಮೂಲಕ ಹೆಚ್ಚುತ್ತಿರುವ ಡೇಟಾ ಪ್ರಮಾಣದ ಸವಾಲುಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಯಾವುದೇ ಗಾತ್ರವನ್ನು ಒಳಗೊಂಡು ಯಾವುದೇ ಡೇಟಾವನ್ನು ನಿರ್ವಹಣೆ ಮಾಡುವಂತೆ ಗ್ರಾಹಕರಿಗೆ ಸಹಾಯ ಮಾಡಲು ಮೈಕ್ರೋಸಾಫ್ಟ್ ಬದ್ಧತೆಯನ್ನು ವಿಸ್ತರಿಸುತ್ತಾ, ಸ್ಥಳೀಯವಾಗಿ ಮತ್ತು ಕ್ಲೌಡ್ನಲ್ಲಿ ಕಂಪನಿಯು ಇಂದು ವಿಂಡೋಸ್ ಅಜೂರ್ಗಾಗಿ ಅಪಾಚೆ ಹ್ಯಾಡ್ಲೂಪ್ ಆಧಾರಿತ ಸೇವೆಯನ್ನು ಬಿಡುಗಡೆ ಮಾಡುವ ಯೋಜನೆಗಳ ಬಗ್ಗೆ ಹೆಚ್ಚುವರಿ ವಿವರಗಳನ್ನೂ ಸಹ ಘೋಷಿಸಿದೆ.
“ಹಿಂದೆಂದಿಗಿಂತಲೂ ವೇಗವಾಗಿ ಡೇಟಾವನ್ನು ರಚಿಸಲಾಗುತ್ತಿದೆ ಮತ್ತು ಎಲ್ಲಾ ಡೇಟಾವನ್ನು ಪ್ರಕ್ರಿಯೆಗೊಳಿಸಲು ಮತ್ತು ವಿಶ್ಲೇಷಿಸಲು ಮಾರ್ಗವೊಂದು ಸಂಸ್ಥೆಗೆ ಅಗತ್ಯವಿದೆ” ಎನ್ನುತ್ತಾರೆ ಮೈಕ್ರೋಸಾಫ್ಟ್ ಕಾರ್ಪೊರೇಟ್ ಉಪಾಧ್ಯಕ್ಷರಾದ ಟೆಡ್ ಕುಮ್ಮೆರ್ಟ್ ಅವರು. ಹಾಗೆಯೇ ಅವರು ಹೇಳುತ್ತಾ “ಡೇಟಾದ ಗಾತ್ರವು ಯಾವುದೇ ಇರಲಿ, SQL ಸರ್ವರ್ 2012 ಎನ್ನುವುದು ಡೇಟಾವನ್ನು ನಿರ್ವಹಣೆ ಮಾಡಲು, ಕಾರ್ಯನಿರ್ವಹಿಸಬಹುದಾದ ಅಂತರ್ನೋಟಗಳನ್ನು ರಚಿಸಲು ಮತ್ತು ವ್ಯವಹಾರವನ್ನು ಮುನ್ನೆಡೆಸಲು ವೇದಿಕೆಯನ್ನು ಮತ್ತು ಚಿರಪರಿಚಿತ ಸಾಧನಗಳನ್ನು ನೀಡುತ್ತದೆ”.
