অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸೌರಮಂಡಲ ಸಮೀಪವೇ ಇದೆ ಮತ್ತೊಂದು ಭೂಮಿ!

ಸೌರಮಂಡಲ ಸಮೀಪವೇ ಇದೆ ಮತ್ತೊಂದು ಭೂಮಿ!

ಭೂಮಿಯನ್ನೇ ಹೋಲುವ ಮತ್ತೊಂದು ಗ್ರಹವೊಂದು ನಮ್ಮ ಸೌರಮಂಡಲದ ಸಮೀಪವೇ ಪತ್ತೆಯಾಗಿದೆ. ಖಗೋಳ ವಿಜ್ಞಾನಿಗಳ ದಶಕಗಳ ಸಂಶೋಧನೆ ಫಲ ನೀಡಿದ್ದು ನಮ್ಮ ಸೌರಮಂಡಲದ ಸಮೀಪದಲ್ಲಿ ಮತ್ತೊಂದು ಸೌರಮಂಡಲ ವ್ಯವಸ್ಥೆಯಿದ್ದು ಭೂಮಿಯನ್ನು ಹೋಲುವ ಗ್ರಹ ಇದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಜರ್ಮನಿಯ ಸ್ಟಡಿ ಫಾರ್ ಆಸ್ಟ್ರೋ ಫಿಸಿಕ್ಸ್ ಸಂಸ್ಥೆಯ ಖಗೋಳ ವಿಜ್ಞಾನಿ ಹಾಗೂ ಲೇಖಕ ಅನ್ ಗರ್ ರೀನರ್ಸ್, ನಮ್ಮ ದಶಕಗಲ ಕಾಲದ ಸಂಶೋಧನೆ ಫಲ ನೀಡಿದೆ. ಆದರೆ ಇಲ್ಲಿಗೆ ನಾವು ನಿಲ್ಲುವಂತಿಲ್ಲ. ನಿರಂತರ ಸಂಶೋಧನೆ ಮತ್ತು ಅಧ್ಯಯನ ಮುಂದುವರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಹೊಸದಾಗಿ ಕಂಡು ಬಂದಿರುವ ಭೂಮಿಯನ್ನು ಹೋಲುವ ಗ್ರಹಕ್ಕೆ ಪ್ರಾಕ್ಸಿಮಾ ಬಿ ಎಂದು ನಾಮಕರಣ ಮಾಡಲಾಗಿದೆ. ಹೊಸ ಭೂಮಿ ನಮ್ಮಿಂದ 4.2 ಜ್ಯೋತಿರ್ ವರ್ಷಗಳಷ್ಟು ದೂರವಿದೆ. ಭೂಮಿಯನ್ನು ಹೋಲುವ ಇನ್ನು ಕೆಲವು ಗ್ರಹಗಳು ಕಂಡುಬಂದಿದ್ದು ವಾತಾವರಣದ ಮೇಲೆ ಅಧ್ಯಯನ ಮಾಡಬೇಕಿದೆ ಎಂದು ತಿಳಿಸಿದ್ದಾರೆ.

Earth-like planet 'Proxima b' discovered near solar system



2015ರಲ್ಲಿ ನಾಸಾದ ವಿಜ್ಞಾನಿಗಳು ಭೂಮಿಯನ್ನು ಹೋಲುವ ಕೆಪ್ಲರ್ 452ಬಿ ಎಂಬ ಗ್ರಹವನ್ನು ಅನ್ವೇಷಿಸಿದ್ದರು. ನಾಸಾದ ದೂರದರ್ಶಕ ಕೆಪ್ಲರ್ ಗ್ರಹವನ್ನು ಪತ್ತೆ ಮಾಡಿದ್ದಿಂರಿಂ ಗ್ರಹಕ್ಕೆ ಕೆಪ್ಲರ್ 452ಬಿ ಎಂದು ನಾಮಕರಣ ಮಾಡಲಾಗಿತ್ತು. ಇಲ್ಲಿಯೂ ಭೂಮಿ ಹೋಲುವ ವಾತಾವರಣ ಇದೆ ಎಂದು ಹೇಳಲಾಗಿತ್ತು.

ಮುಂದೇನು? ಸಂಶೋಧನೆಯನ್ನು ಇಲ್ಲಗೆ ನಿಲ್ಲಿಸುವಂತಿಲ್ಲ. ಹೊಸ ನೂತನ ಭೂಮಿ ತಾಪಮಾನ 22 ರಿಂದ 40 ಡಿಗ್ರಿಗಳಷ್ಟಿದೆ. ಆದರೆ ನೇರಳಾತೀತ ಕಿರಣಗಳು ಪ್ರಖರತೆ ಭೂಮಿಗೆ ಹೊಲಿಸಿದರೆ 400 ಪಟ್ಟು ಅಧಿಕವಾಗಿದೆ. ಯಾವುದಾದರೂ ತೆರನಾದ ಜಿವಿಗಳು ಬದುಕಲು ಪೂರಕ ವಾತಾವರಣ ಅಲ್ಲಿದೆಯೇ ಎಂಬುದರ ಬಗ್ಗೆ ಮತ್ತಷ್ಟು ಸಂಶೋಧನೆ ನಡೆಯಬೇಕಿದೆ.

 

ವಾಷಿಂಗ್ ಟನ್, ಜ. 8: ಇನ್ನು ಮುಂದೆ ಭೂಮಿ ಮೇಲಿನ ಜನಸಂಖ್ಯೆ ಹೆಚ್ಚಾಯಿತು. ಮಾಲಿನ್ಯ ನಿಯಂತ್ರಣವಾಗುತ್ತಿಲ್ಲ ಎಂದು ಕೊರಗುವಂತಿಲ್ಲ. ಬೇಸರ ಬಂದರೆ ಬೇರೆ ಗ್ರಹಕ್ಕೆ ಹೋಗಿ ವಾಸಿಸಬಹುದು! ಹೌದು.. ವಾಸಯೋಗ್ಯವಾಗ್ಯಿರುವ ಜತೆಗೆ ಭೂಮಿಯನ್ನೇ ಹೋಲುವ 8 ಗ್ರಹಗಳನ್ನ ಪತ್ತೆ ಮಾಡಿರುವುದಾಗಿ ನಾಸಾದ ವಿಜ್ಞಾನಿಗಳು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅಮೆರಿಕದ ಖಗೋಳ ಶಾಸ್ತ್ರಜ್ಞರು, ಈ ಗ್ರಹಗಳ ಪೈಕಿ ಎರಡರಲ್ಲಿ ನೀರಿದೆ, ಇವು ಭೂಮಿಯನ್ನೇ ಹೋಲುತ್ತಿದ್ದು ಮನುಷ್ಯರು ವಾಸಿಸಲು ಅಲ್ಲಿ ಪೂರಕ ವಾತಾವರಣವಿದೆ ಎಂದು ತಿಳಿಸಿದ್ದಾರೆ.

 

ನಾಸಾದ ದುರದರ್ಶಕ ಕೆಪ್ಲರ್ ಇದನ್ನು ಖಚಿತಪಡಿಸಿದ್ದು ಭೂಮಿಯನ್ನು ಹೋಲುವ ಎರಡು ಗ್ರಹಗಳಿಗೆ ಕೆಪ್ಲರ್-438ಬಿ ಮತ್ತು ಕೆಪ್ಲರ್-442ಬಿ ಎಂದು ಹೆಸರಿಟ್ಟಿದೆ. ನಾವು ಇಷ್ಟು ದಿನ ಇಂಥಹದ್ದೇ ಗ್ರಹಗಳ ಹುಡುಕಾಟ ನಡೆಸುತ್ತಿದ್ದವು. 2009 ರಿಂದಲೂ ಈ ಬಗ್ಗೆ ನಿರಂತರ ಯತ್ನ ನಡೆದಿತ್ತು. ಈಗ ನಮ್ಮ ಸಂಶೋಧನೆಗೆ ನೆರವಾಗುವ ಅಂಶಗಳು ದೊರೆತಿವೆ ಎಂದು ನಾಸಾದ ವಿಜ್ಞಾನಿಗಳು ತಿಳಿಸಿದ್ದಾರೆ.

ಗ್ರಹದ ವಾತಾವರಣ, ಗಾಳಿ, ಬೆಳಕು ನೀರಿನ ಬಗ್ಗೆ ಸಂಶೊಧನೆ ನಡೆಯುತ್ತಿದೆ. ಕೆಪ್ಲರ್-438ಬಿ ಭೂಮಿಗಿಂತ ಶೇ. 40 ರಷ್ಟು ಹೆಚ್ಚು ಬೆಳಕನ್ನು ಪಡೆದುಕೊಳ್ಳುತ್ತಿದೆ ಎಂಬ ಅಂಶವನ್ನು ಪತ್ತೆಮಾಡಲಾಗಿದೆ ಎಂದು ಹಾವರ್ಡ್ ಸ್ಮಿತ್ ಸಾನಿಯನ್ ಖಗೋಳ ವಿಜ್ಞಾನಿ ಗಿಲೆರ್ವೊ ಟಾರ್ಸ್ ತಿಳಿಸಿದ್ದಾರೆ.

ನಮ್ಮ ಗ್ಯಾಲಕ್ಸಿ ಕ್ಷೀರ ಪಥದ ಮಧ್ಯದಲ್ಲಿ ಬೃಹತ್ ಗಾತ್ರದ ಕಪ್ಪು ರಂಧ್ರವೊಂದರ ಬಳಿ ಬೃಹತ್ ಬೆಂಕಿ ಜ್ವಾಲೆ ಇರುವುದನ್ನು ನಾಸಾದ 'ಚಂದ್ರ ಎಕ್ಸ್ ರೆ ಅಬ್ಸರ್ವೇಟರಿ' ಪತ್ತೆಹಚ್ಚಿದೆ. ನಾಸಾ ಕಪ್ಪು ರಂಧ್ರದ ಜ್ವಾಲೆಯನ್ನು ಎಸ್ ಜಿಆರ್-* ಎಂದು ಕರೆದಿದೆ.

ಇದೊಂದು ಅನಿರೀಕ್ಷಿತ ಸಂಶೋಧನೆಯಾಗಿದೆ. ಜಿ-2 ಎಂದು ಕರೆಯಲ್ಪಡುವ ಅನಿಲ ಮೋಡ ಮತ್ತು ಬೃಹತ್ ಗಾತ್ರದ ಕಪ್ಪು ರಂಧ್ರದ ನಡುವೆ ಜ್ವಾಲೆ ಪತ್ತೆಯಾಗಿದ್ದು ಕುತೂಹಲ ಕೆರಳಿಸಿದೆ.

nasa

http://ventunoads.edgesuite.net/2369/19-12-2016/dot_dot1__Y9KQDU8F.gif

ಒಂದು ವೇಳೆ ಜಿ-2 ದೂರ ಸರಿದಿದ್ದೇ ಆದರೆ ಕಪ್ಪು ರಂಧ್ರ ಮತ್ತು ಜ್ವಾಲೆಯ ನಿಖರ ಗಾತ್ರ ಗುರುತಿಸಬಹುದಾಗಿತ್ತು. ನಿಸರ್ಗದ ವೈಚಿತ್ರ್ಯಗಳೇ ಹೀಗಿರುತ್ತವೆ ಎಂದು ಮ್ಯಾಸಚೂಸೆಟ್ಸ್ ವಿವಿಯ ಸಂಶೋಧಕ ಡರೆಲ್ ಹಗಾರ್ಡ್ ತಿಳಿಸಿದ್ದಾರೆ.

2014 ರಲ್ಲಿ ಜಿ-2 ಅನಿಲ ಮೋಡಕ್ಕೆ ಕಪ್ಪು ರಂಧ್ರ ತುಂಬಾ ಹತ್ತಿರದಲ್ಲಿತ್ತು. ಆದರೆ ಇದರ ಸ್ಥಾನಪಲ್ಲಟದ ಬಗ್ಗೆ ನಿಖರವಾದ ಮಾಹಿತಿಗಳು ದೊರೆತಿಲ್ಲ, ಅನಿಲ ಮೋಡ ಮತ್ತು ಅದರ ಚಲನೆಯನ್ನು ವಿಶ್ಲೇಷಿಸಿ ಕಪ್ಪು ರಂಧ್ರದ ಬಳಿಯ ಜ್ವಾಲೆಯ ಗಾತ್ರ ಅಂದಾಜಿಸಲಾಗಿದೆ ಎಂದು ಖಗೋಳ ಶಾಸ್ತ್ರಜ್ಞರು ತಿಳಿಸಿದ್ದಾರೆ.

ಗುರುತ್ವಾಕರ್ಷಣ ಶಕ್ತಿಯ ಪರಿಣಾಮ ಕಪ್ಪು ರಂಧ್ರದ ಬಳಿಯ ಜ್ವಾಲೆ ಮತ್ತು ಮೋಡ ಒಂದಕ್ಕೊಂದು ಹತ್ತಿರ ಬಂದಿದ್ದವು ಎಂದು ಒಂದು ಸಿದ್ಧಾಂತ ಹೇಳಿದರೆ, ಆಯಸ್ಕಾಂತೀಯ ಶಕ್ತಿಯೂ ಇವೆರಡು ಪರಸ್ಪರ ಸಂಧಿಸಲು ಕಾರಣವಾಗಿದೆ ಎಂದು ಮತ್ತೊಂದು ವಿಶ್ಲೇಷಣೆ ಹೇಳುತ್ತದೆ.

ಆದರೆ ಬಗೆಯ ಆಯಸ್ಕಾಂತೀಯ ಅಲೆಗಳು ಸೂರ್ಯನಲ್ಲಿ ಮಾತ್ರ ಕಂಡುಬರುತ್ತವೆ. ಸೂರ್ಯನಿಗೆ ಕಪ್ಪುರಂಧ್ರವನ್ನು ಹೋಲಿಕೆ ಮಾಡಿ ಹೇಳಲು ಸಾಧ್ಯವಿಲ್ಲವಾದರೂ ಗಾತ್ರದಲ್ಲಿ ಸೂರ್ಯನನ್ನು ಮೀರಿಸುತ್ತದೆ. ನಮ್ಮ ಗ್ಯಾಲಕ್ಸಿಯಲ್ಲೇ ಇಷ್ಟು ದೊಡ್ಡ ಜ್ವಾಲೆ ಕಂಡುಬಂದಿರುವುದು ಇದೇ ಮೊದಲು, ಬಗ್ಗೆ ಇನ್ನು ಹೆಚ್ಚಿನ ವಿವರಗಳನ್ನು ಕಲೆಹಾಕಬೇಕಿದೆ ಎಂದು ಜರ್ಮನಿಯ ವಿಜ್ಞಾನಿ ಗೆರಿಬೆಲ್ ಪೊಂಟಿ ಹೇಳುತ್ತಾರೆ.

 

ಮಂಗಳ ಗ್ರಹ ಮಾನವ ವಾಸಕ್ಕೆ ಯೋಗ್ಯವೇ? ಎಂಬ ಚರ್ಚೆ ಮತ್ತು ಸಂಶೋಧನೆಗಳು ನಡೆಯುತ್ತಿರುವ ಬೆನ್ನಲ್ಲೇ ನಾಸಾದ ಕ್ಯೂರಿಯಾಸಿಟಿ ರೋವರ್ ಕೆಂಪು ಗ್ರಹದಲ್ಲಿ ಹಿಂದೆ ಕೆರೆಯೊಂದಿತ್ತು ಎಂಬುದನ್ನು ಕಂಡುಹಿಡಿದಿದೆ.

ಮಂಗಳನ ಅಂಗಳದಲ್ಲಿ ಅಧ್ಯಯನ ನಡೆಸುತ್ತಿರುವ ನಾಸಾದ ಕ್ಯೂರಿಯಾಸಿಟಿ ರೋವರ್ ಕೆಂಪು ಗ್ರಹದಲ್ಲಿ ಬೃಹತ್ ಗಾತ್ರದ ಕೆರೆಯೊಂದಿತ್ತು ಎಂಬ ಮಾಹಿತಿಯನ್ನು ದೃಢಪಡಿಸಿದೆ. ಕೆಂಪು ಗ್ರಹ ಒಂದು ಕಾಲದಲ್ಲಿ ಮಾನವ ವಾಸಯೋಗ್ಯವಾಗಿತ್ತು ಎಂದು ಹೇಳಿದೆ.[

mars

154 ಕಿ.ಮೀ. ಅಗಲದ ದೊಡ್ಡ ಕುಳಿಯೊಂದು ಕ್ಯೂರಿಯಾಸಿಟಿ ಕಣ್ಣಿಗೆ ಬಿದ್ದಿದೆ. ಕೆರೆ ಎಂದು ಕರೆಯಲಾಗಿರುವ ಕುಳಿಯಲ್ಲಿ ನೀರಿನಂಶವಿರುವ ಕೆಸರು ಪತ್ತೆಯಾಗಿರುವುದು ಸಂಶೋಧನೆಗೆ ಮತ್ತಷ್ಟು ಪುಷ್ಠಿ ನೀಡಿದೆ.

3.5 ಶತಕೋಟಿ ವರ್ಷದಷ್ಟು ಹಳೆಯದಾದ ಕೆರೆ ಇದಾಗಿದೆ ಎಂದು ಹೇಳಲಾಗಿದೆ. 2012 ರ ಆಗಸ್ಟ್ ನಲ್ಲಿ ಮಂಗಳನ ಮೇಲೆ ಇಳಿದಿರುವ ಕ್ಯೂರಿಯಾಸಿಟಿ ಅನೇಕ ಅಂಶಗಳನ್ನು ಕಂಡುಕೊಳ್ಳುತ್ತ ಮುಂದೆ ಸಾಗುತ್ತಿದೆ. ಪರ್ವತವೊಂದಕ್ಕೆ ತಾಗಿಕೊಂಡಂತೆ ಕೆರೆ ನಿರ್ಮಾಣವಾಗಿತ್ತು. ಕೆಸರಿನ ಅಂಶವು ಕಂಡುಬಂದಿರುವುದರಿಂದ ಸಂಶೋಧನೆಗೆ ಮತ್ತಷ್ಟು ಮುನ್ನಡೆ ಸಿಗಲಿದೆ ಎಂದು ನಾಸಾ ತಿಳಿಸಿದೆ.


 

ಕೊನೆಯ ಮಾರ್ಪಾಟು : 4/23/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate