ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಕನ್ನಡದ ಉಳಿವಿನ ಸವಾಲುಗಳು

ಆಧುನಿಕ ಯುಗದಲ್ಲಿ ಕನ್ನಡದ ಸ್ಥಾನ-ಮಾನ, ಉಳಿವಿನ ಸವಾಲುಗಳು ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ.

ಆಧುನೀಕರಣದ ಪ್ರಭಾವ ಎಲ್ಲೆಡೆ ತೀರ್ವವಾಗಿ ಪಸರಿಸುತ್ತಿರುವುದರ ಹಿನ್ನೆಲೆಯಲ್ಲಿ ಕನ್ನಡದ ಸ್ಥಾನ-ಮಾನ, ಅದರ ಉಳಿವಿನ ಸವಾಲುಗಳು ಎದುರಾಗುತ್ತಿರುವುದು ಕನ್ನಡಿಗರೆಲ್ಲರಿಗೂ ವಿಷಾದನೀಯ ಸಂಗತಿ. ಆಧುನೀಕರಣದಿಂದಾಗಿ ಕನ್ನಡನಾಡಿನ ಜನ ಜೀವನದಲ್ಲಿ ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು ಇದರ ತೀವ್ರ ಪ್ರಭಾವಕ್ಕೆ ಕನ್ನಡ ಭಾಷೆಯು ಹೊರತಾಗಿಲ್ಲ. ಪ್ರಗತಿ , ವೈಜ್ಞಾನಿಕ ಮುನ್ನಡೆ, ಆರ್ಥಿಕ ಪಟ್ಟಭದ್ರ ಹಿತಾಸಕ್ತಿಗಳು, ವ್ಯಾಪಾರ-ವ್ಯವಹಾರ, ತಂತ್ರಜ್ಞಾನ, ಸ್ಪರ್ಥೆ, ಲಾಭ ಮೊದಲಾದವುಗಳು ಆಧುನೀಕರಣದ ಲಕ್ಷಣಗಳಿಂದಾಗಿ ಹಿನ್ನಡೆಯುತ್ತಿರುವ ಕನ್ನಡ ನಾಡಿನ, ಕನ್ನಡ ಜನತೆಯ, ಕನ್ನಡ ಭಾಷೆಯ ಹಿರಿಮೆಯ ಹಿನ್ನೆಲೆಯನ್ನು ಮೊದಲು ಗುರುತಿಸೋಣ.

“ಇದಮಂಧಂ ತಮಃ ಕೃತ್ಸ್ನಂ ಜಾಯೇತ್ ಭುವನತ್ರಯಂ

ಯದಿ ಶಬ್ದಾಹ್ವಯಂ ಜ್ಯೋತಿರಾ ಸಂಸಾರನ್ನ ದೀಪ್ಯತೇ”

“ಮಾತೆಂಬ ಜ್ಯೋತಿಯು ಬೆಳಗದೇ ಇದ್ದಿದ್ದರೆ,

ಜಗತ್ರಯವಿಲ್ಲವೂ ಕಗ್ಗತ್ತಲ ಮೊತ್ತವಾಗಿರುತ್ತಿತ್ತು” ಎಂಬ

ದಂಡಿಯ ಮಾತು ಜೌಚಿತ್ಯಪೂರ್ಣವಾಗಿದೆ. ಮಾತು ಅರ್ಥಾತ್ ಭಾಷೆ. ಅತಿ ಶ್ರೇಷ್ಠ ಅಭಿವ್ಯಕ್ತಿ ಮಾಧ್ಯಮ. ಅದು ಅಮೂರ್ತ ಭಾವಗಳನ್ನು ಸೆರೆಹಿಡಿಯುತ್ತದೆ. ಈ ನಿಟ್ಟಿನಲ್ಲಿ ಕಾರ್ಯನಿಷ್ಠವಾಗಿರುವ ’ಕನ್ನಡ ನಾಡಿನ, ಕನ್ನಡ ಜನತೆಯ ನುಡಿಯೇ ಕನ್ನಡ’. ಕನ್ನಡ ಮೂಲ ದ್ರಾವಿಡದ ಮಗಳು. ಸುಮಾರು ಎರಡುವರೆ ಸಾವಿರ ವರ್ಷಗಳ ಹಿಂದೆ ತಾಯಿ ಮಡಿಲಿನಿಂದ ಕೆಳಗಿಳಿದು ಬಂದ ಕನ್ನಡವೆಂಬ ಶಿಶು ಪ್ರಬುದ್ಧಳಾಗಿ ಬೆಳೆದಿದ್ದಾಳೆ. ಆದರೆ ಪ್ರತಿಯೊಂದು ಭಾಷೆಗೂ ಸಹಜವಾಗಿಯೇ ಸಂಸ್ಕೃತಿಯ ಥಳಕು, ಮೋಹ ಇರುವುದರಿಂದ ಕನ್ನಡ ಭಾಷೆಗೂ ಸಂಸ್ಕೃತಿಯ ಥಳಕು, ಮೋಹವಿದ್ದು ಅನ್ಯ ಭಾಷೆಗಳ ಸಂಸ್ಕೃತಿಯ ಒಳಹರಿವನ್ನು ಸ್ವಾಗತಿಸಿ ತನ್ನ ಬುಡಕ್ಕೆ ಪರೋಕ್ಷವಾಗಿ ಕಿಡಿ ಹಚ್ಚಿಕೊಂಡ ಪರಿಣಾಮವಾಗಿ ಅನ್ಯ ಭಾಷೆಗಳು ಕನ್ನಡಕ್ಕೆ ಸವಾಲೊಡ್ಡಲು ಆರಂಭಿಸಿದವು

ಜನರು ವ್ಯವಹಾರಕ್ಕೆಂದು ಬೇರೆ ಪ್ರದೇಶಕ್ಕೆ ಹೋದಾಗ ತಮ್ಮದಲ್ಲದ ಭಾಷೆ ಅಲ್ಲಿದ್ದರೆ ಆ ಭಾಷೆಗಳನ್ನು ಕಲಿಯುವ ಪ್ರಯತ್ನ ಮಾಡುತ್ತಾರೆ. ಆದರೆ ಆಧುನೀಕರಣದ ಹಿನ್ನೆಲೆಯಲ್ಲಿ ಕನ್ನಡನಾಡಿನಲ್ಲಾದ ವ್ಯವಸ್ಥೆಗಳೇ ಬೇರೆ. ಕನ್ನಡ ನಾಡಿಗೆ ವ್ಯವಹಾರಕ್ಕೆಂದು ಬಂದವರು ಕನ್ನಡ ಭಾಷೆಯನ್ನೇ ಕಲಿಯದೆ, ತಮ್ಮ ಆಂಗ್ಲ, ಹಿಂದಿ, ಜರ್ಮನ್, ಫ್ರೆಂಚ್ ಮೊದಲಾದ ಭಾಷೆಗಳನ್ನು ಜನರಿಗೆ ಕಲಿಸಿದರು. ಪರಿಣಾಮವಾಗಿ ’ಕನ್ನಡವನ್ನು ಉಳಿಸಿ, ಬೆಳೆಸಿ, ರಕ್ಷಿಸಿ’ ಎಂಬ ಘೋಷಣೆಗಳು ಅನಿವಾರ್ಯವಾದವು. ಎಂದೋ ಒಮ್ಮೆ ಕನ್ನಡ ನಾಡು ನುಡಿ ಉತ್ಕೃಷ್ಟತೆಯ ಬಗ್ಗೆ ಹಾಡಿ ಹೊಗಳಿದ ಕವಿಗಳ ಕವಿತೆಗಳನ್ನು ಪುನರ್ಮನನ ಮಾಡಿದರೆ, ’ಮಹಾಲಿಂಗರಂಗ’ ರವರು ತಮ್ಮ’ಅನುಭವಾಮೃತ’ ಕೃತಿಯಲ್ಲಿ ಕನ್ನಡವು ಸುಲಿದ ಬಾಳೆಹಣ್ಣಿನಂತೆ ಮೃದುವು, ಸುಕೋಷ್ಣ ಸ್ಥಿತಿಯಲ್ಲಿರುವ ಹಾಲಿನಂತೆ ಶುಭ್ರವು, ಕಳೆದ ಸಿಗುರಿನ ಕಬ್ಬಿನಂತೆ ಸರಳವು, ಸುಲಭವು ಆದ ಭಾಷೆ ’ ಎಂದಿದ್ದಾರೆ. ಆದರೆ ಇಂತಹ ಸರಳ, ಸುಂದರ, ಸುಲಭವಾದ ಕನ್ನಡ ಭಾಷೆ ಆದುನೀಕರಣವೆಂಬ ನೆಪದಡಿ ಮೂಲೆಗುಂಪಾಗುತ್ತಿರುವುದು ಆತಂಕಕಾರಿ ವಿಷಯ. “ಕನ್ನಡ ಪ್ರಬುದ್ಧತೆಯನ್ನು ಕಣ್ಣಾರೆ ಕಂಡ ಮಹಾನ್ ಕವಿಗಳು, ವಿದ್ವಾಂಸರು ಮುಂದೊಂದು ದಿನ ’ಕನ್ನಡ ಉಳಿಸಿ’ ಎಂಬ ಉದ್ಗಾರಗಳ ಅನಿವಾರ್ಯತೆ ಎದುರಾಗಬಹುದು ಎಂದು ಊಹಿಸಿಯೂ ಇರಲಿಲ್ಲವೆನ್ನಿಸುತ್ತದೆ.

ಇಂತಹ ಪ್ರಬುದ್ಧ ಕನ್ನಡ ಭಾಷೆಯು ಇಂದು ತನ್ನ ಉಳಿವಿನ ಬಗೆಯೆ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದು, ಅದನ್ನು ಎದುರಿಸಲು ನಾವು ಸನ್ನದ್ದರಾಗಿ ಅದನ್ನು ಎದುರಿಸಿ ನಮ್ಮ ಕನ್ನಡ ಭಾಷೆಯನ್ನು ಉಳಿಸಿಕೊಳ್ಳಬೇಕು. ಸಣ್ಣ ಬಿರುಕೊಂದು ಬೃಹತ್ ಜಲಾಶಯ ಒಡೆಯಲು ಕಾರಣವಾಗಬಹುದಾದ್ದರಿಂದ ಕನ್ನಡ ನಿರ್ಲಕ್ಷ್ಯಕ್ಕೆ ಸ್ವಲ್ಪವೂ ಅವಕಾಶ ಕೊಡಬಾರದು. ಗ್ರಾಂಥಿಕ ಭಾಷೆ ಹಾಗೂ ಆಡು ಭಾಷೆಯಾಗಿ ಕನ್ನಡ ನಿರಂತರವಾಗಿ ಮುಂದುವರೆದು ಜೀವಂತ ಭಾಷೆಯಾದಲ್ಲಿ ’ಅರಳುಗಟ್ಟಿದ ವಜ್ರಕ್ಕೆ ಮೆರಗು ಕೊಡುವಂತಾಗುತ್ತದೆಯಲ್ಲವೇ?’

3.09174311927
Renuka Sep 06, 2019 08:26 PM

Kannada bashe addi ಆತಂಕಗಳು.

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top