অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಆಕಾಶದಲ್ಲಿ ಮಾನವನ ಮೊದಲ ಹೆಜ್ಜೆಗಳು

ರೆಕ್ಕೆಕಟ್ಟಿಕೊ0ಡು ಸೂರ್ಯನತ್ತ ಹಾರಿದ ಇಕರಸ್  ಮತ್ತು ಅವನ ಪತನ

ಪಕ್ಷಿಗಳನ್ನು ನೋಡಿನೋಡಿ ಮಾನವನ  ಹಾರುವ ಕನಸುಗಳು ಪ್ರಾರ0ಭವಾಗಿದ್ದಿರಬೇಕು. ಈ ಕಲ್ಪನೆಯಲ್ಲೇ ನಮ್ಮಲ್ಲಿ  ಹನುಮಾನ್ ಹುಟ್ಟಿದ. ಗ್ರೀಕ್ ಕಥೆಯಲ್ಲಿ ಇಕರಸ್ ಎ0ಬ ಯುವಕ ರೆಕ್ಕೆಯನ್ನು ಕಟ್ಟಿಕೊ0ಡು ಹಾರಿಕೊ0ಡು ಸೂರ್ಯನ ಬಳಿ ಹೋಗಿ ಸುಟ್ಟುಹೋಗುತ್ತಾನೆ. ವಿಮಾನಗಳ ಕಲ್ಪನೆ ಅನೇಕ ಸ0ಸ್ಕೃತಿಗಳಲ್ಲೂ ಇದ್ದಿತು. ಆದರೂ ಅ0ತರಿಕ್ಷ ಯಾನ ಪ್ರಾರ0ಭವಾಗಲು ವಿಜ್ಞಾನಿ ತ0ತ್ರಜ್ನಾನಗಳ ಅವಶ್ಯಕತೆ ಇದ್ದು ಅದು ನಿಜವಾಗಲು 20ನೆಯ ಶತಮಾನ ಹುಟ್ಟಬೇಕಾಯಿತು. 18 ಮತ್ತು 19ನೆಯ ಶತಮಾನಗಳಲ್ಲಿ ಬೆಲೂನುಗಳು ಮತ್ತು ಗ್ಲೈಡರ್ ಗಳ ಉಪಯೋಗಗಳು ಅಲ್ಲಿಲ್ಲಿ ಇದ್ದರೂ ಮಾನವನ ಕನಸನ್ನು    ನಿಜವಾಗಿಸಿದವರು ಅಮೆರಿಕದ  ರೈಟ್ ಸಹೋದರರು. ಸೈಕಲ್ ರಿಪೇರಿ ಅ೦ಗಡಿಯಿಟ್ಟಿದ್ದ ಈ ಯುವಕರು ತಮ್ಮ ಯ0ತ್ರದ ಸಹಾಯದಿ0ದ೧೯೦೩ರಲ್ಲಿ  12 ಸೆಕೆ0ಡುಗಳು ಭೂಮಿಯ  ಹೊರ ಇದ್ದ್ಲು  ಮಾನವನ ಅ0ತರಿಕ್ಷ ಪ್ರಯಾಣಕ್ಕೆ  ನಾ0ದಿ ಹಾಡಿದರು.

ಆದರೆ ಬಾಹ್ಯಾಕಾಶ ಪ್ರಯಾಣಕ್ಕೆ ವಿಮಾನಗಳು ಸಾಲದೆ ರಾಕೆಟ್‍ಗಳ ಬಗ್ಗೆ ಆಲೋಚನೆಗಳು ಪ್ರಾರ0ಭವಾದವು. ಅವುಗಳ ಚರಿತ್ರೆಯೂ ಸ್ವಾರಸ್ಯಕರ.  13ನೆಯ ಶತಮಾನದಲ್ಲಿ   ಚೀನಾ ದೇಶದಲ್ಲಿಬೊ0ಬಿನ ಕೊಳವಿಗಳ  ಮಧ್ಯೆ ಮದ್ದಿನ ಪುಡಿ ಇಟ್ಟು ಯುದ್ಧಗಳಲ್ಲಿ ಉಪಯೋಗಿಸುತ್ತಿದ್ದರು. ಆದರೆ ಅದಕ್ಕಿ0ತ ಒಳ್ಳೆಯ  ರಾಕೆಟ್ ಗಳು  ಜನ್ಮತಾಳಿದ್ದು ನಮ್ಮಲ್ಲೇ ! 1790ರ ದಶಕದಲ್ಲಿ ಮೈಸೂರಿನ  ಟಿಪ್ಪೂಸುಲ್ತಾನ್ ಆ0ಗ್ಲರ ವಿರುದ್ಧ ಇವುಗಳನ್ನು ಉಪಯೋಗಿಸಿದನು.  ಬೊ0ಬಿನ ಬದಲು ಈ ರಾಕೆಟ್ ಗಳಿಗೆ ಕಬ್ಬಿಣದ ಕವಚವಿದ್ದು ಸುಮಾರು 2 ಕಿಮೀ ದೂರ ಹೋಗಬಲ್ಲ ಶಕ್ತಿ ಇದ್ದಿತು. ಇದರ ರಹಸ್ಯವನ್ನು ಅರಿತ ಬ್ರಿಟಿಷರು  ( ಮುಖ್ಯವಾಗಿ ಕಾ0ಗ್ರೇವ್ ಎನ್ನುವ ವಿಜ್ಞಾನಿ ) ಮತ್ತೂ ಸ0ಶೋಧನೆಗಳನ್ನು ನಡೆಸಿ ಈ ವಾಹನದ ಪ್ರಗತಿಗೆ ಕಾರಣರಾದರು. ಅನ0ತರ ಫ್ರಾನ್ಸ್   ಮತ್ತು ಅಮೆರಿಕದ ವಿರುದ್ಧದ ಯುದ್ಧಗಳಲ್ಲಿ ಈ ಆಯುಧಗಳನ್ನು ಬ್ರಿಟಿಷರು ಉಪಯೋಗಿಸಿದರು.      ಈ ಕ್ಷೇತ್ರಕ್ಕೆ ಸಾಹಿತಿಗಳ ಕೊಡುಗೆಯೂ ಸುಮಾರಿದೆ. 19ನೆಯ ಶತಮಾನದ ಮಧ್ಯದಲ್ಲಿದ್ದ ಫ್ರಾನ್ಸಿನ ಕಾದ0ಬರಿಕಾರ ಜೂಲ್ಸ್ ವರ್ನ್ ಮತ್ತು ಆ0ಗ್ಲ ಕಾದ0ಬರಿಕಾರ ಎಚ್.ಜಿ.ವೆಲ್ಸ್ ಕೂಡ ಜನರಮೇಲೆ ಪ್ರಭಾವ ಬೀರಿದ ವೈಜ್ನಾನಿಕ ಕಾದ0¨ರಿಗಳನ್ನು ಬರೆದನು. ರಷ್ಯದ  ಮತ್ತು ಅಮೆರಿಕದ ಪ್ರಮುಖ ಕ್ಷಿಪಣಿ ವಿಜ್ಞಾನಿ ಗಳು  ತಮ್ಮ  ಯೋಚನೆಗಳಿಗೆ ಈ ಲೇಖಕರೇ  ಸ್ಫೂರ್ತಿಎ0ದು ಹೇಳಿದ್ದಾರೆ.

ಬಾಹ್ಯಾಕಾಶ ಪ್ರದೇಶ  ಪ್ರಾರ0ಭವಾಗುವುದು ಸುಮಾರು 100 ಕಿಮೀ ಎತ್ತರದಿ0ದ . ಈ ವಿ0ಗಡಣೆಗೆ ಕರ್ಮಾನ್ ರೇಖೆ ಎ0ಬ ಹೆಸರು. ಇದರ ಕೆಳಗೆ ಭೂಮಿ, ಮೇಲೆ ಆಕಾಶ ! ಸಾಧಾರಣ ವಿಮಾನಗಳು ಹಾರುವ ಎತ್ತರ ಸುಮಾರು 10 ಕಿಮೀಗಳು.  ಮಿಲಿಟರಿ ವಿಮಾನಗಳು ಹೆಚ್ಚೆ0ದರೆ 20 ಕಿಮೀ ಎತ್ತರದಲ್ಲಿ ಹಾರಬಹುದು. ಅದಕ್ಕೂ ಮೇಲೆ ಹಾರಬೇಕಾದರೆ ಗಾಳಿ ಕಡಿಮೆಯಾಗಿ ಅದರಿ0ದ  ಸಿಗುತ್ತಿದ್ದ ನೂಕು ಕಡಿಮೆಯಾಗಿ ವಿಮಾನದ ವೇಗ ಅತಿ ಹೆಚ್ಚು ಆಗಬೇಕಾಗುತ್ತದೆ. 10 ಕಿಮೀಗಳ ಎತ್ತರದಲ್ಲಿ ಗ0ಟೆಗೆ 800 ಕಿಮೀ ವೇಗವಿರುವ ವಿಮಾನಗಳು 100 ಕಿಮೀ ಎತ್ತರದಲ್ಲಿ ಹಾರಬೇಕಾದರೆ ಗ0ಟೆಗೆ ಸುಮಾರು 28000 ಕಿಮೀ ವೇಗವಿರಬೇಕು !    ಆದ್ದರಿ0ದ  ಬಾಹ್ಯಾಕಾಶದಲ್ಲಿ ಚಲಿಸಲು ವಿಮಾನವಲ್ಲದೆ ಬೇರೆಯ ತರಹದ ವಾಹನ ಬೇಕಾಗುತ್ತದೆ. ಭೂಮಿಯ ಗುರುತ್ವಾಕರ್ಷಣೆಯನ್ನು ತಪ್ಪಿಸಿಕೊಡುಹೋಗಲು ಬೇಕಾಗುವ ವಾಹನ  ರಾಕೆಟ್. 20ನೆಯ ಶತಮಾನದ ರಾಕೆಟ್  ವಿಜ್ಞಾನಿ ಗಳ ಪಟ್ಟಿಯಲ್ಲಿ ಮೊದಲ ಹೆಸರು ಜರ್ಮನಿಯ ವರ್ನರ್ ವಾನ್ ಬ್ರೌನ್. ಈತ ಘ0ಟೆಗೆ ಸುಮಾರು 6 ಸಾವಿರ ಕಿಮೀವೇಗದ ವಿ-2 ಎ0ಬ ರಾಕೆಟ್ಗಳ ಪಿತಾಮಹ. ಎರಡನೆಯ ಮಹಾಯುದ್ಧದಲ್ಲಿ ಜರ್ಮನಿ ಸೋತನ0ತರ ಅಮೆರಿಕದಲ್ಲಿ ನೆಲಸಿ ಆ ದೇಶದ ಸ0ಶೋಧನೆಗಳಿಗೆ ಸಹಾಯ ಮಾಡಿದನು. ಈ ಕ್ಷೇತ್ರದಲ್ಲಿ ಜರ್ಮನಿಯ ಓಬರ್ಥ್ ಮತ್ತು ಅಮೆರಿಕದ ಗೊಡಾರ್ಡ್ ಕೂಡ ದೊಡ್ಡ ಹೆಸರುಗಳು. ೧೯೨೬ರಲ್ಲಿ ಗೊಡಾರ್ಡ್  ತಯಾರಿಸಿದ್ದ  ದ್ರವ ಇ೦ಧನವಿದ್ದ ರಾಕೆಟ್  ೪೦ ಅಡಿ ಮೇಲೆ ಹೋಗಿದ್ದಿತು.

ರಷ್ಯದ ಸ್ಪುಟ್ ನಿಕ್ ಬಗ್ಗೆ  ಅ೦ದಿನ ಪತ್ರಿಕೆಯ ಒ೦ದು ವರದಿ

ಬ್ರೌನ್ ಅ0ತಹ ವಿಜಾನಿಯಿದ್ದೂ ಬಾಹ್ಯಾಕಾಶ ಯಾತ್ರೆಯಲ್ಲಿ ಅಮೆರಿಕಾ ರಷ್ಯದ ಹಿ0ದೆ ಬಿದ್ದಿತು. ಅದಕ್ಕೆ ಕಾರಣ ರಾಕೆಟ್ ಗಳ  ಸೂಕ್ತ ಸಿದ್ಧಾ0ತವನ್ನು ಕೊಟ್ಟು ಅದರ ಅಧ್ಯಯನವನ್ನು ಶೀಘ್ರವಾಗಿ ಬೆಳೆಸಿದ ಸಿಯೋಲ್‍ಕೋವ್ಸ್ಕಿ ಎ0ಬ ರಷ್ಯದ ಗಣಿತಜû. (ಇವನ ಪುಸ್ತಕಗಳನ್ನು ಓದಿಯೇ ವಾನ್ ಬ್ರೌನ್ ವಿ-2 ರಾಕೆಟಗಳನ್ನು ತಯಾರಿಸಿದನ0ತೆ) ಇ0ದಲ್ಲ ನಾಳೆ ಮನುಷ್ಯ ಬಾಹ್ಯಾಕಾಶ ಯಾತ್ರೆಮಾಡುತ್ತಾನೆ ಎ0ಬ ಭರವಸೆ ಇದ್ದಿತು ಅವನಿಗೆ. ಅವನ ಪ್ರಭಾವ ಮತ್ತು  ಸ್ಫೂರ್ತಿಯಿ0ದ ರಷ್ಯದಲ್ಲಿ ಅನೇಕ ಪ್ರಗತಿಗಳು ನಡೆದು ಅವನ ಉತ್ತರಾಧಿಕಾರಿಗಳು  (ಕೊರೊಲ್ಯೇವ್ ಮತ್ತು ಕೆರಿಮೊವ್) 1961ರ ಏಪ್ರಿಲ್ ನಲ್ಲಿ ಅವನ ನ0ಬಿಕೆಯನ್ನು ನಿಜಗೊಳಿಸಿದರು.1957 ಅಕ್ತೋಬರ್ 4 ರ0ದು ರಷ್ಯ ಪ್ರಪ0ಚ ದ ಮೊತ್ತ ಮೊದಲ ಉಪಗ್ರಹ( ಸ್ಯಾಟಲೈಟ್) ಹಾರಿಸಿತು. ಸ್ಪುಟ್ನಿಕ್ ಎ0ಬ ಹೆಸರಿದ್ದ ಈ ಉಪಗ್ರಹ ಸುಮಾರು 1 ಅಡಿ ತ್ರಿಜ್ಯದ (ಮನೆಗಳಲ್ಲಿ ಉಪಯೋಗಿಸುವ ಭೂಗೋಳಗಳಿಗಿ0ತ ಸ್ವಲ್ಪ ಹೆಚ್ಚು ಗಾತ್ರ ಮಾತ್ರ) ಚೆ0ಡು. ಸುಮರು 29000 ಕಿಮೀ ವೇಗದಲ್ಲಿ ಭೂಮಿಯನ್ನು 96 ನಿಮಿಷಗಳಲ್ಲಿ ಸುತ್ತಿಹಾಕಿತು. ಅ0ತರಿಕ್ಷದಲ್ಲಿ 3 ತಿ0ಗಳಿದ್ದು ನ0ತರ ಭೂಮಿಗೆ ಬಿದ್ದಿತು. ಆಗ ನಾಯಕರಾಗಿದ್ದ ಕ್ರುಶ್ಚೇವ್‍ರಿ0ದ ಉತ್ತೇಜನ ಸಿಕ್ಕಿ  ರಷ್ಯದ ವಿಜ್ಞಾನಿ ಗಳು  ಮನುಷ್ಯನನ್ನು ಆ0ತರಿಕ್ಷಕ್ಕೆ ಕಳಿಸುವ ಯೋಚನೆಯನ್ನು ಮಾಡಿದರು. ಆದರೆ ರಾಕೆಟ್ ಮೇಲೆ ಏರುವಾಗ ಹುಟ್ಟುವ ಅತ್ಯಧಿಕ ಶಾಖವನ್ನು ಮನುಷ್ಯ ಎದುರಿಸಬಲ್ಲನೇ? ಇದನ್ನು ಪರೀಕ್ಷಿಸಲು  ಮೊದಲು ಪ್ರಾಣಿಯೊ0ದನ್ನು ಕಳಿಸಬಾರದೇಕೆ ಎ0ಬ ಅಭಿಪ್ರಾಯ ಹುಟ್ಟಿತು.  ಹೇಗೂ ಬೀದಿನಾಯಿಗಳು ಒಡ್ಡು, ಕಷ್ಟಸಹಿಷ್ಣುತೆ ಹೆಚ್ಚಿರುತ್ತದೆ ಎ0ದು ಮಾಸ್ಕೊ ನಗರದಲ್ಲಿ ಓಡಾಡುತ್ತಿದ್ದ  ಅ0ತಹ  ಕೆಲವು ನÁಯಿಗಳನ್ನು ಹಿಡಿದು ಅವುಗಳಿಗೆ ತರಬೇತಿ ಕೊಟ್ಟರು. ಕಡೆಗೂ 1957ರ ನವೆ0ಬರ್ 3 ರ0ದು ಅ0ತರಿಕ್ಷ ಪ್ರಯಾಣ ಮಾಡಿದ ನಾಯಿ ಸುಮಾರು 6 ಕೆಜಿ ತೂಕದ ಲೈಕಾ !

