ಶೈಕ್ಷಣಿಕ ಬೋಧನೆಗೆ ಇಂದು ಮಗುವು ಕೇಂದ್ರಬಿಂದುವಾಗಿದ್ದಾನೆ. ಈ ಮಗುವಿನ ಅವಶ್ಯಕತೆಯನ್ನು ಅರಿತು ಇಂದು ಶಿಕ್ಷಕರಿಗೆ ಅನೇಕ ರೀತಿಯ ತರಬ್ರ್ತಿಗಳನ್ನು ಈ ಸಂಬಂಧ ನೀಡಲಾಗುತ್ತದೆ. ಈ ನಡುವೆ ಶಿಕ್ಷಕ ಪಾಠ ಬೋಧಿಸಲು ತಯಾರಾದರೆ ಮಕ್ಕಳು ಇದನ್ನು ಕಲಿಯಲು ತಯಾರಾಗಿರುತ್ತಾರೆ. ಆದರೆ ಆಟ, ಸಂಗೀತ, ವ್ಯಾಯಾಮ, ನೃತ್ಯದಂತ ಚಟುವಟಿಕೆಗಳನ್ನು ಬಹಳಷ್ಟು ಪಾಠಕ್ಕೆ ಉತ್ತೇಜನ ಹಾಗೂ ಪೂರಕವಾಗಿರುವುದರಿಂದ ಇವುಗಳನ್ನು ಸಹ ಕಲಿಸುವಲ್ಲಿ ಆಗಾಗ ಶಿಕ್ಷಕ ಬಳಸಿಕೊಳ್ಳುವ ಅವಶ್ಯಕತೆ ಕಂಡುಬರುತ್ತಿದೆ. ಇದರಿಂದ ಮಕ್ಕಳಲ್ಲಿ ಏಕಾಗ್ರತೆ ಪಾಠದಲ್ಲಿ ಆಸಕ್ತಿ ಹಾಗೂ ಮಾನಸಿಕ, ದೈಹಿಕ ಆರೋಗ್ಯವನ್ನುಂಟು ಮಾಡಿ ಪಾಠ ಕಲಿಯುವಲ್ಲಿ ಮಕ್ಕಳು ಸರ್ವಸನ್ನದ್ಧರಾಗಿರುವಂತೆ ಮಾಡುವ ಕಾಯಕದಲ್ಲಿ ಶಿಕ್ಷಕ ವೃಂದವು ಈಗಾಗಲೇ ಶ್ರಮಿಸುತ್ತಿದೆ.
ಈ ನಿಟ್ಟಿನಲ್ಲಿ ದೈಹಿಕ ಶಿಕ್ಷಣ, ಆರೋಗ್ಯ ಶಿಕ್ಷಣ, ಯೋಗ ಶಿಕ್ಷಣ (ಜೀವನ ವಿಜ್ಞಾನ) ಮತ್ತು S.U.P.W. ಅವಧಿಗಳನ್ನು ಮೀಸಲಿಟ್ಟಿದೆ. ಈ ಚಟುವಟಿಕೆಗಳ ಸಂಬಂಧ ಶಿಕ್ಷಕರುಗಳಿಗೆ ತರಬೇತಿಗಳನ್ನು ನೀಡಲಾಗಿದೆ.
ಜೀವನ ವಿಜ್ಞಾನ(ದೈಹಿಕ ಶಿಕ್ಷಣ, ಆರೋಗ್ಯ ಶಿಕ್ಷಣ, ಯೋಗ ಶಿಕ್ಷಣ)ದಲ್ಲಿ ಅನೇಕ ವಿವಿಧ ಆಟಗಳು, ವ್ಯಾಯಾಮ, ಆಹಾರ, ಪದ್ಧತಿ, ಮೌಲ್ಯಗಳು, ಆರೋಗ್ಯದ ರೂಢಿಗಳು ಶಿಕ್ಷಣಕ್ಕೆ ಅಂದರೆ. ಭಾಷೆ, ಗಣಿತ, ವಿಜ್ಞಾನ, ಸಮಾಜ ಪಠ್ಯಕ್ಕೆ ಪೂರಕ ಅಂಶಗಳನ್ನು ನೀಡುತ್ತದೆ. ಅದನ್ನು ಬಳಸಿಕೊಳ್ಳಲು ಕ್ರೀಯಾಶೀಲನಾದ ಶಿಕ್ಷಕನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಸರ್ವಸನ್ನದ್ಧನಾಗಿದ್ದಾನೆ.ಹಾಗೂ ದೈಹಿಕ ಶಿಕ್ಷಣ ಗುರಿ ಉದ್ದೇಶಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಪಡುತ್ತಿದ್ದನೆ.
ಜೀವನ ಪ್ರಗತಿಗೆ ಬೌದ್ಧಿಕ ವಿಕಾಸ ಅನಿವಾರ್ಯವಾಗಿದೆ. ಹಾಗಾಗಿ ಬೌದ್ಧಿಕ ಶಿಕ್ಷಣ ಮಹತ್ವ ಪಡೆದಿದೆ. ಆದರೆ ಈ ಪ್ರಗತಿ ಎಮ್ಬ ಭಾಣವು ಸಾಗಲು ಬಿಲ್ಲಿನಂತೆ ಆರೋಗ್ಯವುಳ್ಳ ಶರೀರದ ಮೇಲೆ ಅವಲಂಬಿತವಾಗಿದೆ. ಇದೇ ಸೃಷ್ಠಿಯ ರಹಸ್ಯ ಇವೆರಡನ್ನು ಶಿಕ್ಷಣದಲ್ಲಿ ಬಿಡಿಸಲಾರದ ಗಂಟಾಗಿದೆ. ಹಾಗಾಗಿ ಇವರೆಡನ್ನು ಬಾಣ ಬಿಲ್ಲಿಗಿರುವ ಸಂಬಂಧವನ್ನು ಕಲ್ಪಿಸುತ್ತಾ ಅವೆರಡನ್ನು ಒಂದೇ ಮುಖ್ದ ಎರಡು ಕಣ್ಣುಗಳಂತೆ ರಕ್ಷಿಸುವ ಅನಿವಾರ್ಯತೆ ನಮಗಿಂದು ಎದ್ದು ಕಾಣುತ್ತದೆ.
ಕೊನೆಯ ಮಾರ್ಪಾಟು : 7/22/2020