ಸಾಧಿಸಿ ತೋರಿಸಿದ ಸಾಮರ್ಥ್ಯ
SQL ಸರ್ವರ್ 2012 ಅನ್ನು ಈಗಾಗಲೇ ವೋಲ್ವೋ ಕಾರ್ ಕಾರ್ಪೋರೇಶನ್, ರೆವಲಾನ್, ಹೆಚ್ಎಸ್ಎನ್, ಸನಾಫಿ ಪ್ಯಾಸ್ಚರ್, ಕ್ಲೌಟ್ ಮತ್ತು ಎಲ್ಜಿ ಕೆಮಿಕಲ್ನಂತಹ ಜಾಗತಿಕ ಮಟ್ಟದ ಪ್ರಮುಖ ಉದ್ಯಮಗಳು ಉತ್ಪಾದನೆಯಲ್ಲಿ ಅಳವಡಿಸಿಕೊಂಡಿವೆ. SQL ಸರ್ವರ್ 2012 ಅನ್ನು ಆಯ್ಕೆಮಾಡಿಕೊಳ್ಳುವ ಗ್ರಾಹಕರು ಶ್ರೀಮಂತ ಹಾರ್ಡ್ವೇರ್ ಮತ್ತು ಸಾಫ್ಟ್ ವೇರ್ ಪಾರ್ಟ್ನರ್ ಎಕೋಸಿಸ್ಟಮ್ನ ಪ್ರಯೋಜನಗಳನ್ನು ಅನುಭವಿಸಬಹುದು ಮತ್ತು ಇದು ಹೆಚ್ಚು ಅನನ್ಯವಾದ ಮತ್ತು ಬೇಡಿಕೆಯ ಡೇಟಾ ನಿರ್ವಹಣೆ ಅಗತ್ಯತೆಗಳಿಗಾಗಿ ಪರಿಹಾರಗಳನ್ನು ನಿರ್ಮಿಸಬಹುದು.
“ನಮ್ಮ ವ್ಯವಹಾರವು ಗ್ರಾಹಕರಿಗೆ ವೇಗವಾದ ಮತ್ತು ವಿವರಪೂರ್ಣವಾದ ಅಂತರ್ನೋಟಗಳನ್ನು ಸಾಮಾಜಿಕ-ನೆಟ್ವರ್ಕ್ ಡೇಟಾದ ನೂರಾರು ಟೆರಾಬೈಟ್ಗಳಲ್ಲಿ ನೀಡುವುದಾಗಿರುತ್ತದೆ” ಎನ್ನುತ್ತಾರೆ ಪ್ರಮುಖ ಇನ್ಫ್ಲೂಯೆನ್ಸ್ ಪ್ರೊವೈಡರ್ ಆದ ಕ್ಲೌಟ್ನ ಇಂಜಿನಿಯರಿಂಗ್ ವಿಭಾಗದ ಉಪಾಧ್ಯಕ್ಷರಾದ ಡೇವಿಡ್ ಮೇರಿಯಾನಿ. “SQL ಸರ್ವರ್ 2012 ಮತ್ತು ಏಕೀಕೃತ ವ್ಯವಹಾರ ಸಾಧನಗಳೊಂದಿಗೆ, ನಾವು ಬೃಹತ್ ಪ್ರಮಾಣದ ಡೇಟಾ ಕ್ವೆರಿಗಳನ್ನು ನೈಜ ಸಮಯದಲ್ಲಿ ಪ್ರಕ್ರಿಯೆಗೊಳಿಸಲು ಸಾಧ್ಯವಾಗಿದೆ. ಮೈಕ್ರೋಸಾಫ್ಟ್ ನ ಡೇಟಾ ಪ್ಲಾಟ್ಫಾರ್ಮ್ ಎನ್ನುವುದು ಅಭಿವೃದ್ಧಿಗೊಳ್ಳುವುದನ್ನು ಮುಂದುವರಿಸಿದೆ ಮತ್ತು ಬದಲಾಗುತ್ತಿರುವ ಡೇಟಾ ಪ್ರಪಂಚದಲ್ಲಿ ಮುಂದುವರಿಯಲು ಸಹಾಯ ಮಾಡುತ್ತಿದೆ” ಎಂದೂ ಡೇವಿಡ್ ಹೇಳುತ್ತಾರೆ.
ಬೃಹತ್ ಡೇಟಾವನ್ನು ನಿರ್ವಹಣೆ ಮಾಡುವುದು
ಐಟಿ ಸಂಶೋಧನೆ ಕಂಪನಿಯಾದ ಗಾರ್ಟ್ನರ್ ಅಂದಾಜಿಸುವ ಪ್ರಕಾರ ಜಾಗತಿಕ ಡೇಟಾವು ಪ್ರತಿ ವರ್ಷಕ್ಕೆ ಶೇಕಡಾ 59 ರಷ್ಟು ಹೆಚ್ಚಾಗುತ್ತಿದ್ದು, ಇದರಲ್ಲಿ 70 ರಿಂದ 85 ಶೇಕಡಾವು ಸಂರಚಿತವಲ್ಲದ ರೂಪದಲ್ಲಿದೆ. * ಹೆಚ್ಚಿನದಾಗಿ SQL ಸರ್ವರ್ ಅನ್ನು ಮೈಕ್ರೋಸಾಫ್ಟ್ ಎಕ್ಸೆಲ್, ಎಕ್ಸೆಲ್ 2010 ಗಾಗಿ ಪವರ್ಪಿವೊಟ್ ಮತ್ತು ಪವರ್ ವ್ಯೂನಂತಹ ಇಂಟೆಲಿಜೆನ್ಸ್ ಸಾಧನಗಳನ್ನು ಸಂಪರ್ಕಪಡಿಸುವ ತನ್ನ ಬದ್ಧತೆಯಾಗಿ, 2012 ರ ಮೊದಲ ಭಾಗದಲ್ಲಿ ವಿಂಡೋಸ್ ಅಜೂರ್ಗಾಗಿ ಅಪಾಚೆ ಹ್ಯಾಡೂಪ್ ಆಧಾರಿತ ಸೇವೆಯೊಂದರ ಹೆಚ್ಚುವರಿ ಸೀಮಿತ ಮುನ್ನೋಟವನ್ನು ಬಿಡುಗಡೆ ಮಾಡುವ ಯೋಜನೆಯನ್ನು ಮೈಕ್ರೋಸಾಫ್ಟ್ ಘೋಷಿಸಿತು. ಮೊದಲ ಸೀಮಿತ ಮುನ್ನೋಟವನ್ನು ಡಿಸೆಂಬರ್ನಲ್ಲಿ ಬಿಡುಗಡೆ ಮಾಡಿದ ಕಾರಣದಿಂದ, ವೆಬ್ಟ್ರೆಂಡ್ಸ್ ಮತ್ತು ಡುಂಡೀ ವಿಶ್ವವಿದ್ಯಾನಿಲಯದಂತಹ ಗ್ರಾಹಕರು ಸರಳವಾದ, ಕಾರ್ಯನಿರ್ವಹಣೆಯ ಅಂತರ್ನೋಟಗಳನ್ನು ಕ್ಲೌಡ್ನಲ್ಲಿ ಹೋಸ್ಟ್ ಮಾಡಿದ ಸಂಕೀರ್ಣವಾದ ಗುಂಪುಗಳಿಂದ ಪಡೆಯಲು ಹ್ಯಾಡೂಪ್ ಆಧಾರಿತ ಸೇವೆಯನ್ನು ಬಳಸುತ್ತಿದ್ದಾರೆ. ಇತ್ತೀಚಿನ ಮುನ್ನೋಟಕ್ಕೆ ಸೈನ್ ಅಪ್ ಮಾಡಲು ಆಸಕ್ತಿಯಿರುವ ಗ್ರಾಹಕರು ಗೆ ಭೇಟಿ ನೀಡಬಹುದು.
ಹೊಸ ಹಂತಗಳು
ಗ್ರಾಹಕರು ತಮ್ಮ ಎಂಟರ್ಪ್ರೈಸ್ ಮಟ್ಟದ ಕಾರ್ಯದೊತ್ತಡವನ್ನು ಅಲ್ಪ ವೆಚ್ಚದಲ್ಲಿ ನಿರ್ವಹಣೆ ಮಾಡಲು, ಏಪ್ರಿಲ್ 1 ಕ್ಕೆ ನಿಗದಿಯಾಗಿರುವಂತೆ SQL ಸರ್ವರ್ 2012 ನ ಸಾಮಾನ್ಯ ಲಭ್ಯತೆಯೊಂದಿಗೆ ಸರಿಹೊಂದುವಂತೆ ಹೊಸ ಡೇಟಾ ವೇರ್ಹೌಸಿಂಗ್ ಪರಿಹಾರಗಳನ್ನು ಬಿಡುಗಡೆ ಮಾಡಲಿದೆ. ಇದು ಪ್ರಮುಖವಾದ ಸಾಫ್ಟ್ ವೇರ್ ಅಪ್ಡೇಟ್ ಮತ್ತು ಮೈಕ್ರೋಸಾಫ್ಟ್ ಪ್ಯಾರಲಲ್ ಡೇಟಾ ವೇರ್ಹೌಸ್ ಅಪ್ಲೈಯನ್ಸಸ್ಗಳಿಗಾಗಿ ಹೊಸ ಅಂಶಗಳು ಜೊತೆಗೆ SQL ಸರ್ವರ್ 2012 ಗಾಗಿ SQL ಸರ್ವರ್ ಫಾಸ್ಟ್ ಟ್ರಾಕ್ ಡೇಟಾ ವೇರ್ಹೌಸ್ ರೆಫರೆನ್ಸ್ ಆರ್ಕಿಟೆಕ್ಚರ್ಗಳ ಲಭ್ಯತೆಯನ್ನು ಒಳಗೊಂಡಿರುತ್ತದೆ.
ಜೊತೆಗೆ, SQL ಸರ್ವರ್ 2012 ಗೆ ಅಪ್ಗ್ರೇಡ್ ಮಾಡುವ ಸಂಭಾವ್ಯ ಪ್ರಯೋಜನಗಳ ಬಗ್ಗೆ ಹೊಸ ಮೈಕ್ರೋಸಾಫ್ಟ್ ಪ್ರಾರಂಭಿಸಿರುವ ಫಾರೆಸ್ಟರ್ ಕನ್ಸಲ್ಟಿಂಗ್ ಟೋಟಲ್ ಎಕನಾಮಿಕ್ ಇಂಪಾಕ್ಟ್ ಅಧ್ಯಯನದಿಂದ ಫಲಿತಾಂಶಗಲನ್ನು ಬಿಡುಗಡೆ ಮಾಡುತ್ತಿದೆ. ಅಧ್ಯಯನವು 12 ತಿಂಗಳ ಮರುಪಾವತಿ ಅವಧಿಯೊಂದಿಗೆ ಶೇಕಡಾ 189 ರವರೆಗೆ ಹೂಡಿಕೆಯ ಮೇಲಿನ ಸಂಭಾವ್ಯ ರಿಟರ್ನ್ ಅನ್ನು ವರದಿ ಮಾಡುತ್ತದೆ. ಹಾಗೆಯೇ ಪಾಲುದಾರರು ಮತ್ತು ಮೈಕ್ರೋಸಾಫ್ಟ್ ನೇತೃತ್ವದ ಪರೀಕ್ಷಣೆಯಲ್ಲಿ ಹೊಸ ದಾಖಲೆಯ ಮಾನದಂಡದ ಸಾಧನೆಯನ್ನು SQL ಸರ್ವರ್ 2012 ಸಾಧಿಸಿ ತೋರಿಸಿದೆ ಮತ್ತು ಇದು ಉದ್ಯಮದಲ್ಲಿ SQL ಸರ್ವರ್ನ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ ಎಂದು ಇಂದು ಮೈಕ್ರೋಸಾಫ್ಟ್ ಮತ್ತು ಪಾಲುದಾರರು ಘೋಷಿಸಿದ್ದಾರೆ.
ಮೂಲ : ಭಾಷಾಇಂಡಿಯ
ಕೊನೆಯ ಮಾರ್ಪಾಟು : 1/28/2020