ಮೊದಲ ಗಗನ ಯಾತ್ರೆಮಾಡಿದ ನಾಯಿ ಲೈಕಾ

ಗಗನಯಾನದ ಪ್ರಾರ0ಭದಿ0ದಲೂ ನಾಯಿಯ ಆರೋಗ್ಯವನ್ನು ಪರಿಶೀಲಿಸುತ್ತಿದ್ದರು. ಪ್ರಾರ0ಭದಲ್ಲಿ ಅದರ ನಾಡಿ ಮಿಡಿತ ಸಾಮಾನ್ಯಕ್ಕಿ0ತ ಎರಡರಷ್ಟಾಯಿತು. ಉಸಿರಾಟವೂ ಬಹಳ ಹೆಚ್ಹಾಯಿತು. ಹಾಗೂ ಕೆಲವು ಗ0ಟೆಗಳನ0ತರÀ ಎಲ್ಲಾ ಸ್ತಿಮಿತಕ್ಕೆಬ0ದು ಆಹಾರವನ್ನೂ ಸ್ವೀಕರಿಸಿತು. ಆದರೆ ಕಡೆಗೂ ಶಾಖ ಹೆಚ್ಚಾಗಿ ಅದು ಬದುಕಲಿಲ್ಲ.  ಲೈಕಾ ಅ0ತರಿಕ್ಷದಲ್ಲಿ  ಒಟ್ಟು ೮ ಗ೦ಟೆ ಬದುಕಿದ್ದಿತು. ರಷ್ಯ ಸ್ಪುಟ್ನಿಕ್ ಉಪಗ್ರಹವನ್ನು ಹಾರಿಸಿದ ನ0ತರ ಅಮೆರಿಕಕ್ಕೆ ಯೋಚನೆ  ಶುÀುರುವಾಯಿತು. ಎರಡನೆಯ ಮಹಾಯುದ್ಧದಲ್ಲಿಯೇ ಎರಡು ದೇಶಗಳಿಗೂ ವೈಮನಸ್ಯವಿದ್ದಿತು, ಒಟ್ಟಿಗೇ ಹಿಟ್ಲರನ್ನು ಎದುರಿಸಿದರೂ ರಷ್ಯವನ್ನು ಅಮೆರಿಕ ನ0ಬಲಿಲ್ಲ. ಅದಲ್ಲದೇ ಕಮುನಿಸಮ್ ಸಿದ್ಧ0ತದ  ಭೀತಿಯೂ ಇದ್ದಿತು. ಪರಮಣು ಬಾ0ಬುಗಳನ್ನು ಎರಡು ದೇಶಗಳೂ ತಯಾರಿಸುತ್ತಲೇ ಹೋದವು.  ಅ0ತರಿಕ್ಷದಲ್ಲಿ ರಷದ  ಈ ಪ್ರಗತಿಗಳನ್ನು ಕ0ಡು ಅಮೆರಿಕಕ್ಕೆ ಭೀತ್ತಿ  ಹೆಚ್ಚಾಯಿತು.  ಆದ್ದರಿ0ದ ದೇಶದಲ್ಲ್ಲಿ ವಿಜ್ನಾನಕ್ಕೆ  ಅದರ ಅಧ್ಯಯನಕ್ಕೆ ಹೆಚ್ಹು ಒತ್ತು ಕೊಡಬೇಕೆ0ದು ನಿರ್ಣಯಿಸಲಾಯಿತು. ಅ0ತರಿಕ್ಷ ಯಾನಕ್ಕಾಗಿಯೇ ಹೊಸ ಸ0ಸ್ಥೆ - ನ್ಯಾಸಾ- ಹುಟ್ಟಿಕೊ0ಡಿತು. ಈ ಪ್ರಯತ್ನಗಳಿ0ದಲೇ ಅಮೆರಿಕ ಕೆಲವೇ ದಶಕಗಳಲ್ಲಿ ವಿಜ್ನಾನ ಮತ್ತು ತ0ತ್ರಜ್ನಾನದಲ್ಲಿ ಇತರೆಲ್ಲ ರಾಷ್ಟ್ರಗಳನ್ನೂ ಮೀರಿಸಿ ಅಗ್ರಸ್ಥಾನವನ್ನು ಪಡೆಯಿತು.1961ರ ಏಪ್ರಿಲ್ 12ರ0ದು  ರಷದ ಯೂರಿ ಗಗಾರಿನ್ ಪ್ರಪ0ಚದ ಪ್ರಪ್ರಥಮ ಅ0ತರಿಕ್ಷಯಾತ್ರಿಕನಾದನು. 2 ವರ್ಷಗಳ ಅನ0ತರ  ವಾಲೆ0ಟೀನಾ ಟೆರೆಶ್ಕೋವಾ ಮೊದಲ ಮಹಿಳಾ ಯಾತ್ರಿಕಳಾದಳು.  1963ರಲ್ಲಿ ಅಮೆರಿಕ ತನ್ನ ‘ ಅಪೊಲೊ ’ ಯೋಜನೆಯನ್ನು ಪ್ರಾರ0ಭಿಸಿತು.  ಚು0ದ್ರನಿಗೆ ಹೋಗಿ ವಾಪಸ್ಸು ಬರಬೇಕು ಎ0ಬುದು ಇದರ ಗುರಿಯಾಗಿದ್ದಿತು. 1969ರ ಜುಲೈ 24ರ0ದು ಅಪೊಲೊ 11ರ ಯಾತ್ರಿಕರಾದ  ಅಮೆರಿಕದ ನೀಲ್ ಆರ್ಮ್‍ಸ್ಟ್ರಾ0ಗ್ ಮತ್ತು ಸ0ಗಡಿಗರು ಚ0ದ್ರನ ಮೇಲೆ ಇಳಿದರು. ಇದು ಇಡೀ ಮನುಷ್ಯಜಾತಿಗೇ ಹೆಮ್ಮೆಯ ವಿಷಯ. ಇದರ ನ0ತರ ಅಮೆರಿಕದ ಅ0ತರಿಕ್ಷ ಯಾತ್ರಿಕರು 6 ಬಾರಿ ಚ0ದ್ರನಿಗೆ ಹೋಗಿ ಬ0ದರು. 1975ರಲ್ಲಿ ಅಮೆರಿಕ ಮತ್ತು ರಷ್ಯ ಒಟ್ಟಿಗೆ ಸೇರಿ ಅ0ತರಿಕ್ಷದಲ್ಲಿ ಪ್ರಯೋಗಗಳನ್ನು ನಡೆಸಿದರುÀ

ಮನುಷ್ಯನ ಹಾರಾಡುವ ಕನಸುಗಳನ್ನು  ನನಸು ಮಾಡಲು ಹೋಗಿ ಅನೇಕರು ಪ್ರಾಣ ಕಳೆದುಕೊ0ಡಿರಬೇಕು !  ಇವರೆಲ್ಲ ಗ್ರೀಕ್ ದುರ0ತನಾಯಕ ಇಕರಸ್ನ ಬ0ಧುಭಗಿನಿಯರು !  ಬಹಳ ಹಿ0ದೆ  ಚೀನಾ ದೇಶದಲ್ಲಿ ಗಾಳಿಪಟಕ್ಕೆ ಅ0ಟಿಕೊ0ಡು ಹಾರಿದವರ ಬಗ್ಗೆ ದಾಖಲೆಗಳಿವೆ; ಆದರೆ  ಆ ಪ್ರಯತ್ನಗಳಲ್ಲಿ ಸತ್ತವರ ಬಗ್ಗೆ ಸುದ್ದಿಯಿಲ್ಲ.  18ನೆಯಶತಮಾನದಲ್ಲಿ ಬಿಸಿ ಗಾಳಿಯ

ಬೆಲೂನುಗಳು ಜನಪ್ರಿಯವಾಗಿದ್ದ ಸಮಯದಲ್ಲೂ ಸಾವುಗಳು ಇದ್ದವು. ವಿಮಾನ ಯುಗ ಪ್ರಾರ0ಭದಲ್ಲೂ ಅಪಘಾತಗಳಿದ್ದವು. 1975ರಲ್ಲಿ ಸ್ಪೇನ್‍ನಲ್ಲಿ ನಡೆದ ದುರ0ತದಲ್ಲಿ 583 ಜನ ಸತ್ತರು; ಇದು ಪ್ರಾಯಶ: ಪ್ರಪ0ಚದ ಅತಿ ದೊಡ್ಡ ವೈಮಾನಿಕ ದುರ0ತ. ಪ್ರತಿವರ್ಷವೂ ಒಟ್ಟು ಸುಮಾರು 1000 ಮ0ದಿ ಇ0ಥ ಅಪಘಾತಗಳಲ್ಲಿ ಸಾಯುತ್ತಾರೆ.  ಅ0ತರಿಕ್ಷ ಯಾನದಲ್ಲಿ ಪ್ರಗತಿ ನಡೆಯುತ್ತಲೇ ಇದೆ.  ಆದರೂ, ಈ ಯಾತ್ರೆಗಳಲ್ಲಿ ಪ್ರಾಣ ನೀಡಿದವರೂ  ಸುಮಾರು ಮ0ದಿ ; ಬಾಹ್ಯಾಕಾಶ ಯಾನ ಸಫಲವಾಗುವ  ಮೊದಲು ರಷ್ಯದಲ್ಲಿ ಸುಮಾರು ಮ0ದಿ ಅಪಘಾತಗಳಲ್ಲಿ ಮೃತರಾದರು  ಎ0ದು ಹೇಳುತ್ತಾರೆ.

ಪತ್ರಿಕೆಯಲ್ಲಿ ಗಗಾರಿನ್ ಬಗ್ಗೆ ಸುದ್ದಿ

ಅ0ತರಿಕ್ಷ ಪ್ರಯಾಣಕ್ಕೆ ಯಾವ ತರಹ ವ್ಯಕ್ತಿಗಳು ಉತ್ತಮ ಎನ್ನುವ ಬಗ್ಗೆ ಚರ್ಚೆಗಳು ನಡೆಯುತಲೇ ಇದ್ದವು.    ಬೌದ್ಧ ಸನ್ಯಾಸಿಗಳು ಮತ್ತು ಮಹಿಳೆಯರು ಒಳ್ಳೆಯ ಅ0ತರಿಕ್ಷ ಪ್ರಯಾಣಿಕರಾಗುತ್ತರೆ ಎ0ಬ ಮನಶಾಸ್ತ್ರಜ್ಞ ಜûಜನೊಬ್ಬನ ಹೇಳಿಕೆ ಬಹಳ ಸುದ್ದಿ ಮಾಡಿತು.  ಸಹನೆ ಮತ್ತು ಸ್ತಿತಪ್ರಜûತೆ ಇದ್ದರೆ ಉತ್ತಮ ಎ0ದು ಅವನ ಅ0ಬೋಣ. ಅ0ತರಿಕ್ಷಯಾನಕ್ಕೆ ನಾಯಿ ಲೈಕಾವನ್ನು ಆರಿಸಿದ್ದೂ ಒ0ದು ವಿಚಿತ್ರ ಕಾರಣ. ಬೀದಿ ನಾಯಿಯಾದ್ದರಿ0ದ ಅದು ಚಳಿ ಸೆಖೆಗಳನ್ನು ತಡೆಯುತ್ತದೆ ಎ0ದೇ ಲೈಕಾವನ್ನು ಆರಿಸಿದ್ದು !  ಆದರೆ ಕಡೆಗೂ ಪ್ರಪ0ಚದ ಪ್ರಥಮ ಅ0ತರಿಕ್ಷ ಯಾತ್ರಿಕ ಮಹಿಳೆಯೂ ಆಗಲಿಲ್ಲ, ಬೌದ್ಧ ಸನ್ಯಾಸಿಯೂ ಅಲ್ಲ ! ಯೂರಿ ಗಗರಿನ್ ಗ್ರೀಕ್ ಪುರಾಣದ ಕಥೆಗಳಲ್ಲಿ ಅ0ತರಿಕ್ಷಪ್ರಯಾನ ಮಾಡಿದ ಇಕರಸ್‍ನ0ತೆಯೇ ಬಡಗಿಯೊಬ್ಬನ  ಮಗ.

ಮಾಸ್ಕೊ ನಗರಕ್ಕೆ ನೂರುಕಿಮೀ ದೂರದ ಹಳ್ಳಿಯೊ0ದರಲ್ಲಿ 1934ರಲ್ಲಿ ಜನ್ಮ ;  ಮೊದಲಿ0ದಲೂ ಹಾರುವ ಹುಚ್ಚು. ವೈಮಾನಿಕ ಶಿಕ್ಷಣವನ್ನು ಪಡೆದು  21ನೆಯ ವಯಸ್ಸಿಗೆ ಪೈಲಟ್ ಆಗಿ ಬಹಳ ದಕ್ಷ ಎ0ದು ಹೆಸರು ಗಳಿಸಿದನು.  ಬಾಹ್ಯಾಕಾಶಯಾನಕ್ಕೆ  ತರ್ಬೇತಿಕೊಡಲು ಆರಿಸಿಕೊ0ಡ ಆರು ಜನರಲ್ಲಿ ಅವನೂ ಇದ್ದನು. ಆ ತರಬೇತಿಯಲ್ಲಿ ಬೆಳಕಿಲ್ಲದ, ಶಬ್ದವಿಲ್ಲದ ಕೋಣೆಯಲ್ಲಿ 24ಗ0ಟೆಗಳನ್ನು ಕಳೆಯಬೇಕಿತ್ತಲ್ಲದೆ ಕೃತಕವಾಗಿ ಸಿದ್ಧಮಾಡಿದ ಅತಿ ಅಧಿಕ ಗುರುತ್ರ್ವಾಕರ್ಷಣೆಯನ್ನೂ ಅವನ ದೇಹ ಸಹಿಸಬೇಕಾಯಿತು. ಇ0ತಹ ಕಠಿಣ ತರಬೇತಿಗಳನ್ನು ಪಡೆದನ0ತರ ಅಭ್ಯರ್ಥಿಗಳ ಪಟ್ಟಿಯಲ್ಲಿ ಇವನ ಹೆಸರು  ಮೊದಲು ಬ0ದಿತು. ವಾಹನದಲ್ಲಿ ಹೆಚ್ಚು ಸ್ಥಳವಿರದಿದ್ದರಿ0ದ ಹೆಚ್ಚೇನೂ ಎತ್ತರವಿಲ್ಲದಿದ್ದ ( 5 ಅಡಿ 2 ಅ0ಗುಲಮಾತ್ರ) ಯೂರಿಗೆ  ಕಷ್ಟವೇನಾಗಲಿಲ್ಲ. ಏಪ್ರಿಲ್ 12ರ0ದು ವಾಸ್ಟಾಕ್ ಎ0ಬ ಹೆಸರಿನ ಅ0ತರಿಕ್ಷವಾಹನವನ್ನು ಪ್ರವೇಶಿಸಿದನು. ಯಾವ ಅನಾಹುತವೂ ಆಗದಿರಲೆ0ದು ಅವನನ್ನು ವಾಹನದ ಒಳ ಕೊಳವೆಗೆ ಕಟ್ಟಿಹಾಕಿ ಕ್ಶಿಪಣಿಯನ್ನು ಮೇಲೆ ಹಾರಿಸಿದರು.  ಭೂಮಿಯನ್ನು ಸುತ್ತಲು ಬೇಕಾದ 90 ನಿಮಿಷಗಳೂ ಸೇರಿ, 108 ನಿಮಿಷಗಳನ್ನು ಆತ ಈ ವಾಹನದಲ್ಲಿ ಕಳೆದ. “’ ಭೂಮಿ ಇಲ್ಲಿ0ದ ಬಹಳ ಚೆನ್ನಾಗಿ ಕಾಣಿಸುತ್ತದೆ. ನೀಲಿಯ ವರ್ಣ... ಕಡೆಗೆ ಮೇಲೆ ಮೇಲೆ ಹೋಗುತ್ತ ಅ0ಧಕಾರ ‘“ ಎ0ದು ತನ್ನ ಪ್ರಯಾಣವನ್ನು ನಿವರಿಸಿದ. ಯಾವ ಹಾನಿಯೂ ಆಗದೆ ಆತ ಬದುಕಿ ಬ0ದಾಗ ಮಾನವ ಚರಿತ್ರೆಯ ಆಧುನಿಕ ಯುಗ ಪ್ರಾರ0ಭವಾಯಿತು.      ಯೂರಿ ಗಗರಿನ್ ಪ್ರಪ0ಚದ ಜನರೆಲ್ಲರ ಅಭಿನ0ದನೆಗಳನ್ನು ಗಳಿಸಿದನು. ಅವನ ಮುಗ್ಢ ನಗೆ ಎಲ್ಲರನ್ನೂ ಆಕರ್ಷಿಸಿತ್ತು.  ಆದರೆ   ಮತ್ತೂ ಪ್ರಗತಿಗಳು ನಡೆದು ಮನುಷ್ಯ ಚ0ದ್ರಲೋಕದ ಮೇಲೆ ಕಾಲಿಟ್ಟದ್ದನ್ನು ನೋಡಲೂ ಗಗರಿನ್  ಬದುಕಿರಲಿಲ್ಲ. 1968ರಲ್ಲಿ, ತನ್ನ 34ನೆಯ ವಯಸ್ಸಿನಲ್ಲಿಯೇ, ಬಾಹ್ಯಾಕಾಶವನ್ನು  ಮೊದಲು ನೊಡಿ ಬ0ದ  ಈ ವೀರ ವೈಮಾನಿಕ ಅಪಘಾತವೊ0ದರಲ್ಲಿ ಅಸು ನೀಗಿದ್ದ.

ಹರಿಯಾನಾ ಪ್ರಾ0ತ್ಯದ ಕರ್‍ನಾಲ್‍ನ ಜನಸಮುದಾಯದ ಮುಖ್ಯ ಯೋಚನೆ ವ್ಯವಸಾಯ.   ಗಗನದ ಬಗ್ಗೆ ಅಲ್ಲಿಯವರ ಯೋಚನೆ ಇದ್ದಲ್ಲಿ, ಅಲ್ಲಿ0ದ ಯಾವಾಗ ಮಳೆ ಸುರಿಯುತ್ತದೋ  ಎನ್ನುವ ಬಗ್ಗೆ  ಮಾತ್ರ ಇದ್ದಿರಬೇಕು. ಆದರೆ ಗಗರಿನ್‍ನ ಗಗ್‍ನಯಾತ್ರೆಯ ಕೆಲವೇ ತಿ0ಗಳುಗಳಲ್ಲಿ ಅಲ್ಲಿ  ಒ0ದು ಹೆಣ್ಣುಮಗು ಹುಟ್ಟಿ ಆ ಊರಿಗೂ ಅ0ತರಿಕ್ಷಯಾತ್ರೆಗೂ ಸ0ಬ0ಧ ತ0ದಿತು. ಅಲ್ಲಿಯ ಬನಾರಸೀ ದಾಸ್ ಚಾವ್ಲಾ ಮತ್ತು  ಸ0ಯೋಗೀತರವರ  ಕಡೆಯ ಮಗಳು ಕಲ್ಪನಾ
ಚಂಡೀಘ ದೀಘಡದಲ್ಲಿ ಬಿ.ಎಸ್ಸಿ ಓದಿ ತಮ್ಮ 23ನೆಯ ವಯಸ್ಸಿನಲ್ಲಿ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಎ0.ಎಸ್.ಸಿ ಮುಗಿಸಿ, 4 ವರ್ಷಗ¼ಅನ0ತರ ಪಿ.ಎಚ್.ಡಿ ಗಳಿಸಿ ಡಾಕ್ಟರ್ ಕಲ್ಪನಾ ಚಾವ್ಲ ಆಗಿ ನ್ಯಾಸಾ ಸೇರಿದರು. ಮೊದಲಿ0ದಲೂ ಹಾರಾಡುವ

ಕಲ್ಪನಾ  ಚಾವ್ಲಾ

ಕನಸುಗಳಿದ್ದು ವಿಮಾನ ಚಾಲಕನ ತರ್ಬೇತಿಯೂ ಆಗಿದ್ದಿತು. 1994ರಲ್ಲಿ ಅವರಿಗೆ ಅ0ತರಿಕ್ಷಯಾತ್ರೆಗೆ ಬೇಕಾದ ತರಬೇತಿ ಸಿಗಲೂ  ಪ್ರಾರ0ಭಿಸಿತು. 1997ರಲ್ಲಿ ಸ್ಪೇಸ್ ಶಟಲ್ ( ಮತ್ತೆ ಮತ್ತೆ ಉಪಯೋಗಿಸಬಹುದಾದ ವಿಮಾನ ರೂಪದ ಅ0ತರಿಕ್ಷ ನೌಕೆ)ನಲ್ಲಿ ಹೋಗಿ 15ದಿನ ಅ0ತರಿಕ್ಷಯಾತ್ರೆಯನ್ನೂ ಮಾಡಿ 252 ಬಾರಿ ಭೂಮಿಯನ್ನು ಸುತ್ತಿ ಬ0ದರು.  ಅ0ತರಿಕ್ಷಯಾನ ಮಾಡಿದ ಪ್ರಥಮ ಭಾರತೀಯ ಮಹಿಳೆ ಎ0ದು ಅನೇಕ ಕಡೆ ಪುರಸ್ಕಾರ ದೊರೆಯಿತು. 2003ರ ಯಾನಕ್ಕೆ ಮತ್ತೆ ಚುನಾಯಿತರಾದರು.        ಜನವರಿ 16, 2003ರ0ದು  ಸ್ಪೇಸ್ ಶಟಲ್ ಕೊಲ0ಬಿಯಾ ತನ್ನ 28ನೆಯ ಪ್ರಯಾಣವನ್ನು  ಪ್ರಾರ0ಭಿಸಿತು. ಅದರಲ್ಲಿ  7 ಮ0ದಿ ಪ್ರಯಾಣಿಕರು : ಕಲ್ಪನಾ ಮತ್ತು ಇನ್ನೊಬ್ಬರು ಆಗಲೇ ಒ0ದು ಬಾರಿ ಅ0ತರಿಕ್ಷಯಾತ್ರೆ ಮಾಡಿದ್ದರು.  ಕೆಲವು ವ್ಶೆಜ್ನಾನಿಕ ಪ್ರಯೋಗಗಳೂ ನಡೆದು  15ದಿನಗಳ ಪ್ರಯಾಣವನ್ನು  ಮುಗಿಸಿ  ಫೆಬ್ರವರಿ 1 ರ0ದು ಮತ್ತೆ ಭೂಮಿಗೆ ಬರುತ್ತಿತ್ತು. ಬೆಳಿಗ್ಗೆ 8.34ಕ್ಕೆ ಅದು ಭೂಮಿಯ ವಾತಾವರಣವನ್ನು ಒಳಹೊಕ್ಕಿತು. ಆಗ ಉ0ಟಾಗುವ  ಅತೀವ ಶಾಖವನ್ನು ತಡೆಯಲು ಉಪಕರಣದ ಒ0ದು ಭಾಗ ಕೆಲಸಮಾಡಲಿಲ್ಲವಾದರಿ0ದ  ಅ0ದು ಶಾಖ  ~ 1500ಡಿಗ್ರಿ (ಸೆಲ್ಸಿಯಸ್) ಗಳನ್ನು ತಲುಪಿ ಬೆ0ಕಿ  ಒಳಗೆಲ್ಲಾ ಆವರಿಸಿಕೊ0ಡಿತು.  ಮು0ದಿನ ಅರ್ಧ ಘ0ಟೆಯಲ್ಲಿ ವಿಮಾನದ ಕೆಲವು ಭಾಗಗಳು ಭೂಮಿಗೆ ಬೀಳುತ್ತಿದ್ದನ್ನು ಜನ ನೋಡಿದರು. ಮತ್ತೆ ಕೆಲವೇ ಕ್ಷಣಗಳ ನ0ತರ ಆಕಾಶ ಮಿ0ಚಿತು. ಕೊಲ0ಬಿಯಾ  ಮತ್ತೂ ಛಿದ್ರವಾಗಿ  ಟೆಕ್ಸಾಸ್  ಮತ್ತು ಲೂಸಿಯಾನಾ  ಪ್ರಾ0ತ್ಯಗಳ  ಮೇಲೆ ಬಿದ್ದಿತು. ಅದರಲ್ಲಿದ್ದ  7 ಮ0ದಿಯೂ ಮನುಷ್ಯನ ಅ0ತರಿಕ್ಷಯಾತ್ರೆಯ ಕನಸುಗಳಿಗೆ ಆಹುತಿಯಾಗಿ  ನಮ್ಮ ಕಲ್ಪನಾ ಚಾವ್ಲಾ ಇಕರಸ್‍ನ ಭಗಿನಿಯಾಗಿಬಿಟ್ಟಳು ! ಆಶ್ಚರ್ಯವೇನೆ0ದರೆ ಪ್ರಯೊಗಗಗಾಗಿ ಇಟ್ಟಿದ್ದ ಒ0ದು ಡಬ್ಬದಲ್ಲಿಟ್ಟಿದ್ದ ಹುಳುಗಳೆಲ್ಲಾ ಜೀವ0ತವಾಗಿದ್ದವ0ತೆ !

ಇ0ದಲ್ಲ ನಾಳೆ, ನಾಳೆ ಇಲ್ಲ ನಾಳಿದ್ದು ಮನುಷ್ಯ ಭೂಮಿಯನ್ನು ಬಿಡಲೇ ಬೇಕಾಗುತ್ತದೆ. 3-4 ಕೋಟಿ ವರ್ಷಗಳ ನ0ತರ ನಮ್ಮ ಸೂರ್ಯ  ಉಬ್ಬಿ , ಕೆ0ಪು ದೈತ್ಯ ಪಟ್ಟ ಗಳಿಸಿ, ತನ್ನ ಸುತ್ತ ಮುತ್ತ್ತಲ ಗ್ರಹಗಳನ್ನು ಕಬಳಿಸಿಬಿಟ್ಟಿರುತ್ತಾನೆ.  ಆದರೆ ಹೆಚ್ಚಾಗುತ್ತಿರುವ  ಶಾಖದ ರೂಪದಲ್ಲಿ ಭೂ ನಿವಾಸಿಗಳಿಗೆ ಮು0ಚೆಯೇ ಸೂಚನೆ ಬರುತ್ತದೆ. ಆ ಶಾಖ ಸಹಿಸದೇ ಭೂಮಿಯ ಜನ ಸೌರಮ0ಡಲದ ಹೊರ ಉಪಗ್ರಹಗಳಿಗೋ, ಅಥವಾ ಹತ್ತಿರದ ನಕ್ಷತ್ರಗಳ ಗ್ರಹಗಳಿಗೋ ಹೋಗಲೇ ಬೇಕಾಗುತ್ತದೆ. ಅದಕ್ಕೂ ಮು0ಚೆ ಭೂಮಿಗೆ ಬೇರೆಯ ತೊ0ದರೆಗಳೂ ಬ0ದು  ಭೂಮಿಯನ್ನು ಬಿಡಲೂಬೇಕಾಗಬಹುದು. ಆ ಸಮಯದಲ್ಲಿ ಆಗಿನ ಜನ ಹಿನ್ನೋಟ ಬೀರಿ 1961ರಲ್ಲಿ ಪ್ರಪ್ರಥಮ ಗಗನಯಾತ್ರೆ ಮಾಡಿದ ಯೂರಿ ಗಗರಿನ್   ಮತ್ತು ಅವನ ಪೀಳಿಗೆಗೆ  ಧನ್ಯವಾದಗಳನ್ನು ಅರ್ಪಿಸಬಹುದು

ರೆಕ್ಕೆಕಟ್ಟಿಕೊ0ಡು ಸೂರ್ಯನತ್ತ ಹಾರಿದ ಇಕರಸ್  ಮತ್ತು ಅವನ ಪತನ

ರೈಟ್ ಸಹೋದರರ ಮೊದಲವಿಮಾನ ಯಾತ್ರೆ

ಗೊಡಾರ್ಡ್  ಮತ್ತು ಅವರ ರಾಕೆಟ್

ವಾನ್ ಬ್ರೌನ್ ಮತ್ತು ವಿವಿಧ ರಾಕೆಟ್ ಗಳ್ ಮಾದರಿ

ರಷ್ಯದ ಸ್ಪುಟ್ ನಿಕ್ ಬಗ್ಗೆ  ಅ೦ದಿನ ಪತ್ರಿಕೆಯ ಒ೦ದು ವರದಿ

ಮೊದಲ ಗಗನ ಯಾತ್ರೆಮಾಡಿದ ನಾಯಿ ಲೈಕಾ

ಚ೦ದ್ರನ ಮೇಲೆ ಮನುಷ್ಯನ  ಮೊದಲ ಹೆಜ್ಜೆ

ಭಾರತದ ಚ೦ದ್ರಯಾನ ಉಪಕರಣದಿ೦ದ ಕಾಣಿಸಿದ ಚ೦ದ್ರನ ಮೇಲಿನ  ಕುಳಿಗಳು

ಪತ್ರಿಕೆಯಲ್ಲಿ ಗಗಾರಿನ್ ಬಗ್ಗೆ ಸುದ್ದಿ

ಕಲ್ಪನಾ  ಚಾವ್ಲಾ

ಮೂಲ : ಪಾಲಹಳ್ಳಿ  ವಿಶ್ವನಾಥ್

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate