ಕೇಂದ್ರ ಸರ್ಕಾರದಿಂದ ಪ್ರಾಯೋಜಿತ ಯೋಜನೆಯಾದ “ಶಾಲೆಗಳಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ಡಿಸೆಂಬರ್ 2004 ರಂದು ಚಾಲನೆಯಾಗಿರುತ್ತದೆ. ಮಾಧ್ಯಮಿಕ ಹಂತದ ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಕೌಶಲ್ಯಗಳನ್ನು ಪಡೆಯುವ ಅವಕಾಶಗಳನ್ನು ನೀಡುವುದು ಮತ್ತು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ನೆರವಿನಿಂದ ಕಲಿಕೆಯ ಪ್ರಕ್ರಿಯೆಯನ್ನು ಸಾದರಪಡಿಸುವುದಕ್ಕಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯು ವಿವಿಧ ಸಾಮಾಜಿಕ, ಆರ್ಥಿಕ ಮತ್ತು ಭೌಗೋಳಿಕ ತಡೆಗಳಿಂದಾದ ವಿದ್ಯಾರ್ಥಿಗಳ ನಡುವಿನ ವ್ಯತ್ಯಾಸವನ್ನು ಹೋಗಲಾಡಿಸುವಲ್ಲಿ ಇದು ಪ್ರಮುಖ ವೇಗವರ್ಧಕವಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸುಸ್ಥಿರತೆ ಆಧಾರದ ಮೇರೆಗೆ ಗಣಕಯಂತ್ರ ಪ್ರಯೋಗಾಲಯ (ಕಂಪ್ಯೂಟರ್ ಲ್ಯಾಬ್) ಸ್ಥಾಪಿಸಲು ಈ ಯೋಜನೆ ನೆರವು ನೀಡುತ್ತದೆ. ಕೇಂದ್ರೀಯ ವಿದ್ಯಾಲಯಗಳಲ್ಲಿ ಮತ್ತು ನವೋದಯ ವಿದ್ಯಾಲಯಗಳಲ್ಲಿ ತಂತ್ರಜ್ಞಾನದ ಪ್ರಾತ್ಯಕ್ಷಿಕೆಯಾಗಿ ಕಾರ್ಯನಿರ್ವಹಿಸಲು ಸ್ಮಾರ್ಟ್(SMART)ಶಾಲೆಗಳ ಸ್ಥಾಪಿಸುವ ಗುರಿ ಇರಿಸಿಕೊಂಡಿದೆ ಮತ್ತು ಇದರಿಂದ ನೆರೆಹೊರೆಯ ಶಾಲೆಗಳ ವಿದ್ಯಾರ್ಥಿಗಳಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು ಪ್ರಚುರಪಡಿಸುವ ಉದ್ದೇಶವೂ ಇದರದ್ದಾಗಿದೆ.
ಈ ಯೋಜನೆಯು ಪ್ರಸ್ತುತ ಸರ್ಕಾರಿ ಮತ್ತು ಸರ್ಕಾರದ ನೆರವು ಪಡೆಯುತ್ತಿರುವ ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಅನುಷ್ಠಾನವಾಗುತ್ತಿದೆ. ಗಣಕಯಂತ್ರ, ಇತರ ಸಾಮಗ್ರಿಗಳ ಮತ್ತು ಶೈಕ್ಷಣಿಕ ಸಾಪ್ಟ್ ವೇರ್ ಖರೀದಿ, ಶಿಕ್ಷಕರಿಗೆ ತರಬೇತಿ ಮತ್ತು ಅಂತರ್ಜಾಲದ ಜೋಡಣೆ, ಇತ್ಯಾದಿಗಳಿಗಾಗಿ ಈ ಯೋಜನೆಯಿಂದ ನೆರವು ನೀಡಲಾಗುತ್ತಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಕಾರ್ಯದರ್ಶಿಗಳು ಮುಖ್ಯಸ್ಥರಾಗಿರುವ ಯೋಜನೆಯ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಗುಂಪಿನ (PM&EG) ಶಿಫಾರಸ್ಸಿನ ಮೇರೆಗೆ ರಾಜ್ಯಕ್ಕೆ ಮತ್ತು ಇತರೆ ಸಂಸ್ಥೆಗಳಿಗೆ ಹಣಕಾಸಿನ ನೆರವು ನೀಡಲಾಗುವುದು.
ಶಾಲೆಗಳಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು (ICT) ಸಾಮಾಜಿಕ ಪರಿವರ್ತನೆಯ ಮತ್ತು ರಾಷ್ಟ್ರೀಯ ಮುನ್ನಡೆಯ ಪ್ರಮುಖ ವೇಗವರ್ಧಕವೆಂದು ಸಾರ್ವತ್ರಿಕವಾಗಿ ಗುರುತಿಸಲಾಗುತ್ತಿದೆ. ಆದಾಗ್ಯೂ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ (ICT) ಸಿದ್ಧತೆಯ ಹಂತಗಳಲ್ಲಿನ ಅಸಮಾನತೆಗಳು ಮತ್ತು ಬಳಕೆಯಲ್ಲಿನ ಅಸಮಾನತೆಯನ್ನು ಪರಿವರ್ತಿಸಿಕೊಂಡು, ದೇಶದ ಆರ್ಥಿಕ ಬೆಳವಣಿಗೆಯ ಮಟ್ಟದ ಮೇಲೆ ಪರಿಣಾಮ ಬೀರಬಹುದಾಗಿದೆ.
ಆದುದರಿಂದ ನಿರಂತರ ಸಾಮಾಜಿಕ ಮತ್ತು ಆರ್ಥಿಕ ಮುನ್ನಡೆಗಾಗಿ ಸೆಣಸುತ್ತಿರುವ ದೇಶಗಳಿಗೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ದ ಅರಿವು ಮತ್ತು ಬಳಕೆ ಅತಿ ನಿರ್ಣಾಯಕವಾಗಿರುತ್ತದೆ.
ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ದ ಬಳಕೆಯಲ್ಲಿ ಭಾರತವು ಭೌಗೋಳಿಕವಾಗಿ ಮತ್ತು ಜನಸಂಖ್ಯೆಯಲ್ಲಿ ಅಪಾರ ವ್ಯತ್ಯಾಸವನ್ನು ತೋರುತ್ತದೆ. ವಿಶ್ವದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ದಲ್ಲಿ ಭಾರಿ ಕಾರ್ಯಪಡೆ ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು. ತಂತ್ರಜ್ಞಾನದ ಗುಚ್ಛಗಳಾದ (ಕ್ಲಸ್ಟರು) ಬೆಂಗಳೂರು ಮತ್ತು ಗುಡಗಾಂ ಅಥವ ಹೆಚ್ಚು ಆದಾಯದ ಮೇಲಿನ ಹಂತದ ಮಧ್ಯವರ್ತಿಗಳಲ್ಲಿ ಅತಿ ಹೆಚ್ಚಿನ ಬಳಕೆಯನ್ನು ಕಾಣಬಹುದಾಗಿದೆ. ಇನ್ನೊಂದು ಆರೋಪವೆಂದರೆ ದೇಶದ ಅತಿ ಹೆಚ್ಚಿನ ಭಾಗಗಳಲ್ಲಿ ಟೆಲಿಫೋನ್ ಸಂಪರ್ಕ ಕೂಡ ಇರುವುದಿಲ್ಲ.
ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ICT) ದ ಮತ್ತು ಸಾಪ್ಟ್ ವೇರ್ ಅಭಿವೃದ್ಧಿಗಾಗಿ ರಾಷ್ಟ್ರೀಯ ಕಾರ್ಯಪಡೆ (ಐ.ಟಿ. ಕಾರ್ಯಪಡೆ)
ಕೊನೆಯ ಮಾರ್ಪಾಟು : 6/21/2020
ಮಾಹಿತಿ ಸಂವಹನ ತಂತ್ರಜ್ಞಾನಗಳ ಬಳಕೆಯಿಂದಾಗಿ ಓರ್ವ ಶಿಕ್ಷಕನ...
ಕರ್ನಾಟಕ ಮಾಹಿತಿ ತಂತ್ರಜ್ಞಾನ ಜೈವಿಕ ತಂತ್ರಜ್ಞಾನ ಮತ್ತು ವ...
ಆಧುನಿಕ ಪ್ರಪಂಚವು ಇಂದು ವಿಜ್ಞಾನ ಮತ್ತು ತಂತ್ರಜ್ಞಾನಗಳ ಯು...
ಡಿಜಿಟಲ್ ಕನ್ನಡ ಡಿಂಡಿಮವದ ಕುರಿತು