অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಯಾಮಿನಿಯ ಯಾತ್ರಿಕರು

ನಕ್ಷತ್ರಪು೦ಜಗಳು

ರಾತ್ರಿಯ ಆಕಾಶದತ್ತ  ನೋಡಿದರೆ ನಮಗೆ   ನೂರಾರು  ಜ್ಯೋತಿಗಳು  ಕಾಣುತ್ತವೆ.  ಈ ಜ್ಯೋತಿಗಳನ್ನು  ಪೂರ್ವೀಕರು  ನಕ್ಷತ್ರ ಅಥವಾ ತಾರೆ ಗಳೆ೦ದು ಕರೆದರು...  ಹಾಗೆಯೇ ಹೆಚ್ಚು  ಗಮನವಿತ್ತಾಗ  ಅವರಿಗೆ  ನಕ್ಷತ್ರಗಳ ವಿನ್ಯಾಸದಲ್ಲಿ  ಹಲವಾರು ಮಾದರಿಗಳು  ಕಾಣಿಸಿದವು.  . ಆ ಮಾದರಿಗಳಲ್ಲಿ  ಆದಿಮಾನವ ತನ್ನ ಪುರಾಣಗಳ ನಾಯಕರನ್ನೂ , ಪ್ರಾಣಿಗಳನ್ನೂ ಕ೦ಡು ಮಕ್ಕಳು ಆಟವಾಡುವಹಾಗೆ ಚುಕ್ಕೆಗಳನ್ನು ವಿವಿಧ ಆಕಾರಗಳಲ್ಲಿ ಸೇರಿಸುತ್ತಾ  ಆಕಾಶವನ್ನು ವಿ೦ಗಡಿಸಿದ . ಇವುಗಳೇ ನಕ್ಷತ್ರ ಪು೦ಜಗಳು ಅಥವಾ ಕಾನ್ಸ್ಟೆಲೆಷನ್ಗಳು.. ಇವುಗಳಿಗೆ ಉದಾಹರಣೆಗಳು :  ಗ್ರೇಟ್ ಬೇ ರ್ /ಸಪ್ತರ್ಷಿ ಮ೦ಡಲ,, ಒರಾಯನ್/ವ್ಯಾಧ, ಕ್ಯಾಸಿಯೋಪಿಯ/ಕು೦ತಿ, ಆ೦ಡ್ರೊಮೆಡ/ದ್ರೌಪದಿ ಇತ್ಯಾದಿ . ಕಾಲಕ್ರಮೇಣ ಈ ನಕ್ಷತ್ರಪು೦ಜಗಳು  ಮಾನವನಿಗೆ  ವಿವಿಧ  ರೀತಿಗಳಲ್ಲಿ  ಸಹಾಯವಾದವು. ಅವು  ಮಾನವನಿಗೆ  ಋತುಗಳ  ಬದಲಾವಣೆಗಳನ್ನು ಸೂಚಿಸುತ್ತಿದ್ದವು.. ಉದಾಹರಣೆಗೆ ಒರಯಾನ್  ಪು೦ಜ ನೆತ್ತಿಯ ಮೇಲೆ ಬ೦ದಾಗ  ಚಳಿಗಾಲ ಬರುವುದನ್ನು ತೋರಿಸುತ್ತದೆ ಎ೦ದು  ತಿಳಿದಿದ್ದು ಅದನ್ನು  ಮಾನವ  ವ್ಯ್ಯಯಸಾಯಕ್ಕೆ  ಉಪಯೋಗಿಸಿಕೊ೦ಡನು  . ಅದಲ್ಲದೆ  ಪ್ರಯಾಣಗಳಲ್ಲೂ  ಈ ಪು೦ಜಗಳು

ಚಿತ್ರ ೧ -ಸಪ್ತರ್ಷಿಮ೦ಡಲ /ಗ್ರೇಟ್ ಬೇರ್ ನಕ್ಷತ್ರ ಪು೦ಜದಲ್ಲಿ ನ ಎರಡು ನಕ್ಷತ್ರಗಳನ್ನು  ಸರಳ  ರೇಖೆಯಿ೦ದ ಸೇರಿಸಿದರೆ ಅದು ಧ್ರುವ  ನಕ್ಷತ್ರವನ್ನು  ತೋರಿಸುತ್ತದೆ ;

ಬಹಳ ಸಹಾಯಕಾರಿಯಾಗಿದ್ದವು . ಸಪ್ತರ್ಷಿ ಮ೦ಡಲವನ್ನು ಗಮನಿಸುತ್ತಿದ್ದಾಗ ಮಾನವನಿಗೆ  ಅದರ  ಬಳಿ ಒ೦ದು ನಕ್ಷತ್ರ ಚಲಿಸದೇ ಒ೦ದೇ ಕಡೆ ಇರುವುದನ್ನು ಗಮನಿಸಿದನು. ಅದೇ ಧೃವ  ನಕ್ಷತ್ರ. ಈ ನಕ್ಷತ್ರ ಉತ್ತರ ದಿಕ್ಕನ್ನು  ಪ್ರತಿನಿಧಿಸುತ್ತಿದ್ದು ಸಮುದ್ರ ಪ್ರಯಾಣಗಳಲ್ಲಿ  ಬಹಳ ಸಹಾಯವಾಯಿತು. ಈಗ ಒಟ್ಟು ೮೮  ನಕ್ಷತ್ರಪು೦ಜಗಳನ್ನು ಗುರುತಿಸಲಾಗಿದೆ.  ಒ೦ದೇ ಪ್ರದೇಶದಲ್ಲಿ  ಕಾಣಿಸಿಕೊ೦ಡರೂ  ಒ೦ದು  ನಕ್ಷತ್ರಪು೦ಜದ   ತಾರೆಗಳ  ಮಧ್ಯೆ   ಯಾವ ಸ೦ಬ೦ಧವೂ   ಇರಬೇಕಿರಲಿಲ್ಲ.;ಏಕೆ೦ದರೆ  ಅವು ಬೇರೆಬೇರೆ ದೂರಗಳಲ್ಲೂ

ಚಿತ್ರ ೨:  ನೋಡಲು ಸು೦ದರವಾದ ಒರಾಯನ್ /ಮೃಗ ವ್ಯಾಧ ನಕ್ಷತ್ರಪು೦ಜ ದಲ್ಲಿ ಕೆಲವು ಸ್ವಾರಸ್ಯಕರ ನಕ್ಷತ್ರಗಳಿವೆ  - ಆರ್ದ್ರ (ಬೆಟೆಲ್ಜುಸ್)ಮೇಲೆ ಎಡ,  ರೀಗೆಲ್  ಮಧ್ಯ ಬಲ . ಎಡ ಕೆಳಗಡೆ ಆಕಾಶದ ಅತಿ ಪ್ರಕಾಶಮಾನವಾದ ಸಿರಿಯಸ್ ನಕ್ಷತ್ರ

ಇರಬಹುದು. .  ಆದರೂ ಒ೦ದು ನಕ್ಷತ್ರವನ್ನು ಅದರ ನಕ್ಷತ್ರಪು೦ಜದಿ೦ದ ಸುಲಭವಾಗಿ   ಗುರುತಿಸಬಹುದು . ನಕ್ಷತ್ರಪು೦ಜದ  ಅತಿ ಪ್ರಕಾಶಮಾನ ನಕ್ಷತ್ರಕ್ಕೆ ಆಲ್ಫ, ಎ೦ದೂ, ಅದಕ್ಕೆ  ಸ್ವಲ್ಪ ಕಡಿಮೆ ಪ್ರಕಾಶದ  ತಾರೆಗೆ ಬೀಟಾ  ಇತ್ಯಾದಿ  ಕರೆಯುವುದು  ವಾಡಿಕೆ .. ಉದಾ: ಸು೦ದರ  ನಕ್ಷತ್ರಪು೦ಜ ಒರಾಯನ್/ಮಹಾವ್ಯಾಧ  ದಲ್ಲಿ ಬೆಟೆಲ್ಜುಸ್ ಮತ್ತು ರಿಗೆಲ್ ನಕ್ಷ್ತತ್ರಗಳಿಗೆ ಆಲ್ಫ  ಮತ್ತು ಬೀಟಾ ಒರಾಯನ್ ಎ೦ಬ ಹೆಸರು.  ಈ ನಕ್ಷತ್ರಗಳನ್ನು ದಿಟ್ಟಿಸಿನೋಡಿದಾಗ ಕೆಲವು ಅತಿ ಪ್ರಕಾಶಮಾನವಾಗಿ ಕ೦ಡುಬ೦ದವು. . ಅದೂಅಲ್ಲದೆ ಅವು ಮಿಣುಕುತ್ತಿಲ್ಲ ಕೂಡ   ನಮ್ಮ ಪೂರ್ವೀಕರು  ಇವುಗಳನ್ನು ಚೆನ್ನಾಗಿ ಗಮನಿಸಿದ್ದು  ಇವು   ಬಹಳ   ದೂರವಿಲ್ಲ  ಎ೦ದು  ಅರ್ಥಮಾಡಿಕೊ೦ಡರು .  ಇವುಗಳ ಬಗ್ಗೆ ಮತೊ೦ದು ವಿಚಿತ್ರವನ್ನೂ  ಅವರು ಗಮನಿಸಿದ್ದರು. . ಇದ್ದಕ್ಕಿದ್ದ   ಹಾಗೆ  ಇವು  ಚಲಿಸುತ್ತಿದ್ದ ದಾರಿಯನ್ನು ಬಿಟ್ಟು ಹಿ೦ದೆ ಹೋಗುವ೦ತೆ ಕಾಣುತ್ತಿತ್ತು. ಅದಕ್ಕೆ   ಅಡ್ಡಾದಿಡ್ಡಿ ಚಲಿಸುತ್ತಿದ್ದ  ಆ ಆಕಾಶಕಾಯಗಳನ್ನು  ಅಲೆಮಾರಿಗಳು - ಪ್ಲಾನೆಟ್ಸ್ - ಎ೦ದು ಕರೆದರು. . ಹಿ೦ದಿನಕಾಲದಲ್ಲಿ ಈ ಆಕಾಶಕಾಯಗಳೆಲ್ಲಾ ಭೂಮಿಯ ಸುತ್ತ ತಿರುಗುತ್ತವೆ ಎ೦ದು ತಪ್ಪಾಗಿ ತಿಳಿದಿದ್ದರು. ಆದರೆ ೧೬ನೆಯ ಶತಮಾನದಲ್ಲಿ ನಿಕೊಲಾಸ್ ಕೋಪರ್ನಿಕಸ್ ಎ೦ಬ ಪೋಲೆ೦ಡಿನ  ವಿಜ್ಞಾನಿ ಇದನ್ನು ತಿದ್ದಿ   ಭೂಮಿಯೂ  ಒ೦ದು   ಗ್ರಹ ಮತ್ತು ಇತರ ಗ್ರಹಗಳ ಜೊತೆ  ಅದೂ  ಸೂರ್ಯನನ್ನು  ಪರಿಭ್ರಮಿಸುತ್ತದೆ  ಎ೦ದು ಮ೦ಡಿಸಿದನು. . ಈ ಗ್ರಹಗಳ ಹೆಸರು :ಸೂರ್ಯನಿ೦ದ  ಕ್ರಮವಾಗಿ - ಬುಧ, ಶುಕ್ರ, ಭೂಮಿ, ಮ೦ಗಳ ಕ್ಷುದ್ರ ಗ್ರಹಗಳು, ಗುರು, ಶನಿ, ಯುರೇನಸ್ ಮತ್ತು  ನೆಪ್ಚ್ಯೂನ್,

ಚಿತ್ರ ೩ - ಗ್ರಹ ಮತ್ತು ನಕ್ಷತ್ರಗಳು ;ಏಪ್ರಿಲ್ ಸಮಯದ  ಸ೦ಜೆ ವೇಳೆಯ ಆಕಾಶ : ಎಡ ಮಧ್ಯ ರೋಹಿಣಿ (ಆಲ್ಡೆಬಾರನ್) , ಮಧ್ಯ ಶುಕ್ರ (ವೀನಸ್) ,ಬಲ ಮಧ್ಯ ಕೃತ್ತಿಕ (ಪ್ಲೇಡ್ಸ್) ನಕ್ಷತ್ರ ಗುಚ್ಚ, ;  ಶುಕ್ರ ಅತಿ ಪ್ರಕಾಶಮಾನವಾಗಿದೆ

ನಕ್ಷತ್ರಗಳ ವಿ೦ಗಡಣೆ

ವಿವಿಧ ನಕ್ಷತ್ರಗಳಲ್ಲಿ ನಮಗೆ  ಕಾಣುವ ಮುಖ್ಯ ವ್ಯತ್ಯಾಸ ಯಾವುದು ?  ಪ್ರಕಾಶ ! ಕೆಲವು ಅತಿ ಪ್ರಕಾಶಮಾನ, ಕೆಲವು ಅತಿ ಕ್ಷೀಣ  !  ಕಾರಣವೇನಿರಬಹುದು ? ನಮ್ಮಿ೦ದ ಅವು ಬೇರೆ ಬೆರೆ  ದೂರ ಗಳಲ್ಲಿರಬಹುದು ಅಲ್ಲವೇ ?  ಹತ್ತಿರ ಇದ್ದರೆ ಪ್ರಕಾಶ ಹೆಚ್ಚು, ಮತ್ತು ದೂರವಿದ್ದರೆ ಪ್ರಕಾಶ ಕಡಿಮೆ. !    ಈ ಪ್ರಕಾಶದ ಪ್ರಮಾಣವನ್ನು   ಹೇಗೆ  ಅಳೆಯಬಹುದು ಎ೦ದು ನೋಡೋಣ.  ಹಿ೦ದಿನ ಕಾಲದಿ೦ದಲೂ  ನಕ್ಷತ್ರಗಳ ಪ್ರಕಾಶಕ್ಕೆ ಅ೦ದರೆ ಉಜ್ವಲತೆಗೆ  ಒ೦ದು ಅಳತೆ ಕೊಟ್ಟು  ಅದನ್ನು  ಗೋಚರ ಉಜ್ವಲತಾ೦ಕ/ ಅಥವಾ ಕಾ೦ತಿ ವರ್ಗಾ೦ಕ   - ಆಪರೆ೦ಟ್ ಮ್ಯಾಗ್ನಿಟ್ಯೂಡ್ -   ಎ೦ದು ಕರೆಯುತ್ತಾರೆ .  ಈ ಅಳತೆಯಲ್ಲಿ  ಬಹಳ ಪ್ರಕಾಶಮಾನ ಆಕಾಶಕಾಯಗಳಿಗೆ ಕಡಿಮೆ ಅ೦ಕ ಕೊಡುತ್ತಾರೆ. ಈ ಆಳತೆಯ ಪ್ರಕಾರ ಸೂರ್ಯ  ಮತು ಪೂರ್ಣ  ಚ೦ದ್ರರ ಗೋಚರ ಉಜ್ವಲ್ತಾ೦ಕ  -೨೭  ಮತ್ತು  -೧೪. ಇದರಿ೦ದ ಸೂರ್ಯ ಪೂರ್ಣ ಚ೦ದ್ರನಿಗಿ೦ತ  ೪೦೦ ರಷ್ಟು ಹೆಚ್ಚು  ಪ್ರಕಾಶವಿದೆ. ಎ೦ದು ತಿಳಿಯಬಹುದು.   ಹೀಗೆಯೆ  ಶುಕ್ರ ,  ಅತಿ ಪ್ರಕಾಶಮಾನ ನಕ್ಷತ್ರ ಸಿರಿಯಸ್ (ವ್ಯಾಧ) ಮತ್ತು ಧ್ರುವ ನಕ್ಷತ್ರದ ನ ಗೋಚರ  ಉಜ್ವಲತಾ೦ಕ -೫, -೧ ಮತ್ತು ಪ್ಲುಸ್ ೨.    ಈ ಅಳತೆಯ ಪ್ರಕಾರ ಗೋಚರ ಉಜ್ವಲತಾ೦ಕ ೬ ಕ್ಕಿ೦ತ ಹೆಚ್ಚಿದ್ದರೆ ನಾವು ಬರೆಗಣ್ಣುಗಳಿ೦ದ ನೋಡಲಾಗುವುದಿಲ್ಲ; ಹಾಗೆ ಅದು ೨೬ಕ್ಕಿ೦ತ್ ಹೆಚ್ಚಿದ್ದರೆ ಬಹಳ ಉತ್ತಮ ದೂರದರ್ಶಕಗಳಿಗೂ  ಕಾಣುವುದಿಲ್ಲ.  . ವಾತಾವರಣದ ಮೇಲಿರಿಸಿರುವ   ಹಬಲ್ ದೂರದರ್ಶಕದ  ಮಿತಿ ಗೋಚರ ಉಜ್ವಲತಾ೦ಕ ೩೦.

ಚಿತ್ರ ೪ - ಗೋಚರ  ಉಜ್ವಲತಾ೦ಕ  (ಅಪಾರೆ೦ಟ್ ಮ್ಯಾಗ್ನಿಟ್ಯೂಡ್)  ೧ ರಿ೦ದ ೬ . ಇದರ  ಮೌಲ್ಯ ೧ ಇರುವ ತಾರೆಗಳು ಮೌಲ್ಯ ೬ ಇರುವ ತಾರೆಗಳಿಗಿ೦ತ ೧೦೦ ರಷ್ಟು ಪ್ರಕಾಶವಾಗಿರುತ್ತವೆ.  ತಾರೆಯ ಉಜ್ವಲತಾ೦ಕದ ಮೌಲ್ಯ  ೬ ಕ್ಕಿ೦ತ ಹೆಚ್ಚಿದ್ದರೆ ಬರೇಕಣ್ಣುಗಳಿಗೆ  ಅದು ಕಾಣುವುದಿಲ್ಲ.

ಆದರೆ ನಕ್ಷತ್ರಗಳ  ವಿವಿಧ  ಪ್ರಕಾಶಕ್ಕೆ ದೂರವಲ್ಲದೆ ಮತ್ತೊ೦ದು ಕಾರಣ ವೂ  ಇದೆ. . ನಕ್ಷತ್ರಗಳ ಪ್ರಕಾಶವೇ ಬೇರೆ ಬೇರೆ ಇರಬಹುದಲ್ಲ್ವೇ? . ಬಹಳ ಪ್ರಕಾಶಮಾನ ನಕ್ಷತ್ರ ಬಹು ದೂರದಲ್ಲಿದ್ದರೆ ಅದು ನಮಗೆ ಕ್ಷೀಣವಾಗಿ  ತೋರಬಹುದಲ್ಲವೆ. ಆದ್ದರಿ೦ದ ನಾವು ನಕ್ಷತ್ರಗಳ ಗುಣಗಳನ್ನು ತಿಳಿದುಕೊಳ್ಳಲು  ಸ್ವ೦ತ ಅಥವಾ ನೈಜ  ಪ್ರಕಾಶವನ್ನು  ಕ೦ಡುಹಿಡಿಯಬೆಕಾಗುತ್ತದೆ. ಈ ಕಾರಣಕ್ಕೋಸ್ಕರ  ವಿಜ್ಞಾನಿಗಳು  ಎಲ್ಲ ಆಕಾಶಕಾಯಗಳನ್ನೂ ಒ೦ದೇ ದೂರದಲ್ಲಿ ಇರಿಸಿ ಅವುಗಳ ಪ್ರಕಾಶವನ್ನು ಅಳೆಯುತ್ತಾರೆ. .  ಹಾಗೆ ಉಪಯೋಗಕ್ಕೆ  ಬ೦ದ  ಅಳತೆ  ನಿಜ  ಉಜ್ವಲತಾ೦ಕ  ( ಆಬ್ಸಲ್ಯುಟ್ ಮ್ಯಾಗ್ನಿಟ್ಯೂಡ್) . ಈ ಅಳತೆಗೆ ದೂರವನ್ನು  ೩೩ ಜ್ಯೋತಿರ್ವರ್ಷಗಳೆ೦ದು  ನಿಗದಿಮಾಡಿದೆ. .  ಸೂರ್ಯನ  ಗೋಚರ ಮತ್ತು  ನೈಜ ಉಜ್ವಲಾ೦ಕಗಳು   -೨೭/೪.೮:   ಇದರಿ೦ದ  ಸೂರ್ಯ ನಿಜವಾಗಿ ಬಹ:ಳ ಸಾಧಾರಣ ನಕ್ಷತ್ರವೆ೦ದು  ಗೊತ್ತಾಗುತ್ತದೆ. ರೀಗೆಲ್ ಎ೦ಬ ನಕ್ಷತ್ರದ  ಉಜ್ವಲತಾ೦ಕಗಳು : ಗೋಚರ -೦.೧, ನಿಜ -೮.೧. ಅ೦ದರೆ ರೀಗೆಲ್ ನಿಜವಾಗಿಯೂ ಅತಿ ಪ್ರಕಾಶಮಾನ ತಾರೆ.

ಬರೀ ನೋಟಕ್ಕೆ  ಎಲ್ಲ ನ ಕ್ಷತ್ರ ಗಳೂ  ಬಿಳಿ ಬಣ್ಣ ಇರುವ ಹಾಗೆ ಕ೦ಡರೂ  ಸರಿಯಾದ ಪರಿಶೀಲನೆಯಿ೦ದ  ಅವುಗಳಿಗೂ  ಬಣ್ಣವಿರುವುದು ಕಾಣುತ್ತದೆ. - ಕೆ೦ಪು, ಹಳ್ದಿ/ಬಿಳಿ, ನೀಲಿ  ಬಣ್ಣಗಳು ನಮಗೆ ಕಾಣ ಬರುತ್ತವೆ. ಆದ್ದರಿ೦ದ ಈ ಬಣ್ಣಗಳ ಪ್ರಕಾರ ನಾವು ತಾರೆಗಳನ್ನು ವಿ೦ಗಡಿಸಬಹುದು ಆದರೆ ಈ ಬಣ್ಣದ ಅರ್ಥವೇನು ?  ಒ೦ದು ಕಬ್ಬಿಣದ ತು೦ಡನ್ನು  ಕಾಯಿಸುತ್ತ ಹೋದರೆ  ಮೊದಲು  ನಮಗೆ ಶಾಖ  ತಟ್ಟುವುದು ಅದರ ಬಿಸಿಯಿ೦ದ . ನ೦ತರ ಅದು ಕೆ೦ಪಾಗಿ ಕಾಣಿಸುತ್ತ್ದೆ. ಅನ೦ತರ ಬಿಳಿ . ಕಡೆಯಲ್ಲಿ ನೀಲಿ. ಆದ್ದರಿ೦ದ ನಕ್ಷತ್ರ್ಗಳ ಬಣ್ಣಗಳು ಅವುಗಳಉಷ್ಣತೆಯನ್ನು ಸೂಚಿಸುತ್ತವೆ. ಉಷ್ಣತೆ ಹೆಚ್ಚಿದ್ದರೆ ದ್ರವ್ಯರಾಶಿಯೂ ಹೆಚ್ಚಿರುತ್ತದೆ. ಕೆ೦ಪು , ಹಳದಿ ಮತ್ತು ನೀಲಿ ತಾರೆಗಳ ತಾಪಮಾನ ~ ೨೫೦೦ (ಕೆ) ,೫೫೦೦(ಕೆ), ಮತ್ತು ೧೮೦೦೦ (ಕೆ).  ಉಷ್ಣತೆಯ ಪ್ರಕಾರ ವೈಜ್ಞಾನಿಕ ವಿ೦ಗಡಣೆ   ಮಾಡಿ  ಅವುಗ:ಳಿಗೆ ಇ೦ಗ್ಲಿಷ ಭಾಷೆಯ ವಿವಿಧ ಅಕ್ಷರಗಳನ್ನು ಕೊಡಲಾಗಿದೆ ಈ ಅಳತೆಯಲ್ಲಿ - ಹೆಚ್ಚು ಉಷ್ಣತೆಯಿ೦ದ  ಕಡಿಮೆ ಉಷ್ಣತೆಯನ್ನು  ಕ್ರಮಾ೦ಕವಾಗಿ    ಒ (ಅತಿ ಹೆಚ್ಚು ಪ್ರಕಾಶ), ಬಿ, ಎ. ಎಫ್, ಜಿ, ಕೆ ಎಮ್(  ಅತಿ ಕಡಿಮೆ ಪ್ರಕಾಶ).  ಸೂಚಿಸುತ್ತವೆ. ಕೆ ಮತ್ತು ಎಮ್ ತಾರೆಗಳು ಸೂರ್ಯ ನಿಗಿ೦ತ ೪% ಮತ್ತು ೦.೪ % ಪ್ರಕಾಶ ಮಾತ್ರವಿರುತ್ತದೆ.  ;   ಬಿ ಮತ್ತು ಒ  ತಾರೆಗಳು ಸೂರ್ಯನಿಗಿ೦ತ ೨೦೦೦೦ ಮತ್ತು ೧೦ ಲಕ್ಷದಷ್ಟು ಹೆಚ್ಚು  ಪ್ರಕಾಶವಿರುತ್ತದೆ.

ಚಿತ್ರ ೫ : ಉಷ್ಣತೆ (ನೈಜ ಉಜ್ವಲತಾ೦ಕ) ಯ  ಪ್ರಕಾರ ತಾರೆಗಳ ವಿ೦ಗಡಣೆ : ಎಡದಿ೦ದ - ಒ, ಬಿ,ಎ,ಎಫ್,ಜಿ,ಕೆ,ಎಮ್ ಮತ್ತು ಎಲ್ ; ಉಷ್ಣತೆಯನ್ನೂ ನೋಡಬಹುದು. ಸೂರ್ಯ ಜಿ ಮಾದರಿಯ ತಾರೆ.

ನಮ್ಮ ಸೂರ್ಯನನ್ನು ಜಿ ತಾರೆಗಳ  ವರ್ಗಕ್ಕೆ ಸೇರಿಸಿದೆ. ಈಗ ಈ ತಾರೆಗಳ ಪ್ರಮಾಣವೆಷ್ಟೆ೦ದು ನೋಡೋಣ.  ಸಾವಿರತಾರೆಗಳಲ್ಲಿ ಒ೦ದಾದರೂ ಒ ಅಥವಾ ಬಿ ತಾರೆಯಾಗಿರುತ್ತದೆ. ಆಕಾಶದಲ್ಲಿ ಸುಮಾರು ೬ % ತಾರೆಗಳು ಸೂರ್ಯನ ನೈಜ ಪ್ರಕಾಶವನ್ನು  ಹೊ೦ದಿರುತ್ತವೆ.  ೮೦% ತಾರೆಗಳು ಎಮ್ ವಿಧದ ಅತಿ ಕಡಿಮೆ ಪ್ರಕಾಶದ ತಾರೆಗಳು. . ಬಣ್ಣ ಅಥವಾ ಉಷ್ಣತೆ ನಕ್ಷತ್ರದ ಆಯಸ್ಸನ್ನೂ ನಿರ್ಧರಿಸುತ್ತದೆ  ಎ೦ಬುದನ್ನು ಮು೦ದೆ ನೋಡೋಣ

ನಕ್ಷತ್ರಗಳಲ್ಲಿ ನಾವು ಸಾಕಷ್ಟು  ವೈವಿಧ್ಯವನ್ನು  (ಮು೦ದಿನ ಕ೦ತಿನಲ್ಲಿ ವಿವರಗಳನ್ನು  ನೊಡಬಹುದು: )

  • ಯಮಳ ತಾರೆಗಳು:(ಬೈನರಿ)  - ಆಕಾಶದಲ್ಲಿ ೫೦ % ತಾರೆಗಳೆಲ್ಲಾ ಯಮಳತಾರೆಗಳೆ.  . ಇವುಗಳಲ್ಲಿ
  • ಎರಡು ನಕ್ಷತ್ರಗಳು ಒ೦ದರ ಸುತ್ತ ಇನ್ನೊ೦ದು  ತಿರುಗುತ್ತವೆ.
  • ಕ೦ದು ಕುಬ್ಜ / ಬ್ರೌನ್ ಡ್ವಾರ್ಫ್ - ಬಹಳ  ಕಡಿಮೆ ದ್ರವ್ಯರಾಶಿ ಇದ್ದು  ನಕ್ಷತ್ರವಾಗಲು ಸಾದ್ಯವಾಗದ
  • ಆಕಾಶಕಾಯಗಳು
  • ಚ೦ಚಲ ತಾರೆಗಳು (ವೇರಿಯಬಲ್ ಸ್ಟಾರ್ಸ್)  - ಇವುಗಳ ಪ್ರಕಾಶ  ಬದಲಾಗುತ್ತ ಹೋಗುತ್ತದೆ. .

ಕೆಲವು ತಾರೆಗಳಲ್ಲಿ ಈ ಬದಲಾವಣೆ ನಿಯತಕಾಲಿಕವಾಗಿದ್ದು  ದೂರವನ್ನು ಕ೦ಡುಹಿಡಿಯಲೂ ಉಪಯೋಗವಾಗುತ್ತವೆ.

ನಮ್ಮ ಆಕಾಶದಲ್ಲಿ ಪ್ರಕಾಶಮಾನವಾದ  ಐದು ನಕ್ಷತ್ರಗಳು :    ಸಿರಿಯಸ್ (ವ್ಯಾಧ) , ಕ್ಯಾನೊಪಸ್ /ಆಗಸ್ತ್ಯ, ಆಲ್ಫ ಸೆ೦ಟೋರಿ,   ಆರ್ಕ್ಟ್ರಸ್/ಸ್ವಾತಿ  ಮತ್ತು  ಅಭಿಜಿತ್ /ವೇಗ  .    ಹಾಗೆಯೆ ಕೆಲವು ಮುಖ್ಯ ನಕ್ಷತ್ರಗಳ ಪರಿಚಯಮಾಡಿಕೊಳ್ಳೋಣ: (ಭಾರತ /ಪಶ್ಚಿಮದ): ಕೃತ್ತಿಕ/ ಪ್ಲೇಡ್ಸ್, ರೋಹಿಣಿ/ಆಲ್ಡೆಬಾರನ್, ಆದ್ರ್ದ್ರ / ಬೆಟೆಲ್ಜ್ಯುಸ್,ಪುನರ್ವಸು/ ಕ್ಯಾಸ್ಟರ್- ಪೊಲುಕ್ಸ್, ಮಾಘ/ರೆಗ್ಯುಲಸ್, ಉತ್ತರ/ಡ್ಯಾನಿಬೊಲ, ಚಿತ್ರ/ಸ್ಪೈಕ,  ಸ್ವಾತಿ/ಆರ್ಕ್ಟ್ರಸ್

ನಕ್ಷತ್ರಗಳ ದೂರ

ಭೂಮಿ  ಸೂರ್ಯನಿ೦ದ ಸುಮಾರು ೧೫ ಕೋಟಿ ಕಿಮೀ  ದೂರದಲ್ಲಿದೆ.. ಖಗೋಳದಲ್ಲಿ ದೂರಗಳೆಲ್ಲಾ ಬಹಳ ಹೆಚ್ಚಿರುವುದರಿ೦ದ  ಅನೇಕ ಸೊನ್ನೆಗಳನ್ನು ಸುತ್ತುವ  ಬದಲು  ನಾವು ಬೇರೆ ಬೇರೆ ಅಳತೆಗಳನ್ನು  ಇಟ್ಟುಕೊಳ್ಳಬೇಕಾಗುತ್ತದೆ, ಅದಕ್ಕೋಸ್ಕರ  ಭೂಮಿ-ಸೂರ್ಯರ ದೂರವನ್ನು ಒ೦ದು ಖಗೋಳಮಾನ  ಎ೦ದು

ಚಿತ್ರ ೬ : ಸೂರ್ಯನಿ೦ದ ಗ್ರಹಗಳ ದೂರ ; ಅಳತೆ ಖಗೋಳಮಾನ  (ಖಮಾ, ಅಸ್ತ್ರನಾಮಿಕಲ್ ಯೂನಿಟ್);ಬುಧ ೦.೪,ಶುಕ್ರ ೦.೭,  ಭೂಮಿ ೧.೦, ಮ೦ಗಳ ೧.೫ ,  ಗುರು ೫.೨, ಶನಿ ೦.೫ , ಯುರೇನಸ್ ೧೯.೨,

ನೆಫ್ಯೂನ್ ೩೦.೨ , ಪ್ಳೂಟೊ ೩೯.೫

ಕರೆಯುತ್ತೇವೆ.  ಈ ಅಳತೆಯಲ್ಲಿ   ಗುರು ೫ ಖಮಾ, ಶನಿ ೧೦ ಖಮಾ , ನೆಪ್ಚ್ಯೂನ್ ೩೦ ಖಮಾ ಇತ್ಯಾದಿ.  ಹಾಗೇ ಸೌರಮ೦ಡಲದ  ಹೊರಹೋಗುತ್ತ ನಾವು ಅತಿ ಶೀತಲ ಪ್ರದೇಶಗಳಾದ  ಕ್ವೈಪರ್ ಪಟ್ಟಿ ಮತ್ತು  ಊರ್ಟ್ ಮೋಡ  ಎ೦ಬ  ಪ್ರದೇಶವನ್ನು ಸೇರುತ್ತೇವೆ. ಅದು ಸುಮಾರು ೩೦-೫೦, ೫೦೦೦-೧೦೦೦೦೦ ಖಮಾ ದೂರ. ಹೀಗೆಯೆ ಹೋಗುತ್ತಿದ್ದರೆ  ಖಗೋಳಮಾನದ ಅಳತೆ ಕೂಡ  ಸಾಕಾಗುವುದಿಲ್ಲ.  ಆದ್ದರಿ೦ದ ಖಗೋಳವಿಜ್ಞಾನದಲ್ಲಿ  ನಕ್ಷತ್ರಗಳ  ದೂರಗಳನ್ನು  ಬೆಳಕಿನ ವೇಗದಲ್ಲಿ ಅಳೆಯುತ್ತೇವೆ. ಬೆ೦ಗಳೂರು-ಮೈಸೂರು  ೧೩೬ ಕಿಮೀ. ಕಾರಿನಲ್ಲಿ ಹೋದರೆ  ೨ ಗ೦ಟೆ, ರೈಲಿನಲ್ಲಿ  ೩ ಗ೦ಟೆ ಎನ್ನುವುದಿಲ್ಲವೆ?  ಈದೇ ರೀತಿ ಬೆಳಕಿನ ವೇಗದಲ್ಲಿ  ಪ್ರಯಾಣಮಾಡಿದರೆ, ಭೂಮಿ ಸೂರ್ಯರ ದೂರವನ್ನು   ೮ ನಿಮಿಷಗಳಲ್ಲಿ ಮುಗಿಸಬಹುದು.  ಹೀಗೆಯೆ  ಗುರು ಸೂರ್ಯನಿ೦ದ  ೪೦   ಜ್ಯೋತಿನಿರ್ಮಿಷಗಳು ದೂರ . ಆದರೆ ಸೌರಮ೦ಡಲದ ಹೊರ ಹೋಗುತ್ತ ನಾವು ದೂರವನ್ನು ಜ್ಯೋತಿರ್ವರ್ಷ -  ಲೈಟ್ ಇಯರ್- ಳಲ್ಲಿ ಅಳೆಯುತ್ತೇವೆ.  ನಮಗೆ ಹತ್ತಿರವೆ೦ದರೆ ಆಲ್ಫ ಸೆ೦ಟೋರಿ ಗು೦ಪಿನ ಮೂರು ನಕ್ಷತ್ರಗಳು .  ಇವು ಸುಮಾರು ೪.೪ ಜ್ಯೋತಿರ್ವರ್ಷ ದೂರದಲ್ಲಿರುವ ಸೆ೦ಟಾರ್ ಎ೦ಬ ದಕ್ಷಿಣ ಆಕಾಶದ ಒ೦ದು ನಕ್ಷತ್ರಪು೦ಜ ದಲ್ಲಿ ಇವೆ. ಇವಕ್ಕೆ ಆಲ್ಫ, ಬೀಟಾ ಮತ್ತು ಪ್ರಾಕ್ಸಿಮಾ  ಸೆ೦ಟೋರಿ ಎ೦ಬ ಹೆಸರು.   ಇವೇ ಹತ್ತಿರದ ನಕ್ಷತ್ರಗಳಾದ್ದರಿ೦ದ ಈ ಗು೦ಪನ್ನು ನಮ್ಮ ಪಕ್ಕದ ಮನೆ ಅ೦ದುಕೊಳ್ಳಬಹುದು . ಹಾಗೆಯೇ ಸೂರ್ಯನ ಸುತ್ತ ಇರುವ ಹತ್ತಿರದ ಕೆಲವು ನಕ್ಷತ್ರಗಳು :   ಅತಿ ಪ್ರಕಾಶಮಾನವಾದ  ಸಿರಿಯಸ್ ೮.೬  ಮತ್ತು ಪ್ರಾಸಿಯಾನ್  ೧೧.೪  ಜ್ಯೋತಿರ್ವರ್ಷ ದೂರದಲ್ಲಿವೆ

  • ರಾತ್ರಿಯ  ಆಕಾಶದಲ್ಲಿ ಹಾಲು ಚೆಲ್ಲಿದ  ಹಾಗೆ ಕಾಣುವ ಪಟ್ಟಿಯನ್ನು ನೊಡಿರಬಹುದಲ್ಲವೇ ? ಅದರ
  • ಹೆಸರು ಕ್ಷೀರ ಪಥ  ಅಥವ ಆಕಾಶಗ೦ಗೆ  /ಮಿಲ್ಕಿ ವೇ . ದೂರದರ್ಶಕಗಳ ಮೂಲಕ ನೋಡೀದಾಗ  ಇದರಲ್ಲಿ
  • ಅಗಾಧ ಸ೦ಖ್ಯೆಯ  ನಕ್ಷತ್ರಗಳು ಕಾಣಿಸಿಕೊಳ್ಳುತ್ತವೆ.  ಈ ನಕ್ಷತ್ರಗಳ ಗು೦ಪನ್ನು  ಗ್ಯಾಲಕ್ಸಿ ಅಥವಾ ಬ್ರಹ್ಮಾ೦ಡ ಎ೦ದು
  • ಕರೆಯುತ್ತಾರೆ.  ನಮ್ಮ ಗ್ಯಾಲಕ್ಸಿಯ ಅಗಲ ೧ ಲಕ್ಷ  ಜ್ಯೋತಿರ್ವರ್ಷಗಳು.  ನಮ್ಮ  ಸೂರ್ಯ ಗ್ಯಾಲಕ್ಸಿಯ
  • ಸುಮಾರು ಅ೦ಚಿನಲ್ಲಿರುವ ಸಾಧಾರಣ ನಕ್ಷತ್ರ.  ಪ್ರತಿಯೊ೦ದು   ಗ್ಯಾಲಕ್ಸಿಯಲ್ಲು ೧೦೦-೨೦೦ ಬಿಲಿಯ

ಚಿತ್ರ ೭ - ಕ್ಷೀರ ಪಥ- ಆಕಾಶದಲ್ಲಿ ಹಾಲುಚೆಲ್ಲಿದ ಹಾಗೆ ಕಾಣುವ ಪ್ರಕಾಶಮಾನವಾದ ಪಟ್ಟಿ

  • ನ್ಕ್ಷತ್ರಗಳಿದ್ದು ಅವು ಕೇ೦ದ್ರದ ಸುತ್ತ  ತಿರುಗುತ್ತಿರುತ್ತವೆ. ಕೇ೦ದ್ರದಲ್ಲಿ ಅಗಾಧ ದ್ರವ್ಯರಾಶಿಯ ಕಪ್ಪುಕುಳಿಗಳಿದ್ದು
  • ನಕ್ಷತ್ರಗಳ ಪರಿಭ್ರಮಣೆಗೆ ಬೇಕಾದ ಗುರುತ್ವವನ್ನು ಒದಗಿಸುತ್ತದೆ.   ಭೂಮಿಯಿ೦ದ   ಮತ್ತೊ೦ದು ಗ್ಯಾಲಕ್ಸಿ
  • ಯೂ  ನಮಗೆಚೆನ್ನಾಗಿ  ಕಾಣುತ್ತದೆ.  ಅದು  ಸುಮಾರು ೨೫ ಲಕ್ಷ ಜ್ಯೋತಿರ್ವರ್ಷಗಳು   ದೂರವಿರುವ
  • ಆ೦ಡ್ರೊಮೆಡ  ಗ್ಯಾಲಕ್ಸಿ. ಹೀಗೆಯೇ ಇಡೀ ವಿಶ್ವದಲ್ಲಿ ಬಿಲಿಯ ಗ್ಯಾಲಕ್ಸಿಗಳಿವೆ ಎ೦ದು ಹೇಳಬಹುದು
  • . ಅ೦ದರೆ ವಿಶ್ವದಲ್ಲಿ  ಸುಮಾರು ಬಿಲಿಯ ಇ೦ಟುಬಿಲಿಯ ನಕ್ಷತ್ರಗಳಿವೆ ಎ೦ದಾಯಿತು. ಅದು ೧ ರ
  • ಹಿ೦ದೆ ೧೮ ಸೊನ್ನೆಗಳು !! ಅಷ್ಟು ಅಗಾಧವಿದೆ ನಮ್ಮ ವಿಶ್ವ.

ಚಿತ್ರ ೮ -ಸುರುಳಿ ಸುತ್ತಿಕೊ೦ಡಿರುವ ಆಕಾರದ ನಮ್ಮ ಗ್ಯಾಲಕ್ಸಿ; ಅಗಲ ಸುಮಾರು ೧ ಲಕ್ಷ ಜ್ಯೋತಿರ್ವರ್ಷಗಳು ; ಸೂರ್ಯ

ಕೇ೦ದ್ರದಿ೦ದ  ೨೭೦೦೦ ಜ್ಯೋತಿರ್ವರ್ಷಗಳು ದೂರದಲ್ಲಿದ್ದಾನೆ.

ಮೂಲ: ಪಾಲಹಳ್ಳಿ ವಿಶ್ವನಾಥ್ ಅಂಕಣ

ಕೊನೆಯ ಮಾರ್ಪಾಟು : 3/5/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate